Tag: arrest

  • ಕಾಮುಕರ ಪೈಶಾಚಿಕ ಕೃತ್ಯಕ್ಕೆ ಓರ್ವ ಬಾಲಕಿ ಬಲಿ

    ಕಾಮುಕರ ಪೈಶಾಚಿಕ ಕೃತ್ಯಕ್ಕೆ ಓರ್ವ ಬಾಲಕಿ ಬಲಿ

    ಪುಣೆ: ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಕಾಮುಕರಿಬ್ಬರು ಅತ್ಯಾಚಾರ ಎಸಗಿದ್ದರಿಂದ ಓರ್ವ ಬಾಲಕಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಹಿಂಜ್ವಾಡಿಯಲ್ಲಿ ನಡೆದಿದೆ.

    ಇಬ್ಬರು ಬಾಲಕಿಯರು 12 ವರ್ಷದವರಾಗಿದ್ದು, ಭಾನುವಾರ ಮಧ್ಯಾಹ್ನ ಇಬ್ಬರೂ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ದೇಗುಲದ ಬಳಿ ಆಟವಾಡಲು ತೆರಳಿದ್ದರು. ಈ ವೇಳೆ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಇಬ್ಬರು ಕಾಮುಕರು ಬಂದು ಬಾಲಕಿಯರಿಗೆ ಚಾಕ್ಲೇಟ್ ಕೊಡಿಸುವುದಾಗಿ ಆಸೆ ತೋರಿಸಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಬಾಲಕಿಯರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕಾಮುಕರು ಅತ್ಯಾಚಾರ ಎಸಗಿದ್ದಾರೆ ಎಂದು ಹಿಂಜ್ವಾಡಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಅತ್ಯಾಚಾರ ಎಸಗಿದ ಬಳಿಕ ಇಬ್ಬರು ಬಾಲಕಿಯರಿಗೆ ಯಾರಿಗೂ ಈ ಬಗ್ಗೆ ಹೇಳಬಾರದು ಎಂದು ಬೆದರಿಕೆ ಒಡ್ಡಿದ್ದಾರೆ. ಅದರಂತೆಯೇ ಬಾಲಕಿಯರು ಈ ಬಗ್ಗೆ ಮನೆಯಲ್ಲಿ ಹೇಳಲಿಲ್ಲ. ಆದರೆ ಅತ್ಯಾಚಾರಕ್ಕೊಳಗಾದ ಇಬ್ಬರು ಬಾಲಕಿಯರಲ್ಲಿ ಓರ್ವ ಬಾಲಕಿ ತೀವ್ರ ನೋವು ಹಾಗೂ ನಿಶಕ್ತಿಯಿಂದ ಬಳಲುತ್ತಿದ್ದು, ಕೂಡಲೇ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

    ಆಸ್ಪತ್ರೆಯಲ್ಲಿ ವೈದ್ಯರಿಗೆ ಬಾಲಕಿ ಅಘಾತಕ್ಕೊಳಗಾಗಿರುವುದು ತಿಳಿದು ಬಂದಿದೆ. ನಂತರ ಅವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಬಾಲಕಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಈ ವೇಳೆ ಕುಟುಂಬಸ್ಥರು ತಮ್ಮ ಮಗಳೊಂದಿಗೆ ನೆರೆ ಮನೆಯ ಬಾಲಕಿ ಕೂಡ ಹೋಗಿದ್ದಳು ಎಂದು ಹೇಳಿದ್ದಾರೆ. ಪೊಲೀಸರು ಆ ಬಾಲಕಿಯನ್ನು ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

    ಸಂತ್ರಸ್ತೆಯ ಆರೋಗ್ಯ ಸ್ಥಿತಿ ಗಂಭೀರವಾದ ಬಳಿಕ ಆಕೆಯನ್ನು ಪುಣೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಬಾಲಕಿ ಕೋಮ ಸ್ಥಿತಿಗೆ ತಲುಪಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರು ಬಾಲಕಿಯ ಹೇಳಿಕೆಯ ಮೇರೆಗೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರ ಪೈಕಿ ಓಬ್ಬ ಅಪ್ರಾಪ್ತನಾಗಿದ್ದು, ಮತ್ತೊಬ್ಬನನ್ನು ಗಣೇಶ್ ನಿಕಾಮ್ (22) ಎಂದು ಗುರುತಿಸಲಾಗಿದೆ.

    ಸದ್ಯಕ್ಕೆ ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಈಗಾಗಲೇ ನಾವು ಆರೋಪಿ ಗಣೇಶ್ ನಿಕಮ್ ನನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. ಮತ್ತೊಬ್ಬ ಆರೋಪಿ ಅಪ್ರಾಪ್ತನಾಗಿರುವ ಕಾರಣ ಆತನನ್ನು ರಿಮ್ಯಾಂಡ್ ಹೋಮ್ ಗೆ ಕಳುಹಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 363 (ಅಪಹರಣ) ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಳ್ಳತನ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ- ಅರೆಸ್ಟ್ ಬಳಿಕ ಪತ್ತೆಯಾಯ್ತು 27 ಪ್ರಕರಣ!

    ಕಳ್ಳತನ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ- ಅರೆಸ್ಟ್ ಬಳಿಕ ಪತ್ತೆಯಾಯ್ತು 27 ಪ್ರಕರಣ!

    ಬೆಂಗಳೂರು: ಬಸ್ ಮತ್ತು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಗ್ಯಾಂಗನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧನದ ನಂತರ ಆರೋಪಿಗಳ ಮೇಲೆ ಇದ್ದ 27 ಪ್ರಕರಣಗಳು ಬೆಳಕಿಗೆ ಬಂದಿವೆ.

    ಇಬ್ಬರು ಕಳ್ಳಿಯರು ಸೇರಿ ಆರು ಮಂದಿ ಆರೋಪಿಗಳನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ್, ವರಲಕ್ಷ್ಮಿ ಅಲಿಯಾಸ್ ಲಕ್ಷ್ಮಿ, ಮನುಕುಮಾರ್, ಭಾಗ್ಯ ಅಲಿಯಾಸ್ ಸುನಾಮಿ, ಮಂಜ ಅಲಿಯಾಸ್ ಪಾನಿಪುರಿ ಮಂಜ ಮತ್ತು ಅಮ್ಜದ್ ಬಂಧಿತ ಆರೋಪಿಗಳು.

    ಬಂಧಿತ ಆರೋಪಿಗಳು ಮೂಲತ: ಆಂಧ್ರ ಪ್ರದೇಶದವರಾಗಿದ್ದು, ಬೆಂಗಳೂರಿನಲ್ಲಿ ಅಲೆಮಾರಿ ಜೀವನ ನಡೆಸುತ್ತಿದ್ದರು. ಆರೋಪಿಗಳ ಬಂಧನದಿಂದ ಬರೋಬ್ಬರಿ 27 ಪ್ರಕರಣಗಳು ಪತ್ತೆಯಾಗಿದ್ದು, ಉಪ್ಪಾರಪೇಟೆ, ಕಲಾಸಿಪಾಳ್ಯ, ಕಾಟನ್ ಪೇಟೆ, ಸಿಟಿ ಮಾರ್ಕೆಟ್ ಸೇರಿದಂತೆ 11 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ.

    ವೆಂಕಟೇಶ್ ಹಾಗೂ ವರಲಕ್ಷ್ಮಿ ದಂಪತಿಯೇ ಈ ಖತರ್ನಾಕ್ ಗ್ಯಾಂಗಿನ ಮಾಸ್ಟರ್ ಮೈಂಡ್ ಆಗಿದ್ದು, ಒಂದೇ ಕುಟುಂಬದ ಐವರ ಖತರ್ನಾಕ್ ಗ್ಯಾಂಗ್ ಈ ಕೃತ್ಯವನ್ನು ಮಾಡುತ್ತಿದ್ದರು. ಇವರು ಬಸ್ಸುಗಳನ್ನು ಹತ್ತಿ ಅಮಾಯಕರಂತೆ ವರ್ತಿಸಿ ಕ್ಷಣಾರ್ಧದಲ್ಲಿ ಬ್ಯಾಗ್ ಗಳನ್ನು ಎಗರಿಸುತ್ತಿದ್ದರು. ಈಗ ಉಪ್ಪಾರಪೇಟೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತ ಆರೋಪಿಗಳಿಂದ ಸುಮಾರು 37 ಲಕ್ಷ ರೂ ಹಣಕ್ಕಿಂತ ಹೆಚ್ಚು ಬೆಲೆ ಬಾಳುವ ಚಿನ್ನಾಭರಣ ವಶವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪ್ರಾಪ್ತ ಮಗಳ ಮೇಲೆ ತಂದೆಯಿಂದ ನಾಲ್ಕು ವರ್ಷ ನಿರಂತರ ಅತ್ಯಾಚಾರ

    ಅಪ್ರಾಪ್ತ ಮಗಳ ಮೇಲೆ ತಂದೆಯಿಂದ ನಾಲ್ಕು ವರ್ಷ ನಿರಂತರ ಅತ್ಯಾಚಾರ

    ಮುಂಬೈ: 14 ವರ್ಷದ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ನಾಲ್ಕು ವರ್ಷಗಳಿಂದ ಅತ್ಯಾಚಾರ ಎಸಗುತ್ತಿದ್ದ ಕಾಮುಕ ತಂದೆಯನ್ನು ಮಹಾರಾಷ್ಟ್ರ ಪೊಲೀಸರು ಗುರುವಾರ ಬಂಧಿಸಿದ್ದಾರೆ.

    ಕಳೆದ ಏಳು ವರ್ಷಗಳಿಂದ ಸಂತ್ರಸ್ತ ಬಾಲಕಿಯ ತಾಯಿ ಪತಿಯಿಂದ ದೂರವಾಗಿದ್ದಳು. ಹೀಗಾಗಿ ಬಾಲಕಿಯು ತಂದೆಯ ಜೊತೆಗೆ ಕಸರ್ವಾದವಲಿ ನಗರದಲ್ಲಿ ವಾಸವಾಗಿದ್ದಾಳೆ. ಆದರೆ ವಿಕೃತ ಮನಸ್ಸಿನ ತಂದೆ ಮಗಳ ಮೇಲೆ ಕಳೆದ ನಾಲ್ಕು ವರ್ಷಗಳಿಂದ ಅತ್ಯಾಚಾರ ಮಾಡುತ್ತಿದ್ದ ಎಂದು ವರದಿಯಾಗಿದೆ.

    ತಂದೆ ನಿತ್ಯವೂ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಬಾಲಕಿ, ನೆರೆ ಮನೆಯವರಿಗೆ ಮಾಹಿತಿ ನೀಡಿದ್ದಾಳೆ. ಜೊತೆಗೆ ಇದನ್ನು ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿಕೊಂಡಿದ್ದಾಳೆ. ಬಾಲಕಿಯ ಮನವಿಯಂತೆ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈ ಕುರಿತು ಬುಧವಾರ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಗುರುವಾರ ಆರೋಪಿ ತಂದೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನ ವಿರುದ್ಧ ಐಪಿಸಿ 376 (ಅತ್ಯಾಚಾರ) ಹಾಗೂ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

    ಇತ್ತ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ‘ನೀರ್ ದೋಸೆ’ ಸಿನಿಮಾ ನಿರ್ಮಾಪಕ ಅರೆಸ್ಟ್

    ‘ನೀರ್ ದೋಸೆ’ ಸಿನಿಮಾ ನಿರ್ಮಾಪಕ ಅರೆಸ್ಟ್

    ಬೆಂಗಳೂರು: ಸ್ಯಾಂಡಲ್ ವುಡ್ ನ ‘ನೀರ್ ದೋಸೆ’ ಸಿನಿಮಾ ನಿರ್ಮಾಪಕ ಆರ್. ಪ್ರಸನ್ನರನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ.

    ಬ್ಯಾಂಕಿಗೆ ಕಲರ್ ಜೆರಾಕ್ಸ್ ದಾಖಲಾತಿಗಳನ್ನು ಕೊಟ್ಟು ವಂಚನೆ ಮಾಡಿದ್ದ ಆರೋಪದ ಮೇರೆಗೆ ನಿರ್ಮಾಪಕರನ್ನು ಬಂಧಿಸಲಾಗಿದೆ. ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ದಾಶಿಕಾ ರಮೇಶ್ ದೂರು ನೀಡಿದ್ದರು. ಬ್ಯಾಂಕ್ ಮ್ಯಾನೇಜರ್ ದೂರು ನೀಡಿದ ಹಿನ್ನೆಲೆಯಲ್ಲಿ ಈಗ ನಿರ್ಮಾಪಕರನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಪ್ರಸನ್ನ 2015 ರಲ್ಲಿ ಶೇಷಾದ್ರಿಪುರಂನ ಸಿಂಡಿಕೇಟ್ ಬ್ಯಾಂಕಿನಲ್ಲಿ ಮನೆ ಅಡಮಾನವಿಟ್ಟು ಸಾಲ ಪಡೆದಿಕೊಂಡಿದ್ದರು. ಹೊರಕೆರೆಹಳ್ಳಿ ಮನೆಯ ಭೂ ದಾಖಲೆಯನ್ನು ಕಲರ್ ಜೆರಾಕ್ಸ್ ಮಾಡಿಸಿ ಮೂರು ಕಡೆ ಸಾಲ ಪಡೆದಿದ್ದರು. ಶೇಷಾದ್ರಿಪುರಂನ ಸಿಂಡಿಕೇಟ್ ಬ್ಯಾಂಕ್, ಕಿಲಾರಿ ರಸ್ತೆಯ ದೈವಜ್ಞ ಕೊ ಆಪರೇಟಿವ್ ಸೊಸೈಟಿ ಹಾಗು ಮಾರ್ಗದರ್ಶಿ ಚಿಟ್ಸ್ ನಲ್ಲಿ ಸಾಲ ಪಡೆದುಕೊಂಡಿದ್ದರು.

    ಪ್ರಸನ್ನ ಎಲ್ಲ ಬ್ಯಾಂಕ್ ಗಳಿಗೂ ಒಂದೇ ಆಸ್ತಿ ಪತ್ರ ನೀಡಿ ಒಂದೇ ವಾರದಲ್ಲಿ ಒಂದು ಕೋಟಿ ಸಾಲ ಪಡೆದಿದ್ದರು. ಬ್ಯಾಂಕಿನವರು ಆಸ್ತಿ ಪತ್ರ ಪರಿಶೀಲನೆ ನಡೆಸಿದಾಗ ಕಲರ್ ಜೆರಾಕ್ಸ್ ಕೊಟ್ಟಿರುವುದು ಬೆಳಕಿಗೆ ಬಂದಿದೆ. ನಂತರ ಈ ಬಗ್ಗೆ ಪೊಲೀಸರಿಗೆ ದೂರು ಕೊಡುತ್ತೀವಿ ಎಂದಾಗ ಎರಡು ಕಂತುಗಳಲ್ಲಿ 17 ಲಕ್ಷ ರೂ. ಹಣ ವಾಪಸ್ ಮಾಡಿದ್ದರು. ಉಳಿದ 17 ಲಕ್ಷ ರೂ. ಚೆಕ್ ನೀಡಿದ್ದರು. ಆದರೆ ಪ್ರಸನ್ನ ನೀಡಿದ್ದ  ಚೆಕ್ ಬೌನ್ಸ್ ಆಗಿತ್ತು. ಹೀಗಾಗಿ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ದಾಶಿಕಾ ರಮೇಶ್ ದೂರು ನೀಡಿದ್ದರು. ಸದ್ಯಕ್ಕೆ ಶೇಷಾದ್ರಿಪುರಂ ಪೊಲೀಸರು ನಿರ್ಮಾಪಕ ಪ್ರಸನ್ನರನ್ನು ಬಂಧಿಸಿದ್ದಾರೆ.

    ನಿರ್ಮಾಪಕ ಪ್ರಸನ್ನ ‘ನೀರ್ ದೋಸೆ’, ‘ಬ್ಯೂಟಿಫುಲ್ ಮನಸುಗಳು’ ಸಿನಿಮಾ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಕ್ಷತ್ರ ಆಮೆ ಸಾಗಾಟ ಮಾಡ್ತಿದ್ದ ಇಬ್ಬರ ಬಂಧನ- 3 ಆಮೆ, ಕಾರ್ ವಶ

    ನಕ್ಷತ್ರ ಆಮೆ ಸಾಗಾಟ ಮಾಡ್ತಿದ್ದ ಇಬ್ಬರ ಬಂಧನ- 3 ಆಮೆ, ಕಾರ್ ವಶ

    ಮೈಸೂರು: ನಕ್ಷತ್ರ ಆಮೆಗಳನ್ನು ಕಳ್ಳಸಾಗಾಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಖಚಿತ ಮಾಹಿತಿ ಆಧರಿಸಿ ಹುಣಸೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ನಾಸೀರ್ (40) ಹಾಗೂ ರಿಯಾಜ್ (42) ಬಂಧಿತ ಆರೋಪಿಗಳಾಗಿದ್ದಾರೆ. ಇವರು ಮೂಲತಃ ಕೇರಳ ರಾಜ್ಯದವರಾಗಿದ್ದಾರೆ. ಅಕ್ರಮವಾಗಿ ನಕ್ಷತ್ರ ಆಮೆಗಳನ್ನು ಕಾರಿನಲ್ಲಿ ತಂದು ಹುಣಸೂರು ವ್ಯಾಪ್ತಿಯಲ್ಲಿ ಮಾರಾಟಕ್ಕೆ ಮುಂದಾಗಿದ್ದರು. ಇದರ ಖಚಿತ ಮಾಹಿತಿ ಪಡೆದ ಹುಣಸೂರು ಇನ್ಸ್ ಪೆಕ್ಟರ್ ಪೂವಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತರಿಂದ ಮೂರು ನಕ್ಷತ್ರ ಆಮೆಗಳು ಹಾಗೂ ಒಂದು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಇವರು ಇಂತಹ ಅನೇಕ ಕೃತ್ಯಗಳಲ್ಲಿ ಪಾಲ್ಗೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

    ಘಟನೆ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 7ರ ಬಾಲಕಿಯ ಮೇಲೆ ಅತ್ಯಾಚಾರ – ಗುಪ್ತಾಂಗಕ್ಕೆ ವಾಟರ್ ಪೈಪ್ ಹಾಕಿ ಕಾಮುಕನಿಂದ ಹೀನ ಕೃತ್ಯ

    7ರ ಬಾಲಕಿಯ ಮೇಲೆ ಅತ್ಯಾಚಾರ – ಗುಪ್ತಾಂಗಕ್ಕೆ ವಾಟರ್ ಪೈಪ್ ಹಾಕಿ ಕಾಮುಕನಿಂದ ಹೀನ ಕೃತ್ಯ

    ನವದೆಹಲಿ: 7 ವರ್ಷದ ಬಾಲಕಿಯ ಮೇಲೆ 21 ವರ್ಷದ ಯುವಕನೊಬ್ಬ ಅತ್ಯಾಚಾರ ಎಸಗಿದ್ದು, ಬಳಿಕ ಸಂತ್ರಸ್ತೆಯ ಗುಪ್ತಾಂಗಕ್ಕೆ ವಾಟರ್ ಪೈಪ್ ಹಾಕಿ ಕಿರುಕುಳ ನೀಡಿರುವ ಮಾನವೀಯ ಘಟನೆ ಶಹದಾರಾದ ಸೀಮಾಪುರಿ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಸೋಮವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈಗ ಆರೋಪಿ ಕಾಮುಕನನ್ನು ರಾಗ್ಪಿಕ್ಕರ್ ಎಂದು ಗುರುತಿಸಲಾಗಿದ್ದು, ಮಂಗಳವಾರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನನ್ನ ಮಗಳು ಸೋಮವಾರ ರಾತ್ರಿ ಸುಮಾರು 10.30ಕ್ಕೆ ಮನೆಯ ಮುಂದೆ ಆಟವಾಡುತ್ತಿದ್ದಳು. ಆಗ ಪಕ್ಕದ ಮನೆಯ ಹುಡುಗ ಆಕೆಯನ್ನು ಎಳೆದುಕೊಂಡು ಪೊದೆಯ ಬಳಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಅಂತ ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ.

    ಸಂತ್ರಸ್ತೆ ಮನೆಗೆ ಹಿಂದಿರುಗಿದಾಗ ರಕ್ತಸ್ರಾವವಾಗಿದ್ದು, ಈ ಬಗ್ಗೆ ತಾಯಿ ಹೇಳಿದಾಗ ನಡೆದ ಘಟನೆಯನ್ನು ವಿವರಿಸಿದ್ದಾಳೆ. ನಂತರ ತಾಯಿ ಸೀಮಾಪುರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‍ಐಆರ್ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಈ ಬಗ್ಗೆ ದೆಹಲಿಯ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿಮಾಲ್ ಟ್ವೀಟ್ ಮಾಡಿದ್ದಾರೆ. ಆರೋಪಿ ಹುಡುಗಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ಆಕೆಯ ಖಾಸಗಿ ಅಂಗಕ್ಕೆ ನೀರಿನ ಪೈಪ್ ಹಾಕಿ ಕಿರುಕುಳ ನೀಡಿದ್ದಾನೆ ಎಂದು ಹೇಳಿದ್ದಾರೆ.

    ಸಂತ್ರಸ್ತೆಯನ್ನು ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಂತ್ರಸ್ತೆಗೆ ಅತಿಯಾದ ರಕ್ತಸ್ರಾವವಾಗಿದ್ದು, ಖಾಸಗಿ ಭಾಗಗಳಲ್ಲಿ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಸದ್ಯಕ್ಕೆ ಆರೋಪಿ ರಾಗ್ಪಿಕ್ಕರ್ ನನ್ನು ಬಂಧಸಲಾಗಿದೆ ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸುತ್ತೇವೆ. ಜೊತೆಗೆ ಸಂತ್ರಸ್ತೆ ಕುಟುಂಬದವರಿಗಾಗಿ ಪರಿಹಾರ ಅರ್ಜಿ ಸಲ್ಲಿಸುತ್ತೇವೆ ಎಂದು ಸ್ವಾತಿ ಮಾಲಿಮಾಲ್ ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಗ ಮಾಡಿದ ನೀಚ ಕೃತ್ಯದಿಂದ ಅಪ್ಪನ ಕೆಲಸವೇ ಹೋಯ್ತು!

    ಮಗ ಮಾಡಿದ ನೀಚ ಕೃತ್ಯದಿಂದ ಅಪ್ಪನ ಕೆಲಸವೇ ಹೋಯ್ತು!

    ನವದೆಹಲಿ: ಮಗ ಮಾಡಿದ ನೀಚ ಕೃತ್ಯದಿಂದ ಎಎಸ್‍ಐ ಕೆಲಸದಿಂದ ತಂದೆಯನ್ನು ದೆಹಲಿ ಪೊಲಿಸರು ವಜಾ ಮಾಡಿದ್ದಾರೆ. ಅಶೋಕ್ ಕುಮಾರ್ ಅಮಾನತ್ತಾದ ಎಎಸ್‍ಐ ಆಗಿದ್ದು, ಇವರು ಜಿಲ್ಲೆಯಲ್ಲಿ ಎಎಸ್‍ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು.

    ಅಮಾನತು ಮಾಡಿದ್ದು ಯಾಕೆ?:
    ಅಶೋಕ್ ಮಗ ತೋಮರ್ ಯುವತಿಯೊಬ್ಬಳಿಗೆ ಹಿಗ್ಗಾಮುಗ್ಗಾ ಥಳಿಸಿ, ಮೊಣ ಕೈ ಹಾಗೂ ಮೊಣಕಾಲಿನಿಂದ ಬೆನ್ನು ಮತ್ತು ಮುಖಕ್ಕೆ ಪಂಚ್ ಕೊಟ್ಟಿದ್ದನು. ಅಲ್ಲದೇ ಮಗನ ಜೊತೆ ಸೇರಿ ತಂದೆ ಅಶೋಕ್ ಕೂಡ ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದರು. ಈ ಕಾರಣಕ್ಕೆ ಅಶೋಕ್ ಅವರನ್ನು ಎಎಸ್‍ಪಿ ಉದ್ದೆಯಿಂದ ದೆಹಲಿ ಪೊಲೀಸರು ವಜಾ ಮಾಡಿದ್ದಾರೆ.

    ಘಟನೆ ವಿವರ:
    ಸೆಪ್ಟೆಂಬರ್ 2ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ದೆಹಲಿಯ ಉತ್ತಮ್ ನಗರ ಪ್ರದೇಶದಲ್ಲಿರುವ ಬಿಪಿಓ ಕಚೇರಿಯಲ್ಲಿ ಆರೋಪಿ ರೋಹಿತ್ ತೋಮರ್ ಯುವತಿಯೊಬ್ಬಳಿಗೆ ಥಳಿಸಿದ್ದಾನೆ. ತನ್ನನ್ನು ಮದುವೆಯಾಗಲು ಒಪ್ಪುತ್ತಿಲ್ಲವೆಂದು ಯುವತಿಗೆ ಚೆನ್ನಾಗಿ ಥಳಿಸಿ, ಮೊಣಕೈ ಹಾಗೂ ಮೊಣಕಾಲಿನಿಂದ ಬೆನ್ನು ಮತ್ತು ಮುಖಕ್ಕೆ ಪಂಚ್ ಕೊಟ್ಟಿದ್ದನು. ಈ ಎಲ್ಲಾ ಘಟನೆಯನ್ನು ಗೆಳೆಯ ಕಚೇರಿ ಮಾಲೀಕ ರೋಹಿತ್ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದನು. ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಈ ವಿಡಿಯೋವನ್ನು ಗಮನಿಸಿದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ದೆಹಲಿ ಪೊಲೀಸ್ ಕಮಿಷನರ್ ಅಮೂಲ್ಯ ಪಾಟ್ನಾಯಕ್ ಅವರಿಕೆ ಕರೆ ಮಾಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಇದನ್ನೂ ಓದಿ: ಪೊಲೀಸ್ ಅಧಿಕಾರಿ ಮಗನಿಂದ ಹುಡ್ಗಿಗೆ ಹಿಗ್ಗಾಮುಗ್ಗಾ ಥಳಿತ, ಮೊಣಕಾಲಿನಿಂದ ಮುಖಕ್ಕೆ ಪಂಚ್!

    ಈ ಹಿನ್ನೆಲೆಯಲ್ಲಿ ಯುವತಿಯ ದೂರನ್ನು ಸ್ವೀಕರಿಸಿದ ಪೊಲೀಸರು, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಬಲೆ ಬೀಸಿ, ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿದಾಗ ಆಕೆ ತನ್ನನ್ನು ಮದುವೆಯಾಗುತ್ತಿಲ್ಲವೆಂದು ಸಿಟ್ಟಿನಿಂದ ಈ ರೀತಿ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದನು.

    ಯುವತಿ ನೀಡಿದ್ದ ದೂರುನಲ್ಲೇನಿತ್ತು?:
    ತೋಮರ್ ಹಾಗೂ ನಾನು ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ಆದ್ರೆ ಕಳೆದ ತಿಂಗಳು ನಮ್ಮಿಬ್ಬರ ಮಧ್ಯೆ ಬ್ರೇಕಪ್ ಆಗಿದೆ. ಯಾಕಂದ್ರೆ ನನ್ನ ಮನೆಯವರು ನಮ್ಮಿಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆ ಬಳಿಕದಿಂದ ತೋಮರ್ ನನಗೆ ಬೆದರಿಕೆ ಹಾಕುತ್ತಿದ್ದಾನೆ ಅಂತ ದೂರಿನಲ್ಲಿ ಯುವತಿ ತಿಳಿಸಿದ್ದಾಳೆ. ಇದನ್ನೂ ಓದಿ: ಮದ್ವೆಯಾಗಲು ಒಪ್ಪದಿದ್ದಕ್ಕೆ ಪ್ರಿಯತಮೆಗೆ ಥಳಿಸಿ, ಮೊಣಕಾಲಿಂದ ಪಂಚ್ ಕೊಟ್ಟ!

    ಇಷ್ಟು ಮಾತ್ರವಲ್ಲದೇ ನಾನು ನೆಲೆಸಿದ್ದ ಕಾಲೋನಿಗೆ ಆಗಾಗ ಬಂದು ನಮ್ಮ ಮನೆಗೆ ಕಲ್ಲು ತೂರಾಟ ಮಾಡುತ್ತಾನೆ. ನನ್ನ ತಾಯಿ ಮೇಲೆಯೂ ಹಲ್ಲೆ ಮಾಡಿದ್ದಾನೆ. 4 ದಿನದ ಹಿಂದೆ ಆತ ವಾಟ್ಸಪ್ ಗೆ ಒಂದು ವಿಡಿಯೋ ಕಳುಹಿಸಿದ್ದಾನೆ. ಅದರಲ್ಲಿ, ಒಂದು ವೇಳೆ ನಾನು ಆತನನ್ನು ಮದುವೆಯಾಗದಿದ್ದರೆ ನನಗೆ ಚೆನ್ನಾಗಿ ಥಳಿಸಿ, ಅದನ್ನು ವಿಡಿಯೋ ಮಾಡಿ ಬಳಿಕ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವ ಮೂಲಕ ನನ್ನ ಹೆಸರಿಗೆ ಧಕ್ಕೆ ತರುವುದಾಗಿ ಬೆದರಿಕೆ ಹಾಕಿದ್ದಾನೆ ಅಂತ ಯುವತಿ ಪೊಲೀಸರಲ್ಲಿ ದುಃಖ ತೋಡಿಕೊಂಡಿದ್ದಾಳೆ.

    ಯುವತಿಯ ದೂರಿನಂತೆ ಪೊಲೀಸರು ತೋಮರ್ ನನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದಾರೆ. ಕೆಲ ಗಂಟೆಗಳ ಬಳಿಕ ಯುವತಿ, ಆರೋಪಿ ತೋಮರ್ ತಂದೆ ಸಹಾಯಕ ಸಬ್ ಇನ್ಸ್ ಪೆಕ್ಟರ್ ವಿರುದ್ಧವೂ ದೂರು ದಾಖಲಿಸಿದ್ದಾಳೆ. ಅದರಲ್ಲಿ ಆರೋಪಿ ತಂದೆಯೂ ಬೆದರಿಕೆ ಹಾಕಿರುವುದಾಗಿ ದೂರಿದ್ದಾಳೆ. ಬಳಿಕ ಶುಕ್ರವಾರ ಉತ್ತಮ್ ನಗರ್ ಪೊಲೀಸ್ ಠಾಣೆಗೆ ತೆರಳಿ ಆರೋಪಿ ತೋಮರ್ ವಿರುದ್ಧ ಅತ್ಯಾಚಾರ ದೂರು ದಾಖಲಿಸಿಕೊಳ್ಳುವಂತೆ ಕೇಳಿಕೊಂಡಿದ್ದಾಳೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಐಷಾರಾಮಿ ಜೀವನಕ್ಕೆ ಪತಿ ಕೈಯಲ್ಲಿ ಸರಗಳ್ಳತನ ಮಾಡಿಸ್ತಿದ್ದ ಪತ್ನಿ ಬಂಧನ!

    ಐಷಾರಾಮಿ ಜೀವನಕ್ಕೆ ಪತಿ ಕೈಯಲ್ಲಿ ಸರಗಳ್ಳತನ ಮಾಡಿಸ್ತಿದ್ದ ಪತ್ನಿ ಬಂಧನ!

    ಬೆಂಗಳೂರು: ಕಳ್ಳತನ ಮಾಡಲು ಗಂಡನಿಗೆ ಪ್ರೇರೇಪಣೆಕೊಟ್ಟು ಬಳಿಕ ತಲೆಮರೆಸಿಕೊಂಡಿದ್ದ ಹೆಂಡತಿಯನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿ ಮಹಾದೇವಿ ಕುಖ್ಯಾತ ಸರಗಳ್ಳ ಅಚ್ಯುತ್ ಕುಮಾರ್‍ನ ಎರಡನೇ ಹೆಂಡತಿಯಾಗಿದ್ದಾಳೆ. ಒಂದು ತಿಂಗಳ ಹಿಂದೆಯಷ್ಟೇ ಆರೋಪಿ ಅಚ್ಯುತ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದರು. ಪತಿಯ ಬಂಧನದ ಬಳಿಕ ಪತ್ನಿ ಮಹಾದೇವಿ ಪರಾರಿಯಾಗಿ ಅನಾಥಾಶ್ರಮ ಸೇರಿದ್ದಳು. ಇದೀಗ ಖಚಿತ ಮಾಹಿತಿ ಪಡೆದ ಕೆಂಗೇರಿ ಪೊಲೀಸರು ಮಹಾದೇವಿಯನ್ನು ಬಂಧಿಸಿದ್ದಾರೆ.

    ಆರೋಪಿ ಮಹಾದೇವಿ ಐಷಾರಾಮಿ ಜೀವನಕ್ಕಾಗಿ ತನ್ನ ಮೊದಲ ಪತಿಗೆ ಕೈಕೊಟ್ಟು ನಂತರ ಅಚ್ಯುತ್ ಕುಮಾರ್ ನನ್ನು ಮದುವೆಯಾಗಿದ್ದಳು. ಅಲ್ಲದೇ ದಿನಕ್ಕೆ ಕನಿಷ್ಟ 3-4 ಸರಗಳ್ಳತನ ಮಾಡುವಂತೆ ಪತಿ ಅಚ್ಯುತ್ ಕುಮಾರ್ ನನ್ನು ಒತ್ತಾಯಿಸಿದ್ದಳು. ಪತ್ನಿಯ ಮಾತಿನಂತೆ ಅಚ್ಯುತ್ ಕಳ್ಳತನ ಮಾಡುತ್ತಿದ್ದನು. ಒಂದೇ ವರ್ಷದಲ್ಲಿ ಅಚ್ಯುತ್ ಕುಮಾರ್ ಸುಮಾರು ಒಂದೂವರೆ ಕೋಟಿ ರೂ. ಬೆಲೆ ಬಾಳುವಷ್ಟು ಸರಗಳ್ಳತನ ಮಾಡಿದ್ದನು. ಆದರೆ ಮೂರು ತಿಂಗಳ ಹಿಂದೆ ನೈಸ್ ರೋಡ್ ಬಳಿ ಆರೋಪಿ ಅಚ್ಯುತ್ ಕಾಲಿಗೆ ಗುಂಡು ಹಾರಿಸಿ ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಅಂದಿನಿಂದಲೂ ಪತ್ನಿ ಮಹಾದೇವಿಗಾಗಿ ಹುಡುಕಾಟ ನಡೆಸುತ್ತಿದ್ದರು. ಇದನ್ನೂ ಓದಿ: 150 ಕೇಸ್ ನಲ್ಲಿ ಬೇಕಾಗಿದ್ದ ಆರೋಪಿಗೆ ಶೂಟ್, ಅರೆಸ್ಟ್ – ಡಿಸಿಪಿ ರವಿ ಡಿ.ಚನ್ನಣ್ಣನವರಿಂದ ತಂಡಕ್ಕೆ ಬಹುಮಾನ ಘೋಷಣೆ

    ಅಚ್ಯುತ್ ಕುಮಾರ್ ವಿರುದ್ಧ ಸುಮಾರು ಬೆಂಗಳೂರಿನಲ್ಲಿ 70 ಸರಗಳ್ಳತನ ಕೇಸ್ ಗಳು ದಾಖಲಾಗಿದೆ. ಆದರೆ ರಾಜ್ಯದ ಇತರ ಜಿಲ್ಲೆಗಳೂ ಸೇರಿ ಒಟ್ಟು 150 ಕ್ಕೂ ಹೆಚ್ಚು ಕೇಸ್ ಆರೋಪಿ ಅಚ್ಯುತ್ ಮೇಲೆ ದಾಖಲಾಗಿದೆ. ಅಷ್ಟೇ ಅಲ್ಲದೇ ಬಂಧನಕ್ಕೂ ಮುನ್ನ ತುಮಕೂರಿನಲ್ಲಿ ಮೂರು ಕಡೆ ಸರಗಳ್ಳತನ ಮಾಡಿದ್ದನು. ಜೂನ್ 17 ರಂದು ಸರಗಳ್ಳ ಅಚ್ಯುತ್ ಕುಮಾರ್ ನನ್ನ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಸರಗಳ್ಳನ ಮೇಲೆ ಶೂಟೌಟ್- ಚಿನ್ನದ ಸರದ ಗಣಿಯೇ ಪತ್ತೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರೇಯಸಿಯ ಮುಂದೆಯೇ ಪ್ರಿಯಕರನ ಕೈ ಕಟ್ ಪ್ರಕರಣಕ್ಕೆ ಟ್ವಿಸ್ಟ್

    ಪ್ರೇಯಸಿಯ ಮುಂದೆಯೇ ಪ್ರಿಯಕರನ ಕೈ ಕಟ್ ಪ್ರಕರಣಕ್ಕೆ ಟ್ವಿಸ್ಟ್

    – ಪ್ರಿಯತಮೆಯಿಂದಲೇ ಸುಫಾರಿ

    ಬೆಂಗಳೂರು: ಬನ್ನೇರುಘಟಕ್ಕೆ ಬಂದಿದ್ದ ಪ್ರೇಮಿಗಳ ಮೇಲೆ ದಾಳಿ ಮಾಡಿ ಪ್ರಿಯಕರನ ಕೈ ಕಟ್ ಮಾಡಿಕೊಂಡು ಹೋಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆತನ ಜೊತೆಗೆ ಬಂದಿದ್ದ ಪ್ರೇಯಸಿಯೇ ಸುಫಾರಿ ಕೊಟ್ಟಿದ್ದಾಳೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಈಗ ಕೈ ಕಟ್ ಮಾಡಿದ್ದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.

    ಶರವಣ ಕುಮಾರ್  ಅಲಿಯಾಸ್ @ಮೆಂಟಲ್ ವಿಜಿ ಗುಂಟೇಟು ತಿಂದ ಆರೋಪಿ. ಚಿತ್ರದುರ್ಗ ಮೂಲದ ರವೀಶ್ (23) ಕೈ ಕಳೆದುಕೊಂಡಿದ್ದ ಪ್ರೇಮಿ. ಶರವಣ ಗುರುವಾರ ಬನ್ನೇರುಘಟ್ಟದಲ್ಲಿ ನಡೆದಿದ್ದ ಕೈ ಕಟ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈತ ಬನ್ನೇರುಘಟ್ಟ ಅಭಯಾರಣ್ಯದ ಕಗ್ಗಲಿಪುರ ವಲಯದಲ್ಲಿ ಅಡಗಿದ್ದನು. ಆರೋಪಿಯನ್ನು ಶನಿವಾರ ಸಂಜೆ ಬಂಧಿಸಲಾಗಿತ್ತು. ಆದರೆ ಪೊಲೀಸರು ಸ್ಥಳ ಮಹಜರ್ ಗೆಂದು ಕರೆದುಕೊಂಡು ಹೋಗುವಾಗ ತಪ್ಪಿಸಿಕೊಳ್ಳಲು ಪೇದೆ ಸಿದ್ದಲಿಂಗಯ್ಯ ಮೇಲೆ ಹಲ್ಲೆ ನಡೆಸಿ ಕುತ್ತಿಗೆಗೆ ಚೈನಿನಿಂದ ಬಿಗಿದು ಕೊಲೆ ಮಾಡಲು ಯತ್ನಿಸಿದ್ದನು.

    ಈ ಸಮಯದಲ್ಲಿ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿದರೂ ಲೆಕ್ಕಿಸದೇ ಪೇದೆ ಮೇಲೆ ಹಲ್ಲೆ ಮುಂದುವರಿಸಿದ್ದನು. ಬಳಿಕ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದರು. ಆದರು ಭಯ ಬೀಳದ ವಿಜಿ ಮತ್ತಷ್ಟು ಹಲ್ಲೆ ನಡೆಸುತ್ತಿದ್ದನು. ಕೊನೆಗೆ ದಾರಿ ಕಾಣದೆ ಡಿವೈಎಸ್‍ಪಿ ಮತ್ತು ಎಸ್.ಕೆ.ಉಮೇಶ್ ಪೊಲೀಸರು ವಿಜಿಯ ಎಡಗಾಲಿಗೆ ಗುಂಡು ಹೊಡೆದು ಪೇದೆಯನ್ನು ರಕ್ಷಿಸಿದ್ದಾರೆ.

    ವಿ.ವಿ.ಪುರಂ ಠಾಣೆಯ ಪೇದೆ ಜಯಲಕ್ಷ್ಮಿಯೇ ಒಂದು ಲಕ್ಷ ರೂಪಾಯಿಗೆ ಸುಪಾರಿ ನೀಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೇದೆ ಜಯಲಕ್ಷ್ಮಿ ಮದುವೆಯಾಗಿದ್ದು, ರವೀಶ್ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಳು. ಆದರೆ ರವೀಶ್ ಜಯಲಕ್ಷ್ಮಿಯ ಜೊತೆಗಿನ ಅನೈತಿಕ ಸಂಬಂಧದ ವಿಡಿಯೋಗಳನ್ನು ಇಟ್ಟುಕೊಂಡು ಪತಿ ರಾಘವೇಂದ್ರನಿಗೆ ವಿಚ್ಛೇದನ ನೀಡುವಂತೆ ಒತ್ತಡ ಹಾಕುವ ಮೂಲಕ ಹಿಂಸೆ ನೀಡುತ್ತಿದ್ದನಂತೆ. ಇವನ ವಿಕೃತವನ್ನು ಸಹಿಸದೇ ಕೊನೆಗೆ ಜಯಲಕ್ಷ್ಮಿಯೇ ವಿಜಿಗೆ ಒಂದು ಲಕ್ಷ ರೂ.ಗೆ ಸುಪಾರಿಕೊಟ್ಟು ಕೈ ಕತ್ತರಿಸಲು ತಿಳಿಸಿದ್ದಳು ಎಂದು ತನಿಖೆಯಲ್ಲಿ ಒಪ್ಪಿಕೊಂಡಿದ್ದಾಳೆ.

    ಈ ಕುರಿತು ಬನ್ನೇರುಘಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ತನಿಖೆ ನಡೆಸಿ ಈ ಪ್ರಕರಣವನ್ನು ಬೇಧಿಸಿದ್ದಾರೆ. ಈಗ ಪೇದೆ ಮತ್ತು ಸುಫಾರಿ ಪಡೆದ ವಿಜಿ ಅಲಿಯಾಸ್ ಮೆಂಟಲ್ ಕೂಡ ಜೈಲು ಪಾಲಾಗುತ್ತಿದ್ದಾನೆ.

    ಅಂದು ನಡೆದಿದ್ದೇನು?
    ಸೆಪ್ಟೆಂಬರ್ 11 ಮಂಗಳವಾರ ರವೀಶ್ ಮತ್ತು ಪ್ರೇಯಸಿ ಇಬ್ಬರು ಸೇರಿ ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ದೇವಾಲಯದ ಹಿಂಭಾಗದಿಂದ ಸುವರ್ಣಮುಖಿ ಆಂಜನೇಯ ದೇವಸ್ಥಾನಕ್ಕೆ ಹೋಗುತ್ತಿದ್ದರು. ಅಲ್ಲಿಗೆ ಅರಣ್ಯ ಪ್ರದೇಶದ 3 ಕಿ.ಮೀ. ಕಾಲು ದಾರಿಯ ಮೂಲಕವೇ ಹೋಗಬೇಕು. ಈ ವೇಳೆ ದಾರಿ ಮಧ್ಯದಲ್ಲಿಯೇ ಕೆಲ ದುಷ್ಕರ್ಮಿಗಳು ಲಾಂಗು ಹಾಗೂ ಮಚ್ಚು ಬಳಸಿ, ಯುವಕನ ಬಲಭಾಗದ ಮುಂಗೈ ಕತ್ತರಿಸಿದ್ದಾರೆ. ಇಷ್ಟಕ್ಕೂ ಸುಮ್ಮನಾಗದೇ ವಿಕೃತಿ ಮೆರೆದ ದುಷ್ಕರ್ಮಿಗಳು ಕತ್ತರಿಸಿ ಕೈಯನ್ನು ಕೊಂಡೊಯ್ದಿದ್ದರು.

    ಕೈ ಕಳೆದುಕೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಪ್ರಿಯಕರನನ್ನು ಕಾಪಾಡಿ ಎಂದು ಯುವತಿ ಸ್ಥಳೀಯರಲ್ಲಿ ಕೇಳಿಕೊಂಡಿದ್ದಳು. ಬಳಿಕ ಸ್ಥಳೀಯರ ಸಹಾಯದಿಂದ ರವೀಶ್ ನನ್ನು ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅತಿಯಾದ ರಕ್ತಸ್ರಾವದಿಂದ ಬಳಲುತ್ತಿದ್ದ ರವೀಶ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಸದ್ಯ ರವೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೈಕ್‍ನಲ್ಲಿ ಗಾಂಜಾ ಸಾಗಾಣೆ ಮಾಡ್ತಿದ್ದ ಇಬ್ಬರ ಬಂಧನ

    ಬೈಕ್‍ನಲ್ಲಿ ಗಾಂಜಾ ಸಾಗಾಣೆ ಮಾಡ್ತಿದ್ದ ಇಬ್ಬರ ಬಂಧನ

    ಮೈಸೂರು: ಬೈಕ್‍ನಲ್ಲಿ ಗಾಂಜಾ ಸಾಗಾಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಹುಣಸೂರು ತಾಲೂಕಿನ ಗ್ರಾಮದ ಬಳಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರವೀಣ್ (24) ಮತ್ತು ರವಿ (26) ಬಂಧಿತ ಆರೋಪಿಗಳು. ಪೊಲೀಸರು ಬಂಧಿತರಿಂದ 2 ಕೆಜಿ ಗಾಂಜಾ ವಶ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ಗಾಂಜಾ ಬೆಳೆದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ನಂಜನನಾಯಕನಹಳ್ಳಿ ಗ್ರಾಮದ ರಾಜು ರೆಡ್ಡಿ ಎಂಬವರ ಜಮೀನಿನಲ್ಲಿ ಬೆಳೆಯಲಾಗಿದೆ. ಇವರಿಬ್ಬರಿಗೂ ಗಾಂಜಾ ಸರಬರಾಜು ಮಾಡಿದ್ದ ರಾಜು ರೆಡ್ಡಿಯನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಘಟನೆ ಸಂಬಂಧಪಟ್ಟಂತೆ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv