ಬೆಂಗಳೂರು: ಮನೆ ಮುಂದೆ ನಾಯಿ (Dog) ಕರೆದುಕೊಂಡು ಬಂದು ಗಲೀಜು ಮಾಡಿಸ್ತೀಯಾ ಎಂದು ಕೇಳಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಮುನಿರಾಜು (69) ಕೊಲೆಯಾದ ವ್ಯಕ್ತಿ. ಬೆಂಗಳೂರಿನ (Bengaluru) ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪ್ರಮೋದ್ ಮತ್ತು ರವಿಕುಮಾರ್ ನಾಯಿ ಜೊತೆಗೆ ಬಂದು ಮುನಿರಾಜು ಮನೆ ಮುಂದೆ ಸಿಗರೇಟ್ ಸೇದಿ ಸಮಸ್ಯೆ ಉಂಟು ಮಾಡಿದ್ದರು. ಈ ವಿಚಾರಕ್ಕೆ ಮುನಿರಾಜು ಪೊಲೀಸ್ ಠಾಣೆಗೆ ದೂರು ನೀಡಿದ್ದ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಇಬ್ಬರಿಗೂ ಕರೆದು ಬೈದು ಬುದ್ಧಿ ಹೇಳಿ ಮುಚ್ಚಳಿಕೆ ಬರೆಸಲಾಗಿತ್ತು.
ಅದಾದ ಬಳಿಕ ಠಾಣೆಗೆ ಹೋಗಿ ಬಂದು ಮರುದಿನ ಮತ್ತೆ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಪ್ರಮೋದ್ ಮತ್ತು ರವಿಕುಮಾರ್ ದೊಣ್ಣೆಯಿಂದ ಮುನಿರಾಜುಗೆ ಹಲ್ಲೆ ಮಾಡಿದ್ದರು. ಘಟನೆಯಲ್ಲಿ ಮುನಿರಾಜು ಮೃತಪಟ್ಟಿದ್ದು, ಆತನ ಜೊತೆಯಿದ್ದ ಮುರುಳಿ ಎಂಬ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ. ಈ ಕೊಲೆಗೆ ಪ್ರಮೋದ್ ಪತ್ನಿ ಪಲ್ಲವಿ ಸಹ ಸಾಥ್ ನೀಡಿದ್ದಳು ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ:ಉದ್ಯೋಗಿಯಿಂದಲೇ ಬ್ಯಾಂಕ್‌ನಲ್ಲಿ ಗುಂಡಿನ ದಾಳಿ – 5 ಮಂದಿ ಸಾವು, 9 ಮಂದಿಗೆ ಗಾಯ
ಬೀದರ್: ತೆಲಂಗಾಣದಿಂದ (Telangana) ಮಹಾರಾಷ್ಟ್ರಕ್ಕೆ (Maharashtra) ಕಾನೂನು ಬಾಹಿರವಾಗಿ ಸಾಗಾಟ ಮಾಡುತ್ತಿದ್ದ 150 ಕೆಜಿ ಗಾಂಜಾ (Ganja) ಜಪ್ತಿ ಮಾಡಿ ಮೂವರು ಗಾಂಜಾಕೋರರನ್ನು ಬಂಧಿಸುವಲ್ಲಿ ಬೀದರ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೀದರ್ (Bidar) ಜಿಲ್ಲೆಯ ಔರಾದ್ ತಾಲೂಕಿನ ಎಕಂಬಾ ಚೆಕ್ ಪೋಸ್ಟ್‌ನಲ್ಲಿ 1 ಕೋಟಿ 50 ಲಕ್ಷ ರೂ. ಬೆಲೆ ಬಾಳುವ 130 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಬೊಲೆರೋ (Bolero) ಕಾರಿನ ಸೀಕ್ರೆಟ್ ಲಾಕರ್ ಮೂಲಕ ಗಾಂಜಾ ಸಾಗಾಟ ಮಾಡುತ್ತಿದ್ದ ಬೀದರ್ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಪೊಲೀಸರ ಭರ್ಜರಿ ಭೇಟೆ – ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ
ಅಷ್ಟೇ ಅಲ್ಲದೇ ತೆಲಂಗಾಣದಿಂದ ಬಸ್‌ನಲ್ಲಿ ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಬೀದರ್ ಜಿಲ್ಲೆಯ ಹುಮ್ನಾಬಾದ್ (Humnabad) ಪಟ್ಟಣದಲ್ಲಿ ಪೊಲೀಸರು 20 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ತೆಲಂಗಾಣದಿಂದ ಬೀದರ್‌ಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ (Arrest) ಹುಮ್ನಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: 100 ವರ್ಷದ ಹಳೆಯ ಮರ ಶೆಡ್ ಮೇಲೆ ಬಿದ್ದು 7 ಮಂದಿ ದಾರುಣ ಸಾವು
ನವದೆಹಲಿ: ಪರಾರಿಯಾಗಿರುವ ಖಲಿಸ್ತಾನಿ ಬೆಂಬಲಿಗ ಅಮೃತಪಾಲ್ ಸಿಂಗ್‌ನ ಆಪ್ತ ಸಹಾಯಕ ಪಪ್ಪಲ್ಪ್ರೀತ್ ಸಿಂಗ್‌ನನ್ನು ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಸೋಮವಾರ ಬಂಧಿಸಲಾಗಿದೆ.
ಕಳೆದ ತಿಂಗಳು ಜಲಂಧರ್‌ನಲ್ಲಿ ಪೋಲೀಸರ ಬಲೆಯಿಂದ ಅಮೃತ್‌ಪಾಲ್ ಸಿಂಗ್ ಹಾಗೂ ಪಪ್ಪಲ್ಪ್ರೀತ್ ಸಿಂಗ್ ನಾಟಕೀಯವಾಗಿ ತಪ್ಪಿಸಿಕೊಂಡಿದ್ದರು. ಬಳಿಕ ಇಬ್ಬರೂ ಒಟ್ಟಿಗೆ ತಲೆಮರೆಸಿಕೊಂಡಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳಲು ಬೇರೆ ಬೇರೆ ಮಾರ್ಗಗಳನ್ನು ಕಂಡುಹಿಡಿದು ಸ್ಥಳ ಬದಲಾವಣೆ ಮಾಡುತ್ತಿದ್ದರು. ಇದೀಗ ಪಂಜಾಬ್ ಪೊಲೀಸರ ಗುಪ್ತಚರ ಘಟಕ ಪಪ್ಪಲ್ಪ್ರೀತ್ ಸಿಂಗ್‌ನನ್ನು ಬಂಧಿಸಿದೆ.
ಅಮೃತ್‌ಪಾಲ್ ಸಿಂಗ್ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ತನ್ನ ಗುರುತು ಯಾರಿಗೂ ಸಿಗದಂತೆ ವೇಷಗಳನ್ನು ಬದಲಿಸಿಕೊಂಡು, ಪಂಜಾಬ್ ಮಾತ್ರವಲ್ಲದೇ ದೆಹಲಿಯಲ್ಲಿಯೂ ತಿರುಗಾಡಿರುವುದು ಕೆಲ ದಿನಗಳ ಹಿಂದೆ ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿತ್ತು. ಆತ ಪೊಲೀಸರ ಬಂಧನದಿಂದ ತಪ್ಪಿಸಿಕೊಂಡು 3 ವಾರ ಆಗಿದ್ದರೂ ಇಲ್ಲಿಯವರೆಗೆ ಅಧಿಕಾರಿಗಳಿಂದ ಆತನನ್ನು ಹಿಡಿಯಲು ಸಾಧ್ಯವಾಗಿಲ್ಲ. ಇದೀಗ ಅಮೃತ್‌ಪಾಲ್ ಸಿಂಗ್‌ನ ಪತ್ತೆಗಾಗಿ ಪಂಜಾಬ್ ಪೊಲೀಸರಿಗೆ ಏಪ್ರಿಲ್ 14 ರಂದು ಬೈಸಾಖಿ ಆಚರಣೆ ವರೆಗೆ ಎಲ್ಲಾ ರಜೆಗಳನ್ನು ರದ್ದುಗೊಳಿಸಲಾಗಿದೆ. ಇದನ್ನೂ ಓದಿ: ಮೋದಿ ಇಡೀ ವಿಶ್ವಕ್ಕೆ ಹುಲಿ: ಈಶ್ವರಪ್ಪ
ಇದೀಗ ಪಪ್ಪಲ್ಪ್ರೀತ್ ಸಿಂಗ್‌ನ ಬಂಧನವಾಗಿದ್ದು, ಈಗಲಾದರೂ ಅಮೃತ್‌ಪಾಲ್ ಸಿಂಗ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾನೆಯೇ ನೋಡಬೇಕಿದೆ. ಆತ ಈ ತಿಂಗಳ ಕೊನೆಯಲ್ಲಿ ಸಿಖ್ಖರ ಸಭೆಯನ್ನು ಕರೆದಿದ್ದಾನೆ. ಈ ಹಿನ್ನೆಲೆ ಆತ ಪಂಜಾಬ್‌ಗೆ ಆಗಮಿಸಿ ಪೊಲೀಸರಿಗೆ ಶರಣಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿ ಗುಂಡು ಹಾರಿಸಿದ ವಧುವಿಗೆ ಬಂತು ಕುತ್ತು- ಪೊಲೀಸರಿಂದ ಹುಡುಕಾಟ
ಬೀದರ್: ಅಕ್ರಮವಾಗಿ ಗಾಂಜಾ (Drugs) ಸಾಗಾಟ ಮಾಡುತ್ತಿದ್ದ ನಾಲ್ವರು ಗಾಂಜಾ ಖದೀಮರನ್ನು ಬಂಧಿಸಿ ಬೀದರ್ (Bidar) ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ.
ತೆಲಂಗಾಣದಿಂದ (Telangana) ಮಹಾರಾಷ್ಟ್ರಕ್ಕೆ (Maharashtra) ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಅಲ್ಲದೇ 2 ಕೆಜಿ ತೂಕದ 50 ಗಾಂಜಾ ಪ್ಯಾಕೆಟ್‌ಗಳಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 100 ಕೆಜಿ ಗಾಂಜಾವನ್ನು ಜಪ್ತಿ (Confiscation) ಮಾಡಿದ್ದು, ಸುಮಾರು 1 ಕೋಟಿ ರೂ. ಮೌಲ್ಯದ ಗಾಂಜಾವನ್ನು ಬೀದರ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿ ಘರ್ಷಣೆ – 4 ಎಫ್‌ಐಆರ್, 18 ಜನರ ವಶಕ್ಕೆ ಪಡೆದ ಖಾಕಿ ಪಡೆ
ಅಕ್ರಮ ಗಾಂಜಾ ಸಾಗಾಟಕ್ಕೆ ಬಳಸಿದ ಒಂದು ಕಾರು ಹಾಗೂ ನಾಲ್ಕು ಮೊಬೈಲ್‌ಗಳನ್ನು ಬೀದರ್ ಜಿಲ್ಲೆಯ ಹುಮ್ನಾಬಾದ್ (Humnabad) ಬಳಿ ಜಪ್ತಿಪಡಿಸಲಾಗಿದೆ. ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಪೊಲೀಸರು ಅಪಾರ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: 8 ಕ್ವಿಂಟಾಲ್ ಗೋಮಾಂಸವಿದ್ದ ಮೀನಿನ ವಾಹನ ಪಲ್ಟಿ
ಈ ಕುರಿತು ಮನ್ನಏಖೇಳ್ಳಿ (Mannaekhelli) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರಿಗೆ ಎಸ್ಪಿ ಚನ್ನಬಸವಣ್ಣ ಲಂಗೋಟಿ ಪ್ರೋತ್ಸಾಹಧನ ನೀಡಿ ಗೌರವಿಸಿದರು. ಇದನ್ನೂ ಓದಿ: ಸಹೋದರನ ಜೊತೆ ಜಗಳವಾಡಿ ಮೊಬೈಲನ್ನೇ ನುಂಗಿದ್ಳು!
ಮುಂಬೈ: ಕೇರಳದಲ್ಲಿ ಭಾನುವಾರ ರಾತ್ರಿ ಸಹ ಪ್ರಯಾಣಿಕನೊಂದಿಗೆ ಜಗಳವಾಡಿ ರೈಲಿಗೆ ಬೆಂಕಿ ಹಚ್ಚಿ ಮೂವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗುಪ್ತಚರ (Central Intelligence) ಮತ್ತು ಭಯೋತ್ಪಾದನಾ ನಿಗ್ರಹ (Anti Terrorism) ಅಧಿಕಾರಿಗಳ ಜಂಟಿ ತಂಡ ಬುಧವಾರ ಶಂಕಿತ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾರುಖ್ ರೈಲಿಗೆ ಬೆಂಕಿ ಹಚ್ಚಿದ ಶಂಕಿತ ಆರೋಪಿಯಾಗಿದ್ದು, ಮಹಾರಾಷ್ಟ್ರದ (Maharashtra) ರತ್ನಗಿರಿ (Ratnagiri) ಜಿಲ್ಲೆಯಲ್ಲಿ ಆತನನ್ನು ಬಂಧಿಸಲಾಗಿದೆ. ಕೇರಳ ಪೊಲೀಸರ ತಂಡವೂ ರತ್ನಗಿರಿ ತಲುಪಿದ್ದು, ಶಂಕಿತ ಆರೋಪಿಯನ್ನು ಶೀಘ್ರದಲ್ಲೇ ಅವರಿಗೆ ಹಸ್ತಾಂತರಿಸಲಾಗುವುದು ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ವ್ಯಕ್ತಿ – ಮೂವರು ಸಾವು
ಪ್ರಕರಣದ ಹಿಂದಿನ ಉದ್ದೇಶವು ಇನ್ನೂ ಸ್ಪಷ್ಟವಾಗಿಲ್ಲ. ಕೋಝಿಕ್ಕೋಡ್ (Kozhikode) ಜಿಲ್ಲೆಯ ಎಲತ್ತೂರ್ ಬಳಿ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ವಾದದ ನಂತರ ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಂಗಳವಾರ ಕಣ್ಣೂರು ನಿಲ್ದಾಣದಲ್ಲಿ ರೈಲಿನ ಕೋಚ್‌ಗಳನ್ನು ಪರೀಕ್ಷಿಸಿ ವಿಧಿವಿಜ್ಞಾನ ಸಾಕ್ಷಿಗಳನ್ನು ಸಂಗ್ರಹಿಸಿದೆ. ಘಟನೆಯ ವೇಳೆ ಅಲ್ಲಿದ್ದ ಕೆಲವು ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಯನ್ನೂ ಎನ್‌ಐಎ ವಿಚಾರಣೆಗೊಳಪಡಿಸಿದೆ. ಇದನ್ನೂ ಓದಿ: ವರನ ಕೊಲೆಗೆ ಸ್ಕೆಚ್ ಹಾಕಿ ಸ್ಫೋಟಕ ತುಂಬಿ ಗಿಫ್ಟ್ ಕೊಟ್ಟ ವಧುವಿನ ಮಾಜಿ ಲವ್ವರ್!
ಪ್ರಕರಣದ ತನಿಖೆಗಾಗಿ ಕೇರಳ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ಅಲ್ಲದೇ ಶಂಕಿತ ಆರೋಪಿಯ ಕುರಿತು ಮಾಹಿತಿ ನೀಡಿದವರಿಗೆ 2 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದ ರಜಾಕ್ ನೀಡಿದ ಸಾಕ್ಷಿ ವಿವರಣೆಯ ಆಧಾರದ ಮೇಲೆ ಪೊಲೀಸರು ಶಂಕಿತ ಆರೋಪಿಯ ರೇಖಾಚಿತ್ರವನ್ನೂ (Sketch) ಬಿಡುಗಡೆ ಮಾಡಿದ್ದರು.
ಅಲಪ್ಪುಳ- ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲು ಕೋಝಿಕ್ಕೋಡ್ ನಗರವನ್ನು ದಾಟಿ ಕೇರಳದ (Kerala) ಕೊರಾಪುಳ ರೈಲ್ವೆ ಸೇತುವೆಯನ್ನು ತಲುಪಿತ್ತು. ಈ ವೇಳೆ ಅನಾಮಿಕನೊಬ್ಬ ಸಹ ಪ್ರಯಾಣಿಕನೊಂದಿಗೆ ಜಗಳವಾಡಿ, ನಂತರ ಆತನಿಗೆ ಬೆಂಕಿ (Fire) ಹಚ್ಚಿದ ಪರಿಣಾಮ 9 ಮಂದಿ ಗಾಯಗೊಂಡಿದ್ದಾರೆ. ಘಟನೆ ನಡೆದ ಕೂಡಲೇ ವ್ಯಕ್ತಿ ಪರಾರಿಯಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಕಚ್ಚಾ ತೈಲ ಮೇಲಿನ ವಿಂಡ್‌ಫಾಲ್ ತೆರಿಗೆ ಕಡಿತಗೊಳಿಸಿದ ಭಾರತ
ಘಟನೆಯಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದರು. ಅದರಲ್ಲೂ 5 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಕೋಝಿಕ್ಕೋಡ್‌ನ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಮೂವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ವರದಿಗಳು ತಿಳಿಸಿವೆ. ಇದನ್ನೂ ಓದಿ: ಸಿಕ್ಕಿಂನಲ್ಲಿ ಭಾರೀ ಹಿಮಪಾತ – 6 ಸಾವು, ಹಲವರು ನಾಪತ್ತೆ
ನ್ಯೂಯಾರ್ಕ್: ನೀಲಿಚಿತ್ರ ನಟಿಗೆ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ (America) ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಬಂಧಿಸಿದ ಕೆಲವೇ ಗಂಟೆಗಳಲ್ಲಿ ಬಿಡುಗಡೆ ಮಾಡಿದ್ದಾರೆ.
ಮ್ಯಾನ್ ಹಾಟನ್ ಜಿಲ್ಲಾ ಅಟಾರ್ನಿಯ ಕೋರ್ಟ್ ಸಭಾಂಗಣದಲ್ಲಿ ಟ್ರಂಪ್ ಶರಣಾದರು. ಬಳಿಕ ಅವರನ್ನು ಬಂಧಿಸಿದ ಪೊಲೀಸರು ಬಿಗಿ ಭದ್ರತೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ವಿಚಾರಣೆ ಬಳಿಕ ಅವರನ್ನು ಬಿಡುಗಡೆಗೊಳಿಸಲಾಯಿತು.
ಈ ವೇಳೆ ಟ್ರಂಪ್ ವಿರುದ್ಧ ಲೈಂಗಿಕ ಪ್ರಕರಣ ಮುಚ್ಚಿಡಲು ಹಣ ನೀಡಿದ್ದು, ಸೇರಿದಂತೆ ಹಣ ವಂಚನೆಯ 34 ದೋಷಾರೋಪಗಳನ್ನು ಹೊರಿಸಲಾಯಿತು. ಕಾನೂನು ಸಲಹಾ ಸಿಬ್ಬಂದಿ ಜೊತೆ ಬಂದಿದ್ದ ಟ್ರಂಪ್, ನಾನು ತಪ್ಪು ಮಾಡಿಲ್ಲ. 34 ಆರೋಪಗಳಲ್ಲಿ ನಾನು ನಿರಪರಾಧಿ ಎಂದಿದ್ದಾರೆ.
ಸುಮಾರು ಒಂದು ಗಂಟೆ ಕಾಲ ವಿಚಾರಣೆ ನಡೆಯಿತು. ವಿಚಾರಣೆಯ ನಂತರ ಟ್ರಂಪ್, ತಮ್ಮ ವಾಹನದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದರು. ಈ ಮೂಲಕ ಅಮೆರಿಕದ ಇತಿಹಾಸದಲ್ಲೇ ಕ್ರಿಮಿನಲ್ ಆರೋಪ ಪ್ರಕರಣದ ವಿಚಾರಣೆ ಎದುರಿಸಿ ಬಂಧನಕ್ಕೆ ಒಳಗಾದ ಮೊದಲ ಅಮೆರಿಕದ ಮಾಜಿ ಅಧ್ಯಕ್ಷರಾಗಿದ್ದಾರೆ. ಇದನ್ನೂ ಓದಿ: Swiggy, Zomatoಗೆ ಕೌಂಟರ್ – ಹೋಟೆಲ್ ಅಸೋಸಿಯೇಷನ್‍ನಿಂದ ಹೊಸ ಆ್ಯಪ್‌ಗೆ ಸಿದ್ಧತೆ
ಕೋರ್ಟ್ ಹಾಲ್‍ಗೆ ಕರೆದೊಯ್ಯುವ ಮೊದಲು ಟ್ರಂಪ್ ಅವರ ಬೆರಳಚ್ಚುಗಳ ಮಾದರಿಯನ್ನು ಪೊಲೀಸರು ಪಡೆದರು. ಹೆಸರು, ವಯಸ್ಸು, ಎತ್ತರ, ತೂಕ ಒಳಗೊಂಡಂತೆ ವ್ಯಕ್ತಿಗತ ಮಾಹಿತಿ ಪಡೆದರು. ಅವರ ವಿರುದ್ಧ ಯಾವುದಾದರೂ ವಾರೆಂಟ್ ಬಾಕಿ ಇದೆಯೇ ಎಂದು ಪರಿಶೀಲಿಸಿದರು. ಇದನ್ನೂ ಓದಿ: ಹತ್ತು ವರ್ಷದಿಂದ ನಾಪತ್ತೆಯಾಗಿದ್ದ ನಟೋರಿಯಸ್ ರೌಡಿಶೀಟರ್‌ಗಳ ಬಂಧನ
ಏನಿದು ಕೇಸ್: ಟ್ರಂಪ್ ಅವರು ಈ ಹಿಂದೆ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ (ನಿಜವಾದ ಹೆಸರು ಸ್ಟೆಫನಿ ಕ್ಲಿಫರ್ಡ್) ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. 2016ರ ಚುನಾವಣೆ ವೇಳೆ ಈ ಸಂಬಂಧ ಬಹಿರಂಗಪಡಿಸುವುದನ್ನು ತಡೆಯಲು ಟ್ರಂಪ್ ಆಕೆಗೆ 1,30,000 ಡಾಲರ್ (ಸುಮಾರು 1,07,00,000 ರೂ.) ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರು: ಕಳೆದ ಹತ್ತು ವರ್ಷಗಳಿಂದ ಪೊಲೀಸರ ಕೈಗೆ ಸಿಗದಂತೆ ನಾಪತ್ತೆಯಾಗಿದ್ದ ಮೂವರು ರೌಡಿಶೀಟರ್‌ಗಳನ್ನು (Rowdy Sheeter) ಬಂಧಿಸುವಲ್ಲಿ ಬೆಂಗಳೂರು (Bengaluru) ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಖತಾರ್ನಾಕ್ ರೌಡಿಶೀಟರ್‌ಗಳಾದ ಮಹಮ್ಮದ್ ಜಬೀವುದ್ದೀನ್, ಮಹಮ್ಮದ್ ಮೆಹತಾಬ್ ಹಾಗೂ ದಿನೇಶ್ ಬಂಧಿತ ರೌಡಿಗಳು. ಈ ಮೂವರ ಮೇಲೆ ಬರೋಬ್ಬರಿ ಅರವತ್ತಕ್ಕೂ ಹೆಚ್ಚು ಕೇಸ್‌ಗಳಿದ್ದು, ಪೊಲೀಸರ ಕೈಗೆ ಸಿಗದಂತೆ ಓಡಾಡುತ್ತಿದ್ದರು. ಇಂತಹವರನ್ನೇ ಟಾರ್ಗೆಟ್ ಮಾಡಿ ಹುಡುಕಾಟ ನಡೆಸಿದ ಸಿಸಿಬಿ (CCB) ಕೊನೆಗೂ ಮೂವರನ್ನು ಖೆಡ್ಡಗೆ ಬೀಳಿಸಿಕೊಂಡಿದೆ. ಇದನ್ನೂ ಓದಿ: ವರುಣಾದಲ್ಲಿ ಸಿದ್ದು-ಬಿಎಸ್‌ವೈ ಹೊಂದಾಣಿಕೆ ಮಾಡ್ಕೊಂಡಿದ್ದಾರೆ: ಹೆಚ್‌ಡಿಡಿ ಹೊಸ ಬಾಂಬ್
ರಾಜ್ಯದಲ್ಲಿ ಚುನಾವಣೆ (Election) ಹತ್ತಿರವಾಗುತ್ತಿದ್ದಂತೆ ಬೆಂಗಳೂರು ಸಿಸಿಬಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ನಗರದಲ್ಲಿ ಆ್ಯಕ್ಟಿವ್ ಆಗಿರುವ ರೌಡಿಶೀಟರ್‌ಗಳು, ವಾರೆಂಟ್ ಇದ್ದರೂ ಕೂಡ ಕೋರ್ಟ್‌ಗೆ ಹಾಜರಾಗದೆ ನಾಪತ್ತೆಯಾಗಿರುವ ರೌಡಿಶೀಟರ್‌ಗಳ ಮೇಲೆ ಕಣ್ಣಿಟ್ಟಿದ್ದಾರೆ. ಆ ನಿಟ್ಟಿನಲ್ಲಿ ಕಾರ್ಯಚರಣೆ ನಡೆಸಿದ ಸಿಸಿಬಿ ಪೊಲೀಸರು, ಕಳೆದ ಹತ್ತು ವರ್ಷಗಳಿಂದ ಪೊಲೀಸರ ಕೈಗೆ ಸಿಗದಂತೆ ನಾಪತ್ತೆಯಾಗಿದ್ದ ಮೂವರು ರೌಡಿಶೀಟರ್‌ಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: Swiggy, Zomatoಗೆ ಕೌಂಟರ್ – ಹೋಟೆಲ್ ಅಸೋಸಿಯೇಷನ್‍ನಿಂದ ಹೊಸ ಆ್ಯಪ್‌ಗೆ ಸಿದ್ಧತೆ
ನವದೆಹಲಿ: ಗರ್ಭಿಣಿಯೊಬ್ಬಳು (Pregnant) ಡಿಜೆ (DJ) ಸಂಗೀತದ ಸೌಂಡ್ ಅನ್ನು ನಿಲ್ಲಿಸುವಂತೆ ಹೇಳಿದ್ದಕ್ಕೆ ನೆರೆಯವರು ಆಕೆ ಮೇಲೆ ಗುಂಡು ಹಾರಿಸಿ ಗರ್ಭಪಾತವಾದ ಘಟನೆ ವಾಯುವ್ಯ ದೆಹಲಿಯಲ್ಲಿ (Delhi) ನಡೆದಿದೆ.
ಸಿರಸ್‍ಪುರದ ನಿವಾಸಿ ರಂಜು ಗುಂಡು ತಗುಲಿದ ಮಹಿಳೆ. ರಂಜು ಮನೆಯ ನೆರೆ ಮನೆಯಲ್ಲಿ ಸಮಾರಂಭವೊಂದು ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಮನೆಯ ಮಾಲೀಕ ಹರೀಶ್ ಡಿಜೆಯನ್ನು ಕರೆಸಿದ್ದ. ಜೋರಾಗಿ ಮ್ಯೂಸಿಕ್ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಗರ್ಭಿಣಿ ರಂಜು ಮನೆಯ ಬಾಲ್ಕನಿಗೆ ಬಂದು ಹರೀಶ್‍ಗೆ ಮ್ಯೂಸಿಕ್ ನಿಲ್ಲಿಸುವಂತೆ ಕೇಳಿಕೊಂಡಿದ್ದಾಳೆ.
ಇದರಿಂದ ಕೋಪಕೊಂಡ ಹರೀಶ್ ತನ್ನ ಸ್ನೇಹಿತ ಅಮಿತ್ ಬಳಿಯಿದ್ದ ಗನ್‍ನಿಂದ ಗುಂಡು ಹಾರಿಸಿದ್ದಾನೆ. ಈ ವೇಳೆ ರಂಜು ಕುತ್ತಿಗೆಗೆ ತಗುಲಿದೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗರ್ಭಿಣಿಯ ಮೇಲೆ ಗುಂಡು ಹಾರಿಸಿದ ಹರೀಶ್ ಮತ್ತು ಆತನ ಸ್ನೇಹಿತ ಅಮಿತ್ ಎಂಬಾತನನ್ನು ಬಂಧಿಸಿದ್ದಾರೆ. ಹರೀಶ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಅಮಿತ್ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ.
ರಂಜುವಿನ ಪತಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಕುಟುಂಬವು ಬಿಹಾರಕ್ಕೆ ಸೇರಿದ್ದು, ಇಲ್ಲಿ ಬಾಡಿಗೆ ವಸತಿಗೃಹದಲ್ಲಿ ವಾಸಿಸುತ್ತಿದೆ. ಘಟನೆ ವೇಳೆ ಮಹಿಳೆಯ ಕುತ್ತಿಗೆಗೆ ಗುಂಡೇಟು ತಗುಲಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪತಿ ಇಲ್ಲದಿರುವ ನೋವು ನನಗೆ ಕಾಡುತ್ತಿದೆ: ಕುಸುಮಾ ಶಿವಳ್ಳಿ
ಘಟನೆ ಕುರಿತು ಸಂತ್ರಸ್ತೆಯ ತಾಯಿ ಸಂಧ್ಯಾ ದೇವಿ ಮಾತನಾಡಿ, ರಂಜುಗೆ ಗರ್ಭಪಾತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಯ ಕುತ್ತಿಗೆಗೆ ಬುಲೆಟ್ ತಗುಲಿದೆ. ಈ ಹಿನ್ನೆಲೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಶಸ್ತ್ರಚಿಕಿತ್ಸೆಯ ಸಾಧ್ಯತೆಯಿದೆ. ಅವರಿಗೆ ಮೂರು ಮಕ್ಕಳಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: 12 ಚುನಾವಣೆಗಳಲ್ಲಿ ಒಂದೇ ಕುಟುಂಬದವರ ಆಯ್ಕೆ – ಎನ್.ಆರ್. ಕ್ಷೇತ್ರದಲ್ಲಿ ಸೇಠ್ ಫ್ಯಾಮಿಲಿ ಅಧಿಪತ್ಯ!
ಬೆಂಗಳೂರು: ಗೋಲ್ಡ್ (Gold) ಕಳ್ಳತನ (Theft) ಮಾಡುತ್ತಿದ್ದ ಸೋಷಿಯಲ್ ಮೀಡಿಯಾ (Social Media) ಸ್ಟಾರ್‌ನನ್ನು ಬೆಂಗಳೂರಿನ (Bengaluru) ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮುಂಬೈ (Mumbai) ಮೂಲದ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದ ಸಲೀಂ (ಸಾಹಿಲ್) ಬಂಧಿತ ಆರೋಪಿ. ಈತ ಒಂದು ವರ್ಷದ ಹಿಂದೆ 3.5 ಕೆಜಿಗೂ ಅಧಿಕ ಚಿನ್ನದ ಜೊತೆ ಸಿಕ್ಕಿ ಬಿದ್ದಿದ್ದು, ಬಸವನಗುಡಿ ಪೊಲೀಸರು ಅರೆಸ್ಟ್ (Arrest) ಮಾಡಿದ್ದರು. ಜೈಲಿನಿಂದ ಹೊರಬಂದ ಖದೀಮ ಮತ್ತೆ ಹಳೇ ಚಾಳಿಯನ್ನು ಮುಂದುವರೆಸಿದ್ದ. ಇದನ್ನೂ ಓದಿ: Umpire killed: ʼನೋಬಾಲ್ʼ ನೀಡಿದ್ದಕ್ಕೆ ಅಂಪೈರ್‌ನನ್ನೇ ಇರಿದು ಕೊಂದ ಆಟಗಾರ
ಲಕ್ನೋ: ಬಾರ್‌ನಲ್ಲಿ (Bar) ಉಚಿತ ಪ್ರವೇಶ ಪಡೆಯಲು ಪ್ರಧಾನ ಮಂತ್ರಿ ಕಚೇರಿಯ (PMO) ಅಧಿಕಾರಿಯೊಬ್ಬರ ಸಂಬಂಧಿಯಂತೆ ನಟಿಸಿದ ವ್ಯಕ್ತಿಯೊಬ್ಬನನ್ನು ಗುರುಗ್ರಾಮ (Gurugram) ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಆರೋಪಿಯನ್ನು ಸತ್ಯಪ್ರಕಾಶ್ ಆರ್ಯ ಅಲಿಯಾಸ್ ಸಿದ್ಧಾಥ್ ಎಂದು ಗುರುತಿಸಲಾಗಿದೆ. ಗುರುಗ್ರಾಮದ ಸೆಕ್ಟರ್ -65 ಪೊಲೀಸ್ ಠಾಣೆಯ ಎಸ್‍ಎಚ್‍ಒಗೆ ಕರೆ ಮಾಡಿ ತನ್ನನ್ನು ಉನ್ನತ ಅಧಿಕಾರಿಯ ಸಂಬಂಧಿ ಎಂದು ಪರಿಚಯಿಸಿಕೊಂಡಿದ್ದಾನೆ. ಅದಾದ ಬಳಿಕ ಪೊಲೀಸ್ ಠಾಣೆ ಸೆಕ್ಟರ್-65ನಲ್ಲಿರುವ ಬಾರ್‌ಗೆ ಉಚಿತ ಪ್ರವೇಶವನ್ನು ಪಡೆಯಲು ಕೇಳಿದ್ದಾನೆ. ಆದರೆ ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿ ಗುರುಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸತ್ಯಪ್ರಕಾಶ್‍ನನ್ನು ಬಂಧಿಸಿದ್ದಾರೆ. ಆರೋಪಿ ಕೃತ್ಯಕ್ಕೆ ಬಳಸಿದ್ದ ಫೋನ್ ಹಾಗೂ ಸಿಮ್ ಕಾರ್ಡ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ವಾರಸುದಾರರಿಲ್ಲದ 35,000 ಕೋಟಿ ರೂ. RBIಗೆ ವರ್ಗಾವಣೆ