Tag: arrest

  • ಬಾಲಕಿಯನ್ನ ಕಿಡ್ನಾಪ್ ಮಾಡಿ ಚಲಿಸ್ತಿದ್ದ ಕಾರಿನಲ್ಲೇ ಗ್ಯಾಂಗ್‍ರೇಪ್ ಎಸಗಿ ರಸ್ತೆಗೆ ದೂಡಿದ್ರು!

    ಬಾಲಕಿಯನ್ನ ಕಿಡ್ನಾಪ್ ಮಾಡಿ ಚಲಿಸ್ತಿದ್ದ ಕಾರಿನಲ್ಲೇ ಗ್ಯಾಂಗ್‍ರೇಪ್ ಎಸಗಿ ರಸ್ತೆಗೆ ದೂಡಿದ್ರು!

    ಲಕ್ನೋ: 14 ವರ್ಷದ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಮೂವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

    ಈ ಘಟನೆ ಸೋಮವಾರ ಬೆಳಗ್ಗೆ ದಂಕೌರ್ ಗ್ರಾಮದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಅಜಯ್(18) ಮತ್ತು ಸುರೇಂದರ್(19) ಇಬ್ಬರನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಅರುಣ್(21)ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ನಡೆದಿದ್ದೇನು?
    ಸಂತ್ರಸ್ತ ಬಾಲಕಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಸೋಮವಾರ ಬೆಳಗ್ಗೆ ಸುಮಾರು 7.30 ಸಮಯದಲ್ಲಿ ದಂಕೌರ್ ಗ್ರಾಮದಿಂದ ಶಾಲೆಗೆ ಹೋಗುತ್ತಿದ್ದಳು. ಈ ವೇಳೆ ಮೂವರು ಆರೋಪಿಗಳು ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದು ಬಾಲಕಿಯನ್ನು ಅಪಹರಿಸಿದ್ದಾರೆ. ಮೂವರಲ್ಲಿ ಅರುಣ್ ದಂಕೌರ್ ಗ್ರಾಮದಿಂದ ಬುಲಂದ್ ಶಹರ್ ಕಡೆ ಕಾರು ಚಲಾಯಿಸುತ್ತಿದ್ದನು. ಕಾರು ಚಲಿಸುತ್ತಿದ್ದಂತೆ ಆರೋಪಿಗಳಾದ ಅಜಯ್ ಮತ್ತು ಸುರೇಂದರ್ ಇಬ್ಬರೂ ಬಾಲಕಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಾರಿನಲ್ಲಿ ಬಾಲಕಿ ಕಿರುಚಾಡುತ್ತಿದ್ದಳು. ಈ ಶಬ್ಧ ಕೇಳಿದ ಬಳಿಕ ಗ್ರಾಮಸ್ಥರು ಕಾರನ್ನು ನೋಡಿ ಅನುಮಾನಗೊಂಡು ಹಿಂಬಾಲಿಸಿದ್ದಾರೆ. ಅಷ್ಟೇ ಅಲ್ಲದೇ ಕಾರಿನ ಮೇಲೆ ಕಲ್ಲುಗಳನ್ನು ಎಸೆದಿದ್ದಾರೆ. ಆಗ ಆರೋಪಿಗಳು ಬಾಲಕಿಯನ್ನು ಕಾರಿನಿಂದ ರಸ್ತೆಗೆ ದೂಡಿ ಪರಾರಿಯಾಗಿದ್ದಾರೆ. ಅಲ್ಲದೇ ತಮ್ಮ ಗುರುತು ಪತ್ತೆಯಾಗಬಾರದೆಂದು ಕಾರಿನ ನಂಬರನ್ನು ಅಳಿಸಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಸಂತ್ರಸ್ತ ಬಾಲಕಿ ಮನೆಗೆ ಹೋಗಿ ನಡೆದ ಘಟನೆಯ ಬಗ್ಗೆ ಪೋಷಕರ ಬಳಿ ಹೇಳಿದ್ದಾಳೆ. ಬಳಿಕ ಪೋಷಕರು ದಂಕೌರ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಬಾಲಕಿ ಹೇಳಿಕೆ ನೀಡಿದ ಬಳಿಕ ಆರೋಪಿಗಳು ಝಾಲ್ಡಾ ಗ್ರಾಮದವರು ಎಂದು ತಿಳಿದುಬಂದಿದೆ.

    ಮಾಹಿತಿ ತಿಳಿದ ತಕ್ಷಣ ಪೊಲೀಸರು ಅಜಯ್ ಮತ್ತು ಸುರೇಂದರ್ ಇಬ್ಬರನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಂದನ್ ಶೆಟ್ಟಿ ನಂತ್ರ ಅರ್ಜುನ್ ಜನ್ಯ, ಅಧಿತಿ ಸಾಗರ್ ಗೆ ಬಂಧನದ ಭೀತಿ!

    ಚಂದನ್ ಶೆಟ್ಟಿ ನಂತ್ರ ಅರ್ಜುನ್ ಜನ್ಯ, ಅಧಿತಿ ಸಾಗರ್ ಗೆ ಬಂಧನದ ಭೀತಿ!

    ಬೆಂಗಳೂರು: ಸ್ಯಾಂಡಲ್ ವುಡ್ ಮೇಲೆ ಸಿಸಿಬಿ ಕಣ್ಣು ಬಿದ್ದಿದ್ದು, ಚಂದನ್ ಶೆಟ್ಟಿ ನಂತರ ಈಗ ‘ರ‍್ಯಾಂಬೋ -2’ ಚಿತ್ರದ ತಂಡಕ್ಕೆ ಸಂಕಷ್ಟ ಎದುರಾಗಿದೆ.

    ರ‍್ಯಾಂಬೋ -2 ಚಿತ್ರದ ಧಮ್ ಮಾರೋ ಧಮ್ ಹಾಡಿನ ಮೇಲೆ ಸಿಸಿಬಿ ಕಣ್ಣು ಬಿದ್ದಿದ್ದು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಅಧಿತಿ ಸಾಗರ್ ಗೆ ಸಮನ್ಸ್ ನೀಡಲು ಸಿಸಿಬಿ ತಂಡ ಸಿದ್ಧತೆ ನಡೆಸುತ್ತಿದೆ. ಚಂದನ್ ಶೆಟ್ಟಿ ಅವರ ವಿಚಾರಣೆಯ ಬಳಿಕ ಅರ್ಜುನ್ ಜನ್ಯ ಮತ್ತು ಮುತ್ತುಗೆ ಸಂಕಷ್ಟ ಎದುರಾಗಲಿದೆ. ಚಿತ್ರದ ಈ ಹಾಡಿನಲ್ಲಿ ಗಾಂಜಾ ಹೊಡಿ ಎಂಬ ಪ್ರಚೋದನೆ ಹಿನ್ನೆಲೆಯಲ್ಲಿ ಸಿಸಿಬಿ ತಂಡ ಇಬ್ಬರಿಗೂ ಸಮನ್ಸ್ ಜಾರಿಗೊಳಿಸಲಿದೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಇತ್ತೀಚೆಗೆ ಬಿಡುಗಡೆಯಾದ ರ‍್ಯಾಪರ್ ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯ ‘ಅಂತ್ಯ’ ಸಿನಿಮಾದ “ಗಾಂಜಾ ಕಿಕ್” ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಆದರೆ ಗಾಂಜಾ ಕಿಕ್ ಹಾಡಿನಲ್ಲಿ ಮಾದಕ ವಸ್ತುಗಳನ್ನು ಸೇವಿಸುವ ಕುರಿತು ವೈಭವೀಕರಿಸಿ ತೋರಿಸಲಾಗಿದೆ. ಹೀಗಾಗಿ ಖುದ್ದು ಸ್ವಯಂ ದೂರು ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಚಂದನ್ ಶೆಟ್ಟಿಗೆ ಸಮನ್ಸ್ ಜಾರಿ ಮಾಡಿದರು. ಇಂದು ಚಂದನ್ ವಿಚಾರಣೆಗೆ ಹಾಜರಾಗಿದ್ದಾರೆ. ಇದನ್ನೂ ಓದಿ: ರ‍್ಯಾಪರ್ ಚಂದನ್ ಶೆಟ್ಟಿಗೆ ಬಂಧನ ಭೀತಿ?

    ಚಂದನ್ ಶೆಟ್ಟಿ ವಿಚಾರಣೆ ಆದ ಬಳಿಕ ರ‍್ಯಾಂಬೋ-2 ಚಿತ್ರದ ‘ಧಮ್ ಮಾರೋ ಧಮ್’ ಹಾಡಿನ ಸಾಹಿತ್ಯ ಬರೆದ ಮುತ್ತು ಸೇರಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಗಾಯಕಿ ಅಧಿತಿ ಸಾಗರ್ ಅವರಿಗೆ ನೋಟಿಸ್ ನೀಡುವ ಸಾಧ್ಯತೆಗಳಿವೆ. ಈ ಹಾಡು ಯುವಜನತೆಗೆ ಗಾಂಜಾ ಸೇವನೆ ಮಾಡಲು ಪ್ರಚೋದನೆ ನೀಡುವ ರೀತಿಯಲ್ಲಿದೆ. ಯುವ ಜನತೆ ಪಾರ್ಟಿ ಹಾಗೂ ಪಬ್‍ಗೆ ಹೋದಾಗ ಈ ಹಾಡು ಕೇಳಿ ಗಾಂಜಾಗೆ ಆಕರ್ಷಕರಾಗಿ ಅದನ್ನು ಸೇವಿಸಲು ಮುಂದಾಗುತ್ತಾರೆ.

    ಸಿಸಿಬಿ ಪೊಲೀಸರು ಚಂದನ್ ಶೆಟ್ಟಿ ಅವರಿಗೆ ನೋಟಿಸ್ ನೀಡುವ ಮೊದಲು ಫಿಲಂ ಚೇಂಬರ್ ಗೆ ಮನವಿ ಮಾಡಿಕೊಂಡಿದ್ದರು. ಮನವಿಯಲ್ಲಿ `ಈ ರೀತಿಯ ಹಾಡುಗಳು ಸಮಾಜದಲ್ಲಿ ಸಾಕಷ್ಟು ಕೆಡುಕು ಉಂಟು ಮಾಡುತ್ತಿದೆ. ಅಲ್ಲದೇ ಯುವಜನತೆಗೆ ಗಾಂಜಾ ಸೇವನೆ ಮಾಡಲು ಆಕರ್ಷಿಸುತ್ತದೆ. ಹಾಗಾಗಿ ನೀವು ಈ ರೀತಿಯ ಹಾಡುಗಳ ಬಗ್ಗೆ ನಿಗಾವಹಿಸಿ ಎಂದು ತಿಳಿಸಿದ್ದರು. ಅಲ್ಲದೇ ಈ ರೀತಿಯ ಹಾಡುಗಳ ಲಿಂಕ್‍ಗಳನ್ನು ಸಾಮಾಜಿಕ ಜಾಲತಾಣ ಹಾಗೂ ಯೂಟ್ಯೂಬ್‍ನಲ್ಲಿ ಡಿಲೀಟ್ ಮಾಡಬೇಕೆಂದು ಸಿಸಿಬಿ ಪೊಲೀಸರು ಹೇಳಿದ್ದರು ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿಲ್ಲದ ಪಡ್ಡೆ ಹುಡ್ಗರ ಬೈಕ್ ವ್ಹೀಲಿಂಗ್- 6 ಯುವಕರು ಅರೆಸ್ಟ್

    ನಿಲ್ಲದ ಪಡ್ಡೆ ಹುಡ್ಗರ ಬೈಕ್ ವ್ಹೀಲಿಂಗ್- 6 ಯುವಕರು ಅರೆಸ್ಟ್

    ಬೆಂಗಳೂರು: ಬೈಕ್ ವ್ಹೀಲಿಂಗ್ ಮಾಡಬಾರದೆಂದು ಎಷ್ಟೇ ಜಾಗೃತಿ ಮೂಡಿಸಿದ್ರೂ ಪಡ್ಡೆ ಹುಡುಗರ ಬೈಕ್ ವ್ಹೀಲಿಂಗ್ ಕ್ರೇಜ್ ಮಾತ್ರ ನಿಂತಿಲ್ಲ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಇದೀಗ ಆರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ:ಎಚ್ಚರ: ಬೈಕ್ ವ್ಹೀಲಿಂಗ್ ಮಾಡಿ ಫೇಸ್‍ಬುಕ್ ಗೆ ಹಾಕಿದ್ರೆ ಬಂಧಿಸ್ತಾರೆ ಪೊಲೀಸ್ರು!

    ರಾತ್ರಿ ವೇಳೆ ನೈಸ್ ರೋಡ್ ಮತ್ತು ಮೈಸೂರು ರಸ್ತೆಯಲ್ಲಿ ವ್ಹೀಲಿಂಗ್ ಮಾಡ್ತಿದ್ದ ಯುವಕರನ್ನು ಬ್ಯಾಟರಾಯನಪುರ ಸಂಚಾರಿ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅಲ್ಲದೇ ಬಂಧಿತ ಯುವಕರಿಂದ ಬೈಕ್ ಗಳನ್ನು ಕೂಡ ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಬೈಕ್ ವ್ಹೀಲಿಂಗ್ ಮಾಡಿ ಫೇಸ್‍ಬುಕ್ ಪೋಸ್ಟ್ ಮಾಡಿದ್ದ ಮತ್ತೊಬ್ಬ ಬಾಲಕ ಅರೆಸ್ಟ್!

    ಬೆಂಗಳೂರು ಸಂಚಾರಿ ಪೊಲೀಸರು ವ್ಹೀಲಿಂಗ್ ಗೆ ಬ್ರೇಕ್ ಹಾಕಲು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದರು. ಇತ್ತೀಚೆಗೆ ಏರ್ ಪೋರ್ಟ್ ರೋಡಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ವಿಡಿಯೋ ಮಾಡಿ ಬಳಿಕ ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದ ಅಸಾಮಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದರು. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಬೈಕ್ ವ್ಹೀಲಿಂಗ್ – ಪೊಲೀಸ್ ಸ್ಟೇಷನ್ ಮುಂದೆಯೇ ಸರ್ಕಸ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಹಶೀಲ್ದಾರ್ ಕಿಡ್ನಾಪ್ ಪ್ರಕರಣ: ರೈತರ ಸಂಪೂರ್ಣ ಸಾಲಮನ್ನಾಕ್ಕಾಗಿ ಅಪಹರಿಸಿದ್ದ ಅಪಹರಣಕಾರರು!

    ತಹಶೀಲ್ದಾರ್ ಕಿಡ್ನಾಪ್ ಪ್ರಕರಣ: ರೈತರ ಸಂಪೂರ್ಣ ಸಾಲಮನ್ನಾಕ್ಕಾಗಿ ಅಪಹರಿಸಿದ್ದ ಅಪಹರಣಕಾರರು!

    ಮೈಸೂರು: ಮಂಡ್ಯ ತಹಶೀಲ್ದಾರ್ ಮಹೇಶ್ ಚಂದ್ರರವರನ್ನು ಅಪಹರಣ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕೆ.ಆರ್.ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

    ಆಗಸ್ಟ್ 3 ರಂದು ನಿಗೂಢವಾಗಿ ನಾಪತ್ತೆಯಾಗಿ ಬಳಿಕ ಪತ್ತೆಯಾಗಿದ್ದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ತಹಶೀಲ್ದಾರ ಮಹೇಶ್ ಚಂದ್ರರವರ ಅಪಹರಣವನ್ನು ಭೇದಿಸಿರುವ ಕೆ.ಆರ್.ನಗರ ಪೊಲೀಸರು ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಕೆ.ಆರ್.ಪೇಟೆಯ ರೈಲ್ವೇ ಇಲಾಖೆಯ ಸ್ಟೋರ್ ಕೀಪರ್ ಯೋಗೇಂದ್ರ.ಕೆ.ಎನ್ (31), ಖಾಸಗಿ ಹೋಟೆಲ್ ಕ್ಯಾಪ್ಟನ್ ಸೋಮಶೇಖರ್.ಎಸ್.ಎನ್ (31), ಖಾಸಗಿ ಕಾರು ಚಾಲಕ ಚಂದು.ಎಸ್.ಎಸ್ (24) ಹಾಗೂ ಮೈಸೂರಿನ ಬೃಂದಾವನ ಬಡಾವಣೆಯ ದೀಪು.ಎಸ್.ಎನ್ (28) ಬಂಧಿತ ಆರೋಪಿಗಳಾಗಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಕೆ.ಆರ್.ಪೇಟೆಯ ತಹಶೀಲ್ದಾರ್ ಅಪಹರಣ?

    ಇತ್ತೀಚೆಗಷ್ಟೇ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಗೆ ವರ್ಗಾವಣೆಯಾಗಿದ್ದ ಮಹೇಶ್ ಚಂದ್ರರವರನ್ನು ಆರೋಪಿಗಳು, ಕೆ.ಆರ್.ನಗರದ ಹೊಸ ಅಗ್ರಹಾರದ ಬಳಿ ಅಪಹರಿಸಿದ್ದರು. ತಹಶೀಲ್ದಾರ್ ರವರನ್ನು ಒತ್ತೆಯಾಳಾಗಿಟ್ಟುಕೊಂಡು, ರೈತರ ಸಂಪೂರ್ಣ ಸಾಲಮನ್ನಾ ಮಾಡುವಂತೆ ಸರ್ಕಾರಕ್ಕೆ ಒತ್ತಡ ಹೇರುವ ಉದ್ದೇಶವನ್ನು ಹೊಂದಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಕೆ.ಆರ್.ಪೇಟೆಯ ತಹಶೀಲ್ದಾರ್ ಸಂಜೆ ವೇಳೆ ಪತ್ತೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿ ಕಿಡ್ನಾಪ್ ಆಗಿದ್ದಾಳೆಂದು ದೂರು ಕೊಟ್ಟವನೇ ಕೊನೆಗೆ ಅರೆಸ್ಟ್ ಆದ!

    ಪತ್ನಿ ಕಿಡ್ನಾಪ್ ಆಗಿದ್ದಾಳೆಂದು ದೂರು ಕೊಟ್ಟವನೇ ಕೊನೆಗೆ ಅರೆಸ್ಟ್ ಆದ!

    ಬೆಂಗಳೂರು: ಪತ್ನಿ ಇದ್ದರೆ ನನ್ನ ಹತ್ತಿರನೇ ಇರಬೇಕು ಬೇರೆ ಇರಬಾರದೆಂದು ಪತಿಯೊಬ್ಬ ತನ್ನ ಪತ್ನಿ ಕಿಡ್ನಾಪ್ ಆಗಿದ್ದಾಳೆಂದು ದೂರು ನೀಡಿದ್ದಕ್ಕೆ ಮಡಿವಾಳ ಪೊಲೀಸರು ಆತನನ್ನೇ ಬಂಧಿಸಿದ್ದಾರೆ.

    ಹುಸೇನ್ ಪೊಲೀಸ್ ಠಾಣೆಗೆ ದೂರು ನೀಡಿ ಅರೆಸ್ಟ್ ಆದ ಪತಿ. ನನ್ನ ಪತ್ನಿ ಶಬೀನಾಳನ್ನು ಯಾರೋ ದುಷ್ಕರ್ಮಿಗಳು ಕಾರಿನಲ್ಲಿ ಬಂದು ಅಪಹರಣ ಮಾಡಿದ್ದಾರೆ. ಆಕೆಯನ್ನು ಅಪಹರಣ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಕೊಲೆ ಮಾಡುತ್ತಾರೆ ಎಂದು ಹುಸೇನ್ ದೂರು ನೀಡಿದ್ದನು. ದೂರು ಸ್ವೀಕರಿಸಿದ ಬಳಿಕ ಪತಿ ಹುಸೇನ್ ಅಸಲಿಯತ್ತು ಅನಾವರಣಗೊಂಡಿದೆ.

    ಶಬೀನಾ ಬೇರೊಬ್ಬನ ಜೊತೆ ಸಂಬಂಧ ಬೆಳೆಸಿ ಅವನೊಂದಿಗೆ ಇರೋದಾಗಿ ಮನೆ ಬಿಟ್ಟು ಹೋಗಿದ್ದಳು. ಅವನೊಂದಿಗೆ ಪತ್ನಿ ನೆಮ್ಮದಿಯಾಗಿ ಇರುತ್ತಾಳೆ ಅಂತ ಶಬೀನಾ ಬಾಯ್ ಫ್ರೆಂಡ್ ನನ್ನು ಜೈಲಿಗೆ ಕಳುಹಿಸಲು ಹುಸೇನ್ ಸ್ಕೆಚ್ ಹಾಕಿದ್ದನು. ಹೀಗಾಗಿ ಬಾಯ್ ಫ್ರೆಂಡ್ ಜೈಲಿಗೆ ಹೋದರೆ ಪತ್ನಿ ಮತ್ತೆ ವಾಪಸ್ ಬರುತ್ತಾಳೆ ಎಂದು ಹುಸೇನ್ ದೂರು ನೀಡಿದ್ದನು.

    ಈ ಬಗ್ಗೆ ತನಿಖೆ ಮಾಡಿದಾಗ ನಿಜಾಂಶ ಹೊರ ಬಂದಿದೆ. ಪರಿಣಾಮ ದೂರು ನೀಡಿದ ಹುಸೇನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಸತ್ಯ ಗೊತ್ತಿದ್ದರೂ ಪೊಲೀಸರಿಗೆ ಸುಳ್ಳು ಮಾಹಿತಿ ನೀಡುತ್ತೀಯಾ ಎಂದು ಮಡಿವಾಳ ಪೊಲೀಸರು ಹುಸೇನ್‍ನನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೆರಾಕ್ಸ್ ನೋಟುಗಳ ಚಲಾವಣೆ: ಮೈಸೂರಿನಲ್ಲಿ ಮಹಿಳೆ ಅರೆಸ್ಟ್

    ಜೆರಾಕ್ಸ್ ನೋಟುಗಳ ಚಲಾವಣೆ: ಮೈಸೂರಿನಲ್ಲಿ ಮಹಿಳೆ ಅರೆಸ್ಟ್

    ಸಾಂರ್ದಭಿಕ ಚಿತ್ರ

    ಮೈಸೂರು: ಜೆರಾಕ್ಸ್ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಮಹಿಳೆಯನ್ನು ವಿದ್ಯಾರಣ್ಯಪುರಂ ಪೊಲೀಸರು ಬಂಧಿಸಿ 8,800 ರೂ. ಮೌಲ್ಯದ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

    ಮೈಸೂರಿನ ಜ್ಯೋತಿ ನಗರದ ನಿವಾಸಿಯಾ ಗೌರಮ್ಮ(40) ಬಂಧಿತ ಆರೋಪಿ. ವಿದ್ಯಾರಣ್ಯಪುರಂ ನಲ್ಲಿ ಬೀದಿಬದಿ ವ್ಯಾಪಾರಸ್ಥರ ಬಳಿ ನೋಟು ಚಲಾವಣೆ ಮಾಡುವ ವೇಳೆ ಗೌರಮ್ಮ ಸಿಕ್ಕಿಬಿದ್ದಿದ್ದಾಳೆ. ಆದರೆ ತಿಲಕ್ ನಗರದಲ್ಲಿ ಜೆರಾಕ್ಸ್ ಅಂಗಡಿ ನಡೆಸುತ್ತಿದ್ದ ಖಲೀಲ್ ನಾಪತ್ತೆಯಾಗಿದ್ದಾನೆ.

    ಬಂಧಿತಳಿದ್ದ 500 ಮುಖಬೆಲೆಯ 10 ನೋಟುಗಳು, 200 ಮುಖಬೆಲೆಯ 18 ನೋಟುಗಳು ಹಾಗೂ 100 ಮುಖಬೆಲೆಯ 2 ನೋಟುಗಳು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕಂಪ್ಯೂಟರ್, ಪ್ರಿಂಟರ್ ಹಾಗೂ ಜೆರಾಕ್ಸ್ ಯಂತ್ರವನ್ನೂ ಕೂಡ ವಶಪಡಿಸಿಕೊಳ್ಳಲಾಗಿದೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇವಾಲಯಕ್ಕೆ ಮುಗಿಬೀಳುತ್ತಿದ್ದ ವಿದ್ಯಾರ್ಥಿಗಳು: ಅನುಮಾನದಿಂದ ನೋಡಿದಾಗ ಬಯಲಾಯ್ತು ಡ್ರಗ್ಸ್ ದಂಧೆ!

    ದೇವಾಲಯಕ್ಕೆ ಮುಗಿಬೀಳುತ್ತಿದ್ದ ವಿದ್ಯಾರ್ಥಿಗಳು: ಅನುಮಾನದಿಂದ ನೋಡಿದಾಗ ಬಯಲಾಯ್ತು ಡ್ರಗ್ಸ್ ದಂಧೆ!

    ಬೀದರ್: ಮನೆಯಲ್ಲಿಯೇ ಚಿಕ್ಕ ದೇವಾಲಯವನ್ನು ನಿರ್ಮಿಸಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನಟೋರಿಯಸ್ ತಂಡವನ್ನು ಭೇದಿಸುವಲ್ಲಿ ಅಬಕಾರಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಭಾಲ್ಕಿ ಪಟ್ಟಣದ ಬಸವನಗರ ಬಡಾವಣೆಯ ರೇಣುಕಾ ಜಲ್ದೆಯು ಮನೆಯಲ್ಲೇ ದೇವಾಲಯ ನಿರ್ಮಿಸಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ನಶೆ ಏರಿಸುವ ಡ್ರಗ್ಸ್ ಮಾರಾಟಮಾಡುತ್ತಿದ್ದಳು. ಇದರ ಖಚಿತ ಮಾಹಿತಿ ಮೇರೆಗೆ ಅಬಕಾರಿ ಜಿಲ್ಲಾಧಿಕಾರಿ ಶಿವಪ್ರಕಾಶ್ ಹಾಗೂ ಡ್ರಗ್ಸ್ ನಿಯಂತ್ರಣ ಅಧಿಕಾರಿ ಶರಣಬಸಪ್ಪ ಸೇರಿದಂತೆ ಅಧಿಕಾರಿಗಳ ತಂಡ ಭಾನುವಾರ ದಾಳಿ ನಡೆಸಿದೆ.

    ದಾಳಿ ವೇಳೆ ಮನೆಯಲ್ಲಿ ಬಚ್ಚಿಟ್ಟಿದ್ದ ಅಪಾರ ಪ್ರಮಾಣದ ಮತ್ತೇರಿಸುವ ಮಾತ್ರೆಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ರೇಣುಕಾ ಜಲ್ದೆಯನ್ನು ಬಂಧಿಸಿದ್ದು, ದಂಧೆಯ ಪ್ರಮುಖ ರೂವಾರಿ ಆಕೆಯ ಗಂಡ ಸಂಜೀವ ಕುಮಾರನಿಗಾಗಿ ಪತ್ತೆಗೆ ವ್ಯಾಪಕ ಶೋಧ ನಡೆಸಿದ್ದಾರೆ.

    ಪತ್ತೆಯಾಗಿದ್ದು ಹೇಗೆ?
    ಮನೆಯಲ್ಲೇ ಸಣ್ಣದಾದ ದೇವಸ್ಥಾನ ನಿರ್ಮಿಸಿಕೊಂಡಿದ್ದ ದಂಧೆಕೋರರು, ಅಂಗಳದಲ್ಲಿನ ತುಳಸಿ ಗಿಡದ ಪಕ್ಕದ ಪೊದೆಯೊಂದರಲ್ಲಿ ಡ್ರಗ್ಸ್ ಸಂಗ್ರಹಿಸಿಟ್ಟುಕೊಂಡಿದ್ದರು. ದರ್ಶನದ ನೆಪ ಹೇಳಿ ಬರುತ್ತಿದ್ದ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತಿತ್ತು. ಮೇಲ್ನೋಟಕ್ಕೆ ಸ್ಥಳೀಯರಿಗೆ ದೇವಸ್ಥಾನಕ್ಕೆ ವಿದ್ಯಾರ್ಥಿಗಳು ಬಂದು ಹೋಗುತ್ತಿದ್ದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ದಿನೇ ದಿನೇ ವಿದ್ಯಾರ್ಥಿಗಳು ಹಾಗೂ ಯುವಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿನ್ನಾಭರಣಕ್ಕೆ ಪಾಲಿಶ್ ಮಾಡೋದಾಗಿ ಹೇಳಿ ನಕಲಿ ಚಿನ್ನ ನೀಡಿ ಪರಾರಿಗೆ ಯತ್ನ- ಗ್ರಾಮಸ್ಥರಿಂದ ಥಳಿತ

    ಚಿನ್ನಾಭರಣಕ್ಕೆ ಪಾಲಿಶ್ ಮಾಡೋದಾಗಿ ಹೇಳಿ ನಕಲಿ ಚಿನ್ನ ನೀಡಿ ಪರಾರಿಗೆ ಯತ್ನ- ಗ್ರಾಮಸ್ಥರಿಂದ ಥಳಿತ

    ಮಂಡ್ಯ: ಚಿನ್ನಾಭರಣಗಳಿಗೆ ಪಾಲಿಶ್ ಮಾಡುವ ನೆಪದಲ್ಲಿ ನಕಲಿ ಚಿನ್ನ ನೀಡಿ ಪರಾರಿಯಾಗಲು ಯತ್ನಿಸಿದ್ದ ಇಬ್ಬರು ಕಳ್ಳರನ್ನು ಹಿಡಿದು ಗ್ರಾಮಸ್ಥರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಇಂದು ಬಲ್ಲೇನಹಳ್ಳಿ ಗ್ರಾಮಕ್ಕೆ ಬಂದಿದ್ದ ಆರೋಪಿಗಳು, ರೂಪಾ ಎಂಬವರಿಗೆ ಒಂದು ಸರವನ್ನು ಪಾಲಿಶ್ ಮಾಡಿಸಿದರೆ ಮತ್ತೊಂದು ಸರಕ್ಕೆ ಉಚಿತವಾಗಿ ಪಾಲಿಶ್ ಮಾಡಿಕೊಡುತ್ತೇವೆ ಅಂತಾ ಹೇಳಿದ್ದರು. ಇದನ್ನು ನಂಬಿದ ರೂಪಾ ತಮ್ಮ ಚಿನ್ನದ ಸರವನ್ನು ಪಾಲಿಶ್ ಮಾಡಲು ಕೊಟ್ಟಿದ್ದರು. ರೂಪಾ ಅವರ ಗಮನವನ್ನು ಬೇರೆಡೆಗೆ ಹರಿಸಿ ನಕಲಿ ಚಿನ್ನ ನೀಡಿ ಪರಾರಿಯಾಗಲು ಯತ್ನಿಸಿದ್ದರು.

    ಆಭರಣವನ್ನು ತೆಗೆದುಕೊಂಡು ಪರಾರಿಯಾಗಲು ಯತ್ನಿಸಿದ್ದ ಯುವಕರನ್ನು ನೋಡಿ ರೂಪ ಜೋರಾಗಿ ಕಿರಿಚಾಡಿದ್ದರು. ಸ್ಥಳದಲ್ಲಿಯೇ ಇದ್ದ ಕೆಲವು ಗ್ರಾಮಸ್ಥರು ಆರೋಪಿಗಳನ್ನು ಹಿಡಿದು ಥಳಿಸಿ, ಬಳಿಕ ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಕುರಿತು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿವೃತ್ತ ಸರ್ಕಾರಿ ಉದ್ಯೋಗಿಯನ್ನ ಬಂಧಿಸಿದ್ದ ಐಎಎಸ್ ಅಧಿಕಾರಿಗೆ ಜೈಲು!

    ನಿವೃತ್ತ ಸರ್ಕಾರಿ ಉದ್ಯೋಗಿಯನ್ನ ಬಂಧಿಸಿದ್ದ ಐಎಎಸ್ ಅಧಿಕಾರಿಗೆ ಜೈಲು!

    ಹೈದರಾಬಾದ್: ಕಾನೂನು ಬಾಹಿರವಾಗಿ ನಿವೃತ್ತ ಸರ್ಕಾರಿ ಉದ್ಯೋಗಿಯೊಬ್ಬರನ್ನು ಬಂಧಿಸಿದ್ದ ಐಎಎಸ್ ಅಧಿಕಾರಿಗೆ ಹೈದರಾಬಾದ್ ಹೈಕೋರ್ಟ್ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

    ಶುಕ್ರವಾರ ಪ್ರಕರಣದ ಸಂಬಂಧ ನ್ಯಾಯಾಧೀಶ ಪಿ.ನವೀನ್ ರಾವ್ ನೇತೃತ್ವದ ಪೀಠವು ವಿಚಾರಣೆ ನಡೆಸಿತ್ತು. ಈ ವೇಳೆ ಆರೋಪ ಸಾಬೀತಾದ ಬೆನ್ನಲ್ಲೆ ಕೋರ್ಟ್ ಐಎಎಸ್ ಅಧಿಕಾರಿ ಕೆ.ಶಿವಕುಮಾರ್ ನಾಯ್ಡು ಅವರಿಗೆ 1 ತಿಂಗಳು ಜೈಲು ಶಿಕ್ಷೆ ಜೊತೆಗೆ 2 ಸಾವಿರ ರೂ. ದಂಡ ವಿಧಿಸಿದೆ. ಕಾನೂನು ಬಾಹಿರವಾಗಿ ಬಂಧನಕ್ಕೊಳಗಾಗಿದ್ದ ನಿವೃತ್ತ ಸರ್ಕಾರಿ ಉದ್ಯೋಗಿಗೆ ತೆಲಂಗಾಣ ಸರ್ಕಾರವು 50 ಸಾವಿರ ರೂ. ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿದೆ.

    ಏನಿದು ಪ್ರಕರಣ?
    ನಿವೃತ್ತ ಸರ್ಕಾರಿ ಉದ್ಯೋಗಿ ಎ.ಬುಚ್ಚಯ್ಯ ಎಂಬವರು ಮೆಹಬೂಬ್ ನಗರದ ಕಲ್ಯಾಣ ಮಂಟಪ ನಿರ್ಮಾಣ ಮಾಡುತ್ತಿದ್ದರು. ಈ ವೇಳೆ ಕೆಲವು ಸ್ಥಳೀಯರು ಅಕ್ರಮವಾಗಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಜಂಟಿ ಆಯುಕ್ತ ಕೆ.ಶಿವಕುಮಾರ್ ನಾಯ್ಡು ಅವರಿಗೆ ದೂರು ನೀಡಿದ್ದರು.

    2017 ಜುಲೈ 1ರಂದು ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿಯನ್ನು ಶಿವಕುಮಾರ್ ತಡೆಹಿಡಿದಿದ್ದರು. ಅಲ್ಲದೆ ತಮಗಿರುವ ಅಧಿಕಾರವನ್ನು ಬಳಸಿಕೊಂಡು ಬುಚ್ಚಯ್ಯ ಅವರನ್ನು ಬಂಧಿಸಿ, ಎರಡು ತಿಂಗಳು 29 ದಿನ ಜೈಲಿನಲ್ಲಿ ಇರಿಸಿದ್ದರು.

    ಜಾಮೀನು ಪಡೆದು ಜೈಲಿನಿಂದ ಹೊರಬಂದ ಬುಚ್ಚಯ್ಯ ಐಎಎಸ್ ಅಧಿಕಾರಿ ಶಿವಕುಮಾರ್ ವಿರುದ್ಧ ದೂರು ದಾಖಲಿಸಿದ್ದರು. ಬಳಿಕ ನ್ಯಾಯಾಧೀಶ ನವೀನ್ ಕುಮಾರ್ ಪ್ರಕರಣ ಅಧ್ಯಯನ ಮಾಡಿ ಶಿವಕುಮಾರ್ ಅವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 16 ಲಕ್ಷ ರೂ. ಮೌಲ್ಯದ ಗೋಡಂಬಿ ಕದ್ದ ಖರ್ತನಾಕ್ ಕಳ್ಳ ಅರೆಸ್ಟ್

    16 ಲಕ್ಷ ರೂ. ಮೌಲ್ಯದ ಗೋಡಂಬಿ ಕದ್ದ ಖರ್ತನಾಕ್ ಕಳ್ಳ ಅರೆಸ್ಟ್

    ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಸುಮಾರು 16 ಲಕ್ಷ ರೂ. ಮೌಲ್ಯದ ಗೋಡಂಬಿ ಕಳ್ಳತನ ಮಾಡಿದ್ದ ಕಳ್ಳನನ್ನು ನಗರದ ವೈಯಾಲಿಕವಲ್ ಪೊಲೀಸರು ಬಂಧಿಸಿದ್ದಾರೆ.

    ಪ್ರಶಾಂತ್ ತಾನಾಜಿ ಪಾಟೀಲ್ ಬಂಧಿತ ಆರೋಪಿ. ಕಳೆದ ಎರಡು ದಿನಗಳ ಹಿಂದೆ ವೈಯಾಲಿಕಾವಲ್‍ನ ಓಂ ಶ್ರೀ ಟ್ರೇಡರ್ಸ್ ಅಂಗಡಿಯ ಮಾಲೀಕನಿಗೆ ಸೇರಿದ್ದ ಗೋಡಂಬಿ ಕಳ್ಳತನ ಮಾಡಿದ್ದ. ಆರೋಪಿ ಪ್ರಶಾಂತ್ ಕದ್ದ ಗೋಡಂಬಿ ಬರೋಬ್ಬರಿ 1,980 ಕೆಜಿ ಹೊಂದಿದ್ದು, ಸುಮಾರು 16 ಲಕ್ಷ ರೂ. ಮೌಲ್ಯ ಹೊಂದಿತ್ತು.

    ಓಂ ಶ್ರೀ ಟ್ರೇಡರ್ಸ್ ಮಾಲೀಕನ ಬಳಿ ಕೆಲಸ ಮಾಡಿಕೊಂಡಿದ್ದ ಆರೋಪಿ ಪ್ರಶಾಂತ್ ತಾನಾಜಿ ನಕಲಿ ಕೀ ಬಳಸಿ ಗೋಡಂಬಿ ಕಳ್ಳತನ ಮಾಡಿದ್ದ. ಬಳಿಕ ಕದ್ದ ಗೋಡಂಬಿಯನ್ನು ಸ್ನೇಹಿತನ ಮನೆಯಲ್ಲಿ ಅಡಗಿಸಿಟ್ಟು ಪರಾರಿಯಾಗಿದ್ದ. ಈ ಕುರಿತು ದೂರು ಸ್ವೀಕರಿಸಿದ ಪೊಲೀಸರು ಅನುಮಾನಗೊಂಡು ತನಿಖೆ ನಡೆಸಿದ ವೇಳೆ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಸದ್ಯ ವೈಯಾಲಿಕವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv