Tag: arrest

  • ಬ್ಯಾಗ್ ಇಡುವ ನೆಪದಲ್ಲಿ ಖಾಸಗಿ ಅಂಗಕ್ಕೆ ಕೈ ಹಾಕಿ ವಿಕೃತಿ – ಆಟೋ ಚಾಲಕ ಅರೆಸ್ಟ್

    ಬ್ಯಾಗ್ ಇಡುವ ನೆಪದಲ್ಲಿ ಖಾಸಗಿ ಅಂಗಕ್ಕೆ ಕೈ ಹಾಕಿ ವಿಕೃತಿ – ಆಟೋ ಚಾಲಕ ಅರೆಸ್ಟ್

    ಬೆಂಗಳೂರು: ಬ್ಯಾಗ್ ಇಡುವ ನೆಪದಲ್ಲಿ ಖಾಸಗಿ ಅಂಗಕ್ಕೆ ಕೈ ಹಾಕಿ ಆಟೋ ಚಾಲಕ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ (Bengaluru) ಜೆಪಿ ನಗರದಲ್ಲಿ (JP Nagar) ನಡೆದಿದೆ.

    ಆಟೋ ಚಾಲಕನನ್ನು ಹನುಮಂತಪ್ಪ ಹೆಚ್ ತಳವಾರ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಉಳ್ಳವರು ಮೀಸಲಾತಿ ಬಿಟ್ಟು ಕೊಡಬೇಕು – ಖರ್ಗೆ ಮಗನಿಗೂ ಮೀಸಲಾತಿ, ಇದು ಸರಿನಾ: ವಿಶ್ವನಾಥ್ ಪ್ರಶ್ನೆ

    ಓರ್ವ ಯುವತಿ ಜೆಪಿ ನಗರದ ಏಳನೇ ಹಂತದಿಂದ ಆಟೋ ಬುಕ್ ಮಾಡಿದ್ದರು. ಆಟೋ ಲೋಕೇಶನ್‌ಗೆ ಬಂದ ತಕ್ಷಣ ಚಾಲಕ ಬ್ಯಾಗ್ ಇಡುವ ನೆಪದಲ್ಲಿ ಯುವತಿಯ ಮೈ ಮುಟ್ಟಿದ್ದ. ಅಲ್ಲದೇ ನೀನು ಸಿನಿಮಾ ಹಿರೋಯಿನ್ ತರಾ ಇದೀಯಾ ಎಂದಿದ್ದನಂತೆ. ಬಳಿಕ ಯುವತಿ ಆಟೋ ಒಳಗೆ ಕುಳಿತುಕೊಳ್ಳುತ್ತಿದ್ದಂತೆ ಜ್ವರ ಇದೀಯಾ ಎಂದು ಹಣೆ ಮುಟ್ಟಿ ಖಾಸಗಿ ಅಂಗಕ್ಕೆ ಕೈ ಹಾಕಿದ್ದಾನೆ. ಕೂಡಲೇ ಯುವತಿ ಆಟೋದಿಂದ ಜಿಗಿದು ಓಡಿಹೋಗಿದ್ದಾರೆ.

    ಈ ಕುರಿತು ಯುವತಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ. ಜೊತೆಗೆ ಆತ ಕೆಲಸ ಮಾಡುತ್ತಿದ್ದ ಕ್ಯಾಬ್ ಕಂಪನಿಗೂ ಮಾಹಿತಿ ನೀಡಿ, ಆತನ ಲೈಸೆನ್ಸ್ ವಿರುದ್ಧ ಕ್ರಮ ತೆಗದುಕೊಳ್ಳಲು ಸೂಚಿಸಿದ್ದಾರೆ. ಸದ್ಯ ಪುಟ್ಟೇನಹಳ್ಳಿ ಪೊಲೀಸರಿಂದ ತನಿಖೆ ಮುಂದುವರಿದಿದೆ.ಇದನ್ನೂ ಓದಿ: ಬಂಗ್ಲೆಗುಡ್ಡೆಯಲ್ಲಿ ಉತ್ಖನನ ಮಾಡುವಂತೆ ರಿಟ್ ಅರ್ಜಿ – ಅರಣ್ಯ ಇಲಾಖೆಯಿಂದಲೂ ಮಾಹಿತಿ ಪಡೆದ ಎಸ್‌ಐಟಿ

  • ಬೆಂಗಳೂರು | ಲೇಡಿಸ್ ಪಿಜಿಗೆ ನುಗ್ಗಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕ ಅರೆಸ್ಟ್

    ಬೆಂಗಳೂರು | ಲೇಡಿಸ್ ಪಿಜಿಗೆ ನುಗ್ಗಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕ ಅರೆಸ್ಟ್

    ಬೆಂಗಳೂರು: ಲೇಡಿಸ್ ಪಿ.ಜಿಗೆ ನುಗ್ಗಿ ಯುವತಿಯ ಮೈ ಕೈ ಮುಟ್ಟಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ತಲೆಮರಿಸಿಕೊಂಡಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.

    ಆಂಧ್ರಪ್ರದೇಶದ (Andhra Pradesh) ಮದನ್‌ಪಲ್ಲಿ (Madanapalle) ಮೂಲದ ಕೆ.ನರೇಶ್ ಪಟ್ಯಂ ಬಂಧಿತ ಆರೋಪಿಯಾಗಿದ್ದು, ಬೆಂಗಳೂರಿನಲ್ಲಿ (Bengaluru) ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.ಇದನ್ನೂ ಓದಿ: ಬೆಂಗಳೂರು | ಲೇಡಿಸ್ ಪಿಜಿಗೆ ನುಗ್ಗಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ

    ಆ.29ರಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಪಿ.ಜಿಗೆ ನುಗ್ಗಿದ್ದ ಅಪರಿಚಿತ ವ್ಯಕ್ತಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಅಲ್ಲದೇ ಯುವತಿಯನ್ನ ಎಳೆದಾಡಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ.

    ಸದ್ದುಗುಂಟೆಪಾಳ್ಯ (Sadduguntepalya) ಠಾಣಾ ವ್ಯಾಪ್ತಿಯ ಪಿಜಿಯಲ್ಲಿ ಘಟನೆ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಸಾಮಿಯು ಯುವತಿಯ ರೂಮ್‌ಗೆ ನುಗ್ಗಿದಾಗ ಆಕೆ ರೂಮ್‌ಮೇಟ್ ಇರಬಹುದು ಅಂದುಕೊಂಡಿದ್ದಳು. ಕಾಮುಕ ಮೊದಲೇ ಪಿಜಿ ಫ್ಲೋರ್‌ನ ಎಲ್ಲಾ ರೂಮ್ ಡೋರ್‌ಗಳನ್ನು ಲಾಕ್ ಮಾಡಿ, ಬಳಿಕ ಯುವತಿ ಬಳಿ ಹೋಗಿ ಆಕೆಯ ಕೈ ಕಾಲು ಮುಟ್ಟಿದ್ದ. ಯುವತಿಗೆ ಎಚ್ಚರವಾಗಿ ಗಾಬರಿಯಿಂದ ಕಿರುಚಿದಾಗ ಚಾಕು ತೋರಿಸಿ ಬೆದರಿಕೆ ಹಾಕಿದ್ದ. ಈ ವೇಳೆ ಪ್ರತಿರೋಧ ಒಡ್ಡಿ, ಕೂಗಾಡಿ ಹೊರಬಂದಿದ್ದ ಯುವತಿಯ ಕಪಾಳಕ್ಕೆ ಹೊಡೆದು, ಆಕೆಯನ್ನು ಎಳೆದಾಡಿ ಕಾಮುಕ ಎಸ್ಕೇಪ್ ಆಗಿದ್ದ.

    ಸದ್ಯ ಸದ್ದುಗುಂಟೆಪಾಳ್ಯ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಇದನ್ನೂ ಓದಿ: Bengaluru | ಲೇಡಿಸ್ ಪಿಜಿಗೆ ನುಗ್ಗಿ ಎಂಜಿನಿಯರ್ ಕುತ್ತಿಗೆಗೆ ಚಾಕು ಇಟ್ಟು ಚಿನ್ನಾಭರಣ ದರೋಡೆ

  • ಹಿಂದಿ ಕಿರುತೆರೆ ನಟ ಆಶಿಶ್ ಕಪೂರ್ ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್

    ಹಿಂದಿ ಕಿರುತೆರೆ ನಟ ಆಶಿಶ್ ಕಪೂರ್ ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್

    ತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿ ಕಿರುತೆರೆ ನಟ ಆಶಿಶ್ ಕಪೂರ್‌ನ್ನು (Ashish Kapoor) ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.

    ಈ ಕುರಿತು ಸಂತ್ರಸ್ತೆ ನಟ ಆಶಿಶ್ ಕಪೂರ್ ವಿರುದ್ಧ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಶಿಶ್ ಕಪೂರ್ ಹಾಗೂ ನಾನು ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದು, ಬಳಿಕ ಆಗಸ್ಟ್ ತಿಂಗಳಲ್ಲಿ ದೆಹಲಿಯಲ್ಲಿ ಆಯೋಜಿಸಲಾಗಿದ್ದ ಪಾರ್ಟಿಯೊಂದಕ್ಕೆ ಆಹ್ವಾನಿಸಿದ್ದರು. ಹೀಗಾಗಿ ನಾನು ಪಾರ್ಟಿಗೆ ಹೋಗಿದ್ದೆ. ಈ ವೇಳೆ ವಾಶ್ ರೂಂನಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಜೊತೆಗೆ ವಿಡಿಯೋ ಚಿತ್ರೀಕರಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ದರ್ಶನ್ ಜೈಲಲ್ಲಿರೋದಕ್ಕೆ ಬರ್ತ್‌ಡೇ ಸೆಲೆಬ್ರೇಷನ್ ಬೇಡವೆಂದ ಧನ್ವೀರ್

    ಪೊಲೀಸರ ಮಾಹಿತಿ ಪ್ರಕಾರ, ಸಂತ್ರಸ್ತೆ ದೂರಿನ ಆಧಾರದ ಮೇಲೆ ಆ.11ರಂದು ಆಶಿಶ್, ಆತನ ಸ್ನೇಹಿತ, ಸ್ನೇಹಿತನ ಪತ್ನಿ ಹಾಗೂ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. ಆಶಿಶ್ ಮತ್ತು ಆತನ ಸ್ನೇಹಿತ ಅತ್ಯಾಚಾರ ಎಸಗಿದ್ದು, ಓರ್ವ ಮಹಿಳೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆ.18ರಂದು ಸಂತ್ರಸ್ತೆ ಮತ್ತೊಂದು ಹೇಳಿಕೆ ನೀಡಿದ್ದರು. ಅದಾದ ಬಳಿಕ ಆ.21ರಂದು ಆಶಿಶ್ ಸ್ನೇಹಿತ ಹಾಗೂ ಆತನ ಪತ್ನಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

    ತನಿಖೆ ನಡೆಯುತ್ತಿದ್ದು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದೇವೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಇವುಗಳ ಆಧಾರದ ಮೇಲೆ ಸಂತ್ರಸ್ತೆ ಹಾಗೂ ಕಪೂರ್ ಪಾರ್ಟಿ ನಡೆದ ದಿನ ವಾಶ್‌ರೂಮ್‌ಗೆ ಪ್ರವೇಶಿಸಿದ್ದಾರೆ. ಇವರಿಬ್ಬರು ಕೆಲಕಾಲ ಹೊರಗೆ ಬರದಿದ್ದಾಗ ಅವರ ಸ್ನೇಹಿತರು ಬಾಗಿಲು ಬಡಿಯಲು ಪ್ರಾರಂಭಿಸಿದ್ದಾಗಿ ತಿಳಿದುಬಂದಿದೆ.

    ಸದ್ಯ ನಟ ಆಶಿಶ್ ಕಪೂರ್‌ನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ.ಇದನ್ನೂ ಓದಿ: ಮದ್ವೆಯಲ್ಲಿ ಅನುಶ್ರೀ ಉಟ್ಟ ಸೀರೆಯ ಬೆಲೆ 2.5 ಲಕ್ಷ ಅಲ್ಲ ಕೇವಲ 2,700 ರೂ.

  • 11 ಲಕ್ಷದ ಚಿನ್ನ ಕದ್ದು ಪರಾರಿ – ನಾಲ್ಕು ಕೇಸ್‌ಲ್ಲಿ ಭಾಗಿಯಾಗಿದ್ದ ಕತರ್ನಾಕ್ ಕಳ್ಳ ಅರೆಸ್ಟ್

    11 ಲಕ್ಷದ ಚಿನ್ನ ಕದ್ದು ಪರಾರಿ – ನಾಲ್ಕು ಕೇಸ್‌ಲ್ಲಿ ಭಾಗಿಯಾಗಿದ್ದ ಕತರ್ನಾಕ್ ಕಳ್ಳ ಅರೆಸ್ಟ್

    ಯಾದಗಿರಿ: 11 ಲಕ್ಷ ರೂ. ಮೌಲ್ಯದ ಚಿನ್ನ ಕದ್ದು ಪರಾರಿಯಾಗಿದ್ದ ಕುಖ್ಯಾತ ಮನೆಗಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

    ವಿಜಯಪುರ ಜಿಲ್ಲೆಯ ಮೂಲದ ಸಂತೋಷ್ (43) ಬಂಧಿತ ಆರೋಪಿ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಟಿಪ್ಪು ಡ್ಯಾಂ ಕಟ್ಟಿದ್ದ ಅಂತ ನಾನು ಎಲ್ಲಿಯೂ ಕೂಡ ಹೇಳಿಲ್ಲ – ಮಹದೇವಪ್ಪ ಯೂಟರ್ನ್

    ಗೋಗಿ ಹಾಗೂ ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ನಾಲ್ಕು ಮನೆಗಳಲ್ಲಿ ಕಳ್ಳತನ ನಡೆದಿತ್ತು. ನಾಲ್ಕು ಪ್ರಕರಣಗಳಲ್ಲಿ ಈ ಕುಖ್ಯಾತ ಕಳ್ಳನ ಕೈವಾಡವಿತ್ತು. ಈ ಕುರಿತು ಗೋಗಿ ಹಾಗೂ ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಸದ್ಯ ಗೋಗಿ ಪೊಲೀಸರು ಈತನನ್ನು ಬಂಧಿಸಿದ್ದು, 11 ಲಕ್ಷ ರೂ. ಮೌಲ್ಯದ 110 ಗ್ರಾಂ ಚಿನ್ನ ಹಾಗೂ 4 ಲಕ್ಷ ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ.ಇದನ್ನೂ ಓದಿ: ಮೈಸೂರು ಮಹಾರಾಜರ ಕೊಡುಗೆಗೆ ಕಾಂಗ್ರೆಸ್ ಅಪಸ್ವರ – ಮಹದೇವಪ್ಪ ಮೊದ್ಲು ಇತಿಹಾಸ ಅರಿಯಲಿ: ಜೋಶಿ ಕಿಡಿ

  • ಮನೆಗಳ್ಳತನ ಮಾಡಿದ್ದ ಇಬ್ಬರು ಅರೆಸ್ಟ್ – 10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಜಪ್ತಿ

    ಮನೆಗಳ್ಳತನ ಮಾಡಿದ್ದ ಇಬ್ಬರು ಅರೆಸ್ಟ್ – 10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಜಪ್ತಿ

    ರಾಯಚೂರು: ಮನೆಗಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಸಿಂಧನೂರು ಪೊಲೀಸರು (Sindhanuru Police) ಬಂಧಿಸಿ, 10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ಬಂಧಿತ ಆರೋಪಿಗಳನ್ನು ಮೊಹಮ್ಮದ್ ಹುಸೇನ್, ನಾಸೀರ್ ಅಲಿ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಸಮಾಜದಲ್ಲಿ ಅಶಾಂತಿ, ಒಡಕು ಮೂಡಿಸೋದು ಬಿಜೆಪಿ ಉದ್ದೇಶ: ಶರಣಪ್ರಕಾಶ್ ಪಾಟೀಲ್

    ವಿಶೇಷ ತಂಡ ರಚಿಸಿ ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪ್‌ನ ಮನೆಯೊಂದರ ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು 110 ಗ್ರಾಂ ಚಿನ್ನಾಭರಣಗಳು, 50 ಗ್ರಾಂ ಬೆಳ್ಳಿ, ಒಂದು ಸ್ಕೂಟಿ ಸೇರಿ ಒಟ್ಟು 10.25 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಿದ್ದಾರೆ.

    ಈ ಕುರಿತು ಸಿಂಧನೂರು (Sindhanuru) ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇದನ್ನೂ ಓದಿ: ಮೈಸೂರು ರಾಜವಂಶಸ್ಥರಿಗೆ ಟಿಡಿಆರ್ – ಸಿಜೆಐ ಪೀಠಕ್ಕೆ ಪ್ರಕರಣ ವರ್ಗಾವಣೆ

  • 225 ಪ್ರಕರಣದಲ್ಲಿ 345 ಆರೋಪಿಗಳ ಬಂಧನ – 7 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ಜಪ್ತಿ

    225 ಪ್ರಕರಣದಲ್ಲಿ 345 ಆರೋಪಿಗಳ ಬಂಧನ – 7 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ಜಪ್ತಿ

    ವಿಜಯಪುರ: ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, 7 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, 225 ಕೇಸ್‌ನಲ್ಲಿದ್ದ 345 ಆರೋಪಿಗಳನ್ನು ಬಂಧಿಸಿದ್ದಾರೆ.

    ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಬೇಧಿಸಿ, ಚಿನ್ನ, ಬೆಳ್ಳಿ ಹಾಗೂ ಇನ್ನಿತರ ವಸ್ತುಗಳ ಸೇರಿದಂತೆ ಒಟ್ಟು 7 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.ಇದನ್ನೂ ಓದಿ: ಹೊಸ ಚಿತ್ರಕ್ಕಾಗಿ ಕುಮಟಾದಲ್ಲಿ ಬೀಡುಬಿಟ್ಟ ಜ್ಯೂ.ಎನ್‌ಟಿಆರ್‌, ಪ್ರಶಾಂತ್‌ ನೀಲ್

    ಒಟ್ಟು 5,145.02 ಗ್ರಾಂ ಚಿನ್ನದ ಆಭರಣ ಮತ್ತು 1,723 ಗ್ರಾಂ ಬೆಳ್ಳಿ ಆಭರಣ, 1,06,72,000 ರೂ. ಮೌಲ್ಯದ 73 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. 1,32,41,000 ರೂ. ಮೌಲ್ಯದ 12 ಕಾರುಗಳನ್ನು ವಶಕ್ಕೆ ಪಡೆದು, 19 ಜನರನ್ನು ಬಂಧಿಸಿದ್ದಾರೆ. 19,00,000 ರೂ. ಮೌಲ್ಯದ 2 ಟಿಪ್ಪರ್ ವಶಕ್ಕೆ ಪಡೆದು, 5 ಜನರನ್ನು ಬಂಧಿಸಿದ್ದಾರೆ.

    ಇನ್ನೂ ನಗದು ಕಳ್ಳತನ ಪ್ರಕರಣ ಬೇಧಿಸಿದ್ದು, 19 ಪ್ರಕರಣಗಳಲ್ಲಿನ 31 ಆರೋಪಿಗಳನ್ನು ಬಂಧಿಸಿ, 1,91,89,404 ರೂ. ನಗದು ಹಣ ವಶಕ್ಕೆ ಪಡೆದಿದ್ದಾರೆ.ಇದನ್ನೂ ಓದಿ: ಮೊದಲು ದೇಶದ ಒಳಗಿರುವ ಸ್ಲೀಪರ್ ಸೆಲ್‌ಗಳನ್ನು ಮಟ್ಟ ಹಾಕಬೇಕು: ಆರ್.ಅಶೋಕ್

  • ತೊಗರಿ ಹೊಟ್ಟಿನಲ್ಲಿ ಬಚ್ಚಿಟ್ಟಿದ್ದ 7 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಪತ್ತೆ ಹಚ್ಚಿದ ಶ್ವಾನ

    ತೊಗರಿ ಹೊಟ್ಟಿನಲ್ಲಿ ಬಚ್ಚಿಟ್ಟಿದ್ದ 7 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಪತ್ತೆ ಹಚ್ಚಿದ ಶ್ವಾನ

    ಬೀದರ್: ಜಿಲ್ಲೆಯ ಔರಾದ್ (Aurad) ತಾಲೂಕಿನ ವಿಜಯನಗರ ತಾಂಡಾದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ತೊಗರಿ ಹೊಟ್ಟಿನಲ್ಲಿ ಬಚ್ಚಿಟ್ಟಿದ್ದ 7 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾವನ್ನು ಪೊಲೀಸ್ ಇಲಾಖೆಗೆ ಸೇರಿದ ಶ್ವಾನ ಪತ್ತೆ ಹಚ್ಚಿದೆ.

    ಪೊಲೀಸ್ ಇಲಾಖೆಗೆ ಸೇರಿದ, ಮಾದಕ ದ್ರವ್ಯ ಪತ್ತೆ ಮಾಡುವ ಪರಿಣಿತಿ ಹೊಂದಿರುವ ಡಾಬರ್ ಮ್ಯಾನ್ ತಳಿಯ ದೀಪಾ ಎನ್ನುವ ಶ್ವಾನ ಗಾಂಜಾವನ್ನು ಪತ್ತೆ ಹಚ್ಚಿದೆ. ಗಾಂಜಾಕೋರರು ಬಚ್ಚಿಟ್ಟಿದ್ದ 7 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾವನ್ನು ಪತ್ತೆ ಹಚ್ಚಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ.ಇದನ್ನೂ ಓದಿ: ‘ನಿನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಪಾಲಿರಲಿ’ ಎನ್ನುತ್ತಿದ್ದಾರೆ ಸಪ್ತಮಿ ಗೌಡ

    ಔರಾದ್ ತಾಲೂಕಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಹಾಗೂ ತಹಶೀಲ್ದಾರ್ ದಾಳಿ ನಡೆಸಿದ್ದರೂ ಕೂಡ ಗಾಂಜಾ ಪತ್ತೆಯಾಗಿರಲಿಲ್ಲ. ಹೀಗಾಗಿ ತೆಲಂಗಾಣದಿಂದ ಕರೆತಂದಿದ್ದ ಶ್ವಾನವು, ತೊಗರಿ ಹೊಟ್ಟಿನಲ್ಲಿ ಬಚ್ಚಿಟ್ಟಿದ್ದ ಗಾಂಜಾ ಪತ್ತೆ ಹಚ್ಚಿದೆ.

    ಶ್ವಾನದ ಕಾರ್ಯಕ್ಕೆ ಎಸ್‌ಪಿ ಪ್ರದೀಪ್ ಗುಂಟಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಕುರಿತು ಸಂತಪೂರ್ (Santapur) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಪೈಲಟ್‌ಗಳಿಲ್ಲದ ವಿಮಾನಕ್ಕೆ ಏಕೆ ಹತ್ತಿಸುತ್ತೀರಿ – ಏರ್‌ ಇಂಡಿಯಾ ವಿರುದ್ಧ ಡೇವಿಡ್‌ ವಾರ್ನರ್‌ ಗರಂ!

  • ವಿಜಯಪುರ | ಮುಸುಧಾರಿಗಳ ಖತರ್ನಾಕ್ ಗ್ಯಾಂಗ್ ಅರೆಸ್ಟ್

    ವಿಜಯಪುರ | ಮುಸುಧಾರಿಗಳ ಖತರ್ನಾಕ್ ಗ್ಯಾಂಗ್ ಅರೆಸ್ಟ್

    ವಿಜಯಪುರ: ಜಿಲ್ಲೆಯಲ್ಲಿ ಇತ್ತೀಚಿಗಷ್ಟೇ ಹಲ್ಲೆ ನಡೆಸಿದ್ದ ಖತರ್ನಾಕ್ ಮುಸುಧಾರಿಗಳ ಗ್ಯಾಂಗ್‌ನ್ನು ವಿಜಯಪುರದ (Vijayapura) ಗಾಂಧಿ ಚೌಕ ಪೊಲೀಸರು ಬಂಧಿಸಿದ್ದಾರೆ.

    ಬಂಧಿಸಿದ ಆರೋಪಿಗಳನ್ನು ಮಹಾರಾಷ್ಟ್ರ ಮೂಲದ ಜತ್‌ನ ಪಾರ್ದಿ ಗ್ಯಾಂಗ್‌ನ ವಿಠ್ಠಲ ಚೌಹಾಣ, ಸುರೇಶ್ ಚೌಹಾಣ, ಆಕಾಶ್ ರಾವತ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ಕುರಿತ ದೇವೇಗೌಡರ ಹೇಳಿಕೆ ಸರಿಯಾಗಿದೆ: ಛಲವಾದಿ ನಾರಾಯಣಸ್ವಾಮಿ

    ವಿಜಯಪುರ ನಗರದ ಜೈನಾಪೂರ ಲೇಔಟ್, ರಾಜಕುಮಾರ್ ಲೇಔಟ್ ಸೇರಿದಂತೆ ನಗರದಲ್ಲಿ ಕೆಲವು ದಿನಗಳಿಂದ ಮುಸುಕುಧಾರಿಗಳ ಹಾವಳಿ ಹೆಚ್ಚಾಗಿತ್ತು. ಇತ್ತೀಚಿಗಷ್ಟೇ ಜೈನಾಪೂರ ಲೇಔಟ್‌ನಲ್ಲಿ ಮನೆ ದರೋಡೆ ಮಾಡಿ, ಐವರು ಮುಸುಕುಧಾರಿಗಳು ಸಂತೋಷ ಎಂಬುವವರಿಗೆ ಚಾಕು ಇರಿದು ಮೊದಲ ಮಹಡಿಯಿಂದ ಕೆಳಗೆ ಬಿಸಾಕಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಸಂತೋಷ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.

    ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿ, ಐವರ ಪೈಕಿ ಮೂವರನ್ನ ವಶಕ್ಕೆ ಪಡೆದಿದ್ದು, ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

    ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ದೌರ್ಜನ್ಯಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್: ವಿಜಯೇಂದ್ರ

  • ಬೈಕ್ ಶೋರೂಂಗೆ ಬೆಂಕಿ ಅವಘಡ – ಶೋರೂಂ ಮಾಲೀಕ, ಮ್ಯಾನೇಜರ್ ಬಂಧನ

    ಬೈಕ್ ಶೋರೂಂಗೆ ಬೆಂಕಿ ಅವಘಡ – ಶೋರೂಂ ಮಾಲೀಕ, ಮ್ಯಾನೇಜರ್ ಬಂಧನ

    ಬೆಂಗಳೂರು: ನಗರದ ರಾಜ್‌ಕುಮಾರ್ ರಸ್ತೆಯ (Rajkumar Road) ಬಳಿ ಎಲೆಕ್ಟ್ರಿಕ್ ಬೈಕ್ ಶೋರೂಂಗೆ ಬೆಂಕಿ ಹೊತ್ತಿಕೊಂಡ ಘಟನೆಗೆ ಸಂಬಂಧಿಸಿದಂತೆ ಶೋರೂಂ ಮಾಲೀಕ ಹಾಗೂ ಮ್ಯಾನೇಜರ್‌ನ್ನು ರಾಜಾಜಿನಗರ (Rajaji Nagar) ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಮಾಲೀಕ ಪುನೀತ್ ಹಾಗೂ ಮ್ಯಾನೇಜರ್ ಯುವರಾಜ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ದೊಡ್ಮನೆಯಲ್ಲಿ ಯಾರು ಸ್ಟ್ರಾಂಗ್, ಯಾರು ವೀಕ್?- ಮಂಜು, ರಜತ್ ನಡುವೆ ಬಿಗ್ ಫೈಟ್

    ನ.19 ರಂದು ಸಂಜೆ 5:30ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಸಂಪೂರ್ಣ ಭಸ್ಮವಾಗಿತ್ತು. ಘಟನೆಯಲ್ಲಿ ಓರ್ವ ಯುವತಿ ಸಜೀವ ದಹನಗೊಂಡಿದ್ದು, ಮೂವರು ಗಾಯಗೊಂಡಿದ್ದರು. ಶೋರೂಮ್‌ನಲ್ಲಿ ಸೇಲ್ಸ್ ಗರ್ಲ್ ಆಗಿದ್ದ ಪ್ರಿಯಾ ಎಂಬ ಯುವತಿ ಸಾವಿಗೀಡಾಗಿದ್ದಾಳೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು (ನ.20) ಎಫ್‌ಎಸ್‌ಎಲ್ (FSL) ತಂಡದಿಂದ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಅಗ್ನಿ ಅವಘಡ ಸಂಬಂಧ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿದೆ. ಪೊಲೀಸರು ಮೂವರು ಗಾಯಾಳುಗಳ ಹೇಳಿಕೆ ಪಡೆದುಕೊಂಡಿದ್ದು, ಯುವತಿಯ ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ತನಿಖೆ ನಡೆಸಲಿದ್ದಾರೆ.

    ಘಟನೆಯ ಬಳಿಕ ಶೋ ರೂಂ ಮಾಲೀಕ ಪುನೀತ್ ಪರಾರಿಯಾಗಿದ್ದ. ಇದೀಗ ಮಾಲೀಕನನ್ನು ವಶಕ್ಕೆ ಪಡೆಯಲಾಗಿದ್ದು, ಆತನ ವಿರುದ್ಧ ಬಿಎನ್‌ಎಸ್ 106 ಅಡಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಮ್ಯಾನೇಜರ್ ಯುವರಾಜ್‌ನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.ಇದನ್ನೂ ಓದಿ: ಬೆಂಗಳೂರು| ಕೋರ್ಟ್‌ ಆವರಣದಲ್ಲೇ ವಕೀಲನ ಮೇಲೆ ಮಾರಣಾಂತಿಕ ಹಲ್ಲೆ

  • ನಟ ಶಾರುಖ್ ಖಾನ್‌ಗೆ ಜೀವ ಬೆದರಿಕೆ ಪ್ರಕರಣ – ಛತ್ತೀಸ್‌ಗಢದಲ್ಲಿ ಆರೋಪಿ ಅರೆಸ್ಟ್

    ನಟ ಶಾರುಖ್ ಖಾನ್‌ಗೆ ಜೀವ ಬೆದರಿಕೆ ಪ್ರಕರಣ – ಛತ್ತೀಸ್‌ಗಢದಲ್ಲಿ ಆರೋಪಿ ಅರೆಸ್ಟ್

    ರಾಯಪುರ: ಬಾಲಿವುಡ್ ನಟ ಶಾರುಖ್ ಖಾನ್‌ಗೆ (Shah Rukh Khan) ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಛತ್ತೀಸ್‌ಗಢ (Chhattisgarh) ರಾಯಪುರದಲ್ಲಿ (Raipur) ಮುಂಬೈ(Mumbai) ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ವಕೀಲ ಮೊಹಮ್ಮದ್ ಫೈಜಾನ್ ಖಾನ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಟಾಕ್ಸಿಕ್ ಸಿನಿಮಾ ಸೆಟ್‍ಗೆ ಮರಗಳ ಮಾರಣಹೋಮ – ಎಫ್‍ಐಆರ್ ದಾಖಲು

    ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್‌ಗೆ ಅಪರಿಚಿತ ವ್ಯಕ್ತಿಯಿಂದ ಕೊಲೆ ಬೆದರಿಕೆ ಕರೆಯೊಂದು ಬಂದಿತ್ತು. ನ.5 ರಂದು ಮಧ್ಯಾಹ್ನ 1:20ರ ಸುಮಾರಿಗೆ ಮುಂಬೈನ ಬಾಂದ್ರಾ ಪೊಲೀಸರಿಗೆ ಕರೆ ಮಾಡಿ ವ್ಯಕ್ತಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ.

    ಛತ್ತೀಸ್‌ಗಢದ ರಾಯಪುರದ ಫೈಜಾನ್ ಖಾನ್ ಎಂಬುವರ ಹೆಸರಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿತ್ತು. ಈ ಸಂಬಂಧ ಫೈಜಾನ್ ಖಾನ್ ಅವರನ್ನು ಪೊಲೀಸರು ವಿಚಾರಣೆಗೆ ಕರೆಯಿಸಿದ್ದರು. ವಿಚಾರಣೆಯಲ್ಲಿ ತಾನು ವಕೀಲನಾಗಿದ್ದು, ನ.2 ರಂದು ಮೊಬೈಲ್ ಕಳ್ಳತನವಾಗಿದೆ. ಈ ಬಗ್ಗೆ ದೂರು ದಾಖಲಾಗಿದೆ. ಶಾರುಖ್ ಖಾನ್‌ಗೆ ಬೆದರಿಕೆ ಹಾಕಲು ಯಾರೋ ಅದನ್ನು ದುರ್ಬಳಕೆ ಮಾಡಿಕೊಂಡಿರಬಹುದು ಎಂದು ಹೇಳಿದ್ದನು.

    ಅದಾದ ಬಳಿಕ ತನಗೆ ಬೆದರಿಕೆ ಬರುತ್ತಿರುವ ಹಿನ್ನೆಲೆ ಸುರಕ್ಷತೆ ಒದಗಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದ. ಜೊತೆಗೆ ಸುರಕ್ಷತೆಯ ನೆಪದಲ್ಲಿ ಎರಡು ಬಾರಿ ವಿಚಾರಣೆಗೆ ಗೈರು ಹಾಜರಾಗಿದ್ದ. ಇದೀಗ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದು, ಭಾರತೀಯ ನ್ಯಾಯ ಸಂಹಿತೆಯ 308(4), 351(3)(4) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶಾರುಖ್ ಖಾನ್ ಅವರಿಗೆ ಜೀವ ಬೆದರಿಕೆ ಬಂದಿತ್ತು. ಅದಾದ ಬಳಿಕ ಅವರ ಭದ್ರತೆಯನ್ನು Y+ ಮಟ್ಟಕ್ಕೆ ಹೆಚ್ಚಿಸಲಾಯಿತು. ದಿನದ 24 ಗಂಟೆ ಆರು ಶಸ್ತ್ರಸಜ್ಜಿತ ಸಿಬ್ಬಂದಿಗಳ ಜೊತೆಯಲ್ಲಿ ಇರುವುದನ್ನು ಖಚಿತಪಡಿಸುತ್ತದೆ. ಇದಕ್ಕೂ ಮೊದಲು ಶಾರುಖ್ ಖಾನ್ ಇಬ್ಬರು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಗಳನ್ನು ಹೊಂದಿದ್ದರು.ಇದನ್ನೂ ಓದಿ: ಆರ್‌ಡಿಎಕ್ಸ್ ಇಟ್ಟು ಅಯೋಧ್ಯೆಯ ರಾಮಮಂದಿರ ಸ್ಫೋಟಿಸುವ ಬೆದರಿಕೆ