Tag: arrest

  • ಹಿಂದೆಯಿಂದ ಹೋಗಿ ಲಾಕ್ ಮಾಡ್ಕೊಂಡು ಕಂಪನಿಯ ಬಾತ್‍ರೂಂನಲ್ಲೇ ರೇಪ್ – ಕಾಮುಕ ಅರೆಸ್ಟ್

    ಹಿಂದೆಯಿಂದ ಹೋಗಿ ಲಾಕ್ ಮಾಡ್ಕೊಂಡು ಕಂಪನಿಯ ಬಾತ್‍ರೂಂನಲ್ಲೇ ರೇಪ್ – ಕಾಮುಕ ಅರೆಸ್ಟ್

    ಬೆಂಗಳೂರು: ಕೆಲಸದಾಕೆಯ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಿ ಸೂಪರ್ ವೈಸರ್ ನನ್ನು ನಗರದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮೋಹನ್ ಬಾಬು ಬಂಧಿತ ಆರೋಪಿ. ಈತನನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮೂರು ದಿನಗಳ ಹಿಂದೆಯೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಮೂರು ದಿನಗಳ ಹಿಂದೆಯೇ ಅದೇ ಕಂಪನಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಮೋಹನ್ ಬಾಬು ಮಾರತಹಳ್ಳಿಯ ಔಟರ್ ರಿಂಗ್ ರೋಡ್ ಬಳಿ ಇರುವ ಖಾಸಗಿ ಕಂಪೆನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದನು. ಅದೇ ಕಂಪನಿಯಲ್ಲಿ ಮಹಿಳೆಯೊಬ್ಬರು ಕೂಲಿ ಕೆಲಸ ಮಾಡುತ್ತಿದ್ದರು. ಒಂದು ದಿನ ಆರೋಪಿ ಮಹಿಳೆಯನ್ನ ಬಾತ್ ರೂಂ ಕ್ಲೀನ್ ಮಾಡು ಎಂದು ಹೇಳಿದ್ದಾನೆ. ನಂತರ ಮಹಿಳೆಗೆ ಬಾತ್ ರೂಂ ಕ್ಲೀನ್ ಮಾಡಲು ಹೋಗಿದ್ದಾರೆ.

    ಮಹಿಳೆ ಬಾತ್ ರೂಮಿಗೆ ಹೋಗುತ್ತಿದ್ದಂತೆ ತಾನು ಹಿಂದೆಯಿಂದ ಹೋಗಿ ರೂಮ್ ಲಾಕ್ ಮಾಡಿಕೊಂಡು ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯಕ್ಕೆ ಮಾರತಹಳ್ಳಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂದೇ ರಾತ್ರಿ, ಬೇರೆ ಬೇರೆ ಸ್ಥಳದಲ್ಲಿ 10 ಮಂದಿ ಕಾಮುಕರಿಂದ ಗ್ಯಾಂಗ್‍ರೇಪ್

    ಒಂದೇ ರಾತ್ರಿ, ಬೇರೆ ಬೇರೆ ಸ್ಥಳದಲ್ಲಿ 10 ಮಂದಿ ಕಾಮುಕರಿಂದ ಗ್ಯಾಂಗ್‍ರೇಪ್

    -ಆಶ್ರಯ ನೀಡಿದ್ದ ಗೆಳೆಯನು ರೇಪ್ ಮಾಡ್ದ

    ಚಂಡೀಗಢ: 24 ವರ್ಷದ ಯುವತಿ ಮೇಲೆ ಆಕೆಯ ಸ್ನೇಹಿತ ಸೇರಿದಂತೆ ಒಂದೇ ದಿನ ಹತ್ತು ಮಂದಿ ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಪಂಜಾಬ್ ನಲ್ಲಿ ನಡೆದಿದೆ.

    ಈ ಘಟನೆ ಅಕ್ಟೋಬರ್ 10 ರಂದು ಪಂಜಾಬ್ ನ ಕಪುರ್ಥಾಲಾ ಜಿಲ್ಲೆಯ ಲಖನ್ಪುರ್ ಖೊಲೆ ಮತ್ತು ದಯಾಲ್ಪುರ್ ಗ್ರಾಮಗಳಲ್ಲಿ ಎರಡು ಕಡೆ ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಘಟನೆ ಕುರಿತಂತೆ ನಾವು ಸಾಮೂಹಿಕ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿದ್ದೇವೆ. 10 ಮಂದಿ ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸಿದ್ದೇವೆ. ಉಳಿದವರು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ತಂಡಗಳನ್ನು ರಚಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಸತ್ನಾಮ್ ಸಿಂಗ್ ತಿಳಿಸಿದ್ದಾರೆ.

    ಏನಿದು ಪ್ರಕರಣ
    5 ತಿಂಗಳ ಹಿಂದೆ ಸಂತ್ರಸ್ತೆ ಭೋಲು ಎಂಬ ವ್ಯಕ್ತಿಯನ್ನು ಭೇಟಿಯಾಗಿದ್ದಾರೆ. ಆತ ಡ್ರಗ್ ವ್ಯಸನಿಯಾಗಿದ್ದನು ಎಂದು ದೂರಿನಲ್ಲಿ ತಿಳಿಸಿದ್ದಾರೆ. ದಿನಕಳೆದಂತೆ ಆಕೆಯೂ ಡ್ರಗ್ ತೆಗೆದುಕೊಳ್ಳಲು ಪ್ರಾರಂಭಿಸಿದ್ದರು. ಭೋಲು ಸೋನು ಎಂಬಾತನ್ನು ಪರಿಚಯಿಸಿದ್ದಾನೆ. ಆತ ಸಂತ್ರಸ್ತೆಯನ್ನು ಪ್ರತಿದಿನ ಭೇಟಿ ಮಾಡಲು ಪ್ರಾರಂಭಿಸಿದ್ದನು. ಸೋನು ಸ್ನೇಹಿತ ಸಿರಿಯಿಂದ ಸಂತ್ರಸ್ತೆ ಬಾಡಿಗೆಗೆ ಮನೆ ತೆಗೆದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಅಕ್ಟೋಬರ್ 10 ರಂದು ಸಿರಿ ತನ್ನ ಹುಟ್ಟುಹಬ್ಬದ ಆಚರಣೆಗಾಗಿ ತನ್ನ ಸ್ನೇಹಿತರನ್ನು ಆಹ್ವಾನಿಸಿದ್ದನು. ಅಂದಿನ ದಿನವೇ ಸಂತ್ರಸ್ತೆಯನ್ನು ಸಮೀಪದ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆರು ಮಂದಿ ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಕಾಮುಕರು ಅತ್ಯಾಚಾರ ಮಾಡುವಾಗ ಸಂತ್ರಸ್ತೆಯ ಕೂಗಿನ ಶಬ್ದ ಯಾರಿಗೂ ಕೇಳಬಾರದು ಎಂದು ಜೋರಾಗಿ ಮ್ಯೂಜಿಕ್ ಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ನಂತರ ಸಂತ್ರಸ್ತೆ ಅಲ್ಲಿಂದ ತಪ್ಪಿಸಿಕೊಂಡು ದಯಾಲ್ಪುರ್ ಗ್ರಾಮದಲ್ಲಿ ತನ್ನ ಪರಿಚಯಸ್ಥನಾದ ಸತ್ಪಾಲ್ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಆದರೆ ಅದೇ ದಿನ ಸತ್ಪಾಲ್ ಸ್ನೇಹಿತೆ ಎಂದು ನೋಡದೇ ತನ್ನ ಮೂವರು ಸ್ನೇಹಿತರಾದ ಸುಖ್ವಿಂದರ್ ಸಿಂಗ್, ರವೀಂದರ್ ಸಿಂಗ್ ಮತ್ತು ಕುಲ್ವಿಂದರ್ ಸಿಂಗ್ ಜೊತೆ ಸೇರಿ ಸಂತ್ರಸ್ತೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಇವರೆಲ್ಲರೂ ಸ್ಥಳೀಯ ಕೈಗಾರಿಕಾ ಘಟಕದ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

    ಸಂತ್ರಸ್ತೆ ಅಕ್ಟೋಬರ್ 11ರಂದು ಬೆಳಗ್ಗೆ ತನ್ನ ಬಾಡಿಗೆ ಮನೆಗೆ ಬಂದಿದ್ದಾರೆ. ಅಲ್ಲಿ ನಡೆದ ಘಟನೆಯ ಬಗ್ಗೆ ಆರೋಪಿ ಹಿರಿಯ ಅಜ್ಜಿ ಮತ್ತು ಚಿಕ್ಕಮ್ಮನ ಬಳಿ ಹೇಳಿಕೊಂಡಿದ್ದಾರೆ. ಆದರೆ ಸಂತ್ರಸ್ತೆಗೆ ಸಹಾಯ ಮಾಡುವ ಬದಲು ಆಕೆಯ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ್ದಾರೆ. ಕೊನೆಗೆ ನೊಂದ ಸಂತ್ರಸ್ತೆ ಸುಭಾನ್ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸಂತ್ರಸ್ತೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ದೃಢವಾಗಿದೆ. ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾವು 10 ಮಂದಿ ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸಿದ್ದು, ಉಳಿದವರಿಗಾಗಿ ಬಲೆ ಬೀಸಿದ್ದೇವೆ ಎಂದು ಸತ್ನಾಮ್ ಸಿಂಗ್ ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೈಸ್ಕೂಲ್ ಪ್ರಾಂಶುಪಾಲರ ಕೊಲೆ ಪ್ರಕರಣ: ಆರೋಪಿಗೆ ಗುಂಡಿಟ್ಟು ಬಂಧಿಸಿದ ಪೊಲೀಸರು

    ಹೈಸ್ಕೂಲ್ ಪ್ರಾಂಶುಪಾಲರ ಕೊಲೆ ಪ್ರಕರಣ: ಆರೋಪಿಗೆ ಗುಂಡಿಟ್ಟು ಬಂಧಿಸಿದ ಪೊಲೀಸರು

    ಬೆಂಗಳೂರು: ಹಾಡಹಗಲೇ ಅಗ್ರಹಾರ ದಾಸರಹಳ್ಳಿಯ ಬಳಿ ಪ್ರಾಂಶುಪಾಲರನ್ನು ಹತ್ಯೆಮಾಡಿದ್ದ ಆರೋಪಿಯನ್ನು ಮಾಗಡಿ ರೋಡ್ ಪೊಲೀಸರು ಗುಂಡಿಕ್ಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಇಂದು ಬೆಳಗ್ಗೆ ಅಗ್ರಹಾರ ದಾಸರಹಳ್ಳಿಯ ಹಾವನೂರು ಪಬ್ಲಿಕ್ ಶಾಲೆಯಲ್ಲಿ, ವಿಶೇಷ ತರಗತಿ ನಡೆಸುತ್ತಿದ್ದ ಪ್ರಾಂಶುಪಾಲ ರಂಗನಾಥ್ ರವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಹತ್ಯೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಾಗಡಿ ರೋಡ್ ಪೊಲೀಸರು ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದರು.

    ಪ್ರಾಂಶುಪಾಲರ ಹತ್ಯೆಯಲ್ಲಿ ಬಬ್ಲಿ ಅಲಿಯಾಸ್ ಮುನಿರಾಜು ಪ್ರಮುಖ ಆರೋಪಿಯಾಗಿದ್ದನೆಂದು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯ ಪ್ರವೃತರಾದ ಪೊಲೀಸರು ಆರೋಪಿ ಬಬ್ಲಿ ಮಹಾಲಕ್ಷ್ಮೀ ಲೇಔಟ್‍ನ ಕಿರ್ಲೋಸ್ಕರ್ ಪೌಂಡ್ರಿ ಬಳಿ ಇರುವುದನ್ನು ಪತ್ತೆ ಹಚ್ಚಿ ದಾಳಿ ನಡೆಸಿದ್ದರು. ದಾಳಿ ವೇಳೆ ಪೊಲೀಸರ ಮೇಲೆಯೇ ಬಬ್ಲಿ ಹಲ್ಲೆಗೆ ಯತ್ನಿಸಿದ್ದನು. ಕೂಡಲೇ ಎಚ್ಚೆತ್ತ ಮಾಗಡಿ ರೋಡ್ ಇನ್ಸ್‍ಪೆಕ್ಟರ್ ಹೇಮಂತ್ ಕುಮಾರ್ ಆತ್ಮ ರಕ್ಷಣೆಗಾಗಿ ಬಬ್ಲಿ ಮೇಲೆ ಫೈರಿಂಗ್ ಮಾಡಿದ್ದರು.

    ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಸದ್ಯ ಆರೋಪಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿದ್ಯಾರ್ಥಿಗಳ ಎದುರೇ ಬೆಂಗಳೂರು ಹೈಸ್ಕೂಲ್ ಪ್ರಾಂಶುಪಾಲರ ಬರ್ಬರ ಹತ್ಯೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಾಯಿ ಮೇಲೆ ಪ್ರಿಯಕರ ಮಲಗಿದ್ದನ್ನ ಕಂಡ ಮಗ – ಅಪ್ಪನಿಗೆ ಹೇಳ್ತೀನಿ ಅಂದಿದ್ದೇ ತಪ್ಪಾಯ್ತು!

    ತಾಯಿ ಮೇಲೆ ಪ್ರಿಯಕರ ಮಲಗಿದ್ದನ್ನ ಕಂಡ ಮಗ – ಅಪ್ಪನಿಗೆ ಹೇಳ್ತೀನಿ ಅಂದಿದ್ದೇ ತಪ್ಪಾಯ್ತು!

    ಚಾಮರಾಜನಗರ: ತನ್ನ ಅಕ್ರಮ ಸಂಬಂಧದ ಬಗ್ಗೆ ಮಗನಿಗೆ ಗೊತ್ತಾಗುತ್ತಿದ್ದಂತೆ ತಾಯಿಯೊಬ್ಬಳು ಮಗನ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸಿಲ್ಕಲ್ ಪುರ ಗ್ರಾಮದಲ್ಲಿ ನಡೆದಿದೆ.

    ಪ್ರೀತಂ (7) ತಾಯಿಯಿಂದ ಕೊಲೆಯಾದ ದುರ್ದೈವಿ. ಬಾಲಕನ ತಾಯಿ ಸಾಕಮ್ಮ(31) ಪ್ರಿಯಕರ ನಾಗರಾಜು ಜೊತೆ ಸೇರಿ ಮಗನನ್ನೇ ಕೊಂದಿದ್ದಾಳೆ. ಈ ಘಟನೆ ಅಕ್ಟೋಬರ್ 6 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    “ಅಕ್ಟೋಬರ್ 5 ಶುಕ್ರವಾರ ರಾತ್ರಿ ಮನೆಯಲ್ಲಿ ನಾನು ಇರಲಿಲ್ಲ. ಮಲಗಿದ್ದ ಮಗ ಪ್ರೀತಂಗೆ ರಾತ್ರಿ 11 ಗಂಟೆಯ ವೇಳೆಗೆ ಎಚ್ಚರ ಆಗಿತ್ತು. ತನ್ನ ತಾಯಿ ಸಾಕಮ್ಮಳ ಮೇಲೆ ಪ್ರಿಯಕರ ನಾಗರಾಜು ಮಲಗಿದ್ದ. ಇದನ್ನು ನೋಡಿದ ಪ್ರೀತಂ, ಅಪ್ಪ ಬರಲಿ ಹೇಳುತ್ತೇನೆ. ಅಮ್ಮನ ಮೇಲೆ ಏಕೆ ಮಲಗಿದ್ದೀಯಾ ಎಂದು ಕೇಳಿದ್ದಾನೆ. ನಂತರ ಸಾಕಮ್ಮ ಆತನಿಗೆ ಹೊಡೆದು ಮಲಗಿಸಿ ಬಿಟ್ಟಿದ್ದಳು. ಮಗ ಮಲಗಿದ ನಂತರ ಇಬ್ಬರು ಸೇರಿ ಹೆತ್ತ ಮಗನನ್ನೇ ಕೊಲೆ ಮಾಡಲು ಪ್ಲಾನ್ ಮಾಡಿದ್ದರು” ಎಂದು ಬಾಲಕನ ತಂದೆ ನಂಜುಂಡಸ್ವಾಮಿ ಅವರು ಹೇಳಿದ್ದಾರೆ.

    ಮರುದಿನ ಶನಿವಾರ ಆಗಿದ್ದರಿಂದ ಪ್ರೀತಂ ಬೆಳಗ್ಗೆ ಶಾಲೆ ಮುಗಿಸಿಕೊಂಡು ಮನೆಗೆ ಬಂದು ಊಟ ಮಾಡಿ ಹೊರಗೆ ಆಟ ಆಡಲು ಹೋಗಿದ್ದನು. ಮನೆಗೆ ತಂದೆ ನಂಜುಂಡಸ್ವಾಮಿ ಬಂದಿರಲಿಲ್ಲ. ನಂಜುಂಡಸ್ವಾಮಿ ಶುಕ್ರವಾರ ರಾತ್ರಿ ಅಡುಗೆ ಕಾಂಟ್ರಾಕ್ಟ್ ಇದ್ದರಿಂದ ಕೆಲಸ ಮುಗಿಸಿ ಶನಿವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಮನೆಗೆ ಬಂದಿದ್ದಾನೆ. ಮನೆಗೆ ಬಂದಾಗ ಮಗ ಎಲ್ಲಿ ಎಂದು ಪತ್ನಿ ಸಾಕಮ್ಮಳನ್ನ ಕೇಳಿದ್ದಾನೆ. ಈ ವೇಳೆ ಮಗನಿಗೆ ಊಟ ಮಾಡಿಸಿದ್ದೇನೆ. ಹೊರಗೆ ಆಟ ಆಡಲು ಹೋಗುವುದಾಗಿ ಹೇಳಿ ಹೋಗಿದ್ದಾನೆ ಎಂದು ಹೇಳಿದ್ದಾಳೆ. ನಂತರ ಸಂಜೆಯಾದ್ರೂ ಮಗ ಮನೆಗೆ ಬರದೇ ಇದ್ದಾಗ ಇಬ್ಬರು ಸೇರಿ ಊರು, ಜಮೀನು ಹುಡುಕಿದ್ದಾರೆ. ಆದರೆ ಎಲ್ಲೂ ಪ್ರೀತಂ ಪತ್ತೆಯಾಗಿಲ್ಲ. ಭಾನುವಾರ ಕೊಳ್ಳೇಗಾಲ ಪೊಲೀಸ್ ಠಾಣೆಗೆ ಹೋಗಿ ನಂಜುಂಡಸ್ವಾಮಿ ಮಗ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲು ಮಾಡಿದ್ದರು. ಅಕ್ಟೋಬರ್ 9 ಮಂಗಳವಾರ ಸಂಜೆ ವೇಳೆಗೆ ಸಿಲ್ಕಲ್ ಪುರ ಗ್ರಾಮದ ಕೆರೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ ಎಂದು ಬಾಲಕನ ಅಜ್ಜಿ ನಾಗಮ್ಮ ಹೇಳಿದ್ದಾರೆ.

    ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಮಗುವಿನ ಶವ ಸಿಗುತ್ತಿದ್ದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬುಧವಾರ ಮಗುವಿನ ಅಂತ್ಯಕ್ರೀಯೆ ನಡೆಸಿದ ಮರುದಿನ ಪೊಲೀಸರು ನಂಜುಂಡಸ್ವಾಮಿ ಮತ್ತು ಸಾಕಮ್ಮಳನ್ನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸಾಕಮ್ಮ ಶುಕ್ರವಾರ ನಡೆದಿದ್ದ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಗಂಡನಿಗೆ ಅನೈತಿಕ ಸಂಬಂಧ ತಿಳಿಯಬಾರದು ಎಂಬ ಉದ್ದೇಶದಿಂದ ಪ್ರಿಯಕರ ನಾಗರಾಜು ಜೊತೆಗೆ ಸೇರಿ ಮಗ ಪ್ರೀತಂನ ಕುತ್ತಿಗೆಯನ್ನ ಹಿಸುಕಿ ಕೊಲೆ ಮಾಡಿದ್ದೇವು. ಶನಿವಾರ ಶಾಲೆ ಮುಗಿಸಿಕೊಂಡು ಬಂದ ಪ್ರೀತಂ ನನ್ನ ಚಾಕ್ಲೇಟ್ ಕೊಡಿಸುವುದಾಗಿ ಜಮೀನಿನ ಬಳಿ ಕರೆದು ನಂತರ ಆತನನ್ನ ಕೊಲೆ ಮಾಡಿ ಗ್ರಾಮದ ಹೊರ ವಲಯದಲ್ಲಿದ್ದ ಕೆರೆಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಅವರು ತಿಳಿಸಿದ್ದಾರೆ.

    ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರ ವಿಚಾರಣೆಯಿಂದ ಸತ್ಯ ಹೊರ ಬರುತ್ತಿದ್ದಂತೆ ಪ್ರಿಯಕರ ನಾಗರಾಜುನನ್ನ ಪೊಲೀಸರು ಬಂಧಿಸಿದ್ದಾರೆ. ನಂತರ ಕೊಲೆ ಮಾಡಿದ ಸ್ಥಳಗಳಿಗೆ ನಾಗರಾಜುನನ್ನು ಕರೆದುಕೊಂಡು ಹೋಗಿ ತನಿಖೆ ಮಾಡಿದ್ದಾರೆ. ಆರೋಪಿ ಸಾಕಮ್ಮಳನ್ನು ಮೈಸೂರಿನ ಜೈಲಿಗೆ ರವಾನಿಸಿದ್ದಾರೆ. ತಮ್ಮ ಕಾಮದಾಟಕ್ಕೆ ಹೆತ್ತ ಮಗನನ್ನೇ ಬಲಿ ಕೊಟ್ಟ ಆಕೆಗೆ ಕಠಿಣವಾದ ಶಿಕ್ಷೆ ನೀಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂದೇ ಕೈ ಇದ್ರೂ ಲಾಂಗ್ ಹಿಡಿದು ದರೋಡೆ ಮಾಡ್ತಿದ್ದ ಗ್ಯಾಂಗ್‍ಲೀಡರ್ ಅಂದರ್!

    ಒಂದೇ ಕೈ ಇದ್ರೂ ಲಾಂಗ್ ಹಿಡಿದು ದರೋಡೆ ಮಾಡ್ತಿದ್ದ ಗ್ಯಾಂಗ್‍ಲೀಡರ್ ಅಂದರ್!

    ಬೆಂಗಳೂರು: ಒಂದೇ ಕೈ ಇದ್ದರೂ ಲಾಂಗ್, ಮಚ್ಚು ಹಿಡಿದು ಸಾರ್ವಜನಿಕರನ್ನು ಬೆದರಿಸಿ ದರೋಡೆ ಎಸಗುತ್ತಿದ್ದ ಗ್ಯಾಂಗ್ ಲೀಡರ್ ನನ್ನು ಪೊಲೀಸರು ಬಂಧಿಸಿದ್ದಾರೆ.

    ರೌಡಿ ಮನೋಜ್ ಅಲಿಯಾಸ್ ಮನುವನ್ನು ಈಗ ಬಸವೇಶ್ವರ ಪೊಲೀಸರು ಬಂಧಿಸಿದ್ದಾರೆ. ಒಂದೇ ಕೈಯಲ್ಲಿ ಲಾಂಗ್ ಹಿಡಿದು ದರೋಡೆಗೆ ಮಾಡುವ ಮೂಲಕ ನಿರ್ಜನ ಪ್ರದೇಶದಲ್ಲಿ ಓಡಾಡುವ ಜನರನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುವ ಕಾಯಕ ಮಾಡಿಕೊಂಡಿದ್ದ.

    ಈತ ಸ್ವತಃ ಗ್ಯಾಂಗ್‍ವೊಂದನ್ನು ಕೂಡ ಕಟ್ಟಿಕೊಂಡಿದ್ದು, ಪ್ರಮುಖವಾಗಿ ಸಾಫ್ಟ್ ವೇರ್ ಉದ್ಯೋಗಿಗಳನ್ನು ಗುರಿ ಮಾಡಿ ಮಾರಕಾಸ್ತ್ರಗಳಿಂದ ಬೆದರಿಸಿ ಹಣ, ಮೊಬೈಲ್ ಕಸಿದುಕೊಳ್ಳುವ ಕೃತ್ಯದಲ್ಲಿ ಈ ತಂಡ ಭಾಗಿಯಾಗಿತ್ತು.

    ಈ ಗ್ಯಾಂಗ್ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ಮಾಡುವ ಭಯಾನಕ ಕೃತ್ಯ ಬಸವೇಶ್ವರ ನಗರದ ವಾಟಾಳ್ ನಾಗರಾಜ್ ರಸ್ತೆಯ ಸಿಸಿಟಿವಿವೊಂದರಲ್ಲಿ ಸೆರೆಯಾಗಿದೆ. ಸದ್ಯ ಲಭ್ಯವಾಗಿರುವ ವಿಡಿಯೋ ಆಧರಿಸಿ ಬಸವೇಶ್ವರ ನಗರ ಪೊಲೀಸರು ಆರೋಪಿ ಮನೋಜ್ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಅಂದಹಾಗೇ ರೌಡಿ ಮನೋಜ್‍ಗೆ ಬಲಗೈ ಇಲ್ಲ. ಅದ್ರೂ ಎಡಗೈಯಲ್ಲಿ ಲಾಂಗ್ ಹಿಡಿಯುವ ಒಂಟಿ ಕೈ ರೌಡಿ ಮನೋಜ್ ಅಂಡ್ ಗ್ಯಾಂಗ್ ನ ತಡರಾತ್ರಿ ವಾಹನ ಸವಾರನ್ನು ಬೆದರಿಸಿ ದರೋಡೆ ಮಾಡುವ ವೃತ್ತಿ ಮಾಡಿಕೊಂಡಿದೆ. ರಾಜಾಜಿನಗರ, ಎಚ್‍ಎಸ್‍ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಹತ್ತಕ್ಕೂ ಹೆಚ್ಚು ದರೋಡೆ ಪ್ರಕರಣದಲ್ಲಿ ಈ ಗ್ಯಾಂಗ್ ಭಾಗಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಡುರಸ್ತೆಯಲ್ಲೇ ಟ್ರಾಫಿಕ್ ಪೊಲೀಸರ ಮೇಲೆ ಕುಡುಕನಿಂದ ಹಲ್ಲೆ!- ವಿಡಿಯೋ

    ನಡುರಸ್ತೆಯಲ್ಲೇ ಟ್ರಾಫಿಕ್ ಪೊಲೀಸರ ಮೇಲೆ ಕುಡುಕನಿಂದ ಹಲ್ಲೆ!- ವಿಡಿಯೋ

    ದಾವಣಗೆರೆ: ಕುಡುಕನೊಬ್ಬ ನಡುರಸ್ತೆಯಲ್ಲೇ ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ದಾವಣಗೆರೆಯ ಹದಡಿ ರೋಡ್ ಬಳಿ ನಡೆದಿದೆ.

    ಕಂಠಪೂರ್ತಿ ಕುಡಿದಿದ್ದ ರುದ್ರೇಶ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪೊಲೀಸರು ಹದಡಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ರುದ್ರೇಶ್ ಬೈಕನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಇದಕ್ಕೆ ಸಿಟ್ಟಾದ ರುದ್ರೇಶ್ ಎಎಸ್‍ಐ ಅಂಜಿನಪ್ಪ, ಪೇದೆ ಸಿದ್ದೇಶ್, ಹಾಗೂ ಮುಖ್ಯ ಪೇದೆ ನಾರಾಯಣರಾಜ್ ಅರಸು ಮೇಲೆ ಹಲ್ಲೆ ನಡೆಸಿದ್ದಾನೆ.

    ಬೆಳಗ್ಗಿನ ಸಮಯದಲ್ಲಿ ಡ್ರಿಂಕ್ ಅಂಡ್ ಡ್ರೈವ್ ಪರೀಕ್ಷೆ ಏಕೆ ನಡೆಸುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ ರುದ್ರೇಶ್‍ಗೆ ಪೊಲೀಸರು ಠಾಣೆಗೆ ಬರುವಂತೆ ಸೂಚಿಸಿದ ವೇಳೆ ಏಕಾಏಕಿ ಪೊಲೀಸರ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾನೆ. ಅಲ್ಲದೇ ರಸ್ತೆ ಬದಿ ವ್ಯಾಪಾರ ನಡೆಸಿದ್ದ ತರಕಾರಿ ಹಾಗೂ ಗೊಂಬೆಗಳನ್ನು ಎತ್ತಿ ಪೊಲೀಸ್ ಪೇದೆಗಳ ಮೇಲೆ ದಾಳಿ ನಡೆಸಿದ್ದಾನೆ. ಮುಖ್ಯ ಪೇದೆ ಅರಸು ಅವರ ಹಣೆಗೆ ಬಲವಾದ ಪೆಟ್ಟು ಬಿದ್ದಿದ್ದು ಈಗ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಹಲ್ಲೆ ನಡೆಸಿದ ರುದ್ರೇಶ್ ವಕೀಲ ವೃತ್ತಿ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಸದ್ಯ ಕೆಟಿಜೆ ನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದ ಪೊಲೀಸ್ ಪದೆಗಳು ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಡವಾಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=MyojsAvB18c

  • ಅಪ್ರಾಪ್ತೆಯ ಮೇಲೆ ಯುವಕರಿಬ್ಬರಿಂದ ಅತ್ಯಾಚಾರ ಮಾಡಿಸಿದ್ಳು – ನಂತ್ರ ಯುವಕರನ್ನೇ ಹನಿಟ್ರ್ಯಾಪ್ ಮಾಡಿದ್ಳು

    ಅಪ್ರಾಪ್ತೆಯ ಮೇಲೆ ಯುವಕರಿಬ್ಬರಿಂದ ಅತ್ಯಾಚಾರ ಮಾಡಿಸಿದ್ಳು – ನಂತ್ರ ಯುವಕರನ್ನೇ ಹನಿಟ್ರ್ಯಾಪ್ ಮಾಡಿದ್ಳು

    ಹಾಸನ: ಹೊರ ಜಗತ್ತಿಗೆ ತಾನು ರೈತರು, ಮಹಿಳೆಯರ ಪರ ಹೋರಾಟ ಮಾಡುವಾಕೆ ಎಂದು ಬಿಂಬಿಸಿಕೊಂಡಿದ್ದು, ಈಗ ಅಪ್ರಾಪ್ತೆಯನ್ನು ಲೈಂಗಿಕ ಚಟುವಟಿಕೆಗೆ ದೂಡಿದ್ದಲ್ಲದೇ ಯುವಕರಿಗೆ ಬ್ಲ್ಯಾಕ್ ಮೇಲ್ ಮಾಡಿ ಅವರಿಂದ ಲಕ್ಷ ಹಣಕ್ಕೆ ಡಿಮ್ಯಾಂಡ್ ಇಟ್ಟ ಆರೋಪದಡಿಯಲ್ಲಿ ಕಿಲಾಡಿ ಮಹಿಳೆ ಅಂದರ್ ಆಗಿರುವ ಘಟನೆ ಹಾಸನದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಮೊಸಳೆಹೊಸಳ್ಳಿ ಮೂಲದ ಪ್ರೇಮಾ ಬಂಧಿತ ಆರೋಪಿ. ಈಕೆ ಕಳೆದ ಏಳೆಂಟು ವರ್ಷಗಳಿಂದ ರೈತಸಂಘ ಹಾಗೂ ಮಹಿಳಾ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಳು. ಆದರೆ ದಿಢೀರ್ ಹಣ ಮಾಡುವ ದುರಾಸೆಗೆ ಬಿದ್ದು, ದರೋಡೆ, ಅಪಹರಿಸಿ ಹಣಕ್ಕೆ ಬೇಡಿಕೆ ಮತ್ತು ಅಪ್ರಾಪ್ತೆಯರನ್ನು ಲೈಂಗಿಕ ಕ್ರಿಯೆಗೆ ದೂಡಿ ಬ್ಲ್ಯಾಕ್ ಮೇಲ್ ಮಾಡುವ ಕಾನೂನು ವಿರೋಧಿ ಕೃತ್ಯಕ್ಕೆ ಇಳಿದಿದ್ದಳು. ಕಳೆದ ಆಗಸ್ಟ್ 21 ರಂದು ಈ ಘಟನೆ ನಡೆದಿದ್ದು, ಇದೀಗ ಬಯಲಾಗಿದೆ.

    ಸುನಿಲ್ ಮತ್ತು ದಿಲೀಪ್

    ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತೆ ನೀಡಿದ ದೂರಿನ ಅನ್ವಯ ತನಿಖೆಗೆ ಮುಂದಾದ ಪೊಲೀಸರಿಗೆ ಮೊದಲು ಅತ್ಯಾಚಾರ ಮಾಡಿದ ದುರುಳರು ಸಿಕ್ಕಿಬಿದ್ದಿದ್ದಾರೆ. ಇಬ್ಬರನ್ನು ವಿಚಾರಣೆ ಮಾಡಿದ ಪೊಲೀಸರಿಗೆ ಈ ಪ್ರಕರಣದಲ್ಲಿ ಹನಿಟ್ರ್ಯಾಪ್ ಇದೆ ಎಂದು ಶಂಕಿಸಿದ್ದಾರೆ. ಬಳಿಕ ಅತ್ಯಾಚಾರ ಆರೋಪಿಗಳಿಬ್ಬರು ಪ್ರೇಮಾಳ ಬಗ್ಗೆ ಹೇಳಿದ್ದಾರೆ. ಪೊಲೀಸರಿಗೆ ಈ ಬಗ್ಗೆ ಗೊತ್ತಾಗುತ್ತಿದ್ದಂತೆ ತಕ್ಷಣ ಕಾರ್ಯಾಚರಣೆ ಮಾಡಿ ಪ್ರೇಮಾ ಮತ್ತು ಆಕೆಯ ಇಬ್ಬರು ಸಹಚರರನ್ನು ವಶಕ್ಕೆ ಪಡೆದಿದ್ದಾರೆ. ಇನ್ನುಳಿದವರನ್ನು ಬಂದಿಸಲು ಜಾಲ ಬೀಸಿದ್ದಾರೆ.

    ಯಾರು ಈ ಪ್ರೇಮಾ?
    ಈ ಹಿಂದೆ ಕೋಲಾರ ಜಿಲ್ಲೆಯ ಮುಳಬಾಗಿಲಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಪ್ರೇಮಾ ಭಾಗಿಯಾಗಿ ಜೈಲು ಸೇರಿದ್ದಳು. ಇದೀಗ ಹನಿಟ್ರ್ಯಾಪ್ ಕೃತ್ಯ ಹಾಗೂ 20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ದೂರಿನಡಿ ಮತ್ತೆ ಜೈಲಿಗೆ ಸೇರಿದ್ದಾಳೆ. ಹಾಸನ ಮೂಲದ ಅಪ್ರಾಪ್ತೆಯೊಬ್ಬಳನ್ನು ಪುಸಲಾಯಿಸಿ ಲೈಂಗಿಕ ಚಟುವಟಿಕೆಗೆ ಪ್ರೇಮಾ ದೂಡಿದ್ದಳು. ಇತ್ತ ಸುನಿಲ್ ಮತ್ತು ದಿಲೀಪ್ ಎಂಬವರಿಂದ ಆಕೆಯ ಮೇಲೆ ಅತ್ಯಾಚಾರ ಮಾಡಿಸಿದ್ದು, ನಂತರ ಅವರಿಗೆ ಕರೆ ಮಾಡಿ ಬರೋಬ್ಬರಿ 20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಕೇಳಿದಷ್ಟು ಹಣ ಕೊಡದೇ ಇದ್ದರೆ ನಿಮ್ಮ ಮೇಲೆ ರೇಪ್ ಕೇಸ್ ಬೀಳಲಿದೆ. ನಂತರ ಜೈಲು ಸೇರುತ್ತೀರಿ ಎಂದು ಬೆದರಿಕೆ ಕೂಡ ಹಾಕಿದ್ದಳು.

    ಯುವಕರನ್ನು ಬೆದರಿಸಿ ಪಲ್ಸರ್ ಬೈಕ್ ಪಡೆದಿದ್ದು, ಖಾಲಿ ಚೆಕ್ ಗೆ ಸಹಿ ಮಾಡಿಸಿಕೊಂಡಿದ್ದಳು. ಅಷ್ಟಕ್ಕೆ ಸುಮ್ಮನಾಗದೆ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಳು. 20 ಲಕ್ಷ ರೂ. ಹಣ ಕೊಟ್ಟರೆ ರಾಜಿ ಸಂಧಾನ ಮಾಡಿಸಿ ಕೇಸ್ ಖುಲ್ಲಾ ಮಾಡುವೆ ಎಂದು ನಾಟಕವಾಡಿದ್ದಳು. ಈ ನಡುವೆ ಹಾಸನದ ಖಾಸಗಿ ಲಾಡ್ಜ್ ವೊಂದರಲ್ಲಿ ಅಪ್ರಾಪ್ತೆಯನ್ನ ಅತ್ಯಾಚಾರ ಮಾಡಿದ್ದವರು ಬೆಂಗಳೂರು ಸೇರಿದ್ದರು. ಈ ಬೆಳವಣಿಗೆ ಮಧ್ಯೆ ಸಂತ್ರಸ್ತ ಯುವತಿ ನಗರದ ಮಹಿಳಾ ಠಾಣೆಗೆ ನೀಡಿದ ದೂರು ಆಧರಿಸಿ ಬೆಂಗಳೂರಿನಲ್ಲಿ ಸುನಿಲ್ ಮತ್ತು ದಿಲೀಪ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕಾಮುಕರು ಮಾಡಿದ್ದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ಅಪಹರಣ ಮತ್ತು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ದೂರಿನ ಹಿನ್ನೆಲೆಯಲ್ಲಿ ಪ್ರೇಮಾ, ಸಚಿನ್ ಮತ್ತು ಆಟೋ ಚಾಲಕ ಪ್ರತಾಪ್ ಸಹ ಜೈಲು ಪಾಲಾಗಿದ್ದು, ಉಳಿದ ಮೂವರಾದ ಅಣ್ಣಪ್ಪ, ಪುಟ್ಟರಾಜು ಮತ್ತು ದಿವಾಕರ್ ಬಂಧನಕ್ಕೆ ತಂಡ ರಚಿಸಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್.ಪ್ರಕಾಶ್ ಗೌಡ ಹೇಳಿದ್ದಾರೆ.

    ಈವರೆಗೆ ದೊಡ್ಡ ದೊಡ್ಡ ನಗರಗಳಲ್ಲಿ ನಡೆಯುತ್ತಿದ್ದ ಹನಿಟ್ರ್ಯಾಪ್ ಪ್ರಕರಣಗಳು ಇದೀಗ ಹಾಸನದಂಥ ನಗರಗಳಲ್ಲಿ ಆರಂಭವಾಗಿರುವುದು ನಿಜಕ್ಕೂ ಆತಂಕಕಾರಿ ವಿಷಯ. ಇದಕ್ಕೆ ಕಾರಣರಾಗಿರುವ ಎಲ್ಲರನ್ನೂ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಮಹಿಳೆಯರೇ ಹೀಗಾದರೆ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಹೋರಾಟಗಾರ್ತಿ ಅನ್ನೋ ಸೋಗಿನಲ್ಲಿ ಅನ್ಯಾಯ, ಅನೀತಿ ಕೆಲಸ ಮಾಡುವುದು ಖಂಡನೀಯ ಮತ್ತೆ ಯಾರೂ ಹೀಗೆ ಮಾಡದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರ ನಾಗರಾಜ್ ಹೆತ್ತೂರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯುವತಿಗೆ ಕಾರು ಡಿಕ್ಕಿ – ಪರಾರಿಯಾಗಿದ್ದ ಬಿಜೆಪಿ ಶಾಸಕನ ಪುತ್ರ ಬಂಧನ

    ಯುವತಿಗೆ ಕಾರು ಡಿಕ್ಕಿ – ಪರಾರಿಯಾಗಿದ್ದ ಬಿಜೆಪಿ ಶಾಸಕನ ಪುತ್ರ ಬಂಧನ

    ಬೆಳಗಾವಿ: ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಬಿಜೆಪಿ ಶಾಸಕನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

    ಗೋವಾ ಬಿಜೆಪಿ ಶಾಸಕ ಗ್ಲೆನ್ ಶಿಕ್ಲಾನ್ ಪುತ್ರ ಕೈಲ್ ಟಿಕ್ಲೋ ನನ್ನು ಪೊಲೀಸರು ಬಂಧಿಸಿದ್ದರು. ಸೋಮವಾರ ಸಂಜೆ ಬೆಳಗಾವಿ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಲ್ ಟಿಕ್ಲೋನನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದಾರೆ.

    ಏನಿದು ಪ್ರಕರಣ?
    ಸೋಮವಾರ ಸಂಜೆ ಬೆಳಗಾವಿಯ ಹೆದ್ದಾರಿ 4 ರಲ್ಲಿ ಗ್ಲೆನ್ ಶಿಕ್ಲಾನ್ ಪುತ್ರ ಕೈಲ್ ಟಿಕ್ಲೋ ಬಿಎಂಡಬ್ಲ್ಯೂ ಕಾರನ್ನು ಓಡಿಸುತ್ತಿದ್ದನು. ಈ ವೇಳೆ ಅತಿವೇಗವಾಗಿ ರಸ್ತೆಬದಿ ನಿಂತಿದ್ದ ಯುವತಿಯೊಬ್ಬಳಿಗೆ ಡಿಕ್ಕಿ ಹೊಡೆದಿದ್ದ. ಡಿಕ್ಕಿ ಹೊಡೆದ ರಭಸಕ್ಕೆ ಆಜಾದ್ ನಗರದದ ನಿವಾಸಿಯಾಗಿರುವ ಸ್ಯಾನಿಯತ್ ವಾಹಿದ್ ಬಿಸ್ತಿ (18) ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

    ಅಪಘಾತದ ನಂತರ ರೊಚ್ಚಿಗೆದ್ದ ಸ್ಥಳೀಯರು ಶಾಸಕ ಪುತ್ರನ ಕಾರನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿದ್ದರು. ಇತ್ತ ಅಪಘಾತವಾಗುತ್ತಿದ್ದಂತೆ ಕಾರು ಬಿಟ್ಟು ಶಾಸಕನ ಪುತ್ರ ಪರಾರಿಯಾಗಿದ್ದ. ಅಷ್ಟೇ ಅಲ್ಲದೇ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಶಾಸಕನ ಪುತ್ರ ಮಾಳಮಾರುತಿಯಲ್ಲಿ ಪೊಲೀಸ್ ಠಾಣೆಯಲ್ಲಿ ಕೌಂಟರ್ ಕೇಸ್ ದಾಖಲಿಸಿದ್ದ.

    ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಬಳಿಕ ಪೊಲಿಸರು ಕೈಲ್ ಟಿಕ್ಲೋ ನ ಬಂಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅನುಮತಿ ಇಲ್ಲಾಂದ್ರೂ ಗಣಪನ ಕೂರಿಸಿದ್ರು – ಪಟಾಕಿ ಕಿಡಿಗೆ ಎಎಸ್‍ಐ ಕಣ್ಣೇ ಹೋಯ್ತು

    ಅನುಮತಿ ಇಲ್ಲಾಂದ್ರೂ ಗಣಪನ ಕೂರಿಸಿದ್ರು – ಪಟಾಕಿ ಕಿಡಿಗೆ ಎಎಸ್‍ಐ ಕಣ್ಣೇ ಹೋಯ್ತು

    ಬೆಂಗಳೂರು: ನಗರದಲ್ಲಿ ಗಣೇಶನ ವಿಸರ್ಜನೆ ವೇಳೆ ಪಟಾಕಿ ಹೊಡೆದಿದ್ದರಿಂದ ಅದರ ಕಿಡಿ ಎಎಸ್‍ಐ ಕಣ್ಣಿಗೆ ಬಿದ್ದು, ಗಂಭೀರವಾಗಿ ಗಾಯವಾಗಿರುವ ಘಟನೆ ನಡೆದಿದೆ.

    ಈ ಘಟನೆ ಭಾನುವಾರ ಗಣೇಶನ ವಿಸರ್ಜನೆ ವೇಳೆ ನಡೆದಿದ್ದು, ತಡವಾಗಿ ಬೆಳಕಿಗೆ ಬೆಂದಿದೆ. ಆರ್.ಟಿ ನಗರದದಲ್ಲಿ ಗಣೇಶನನ್ನು ಕೂರಿಸಲು ಪೋಲೀಸರ ಅನುಮತಿಯನ್ನು ಕೇಳಿದ್ದಾರೆ. ಆದರೆ ಪೊಲೀಸರು ಇದಕ್ಕೆ ಒಪ್ಪದೆ ನಿರಾಕರಿಸಿದ್ದರು. ಇದನ್ನೂ ಓದಿ: ಗಣಪತಿ ವಿಸರ್ಜನೆ ವೇಳೆ ಎಸ್‍ಐರನ್ನು ಹೊತ್ತು ಕುಣಿದ ವಿಡಿಯೋ ವೈರಲ್

    ಪೊಲೀಸರು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕೊಡದಿದ್ದರೂ ಆರ್.ಟಿ.ನಗರ ಪೋಸ್ಟ್ ಆಫೀಸ್ ಮುಂಭಾಗದ ರಸ್ತೆಯಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿತ್ತು. ಭಾನುವಾರ ಸಂಜೆ ಗಣೇಶನ ವಿಸರ್ಜನೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಪಟಾಕಿ ಮತ್ತು ಡಿಜೆಯನ್ನು ಕೂಡ ಏರ್ಪಡಿಸಲಾಗಿತ್ತು.

    ಪೊಲೀಸರು ಬಂದು ಪಟಾಕಿ ಹೊಡೆಯದೆ ಗಣೇಶ ವಿಸರ್ಜನೆ ಮಾಡಿ ಎಂದು ಸೂಚಿಸಿದ್ದಾರೆ. ಆದ್ರೆ ಅವರ ಮಾತನ್ನು ಲೆಕ್ಕಿಸದೆ ಹುಡುಗರ ಗುಂಪು ಪಟಾಕಿಯನ್ನು ಸಿಡಿಸಿದ್ದಾರೆ. ಇದೇ ವೇಳೆ ಅಲ್ಲಿಗೆ ಆಗಮಿಸಿದ್ದ ಎಎಸ್‍ಐ ನಾರಾಯಣಪ್ಪ ಅವರ ಬಲಗಣ್ಣಿಗೆ ಪಟಾಕಿ ಕಿಡಿ ತಗುಲಿ ಗಂಭೀರವಾಗಿ ಗಾಯವಾಗಿದೆ. ನಂತರ ಸಹ ಪೊಲೀಸರು ತಕ್ಷಣವೇ ನಾರಾಯಣಪ್ಪನನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.

    ಕಣ್ಣಿಗೆ ಬಲವಾಗಿ ಗಾಯವಾಗಿದ್ದರಿಂದ ಕಣ್ಣನ್ನು ಕಳೆದುಕೊಂಡಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಬಳಿಕ ಅವರನ್ನು ಬೇರೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಸಹ ಪೊಲೀಸರು ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದು, ಇದೀಗ ನಾರಾಯಣಪ್ಪ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರು 18 ದಿನಗಳ ಬಳಿಕ ಆಪರೇಷನ್ ಮಾಡಬೇಕು ಎಂದು ಹೇಳಿದ್ದಾರೆ ಅಂತ ತಿಳಿದುಬಂದಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ನೇಹಿತನ ಜೊತೆ ಸೆಕ್ಸ್‌ಗೆ ನಿರಾಕರಿಸಿದ್ದಕ್ಕೆ ಪತ್ನಿಯನ್ನೇ ಕೊಂದ

    ಸ್ನೇಹಿತನ ಜೊತೆ ಸೆಕ್ಸ್‌ಗೆ ನಿರಾಕರಿಸಿದ್ದಕ್ಕೆ ಪತ್ನಿಯನ್ನೇ ಕೊಂದ

    ನವದೆಹಲಿ: ತನ್ನ ಜೊತೆ ಹಾಗೂ ಸ್ನೇಹಿತನ ಜೊತೆ ಸೆಕ್ಸ್‌ಗೆ ನಿರಾಕರಿಸಿದ್ದಕ್ಕೆ ಪತಿ ತನ್ನ ಗೆಳೆಯನ ಜೊತೆ ಸೇರಿ ತನ್ನ ಪತ್ನಿಯನ್ನೇ ಕೊಂದ ಘಟನೆಯೊಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

    ಸುಶೀಲ್(40) ಪತ್ನಿಯನ್ನು ಕೊಂದ ಆರೋಪಿ ಪತಿ. ಸುಶೀಲ್ ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿಯಾಗಿದ್ದು, ವಾಚ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದನು. ಸುಶೀಲ್ ತನ್ನ ಜೊತೆ ಹಾಗೂ ತನ್ನ ಸ್ನೇಹಿತನ ಜೊತೆ ಸೆಕ್ಸ್ ಮಾಡಲು ಪತ್ನಿಗೆ ಒತ್ತಾಯಿಸಿದ್ದಾನೆ. ಆದರೆ ಆಕೆ ನಿರಾಕರಿಸಿದ್ದಾಳೆ. ಇದ್ದರಿಂದ ರೊಚ್ಚಿಗೆದ್ದ ಸುಶೀಲ್ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸೋಮವಾರ ಆರೋಪಿ ಸುಶೀಲ್‍ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಸುಶೀಲ್ ಪೊಲೀಸರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ನನ್ನ ಜೊತೆ ಹಾಗೂ ನನ್ನ ಸ್ನೇಹಿತನ ಜೊತೆ ದೈಹಿಕ ಸಂಬಂಧ ಬೆಳೆಸು ಎಂದು ಹೇಳಿದೆ. ಆದರೆ ಆಕೆ ನಮ್ಮಿಬ್ಬರ ಜೊತೆ ಸೆಕ್ಸ್‌ಗೆ ನಿರಾಕರಿಸಿದ್ದಕ್ಕೆ ಆಕೆಯನ್ನು ಕೊಲೆ ಮಾಡಿದ್ದೇನೆ ಎಂದು ಸುಶೀಲ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಡೆಪ್ಯೂಟಿ ಕಮಿಷನರ್ ಮೇಘನಾ ಯಾದವ್ ಹೇಳಿದ್ದಾರೆ.

    ಸುಶೀಲ್ ಸ್ನೇಹಿತನನ್ನು ಹುಡುಕಲು ನಾವು ವಿಶೇಷ ತಂಡವೊಂದು ರಚಿಸಿದ್ದೇವೆ. ಅಲ್ಲದೇ ಸುಶೀಲ್ ಸ್ನೇಹಿತನನ್ನು ಬಂಧಿಸಿದ ನಂತರ ಆತನ ಹೇಳಿಕೆಯನ್ನು ಪರಿಗಣಿಸಲಾಗುತ್ತದೆ. ಸುಶೀಲ್ ಹಾಗೂ ಆತನ ಸ್ನೇಹಿತನ ಹೇಳಿಕೆ ಪಡೆದುಕೊಳ್ಳುತ್ತೇವೆ ಎಂದು ವಿಚಾರಣೆ ವೇಳೆ ಪೊಲೀಸರು ತಿಳಿಸಿದ್ದಾರೆ.

    ಅಕ್ಟೋಬರ್ 6ರಂದು 42 ವರ್ಷದ ಮಹಿಳೆಯ ಮೃತದೇಹ ವಿವೇಕ್ ವಿಹಾರ್ ಏರಿಯಾದಲ್ಲಿರುವ ಖಾಲಿ ಮನೆಯಲ್ಲಿ ಪತ್ತೆಯಾಗಿತ್ತು. ನಂತರ ಮೃತದೇಹ ಪರಿಶೀಲಿಸಿದಾಗ ಮಹಿಳೆ ಗಜಿಯಾಬಾದ್ ನಿವಾಸಿ ಎಂಬುದು ತಿಳಿದುಬಂದಿತ್ತು. ಸುಶೀಲ್ ತನ್ನ ಮನೆಯಲ್ಲಿ ಅನೈತಿಕ ವ್ಯವಹಾರ ನಡೆಸುತ್ತಿದ್ದನು. ಅಲ್ಲದೇ ಮನೆಯ ಮಾಲೀಕರು ಬೇರೆ ಕಡೆ ವಾಸಿಸುತ್ತಿದ್ದರಿಂದ ಸುಶೀಲ್ ಆ ಮನೆಗೆ ವಾಚ್‍ಮ್ಯಾನ್ ಆಗಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv