Tag: army uniform

  • ಸೇನಾ ಸಮವಸ್ತ್ರ ಧರಿಸಿದ್ದ ಮೋದಿಗೆ ಯುಪಿ ಕೋರ್ಟ್‍ನಿಂದ ನೋಟಿಸ್

    ಸೇನಾ ಸಮವಸ್ತ್ರ ಧರಿಸಿದ್ದ ಮೋದಿಗೆ ಯುಪಿ ಕೋರ್ಟ್‍ನಿಂದ ನೋಟಿಸ್

    ನವದೆಹಲಿ: ಸೇನಾ ಸಮವಸ್ತ್ರ ಧರಿಸಿ ಸೈನಿಕರ ಜೊತೆ ದೀಪಾವಳಿ ಹಬ್ಬ ಆಚರಿಸಿದ್ದ ಪ್ರಧಾನಿ ನರೇಂದ್ರ ಮೋದಿಗೆ ಯುಪಿ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

    ನರೇಂದ್ರ ಮೋದಿ ಅವರು 2020-21ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾಗ ಸೇನಾ ಸಮವಸ್ತ್ರ ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ನ್ಯಾಯಾಲಯ ಮೋದಿ ಅವರ ಕಚೇರಿಗೆ ನೋಟೀಸ್ ಜಾರಿ ಮಾಡಿದೆ. ಇದನ್ನೂ ಓದಿ: ಹಿಜಬ್ ನೆಪವೊಡ್ಡಿ ಮುಸ್ಲಿಂ ಹೆಣ್ಮಕ್ಕಳ ಶಿಕ್ಷಣಕ್ಕೆ ತಡೆ ಒಡ್ಡಲಾಗ್ತಿದೆ: ಮುಫ್ತಿ

    ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ನೌಶೆರಾ ವಲಯದಲ್ಲಿ ಸೈನಿಕರ ಜೊತೆಗೆ ದೀಪಾವಳಿ ಆಚರಿಸಿದ್ದರು. ಈ ವೇಳೆ ಅವರು ಭಾರತೀಯ ಸೇನೆಯ ಸಮವಸ್ತ್ರ ಧರಿಸಿದ್ದರು. ಸೈನಿಕರನ್ನು ಉದ್ದೇಶಿಸಿ ಮಾತನಾಡಿ ಹಬ್ಬ ಶುಭ ಕೋರಿದ್ದರು.

    ಭೂಸೇನೆ, ನೌಕಾಪಡೆ, ವಾಯುಪಡೆ ಯೋಧರ ಸಮವಸ್ತ್ರ ಧರಿಸುವುದು ಮತ್ತು ಆರ್ಮಿಗೆ ಸಂಬಂಧಪಟ್ಟ ಯಾವುದೇ ವಸ್ತುಗಳನ್ನು ಬೇರೆಯವರು ಕೊಂಡೊಯ್ಯುವುದು, ಭಾರತೀಯ ದಂಡಸಂಹಿತೆ 140ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಹಿರಿಯ ವಕೀಲ ರಾಕೇಶ್‍ನಾಥ್ ಪಾಂಡೆಯ ಪ್ರಯಾಗ್ ರಾಜ್‍ನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಾಧೀಶ ನಳಿನ್ ಕುಮಾರ್ ಶ್ರೀವಾತ್ಸವ್ ಪ್ರಧಾನಿ ಕಾರ್ಯಾಲಯಕ್ಕೆ ನೋಟಿಸ್ ಕಳಿಸಿದ್ದಾರೆ.

    ವಕೀಲ ಪಾಂಡೆಯವರು ಮೊದಲು 2021ರ ಡಿಸೆಂಬರ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಮುಖ್ಯ ನ್ಯಾಯಾಂಗ ಮೆಜಿಸ್ಟ್ರೇಟ್ ಹರೇಂದ್ರ ನಾಥ್ ಈ ಅರ್ಜಿಯನ್ನು ತಿರಸ್ಕರಿಸಿ, ಇದು ನಮ್ಮ ಕೋರ್ಟ್‍ನ ನ್ಯಯಾಂಗ ಆಡಳಿತದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ವಿಷಯ ವಿಚಾರಣೆ ಮಾಡುವ ಅಧಿಕಾರ ವ್ಯಾಪ್ತಿ ಹೊಂದಿರುವ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿವುದು ಒಳಿತು ಎಂದು ಹೇಳಿದ್ದರು. ಪಿಎಂಗೆ ಯಾವುದೇ ನೋಟಿಸ್ ಕೊಟ್ಟಿರಲಿಲ್ಲ. ಇದೀಗ ಪ್ರಯಾಗ್ ರಾಜ್ ನ್ಯಾಯಾಲಯ ಪ್ರಧಾನಿ ಕಾರ್ಯಾಲಯಕ್ಕೆ ನೋಟಿಸ್ ಕೊಟ್ಟಿದ್ದು, ಮಾರ್ಚ್ 2ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

  • ಭಾರತೀಯ ಸೇನೆ ಹೊಸ ಸಮವಸ್ತ್ರ ಅನಾವರಣ – ಏನಿದರ ವಿಶೇಷತೆ?

    ಭಾರತೀಯ ಸೇನೆ ಹೊಸ ಸಮವಸ್ತ್ರ ಅನಾವರಣ – ಏನಿದರ ವಿಶೇಷತೆ?

    ನವದೆಹಲಿ: ಭಾರತೀಯ ಯೋಧರಿಗೆಂದು ತಯಾರಿಸಲಾದ ನೂತನ ಸಮವಸ್ತ್ರವನ್ನು ಸೇನಾ ದಿನವಾದ ಇಂದು ಅನಾವರಣಗೊಳಿಸಲಾಯಿತು.

    ಹಲವು ವಿಶೇಷತೆಗಳನ್ನು ಒಳಗೊಂಡ ಸೇನಾ ಸಮವಸ್ತ್ರವನ್ನು ಧರಿಸಿ ಪ್ಯಾರಾಚೂಟ್‌ ರೆಜಿಮೆಂಟ್‌ನ ಕಮಾಂಡೋಗಳ ತುಕಡಿ ಸೇನಾ ದಿನದ ಪಥಸಂಚನದಲ್ಲಿ ಭಾಗವಹಿಸಿತು. ಇದನ್ನೂ ಓದಿ: ಪಿಜ್ಜಾ ಆರ್ಡರ್‌ ಮಾಡುವಾಗ 9,000 ಹೋಯ್ತು – ವಾಪಸ್‌ ಪಡೆಯಲು ಹೋಗಿ 11 ಲಕ್ಷ ಕಳ್ಕೊಂಡ ವೃದ್ಧೆ

    ವಿನ್ಯಾಸಕರು ಯಾರು?
    ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ (ಎನ್‌ಐಎಫ್‌ಟಿ) ಸಹಯೋಗದಲ್ಲಿ ಭಾರತ ಸೇನಾಪಡೆಯು ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ.

    ಏನಿದರ ವಿಶೇಷತೆ?
    ಸೇನೆಗಾಗಿ ವಿನ್ಯಾಸಗೊಳಿಸಿರುವ ಹೊಸ ಸಮವಸ್ತ್ರ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಬ್ರಿಟಿಷ್‌ ಸೈನ್ಯವು ಬಳಸುವ ಮಾದರಿಯಂತೆ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ. ವಿವಿಧ ದೇಶಗಳ ಸೇನಾ ಸಮವಸ್ತ್ರಗಳ ವಿಶ್ಲೇಷಣೆ ಮತ್ತು ವಿಸ್ತೃತ ಚರ್ಚೆ ನಂತರ ಈ ಸಮವಸ್ತ್ರವನ್ನು ಅಂತಿಮಗೊಳಿಸಲಾಗಿದೆ. ಇದನ್ನೂ ಓದಿ: ನಾಯಕತ್ವ ತ್ಯಜಿಸಿ ಧೋನಿಗೆ ವಿಶೇಷ ಧನ್ಯವಾದ ಸಲ್ಲಿಸಿದ ಕೊಹ್ಲಿ!

    ಹವಾಮಾನ ಏರಿಳಿತ ಎದುರಿಸಲು ಪೂರಕ
    ಸೇನಾ ಸಿಬ್ಬಂದಿ ಬಿಸಿಲು, ಚಳಿ, ಮಳೆ-ರಾತ್ರಿ, ಹಗಲೆನ್ನದೇ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಹವಾಮಾನ ಏರಿಳಿತವನ್ನು ಎದುರಿಸಲು ಪೂರಕವಾದ ಸಮವಸ್ತ್ರ ಇದಾಗಿದೆ. ಸಿಬ್ಬಂದಿ ಕಾರ್ಯಕ್ಷೇತ್ರದ ಭೌಗೋಳಿಕ ಸ್ವರೂಪ ಹಾಗೂ ಹವಾಮಾನ ಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ರೂಪಿಸಲಾಗಿದೆ.

    ಮಣ್ಣು ಮತ್ತು ಹಸಿರು ಬಣ್ಣ ಮಿಶ್ರಣ
    ಹೊಸ ಸಮವಸ್ತ್ರವು ಮಣ್ಣು ಮತ್ತು ಹಸಿರು ಬಣ್ಣದ ಮಿಶ್ರಣದಿಂದ ಕೂಡಿದೆ. ಹಳೆಯ ಸಮವಸ್ತ್ರಕ್ಕೆ ಹೋಲಿಸಿದರೆ ವಿಭಿನ್ನವಾಗಿದೆ. ಸೇನಾ ಸಿಬ್ಬಂದಿ ಧರಿಸಲು ತುಂಬಾ ಕಂಫರ್ಟ್‌ ಆಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಇದನ್ನೂ ಓದಿ: ರೈಲ್ವೆ ಉದ್ಯೋಗ ತೊರೆದು ಪೊಲೀಸ್‌ ಇಲಾಖೆ ಸೇರಿದ ಟೋಕಿಯೊ ಒಲಿಂಪಿಕ್ಸ್‌ ಬೆಳ್ಳಿ ವಿಜೇತೆ

    ಡಿಜಿಟಲ್‌ ಕಣ್ಗಾವಲಿಗೂ ಸುಲಭವಾಗಿ ನಿಲುಕಲ್ಲ
    ನೂತನ ಸಮವಸ್ತ್ರವು ಡಿಜಿಟಲ್‌ ಕಣ್ಗಾವಲಿಗೂ ಸುಲಭವಾಗಿ ನಿಲುಕುವುದಿಲ್ಲ. ಮೇಲ್ನೋಟಕ್ಕೆ ಸಿಬ್ಬಂದಿ ಇರುವಿಕೆಯನ್ನು ಗುರುತಿಸಲಾಗದ ಸಮವಸ್ತ್ರ ಇದಾಗಿದೆ.

    ಮುಕ್ತ ಮಾರುಕಟ್ಟೆಯಲ್ಲಿ ಸಿಗಲ್ಲ
    ಈ ಸಮವಸ್ತ್ರ ಮುಕ್ತ ಮಾರುಕಟ್ಟೆಯಲ್ಲಿ ಸಾರ್ವಜನಿಕವಾಗಿ ಲಭ್ಯವಿರುವುದಿಲ್ಲ ಎಂಬ ವಿಚಾರವನ್ನು ಮೂಲಗಳು ಸ್ಪಷ್ಟಪಡಿಸಿವೆ.