Tag: arrest

  • ದಿನಕ್ಕೆ 3-4 ಸರಗಳ್ಳತನ ಮಾಡ್ಲೆಬೇಕೆಂದು ತಾಕೀತು – ಪತಿಗೆ ಗುಂಡೇಟು ಬಿಳ್ತಿದ್ದಂತೆ ಪತ್ನಿ ಎಸ್ಕೇಪ್

    ದಿನಕ್ಕೆ 3-4 ಸರಗಳ್ಳತನ ಮಾಡ್ಲೆಬೇಕೆಂದು ತಾಕೀತು – ಪತಿಗೆ ಗುಂಡೇಟು ಬಿಳ್ತಿದ್ದಂತೆ ಪತ್ನಿ ಎಸ್ಕೇಪ್

    ಬೆಂಗಳೂರು: ಕುಖ್ಯಾತ ಚೈನ್ ಸ್ನ್ಯಾಚರ್ ಅಚ್ಯುತ್ ಕುಮಾರ್ ಪತ್ನಿಗಾಗಿ ಕೆಂಗೇರಿ ಪೊಲೀಸರು ಮೂರು ತಿಂಗಳಿನಿಂದ ಹುಡುಕಾಟ ನಡೆಸುತ್ತಿದ್ದಾರೆ.

    ಸರಗಳ್ಳ ಅಚ್ಯುತ್ ಕುಮಾರ್ ಪತ್ನಿ ಮಹಾದೇವಿಗಾಗಿ ಕೆಂಗೇರಿ ಪೊಲೀಸರು ಬಲೆ ಬೀಸಿದ್ದು, ಮೂರು ತಿಂಗಳಿನಿಂದ ನಿರಂತರವಾಗಿ ಮಹಾದೇವಿಗಾಗಿ ಹುಡುಕಾಟ ನಡಸುತ್ತಿದ್ದಾರೆ. ಆರೋಪಿ ಮಹಾದೇವಿ ಐಷಾರಾಮಿ ಜೀವನಕ್ಕಾಗಿ ಸರಗಳ್ಳತನ ಮಾಡುವಂತೆ ಪತಿಯನ್ನು ಒತ್ತಾಯಿಸಿದ್ದಳು. ಆದರೆ ಆರೋಪಿ ಪತಿ ಅಚ್ಯುತ್ ಕುಮಾರ್ ಮೇಲೆ ಗುಂಡೇಟು ಬೀಳುತ್ತಿದ್ದಂತೆ ಪೊಲೀಸರ ಕೈಗೆ ಸಿಗದೇ ಪರಾರಿಯಾಗಿದ್ದಾಳೆ. ಇದನ್ನೂ ಓದಿ: ಸರಗಳ್ಳನ ಮೇಲೆ ಶೂಟೌಟ್- ಚಿನ್ನದ ಸರದ ಗಣಿಯೇ ಪತ್ತೆ

    ಮಹಾದೇವಿ ಐಷಾರಾಮಿ ಜೀವನಕ್ಕಾಗಿ ಮೊದಲ ಪತಿಗೆ ಕೈಕೊಟ್ಟು ಅಚ್ಯುತ್ ಕುಮಾರ್ ನನ್ನು ಮದುವೆಯಾಗಿದ್ದಳು. ಅಷ್ಟೇ ಅಲ್ಲದೇ ಮಹಾದೇವಿ ದಿನಕ್ಕೆ ಕನಿಷ್ಟ ಮೂರ್ನಾಲ್ಕು ಸರಗಳ್ಳತನ ಮಾಡಲೇಬೇಕೆಂದು ಗಂಡನಿಗೆ ತಾಕೀತು ಮಾಡಿದ್ದಳು. ಹೆಂಡತಿ ಮಾತಿನಂತೆಯೇ ಅಚ್ಯುತ್ ಕುಮಾರ್ ಕಳ್ಳತನ ಮಾಡುತ್ತಿದ್ದನ್ನು ಎನ್ನುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: 150 ಕೇಸ್ ನಲ್ಲಿ ಬೇಕಾಗಿದ್ದ ಆರೋಪಿಗೆ ಶೂಟ್, ಅರೆಸ್ಟ್ – ಡಿಸಿಪಿ ರವಿ ಡಿ.ಚನ್ನಣ್ಣನವರಿಂದ ತಂಡಕ್ಕೆ ಬಹುಮಾನ ಘೋಷಣೆ

    ಒಂದೇ ವರ್ಷದಲ್ಲಿ ಅಚ್ಯುತ್ ಕುಮಾರ್ ಸುಮಾರು ಒಂದೂವರೆ ಕೋಟಿ ರೂ. ಬೆಲೆ ಬಾಳುವಷ್ಟು ಸರಗಳ್ಳತನ ಮಾಡಿದ್ದನು. ಆದರೆ ಮೂರು ತಿಂಗಳ ಹಿಂದೆ ನೈಸ್ ರೋಡ್ ಬಳಿ ಆರೋಪಿ ಅಚ್ಯುತ್ ಕಾಲಿಗೆ ಗುಂಡು ಹಾರಿಸಿ ಆತನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಅಂದಿನಿಂದಲೂ ಪತ್ನಿ ಮಹಾದೇವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಅಚ್ಯುತ್ ಕುಮಾರ್ ವಿರುದ್ಧ ಸುಮಾರು ಬೆಂಗಳೂರಿನಲ್ಲಿ 70 ಸರಗಳ್ಳತನ ಕೇಸ್ ಗಳು ದಾಖಲಾಗಿದೆ. ಆದರೆ ರಾಜ್ಯದ ಇತರ ಜಿಲ್ಲೆಗಳೂ ಸೇರಿ ಒಟ್ಟು 150 ಕ್ಕೂ ಹೆಚ್ಚು ಕೇಸ್ ಆರೋಪಿ ಅಚ್ಯುತ್ ಮೇಲೆ ದಾಖಲಾಗಿದೆ. ಅಷ್ಟೇ ಅಲ್ಲದೇ ಬಂಧನಕ್ಕೂ ಮುನ್ನ ತುಮಕೂರಿನಲ್ಲಿ ಮೂರು ಕಡೆ ಸರಗಳ್ಳತನ ಮಾಡಿದ್ದನು. ಜೂನ್ 17 ರಂದು ಸರಗಳ್ಳ ಅಚ್ಯುತ್ ಕುಮಾರ್ ನನ್ನ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರೇಯಸಿ ಮೇಲೆ ನಡೆದ ಹೀನ ಕೃತ್ಯವನ್ನು ಕಣ್ಣಾರೆ ಕಂಡ ಪ್ರಿಯಕರ ಆತ್ಮಹತ್ಯೆ

    ಪ್ರೇಯಸಿ ಮೇಲೆ ನಡೆದ ಹೀನ ಕೃತ್ಯವನ್ನು ಕಣ್ಣಾರೆ ಕಂಡ ಪ್ರಿಯಕರ ಆತ್ಮಹತ್ಯೆ

    ರಾಯ್ಪುರ: ತನ್ನ ಅಪ್ರಾಪ್ತ ಪ್ರೇಯಸಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಕಣ್ಣಾರೆ ಕಂಡಿದ್ದ ಯುವಕನೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಛತ್ತೀಸ್‍ಗಡದಲ್ಲಿ ನಡೆದಿದೆ.

    ಛತ್ತೀಸ್‍ಗಡದ ಕೊರ್ಬಾ ಜಿಲ್ಲೆಯ ಕಟ್ಗೋರಾ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 1 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸವನ್ ಸಾಯಿ(21) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ. ಸದ್ಯಕ್ಕೆ ಈಶ್ವರ್ ದಾಸ್(22) ಹಾಗೂ ಕನ್ವಾರ್(21) ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಘಟನೆ ವಿವರ:
    ನಾನು ಸಾಯ್ ಇಬ್ಬರು ಮನೆಗೆ ಹೋಗುತ್ತಿದ್ದೆವು. ಆಗ ಆರೋಪಿಗಳಾದ ದಾಸ್ ಮತ್ತು ಕನ್ವಾರ್ ಬಂದು ಇಬ್ಬರ ಮೇಲು ಹಲ್ಲೆ ಮಾಡಿದರು. ಬಳಿಕ ಸಾಯಿ ಮುಂದೆಯೇ ನನ್ನ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಕಾಪಾಡದ ಪರಿಸ್ಥಿತಿಯಲ್ಲಿ ಸಾಯಿ ಇದ್ದನು. ಘಟನೆಯನ್ನು ಕಣ್ಣಾರೆ ಕಂಡಿದ್ದ ಆತ ಬಳಿಕ ಮಾನಸಿಕವಾಗಿ ನೊಂದಿದ್ದನು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಮರುದಿನ ಆರೋಪಿಗಳು ನಡೆದ ಘಟನೆ ಬಗ್ಗೆ ಗ್ರಾಮದ ಕೆಲವು ಯುವಕರಿಗೆ ಹೇಳಿದ್ದಾರೆ. ಇದರಿಂದ ಯುವಕರು ಸಾಯಿಗೆ ಅವಮಾನ ಮಾಡಿರಬಹುದು. ಆದ್ದರಿಂದ ನೊಂದು ಸಾಯಿ ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ವಿಚಾರಣೆ ವೇಳೆ ಸಂತ್ರಸ್ತೆ ತಿಳಿಸಿದ್ದಾಳೆ.

    ಸದ್ಯ ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನನ್ವಯ ಆರೋಪಿಗಳಾದ ದಾಸ್ ಮತ್ತು ಕನ್ವಾರ್ ಇಬ್ಬರನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಗಲು ಟೈಲರ್, ರಾತ್ರಿಯಾದರೆ ಹಂತಕ- 36 ಜನರನ್ನು ಕೊಂದ ಆರೋಪಿ ಕೊನೆಗೂ ಅರೆಸ್ಟ್

    ಹಗಲು ಟೈಲರ್, ರಾತ್ರಿಯಾದರೆ ಹಂತಕ- 36 ಜನರನ್ನು ಕೊಂದ ಆರೋಪಿ ಕೊನೆಗೂ ಅರೆಸ್ಟ್

    ಭೋಪಾಲ್: ಹಗಲಿನಲ್ಲಿ ಟೈಲರ್ ಕೆಲಸ ಮಾಡಿ ರಾತ್ರಿ ವೇಳೆ ಮನುಷ್ಯರನ್ನು ಕೊಲೆ ಮಾಡಿ ತೃಪ್ತಿ ಪಡುತ್ತಿದ್ದ ವಿಕೃತ ಮನಸ್ಸಿನ ವ್ಯಕ್ತಿಯನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

    ಭೋಪಾಲ್‍ನ ಮನ್‍ದೀಪ್ ನಿವಾಸಿ ಆದೇಶ್ ಖಾಮ್ರಾ ಬಂಧಿತ ಆರೋಪಿ. 2010 ರಲ್ಲಿ ಅಮರಾವತಿಯಲ್ಲಿ ಮೊದಲ ಬಾರಿಗೆ ಕೊಲೆ ಮಾಡಿದ್ದ. ಅಲ್ಲಿಂದ ಪ್ರಾರಂಭವಾದ ಆತನ ವಿಕೃತ ವರ್ತನೆಯಿಂದ ನಾಸಿಕ್, ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 36 ಜನರು ಕೊಲೆಯಾಗಿದ್ದಾರೆ.

    ಮಧ್ಯರಾತ್ರಿ ಭೋಪಾಲ್ ನಗರದ ಎಸ್‍ಪಿ ಬಿತ್ತು ಶರ್ಮಾ ನೇತೃತ್ವದ ತಂಡದ ಬಲೆಗೆ ಆದೇಶ್ ಸಿಕ್ಕಿಬಿದ್ದಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಿದಾಗ ವಿಚಿತ್ರ ಸತ್ಯಗಳು ಬಯಲಿಗೆ ಬಂದಿವೆ. ನನ್ನ ಟಾರ್ಗೆಟ್ ಟ್ರಕ್ ಚಾಲಕರು ಎಂದು ಆದೇಶ್ ತಿಳಿಸಿದ್ದಾನೆ.

    ಟ್ರಕ್ ಚಾಲಕರೇ ಏಕೆ?
    ಟ್ರಕ್ ಚಾಲಕರ ಜೀವನ ಬಹಳ ಕಷ್ಟದಿಂದ ಕೂಡಿದೆ. ಅವರಿಗೆ ಮುಕ್ತಿ ನೀಡುವುದಕ್ಕಾಗಿ ನಾನು ಅವರನ್ನು ಕೊಲೆ ಮಾಡುತ್ತಿದ್ದೆ. ನಾನು ಕೊಲೆ ಮಾಡಿದ್ದು ಹೆಚ್ಚಾಗಿ ಹೆಚ್ಚಾಗಿ ಟ್ರಕ್ ಚಾಲಕರು ಹಾಗೂ ಅವರ ಸಹಾಯಕನನ್ನೆ ಎಂದು ಆದೇಶ್ ಒಪ್ಪಿಕೊಂಡಿದ್ದಾನೆ.

    ಆದೇಶ್ ತನ್ನ ಗ್ಯಾಂಗ್ ಜೊತೆಗೂಡಿ ಟ್ರಕ್ ಚಾಲಕರನ್ನು ಲೂಟಿ ಮಾಡುತ್ತಿದ್ದ. ಲೂಟಿ ಮಾಡಿದ ಬಳಿಕ ಉದ್ದನೆಯ ಹಗ್ಗವನ್ನು ಚಾಲಕರ ಕುತ್ತಿಗೆಗೆ ಬಿಗಿದು ಕೊಲೆ ಮಾಡುತ್ತಿದ್ದ. ಅಷ್ಟೇ ಅಲ್ಲದೆ ಮೃತ ದೇಹದ ಬಟ್ಟೆ ಬಿಚ್ಚಿ, ಹೆಣದ ಗುರುತು ಸಿಗದಂತೆ ಮಾಡಿ, ಬೆಟ್ಟ ಪ್ರದೇಶದಲ್ಲಿ ಎಸೆಯುತ್ತಿದ್ದ. ಇಲ್ಲವೇ ಮಣ್ಣಿನಲ್ಲಿ ಹೂಳುತ್ತಿದ್ದ. ಕೆಲವೊಮ್ಮೆ ಕೊಲೆ ಮಾಡಲು ಚಾಲಕರಿಗೆ ವಿಷ ಕುಡಿಸುತ್ತಿದ್ದ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಆದೇಶ್ ಚಿಕ್ಕಪ್ಪ ಅಶೋಕ್ ಖಾಮ್ರಾ ಕೂಡಾ ಸುಮಾರು 100 ಟ್ರಕ್ ಚಾಲಕರನ್ನು ಕೊಲೆ ಮಾಡಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. ಆತನ ಪ್ರೇರಣೆಯಿಂದಲೇ ಆದೇಶ್ ಈ ಕೃತ್ಯಕ್ಕೆ ಮುಂದಾಗಿರಬಹುದು ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರೇಯಸಿಯ ಅರೆನಗ್ನ ವಿಡಿಯೋ ವೈರಲ್ – ಯುವತಿಗೆ ದಂಡ ಹಾಕಿದ ಗ್ರಾಮಸ್ಥರು

    ಪ್ರೇಯಸಿಯ ಅರೆನಗ್ನ ವಿಡಿಯೋ ವೈರಲ್ – ಯುವತಿಗೆ ದಂಡ ಹಾಕಿದ ಗ್ರಾಮಸ್ಥರು

    ಡಿಸ್ಪುರ್: ಯುವತಿಯೊಬ್ಬಳು ಮಾಜಿ ಪ್ರಿಯತಮ ತನ್ನ ಅರೆನಗ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಕ್ಕೆ ಗ್ರಾಮದವರೇ ಆಕೆಗೆ ದಂಡ ವಿಧಿಸಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಅಸ್ಸಾಂನ ಗುವಾಹಟಿಯಲ್ಲಿ ಈ ಘಟನೆ ನಡೆದಿದೆ. ಸದ್ಯಕ್ಕೆ ಯುವತಿ ನೀಡಿದ ದೂರಿ ಆಧಾರದ ಮೇರೆಗೆ ಮೇಘಾಲಯದ ಗೈರೋಂಗ್ ಗ್ರಾಮದ ನಿವಾಸಿ ಆರೋಪಿ ಮಾನ್ಸ್ ರಂಗ್ ಸಂಗ್ಮಾನನ್ನು ಬಂಧಿಸಲಾಗಿದೆ. ಆದರೆ ಯುವತಿ ಪಾಪ ಮಾಡಿದ್ದಾಳೆ ಎಂದು ಗ್ರಾಮದ ಹಿರಿಯರು ಆಕೆಗೆ 3000 ರೂ. ದಂಡ ವಿಧಿಸಿದ್ದಾರೆ.

    ಸಂಗ್ಮಾ ಮತ್ತು ನಾನು ಪರಸ್ಪರ ಪ್ರೀತಿಸುತ್ತಿದ್ದೇವು. ಈ ವೇಳೆ ಅವನ ಜೊತೆ ಕಳೆದ ಏಕಾಂತ ಕ್ಷಣಗಳನ್ನು ನನಗೆ ತಿಳಿಯದಂತೆ ವಿಡಿಯೋ ಮಾಡಿಕೊಂಡಿದ್ದಾನೆ. ಈ ಬಗ್ಗೆ ನನಗೆ ತಿಳಿದಾಗ ವಿಡಿಯೋ ಡಿಲೀಟ್ ಮಾಡುವಂತೆ ಹೇಳಿದ್ದೆ. ಆದರೆ ಆರೋಪಿ ಇದ್ದಕ್ಕೆ ಒಪ್ಪಿರಲಿಲ್ಲ.

    ಈಗ ನಮ್ಮಿಬ್ಬರ ಪ್ರೀತಿ ಸಂಬಂಧ ಮುರಿದು ಬಿದ್ದಿದೆ. ಆದ್ದರಿಂದ ನನ್ನ ಮೇಲಿನ ದ್ವೇಷಕ್ಕೆ ತನ್ನ ಅರೆ ನಗ್ನ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾನೆ ಎಂದು ಸಂತ್ರಸ್ತ ಯುವತಿ ಮೆಂಡಿಪತರ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಈ ಕುರಿತು ದೂರು ದಾಖಲಿಸಿರುವ ಪೊಲೀಸರು ಆರೋಪಿ ಮಾನ್ಸ್ ರಂಗ್ ಸಂಗ್ಮಾನನ್ನು ಬಂಧಿಸಿದ್ದಾರೆ. ಆದರೆ ಯುವತಿಯ ಗ್ರಾಮದ ಮುಖಂಡರು ಈಕೆ ಪಾಪ ಮಾಡಿದ್ದಾಳೆ ಎಂದು 3000 ರೂ. ದಂಡ ವಿಧಿಸಿದ್ದಾರೆ. ಬಳಿಕ ಅಲ್ಲಿನ ಸಮುದಾಯವದರು ಮತ್ತೊಮ್ಮೆ ಸಭೆ ನಡೆಸಿ 3000 ರೂ. ದಂಡದ ಹಣವನ್ನು 1,500 ರೂ.ಗೆ ಕಡಿಮೆ ಮಾಡಿದ್ದಾರೆ.

    ಸದ್ಯಕ್ಕೆ ಸಿವಿಲ್ ಸೊಸೈಟಿ ಮಹಿಳಾ ಸಂಸ್ಥೆ ಯುವತಿಯನ್ನು ರಕ್ಷಣೆ ಮುಂದಾಗಿದ್ದು, ಆಕೆಗೆ ನ್ಯಾಯ ಕೊಡಿಸಿವುದಾಗಿ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 1 ಲಕ್ಷ ರೂ. ಕೊಡಿ, 5 ಲಕ್ಷ ನಕಲಿ ನೋಟು ಕೊಡ್ತೀವಿ: ವಂಚಕರಿಬ್ಬರ ಬಂಧನ

    1 ಲಕ್ಷ ರೂ. ಕೊಡಿ, 5 ಲಕ್ಷ ನಕಲಿ ನೋಟು ಕೊಡ್ತೀವಿ: ವಂಚಕರಿಬ್ಬರ ಬಂಧನ

    – ಬಂಧಿತರಿಂದ 25 ಲಕ್ಷ ಮೌಲ್ಯದ ಒಟ್ಟು 6 ಬಂಡಲ್‍ಗಳು ವಶ

    ಬಳ್ಳಾರಿ: ಅಸಲಿ 1 ಲಕ್ಷ ರೂಪಾಯಿ ಕೊಟ್ಟರೆ, ನಕಲಿ 5 ಲಕ್ಷ ರೂಪಾಯಿ ಕೊಡುವುದಾಗಿ ವಂಚಿಸುತ್ತಿದ್ದ ಆರೋಪಿಗಳನ್ನು ಹಗರಿಬೊಮ್ಮನಹಳ್ಳಿಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮಾನ್ವಿಯ ರಾಜೇಂದ್ರ ಹಾಗೂ ಯಲಬುರ್ಗಾದ ಅಂದಾನಿಗೌಡ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಹಗರಿಬೊಮ್ಮನಹಳ್ಳಿಯ ಹಲವು ವರ್ತಕರಿಗೆ ಕರೆ ಮಾಡಿ ನೀವು 1 ಲಕ್ಷ ರೂಪಾಯಿ ಅಸಲಿ ನೋಟುಗಳನ್ನು ಕೊಡಿ, ನಾವು ನಿಮಗೆ 5 ಲಕ್ಷ ರೂಪಾಯಿ ನಕಲಿ ನೀಡುತ್ತೇವೆ ಎಂದು ವಂಚಿಸುತ್ತಿದ್ದರು. ಈ ಕುರಿತು ಮಾಹಿತಿ ಸಂಗ್ರಹಿಸಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸುವಲ್ಲಿ ಸಫಲರಾಗಿದ್ದಾರೆ.

    ಬಂಧಿತರಿಂದ 25 ಲಕ್ಷ ಮೌಲ್ಯದ ಒಟ್ಟು 6 ಬಂಡಲ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಮೌಲ್ಯ ಒಟ್ಟು 1.5 ಕೋಟಿ ರೂಪಾಯಿ ಆಗಿದ್ದು, ಇದಲ್ಲದೇ ಒಂದು ಬೈಕ್ ಸೇರಿದಂತೆ 3 ಮೊಬೈಲ್‍ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಖೋಟಾ ನೋಟು ಚಲಾವಣೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ವ್ಯಾಪಕ ವಿಚಾರಣೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸತತ 5 ವರ್ಷದಿಂದ ಮೂವರು ಅಪ್ರಾಪ್ತ ಮಕ್ಕಳ ಮೇಲೆ ಕಾಮುಕ ಅಪ್ಪನಿಂದ ರೇಪ್!

    ಸತತ 5 ವರ್ಷದಿಂದ ಮೂವರು ಅಪ್ರಾಪ್ತ ಮಕ್ಕಳ ಮೇಲೆ ಕಾಮುಕ ಅಪ್ಪನಿಂದ ರೇಪ್!

    ಗಾಂಧಿನಗರ: ಪಾಪಿ ತಂದೆಯೊಬ್ಬನು ತನ್ನ ಮೂವರು ಅಪ್ರಾಪ್ತ ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿರುವ ಹೀನ ಕೃತ್ಯ ಗುಜರಾತಿನಲ್ಲಿ ನಡೆದಿದೆ.

    ಗುಜರಾತಿನ ಪೋರಬಂದರ್ ನಗರದ ಪೊಲೀಸರು ಈಗ ಆರೋಪಿ ತಂದೆಯನ್ನು ಬಂಧಿಸಿದ್ದಾರೆ. ಆರೋಪಿ ತಂದೆಗೆ 40 ವರ್ಷ ವಯಸ್ಸಾಗಿದೆ. ಹಿರಿಯ ಮಗಳು ಕಮ್ಲಾಬಾಗ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

    ಏನಿದು ಪ್ರಕರಣ?
    ಆರೋಪಿಯ ಪತ್ನಿ 2008 ರಲ್ಲಿ ಮೃತಪಟ್ಟಿದ್ದಾರೆ. ಈತ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಆರೋಪಿಗೆ ಒಬ್ಬ ಗಂಡು ಮತ್ತು ನಾಲ್ವರು ಹೆಣ್ಣು ಮಕ್ಕಳಿದ್ದರು. ಹಿರಿಯ ಮಗಳಿಗೆ 16 ವರ್ಷ, ಎರಡನೇ ಮಗಳಿಗೆ 13 ಮತ್ತು ಕಿರಿಯ 10 ವರ್ಷ ವಯಸ್ಸಾಗಿದೆ. ಇವರೆಲ್ಲರೂ ಜುನಾಗಡ್ ನಲ್ಲಿ ವಸತಿ ಶಾಲೆಯಲ್ಲಿ ಇದ್ದು, ವ್ಯಾಸಂಗ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಶಾಲೆ ರಜೆ ಇದ್ದಾಗ ಆರೋಪಿಯೇ ಹೋಗಿ ಹಿರಿಯ ಮಗಳನ್ನು ಕರೆದುಕೊಂಡು ಬಂದು ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ. ಅದೇ ರೀತಿ ಉಳಿದ ಇಬ್ಬರು ಮಕ್ಕಳನ್ನು ರಜೆ ದಿನಗಳಲ್ಲಿ ಕರೆದುಕೊಂಡು ಬಂದು ನಿರಂತರ ಅತ್ಯಾಚಾರ ಎಸಗಿದ್ದಾನೆ. ಇದೇ ರೀತಿ ಸತತ ಐದು ವರ್ಷಗಳಿಂದ ಈ ಹೀನ ಕೃತ್ಯವನ್ನು ಮಾಡುತ್ತಿದ್ದಾನೆ ಎಂದು ಇನ್ಸ್ ಪೆಕ್ಟರ್ ಎಚ್.ಎಂ. ಪಟೇಲ್ ಹೇಳಿದ್ದಾರೆ.

    ಅತ್ಯಾಚಾರ ಎಸಗಿದ್ದಲ್ಲದೇ ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಬೆದರಿಕೆ ಒಡ್ಡಿದ್ದಾನೆ. ಆದ್ದರಿಂದ ಐದು ವರ್ಷದಿಂದ ಈ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಇತ್ತೀಚೆಗೆ ಸೆಪ್ಟೆಂಬರ್ 3 ರಂದು ಕಿರಿಯ ಮಗಳನ್ನು ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಆಕೆ ಅಕ್ಕನಿಗೆ ತಿಳಿಸಿದ್ದಾಳೆ. ಇನ್ನೊಬ್ಬಳು ಕೂಡ ತನ್ನ ಮೇಲೆ ನಡೆದಿರುವ ಅತ್ಯಾಚಾರದ ಬಗ್ಗೆ ಹೇಳಿಕೊಂಡಿದ್ದಾಳೆ. ಕೊನೆಗೆ ಮೂವರು ಅಪ್ರಾಪ್ತರು ನಿರ್ಧಾರ ಮಾಡಿ ಕಮ್ಲಾಬಾಗ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪಟೇಲ್ ತಿಳಿಸಿದ್ದಾರೆ.

    ಸಂತ್ರಸ್ತರು ದೂರು ಕೊಟ್ಟ ಬಳಿಕ ಮೂವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಸದ್ಯಕ್ಕೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೇಲೆ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಗಳನ್ನು ಆಫೀಸರ್ ಮಾಡಲು ದರೋಡೆಗೆ ಇಳಿದ ತಂದೆ

    ಮಗಳನ್ನು ಆಫೀಸರ್ ಮಾಡಲು ದರೋಡೆಗೆ ಇಳಿದ ತಂದೆ

    -ದರೋಡೆಗೆ ಧಾರಾವಾಹಿಯೇ ಸ್ಫೂರ್ತಿಯಂತೆ!

    ಪಾಟ್ನಾ: ತಂದೆಯೊಬ್ಬ ಮಗಳನ್ನು ಆಫೀಸರ್ ಮಾಡುವುದಕ್ಕಾಗಿ ದರೋಡೆ ಮಾಡಲು ಪ್ರಾರಂಭಿಸಿದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.

    ರಾಮ್ ಕಿಶೋರ್ ಸಿಂಗ್ ಅಲಿಯಾಸ್ ಬಾಬಾ ಎಂಬತಾನೇ ದರೋಡೆಗೆ ಇಳಿದ ತಂದೆ. ಶನಿವಾರ ಪೊಲೀಸರು ಬಂಧಿಸಿದ್ದ ನಾಲ್ವರು ದರೋಡೆಕೋರರಲ್ಲಿ ಈತನು ಒಬ್ಬನಾಗಿದ್ದು, ಆರೋಪಿಗಳೆಲ್ಲಾ ಪಾಟ್ನಾದ ನಿವಾಸಿಗಳಾಗಿದ್ದಾರೆ. ಕಿಶೋರ್ ಆರು ತಿಂಗಳ ಹಿಂದೆ ಈ ಗ್ಯಾಂಗ್ ಅನ್ನು ಸೇರಿದ್ದೇನೆಂದು ಪೊಲೀಸರಿಗೆ ತಿಳಿಸಿದ್ದಾನೆ. ನನ್ನ 12 ವರ್ಷದ ಮಗಳ ಶಾಲಾ ಶುಲ್ಕ ಹಾಗೂ ಟ್ಯೂಷನ್ ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಳ್ಳತನ ಮಾಡಲು ಶುರುಮಾಡಿದೆ ಎಂದು ಹೇಳಿದ್ದಾನೆ.

    ಕಿಶೋರ್ ಸಿಂಗ್ ಮೂಲತಃ ಪಾಟ್ನಾದ ದೇವಿ ಕಾಲೋನಿ ನಿವಾಸಿಯಾಗಿದ್ದು, ಮಗಳನ್ನು ಆಫೀಸರ್ ಮಾಡುವುದಕ್ಕೆ ದೂರದರ್ಶನದಲ್ಲಿ ಬರುವ ‘ಅಫ್ಸಾರ್ ಬಿಟಿಯಾ’ ಧಾರಾವಾಹಿ ನನ್ನ ಸ್ಫೂರ್ತಿ ಎಂಬುದು ತನಿಖೆಯ ವೇಳೆ ತಿಳಿದಿದೆ. ಕಿಶೋರ್ ಈ ಹಿಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, 6,000 ರೂ. ವೇತನ ಬರುತ್ತಿತ್ತು. ಆ ಕೆಲಸವನ್ನು ಬಿಟ್ಟು ಗ್ಯಾಂಗ್ ಸೇರಿದ್ದಾನೆ. ಮಗಳು ವೈಶಾಲಿ ಜಿಲ್ಲೆಯಿಂದ 15 ಕಿ.ಮೀ ದೂರವಿರುವ ಪ್ರಾಥಮಿಕ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಓದುತ್ತಿದ್ದಾಳೆ.

    ನಾನು ನನ್ನ ಮಗಳ ವಿದ್ಯಾಭ್ಯಾಸಕ್ಕಾಗಿ ಈ ಕೆಲಸವನ್ನು ಮಾಡಿದೆ. ನನನ್ನು ಕ್ಷಮಿಸಿ ನಾನು ಅಪರಾಧ ಮಾಡಿದ್ದೇನೆ ಎಂದು ಕ್ಷಮೆ ಕೇಳಿದ್ದಾನೆ ಎಂದು ವೈಶಾಲಿಯ ಪೊಲೀಸ್ ಅಧಿಕಾರಿ ಎಂ.ಎಸ್ ಧಿಲ್ಲನ್ ಸಿಂಗ್ ಹೇಳಿದರು.

    ಬಿಹಾರದ ಇತರ ಜಿಲ್ಲೆಗಳಲ್ಲಿ ದರೋಡೆಕೋರರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಪ್ತಚರ ಪೊಲೀಸ್ ಕಾರ್ಯಾಚರಣೆ ಮಾಡುವಾಗ ರಾಜ್ ಕಿಶೋರ್ ಸಿಂಗ್, ಕೃಷ್ಣಕುಮಾರ್, ಮುನ್ನಾ ಯಾದವ್ ಮತ್ತು ರೋಶನ್ ಕುಮಾರ್ ಎಂಬವರನ್ನು ಶನಿವಾರ ಬಂಧಿಸಲಾಗಿತ್ತು.

    ಬಂಧಿಸಲಾಗಿದ್ದ ಆರೋಪಿಗಳಿಂದ 20 ಲಕ್ಷ ರೂ. ಮೌಲ್ಯದ ಆಭರಣಗಳು, ಇಬ್ಬರ ಬಳಿ ಬಂದೂಕುಗಳು ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. 10 ಲಕ್ಷ ರೂ. ನಗದು ಬಹುಮಾನ ಮತ್ತು ಯುಎಸ್ ಡಾಲರ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಪೊಲೀಸರು ವಿದೇಶಿ ಕರೆನ್ಸಿಗಳ ಮೌಲ್ಯವನ್ನು ಬಹಿರಂಗಪಡಿಸಿಲ್ಲ. ಅಷ್ಟೇ ಅಲ್ಲದೇ ಕದ್ದ ಹಣದಿಂದ ಬಂಧಿತ ಆರೋಪಿಗಳು ಆಸ್ತಿಗಳನ್ನು ಖರೀದಿಸಿದ್ದಾರೆ. ಕೃಷ್ಣ ಯಾದವ್ ಇತ್ತೀಚೆಗೆ ದಾನಾಪುರದಲ್ಲಿ 15 ಲಕ್ಷ ರೂ. ಮೌಲ್ಯದ ಭೂಮಿಯನ್ನು ಖರೀದಿಸಿದ್ದು, ರೌಶನ್ ಕುಮಾರ್ ಎಂಬವನು ಸ್ಯಾಮಾಪಚ್ಚಕ್ ನಲ್ಲಿ ಅದೇ ಬೆಲೆಯಲ್ಲಿ ಖರೀದಿಸಿದ್ದಾನೆ. ಇದೀಗ ಆಸ್ತಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಡುರಸ್ತೆಯಲ್ಲಿ ಬೆತ್ತಲೆ ನಿಂತು ಅಸಭ್ಯ ವರ್ತನೆ ತೋರಿದ ಕಾಮುಕ ಅರೆಸ್ಟ್

    ನಡುರಸ್ತೆಯಲ್ಲಿ ಬೆತ್ತಲೆ ನಿಂತು ಅಸಭ್ಯ ವರ್ತನೆ ತೋರಿದ ಕಾಮುಕ ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಬ್ಬ ಸೈಕೋ ಪ್ರತ್ಯಕ್ಷವಾಗಿದ್ದು, ನಡುರಸ್ತೆಯಲ್ಲಿ ಬೆತ್ತಲೆ ನಿಂತು ಅಸಭ್ಯ ವರ್ತನೆ ತೋರಿದ ಕಾಮುಕನನ್ನು ಆರ್.ಟಿ ನಗರ ಪೊಲೀಸರು ಬಂಧಿಸಿದ್ದಾರೆ.

    ಮಹಮ್ಮದ್ ಸಿದ್ದಿಕ್ ನಡುರಸ್ತೆಯಲ್ಲಿ ಬೆತ್ತಲೆ ನಿಂತ ಕಾಮುಕ. ಸಂಜೆ ವೇಳೆಯಲ್ಲಿ ಮಹಮ್ಮದ್ ಸಿದ್ದಿಕ್ ಪ್ರತ್ಯಕ್ಷವಾಗುತ್ತಿದ್ದು, ಈತನ ಕಾಟಕ್ಕೆ ಸಿಲಿಕಾನ್ ಸಿಟಿ ಮಹಿಳೆಯರು ಬೆಚ್ಚಿಬಿದ್ದಿದ್ದಾರೆ. ಸದ್ಯ ಈ ಸೈಕೋ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸಿದ್ದಿಕ್ ಆಯುರ್ವೇದ ಡಾಕ್ಟರ್ ಎಂದು ಆರ್.ಟಿ ನಗರದಲ್ಲಿರುವ ಮನೆಗೆ ಬರುತ್ತಿದ್ದನು. ಈ ವೇಳೆ ಸಾರ್ವಜನಿಕರು ಆತನನ್ನು ರೇಡ್ ಹ್ಯಾಂಡಾಗಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಹೊಯ್ಸಳ ಪೊಲೀಸರಿಗೆ ಕಾಮುಕನನ್ನು ಒಪ್ಪಿಸಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಆರ್.ಟಿ ನಗರದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈ ಬಗ್ಗೆ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಲಗಿದ್ದ ತಾಯಿಯ ಮೇಲೆಯೇ 30 ವರ್ಷದ ಮಗ ಅತ್ಯಾಚಾರ!

    ಮಲಗಿದ್ದ ತಾಯಿಯ ಮೇಲೆಯೇ 30 ವರ್ಷದ ಮಗ ಅತ್ಯಾಚಾರ!

    ಭೋಪಾಲ್: 45 ವರ್ಷದ ತನ್ನ ತಾಯಿಯ ಮೇಲೆ 30 ವರ್ಷದ ಮಗ ಅತ್ಯಾಚಾರ ಎಸಗಿರುವ ಹೀನ ಕೃತ್ಯ ಮಧ್ಯ ಪ್ರದೇಶದ ಬರ್ವಾನಿ ಜಿಲ್ಲೆಯ ಸುರನಿ ಗ್ರಾಮದಲ್ಲಿ ನಡೆದಿದೆ.

    ಈ ಘಟನೆ ಸೆಪ್ಟಂಬರ್ 2ರಂದು ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ಮನೆಯಲ್ಲಿ ಮಲಗಿದ್ದರು. ಈ ವೇಳೆ ಆರೋಪಿ ಮಗ ಏಕಾಏಕಿ ತಾಯಿಯ ಮೇಲೆರಗಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆರೋಪಿ ತಾಯಿಯ ಕುತ್ತಿಗೆಗೆ ಕುಡುಗೋಲು ಹಾಕಿ ಅತ್ಯಾಚಾರ ಎಸಗಿದ್ದಾನೆ ಎಂದು ಪೋಲಿಸ್ ಸ್ಟೇಶನ್ ಇನ್ ಚಾರ್ಜ್ ದಿನೇಶ್ ಚೌಹಾಣ್ ಹೇಳಿದ್ದಾರೆ.

    ಆರೋಪಿಯ ಪತ್ನಿ ಎರಡು ವರ್ಷಗಳ ಹಿಂದೆ ಈತನನ್ನು ಬಿಟ್ಟು ಹೋಗಿದ್ದರು. ಬಳಿಕ ಈತ ತನ್ನ ಮೂವರು ಮಕ್ಕಳೊಂದಿಗೆ ಪೋಷಕರೊಂದಿಗೆ ವಾಸಿಸುತ್ತಿದ್ದನು. ಅಷ್ಟೇ ಅಲ್ಲದೇ ಆರೋಪಿಯ ಏಳು ವರ್ಷದ ಮಗ ಈ ಘಟನೆಯನ್ನು ನೋಡಿದ್ದಾನೆ. ಆದರೆ ಭಯದಿಂದ ಈ ಬಗ್ಗೆ ಹೇಳಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆ ಕಾಮುಕ ಮಗನಿಂದ ತಪ್ಪಿಸಿಕೊಂಡು ತನ್ನ ಮೂವರು ಮೊಮ್ಮಕ್ಕಳೊಂದಿಗೆ ಸಂಬಂಧಿಕರ ಮನೆಗೆ ಬಂದಿದ್ದಾರೆ. ಬಳಿಕ ಅವರ ಸಹಾಯ ಪಡೆದು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯಕ್ಕೆ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಚೌಹಾಣ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಕಲೇಶಪುರದ ಪುರಸಭೆ ಮಾಜಿ ಅಧ್ಯಕ್ಷನ ಬಂಧನ, ಬಿಡುಗಡೆ

    ಸಕಲೇಶಪುರದ ಪುರಸಭೆ ಮಾಜಿ ಅಧ್ಯಕ್ಷನ ಬಂಧನ, ಬಿಡುಗಡೆ

    ಹಾಸನ: ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಪಡಿಸಿದ ಆರೋಪದಡಿ ಸಕಲೇಶಪುರದ ಪುರಸಭೆ ಮಾಜಿ ಅಧ್ಯಕ್ಷನನ್ನು ಬಂಧಿಸಲಾಗಿದ್ದು, ಬಳಿಕ ಅವರನ್ನು ಬಿಡುಗಡೆ ಮಾಡಿರುವ ಘಟನೆ ಪಟ್ಟಣದ ಭುವನೇಶ್ವರಿ ರಸ್ತೆಯಲ್ಲಿ ನಡೆದಿದೆ.

    ಸಯ್ಯದ್ ಮುಫಿಜ್ ಬಂಧಿಸಲ್ಪಟ್ಟಿದ್ದ ಪುರಸಭೆ ಮಾಜಿ ಅಧ್ಯಕ್ಷ. ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದಿತ್ತು. 9ನೇ ವಾರ್ಡಿನಿಂದ ಮುಫಿಜ್ ಪತ್ನಿ ಹಾಗೂ ಅದೇ ವಾರ್ಡ್ ನ ದಸ್ತಗಿರಿ ಎಂಬವರ ಪತ್ನಿ ಪುರಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಗೆಲುವು-ಸೋಲಿನ ಲೆಕ್ಕಾಚಾರದ ವೇಳೆ ಇಬ್ಬರ ನಡುವೆ ಆರೋಪ-ಪ್ರತ್ಯಾರೋಪ ಜರುಗಿ ಅದು ವಿಕೋಪಕ್ಕೆ ತಿರುಗಿದೆ. ಹೀಗಾಗಿ ಭಾನುವಾರ ಸಂಜೆ ಪೊಲೀಸರು ನಡುಬೀದಿಯಲ್ಲಿ ಸಯ್ಯದ್ ಮುಫೀಜ್ ಅವರನ್ನು ಹಿಡಿದು ಠಾಣೆಗೆ ಎಳೆದೊಯ್ದಿದ್ದರು.

    ಘಟನೆ ಸಂಬಂಧ 20 ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv