Tag: arrest

  • ಬೆಂಗ್ಳೂರಲ್ಲಿ ಹಾಡಹಗಲೇ ಯುವತಿಯ ಮೇಲೆರಗಿ ಕಾಮುಕನ ಅಟ್ಟಹಾಸ

    ಬೆಂಗ್ಳೂರಲ್ಲಿ ಹಾಡಹಗಲೇ ಯುವತಿಯ ಮೇಲೆರಗಿ ಕಾಮುಕನ ಅಟ್ಟಹಾಸ

    ಬೆಂಗಳೂರು: ಹಾಡಹಗಲೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಮೈ ಮುಟ್ಟಲು ಯತ್ನಿಸಿ ಅಸಭ್ಯವಾಗಿ ವರ್ತಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ತಮಿಳುನಾಡು ಮೂಲದ ಆರ್ಮುಗಂ(38) ಬಂಧಿತ ಆರೋಪಿ. ಅಶೋಕ ನಗರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆ ಅಕ್ಟೋಬರ್ 26ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಅಶೋಕ್‍ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ವಿಲ್ಸನ್‍ಗಾರ್ಡನ್ ನಿವಾಸಿ 20 ವರ್ಷದ ಯುವತಿ ಬ್ರಿಗೇಡ್ ರಸ್ತೆಯಲ್ಲಿರುವ ಶೋರೂಂವೊಂದರಲ್ಲಿ ಸ್ವಾಗತಕಾರಿಣಿಯಾಗಿ ಆಗಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 26ರಂದು ಯುವತಿ ಊಟ ಮಾಡಲು ಮೆಗ್ರತ್ ರಸ್ತೆ ಮಾರ್ಗವಾಗಿ ಹೋಟೆಲಿಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಆರೋಪಿ ಆರ್ಮುಗಂ ಎದುರಿಗೆ ಬಂದಿದ್ದಾನೆ. ಈ ವೇಳೆ ಆರೋಪಿ ಆರ್ಮುಗಂ ಯುವತಿಯ ಬಳಿ ಹೋಗಿ ಆಕೆಯ ಮೈ ಮುಟ್ಟಲು ಯತ್ನಿಸಿ ಅಶ್ಲೀಲವಾಗಿ ವರ್ತಿಸಿದ್ದಾನೆ. ಇದರಿಂದ ಭಯಗೊಂಡ ಯುವತಿ ಕಾಮುಕನಿಂದ ಬಿಡಿಸಿಕೊಂಡು ಅದೇ ರಸ್ತೆಯಲ್ಲಿದ್ದ ಸಂಚಾರಿ ಪೊಲೀಸರ ಗಮನಕ್ಕೆ ತಂದಿದ್ದಾರೆ.

    ಯುವತಿ ಪೊಲೀಸರ ಬಳಿ ಹೋಗುವುದನ್ನು ಆರೋಪಿ ಆರ್ಮುಗಂ ನೋಡಿದ್ದು, ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಕೂಡಲೇ ಸಂಚಾರಿ ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿದ್ದಾರೆ. ಬಳಿಕ ಅಶೋಕ ನಗರ ಅಪರಾಧ ವಿಭಾಗದ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯಕ್ಕೆ ಈ ಘಟನೆ ಕುರಿತಂತೆ ಯುವತಿ ಅಶೋಕ್‍ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವತಿಯ ದೂರಿನ ಆಧಾರದ ಮೇರೆಗೆ ಪೊಲೀಸರು ಆರೋಪಿ ಆರ್ಮುಗಂನನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಾವು ನೋಡುವ ಆಸೆಯಿಂದ ಅತ್ಯಾಚಾರಕ್ಕೊಳಗಾದ 11ರ ಅಪ್ರಾಪ್ತೆ

    ಹಾವು ನೋಡುವ ಆಸೆಯಿಂದ ಅತ್ಯಾಚಾರಕ್ಕೊಳಗಾದ 11ರ ಅಪ್ರಾಪ್ತೆ

    ಭುವನೇಶ್ವರ: ಯುವಕನೊಬ್ಬ 11 ವರ್ಷದ ಅಪ್ರಾಪ್ತ ಹುಡುಗಿಯನ್ನ ಅತ್ಯಾಚಾರ ಮಾಡಿರುವ ಘಟನೆ ಒಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಪಟ್ಟಮಂಡೈ ಬ್ಲಾಕ್ ನ ರಾಜ್ ನಗರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು 26 ವರ್ಷದ ಸೋಮನಾಥ ನಾಯಕ್ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

    ಸಂತ್ರಸ್ತ ಹುಡುಗಿ ಫಿರಿಕಿದಾಂಡಿ ಗ್ರಾಮದಿಂದ ಸಮೀಪದ ಯೂತ್ಸ್ ಕ್ಲಬ್ ನಲ್ಲಿ ಟ್ಯೂಷನ್ ತರಗತಿಗೆಂದು ಹೋಗಿದ್ದಳು. ಆದರೆ ಅಂದು ತರಗತಿ ಕ್ಯಾನ್ಸಲ್ ಆಗಿದೆ. ಇದರಿಂದ ಇತರ ವಿದ್ಯಾರ್ಥಿಗಳು ಈ ಸ್ಥಳಕ್ಕೆ ಬಂದಿರಲಿಲ್ಲ. ಈ ವೇಳೆ ಸಂತ್ರಸ್ತೆ ಒಬ್ಬಳೆ ಇದ್ದುದ್ದನ್ನು ಗಮನಿಸಿದ ಆರೋಪಿ ನಾಯಕ್ ಸಂತ್ರಸ್ತೆಯನ್ನು ಕ್ಲಬ್ ನ ಹಿಂಬದಿಯಲ್ಲಿ ಹಾವು ತೋರಿಸುತ್ತೇನೆ ಎಂದು ನೆಪ ಹೇಳಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಸಂತ್ರಸ್ತೆ ಮನೆಗೆ ಬಂದು ನಡೆದ ಘಟನೆಯ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ. ನಂತರ ಪೋಷಕರು ರಾಜ್ ನಗರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಂತ್ರಸ್ತೆಯ ಪೋಷಕರು ದೂರು ನೀಡಿದ ಬಳಿಕ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಸಂತ್ರಸ್ತೆ ಮತ್ತು ಆರೋಪಿ ಇಬ್ಬರನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಒಳಪಡಿಸಲಾಗಿದೆ. ಸದ್ಯಕ್ಕೆ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಕ್ಕಿನ ಜೊತೆ ಸೆಕ್ಸ್ ಮಾಡಿದ ವ್ಯಕ್ತಿ ಅರೆಸ್ಟ್

    ಬೆಕ್ಕಿನ ಜೊತೆ ಸೆಕ್ಸ್ ಮಾಡಿದ ವ್ಯಕ್ತಿ ಅರೆಸ್ಟ್

    ಕೇಪ್‍ಟೌನ್: ವ್ಯಕ್ತಿಯೊಬ್ಬ ತನ್ನ ಪಕ್ಕದ ಮನೆ ಬೆಕ್ಕಿನ ಜೊತೆ ಸೆಕ್ಸ್ ಮಾಡಿ ಅರೆಸ್ಟ್ ಆದ ವಿಚಿತ್ರ ಪ್ರಕರಣವೊಂದು ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

    ವ್ಯಕ್ತಿ ಬೆಕ್ಕಿನ ಜೊತೆ ಸೆಕ್ಸ್ ಮಾಡುತ್ತಿದ್ದನು ಎಂದು ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಮಹಿಳೆ ತನ್ನ ಮನೆಯಲ್ಲಿ ಬೆಕ್ಕು ಕಾಣಿಸದೇ ಇದ್ದಾಗ ಆಕೆ ಮನೆಯ ಸುತ್ತಮುತ್ತ ಹುಡುಕಲು ಶುರು ಮಾಡಿದ್ದಾಳೆ. ಆಗ ವ್ಯಕ್ತಿ ತನ್ನ ಮನೆಯಲ್ಲಿ ಬೆಕ್ಕಿನ ಕಾಲು ಎತ್ತಿ ಅದನ್ನು ರೇಪ್ ಮಾಡುತ್ತಿರುವುದನ್ನು ಮಹಿಳೆ ನೋಡಿದ್ದಾಳೆ.

    ವ್ಯಕ್ತಿ ಮಾಡಿದ ಈ ನೀಚ ಕೃತ್ಯವನ್ನು ಮಹಿಳೆ ಪೊಲೀಸರಿಗೆ ವಿವರಿಸಿದ್ದಳು. ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ಬಂದಾಗ ಆರೋಪಿ ಬಟ್ಟೆ ಧರಿಸುತ್ತಿದ್ದನು. ಅಲ್ಲದೇ ಆತನ ಪ್ಯಾಂಟ್‍ನಲ್ಲಿ ಬೆಕ್ಕಿನ ಕೂದಲುಗಳೇ ಇತ್ತು. ವ್ಯಕ್ತಿಯ ಈ ನೀಚ ಕೃತ್ಯದಿಂದ ಬೆಕ್ಕು ಗಾಯಗೊಂಡು ನರಳಾಡುತ್ತಿತ್ತು. ಬಳಿಕ ಪೊಲೀಸರು ಗಾಯಗೊಂಡ ಆ ಬೆಕ್ಕನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ದಕ್ಷಿಣ ಆಫ್ರಿಕಾ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿ ಹಲವು ಪ್ರಾಣಿಗಳ ಜೊತೆ ಸೆಕ್ಸ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಹಿಂದೆ ವ್ಯಕ್ತಿ ನಾಯಿ ಹಾಗೂ ಬೇರೆ ಬೇರೆ ಬೆಕ್ಕುಗಳ ಜೊತೆ ಸೆಕ್ಸ್ ಮಾಡಿದ್ದಾನೆ ಎಂಬುದಾಗಿ ವರದಿಯಾಗಿದೆ.

    ಪ್ರಾಣಿಗಳ ಜೊತೆ ಸೆಕ್ಸ್ ಮಾಡಿರುವ ಪ್ರಕರಣ ಇದೇ ಮೊದಲಲ್ಲ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬೇರೆ ಬೇರೆ ಪ್ರಾಣಿಗಳ ಮೇಲೆ ಸೆಕ್ಸ್, ರೇಪ್ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಾಗಲಕೋಟೆಯಲ್ಲಿ ಮನಿ ಎಕ್ಸ್ ಚೇಂಜ್ ಜಾಲ- 667 ಕೋಟಿ ರೂ. ಬದಲಾವಣೆಗೆ ಮುಂದಾಗಿದ್ದ ಖದೀಮರ ಬಂಧನ

    ಬಾಗಲಕೋಟೆಯಲ್ಲಿ ಮನಿ ಎಕ್ಸ್ ಚೇಂಜ್ ಜಾಲ- 667 ಕೋಟಿ ರೂ. ಬದಲಾವಣೆಗೆ ಮುಂದಾಗಿದ್ದ ಖದೀಮರ ಬಂಧನ

    ಬಾಗಲಕೋಟೆ: ಜಿಲ್ಲೆಯ ಡಿಸಿಐಬಿ, ನವನಗರ ಠಾಣೆ ಪೊಲೀಸರು ಜಂಟಿ ದಾಳಿ ನಡೆಸಿ ಮನಿ ಡಬ್ಲಿಂಗ್ ಮತ್ತು ಹಳೆ ನೋಟ್ ಎಕ್ಸ್ ಚೇಂಜ್ ಜಾಲವೊಂದನ್ನು ಪತ್ತೆ ಹಚ್ಚಿದ್ದಾರೆ. 667 ಕೋಟಿ ಹಳೆ ನೋಟ್ ಬದಲಾವಣೆ ಜಾಲ ಭೇದಿಸಿದ ಡಿಸಿಐಬಿ ಪೊಲೀಸರು ಮತ್ತು ನವನಗರ ಠಾಣೆ ಪೊಲೀಸರು 12 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

    ಒಟ್ಟು 667 ಕೋಟಿ ಹಳೆ ನೋಟ್ ಎಕ್ಸ್ ಚೇಂಜ್ ಗೆ ಆರೋಪಿಗಳು ಮುಂದಾಗಿದ್ದಾಗಿದ್ದು ತಿಳಿದು ಬಂದಿದ್ದು, ಕಮೀಷನ್ ಪಡೆದು ಹಳೆ ನೋಟು ಬದಲಾವಣೆಗೆ ಡೀಲ್ ನಡೆಸಿದ್ದರು. 100 ರೂಗೆ 30 ರೂ ಕಮೀಷನ್ ನಂತೆ ಮಾಡಿಕೊಂಡ ಡೀಲ್ ಇದಾಗಿದ್ದು, ಹಳೆ ನೋಟ್ ನೀಡಿದವರಿಂದ 30 ಲಕ್ಷ ಕೊಡಬೇಕೆಂದು ಡೀಲ್ ಕುದುರಿಸಿದ್ದ ಆರೋಪಿಗಳು ಈಗ ಅಂದರ್ ಆಗಿದ್ದಾರೆ.

    ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ತೋಳಮಟ್ಟಿ ಗ್ರಾಮದ ಶಂಕರ್ ಗಾಮಾ ಎಂಬವನು ಇದರಲ್ಲಿ ಭಾಗಿಯಾಗಿದ್ದು, ಹಳೆ ನೋಟ್ ನೀಡೋಕೆ ಮುಂದಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದಂತೆ ಮಹಾರಾಷ್ಟ್ರ, ಉತ್ತರಪ್ರದೇಶ, ಗೋವಾ, ರಾಜಸ್ಥಾನ ಮೂಲದವರು ಹಳೆನೋಟು ಪಡೆದು ಹೊಸನೋಟು ನೀಡೋಕೆ ಮುಂದಾಗಿದ್ದರು. ಹಣ ಕೊಡುವವರು ಮತ್ತು ಹೊಸ ನೋಟು ಕೊಡುವವರು ಇಬ್ಬರೂ ಪರಸ್ಪರ ಮೋಸ ಮಾಡಲು ಪ್ಲಾನ್ ರೂಪಿಸಿದ್ದರು ಎನ್ನಲಾಗಿದೆ.

    ಹಣ ಡಬ್ಲಿಂಗ್ ಪ್ರಕರಣದಲ್ಲಿ ಎಸ್ ಪಿ ಕಚೇರಿ ಮಿನಿಸ್ಟೇರಿಯಲ್ ಸಿಬ್ಬಂದಿ ಅಶೋಕ ನಾಯಕ್ ಭಾಗಿಯಾಗಿದ್ದು, ಆತನ ರಕ್ಷಣೆ ಮಾಡಲು ಮುಂದಾಗಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ. ಆತನನ್ನು ಬಂಧಿಸದೆ ಆತನಿಂದಲೇ ಪೊಲೀಸರು ದೂರು ಪಡೆದಿದ್ದಾರೆ. ಈ ಬಗ್ಗೆ ಎಸ್‍ಪಿಯವರನ್ನು ಕೇಳಿದರೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ.

    ಮನಿ ಡಬ್ಲಿಂಗ್, ನೋಟ್ ಎಕ್ಸ್ ಚೇಂಜ್ ಪ್ರಕರಣದಲ್ಲಿ ಭಾಗಿಯಾಗಿದ್ದ 12 ಮಂದಿಯನ್ನ ಬಂಧಿಸಲಾಗಿದೆ. ಬಂಧಿತ ಆರೋಪಿಗಳು ನಮ್ಮದೇ ಆರ್‍ಟಿಜಿಎಸ್ ಕಂಪನಿ ಇದೆ. ಆರ್‍ಬಿಐ ಸಿಬ್ಬಂದಿ ನಮಗೆ ಪರಿಚಯ ಇದ್ದಾರೆ. ಹಳೆ ನೋಟ್ ಕೊಟ್ಟರೆ ಹೊಸ ನೋಟ್ ನೀಡೋದಾಗಿ ಹೇಳಿಕೊಂಡು ಮೋಸ ಮಾಡುತ್ತಿದ್ದರು. ಈ ಹಿಂದೆ ಇದೇ ಗ್ಯಾಂಗ್ ಬೆಂಗಳೂರು, ಚೆನ್ನೈನಲ್ಲಿ ವಂಚನೆಗೆ ವಿಫಲ ಯತ್ನ ನಡೆಸಿದೆ.

    ಸದ್ಯ ಬಾಗಲಕೋಟೆ ಡಿಸಿಐಬಿ ಇನ್ಸ್ ಪೆಕ್ಟರ್ ಸಂಜೀವ್ ಕಾಂಬಳೆ, ನಗರ ಠಾಣೆ ಸಿಪಿಐ ಶ್ರೀಶೈಲ್ ಗಾಬಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಇದಾಗಿದ್ದು, ನವನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟ್ಯಾಟೂ ಮೂಲಕ 21 ದಿನದ ಬಳಿಕ ಆರೋಪಿಗಳು ಅಂದರ್

    ಟ್ಯಾಟೂ ಮೂಲಕ 21 ದಿನದ ಬಳಿಕ ಆರೋಪಿಗಳು ಅಂದರ್

                  ಹನುಮಂತಪ್ಪ                                  ತಿಪ್ಪೇಸ್ವಾಮಿ                                           ರಂಗಸ್ವಾಮಿ

    ದಾವಣಗೆರೆ: ಜಿಲ್ಲೆಯ ಶಿರಮಗೊಂಡನಹಳ್ಳಿ ಬಳಿ ಮಾನಸಿಕ ಅಸ್ವಸ್ಥನನ್ನು ಕುಟುಂಬದವರೇ ಕೊಲೆ ಮಾಡಿ ಭದ್ರ ನಾಲೆಗೆ ಎಸೆದಿದ್ದು, ಕೊಲೆ ಮಾಡಿದ್ದ 21 ದಿನಗಳ ಬಳಿಕ ಟ್ಯಾಟೂ ಮೂಲಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಜಿಲ್ಲೆಯ ಚನ್ನಗಿರಿ ತಾಲೂಕಿನ ತೋಪೆನಹಳ್ಳಿಯ ಜಗದೀಶ್ ಕೊಲೆಯಾದ ದುರ್ದೈವಿ. ಇದೇ ತಿಂಗಳ 2ರಂದು ಕೊಲೆ ಮಾಡಲಾಗಿತ್ತು. ಆದರೆ 20 ರಂದು ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಬಳಿ ಮೃತ ದೇಹ ಪತ್ತೆಯಾಗಿತ್ತು. ಇಂದು ತನಿಖೆಯ ನಂತರ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ.

     ಕೊಲೆಯಾದ ಜಗದೀಶ್

    ಏನಿದು ಪ್ರಕರಣ?
    ಅಕ್ಟೋಬರ್ 20ರಂದು ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಬಳಿ ಕೈ ಕಟ್ಟಿದ ಮೃತ ದೇಹ ಪತ್ತೆಯಾಗಿತ್ತು. ವಿದ್ಯಾನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಮೃತ ವ್ಯಕ್ತಿಯ ಎರಡು ಕೈಗಳ ತೋಳಿನ ಮೇಲೆ ಅರ್ಜುನ್, ಬಾಲಾಜಿ ಎಂಬ ಹೆಸರಿನ ಹಚ್ಚೆ ಪತ್ತೆಯಾಗಿದೆ. ಬಳಿಕ ಜಗದೀಶ್ ಕೊಲೆಯಾದ ದುರ್ದೈವಿ ಎಂದು ತಿಳಿದು ಬಂದಿತ್ತು.

    ಟ್ಯಾಟೂ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ನಡೆಸಿದಾಗ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆಯಾದವ ಮಾನಸಿಕ ಅಸ್ವಸ್ಥನಾಗಿದ್ದು, ಕುಟುಂಬದವರ ಮೇಲೆ ಪದೇ ಪದೇ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ತಂದೆ ಹನುಮಂತಪ್ಪ, ಅಣ್ಣ ರಂಗಸ್ವಾಮಿ, ಬಾಮೈದ ತಿಪ್ಪೇಸ್ವಾಮಿ ಕೊಲೆ ಮಾಡಿ ಭದ್ರಾ ನಾಲೆಗೆ ಎಸೆದಿದ್ದಾರೆ. ತನಿಖೆ ನಡೆಸಿದಾಗ ಕೊಲೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

    ಮೃತ ಜಗದೀಶ್ ತನ್ನ ಮಕ್ಕಳ ಹೆಸರಾದ ಬಾಲಾಜಿ ಮತ್ತು ಅರ್ಜುನ್ ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ತನಿಖೆ ನಡೆಸಿ ಕೊಲೆ ಅರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಿರುತೆರೆ ನಟ ಸುನಾಮಿ ಕಿಟ್ಟಿ ಬಂಧನ, ಬಿಡುಗಡೆ

    ಕಿರುತೆರೆ ನಟ ಸುನಾಮಿ ಕಿಟ್ಟಿ ಬಂಧನ, ಬಿಡುಗಡೆ

    ಬೆಂಗಳೂರು: ಪಬ್‍ನಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟ ಸುನಾಮಿ ಕಿಟ್ಟಿಯನ್ನು ಪೊಲೀಸರು ಬಂಧಿಸಿದ್ದು, ತದನಂತರ ಬಿಡುಗಡೆ ಮಾಡಿದ್ದಾರೆ.

    ಸಿಗರೇಟ್ ವಿಚಾರವಾಗಿ ಪಂಬ್ ಸಿಬ್ಬಂದಿಯ ಮೇಲೆ ಸುನಾಮಿ ಕಿಟ್ಟಿ ಹಲ್ಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯನಗರ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದು, ಈಗ ಕಿಟ್ಟಿಯನ್ನು ಬಂಧಿಸಿದ್ದರು.

    ನಡೆದಿದ್ದೇನು?
    ಸುನಾಮಿ ಕಿಟ್ಟಿ ತನ್ನ ಸ್ನೇಹಿತರ ಜೊತೆ ಭಾನುವಾರ ರಾತ್ರಿ ಮದ್ಯಪಾನ ಮಾಡಲು ಪಬ್‍ಗೆ ಹೋಗಿದ್ದರು. ಈ ವೇಳೆ ಸುನಾಮಿ ಕಿಟ್ಟಿ ಸಿಂಗಲ್ ಸಿಗರೇಟ್ ಕೇಳಿದ್ದಾರೆ. ಆಗ ಸಿಂಗಲ್ ಸಿಗರೇಟ್ ಸಿಗಲ್ಲ, ಪ್ಯಾಕ್ ತೆಗೆದುಕೊಳ್ಳುವಂತೆ ಸಿಬ್ಬಂದಿ ಹೇಳಿದ್ದಾರೆ. ಈ ವಿಚಾರವಾಗಿ ಸುನಾಮಿ ಕಿಟ್ಟಿ ಹಾಗೂ ಪಬ್ ಸಿಬ್ಬಂದಿ ನಡುವೆ ಗಲಾಟೆ ನಡೆದಿತ್ತು.

    ಅಲ್ಲದೇ ಇದರಿಂದ ಕೋಪಗೊಂಡ ಸುನಾಮಿ ಕಿಟ್ಟಿ, ಹೈಲಾಂಚ್ ಪಬ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಪಬ್ ಸಿಬ್ಬಂದಿ ಯಾವುದೇ ದೂರು ನೀಡಿರಲಿಲ್ಲ. ಸದ್ಯ ಪಬ್ ಸಿಬ್ಬಂದಿ, ಸುನಾಮಿ ಕಿಟ್ಟಿ ಜೊತೆ ರಾಜಿ ಸಂಧಾನ ಮಾಡಿಕೊಂಡು ಸುಮ್ಮನಾಗಿದ್ದಾರೆ ಎಂದು ತಿಳಿದುಬಂದಿತ್ತು. ಆದರೆ ಸುಬ್ರಹ್ಮಣ್ಯನಗರ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡು ಸುನಾಮಿ ಕಿಟ್ಟಿಯನ್ನು ಇಂದು ಬಂಧಿಸಿದ್ದು, ಬಳಿಕ ಬಿಡುಗಡೆ ಮಾಡಿದ್ದಾರೆ.

    ಈ ಹಿಂದೆ ಸುನಾಮಿ ಕಿಟ್ಟಿ ಕಿಡ್ನಾಪ್ ಕೇಸ್ ನಲ್ಲಿ ಜ್ಞಾನ ಭಾರತಿ ಠಾಣೆಯಲ್ಲಿ ಅರೆಸ್ಟ್ ಆಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿದ್ಯಾರ್ಥಿಗಳ ಜೊತೆ ಸೆಕ್ಸ್ ನಡೆಸಿದ್ದ 32ರ ಶಿಕ್ಷಕಿ ಅರೆಸ್ಟ್

    ವಿದ್ಯಾರ್ಥಿಗಳ ಜೊತೆ ಸೆಕ್ಸ್ ನಡೆಸಿದ್ದ 32ರ ಶಿಕ್ಷಕಿ ಅರೆಸ್ಟ್

    ಟೆಕ್ಸಾಸ್: 16 ಮತ್ತು 18ರ ವಿದ್ಯಾರ್ಥಿಗಳೊಂದಿಗೆ ಸೆಕ್ಸ್ ನಡೆಸಿದ್ದ 32 ವರ್ಷದ ಅಮೆರಿಕದ ಶಿಕ್ಷಕಿಯನ್ನು ಬಂಧಿಸಲಾಗಿದೆ. ಲಿನ್ ಬುರ್ಜ್ ಬಂಧಿತ ಶಿಕ್ಷಕಿ. ಮ್ಯುನ್ಸ್ಟರ್ ನಗರದ ಹೈಸ್ಕೂಲ್ ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದಳು.

    ಸಾಮಾಜಿಕ ಜಾಲತಾಣಗಳ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಹೊಂದಿದ್ದ ಲಿನ್ ಅವರನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಮನೆಗೆ ಕರೆಸಿಕೊಳ್ಳುವ ಮುನ್ನ ವಿದ್ಯಾರ್ಥಿಗಳಿಗೆ ತನ್ನ 5 ನಗ್ನ ಫೋಟೋಗಳನ್ನು ಕಳುಹಿಸಿ, ಸೆಕ್ಸ್ ಗೆ ಪ್ರಚೋದಿಸುವ ಮೂಲಕ ಮನೆಗೆ ಬರಮಾಡಿಕೊಂಡಿದ್ದಾಳೆ. ಶಿಕ್ಷಕಿಯ ಫೋಟೋ ನೋಡಿದ ವಿದ್ಯಾರ್ಥಿಗಳು ಆಕೆ ಮನೆಗೆ ತೆರಳಿದ್ದಾರೆ. ಮನೆಗೆ ಬಂದ ವಿದ್ಯಾರ್ಥಿಗಳೊಂದಿಗೆ ಬಲವಂತವಾಗಿ ಸೆಕ್ಸ್ ನಲ್ಲಿ ತೊಡಗಿಕೊಂಡಿದ್ದಾಳೆ.

    ವಿದ್ಯಾರ್ಥಿಗಳಿಗೆ ತನ್ನ ವಿವಿಧ ಭಂಗಿ ನಗ್ನ ಫೋಟೋಗಳನ್ನು ಕಳುಹಿಸುವ ಮೂಲಕ ಲೈಂಗಿಕ ಕ್ರಿಯೆಗೆ ಪ್ರಚೋದನೆ ನೀಡುತ್ತಿದ್ದಳು. ಲಿನ್ ಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳು ಸಹ ಇದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದಳು ಎಂದು ಬಾಲಕರು ಪೊಲೀಸರು ಮುಂದೆ ಹೇಳಿಕೆ ನೀಡಿದ್ದಾರೆ.

    ಮನೆಗೆ ಬರುವ ವಿದ್ಯಾರ್ಥಿಗಳಿಗೆ ಮದ್ಯಪಾನ ಮಾಡಿಸಿ ಅಸುರಕ್ಷಿತವಾಗಿ ಲೈಂಗಿಕ ಕ್ರಿಯೆಯಲ್ಲಿ ಆಕೆ ಭಾಗಿಯಾಗುತ್ತಿದ್ದಳು. ಸೆಪ್ಟೆಂಬರ್ ನಲ್ಲಿ ಆಕೆ ಸೋದರಿಯ ಹುಟ್ಟು ಹಬ್ಬದ ದಿನದಂದು ವಿದ್ಯಾರ್ಥಿಗೆ ನಗ್ನ ಫೋಟೋ ಕಳುಹಿಸಿ ಸೆಕ್ಸ್ ನಲ್ಲಿ ಭಾಗಿಯಾಗಿದ್ದಳು ಎಂಬುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಲಿನ್ ಶಿಕ್ಷಕಿ ಹುದ್ದೆಗೆ ರಾಜೀನಾಮೆ ನೀಡಿದ್ದು, ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಇಲಾಖೆ ಅಧಿಕಾರಿಗಳು ಆರೋಪಿ ಶಿಕ್ಷಕಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಲಿನ್ ಮೇಲಿರುವ ಆರೋಪ ಸಾಬೀತಾದಲ್ಲಿ ಆಕೆಗೆ 50 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಕಾಮುಕನಿಂದ ಪೈಶಾಚಿಕ ಕೃತ್ಯ!

    ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಕಾಮುಕನಿಂದ ಪೈಶಾಚಿಕ ಕೃತ್ಯ!

    ಕೊಲ್ಕತ್ತಾ: ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಕುಟುಂಬವೊಂದರ ಮಹಿಳೆ ಮೇಲೆ ಅತ್ಯಾಚಾರಗೈದು ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡನ್ನು ಹಾಕಿರುವ ಅಮಾನವೀಯ ಘಟನೆ ಪಶ್ಚಿಮ ಬಂಗಾಳ ಜಲ್ಪಾಯ್ ಗುರಿ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಶನಿವಾರ ರಾತ್ರಿ ನಡೆದಿದ್ದು, ಪ್ರಕರಣ ಸಂಬಂಧ ಆರೋಪಿಗಳನ್ನು ರತ್ನು ಮುಂಡ ಮತ್ತು ಪರಿಮಲ್ ರಾಯ್ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಸಂತ್ರಸ್ತೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

    ಏನಿದು ಪ್ರಕರಣ?
    ಆರೋಪಿಗಳು ಸಂತ್ರಸ್ತೆಯ ಪತಿಯನ್ನು ಲೆಬು ಬಗಾನ್ ಪ್ರದೇಶಕ್ಕೆ ಶನಿವಾರ ರಾತ್ರಿ ಸುಮಾರು 8 ಗಂಟೆ ಮದ್ಯದ ಪಾರ್ಟಿಗೆ ಆಹ್ವಾನಿಸಿದ್ದಾರೆ. ಆದರೆ ಇದಕ್ಕೆ ಆಕೆಯ ಪತಿ ನಿರಾಕರಿಸಿದ್ದಾನೆ. ಆದರೂ ಆರೋಪಿಗಳು ಹಳೆಯ ವೈಯಕ್ತಿಕ ವಿವಾದವನ್ನು ಬಗೆಹರಿಸುವುದಾಗಿ ಹೇಳಿ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ. ಇತ್ತ ಪಾರ್ಟಿ ಗೆಂದು ಹೋದ ಪತಿ ರಾತ್ರಿ 10 ಗಂಟೆವರೆಗೂ ಮನೆಗೆ ಬರದಿದ್ದಾಗ ಪತಿಯನ್ನು ಹುಡುಕಿಕೊಂಡು ಸಂತ್ರಸ್ತೆ ಹೋಗಿದ್ದಾರೆ. ಆಗ ಪತ್ನಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿದೆ.

    ಈ ಸಂದರ್ಭವನ್ನು ಉಪಯೋಗಿಸಿಕೊಂಡ ಆರೋಪಿಗಳಲ್ಲಿ ಒಬ್ಬ, ಮಹಿಳೆಯನ್ನು ಸಮೀಪವಿರೋ ಪ್ರದೇಶದಲ್ಲಿ ಪೊದೆಗೆ ಎಳೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಮತ್ತೊಬ್ಬ ಆಕೆಯ ಮೇಲೆ ಅತ್ಯಾಚಾರ ಮಾಡಿಲ್ಲ. ಆದರೆ ಈ ಕೃತ್ಯಕ್ಕೆ ಸಾಥ್ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅತ್ಯಾಚಾರ ಮಾಡಿದಲ್ಲದೇ ಸಂತ್ರಸ್ತೆಯ ಗುಪ್ತಾಂಗಕ್ಕೆ ಸಣ್ಣ ಕಬ್ಬಿಣದ ರಾಡ್ ಅನ್ನು ತುರುಕಿದ್ದಾರೆ. ಸದ್ಯಕ್ಕೆ ಸಂತ್ರಸ್ತೆ ಜಲ್ಪಾಯ್ ಗುರಿ ಸಾದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪುರಸಭೆಯ ಉಪಾಧ್ಯಕ್ಷ ರಾಜೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.

    ಈ ಘಟನೆಯಿಂದ ಕೋಪಗೊಂಡ ಸ್ಥಳೀಯರು ಆರೋಪಿಗಳ ಮನೆಗಳ ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಪರಿಸ್ಥಿತಿಯನ್ನು ಸ್ಥಳೀಯ ಪೊಲೀಸರು ನಿಯಂತ್ರಿಸಿದ್ದಾರೆ. ಸಂತ್ರಸ್ತೆಯ ಕುಟುಂಬದವರು ಧುಪ್ಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರತ್ನು ಮುಂಡಾ ಮತ್ತು ಪರಿಮಲ್ ರಾಯ್ ಆರೋಪಿಗಳನ್ನು ಬಂಧಿಸಲಾಗಿದ್ದು, ನಮ್ಮ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

    ಈ ಘಟನೆಯು ನವದೆಹಲಿಯಲ್ಲಿ 2012ರಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದ ನೆನಪಿಸುವಂತಿದೆ. ಯುವತಿಯೊಬ್ಬಳ ಮೇಲೆ ಆಕೆಯ ಬಾಯ್ ಫ್ರೆಂಡ್ ಎದುರೇ ಚಲಿಸುತ್ತಿರುವ ಬಸ್ಸಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅಲ್ಲದೇ ಓರ್ವ ಆರೋಪಿ ಆಕೆಯ ಖಾಸಗಿ ಅಂಗಕ್ಕೆ ರಾಡ್ ತುರುಕಿದ್ದನು. ನಂತರ ಬಸ್ಸಿನಿಂದ ಆಕೆಯನ್ನು ಹೊರದಬ್ಬಿದ್ದರು ಎಂದು ಪೊಲೀಸರು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಾತ್ರೆಯಿಂದ ಮನೆಗೆ ಮರಳುತ್ತಿದ್ದ ಬಾಲಕಿ ಮೇಲೆ ಗ್ಯಾಂಗ್ ರೇಪ್

    ಜಾತ್ರೆಯಿಂದ ಮನೆಗೆ ಮರಳುತ್ತಿದ್ದ ಬಾಲಕಿ ಮೇಲೆ ಗ್ಯಾಂಗ್ ರೇಪ್

    ಪಾಟ್ನಾ: ಜಾತ್ರೆ ಮುಗಿಸಿ ಮನೆಗೆ ಮರಳುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಇಬ್ಬರು ಕಾಮುಕರನ್ನು ಬಿಹಾರ ಪೊಲೀಸರು ಶನಿವಾರ ಬಂಧಿಸಿದ್ದಾರೆ.

    ಬಿಹಾರದ ಚಪ್ರಾ ಜಿಲ್ಲೆಯಲ್ಲಿ ಇದೇ ತಿಂಗಳು 18ರಂದು ಘಟನೆ ನಡೆದಿದ್ದು, ಬಾಲಕಿ ತನ್ನ ಪೋಷಕರಿಗೆ ಶನಿವಾರ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಬಾಲಕಿಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಜಾತ್ರೆ ಮುಗಿಸಿ ನಾನು ಮನೆಗೆ ತೆರಳುತ್ತಿದ್ದೆ. ಈ ವೇಳೆ ದಾರಿಯ ಮಧ್ಯೆ ಬಂದ ಇಬ್ಬರು, ಮಾರಕಾಸ್ತ್ರಗಳನ್ನು ಹಿಡಿದು, ನನ್ನನ್ನು ಹೆದರಿಸಿ ಅಪಹರಣ ಮಾಡಿದರು. ಬಳಿಕ ಸಾಮೂಹಿಕ ಅತ್ಯಾಚಾರ ಎಸಗಿ, ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಸಂತ್ರಸ್ತ ಬಾಲಕಿ ದೂರಿದ್ದಾಳೆ.

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಇಂತಹದ್ದೇ ಪ್ರಕರಣವೊಂದು ಬಿಹಾರದ ಚಿತ್ರಂಜನ್ ಎಂಬಲ್ಲಿ ನಡೆದಿದ್ದು, ಕಾಮುಕರಿಂದ ತಪ್ಪಿಸಿಕೊಳ್ಳಲು ಹೋಗಿ 9ನೇ ತರಗತಿ ವಿದ್ಯಾರ್ಥಿನಿ ಮೂರು ಅಂತಸ್ತಿನ ಕಟ್ಟದಿಂದ ಜಿಗಿದಿದ್ದಳು. ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಇದನ್ನು ಓದಿ: ಕಾಮುಕರಿಂದ ತಪ್ಪಿಸಿಕೊಳ್ಳಲು 3ನೇ ಮಹಡಿಯಿಂದ ಹಾರಿದ್ಳು- ಹೈ ವೋಲ್ಟೆಜ್ ತಂತಿಯಲ್ಲಿ ಸಿಲುಕಿಕೊಂಡ ಬಾಲಕಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಿಡ್ನಾಪ್ ಮಾಡಿ ಮಹಿಳೆಯ ಬರ್ಬರ ಹತ್ಯೆ!

    ಕಿಡ್ನಾಪ್ ಮಾಡಿ ಮಹಿಳೆಯ ಬರ್ಬರ ಹತ್ಯೆ!

    ಬೆಂಗಳೂರು: ಮಹಿಳೆಯನ್ನು ಕಿಡ್ನಾಪ್ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಹೆಣ್ಣೂರಿನ ವಡ್ಡರಪಾಳ್ಯದಲ್ಲಿ ನಡೆದಿದೆ.

    ಬಾಣಸವಾಡಿಯ ಕರಿಯಣ್ಣಪಾಳ್ಯದ ನಿವಾಸಿ ಶಾಂತಿ(52) ಕೊಲೆಯಾದ ಮಹಿಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ್, ಚೆಲುವ ಅಲಿಯಾಸ್ ಮೋಹನ್ ರನ್ನು ಬಂಧಿಸಲಾಗಿದೆ.

    ಅಕ್ಟೋಬರ್ 10 ರಂದು ಬಾಣಸವಾಡಿ ಠಾಣೆಯಲ್ಲಿ ಶಾಂತಿ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಾಗಿತ್ತು. ಆದರೆ ಇಂದು ಶಾಂತಿ ಹೆಣ್ಣೂರು ಬಳಿ ಶವವಾಗಿ ಪತ್ತೆಯಾಗಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಾಣಸವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಶಾಂತಿ 50 ಸಾವಿರ ರೂ. ಹಣವನ್ನು ಸುಂದರ್ ಗೆ ನೀಡಬೇಕಾಗಿತ್ತು. ಹಣಕಾಸಿನ ವಿಚಾರವಾಗಿ ಕರೆಸಿಕೊಂಡು ಅಕ್ಟೋಬರ್ 9 ರಂದು ಶಾಂತಿಯನ್ನು ಬಾಣಸವಾಡಿಯಿಂದ ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಬಳಿಕ ಹೆಣ್ಣೂರಿನ ವಡ್ಡರಪಾಳ್ಯದಲ್ಲಿ ಶಾಂತಿಯ ಮೃತದೇಹ ಎಸೆದಿದ್ದಾರೆ.

    ನಾಪತ್ತೆ ದೂರು ದಾಖಲಾದ ಬಳಿಕ ಶಾಂತಿ ಪೂರ್ವಪರ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದಾಗ ಶಾಂತಿ ಜೊತೆ ಯುವಕರ ಗುಂಪು ಜಗಳ ಮಾಡಿರುವ ವಿಚಾರ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ನಾಗರಾಜ್, ಚೆಲುವ ಅಲಿಯಾಸ್ ಮೋಹನ್ ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾವೇ ಈ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv