Tag: arrest

  • ತಮ್ಮ ಕಾಸಿನಲ್ಲೇ ಎಣ್ಣೆ ಕುಡಿಸಿ, ಬೈಕಿನಲ್ಲಿ ಕರ್ಕೊಂಡೋಗಿ ಕೊಚ್ಚಿ ಕೊಂದ್ರು!

    ತಮ್ಮ ಕಾಸಿನಲ್ಲೇ ಎಣ್ಣೆ ಕುಡಿಸಿ, ಬೈಕಿನಲ್ಲಿ ಕರ್ಕೊಂಡೋಗಿ ಕೊಚ್ಚಿ ಕೊಂದ್ರು!

    ಬೆಂಗಳೂರು: ಕೇವಲ ಐನೂರು ರೂಪಾಯಿಗಾಗಿ ಕೊಲೆ ಮಾಡಿ ಪರಪ್ಪನ ಅಗ್ರಹಾರ ಸೇರಿದ್ದ ರೌಡಿಶೀಟರ್ ನನ್ನು ಸಹ ಕೈದಿಗಳೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ಸುಶಾಂತ್ ಅಲಿಯಾಸ್ ಪೈ ಕೊಲೆಯಾದ ರೌಡಿಶೀಟರ್. ಯೋಗೇಶ್ ಮತ್ತು ಅರ್ಜುನ ಇಬ್ಬರು ಸೇರಿ ಸುಶಾಂತ್ ನನ್ನು ಕೊಲೆ ಮಾಡಿದ್ದಾರೆ. ಕೊಲೆಯಾದ ರೌಡಿಶೀಟರ್ ಸುಬ್ರಮಣ್ಯಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಕೊಲೆ ಯತ್ನ, ಸುಲಿಗೆ ಸೇರಿದಂತೆ ಸಾಕಷ್ಟು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದನು.

    ಕೆಲ ದಿನಗಳ ಹಿಂದೆ ಕೇವಲ ಐನೂರು ರೂಪಾಯಿಗಾಗಿ ಸೆಕ್ಯೂರಿಟಿ ಗಾರ್ಡ್ ನ ಕೊಲೆ ಮಾಡಿ ಪರಪ್ಪನ ಅಗ್ರಹಾರ ಸೇರಿದ್ದನು. ಇಷ್ಟಕ್ಕೆ ಸುಮ್ಮನಾಗದ ಈತ ಸಹಕೈದಿಳಾಗಿದ್ದ ಅರ್ಜುನ್ ಅಲಿಯಾಸ್ ಗಿಡ್ಡ, ಯೋಗಿಶ್ ಅಲಿಯಾಸ್ ಅಭಿಗೆ ಹಲ್ಲೆ ನಡೆಸಿ, ಕಿರುಕುಳ ನೀಡಿದ್ದನು ಎಂದು ಪೊಲೀಸರು ಹೇಳಿದ್ದಾರೆ.

    ರೌಡಿಶೀಟರ್ ಸುಶಾಂತ್ ಮತ್ತು ಅರ್ಜುನ್ ಅಲಿಯಾಸ್ ಗಿಡ್ಡ, ಯೋಗೀಶ್ ಅಲಿಯಾಸ್ ಅಭಿ ಕೆಲ ದಿನಗಳ ನಂತರ ಜೈಲಿನಿಂದ ಹೊರಬಂದಿದ್ದರು. ಆದರೆ 2 ವಾರಗಳ ಹಿಂದೆ ಸುಬ್ರಮಣ್ಯಪುರದ ಬಾರಿನಲ್ಲಿ ಅರ್ಜುನ್ ಮತ್ತು ಯೊಗೇಶ್ ಕೂತು ಎಣ್ಣೆ ಹೊಡೆಯುತ್ತಿದ್ದರು. ಈ ವೇಳೆ ಇದೇ ಬಾರಿಗೆ ರೌಡಿಶೀಟರ್ ಸುಶಾಂತ್ ಕೂಡ ಬಂದಿದ್ದನು.

    ಗುರು ನಮಸ್ಕಾರ ಅಂತ ಪರಿಚಯ ಮಾಡಿಕೊಂಡು ಯೊಗೇಶ್ ಮತ್ತು ಅರ್ಜುನ್ ತಮ್ಮದೇ ಕಾಸಲ್ಲಿ ಕಂಠಪೂರ್ತಿ ಎಣ್ಣೆ ಹೊಡೆಸಿದ್ದರು. ಬಳಿಕ ಪರಪ್ಪನ ಅಗ್ರಹಾರದಲ್ಲಿ ಸುಶಾಂತ್ ಈ ಹಿಂದೆ ಕೊಟ್ಟಿದ್ದ ಕಿರುಕುಳ ನೆನೆಸಿಕೊಂಡು, ಸುಶಾಂತ್ ನ ಬೈಕಿನಲ್ಲಿ ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ ಎಂದು ದಕ್ಷಿಣ ವಲಯ ಡಿಸಿಪಿ ಶರಣಪ್ಪ ಅವರು ಹೇಳಿದ್ದಾರೆ.

    ಸದ್ಯಕ್ಕೆ ಸುಬ್ರಮಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರು ಆರೋಪಿಗಳಾದ ಯೋಗೇಶ್ ಮತ್ತು ಅರ್ಜುನರನ್ನು ಬಂಧಿಸಿ ಮತ್ತೆ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಯಲ್ ಎನ್‍ಫೀಲ್ಡ್, ಕೆಟಿಎಂ ಡ್ಯೂಕ್ ಬೈಕ್ ಗಳನ್ನೇ ಕದಿಯುತ್ತಿದ್ದ ಖದೀಮರ ಬಂಧನ

    ರಾಯಲ್ ಎನ್‍ಫೀಲ್ಡ್, ಕೆಟಿಎಂ ಡ್ಯೂಕ್ ಬೈಕ್ ಗಳನ್ನೇ ಕದಿಯುತ್ತಿದ್ದ ಖದೀಮರ ಬಂಧನ

    ಬೆಂಗಳೂರು: ರಾಯಲ್ ಎನ್ ಫೀಲ್ಡ್ ಹಾಗೂ ಕೆಟಿಎಂ ಡ್ಯೂಕ್ ಬೈಕ್ ಗಳನ್ನೇ ಟಾರ್ಗೆಟ್ ಮಾಡಿಕೊಂಡು ಕದಿಯುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ವರ್ತೂರು ಪೊಲೀಸರು ಮೂವರು ಖತರ್ನಾಕ್ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಸ್ಮತ್ ಖಾನ್ ಅಲಿಯಾಸ್ ಬುಲೆಟ್ ಖಾನ್, ಸಂತೋಷ್ ಮತ್ತು ಮಂಜುನಾಥ್ ಎಂದು ಗುರುತಿಸಲಾಗಿದೆ. ಇವರಿಂದ ಪೊಲೀಸರು ಸುಮಾರು 30 ಲಕ್ಷ ಮೌಲ್ಯದ ದುಬಾರಿ ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

    ಅಸ್ಮತ್ ಖಾನ್ ಅಲಿಯಾಸ್ ಬುಲೆಟ್ ಖಾನ್, ಸಂತೋಷ್ ಮತ್ತು ಮಂಜುನಾಥ್ ಮೂವರು ಆಧುನಿಕ ಮಾದರಿಯ ಹೆಚ್ಚು ಬೆಲೆ ಬಾಳುವ ಬೈಕ್ ಗಳನ್ನು ಮಾತ್ರ ಕದಿಯುತ್ತಿದ್ದರು. ಮನೆಯ ಹೊರಗೆ ಬೈಕ್ ಗಳನ್ನು ಪಾರ್ಕ್ ಮಾಡಿದ್ದ ಬಳಿಕ ಕ್ಷಣಾರ್ಧದಲ್ಲಿ ಕದಿಯುತ್ತಿದ್ದರು. ಇಂದು ಮಾಹಿತಿ ಮೇರೆಗೆ ವರ್ತೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಬಂಧಿತರಿಂದ ಆರೋಪಿಗಳಿಂದ 10 ರಾಯಲ್ ಎನ್ ಫೀಲ್ಡ್ ಹಾಗೂ ಎರಡು ಕೆಟಿಎಂ ಡ್ಯೂಕ್ ಬೈಕ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ ಐದು ಪೊಲೀಸ್ ಠಾಣೆಗಳಲ್ಲಿ ಇವರು ವಿರುದ್ಧ ದಾಖಲಾಗಿದ್ದ ಬೈಕ್ ಕಳವು ಪ್ರಕರಣಗಳು ಪತ್ತೆಯಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಮದ್ವೆಯಾಗಿ ಮೂರು ಮಕ್ಕಳಿದ್ರೂ ಅಪ್ರಾಪ್ತೆಯನ್ನು ಪುಸಲಾಯಿಸಿ ವಿವಾಹವಾದ 40ರ ವ್ಯಕ್ತಿ

    ಮದ್ವೆಯಾಗಿ ಮೂರು ಮಕ್ಕಳಿದ್ರೂ ಅಪ್ರಾಪ್ತೆಯನ್ನು ಪುಸಲಾಯಿಸಿ ವಿವಾಹವಾದ 40ರ ವ್ಯಕ್ತಿ

    ತುಮಕೂರು: 40 ವರ್ಷದ ವ್ಯಕ್ತಿಯೊಬ್ಬ ಅಪ್ರಾಪ್ತೆಯನ್ನು ಪುಸಲಾಯಿಸಿ ಮದುವೆಯಾಗಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ.

    ಚಿತ್ರದುರ್ಗ ಮೂಲದ ಶಿವಣ್ಣ(40) ಮದುವೆಯಾದ ವ್ಯಕ್ತಿ. ಈತ ಅಪ್ರಾಪ್ತೆಯನ್ನು ಪುಸಲಾಯಿಸಿ ಮದುವೆಯಾಗಿದ್ದು, ಬಳಿಕ ಆಕೆಯನ್ನ ಕರೆದುಕೊಂಡು ಪರಾರಿಯಾಗಿದ್ದನು. ಸದ್ಯಕ್ಕೆ ಆರೋಪಿಯನ್ನು ಮಾಗಡಿ ತಾಲೂಕಿನ ಹೊಳಕಲ್ ಬಳಿ ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಶಿವಣ್ಣ ಕಳೆದ ಐದು ವರ್ಷದಿಂದ ಕೊರಟಗೆರೆಯ ತೋವಿನಕೆರೆಯ ತೋಟದಲ್ಲಿ ಕೆಲಸಮಾಡುತಿದ್ದನು. ಈಗಾಗಲೇ ಆರೋಪಿಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಪತ್ನಿ, ಮಕ್ಕಳು ಚಿತ್ರದುರ್ಗದಲ್ಲಿ ಇದ್ದರು. ಈತ ಮಾತ್ರ ಕೆಲಸಕ್ಕಾಗಿ ತುಮಕೂರಿಗೆ ಬಂದು ನೆಲೆಸಿದ್ದನು.

    ಶಾಲೆಗೆ ಹೋಗುತ್ತಿದ್ದ ಅಪ್ರಾಪ್ತೆಯ ಪರಿಚಯ ಮಾಡಿಕೊಂಡಿದ್ದನು. ಹೀಗೆ ಆದ ಪರಿಚಯದಿಂದ ಸ್ನೇಹ ಬೆಳೆಸಿ ಆಕೆಯನ್ನ ಪುಸಲಾಯಿಸಿ ಸುಮಾರು 10 ದಿನಗಳ ಹಿಂದೆ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ. ಬಳಿಕ ಹುಡುಗಿಯ ಕುಟುಂಬದವರು ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದರು.

    ಸದ್ಯ ದೂರು ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಕೊರಟಗೆರೆ ಠಾಣೆಯಲ್ಲಿ ಪೋಕ್ಸೋ ಮತ್ತು ಬಾಲ್ಯ ವಿವಾಹ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಸೀನಿಯರ್‌ನಿಂದ ಹಲ್ಲೆ!

    ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಸೀನಿಯರ್‌ನಿಂದ ಹಲ್ಲೆ!

    ಗದಗ: ಕ್ಷುಲ್ಲಕ ಕಾರಣಕ್ಕಾಗಿ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಮತ್ತೊಂದು ವಿದ್ಯಾರ್ಥಿಗಳ ಗುಂಪು ಮನಬಂದಂತೆ ಹಲ್ಲೆ ಮಾಡಿರುವ ಘಟನೆ ಗದಗ ವೈದ್ಯಕೀಯ ಮಹಾ ವಿದ್ಯಾಲಯದ ವಿದ್ಯಾರ್ಥಿನಿಲಯದಲ್ಲಿ ನಡೆದಿದೆ.

    ಎಂಬಿಬಿಎಸ್ ವಿದ್ಯಾರ್ಥಿ ಹೃತೇಶ್ ಹಾಗೂ ಅನೂಪ್ ನಡುವೆ ಎರಡು ದಿನಗಳ ಹಿಂದೆ ಕಾಲೇಜಿನಲ್ಲಿ ಸಣ್ಣ ಗಲಾಟೆ ಏರ್ಪಟ್ಟಿತ್ತು. ಇದರಿಂದ ರೊಚ್ಚಿಗೆದ್ದ ಹೃತೇಶ್ ಹಾಗೂ ಅವರ ತಂದೆ ಮೋಹನ್ ಬಂಜಾರ ಹಾಗೂ ಬಾವ ಸೇರಿದಂತೆ ಒಟ್ಟು ನಾಲ್ವರು ಶನಿವಾರ ತಡರಾತ್ರಿ  ಏಕಾಏಕಿ ಜಿಮ್ಸ್ ಬಾಯ್ಸ್ ಹಾಸ್ಟೆಲ್ ಗೆ ನುಗ್ಗಿ ಅಲ್ಲಿದ್ದ ಅನೂಪ್ ಹಾಗೂ ಇತರೆ ನಾಲ್ಕು ಜನ ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

    ಕಟ್ಟಿಗೆ, ಕಲ್ಲು, ಹಾಗೂ ಬೆಲ್ಟ್ ನಿಂದ ಹಲ್ಲೆ ಮಾಡಿರುವುದರಿಂದ ವಿದ್ಯಾರ್ಥಿಗಳಾದ ಅನುಪ್, ಎನ್.ವಿ.ಸ್ಕಂದ, ಉಲ್ಲಾಸ್ ಹಾಗೂ ಮೊಹಮ್ಮದ್ ಎಂಬ ನಾಲ್ವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಕೂಡಲೇ ಹಾಸ್ಟೆಲ್ ನ ಇತರೆ ವಿದ್ಯಾರ್ಥಿಗಳು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಹಾಸ್ಟೆಲ್ ನುಗ್ಗಿ ಗೂಂಡಾಗಿರಿ ಮಾಡಿದವರನ್ನು ಬಂಧಿಸುವಂತೆ ಆಗ್ರಹಿಸಿ ಜಿಮ್ಸ್ ವಿದ್ಯಾರ್ಥಿಗಳು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಹಾಸ್ಟೆಲ್‍ನ ಬಳಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ನಾಗಾವಿತಾಂಡದ ಹೃತೀಶ್, ತಂದೆ ಮೋಹನ್ ಬಂಜಾರ ಹಾಗೂ ಮತ್ತಿಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ಘಟನೆ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರೈತನನ್ನ ಮನಬಂದಂತೆ ಥಳಿಸಿದ ಪೊಲೀಸರು!

    ರೈತನನ್ನ ಮನಬಂದಂತೆ ಥಳಿಸಿದ ಪೊಲೀಸರು!

    ಶಿವಮೊಗ್ಗ: ಗಾಂಜಾ ಬೆಳೆದಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಿದ್ದ ರೈತನ ಮೇಲೆ ಪೊಲೀಸರು ಕ್ರೌರ್ಯ ತೋರಿಸಿರುವ ಘಟನೆ ಶಿವಮೊಗ್ಗ ತಾಲೂಕಿನ ಕುಂಸಿ ಠಾಣೆಯಲ್ಲಿ ನಡೆದಿದೆ.

    ಕುಂಸಿ ಪೊಲೀಸ್ ಠಾಣೆಯ ಅಧಿಕಾರಿ ಜಗದೀಶ್, ಪೇದೆಗಳಾದ ಪರಮೇಶ್ವರ್ ನಾಯ್ಕ್ ಹಾಗೂ ಪ್ರಶಾಂತ್ ಎಂಬವರು ಈ ಹಲ್ಲೆ ನಡೆಸಿದ್ದು, ನ್ಯಾಯಾಧೀಶರ ಸಮ್ಮುಖದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಕುಂಸಿ ಸಮೀಪದ ನಾರಾಯಣಪುರದ ಕೃಷ್ಣ ನಾಯ್ಕ್ ಎಂಬ ರೈತನನ್ನು ಗಾಂಜಾ ಬೆಳೆದ ಆರೋಪದಲ್ಲಿ ಠಾಣೆಗೆ ಕರೆದೊಯ್ದಿದ್ದರು. ಅಲ್ಲದೇ 5,000 ರೂ. ಕೊಟ್ಟರೆ ಕೇಸ್ ದಾಖಲಿಸದೆ ಬಿಡುಗಡೆ ಮಾಡುತ್ತೇವೆ ಎಂದಿದ್ದರಂತೆ. ಆದರೆ ಕೃಷ್ಣ ಹಣ ಕೊಡದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಪೊಲೀಸರು ಅಮನವೀಯವಾಗಿ ಥಳಿಸಿದ್ದಾರೆ.

    ಪೊಲೀಸರ ಥಳಿತದಿಂದ ಕೂರಲೂ ಆಗದೆ, ಮಲಗಲೂ ಆಗದೇ ಕೃಷ್ಣ ನರಕಯಾತನೆ ಅನುಭವಿಸುತ್ತಿದ್ದಾರೆ. ಕೃಷ್ಣ ನಾಯ್ಕ ರನ್ನು ಎನ್‍ಡಿಪಿಎಸ್ ಕಾಯ್ದೆಯಡಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ಪೊಲೀಸರು ಥಳಿಸಿರುವ ವಿಷಯ ಬೆಳಕಿಗೆ ಬಂದಿದೆ.

    ಪೊಲೀಸರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಧೀಶರು ಕೃಷ್ಣ ನಾಯ್ಕನಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಮತ್ತೊಮ್ಮೆ ವೈದ್ಯಕೀಯ ತಪಾಸಣೆ ನಡೆಸಿ, ಚಿಕಿತ್ಸೆ ಕೊಡಿಸಲು ಆದೇಶ ಮಾಡಿದ್ದಾರೆ. ಗಾಂಜಾ ಬೆಳೆದಿದ್ದರೆ ಬಂಧಿಸಿ ಕಾನೂನು ಕ್ರಮಕೈಗೊಳ್ಳಲಿ. ಆದರೆ ಅಮಾನವೀಯವಾಗಿ ಥಳಿಸುವ ಅಧಿಕಾರ ಪೊಲೀಸರಿಗೆ ಕೊಟ್ಟವರು ಯಾರು ಎಂದು ಅವರ ಸಂಬಂಧಿಗಳು ಪ್ರಶ್ನಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿವಿ ಕ್ಯಾಂಪಸ್‍ನಲ್ಲಿ ಪ್ರೇಯಸಿಯ ಕತ್ತಿನಲ್ಲಿದ್ದ ಚಿನ್ನಕ್ಕಾಗಿ ಪ್ರಿಯಕರನನ್ನು ಕೊಂದಿದ್ದ ಆರೋಪಿಗಳು ಅರೆಸ್ಟ್

    ವಿವಿ ಕ್ಯಾಂಪಸ್‍ನಲ್ಲಿ ಪ್ರೇಯಸಿಯ ಕತ್ತಿನಲ್ಲಿದ್ದ ಚಿನ್ನಕ್ಕಾಗಿ ಪ್ರಿಯಕರನನ್ನು ಕೊಂದಿದ್ದ ಆರೋಪಿಗಳು ಅರೆಸ್ಟ್

    ಕಲಬುರಗಿ: ಪ್ರೇಯಸಿಯ ಕತ್ತಿನಲ್ಲಿದ್ದ ಚಿನ್ನ ಹಾಗೂ ಮೊಬೈಲ್‍ಗಾಗಿ ಪ್ರಿಯಕರಿಗೆ ಚಾಕು ಇರಿದು ಕೊಲೆಗೈದಿದ್ದ ಇಬ್ಬರು ಆರೋಪಿಗಳನ್ನು ನರೋಣ ಪೊಲೀಸರು ಬಂಧಿಸಿದ್ದಾರೆ.

    ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಮನೋಜ್ ಅಲಿಯಾಸ್ ಪ್ರಸಾದ್ ಮಠಪತ್ತಿ ಕೊಲೆಯಾಗಿದ ದುರ್ದೈವಿ. ಕಲಬುರಗಿ ಹೊರವಲಯದ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಕಳೆದ ತಿಂಗಳು 23ರಂದು ಘಟನೆ ನಡೆದಿದ್ದು, ಕೃತ್ಯ ಎಸಗಿದ್ದ ಕಡಗಂಚಿ ಗ್ರಾಮದ ಶಾಂತಪ್ಪ ದಂಡಘುಟಿ ಹಾಗೂ ಇನ್ನೋರ್ವ ಯುವಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆಗಿದ್ದೇನು?: ಮನೋಜ್ ಹೈದರಾಬಾದ್‍ನಲ್ಲಿ ಕೆಲಸ ಮಾಡುತ್ತಿದ್ದು, ಭಾಲ್ಕಿ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ. ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ ಓದುತ್ತಿದ್ದ ಪ್ರೇಯಸಿಯನ್ನು ಭೇಟಿಯಾಗಲು ಬಂದಿದ್ದ. ಈ ವೇಳೆ ತನ್ನ ಜನ್ಮದಿನ ಇಲ್ಲದಿದ್ದರೂ, ಕೇಂದ್ರಿಯ ವಿಶ್ವವಿದ್ಯಾಲಯದ ಕಟ್ಟಡ ಒಂದರ ಮೇಲೆ ಕೇಕ್ ಕತ್ತರಿಸಿ ಮನೋಜ್ ಸಂಭ್ರಮಿಸಿದ್ದ. ಬಳಿಕ ಕ್ಯಾಂಪಸ್‍ನಲ್ಲಿ ಏಕಾಂತವಾಗಿ ಮನೋಜ್ ತನ್ನ ಪ್ರೇಯಸಿಯ ಜೊತೆಗೆ ಕುಳಿತಿದ್ದ.

    ಕಳ್ಳತನ ಮಾಡಲು ಬಂದಿದ್ದ ಶಾಂತಪ್ಪ ದಂಡಘುಟಿ ಹಾಗೂ ಮತ್ತೋರ್ವ ಯುವಕ ಪ್ರೇಮಿಗಳಿಗೆ ಚಾಕು ತೋರಿಸಿ ಮೊಬೈಲ್ ಹಾಗೂ ಚಿನ್ನದ ಸರ ನೀಡುವಂತೆ ತಿಳಿಸಿದ್ದಾರೆ. ಆದರೆ ಇದಕ್ಕೆ ಹೆದರದ ಮನೋಜ್, ಅವರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಶಾಂತಪ್ಪ ಚಾಕು ಬೀಸಿದ ಪರಿಣಾಮ ಮನೋಜ್ ಕುತ್ತಿಗೆಗೆ ಬಲವಾದ ಹೊಡೆತ ಬಿದ್ದಿದೆ. ಮನೋಜ್ ನಮ್ಮ ಮೇಲೆ ಪ್ರಕರಣ ದಾಖಲಿಸುತ್ತಾನೆ ಎಂದು ಮತ್ತೆ ಹೊಟ್ಟೆಗೆ ಚಾಕುನಿಂದ ಇರಿದು ಕೊಲೆ ಮಾಡಿ, ಯುವತಿಯ ಬಳಿ ಇದ್ದ ಸರ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಮನೋಜ್ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದ. ಈ ಕುರಿತು ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಆರೋಪಿಗಳು ಸಿಕ್ಕಿದ್ದು ಹೇಗೆ?:
    ಯುವತಿಯಿಂದ ಕಿತ್ತುಕೊಂಡು ಬಂದಿದ್ದ ಮೊಬೈಲ್ ಅನ್ನು ತಮ್ಮ ಗ್ರಾಮದ ಕಡಗಂಚಿಯ ನಿವಾಸಿ ಲಕ್ಷ್ಮಣ ಎಂಬವರಿಗೆ ಮಾರಾಟ ಮಾಡಿದ್ದಾರೆ. ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ ಗ್ರಾಮಕ್ಕೆ ಬಂದಿದ್ದ. ಆರೋಪಿಗಳಿಂದ ಕಡಿಮೆ ಬೆಲೆ ಮೊಬೈಲ್ ಪಡೆದಿದ್ದ ಲಕ್ಷ್ಮಣ ಮತ್ತೆ ಪುಣೆಗೆ ಕೆಲಸಕ್ಕೆ ಮರಳಿದ್ದ. ಯುವತಿ ನೀಡಿದ ಮಾಹಿತಿ ಆಧಾರದ ಮೇಲೆ ಫೋನ್ ಟ್ರ್ಯಾಕ್ ಮಾಡಿದ ಪೊಲೀಸರು, ಮೊಬೈಲ್ ಪುಣೆಯಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡು ಲಕ್ಷ್ಮಣನನ್ನು ವಶಕ್ಕೆ ಪಡೆದು, ಕರೆ ತಂದಿದ್ದರು.

    ಲಕ್ಷ್ಮಣನನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣವೇ ಪೊಲೀಸರು ಬಲೆ ಬೀಸಿ ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ನಾವು ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿಲ್ಲ. ಚಾಕು ತಗುಲಿಸಿದ್ದರಿಂದ ಎಲ್ಲಿ ನಮ್ಮ ಹೆಸರು ಹೇಳುತ್ತಾನೆ ಅಂತಾ ಕೊಲೆ ಮಾಡಿದ್ದೇವೆ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ಈ ಹಿಂದೆ ಕ್ಯಾಂಪಸ್ ನಿರ್ಜನ ಪ್ರದೇಶದಲ್ಲಿ ಸಿಗುತ್ತಿದ್ದ ಪ್ರೇಮಿಗಳನ್ನು ಬೆದರಿಸಿ, ಅವರಿಂದ ಹಣ ದೋಚುತ್ತಿದ್ದೇವು ಅಂತಾ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ವಿಶ್ವವಿದ್ಯಾಲಯದಲ್ಲಿ ಸೂಕ್ತ ಭದ್ರತೆ ವ್ಯವಸ್ಥೆ ಇಲ್ಲದಿರುದನ್ನು ಕೆಲ ದುಷ್ಕರ್ಮಿಗಳು ಬಂಡವಾಳ ಮಾಡಿಕೊಂಡಿದ್ದಾರೆ. ಈ ಹಿಂದೆ ಕ್ಯಾಂಪಸ್‍ನಲ್ಲಿ ಕುರಿ ಮೇಯಿಸುವ ನೇಪದಲ್ಲಿ ಬಂದು, ಕಳ್ಳತನ ಮಾಡುತ್ತಿದ್ದರು. ತರಗತಿಗಳು ಮುಗಿದ ಮೇಲೆ ಕ್ಯಾಂಪಸ್‍ನಲ್ಲಿ ಏಕಾಂಗಿಯಾಗಿ ಸಿಗುತ್ತಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕಿ, ಹಣ ದೋಚುತ್ತಿದ್ದರು ಎನ್ನವ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಎಸ್‍ಐಟಿಯಿಂದ ರೆಡ್ಡಿ ಆಪ್ತ ಶ್ರೀನಿವಾಸ್ ರೆಡ್ಡಿ ಬಂಧನ

    ಎಸ್‍ಐಟಿಯಿಂದ ರೆಡ್ಡಿ ಆಪ್ತ ಶ್ರೀನಿವಾಸ್ ರೆಡ್ಡಿ ಬಂಧನ

    ಬಳ್ಳಾರಿ: ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಕೆಡವಲು ಆಪರೇಷನ್ ಕಮಲಕ್ಕೆ ಕೈ ಹಾಕಿದ ಗಾಲಿ ಜನಾರ್ದನ ರೆಡ್ಡಿಗೆ ರಾಜ್ಯ ಸಮಿಶ್ರ ಸರ್ಕಾರ ಶಾಕ್ ಮುಟ್ಟಿಸಿದೆ.

    ಹೌದು, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಾಲಿ ಜನಾರ್ದನ ರೆಡ್ಡಿಯ ಪರಮಾಪ್ತ ಹಾಗೂ ಓಎಂಸಿ ಎಂಡಿ ಶ್ರೀನಿವಾಸ ರೆಡ್ಡಿಯನ್ನು ವಿಶೇಷ ತನಿಖಾ ತಂಡ(ಎಸ್‍ಐಟಿ) ಬಂಧಿಸಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಒಎಂಸಿ ಎಂಡಿ ಶ್ರೀನಿವಾಸರೆಡ್ಡಿಯನ್ನ ಎಸ್‍ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

    ಓಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಈ ಹಿಂದೆಯೂ ಸಹ ಶ್ರೀನಿವಾಸ್ ರೆಡ್ಡಿ ಬಂಧನಕ್ಕೊಳಾಗಿದ್ದರು. ತದನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಐಜಿಪಿ ಚಂದ್ರಶೇಖರ್ ನೇತೃತ್ವದ ಎಸ್‍ಐಟಿ ಶ್ರೀನಿವಾಸರೆಡ್ಡಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವ್ರತಕ್ಕಾಗಿ ಗಂಗೆಯಲ್ಲಿ ಸ್ನಾನ ಮಾಡ್ತಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್!

    ವ್ರತಕ್ಕಾಗಿ ಗಂಗೆಯಲ್ಲಿ ಸ್ನಾನ ಮಾಡ್ತಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್!

    ಪಾಟ್ನಾ: ವ್ರತದ ಹಿನ್ನೆಲೆಯಲ್ಲಿ ಮಹಿಳೆ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಈ ಘಟನೆ ಸೋಮವಾರ ನಡೆದಿದ್ದು, ಶಿವಪುಜಾನ್ ಮಹತ್ವ್ ಮತ್ತು ವಿಶಾಲ್ ಅತ್ಯಾಚಾರ ಎಸಗಿದ್ದ ದುಷ್ಕರ್ಮಿಗಳು. ವ್ರತದ ಹಿನ್ನೆಲೆಯಲ್ಲಿ ಮಹಿಳೆ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಈ ಕೃತ್ಯವನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    ಈ ವಿಡಿಯೋದಲ್ಲಿ ಮಹಿಳೆ ವ್ರತ ಮಾಡಲೆಂದು ಗಂಗಾ ನದಿ ಬಳಿ ಬಂದಿದ್ದಾಳೆ. ಈ ವೇಳೆ ಇಬ್ಬರು ದುಷ್ಕರ್ಮಿಗಳು ಬಂದು ಇಬ್ಬರಲ್ಲಿ ಒಬ್ಬ ನದಿಗೆ ಇಳಿದು ಆಕೆಯನ್ನು ಅತ್ಯಾಚಾರ ಮಾಡಿದ್ದಾನೆ. ಬಳಿಕ ಇನ್ನೊಬ್ಬ ಆಕೆಗೆ ಮೇಲೆ ಬರುವಂತೆ ಬೆದರಿಕೆಯನ್ನು ಹಾಕಿದ್ದಾನೆ.

    ಅತ್ಯಾಚಾರಕ್ಕೊಳಗಾದ ಮಹಿಳೆ ಪ್ರಕರಣವನ್ನು ದಾಖಲಿಸಿರಲಿಲ್ಲ. ಪೊಲೀಸರೇ ವೈರಲ್ ಆದ ವಿಡಿಯೋದಿಂದ ಆರೋಪಿಗಳನ್ನು ಬಂಧಿಸಿದ್ದಾರೆ. ಶಿವಪುಜಾನ್ ಮಹತ್ವ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಆತನನ್ನು ಪಾಟ್ನಾದಲ್ಲಿ ಬಂಧಿಸಲಾಗಿದ್ದು ಮತ್ತೊಬ್ಬ ಆರೋಪಿಯನ್ನು ಬುಧವಾರ ಬೆಳಗ್ಗೆ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ – ಕಂಗನಾ ಹೇರ್ ಸ್ಟೈಲಿಸ್ಟ್ ಬಂಧನ

    ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ – ಕಂಗನಾ ಹೇರ್ ಸ್ಟೈಲಿಸ್ಟ್ ಬಂಧನ

    ಹೈದರಾಬಾದ್: 16 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರ ಕೇಶ ವಿನ್ಯಾಸಕನನ್ನು ಪೊಲೀಸರು ಬಂಧಿಸಿದ್ದಾರೆ.

    ಬ್ರ್ಯಾಂಡನ್ ಅಲಿಸ್ಟರ್ ಡಿ ಗೀ(42) ಬಂಧಿಸಿರುವ ಕೇಶ ವಿನ್ಯಾಸಕ. ಈತ ದಕ್ಷಿಣ ಆಫ್ರಿಕಾದದಲ್ಲಿ ಕೇಶ ವಿನ್ಯಾಸಕನಾಗಿ ವೃತ್ತಿ ಜೀವನವನ್ನು ಆರಂಭಿಸಿದ್ದನು. ಕಂಗನಾ ಅವರ ಮುಂದಿನ ‘ಮಣಿಕರ್ಣಿಕಾ’ ಸಿನಿಮಾದ ಶೂಟಿಂಗ್ ಮಹಾರಾಷ್ಟ್ರದ ರಾಯ್ಗಡ ಜಿಲ್ಲೆಯಲ್ಲಿ ನಡೆಯುತ್ತಿತ್ತು. ಈ ವೇಳೆ ಪೊಲೀಸರು ಶೂಟಿಂಗ್ ಸೆಟ್ ಗೆ ಬಂದು ಬ್ರ್ಯಾಂಡನ್ ನನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    16 ವರ್ಷದ ಬಾಲಕ ಸಾಮಾಜಿಕ ಜಾಲತಾಣದ ಡೇಟಿಂಗ್ ಆ್ಯಪ್ ನಲ್ಲಿ ತನ್ನ ವಯಸ್ಸು 18 ದಾಟಿದೆ ಎಂದು ಸುಳ್ಳು ಹೇಳಿ ಸೇರಿದ್ದನು. ಈ ಆ್ಯಪ್ ಮೂಲಕ ಆರೋಪಿ ಬ್ರ್ಯಾಂಡನ್ ಪರಿಚಯವಾಗಿದ್ದನು. ಆದರೆ ಆತ ಅನೇಕ ಪುರುಷರ ಜತೆ ಸಂಬಂಧ ಕೂಡ ಬೆಳಸಿದ್ದನು. ಒಂದು ದಿನ ಬಾಲಕನ ರೂಮಿನಲ್ಲಿ ಅಪರಿಚಿತ ವ್ಯಕ್ತಿಯೊಂದಿಗೆ ಇರುವುದನ್ನು ತಾಯಿ ನೋಡಿದ್ದಾರೆ. ನಂತರ ಬಾಲಕ ತಾನು ಅನೇಕ ಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೂಡಲೇ ಈ ಬಗ್ಗೆ ಬಾಲಕನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಖಾರ್ ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಆರೋಪಿ ಬ್ರ್ಯಾಂಡನ್ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಯನ್ನು ಕೋರ್ಟ್ ಮುಂದೆ ಪೊಲೀಸರು ಹಾಜರುಪಡಿಸಿದ್ದಾರೆ. ಕೋರ್ಟ್ ಅಕ್ಟೋಬರ್ 3 ರವರೆಗೆ ಬ್ರ್ಯಾಂಡನ್ ನನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಕ ಮತ್ತು ಉದ್ಯಮಿ ಸೇರಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • Facebookನಲ್ಲಿ ಸಮಾಜಸೇವಕಿಗೆ ಅವಾಚ್ಯ ಪದಗಳಿಂದ ನಿಂದನೆ-ಖಾಸಗಿ ಕಂಪೆನಿ ನೌಕರನ ಬಂಧನ!

    Facebookನಲ್ಲಿ ಸಮಾಜಸೇವಕಿಗೆ ಅವಾಚ್ಯ ಪದಗಳಿಂದ ನಿಂದನೆ-ಖಾಸಗಿ ಕಂಪೆನಿ ನೌಕರನ ಬಂಧನ!

    ಮೈಸೂರು: ಫೇಸ್‍ಬುಕ್ ನಲ್ಲಿ ಸಮಾಜ ಸೇವಕಿವೊಬ್ಬರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದ ಮೇಲೆ ಖಾಸಗಿ ಕಂಪೆನಿ ನೌಕರನನ್ನು ಮೈಸೂರಿನ ಕೆ.ಆರ್. ಠಾಣಾ ಪೊಲೀಸರು ಬಂಧಿಸಿದ್ದಾರೆ.

    ಹೂಟಗಳ್ಳಿ ಕೈಗಾರಿಕಾ ಬಡಾವಣೆಯ ಡೆಟಾಲ್ ಕಂಪೆನಿಯ ನೌಕರ ರವಿ.ಕೆ.ಗೌಡ ಬಂಧಿತ ಆರೋಪಿ. ರವಿ ಮೂಲತಃ ಹುಣಸೂರು ತಾಲೂಕಿನ ಕಲ್ಕುಣಿಕೆ ಗ್ರಾಮದವನಾಗಿದ್ದು, ಮೈಸೂರಿನ ಹೊಸಬಂಡೀಕೇರಿಯ ಹಾಗೂ ಸಮಾಜಸೇವಕಿಯಾಗಿರುವ ಚೈತ್ರ ಎಂಬ ಯುವತಿಗೆ ಫೇಸ್ ಬುಕ್‍ನಲ್ಲಿ ಅಶ್ಲೀಲ ಪದಗಳನ್ನು ಬಳಸಿ ಚಾಟ್ ಮಾಡಿದ್ದಾನೆ. ಈ ಮೊದಲು ರವಿ ಹಾಗೂ ಚೈತ್ರ ಒಂದೂವರೆ ವರ್ಷದಿಂದ ಫೇಸ್ ಬುಕ್ ನಲ್ಲಿ ಪರಿಚಿತರಾಗಿದ್ದರು.

    ಕೆಲ ದಿನಗಳ ಹಿಂದೆ ಚೈತ್ರ ಹಾಕಿದ ಪೋಸ್ಟ್ ಒಂದಕ್ಕೆ ರವಿ ಗೌಡ ಕೆಟ್ಟದಾಗಿ ಕಮೆಂಟ್ ಮಾಡಿದ್ದಾನೆ. ಅಲ್ಲಿಂದ ಶುರುವಾದ ಇಬ್ಬರ ಸಂಭಾಷಣೆ ಹಾದಿ ತಪ್ಪಿದ್ದು, ಚೈತ್ರಾಗೆ ಅಶ್ಲೀಲವಾಗಿ ಕಮೆಂಟ್‍ಗಳನ್ನು ಹಾಕಿದ್ದಾನೆ. ಇದರಿಂದ ನೊಂದ ಯುವತಿ ನಗರದ ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಸಭ್ಯವಾಗಿ ಯುವತಿಯೊಂದಿಗೆ ಜಾಲತಾಣಗಳಲ್ಲಿ ವರ್ತಿಸಿದ ಹಿನ್ನೆಲೆಯಲ್ಲಿ ರವಿ ಗೌಡನನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv