Tag: Armyman

  • ನಕ್ಸಲ್ ಚಟುವಟಿಕೆ ತೊರೆದು ಆರ್ಮಿ ಸೇರಿದ್ದ ಯೋಧ ವೀರ ಮರಣ

    ನಕ್ಸಲ್ ಚಟುವಟಿಕೆ ತೊರೆದು ಆರ್ಮಿ ಸೇರಿದ್ದ ಯೋಧ ವೀರ ಮರಣ

    ಶ್ರೀನಗರ: ನಕ್ಸಲ್ ಚಟುವಟಿಕೆ ಬಿಟ್ಟು ಭಾರತೀಯ ಸೇನೆ ಸೇರಿ, ಉಗ್ರರ ವಿರುದ್ಧ ಹೋರಾಡುತ್ತಲೇ ಯೋಧರೊಬ್ಬರು ವೀರ ಮರಣವಪ್ಪಿದ್ದಾರೆ.

    ಭಾರತೀಯ ಸೇನೆಯ ಲ್ಯಾನ್ಸ್ ನಾಯಕ ನಝೀರ್ ಅಹ್ಮದ್ ವಾನಿ ಮೃತ ಯೋಧ. ಉಗ್ರರು ನಡೆಸಿದ ದಾಳಿಯಲ್ಲಿ ಗುಂಡು ತಾಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಝೀರ್ ಅವರು ಸೋಮವಾರ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ ಇಬ್ಬರು ಮಕ್ಕಳಿದ್ದಾರೆ ಎಂದು ವರದಿಯಾಗಿದೆ.

    ಭಾರತೀಯ ಸೇನೆ ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ 6 ಜನ ಉಗ್ರರನ್ನು ಸೈನಿಕರು ಹತ್ಯೆ ಮಾಡಿದ್ದರು. ಆದರೆ ನಝೀರ್ ಅಹ್ಮದ್ ವಾನಿ ಅವರಿಗೆ ಉಗ್ರರು ಸಿಡಿಸಿದ ಗುಂಡು ತಾಕಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಕೊನೆ ಉಸಿರೆಳಿದಿದ್ದಾರೆ.

    ನಝೀರ್ ಯಾರು?:
    ನಝೀರ್ ಅಹ್ಮದ್ ವಾನಿ ದಕ್ಷಿಣ ಕಾಶ್ಮೀರದ ಕುಲ್ಗಾಮ್‍ನ ಚೆಕಿ ಅಸ್ಮುಜಿ ಗ್ರಾಮದ ನಿವಾಸಿ. ಜಮ್ಮು ಮತ್ತು ಕಾಶ್ಮೀರದ ಸ್ವಾತಂತ್ರ್ಯದ ಪರವಾಗಿದ್ದ ನಝೀರ್ ಅವರು ಉಗ್ರವಾದಿ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದರು. ಆದರೆ ನಾನು ಹೋಗುತ್ತಿರುವ ದಾರಿ ಸರಿಯಲ್ಲ ಅಂತಾ ಅರಿತ ನಝೀರ್ ಅವರು, ನಕ್ಸಲ್ ಚಟುವಟಿಕೆಯಿಂದ ಹೊರಬಂದು ಭಾರತೀಯ ಸೈನ್ಯಕ್ಕೆ ಶರಣಾಗಿದ್ದರು. ಇದನ್ನು ಓದಿ: ಉಗ್ರರೊಂದಿಗೆ ಹೋರಾಟ-ವೀರ ಮರಣವನ್ನಪ್ಪಿದ ಬೆಳಗಾವಿ ಯೋಧ

    ಬಳಿಕ ಸೇನೆ ನೀಡಿದ ಅವಕಾಶ ಪಡೆದುಕೊಂಡು ನಝೀರ್ ಅವರು 2004ರಲ್ಲಿ 162ನೇ ಟೆರಿಟೋರಿಯಲ್ ಆರ್ಮಿ ಬಟಾಲಿಯನ್‍ಗೆ ಸೇರಿಕೊಂಡಿದ್ದರು. ಉತ್ತಮ ಸೇವೆ, ನಿಷ್ಠೆಗೆ ಹೆಸರಾಗಿ ಲ್ಯಾನ್ಸ್ ನಾಯಕ ಆಗಿ ನೇಮಕಗೊಂಡಿದ್ದರು. ನಝೀರ್ ಅವರಿಗೆ 2007ರಲ್ಲಿ ಶೌರ್ಯ ಪ್ರಶಸ್ತಿ ಕೂಡ ಲಬಿಸಿತ್ತು.

    ಆರ್ಮಿ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಆರ್ಮಿ ಹಿರಿಯ ಅಧಿಕಾರಿಗಳು ನಝೀರ್ ಅಹ್ಮದ್ ವಾನಿ ಅವರ ವೀರ ಮರಣಕ್ಕೆ ಸಂತಾಪ ಸೂಚಿಸಿದ್ದಾರೆ. ನಝೀರ್ ಅವರ ಸೇವೆ ಹಾಗೂ ಭಾರತೀಯ ಸೇನೆಗೆ ದೇಶದ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv