Tag: arrest

  • ಕೊಪ್ಪಳದಲ್ಲಿ ಕೋಳಿಗಳನ್ನು ಅರೆಸ್ಟ್ ಮಾಡಿದ ಖಾಕಿ

    ಕೊಪ್ಪಳದಲ್ಲಿ ಕೋಳಿಗಳನ್ನು ಅರೆಸ್ಟ್ ಮಾಡಿದ ಖಾಕಿ

    ಕೊಪ್ಪಳ: ಜೂಜಾಟ ಹಾಗೂ ಗ್ಯಾಂಬ್ಲಿಂಗ್ ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡಿ ಅಲ್ಲಿದ್ದ ಕೋಳಿಗಳನ್ನು ಬಂಧಿಸಿದ ವಿಚಿತ್ರ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳದ ಕಾರಟಗಿ ತಾಲೂಕಿನ ಪನ್ನಾಪುರ ಹತ್ತಿರದ ಬಸವಣ್ಣ ಕ್ಯಾಂಪ್‍ನಲ್ಲಿ ಸಂಕ್ರಮಣ ನಿಮಿತ್ತ ಕೋಳಿ ಕಾಳಗ ನಡೆದಿತ್ತು. ಮಂಗಳವಾರ ಸಂಜೆ ಜೂಜು ಅಡ್ಡೆ ಮೇಲೆ ದಾಳಿ ಮಾಡಿರುವ ಪೊಲೀಸರು ಯಾವೊಬ್ಬ ಗ್ಯಾಂಬ್ಲರ್ ಅನ್ನು ಬಂಧಿಸಲ್ಲ. ಬದಲಾಗಿ ಹುಂಜಗಳು (Rooster) ಸಿಕ್ಕಿದ್ದು, ಜೊತೆಗೆ ಬೈಕ್‍ಗಳನ್ನು (Bike) ವಶಕ್ಕೆ ಪಡೆದಿದ್ದಾರೆ.

    ದಾಳಿ ವೇಳೆ ಸಿಕ್ಕಿರುವ ಹುಂಜಗಳನ್ನು ಕರೆತಂದಿರುವ ಪೊಲೀಸರು ಸೆಲ್‌ನಲ್ಲಿ ಇಟ್ಟಿದ್ದಾರೆ. ದಾಳಿ ವೇಳೆ ಜೂಜುಕೋರರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಸಬೂಬು ಹೇಳಿದ್ದಾರೆ. ಪೊಲೀಸರ (Police) ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ವಿದ್ಯಾರ್ಥಿನಿಗೆ ಚಾಕು ಇರಿದು ಕೊಲೆ

    ಸಂಕ್ರಾಂತಿ, ಯುಗಾದಿ, ದೀಪಾವಳಿ ಹಬ್ಬದ ನೆಪದಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ಕಡೆ ನಿಷೇಧಿತ ಕೋಳಿ ಕಾಳಗ ನಡೆಸಲಾಗುತ್ತದೆ. ಕೋಳಿ ಕಾಳಗಕ್ಕೆ ಕೋಟ್ಯಂತರ ರೂಪಾಯಿ ಜೂಜು ವಹಿವಾಟು ನಡೆಯುತ್ತದೆ. ರಾಜಕೀಯ ಮುಖಂಡರೇ ಕೋಳಿ ಕಾಳಗ ಆಯೋಜನೆ ಮಾಡುತ್ತಾರೆ. ಈ ಕಾರಣಕ್ಕೆ ಪೊಲೀಸರು ಅವರನ್ನು ಅಲ್ಲೇ ಬಿಟ್ಟು, ಕೋಳಿ, ಬೈಕ್‍ಗಳನ್ನು ಮಾತ್ರ ಜಪ್ತಿ ಮಾಡಿ ಪ್ರಕರಣ ದಾಖಲಿಸುವ ನಾಟಕ ಆಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಚಲನಚಿತ್ರಗಳ ಬಗ್ಗೆ ಅನಗತ್ಯ ಟೀಕೆ ಮಾಡಬೇಡಿ: ನಾಯಕರಿಗೆ ಮೋದಿ ಸೂಚನೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆ ಆಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ

    ಮುಂಬೈ: ಮದುವೆಯಾಗುವುದಾಗಿ (Marriage) ಹೇಳಿ ವ್ಯಕ್ತಿಯೊಬ್ಬ ಯುವತಿಯನ್ನು ಅತ್ಯಾಚಾರವೆಸಗಿದ (Rape) ಘಟನೆ ಮುಂಬೈನಲ್ಲಿ ನಡೆದಿದೆ.

    ಮಹಾರಾಷ್ಟ್ರದ ಮುಂಬೈನ (Mumbai) ದಿದೋಸಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು (Accused) ಬ್ರಿಜೇಶ್ ಪಾಲ್ (22) ಎಂದು ಗುರುತಿಸಲಾಗಿದೆ.

    ಬ್ರಿಜೇಶ್ ಪಾಲ್ 21 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ಹೇಳಿ ನಂಬಿಸಿದ್ದ. ಅಷ್ಟೇ ಅಲ್ಲದೇ ಆಕೆಯೊಂದಿಗೆ ಒಂದು ವರ್ಷದಿಂದ ದೈಹಿಕ ಸಂಬಂಧವನ್ನು ಹೊಂದಿದ್ದ. ಆದರೆ ನಂತರದ ದಿನಗಳಲ್ಲಿ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಇದನ್ನೂ ಓದಿ: ಭಾರತವನ್ನು ವಿಶ್ವ ನಾಯಕ ಸ್ಥಾನಕ್ಕೆ ಕೊಂಡೊಯ್ಯಲು ಕೈಜೋಡಿಸಿ: ಗೆಹ್ಲೋಟ್‌

    ಈ ಹಿನ್ನೆಲೆಯಲ್ಲಿ ಯುವತಿಯು ಬ್ರಿಜೇಶ್ ಪಾಲ್ ವಿರುದ್ಧ ಮುಂಬೈನ ದಿದೋಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಘಟನೆಗೆ ಸಂಬಂಧಿಸಿ ಅತ್ಯಾಚಾರದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬ್ರಿಜೇಶ್ ಪಾಲ್‍ನನ್ನು ಬಂಧಿಸಿದ್ದಾರೆ. (Arrest) ಇದನ್ನೂ ಓದಿ: ಸ್ಯಾಂಟ್ರೋ ರವಿಗೆ ಜೀವಾವಧಿ ಶಿಕ್ಷೆ ಆಗಬೇಕು: ಪತ್ನಿ ಮನವಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸ್ಯಾಂಟ್ರೋ ರವಿಗೆ ಜೀವಾವಧಿ ಶಿಕ್ಷೆ ಆಗಬೇಕು: ಪತ್ನಿ ಮನವಿ

    ಸ್ಯಾಂಟ್ರೋ ರವಿಗೆ ಜೀವಾವಧಿ ಶಿಕ್ಷೆ ಆಗಬೇಕು: ಪತ್ನಿ ಮನವಿ

    ಮೈಸೂರು: ಜೈಲಿಂದ ಹೊರ ಬಂದ ಬಳಿಕ ಮತ್ತೆ ಸ್ಯಾಂಟ್ರೋ ರವಿ (Santro Ravi) ಇದೇ ಚಾಳಿ ಮುಂದುವರಿಸುತ್ತಾನೆ. ಹೀಗಾಗಿ ಆತನಿಗೆ ಜೀವಾವಧಿ ಶಿಕ್ಷೆ ಆಗಬೇಕು ಎಂದು ಪತ್ನಿ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.

    11 ದಿನಗಳಿಂದ ತಲೆ ಮೆರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನ ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯನ್ನು ಬಂಧಿಸಿದ ರಾಜ್ಯ ಪೊಲೀಸರಿಗೆ ಸ್ಯಾಂಟ್ರೋ ರವಿ 2ನೇ ಪತ್ನಿ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ರವಿ ಅರೆಸ್ಟ್‌ – ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು ಹೀಗೆ..

    ರವಿಯ ಮತ್ತೆ ಹೊರಗೆ ಬಂದು ಅದೇ ಚಾಳಿ ಮುಂದುವರಿಸುತ್ತಾನೆ. ಹೀಗಾಗಿ ಅತನಿಗೆ ಜೀವಾವಧಿ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ. 95 ರಿಂದಲೇ ಸ್ಯಾಂಟ್ರೋ ರವಿ ಕ್ರಿಮಿನಲ್ ಕೇಸ್‍ (Criminal Case) ಗಳಲ್ಲಿ ಭಾಗಿಯಾಗಿದ್ದಾರೆ. ಹೆಣ್ಣು ಮಕ್ಕಳನ್ನ ಬಳಸಿಕೊಂಡು ವೇಶ್ಯಾವಾಟಿಕೆ ಮಾಡುತ್ತಿದ್ದರು. ಈ ಬಗ್ಗೆ ನಾನು ತಿರುಗಿಬಿದ್ದ ಕಾರಣ ನನ್ನ ಮೇಲೆ ಚೆಕ್ ಬೌನ್ಸ್, ದರೋಡೆ ಕೇಸ್‍ಗಳಲ್ಲಿ ನನ್ನು ಸಿಲುಕಿಸಿ ಜೈಲು ಪಾಲು ಮಾಡಿದ್ದರು. ಹೀಗಾಗಿ ಇವರು ಮತ್ತೆ ಹೊರಗೆ ಬಂದರೆ ತಮ್ಮ ಕೆಲಸ ಮುಂದುವರಿಸುತ್ತಾರೆ. ಹೀಗಾಗಿ ಇವರಿಗೆ ಕಠಿಣ ಶಿಕ್ಷೆ ನೀಡಿದರೆ ಮತ್ತೆ ಮುಂದುವರಿಸಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 15 ಸಿಮ್‌ ಕಾರ್ಡ್‌ ಬದಲಾಯಿಸಿ, ವಿಗ್‌ ತೆಗೆದು, ಮೀಸೆ ಬೋಳಿಸಿದ್ದ ಸ್ಯಾಂಟ್ರೋ ರವಿ ಕೊನೆಗೂ ಸಿಕ್ಕಿಬಿದ್ದ

    ಸ್ಯಾಂಟ್ರೋ ರವಿ ವಿರುದ್ಧ 2ನೇ ಪತ್ನಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಸಂಬಂಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆ (Vijayanagar Police Station) ಯಲ್ಲಿ ಪ್ರಕರಣ ದಾಖಲಾಗಿತ್ತು. ಅದಾದ ಬಳಿಕ ಸ್ಯಾಂಟ್ರೋ ರವಿ ತಲೆಮರೆಸಿಕೊಂಡಿದ್ದ. 11 ದಿನಗಳ ಬಳಿಕ ಕೊನೆಗೂ ಗುಜರಾತ್‍ನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಮಠ’ ಚಿತ್ರ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಬಂಧನ

    ‘ಮಠ’ ಚಿತ್ರ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಬಂಧನ

    ಠ, ಎದ್ದೇಳು ಮಂಜುನಾಥ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿರುವ ಪ್ರತಿಭಾವಂತ ನಿರ್ದೇಶಕ ಗುರುಪ್ರಸಾದ್ (Guruprasad) ಅವರನ್ನು ಗಿರಿನಗರ (Girinagar) ಪೊಲೀಸರು ಬಂಧಿಸಿದ್ದಾರೆ. ಚೆಕ್ ಬೌನ್ಸ್ (Check Bounce) ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನವಾಗಿದ್ದು (Arrest), ನಂತರ ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

    ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಎನ್ನುವವರಿಂದ ಗುರು ಪ್ರಸಾದ್ 30 ಲಕ್ಷ ರೂಪಾಯಿಯನ್ನು ಸಾಲವಾಗಿ ಪಡೆದುಕೊಂಡಿದ್ದರು. ಸಿನಿಮಾ ಮಾಡುವುದಾಗಿ ಸಾಲ ಪಡೆದಿದ್ದ ಗುರುಪ್ರಸಾದ್, ನಂತರ ಹಣ ಕೊಡದೇ ವಂಚಿಸಿದ್ದರು. ಹಣ ಕೇಳುವುದಕ್ಕೆ ಹೋದವರ ಮೇಲೆಯೇ ಸುಳ್ಳು ಕೇಸ್ ಅನ್ನು ಕೂಡ ದಾಖಲಿಸಿದ್ದರು. ಹಾಗಾಗಿ ಶ್ರೀನಿವಾಸ್ ಅವರು ಗುರುಪ್ರಸಾದ್ ಮೇಲೆ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದರು. ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಗಳ ಸಮಾಗಮ: ವೈಷ್ಣವಿ ಜೊತೆ ದಿವ್ಯಾ- ಅರವಿಂದ್ ಕೆ.ಪಿ ಜೋಡಿ

    ಶ್ರೀನಿವಾಸ್ ದೂರು ನೀಡಿದ ಹಿನ್ನೆಲೆಯಲ್ಲಿ ಕೋರ್ಟ್ ನಿಂದ ಎನ್.ಬಿ ಡಬ್ಲ್ಯು ಜಾರಿ ಆಗಿತ್ತು. ಎನ್.ಐ ಆಕ್ಟ್ ಅಡಿ ಗುರುಪ್ರಸಾದ್ ವಿರುದ್ದ ಚೆಕ್ ಬೌನ್ಸ್ ಕೇಸ್ ನಲ್ಲಿ ವಾರೆಂಟ್ ಜಾರಿ ಆಗಿತ್ತು. ಹಾಗಾಗಿ ಗಿರಿನಗರ ಪೊಲೀಸರು ಗುರುಪ್ರಸಾದ್ ಅವರನ್ನು ಬಂಧಿಸಿ,  ಮೆಡಿಕಲ್ ಟೆಸ್ಟ್ ನಂತರ ಕೋರ್ಟ್ ಮುಂದೆ ಹಾಜರು ಪಡಿಸಲು ಕರೆದುಕೊಂಡು ಹೋಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೈಪ್ರೊಫೈಲ್ ಗಾಂಜಾ‌ ದಂಧೆ -ಮಂಗಳೂರಿನ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಸೇರಿ 10 ಮಂದಿ ಅರೆಸ್ಟ್‌

    ಹೈಪ್ರೊಫೈಲ್ ಗಾಂಜಾ‌ ದಂಧೆ -ಮಂಗಳೂರಿನ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಸೇರಿ 10 ಮಂದಿ ಅರೆಸ್ಟ್‌

    ಮಂಗಳೂರು: ಮಂಗಳೂರಿನ (Mangaluru) ಪ್ರತಿಷ್ಠಿತ ಕಾಲೇಜಿನ (College) ವೈದ್ಯರು‌ ಹಾಗೂ ವೈದ್ಯಕೀಯ ವಿದ್ಯಾರ್ಥಿನಿಯರು ಭಾಗಿಯಾಗಿದ್ದ ಭಾರೀ ಹೈಪ್ರೊಫೈಲ್ ಗಾಂಜಾ ದಂಧೆಯನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ.

    ಮಂಗಳೂರಿನ ಪ್ರತಿಷ್ಠಿತ ಕೆ.ಎಂ.ಸಿ. ಅತ್ತಾವರ, ಕೆ.ಎಂ.ಸಿ ಮಣಿಪಾಲ, ದೇರಳಕಟ್ಟೆಯ ಯೆನೇಪೋಯಾ ಮೆಡಿಕಲ್ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳು ಈ ಗಾಂಜಾ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಗಾಂಜಾ ಸೇವನೆ ಹಾಗೂ ಗಾಂಜಾ ಪೆಡ್ಲಿಂಗ್ ಪ್ರಕರಣದಲ್ಲಿ ಇಬ್ಬರು ವೈದ್ಯರು (Doctor), ನಾಲ್ವರು ವೈದ್ಯಕೀಯ ವಿದ್ಯಾರ್ಥಿನಿಯರು, ಇಬ್ಬರು ವಿದ್ಯಾರ್ಥಿಗಳು (Students) ಸೇರಿ ಒಟ್ಟು 10 ಜನ ಭಾಗಿಯಾಗಿದ್ದಾರೆ‌.

    ಯು.ಕೆ ಮೂಲದ ಗಾಂಜಾ ಪೆಡ್ಲರ್ ನೀಲ್ ಕಿಶೋರಿಲಾಲ್ ರಾಮ್ ಜೀ (38) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಮತ್ತಷ್ಟು ಸ್ಫೋಟಕ ವಿಚಾರ ಬೆಳಕಿಗೆ ಬಂದಿತ್ತು. ನೀಲ್ ಕಿಶೋರಿಲಾಲ್ ರಾಮ್‌ನ ಮಾಹಿತಿ ಆಧಾರದಲ್ಲಿ ಮೆಡಿಕಲ್ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಹಾಗೂ ವೈದ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ವೈದ್ಯರಾದ ಡಾ. ಸಮೀರ್(32), ಮಣಿ‌ಮಾರನ್ ಮುತ್ತು(28)ರನ್ನು ವಶಕ್ಕೆ ಪಡೆಯಲಾಗಿದ್ದು, ವಿದ್ಯಾರ್ಥಿನಿಯರಾದ ಡಾ. ನದಿಯಾ ಸಿರಾಜ್(24), ಡಾ.ವರ್ಷಿಣಿ ಪ್ರತಿ (26), ಡಾ.ರಿಯಾ ಚಡ್ಡ(22), ಡಾ. ಹೀರಾ ಬಸಿನ್(23), ವಿದ್ಯಾರ್ಥಿಗಳಾದ ಡಾ. ಭಾನು ದಹಿಯಾ (27), ಡಾ.ಕ್ಷಿತಿಜ್ ಗುಪ್ತ (23), ಸ್ಥಳೀಯ ಮಹಮ್ಮದ್ ರವೂಫ್‌ ಅಲಿಯಾಸ್ ಗೌಸ್ (34)ನನ್ನು ಬಂಧಿಸಲಾಗಿದೆ. ಇದೇ ವೇಳೆ ಆರೋಪಿಗಳ ಬಳಿಯಿದ್ದ 2 ಕೆ.ಜಿ‌ ಗಾಂಜಾ, ಒಂದು ನಕಲಿ ಪಿಸ್ತೂಲ್, ಡ್ರಾಗರ್ ವಶಕ್ಕೆ ಪಡೆಯಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜಸ್ಟ್ ಫನ್‍ಗಾಗಿ ಬಾಂಬ್ ಬೆದರಿಕೆ ಹಾಕಿದ್ದೆ – ಪೊಲೀಸರ ಮುಂದೆ ಅಪ್ರಾಪ್ತ ಬಾಲಕ ಹೇಳಿಕೆ

    ಜಸ್ಟ್ ಫನ್‍ಗಾಗಿ ಬಾಂಬ್ ಬೆದರಿಕೆ ಹಾಕಿದ್ದೆ – ಪೊಲೀಸರ ಮುಂದೆ ಅಪ್ರಾಪ್ತ ಬಾಲಕ ಹೇಳಿಕೆ

    ಬೆಂಗಳೂರು: ಸ್ಕೂಲ್ (School) ಅಲ್ಲಿ ಬಾಂಬ್ ಇಡಲಾಗಿದೆ. ಮಧ್ಯಾಹ್ನ ಊಟದ ವೇಳೆ ಬ್ಲಾಸ್ಟ್ ಆಗಲಿದೆ ಎಂದು ಇ-ಮೇಲ್ (E Mail) ಬಂದಿದ್ದ ಕೇಸ್‍ಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನನ್ನು (Boy) ಪೊಲೀಸರು (Police) ಬಂಧಿಸಿದ್ದಾರೆ.

    ಅಪ್ರಾಪ್ತ ಬಾಲಕನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಮಾಹಿತಿ ಹೊರಹಾಕಿದ್ದಾನೆ. ಜಸ್ಟ್ ಫನ್‍ಗಾಗಿ ಈ ಕೆಲಸ ಮಾಡಿದ್ದೀನಿ ಎಂದಿದ್ದಾನೆ ಎಂದು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರಕ್ಕೆ BMTC ವಿಸ್ತರಣೆ – ತಕರಾರೆತ್ತಿದ KSRTC

    ಮತ್ತೊಂದು ಸ್ಕೂಲ್ ಅಲ್ಲಿ 8ನೇ ತರಗತಿ ಓದುತ್ತಾ ಇದ್ದ ಬಾಲಕ NAFL ಶಾಲೆಯ ಹುಡುಗನ ಜೊತೆ ಸ್ನೇಹ ಇತ್ತು. ಆತನ ಸ್ಕೂಲ್‍ಗೆ ಇ-ಮೇಲ್ ಮಾಡಿದ್ರೆ ಹೇಗಿರುತ್ತೆ ಪರಿಸ್ಥಿತಿ? ಅನ್ನೋದನ್ನ ನೋಡೋದಕ್ಕಾಗಿ ಬಾಲಕ ಮೇಲ್ ಮಾಡಿದ್ದನಂತೆ. ಗೂಗಲ್ ಅಲ್ಲಿ ಶಾಲೆಯ ಇ-ಮೇಲ್ ಐಡಿ ತೆಗೆದುಕೊಂಡು ಇ-ಮೇಲ್ ಮಾಡಿರೋದಾಗಿ ತಪ್ಪೊಪ್ಪಿಗೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಹಳೇ ಕೇಸ್ ರೀ ಓಪನ್ ಮಾಡ್ಬಿಡಿ- ಪಕ್ಷದ ಹಿರಿಯ ನಾಯಕರ ಚಾಟಿಗೆ ಬೊಮ್ಮಾಯಿ ಏನ್ಮಾಡ್ತಾರೆ..!?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 88,920 ರೂ. ಮೌಲ್ಯದ ಬಿಸ್ಕೆಟ್ ಕದ್ದ ಖದೀಮರಿಬ್ಬರ ಬಂಧನ

    88,920 ರೂ. ಮೌಲ್ಯದ ಬಿಸ್ಕೆಟ್ ಕದ್ದ ಖದೀಮರಿಬ್ಬರ ಬಂಧನ

    ಬೀದರ್: ಉಸ್ಮಾನಿಯಾ ಬಿಸ್ಕೆಟ್ (Biscuit) ಕದ್ದು ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. 88,920 ರೂಪಾಯಿ ಮೌಲ್ಯದ ಬಿಸ್ಕೆಟ್ ಅನ್ನು ಕಳ್ಳರಿಂದ ಪೊಲೀಸರು ಜಪ್ತಿ ಮಾಡಿದ್ದಾರೆ.

    ಹೈದರಾಬಾದ್ (Hyderabad) ನಿಂದ ಬೀದರ್ ಗೆ ಬಿಸ್ಕೆಟ್ ಡೆಲಿವರಿ ಮಾಡಲು ಬಂದಾಗ ಕಳವು ಮಾಡಲಾಗಿತ್ತು. ಬೀದರ್ (Bidar) ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9 ರ ಭಂಗೂರು ಬಳಿ ಗಾಡಿ ನಿಲ್ಲಿಸಿ ಊಟಕ್ಕೆ ಕುಳಿತಾಗ ಖದೀಮರು 114 ಬಿಸ್ಕೆಟ್ ಬಾಕ್ಸ್ ಕದ್ದು ಪರಾರಿಯಾಗಿದ್ದರು. ಈ ಕುರಿತು ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಈ ಬೆನ್ನಲ್ಲೇ ಖದೀಮರ ಬೆನ್ನು ಬಿದ್ದ ಮನ್ನಳ್ಳಿ ಪೊಲೀಸರು ಮೂರು ದಿನಗಳಲ್ಲೇ ಬಿಸ್ಕೆಟ್ ಕಳ್ಳರನ್ನು ಬಂಧಿಸಿದ್ದಾರೆ. ಇದೀಗ ಕಳ್ಳರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಮೈಸೂರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ

    Live Tv
    [brid partner=56869869 player=32851 video=960834 autoplay=true]

  • ಮಿಕ್ಸಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್- ಪ್ರೀತಿ ನಿರಾಕರಿಸಿದ್ರಿಂದ ಕೊಲೆಗೆ ನಿರ್ಧರಿಸಿದ್ದೆ ಎಂದ ಆರೋಪಿ

    ಮಿಕ್ಸಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್- ಪ್ರೀತಿ ನಿರಾಕರಿಸಿದ್ರಿಂದ ಕೊಲೆಗೆ ನಿರ್ಧರಿಸಿದ್ದೆ ಎಂದ ಆರೋಪಿ

    ಹಾಸನ: ಕೊರಿಯರ್ ಅಂಗಡಿ (Courier Shop) ಯಲ್ಲಿ ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.

    ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿ, ಪ್ರಕರಣದ ಪ್ರಮುಖ ಆರೋಪಿ ಅನೂಪ್ ಕುಮಾರ್ (Anoop Kumar) ನನ್ನು ಬಂಧಿಸಲಾಗಿದೆ. ನೆಲಮಂಗಲ ಬಳಿ ಆರೋಪಿಯನ್ನು ಬಂಧಿಸಿದ್ದೇವೆ. ಇದೀಗ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದರು.

    ಮಿಕ್ಸಿಯಲ್ಲಿ ಡೆಟೊನೆಟರ್ (Detonator) ಇಟ್ಟು ಬ್ಲಾಸ್ಟ್ ಮಾಡುವುದು ಹೇಗೆ ಎಂದು ಇಂಟರ್‍ನೆಟ್ ಸರ್ಚ್ ಮಾಡಿದ್ದಾನೆ. ರಾಮನಗರ (Ramanagar) ದಲ್ಲಿ ನಡೆಯುತ್ತಿರುವ ಕ್ವಾರಿಯಲ್ಲಿ ಎರಡು ಡೆಟೊನೆಟರ್ ತಂದಿದ್ದಾನೆ. ಡೆಟೊನೆಟರ್ ಕದ್ದಿದ್ದಾನೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

    ಡಿ.16 ರಂದು ಪಾರ್ಸೆಲ್ ಕಳುಹಿಸಿದ್ದು, ಡಿ.26 ರಂದು ಮಿಕ್ಸಿ ಬ್ಲಾಸ್ಟ್ ಆಗಿತ್ತು. ಮಿಕ್ಸಿ ಬ್ಲಾಸ್ಟ್ ಆಗಿರುವ ನ್ಯೂಸ್ ಬಂದಿದೆಯಾ ಎಂದು ಡಿ.17 ರಿಂದಲೇ ಗೂಗಲ್‍ನಲ್ಲಿ ಸರ್ಚ್ ಮಾಡಿದ್ದಾನೆ. ಕೊರಿಯರ್ ಟ್ರ್ಯಾಕಿಂಗ್ ಐಡಿ ಡೆಲಿವರಿ ಆಗಿದೆಯಾ, ಬಾಂಬ್ ತಯಾರಿಕೆ ಬಗ್ಗೆಯೂ ಸರ್ಚ್ ಮಾಡಿದ್ದಾನೆ. ಡೆಟೊನೆಟರ್ ಬ್ಲಾಸ್ಟ್ ಮಾಡುವ ವೈರ್‍ನ್ನು ಅವರ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

    ತಲಘಟ್ಟಪುರದಲ್ಲಿರುವ ಆತನ ಮನೆಯಲ್ಲಿ ಮಿಕ್ಸಿಯ ಮೂರನೇ ಜಾರ್ ಸಿಕ್ಕಿದೆ. ನನ್ನ ಪ್ರೀತಿ ನಿರಾಕರಿಸಿದ್ದಕ್ಕೆ, ಅವಮಾನ ಮಾಡಿದ್ದಕ್ಕೆ ವಸಂತಾಳನ್ನು ಕೊಲ್ಲಲು ನಿರ್ಧರಿಸಿದ್ದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ತನಿಖೆ ವೇಳೆ ಅನೂಪ್ ಕುಮಾರ್ ಬ್ಲಾಸ್ಟ್ ಸ್ಕೆಚ್ ಕಹಾನಿ ಬಯಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಡ್ರಗ್ಸ್ ಪ್ರಕರಣ ತೆಲುಗಿನ ಖ್ಯಾತ ನಟಿಯ ಗಂಡನ ಬಂಧನ

    ಡ್ರಗ್ಸ್ ಪ್ರಕರಣ ತೆಲುಗಿನ ಖ್ಯಾತ ನಟಿಯ ಗಂಡನ ಬಂಧನ

    ಟಾಲಿವುಡ್ ನಲ್ಲಿ ಮತ್ತೆ ಡ್ರಗ್ಸ್ ಪ್ರಕರಣ ಆತಂಕ ಮೂಡಿಸಿದೆ. ಈಗಾಗಲೇ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಚಾರ್ಮಿ, ಪುರಿ ಜಗನ್ನಾಥ್, ಮುಮೈಥ್ ಖಾನ್ ಸೇರಿದಂತೆ ಹಲವರನ್ನು ಆರೋಪಿಗಳನ್ನಾಗಿಸಿದೆ. ಹಲವಾರು ಬಾರಿ ಇವರು ವಿಚಾರಣೆಯನ್ನೂ ಎದುರಿಸಿದ್ದಾರೆ. ಈ ಪ್ರಕರಣ ಮಾಸುವ ಮುನ್ನವೇ ಮತ್ತೆ ಟಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಖ್ಯಾತ ನಟಿಯ ಪತಿಯನ್ನು ನಿನ್ನೆಯಷ್ಟೇ ಹೈದರಾಬಾದ್ ಮಾದಕ ವಸ್ತು ವಿರೋಧಿ ಪಡೆ ಬಂಧಿಸಿದೆ.

    ಬಾಲಿವುಡ್ ಮತ್ತು ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿರುವ, ಖ್ಯಾತ ನಟಿ ನೇಹಾ ದೇಶಪಾಂಡೆ ಅವರ ಪತಿ ಮಿರೋನ್ ಮೋಹಿತ್ ಎನ್ನುವವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಕೇವಲ ನೇಹಾ ಪತಿಯನ್ನು ಮಾತ್ರವಲ್ಲ, ಖ್ಯಾತ ಉದ್ಯಮಿ ಕಿಶೋರ್ ರೆಡ್ಡಿ ಅನ್ನುವವರನ್ನು ಕೂಡ ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ನೀಡಿದ ಮಾಹಿತಿಯ ಪ್ರಕರಣ ಮೂರು ಗ್ರಾಮ್ ನಷ್ಟು ಕೊಕೇನ್ ಅವರ ಬಳಿ ದೊರೆತಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ನೇಹಾ ದೇಶಪಾಂಡೆ ಪತಿ ಮಿರೋನ್ ಹಲವಾರು ಡ್ರಗ್ಸ್ ದೊರೆಗಳ ಜೊತೆ ನಂಟು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಜಗತ್ತಿನ ಹೆಸರಾಂತ ಡ್ರಗ್ಸ್ ದೊರೆ ಪಾಬ್ಲೊ ಎಸ್ಕೋಬಾರ್ ನ ಅತೀ ಹೆಚ್ಚು ಪ್ರೀತಿಸುವ ವ್ಯಕ್ತಿಗಳಲ್ಲಿ ಮಿರೋನ್ ಕೂಡ ಒಬ್ಬರು ಎಂದು ಹೇಳಲಾಗುತ್ತಿದೆ. ಈ ಅಭಿಮಾನಕ್ಕಾಗಿಯೇ ಅವರು ತಮ್ಮ ನಾಯಿಗೆ ಪಾಬ್ಲೊ ಎಂದು ಹೆಸರಿಟ್ಟಿದ್ದಾರಂತೆ. ಅಲ್ಲದೇ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವಾರು ಕಡೆ ಡಿಜೆ ನೈಟ್ ಪಾರ್ಟಿಗಳನ್ನೂ ಇವರು ಆಯೋಜನೆ ಮಾಡಿದ್ದಾರಂತೆ.

    ಮಿರೋನ್ ಬಂಧನವಾಗುತ್ತಿದ್ದಂತೆಯೇ ಮತ್ತೆ ತೆಲುಗು ಸಿನಿಮಾ ರಂಗದಲ್ಲಿ ನಡುಕ ಶುರುವಾಗಿದೆ. ಮಿರೋನ್ ಯಾರೆಲ್ಲ ಹೆಸರು ಹೇಳುತ್ತಾನೆ ಎನ್ನುವ ಕುತೂಹಲವೂ ಮೂಡಿದೆ. ಈಗಾಗಲೇ ಸಿನಿಮಾ ರಂಗದ ಹಲವು ಸಿಲೆಬ್ರಿಟಿಗಳು ಡ್ರಗ್ಸ್ ಕೇಸಿನಲ್ಲಿ ಬಂಧನವಾಗಿದ್ದಾರೆ. ಅನೇಕರು ಆರೋಪಿ ಸ್ಥಾನದಲ್ಲೂ ಇದ್ದಾರೆ. ಇನ್ನೂ ಕೆಲವರು ವಿಚಾರಣೆಗೆ ಒಳಗಾಗಿದ್ದಾರೆ. ಈ ಹೊತ್ತಿನಲ್ಲಿ ಮಿರೋನ್ ಬಂಧನ, ಭಾರೀ ಆತಂಕವನ್ನಂತೂ ತಂದಿದೆ.

    Live Tv
    [brid partner=56869869 player=32851 video=960834 autoplay=true]

  • ಭೂತ ಬಿಡಿಸುವ ನೆಪದಲ್ಲಿ 14ರ ಬಾಲಕಿಯ ಮೇಲೆ ಅತ್ಯಾಚಾರ

    ಭೂತ ಬಿಡಿಸುವ ನೆಪದಲ್ಲಿ 14ರ ಬಾಲಕಿಯ ಮೇಲೆ ಅತ್ಯಾಚಾರ

    ಲಕ್ನೋ: ಭೂತ ಬಿಡಿಸುವ ನೆಪದಲ್ಲಿ ಮಂತ್ರವಾದಿಯೊಬ್ಬ (Exorcist) 14 ವರ್ಷದ ಬಾಲಕಿಯ (Girl) ಮೇಲೆ ಅತ್ಯಾಚಾರ ನಡೆಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಅಶೋಕ್ ಕುಮಾರ್ (45) ಬಂಧಿತ (Arrest) ವ್ಯಕ್ತಿ. ಉತ್ತರ ಪ್ರದೇಶದ ಪಿಪ್ರಿ ಪೊಲೀಸ್ ಠಾಣೆಯ ವ್ಯಾಪ್ತಿ ನಿವಾಸಿಯೊಬ್ಬಳು ಕಳೆದ ಮೂರು ವರ್ಷಗಳಿಂದ ಮೂರ್ಛೆ ರೋಗದಿಂದ ಬಳಲುತ್ತಿದ್ದಳು. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಬಾಲಕಿಯ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿರಲಿಲ್ಲ.

    ಈ ಹಿನ್ನೆಲೆಯಲ್ಲಿ ಬಾಲಕಿಯ ತಾಯಿಯ ಬಳಿಗೆ ಬಂದ ಅಶೋಕ್ ಕುಮಾರ್ ಬಾಲಕಿಗೆ ದೆವ್ವ ಹಿಡಿದಿದೆ. ಇದರಿಂದಾಗಿ ಪದೇ ಪದೇ ಪ್ರಜ್ಞೆ ತಪ್ಪಿ ಬೀಳುತ್ತಿದ್ದಾಳೆ. ಈ ಹಿನ್ನೆಲೆಯಲ್ಲಿ ತನ್ನ ಬಳಿಗೆ ಕಳುಹಿಸಿಕೊಡಿ, ನಾನು ಆ ರೋಗವನ್ನು ಸರಿಪಡಿಸುತ್ತೇನೆ ಎಂದು ಭರವಸೆ ಹುಟ್ಟಿಸಿದ್ದಾನೆ. ಈ ಮಾತನ್ನೇ ನಿಜವೆಂದು ತಿಳಿದ ಬಾಲಕಿಯ ತಾಯಿಯು ತನ್ನ ಮಗಳನ್ನು ಮಂತ್ರವಾದಿಯ ಬಳಿ ಕಳುಹಿಸಿದ್ದಾರೆ. ಇದನ್ನೂ ಓದಿ: ಹಳಿ ತಪ್ಪಿದ ಸೂರ್ಯನಗರಿ ಎಕ್ಸ್‌ಪ್ರೆಸ್ ರೈಲಿನ 8 ಬೋಗಿಗಳು!

    ಇದಾದ ಬಳಿಕ ಅಶೋಕ್ ಕುಮಾರ್ ಬಾಲಕಿಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಘಟನೆಗೆ ಸಂಬಂಧಿಸಿ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪೋಕ್ಸೋ ಕಾಯ್ದೆಯಡಿಯಯಲ್ಲಿ ಅಶೋಕ್‍ ಕುಮಾರ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಮಹಿಳೆ ಶವವಾಗಿ ಪತ್ತೆ

    Live Tv
    [brid partner=56869869 player=32851 video=960834 autoplay=true]