Tag: arrest

  • ರೈಲ್ವೆ ನಿಲ್ದಾಣದಲ್ಲಿ ಮೂರು ವರ್ಷದ ಬಾಲಕಿ ಮೇಲೆ ರೇಪ್

    ರೈಲ್ವೆ ನಿಲ್ದಾಣದಲ್ಲಿ ಮೂರು ವರ್ಷದ ಬಾಲಕಿ ಮೇಲೆ ರೇಪ್

    ಮುಂಬೈ: ಮೂರು ವರ್ಷದ ಬಾಲಕಿಯ (Girl) ಮೇಲೆ ಚಿಂದಿ ಆಯುವವನೊಬ್ಬ ಅತ್ಯಾಚಾರವೆಸಗಿದ ಘಟನೆ ಮಹಾರಾಷ್ಟ್ರದ (Maharashtra) ನವಿ ಮುಂಬೈನಲ್ಲಿ ನಡೆದಿದೆ.

    ಪನ್ವೇಲ್ ರೈಲು ನಿಲ್ದಾಣದಲ್ಲಿ (Railway Station) ತಾಯಿಯೊಂದಿಗೆ 3 ವರ್ಷದ ಬಾಲಕಿ ಮಲಗಿತ್ತು. ಈ ವೇಳೆ ಚಿಂದಿ ಆಯುವವನು ಬಾಲಕಿಯನ್ನು ಎತ್ತಿಕೊಂಡು ಪಕ್ಕಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಅವನು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ದೂರದಲ್ಲಿ ಮಗು ಅಳುತ್ತಿರುವುದನ್ನು ತಾಯಿ ಕೇಳಿಸಿಕೊಂಡಿದ್ದಾಳೆ. ಅದಾದ ಬಳಿಕ ಬಾಲಕಿಯನ್ನು ಹುಡುಕುತ್ತಾ ಆಕೆ ಇದ್ದ ಸ್ಥಳಕ್ಕೆ ತಾಯಿ ತಲುಪಿದ್ದಾಳೆ. ಈ ವೇಳೆ ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಇದನ್ನೂ ಓದಿ: ನಾಗಾಲ್ಯಾಂಡ್‌ನಲ್ಲಿ ವಿರೋಧ ಪಕ್ಷವೇ ಇಲ್ಲ

    ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಬಾಲಕಿಯ ಪೋಷಕರು ಆರೋಪಿಯ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. (Arrest) ಇದನ್ನೂ ಓದಿ: ಸದ್ಯದಲ್ಲೇ ಮಾಡಾಳ್ ವಿರೂಪಾಕ್ಷಪ್ಪ ಬಂಧನ ಆಗಲಿದೆ: ಆರಗ ಜ್ಞಾನೇಂದ್ರ

  • ಐಷಾರಾಮಿ ಕಾರಲ್ಲಿ ಬಂದು ಜಿ20 ಕಾರ್ಯಕ್ರಮಕ್ಕಾಗಿ ಇಟ್ಟಿದ್ದ ಹೂಕುಂಡ ಕದ್ದೊಯ್ದ ಕಳ್ಳ ಅರೆಸ್ಟ್‌

    ಐಷಾರಾಮಿ ಕಾರಲ್ಲಿ ಬಂದು ಜಿ20 ಕಾರ್ಯಕ್ರಮಕ್ಕಾಗಿ ಇಟ್ಟಿದ್ದ ಹೂಕುಂಡ ಕದ್ದೊಯ್ದ ಕಳ್ಳ ಅರೆಸ್ಟ್‌

    ಲಕ್ನೋ: ಐಷಾರಾಮಿ ಕಾರಿನಲ್ಲಿ (Car) ಬಂದ ವ್ಯಕ್ತಿಗಳಿಬ್ಬರು ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಕಾರ್ಯಕ್ರಮಕ್ಕಾಗಿ (G20 Event) ಹಾಕಲಾಗಿದ್ದ ಹೂವಿನ ಕುಂಡಗಳನ್ನು (Flower Pot) ಕದ್ದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆ.

    ದೆಹಲಿ-ಗುರುಗ್ರಾಮ್ ಎಕ್ಸ್‌ಪ್ರೆಸ್ ವೇನಲ್ಲಿರುವ ಆಂಬಿಯೆನ್ಸ್ ಮಾಲ್ ಎದುರು ಈ ಘಟನೆ ನಡೆದಿದೆ. ಹೂವಿನ ಕುಂಡವನ್ನು ಕದಿಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಬ್ಬರು ಪುರುಷರು ಹೂವಿನ ಕುಂಡವನ್ನು ಕದ್ದು ಕಾರಿನಲ್ಲಿ ಹಾಕುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.

    ಟ್ವಿಟ್ಟರ್‌ನಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಧಿಕಾರಿ ನಿಶಾಂತ್ ಕುಮಾರ್ ಯಾದವ್ ಅವರು ಘಟನೆ ಕುರಿತು ತನಿಖೆ ನಡೆಸುವಂತೆ ಗುರುಗ್ರಾಮ್ ಪೊಲೀಸರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ನಾನು ರಾಜಕೀಯಕ್ಕೆ ಬಂದಿರುವುದೇ ಆಕಸ್ಮಿಕ: ಸುಮಲತಾ ಅಂಬರೀಶ್

    ಈ ವೇಳೆ ಗಾಂಧಿನಗರ ನಿವಾಸಿ ಮನಮೋಹನ್ ಎಂಬಾತನನ್ನು ಬಂಧಿಸಿದ್ದು, (Arrest) ಪ್ರಕರಣದ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಜೊತೆಗೆ ಹೂವಿನ ಕುಂಡಗಳನ್ನು ಇಡಲಾಗಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾದಿಂದ ತೈಲಕ್ಕೆ ಭಾರೀ ಬೇಡಿಕೆ – ಆದ್ರೂ ರಷ್ಯಾಗೆ ಭಾರತದ ಕಡೆ ಒಲವೇಕೆ?

  • ಚಿಕ್ಕಮಗಳೂರಿನಲ್ಲಿ ಹಾಡಹಗಲೇ ಶೂಟೌಟ್ – ಬೈಕ್‌ ಸವಾರರಿಬ್ಬರು ಸ್ಥಳದಲ್ಲೇ ಸಾವು

    ಚಿಕ್ಕಮಗಳೂರಿನಲ್ಲಿ ಹಾಡಹಗಲೇ ಶೂಟೌಟ್ – ಬೈಕ್‌ ಸವಾರರಿಬ್ಬರು ಸ್ಥಳದಲ್ಲೇ ಸಾವು

    ಚಿಕ್ಕಮಗಳೂರು: ಬೈಕಿನಲ್ಲಿ (Bike) ತೆರಳುತ್ತಿದ್ದ ಇಬ್ಬರ ಮೇಲೆ ಗುಂಡಿನ ದಾಳಿ (Shoot Out) ನಡೆಸಿದ್ದರಿಂದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಿದರೆ-ಚಂದುವಳ್ಳಿ ಗ್ರಾಮದ ಬಳಿ ನಡೆದಿದೆ.

    ಮೃತರನ್ನ ಪ್ರಕಾಶ್ (30) ಹಾಗೂ ಪ್ರವೀಣ್ (33) ಎಂದು ಗುರುತಿಸಲಾಗಿದೆ. ಗುಂಡಿನ ದಾಳಿ ನಡೆಸಿದ ರಮೇಶ್ ಎಂಬಾತ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ. ರಮೇಶ್, ಪ್ರಕಾಶ್, ಪ್ರವೀಣ್ ಮೂವರು ಸಂಬಂಧಿಕರು ಎಂದು ಹೇಳಲಾಗುತ್ತಿದೆ. ಆದರೆ, ಗುಂಡಿನ ದಾಳಿ ನಡೆಸಿದ ರಮೇಶ್‌ಗೆ ಬಂದೂಕು ಎಲ್ಲಿಂದ ಸಿಕ್ತು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಮಲೆನಾಡು ಭಾಗದಲ್ಲಿ ಬೆಳೆ ಹಾಗೂ ಪ್ರಾಣ ರಕ್ಷಣೆಗೆ ಬೆಳೆಗಾರರು ಗನ್ ಇಟ್ಟುಕೊಂಡಿರುತ್ತಾರೆ. ಅದೇ ಬಂದೂಕು ಅಥವಾ ಯಾವ ಬಂದೂಕು ಪರವಾನಗಿ ಇದೆಯಾ ಈ ಕೋನದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಹಾಡಹಗಲೇ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಸುತ್ತಮುತ್ತಲಿನ ಜನ ಕೂಡ ಕಂಗಾಲಾಗಿದ್ದಾರೆ. ಇದನ್ನೂ ಓದಿ: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಮಗ ಸಾವು

    ಘಟನೆಗೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿರುವ ಬಾಳೆಹೊನ್ನೂರು ಪೊಲೀಸರು ಆತ ನಿಜಕ್ಕೂ ಮಾನಸಿಕ ಅಸ್ವಸ್ಥನಾ, ಗುಂಡಿನ ದಾಳಿ ಹಿಂದೆ ಬೇರೆ ಕಾರಣ ಇದ್ಯಾ, ಸಂಬಂಧಿಕರ ಮಧ್ಯೆ ಬೇರ‍್ಯಾವುದಾದರೂ ಕಾರಣಕ್ಕೆ ಮನಸ್ತಾಪ ಇತ್ತಾ ಎಂಬೆಲ್ಲಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಆದರೆ, ವಯಸ್ಸಿಗೆ ಬಂದ ಇಬ್ಬರು ಮಕ್ಕಳನ್ನು ಕಳೆದುಕೊಂಡವರ ಹೆತ್ತವರ ನೋವಿನ ಆಕ್ರಂದನ ಮುಗಿಲು ಮುಟ್ಟಿದೆ. ಗುಂಡಿನ ದಾಳಿ ನಡೆಸಿದ ರಮೇಶ್‌ನನ್ನು ಬಾಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದಶಪಥ ಹೆದ್ದಾರಿ ತಡೆದು ಪ್ರತಿಭಟನೆ – ಲಾಠಿ ಬೀಸಿದ ಪೊಲೀಸರು

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೆಹಲಿ ಅಬಕಾರಿ ನೀತಿ ಹಗರಣ- ಸಂಸದನ ಪುತ್ರ ಅರೆಸ್ಟ್

    ದೆಹಲಿ ಅಬಕಾರಿ ನೀತಿ ಹಗರಣ- ಸಂಸದನ ಪುತ್ರ ಅರೆಸ್ಟ್

    ನವದೆಹಲಿ: ದೆಹಲಿಯ ಅಬಕಾರಿ ನೀತಿ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಒಂಗೋಲ್‍ನ ವೈಎಸ್‍ಆರ್ ಕಾಂಗ್ರೆಸ್ (YSR Congress) ಪಕ್ಷದ ಸಂಸದನ ಮಗನನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.

    ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಸಂಸದ ಮಾಗುಂಟ ಶ್ರೀನಿವಾಸಲು ರೆಡ್ಡಿ (Magunta Srinivasulu Reddy) ಅವರ ಪುತ್ರ ರಾಘವ್ ಮಾಗುಂಟ (Raghav Magunta) ಅವರನ್ನು ಇಡಿ (ED) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ) ಅಡಿಯಲ್ಲಿ ಬಂಧಿಸಲಾಗಿದೆ (Arrest) ಎಂದು ಅಧಿಕಾರಿಗಳು ತಿಳಿಸಿದರು.

    ರಾಘವ್ ಮಾಗುಂಟ ಅವರನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸುವ ನಿರೀಕ್ಷೆಯಿದೆ. ಈ ಪ್ರಕರಣದಲ್ಲಿ ರಾಘವ್ ಮಾಗುಂಟನನ್ನು ಇಡಿ 9ನೇ ಆರೋಪಿಯಾಗಿ ಬಂಧಿಸಿದೆ. ಇದನ್ನೂ ಓದಿ: ಟರ್ಕಿ ಭೂಕಂಪ- ಎಂಟು ವರ್ಷದ ಬಾಲಕಿಯನ್ನು ರಕ್ಷಿಸಿದ NDRF

    ಈ ವಾರದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ಶಿರೋಮಣಿ ಅಕಾಲಿ ದಳದ ಶಾಸಕ ದೀಪ್ ಮಲ್ಹೋತ್ರಾ ಅವರ ಪುತ್ರ ಗೌತಮ್ ಮಲ್ಹೋತ್ರಾ ಮತ್ತು ಜಾಹೀರಾತು ಕಂಪನಿ ಚಾರಿಯಟ್ ಪ್ರೊಡಕ್ಷನ್ ಪ್ರೈವೆಟ್ ಲಿಮಿಟೆಡ್ ನಿರ್ದೇಶಕ ರಾಜೇಶ್ ಜೋಶಿಯನ್ನು ಇ.ಡಿ ಬಂಧಿಸಿದೆ. ಇದನ್ನೂ ಓದಿ: ಟೆಲಿಗ್ರಾಮ್, ಡಾರ್ಕ್ ವೆಬ್ ಮೂಲಕ ಉಗ್ರ ಸಂಘಟನೆ ಜೊತೆಗೆ ಸಂಪರ್ಕ..?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೆಲಸ ಕೊಡಿಸುವ ಆಸೆ ತೋರಿಸಿ ಸೆಕ್ಸ್- ಟೆಕ್ಕಿ ಅರೆಸ್ಟ್

    ಕೆಲಸ ಕೊಡಿಸುವ ಆಸೆ ತೋರಿಸಿ ಸೆಕ್ಸ್- ಟೆಕ್ಕಿ ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೆಲಸ ಹುಡುಕೋದು ಸಿಕ್ಕಾಪಟ್ಟೆ ಕಷ್ಟ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಟೆಕ್ಕಿ (Techie) ಯೊಬ್ಬ ಯುವತಿಯರ ಜೊತೆ ಸೆಕ್ಸ್ ಮಾಡಿ ಸಿಕ್ಕಿಬಿದ್ದಿದ್ದಾನೆ.

    ಇನ್‍ಸ್ಟಾಗ್ರಾಂ (Instagram) ಮೂಲಕ ಹುಡುಗಿಯರ ಪರಿಚಯ ಮಾಡಿಕೊಳ್ಳುತ್ತಾ ಇದ್ದ ಟೆಕ್ಕಿ ದಿಲೀಪ್ ಬಂಧನ ಆಗಿದೆ. ಇನ್‍ಸ್ಟಾಗ್ರಾಂನಲ್ಲಿ ಹುಡುಗಿಯರ ಹೆಸರನ್ನು ಇಟ್ಟುಕೊಂಡು ಹುಡುಗಿಯರ (Girls) ಪರಿಚಯ ಮಾಡಿಕೊಂಡು ಬಳಿಕ ಕೆಲಸ ಕೊಡಿಸ್ತೀನಿ ಅಂತ ಮೋಸ ಮಾಡ್ತಾ ಇದ್ದ. ಬಳಿಕ ಓಯೋ ರೂಂಗೆ ಕರೆದು ಯುವತಿಯರ ಬೆದರಿಸಿ ಸೆಕ್ಸ್ ಮಾಡ್ತಾ ಇದ್ದ.

    ಜೊತೆಗೆ ವೀಡಿಯೋ ಮಾಡಿಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ (Money Blackmail) ಮಾಡ್ತಾ ಇದ್ದ ಎಂಬ ಆರೋಪ ಕೇಳಿ ಬಂದಿದೆ. ಇದೇ ರೀತಿ 12 ಹುಡುಗಿಯರಿಗೆ ಮಾಡಿದ್ದಾನೆ ಎಂಬುದು ಗೊತ್ತಾಗಿದ್ದು, ಆರೋಪಿ ದಿಲೀಪ್ ಬಂಧಿಸಿ ವಿಚಾರಣೆ ನಡೆಸ್ತಾ ಇದ್ದಾರೆ. ಇದನ್ನೂ ಓದಿ: ಹದಿಹರಿಯದ ಪ್ರೇಮಕ್ಕೆ ಅಪ್ರಾಪ್ತ ಬಾಲಕಿ ಬಲಿ- ವಿಷ ಕುಡಿದು ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾರ್ಕ್‍ನಲ್ಲಿ ಕುಳಿತಿದ್ದಕ್ಕೆ ದಂಡ ವಸೂಲಿ ಪ್ರಕರಣ- ಹೋಂ ಗಾರ್ಡ್ ಬಂಧನ

    ಪಾರ್ಕ್‍ನಲ್ಲಿ ಕುಳಿತಿದ್ದಕ್ಕೆ ದಂಡ ವಸೂಲಿ ಪ್ರಕರಣ- ಹೋಂ ಗಾರ್ಡ್ ಬಂಧನ

    ಬೆಂಗಳೂರು: ಗೆಳೆಯನ ಜೊತೆ ಪಾರ್ಕ್ ನಲ್ಲಿ ಕುಳಿತಿದ್ದಕ್ಕೆ 1 ಸಾವಿರ ರೂ. ದಂಡ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೋಂ ಗಾರ್ಡ್‍ನನ್ನು ಬಂಧಿಸಲಾಗಿದೆ.

    ಬಂಧತ ಹೋಂ ಗಾರ್ಡ್ ನನ್ನು ಮಂಜುನಾಥ್ ರೆಡ್ಡಿ ಎಂದು ಗುರುತಿಸಲಾಗಿದ್ದು, ಈತ ಬಿಬಿಎಂಪಿ ಕಡೆಯಿಂದ ಪಾರ್ಕ್ ಭದ್ರತೆಗೆ ನೇಮಕವಾಗಿದ್ದ. ಪಾರ್ಕ್ ನಲ್ಲಿ ಕುಳಿತಿದ್ದ ಯುವಕ- ಯುವತಿಯನ್ನು ಬೆದರಿಸಿದ ಹೊಮ್ ಗಾರ್ಡ್, ನಾನು ಪೊಲೀಸ್ ಅಂತಾ ಬೆದರಿಸಿ ಒಂದು ಸಾವಿರ ಲಂಚದ ಹಣ ಪೇಟಿಎಂ ಮಾಡಿಸಿಕೊಂಡಿದ್ದಾನೆ. ಇದೀಗ ಈತ ಪೊಲೀಸರ ಅತಿಥಿಯಾಗಿದ್ದಾನೆ. ಇದನ್ನೂ ಓದಿ: ಯುವಕನ ಜೊತೆಗೆ ಪಾರ್ಕ್‍ನಲ್ಲಿ ಕೂತಿದ್ದಕ್ಕೆ 1 ಸಾವಿರ ವಸೂಲಿ- ಪೇದೆ ವಿರುದ್ಧ ಯುವತಿ ದೂರು

    ಏನಿದು ಘಟನೆ..?: ಬೆಂಗಳೂರಿನ ಎಚ್ ಎಎಲ್ (HAL Police Station) ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿ (Kundalahalli Park) ಕೆರೆಗೆ ವಾಯುವಿಹಾರಕ್ಕೆ ಯುವಕ- ಯುವತಿ ಕಳೆದ ಶನಿವಾರ ಮಧ್ಯಾಹ್ನದ ವೇಳೆ ಹೋಗಿದ್ರು. ಮಧ್ಯಾಹ್ನದ ವೇಳೆ ಆಗಿದ್ದರಿಂದ, ಮರದ ಕೆಳಗೆ ಕುಳಿತಿದ್ರು. ಈ ವೇಳೆ ಅಲ್ಲಿಗೆ ಬಂದ ಹೋಮ್ ಗಾರ್ಡ್ (Home Guard Arrest), ಏಕಾಏಕಿ ಯುವಕ- ಯುವತಿಯ ಫೋಟೋ ತೆಗೆಯೋಕೆ ಶುರುಮಾಡಿದ್ದಾನೆ.

    ಗಾಬರಿಗೊಂಡ ಯುವತಿ, ಯಾಕೆ ಫೋಟೋ ತೆಗೀತಿದ್ದೀರಿ. ನಾವು ಏನ್ ತಪ್ಪು ಮಾಡಿದೆವು ಅಂತಾ ಪ್ರಶ್ನೆ ಮಾಡಿದ್ರು. ಈ ವೇಳೆ ಮಾತಿಗಿಳಿದ ಹೋಮ್ ಗಾರ್ಡ್, ನಾನು ಪೊಲೀಸ್, ಪಾರ್ಕ್ ಒಳಗೆ ಒಟ್ಟಿಗೆ ಕುಳಿತುಕೊಂಡು ಏನ್ ಮಾಡ್ತಾ ಇದ್ದೀರಾ..? ಯಾರು ಒಳಗೆ ಬರೋಕೆ ಅನುಮತಿ ಕೊಟ್ಟಿದ್ದು ಅಂತಾ ಬೆದರಿಸಿದ್ರು. ನಿಮ್ ಮೇಲೆ ಕೇಸ್ ಹಾಕ್ತಿವಿ ನಡೀರಿ ಅಂತಾ ಬೆದರಿಸಿ, ಒಂದು ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಹೋಮ್ ಗಾರ್ಡ್. ಮಾಡದ ತಪ್ಪಿಗೆ ಯುವತಿ ಅನಿವಾರ್ಯವಾಗಿ ಒಂದು ಸಾವಿರ ಕೊಟ್ಟು, ಅಲ್ಲಿಂದ ಹೊರ ಬಂದಿದ್ದರು. ಈ ಘಟನೆ ಬಗ್ಗೆ ಯುವತಿ ಬೈಕ್ ನಲ್ಲಿ ಬಂದಿದ್ದ ಹೊಮ್ ಗಾರ್ಡ್ ನ ಫೋಟೋ ಸಮೇತ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದರು.

    ಈ ಸಂಬಂಧ ಎಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪೊಲೀಸರ ವೇಷದಲ್ಲಿ ಬಂದು 80 ಲಕ್ಷ ರೂ. ದೋಚಿಕೊಂಡು ಹೋಗಿದ್ದ ಆರೋಪಿಗಳ ಬಂಧನ

    ಪೊಲೀಸರ ವೇಷದಲ್ಲಿ ಬಂದು 80 ಲಕ್ಷ ರೂ. ದೋಚಿಕೊಂಡು ಹೋಗಿದ್ದ ಆರೋಪಿಗಳ ಬಂಧನ

    ಬೆಂಗಳೂರು: ಪೊಲೀಸರ (Police) ವೇಷದಲ್ಲಿ ಬಂದು ಕಾರು ಅಡ್ಡ ಹಾಕಿ, 80 ಲಕ್ಷ ರೂ. ದೋಚಿಕೊಂಡು ಎಸ್ಕೇಪ್ ಆಗಿದ್ದ ದರೋಡೆಕೋರರನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಭರತ್ ಶಿವರಾಮ್, ಶೇಕ್ ಚೆಂಪತಿ ಲಾಲ್ ಪಾಷ, ಶೇಕ್ ಚಂಪತಿ ಜಾಕಿರ್, ಬಂಧಿತ ಆರೋಪಿಗಳು. ಆರೋಪಿಗಳು ಮೂಲತಃ ಆಂಧ್ರಪ್ರದೇಶದವರು ಆಗಿದ್ದು, ಆರೋಪಿಗಳ ವಿರುದ್ಧ ಆಂಧ್ರಪ್ರದೇಶದಲ್ಲಿ ಒಬ್ಬೊಬ್ಬರ ಮೇಲೆ 50ಕ್ಕೂ ಹೆಚ್ಚು ಕೇಸ್‌ಗಳಿದ್ದರಿಂದ ಅವರೆಲ್ಲರೂ ಬೆಂಗಳೂರಿಗೆ (Bengaluru) ಬಂದು ದರೋಡೆ ಮಾಡಿಕೊಂಡು ಹೋಗಿದ್ದರು.

    ದರೋಡೆಕೋರರು ಡಿ. 27ರ ಮಧ್ಯಾಹ್ನ 1:30ರ ಸುಮಾರಿಗೆ ಶಾಂತಿನಗರ ಬಸ್ ನಿಲ್ದಾಣದ ಕೆ.ಹೆಚ್.ರಸ್ತೆಯ ಸಿಗ್ನಲ್ ಬಳಿ ಸ್ವಿಫ್ಟ್ ಡಿಜೈರ್ ಕಾರೊಂದನ್ನು ಅಡ್ಡಗಟ್ಟಿ ಸಿನಿಮಾ ಸ್ಟೈಲ್‌ನಲ್ಲಿ ಹಣ ದೋಚಿಕೊಂಡು ಹೋಗಿದ್ದರು. ಡಿ. 27ರಂದು ಅಡಿಕೆ ವ್ಯಾಪರಸ್ಥರಾದ ದಕ್ಷಿಣಮೂರ್ತಿ ಮತ್ತು ಮೋಹನ್ ಎಂಬವರು ಕುಮಾರಸ್ವಾಮಿ ಮತ್ತು ಚಂದನ್ ಎಂಬ ಕೆಲಸಗಾರರಿಗೆ 80 ಲಕ್ಷ ರೂ. ಹಣ ನೀಡಿ, ಅಡಿಕೆ ಖರೀದಿಗೆ ಎಂದು ತಮಿಳುನಾಡಿಗೆ ಕಳುಹಿಸಿಕೊಟ್ಟಿದ್ದರು.

    ಶಾಂತಿನಗರದ ಕೆ.ಹೆಚ್.ಬಿ ರಸ್ತೆ ಬಳಿ ಬರುತ್ತಿದ್ದಂತೆ ಅವರನ್ನು ನಕಲಿ ಪೊಲೀಸರು ಅಡ್ಡ ಹಾಕಿದ್ದಾರೆ. ನಂತರ ನಾವು ಪೊಲೀಸರು ಹವಾಲ ಹಣವನ್ನು ಸಾಗಿಸ್ತಿದ್ದೀರಾ ಎಂದು ಬೆದರಿಸಿ, 2 ಬ್ಯಾಗ್‌ನಲ್ಲಿದ್ದ 80 ಲಕ್ಷ ಹಣವನ್ನು ಕಸಿದು ಪರಾರಿಯಾಗಿದ್ದರು. ಘಟನೆಗೆ ಸಂಬಂಧಿಸಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದನ್ನೂ ಓದಿ: ವಲಸಿಗರಿಗೆ ಆಪರೇಷನ್ ಮಾಡಲು ಹೋಗಿ ಕೈ ಸುಟ್ಟುಕೊಂಡ ಕಾಂಗ್ರೆಸ್ ಪಾಳಯ

    ಘಟನೆ ಸ್ಥಳದ ಸಿಸಿಟಿವಿ ಪರಿಶೀಲನೆ ಮಾಡಿದಾಗ ನಕಲಿ ಪೊಲೀಸರು ಅನ್ನೋದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಸತತವಾಗಿ ಒಂದು ತಿಂಗಳ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ. (Arrest) ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿದ್ದ 80 ಲಕ್ಷ ಜೂಜಾಟವಾಡಿ ಹಣ ಕಳೆದುಕೊಂಡಿದ್ದರು. ಹಣ ಹೊಂದಿಸಲು ದರೋಡೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

    80 ಲಕ್ಷದಲ್ಲಿ 37 ಲಕ್ಷ ಅಷ್ಟೇ ವಶಕ್ಕೆ ಪಡೆಯಲಾಗಿದೆ. ರಾಬರಿ ಮಾಡಿದ್ದ 80 ಲಕ್ಷ ಕೂಡ ಹವಾಲ ಹಣ (Money) ಎನ್ನುವುದು ಪತ್ತೆಯಾಗಿದ್ದು, ಐಟಿ ಇಲಾಖೆಗೆ ಮಾಹಿತಿಯನ್ನು ರವಾನಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ. ಇದನ್ನೂ ಓದಿ: Madhya Pradesh Plane Crash: ಮಿರಾಜ್ 2000 ಯುದ್ಧ ವಿಮಾನದ ಪೈಲಟ್ ದುರ್ಮರಣ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾರಿನ ಬಾನೆಟ್ ಮೇಲೆ ಹೋದವನೇ ಅರೆಸ್ಟ್- ಲೈಂಗಿಕ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಬಂಧನ

    ಕಾರಿನ ಬಾನೆಟ್ ಮೇಲೆ ಹೋದವನೇ ಅರೆಸ್ಟ್- ಲೈಂಗಿಕ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಬಂಧನ

    ಬೆಂಗಳೂರು: ಕಾರಿನ ಬಾನೆಟ್ (Car Bonnet) ಮೇಲೆ ಯುವಕನನ್ನು ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಲೈಂಗಿಕ ದೌರ್ಜನ್ಯ (Sexual Harassment) ಪ್ರಕರಣದ ಅಡಿಯಲ್ಲಿ ಆತನನ್ನೇ ಬಂಧಿಸಲಾಗಿದೆ.

    ದರ್ಶನ್ ಹಾಗೂ ಪ್ರಿಯಾಂಕಾ ಇಬ್ಬರೂ ಪ್ರತ್ಯೇಕವಾಗಿ ಕಾರು ಚಲಾಯಿಸುತ್ತಿದ್ದರು. ಮಾಧ್ಯಮದಲ್ಲಿ ಸುದ್ದಿ ಪ್ರಸಾರದ ಬಳಿಕ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕಾರಿನ ಚಾಲಕಿಯ ಮೇಲೆ ಎರಡೆರಡು ಪ್ರಕರಣ ದಾಖಲಾಗಿದೆ.

    ಜ್ಞಾನಭಾರತಿ ಪೊಲೀಸ್ ಠಾಣೆ (Jnanabharathi Police Station) ಯಲ್ಲಿ ಇಬ್ಬರ ಮೇಲೂ ದೂರು ಪ್ರತಿದೂರು ದಾಖಲಾಗಿದ್ದು, ಕಾರು ಚಾಲಕಿ ಮೇಲೆ ಕೊಲೆಯತ್ನ ಹಾಗೂ ನೆಗ್ಲಿಜೆನ್ಸಿ ಡ್ರೈವಿಂಗ್ ನಡಿ ಪ್ರಕರಣ ದಾಖಲಿಸಲಾಗಿದೆ. ದರ್ಶನ್ ಮೇಲೆ ಹಲ್ಲೆ ಮತ್ತು ಗಲಭೆ ಮಾಡಿ ಕಾರು ಧ್ವಂಸ ಕೇಸ್ ನಡಿ ಪ್ರಕರಣ ದಾಖಲಿಸಲಾಗಿದೆ.

    ಮೆಡಿಕಲ್ ಟೆಸ್ಟ್ ಮುಗಿಸಿಕೊಂಡು ಮನೆಗೆ ಪ್ರಿಯಾಂಕಾ ಹಾಗೂ ಪ್ರಮೋದ್ ಹಿಂದಿರುಗುತ್ತಿದ್ದರು. ಆ ಸಂದರ್ಭದಲ್ಲಿ ಗಾಡಿ ಮುಖಾಮುಖಿ ಡಿಕ್ಕಿಯಾಗಿದೆ. ಪ್ರಶ್ನೆ ಮಾಡಿದ್ದಕ್ಕೆ ಮಾತಿನ ಚಕಮಕಿ ನಡೆದು ದರ್ಶನ್‍ನನ್ನು ಮಹಿಳೆ ಎಳೆದುಕೊಂಡು ಹೋಗಿದ್ದಾಳೆ. ಕಾರಿನ ಬಾನೆಟ್ ಮೇಲೆ ಇದ್ದಾಗ ಪ್ರಿಯಾಂಕಾ ಕಾರು ಚಲಾಯಿಸಿದ್ದಾಳೆ.

    ಕಾರು ನಿಲ್ಲಿಸಿದ ಮೇಲೆ ಪ್ರಿಯಾಂಕ, ನಿತೀಶ್ ಮೇಲೆ ಹಲ್ಲೆ ಮಾಡಿದ್ದಕ್ಕೆ ಲೈಂಗಿಕ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಬಂಧಿಸಲಾಗಿದೆ. ಪ್ರಕರಣ ಸಂಬಂಧ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬಾನೆಟ್ ಮೇಲೆ ಸವಾರನನ್ನು ಎಳೆದೊಯ್ದ ಕಾರು ಚಾಲಕಿ

    ಕಾರು ಚಾಲಕಿ ನೀಡಿದ ದೂರಿನಲ್ಲೇನಿದೆ..?: ಪೊಲೀಸರು ಠಾಣೆಗೆ ಬರಲು ಹೇಳಿದರೂ ಅಲ್ಲಿದ್ದ ವ್ಯಕ್ತಿಗಳು ಕಾರಿನ ಗ್ಲಾಸ್ ಒಡೆದರು. ಅಲ್ಲದೆ ಕಾರು ಚಲಾಯಿಸಲು ಮುಂದಾದಾಗ ಕಾರನ್ನು ಹಿಂಬಾಲಿಸಿಕೊಂಡ ಬಂದ ವ್ಯಕ್ತಿ ಅಡ್ಡಗಟ್ಟಿ ಜಖಂಗೊಳಿಸಲು ಪ್ರಯತ್ನಿಸಿದರು. ನಮ್ಮನ್ನು ಹಿಂಬಾಲಿಸಿಕೊಂಡು ಬಂದ ವ್ಯಕ್ತಿ ಕಾರಿನ ಬಾನೆಟ್ ಮೇಲೆ ನೆಗೆದು ಕುಳಿತುಕೊಂಡನು.

    ನಮಗೆ ಭಯವಾಗಿ ಕಾರು ಚಲಾಯಿಸಿಕೊಂಡು ಹೋದೆವು. ಆದರೂ ಆತ ಕೆಳಗೆ ಇಳಿದಿಲ್ಲ. ಇದನ್ನು ನೋಡಿ ಕೆಲವರು ನಮ್ಮನ್ನು ಹಿಂಬಾಲಿಸಿಕೊಂಡು ಬಂದು ಸ್ವಲ್ಪ ದೂರ ಹೀಗಿ ನಿಲ್ಲಿಸಿದೆವು. ನಂತರ ಕಾರು ಮುಂದೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಹಿಂಬಾಲಿಸಿಕೊಂಡು ಬಂದು ಕಾರು ಜಖಂಗೊಳಿಸಿದರು. ಅಲ್ಲದೆ ಸ್ನೇಹಿತ ನಿತೀಶ್ ಮೇಲೂ ಹಲ್ಲೆ ನಡೆಸಿದ್ದು, ಸಾಯಿಸುವುದಾಗಿ ಬೆದರಿಕೆ ಹಾಕಿದರು. ನಂತರ ಪೊಲೀಸರು ಠಾಣೆಗೆ ಕರೆದೊಯ್ದರು ಎಂದು ಪ್ರಿಯಾಂಕಾ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವೈದ್ಯೆಯ ಸೋಗಿನಲ್ಲಿ ರೋಗಿಗಳ ಬಳಿ ಚಿನ್ನಾಭರಣ ಕಳವು ಮಾಡ್ತಿದ್ದವಳು ಅರೆಸ್ಟ್

    ವೈದ್ಯೆಯ ಸೋಗಿನಲ್ಲಿ ರೋಗಿಗಳ ಬಳಿ ಚಿನ್ನಾಭರಣ ಕಳವು ಮಾಡ್ತಿದ್ದವಳು ಅರೆಸ್ಟ್

    ಬೆಂಗಳೂರು: ವೈದ್ಯೆಯ ರೀತಿ ವೇಷ ಧರಿಸಿ ಆಸ್ಪತ್ರೆಯಲ್ಲಿದ್ದ ರೋಗಿಗಳ ಚಿನ್ನಾಭರಣ ಕಳವು ಮಾಡುತ್ತಿದ್ದ ಲಕ್ಷ್ಮಿಯನ್ನು ಬಂಧಿಸಲಾಗಿದೆ.

    ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಘಟನೆ ನಡೆದಿತ್ತು. ಕಳೆದ ಕೆಲ ದಿನಗಳ ಹಿಂದೆ ವೈದ್ಯೆಯ ರೀತಿಯಲ್ಲಿ ಡ್ರೆಸ್ ಮಾಡಿಕೊಂಡು ಆಸ್ಪತ್ರೆ (Hospital) ಎಂಟ್ರಿಯಾಗಿದ್ದ ಕಳ್ಳಿ ಲಕ್ಷ್ಮಿ, ರೋಗಿಗಳ ವಾರ್ಡ್ ಗೆ ಹೋಗುತ್ತಿದ್ದಳು. ಬಳಿಕ ರೋಗಿಯ ಜೊತೆಗಿದ್ದವರನ್ನು ಚಿಕಿತ್ಸೆ ಕೊಡುವ ವೇಳೆ ಯಾರು ಒಳಗೆ ಇರಬಾರದು ಅಂತಾ ಹೊರಗೆ ಕಳುಹಿಸುತ್ತಿದ್ದಳು. ಹಾಗೆಯೇ ಹೊರಗೆ ಕಳುಹಿಸಿ ಚಿಕಿತ್ಸೆ ಕೊಡುವ ನೆಪದಲ್ಲಿ ರೋಗಿಗಳ ಬಳಿಯಿದ್ದ ಚಿನ್ನಾಭರಣ ಕಳವು ಮಾಡಿ ಎಸ್ಕೇಪ್ ಆಗುತ್ತಿದ್ದಳು. ಇದನ್ನೂ ಓದಿ: ಟ್ರಕ್, ಕಾರು ಭೀಕರ ಅಪಘಾತ- 9 ಮಂದಿ ದಾರುಣ ಸಾವು

    ರೋಗಿ ಸರಸಮ್ಮ ಅನ್ನೋರ ಬಳಿ ಇದೇ ವಂಚಿಸಿ 40 ಗ್ರಾಂ ಚಿನ್ನದ ಸರ ಕಳವು ಮಾಡಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ನಕಲಿ ಡಾಕ್ಟರ್ ಲಕ್ಷ್ಮಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಆರೋಪಿತೆ ಲಕ್ಷ್ಮಿಯ ಖಾಸಗಿ ಫೋಟೋ (Photo) ಇಟ್ಟುಕೊಂಡು ಹಣ ತರುವಂತೆ ಬ್ಲಾಕ್ ಮೇಲ್ ಮಾಡ್ತಿದ್ದ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಕಳ್ಳತನ ಮಾಡಿದಳು ಅನ್ನೋದು ಬೆಳಕಿಗೆ ಬಂದಿದೆ. ಸದ್ಯ ಆ ವ್ಯಕ್ತಿಯ ಬಂಧನಕ್ಕೆ ಪೊಲೀಸರು, ಶೋಧ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೋಳಿಗಳನ್ನು ಬಂಧಿಸಿದ ಪೊಲೀಸರು!

    ಕೋಳಿಗಳನ್ನು ಬಂಧಿಸಿದ ಪೊಲೀಸರು!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k