Tag: army truck

  • ಜಮ್ಮುವಿನ ಬಂಡಿಪೋರಾದಲ್ಲಿ ಪ್ರಪಾತಕ್ಕೆ ಬಿದ್ದ ಸೇನಾ ವಾಹನ – ನಾಲ್ವರು ಯೋಧರು ಹುತಾತ್ಮ!

    ಜಮ್ಮುವಿನ ಬಂಡಿಪೋರಾದಲ್ಲಿ ಪ್ರಪಾತಕ್ಕೆ ಬಿದ್ದ ಸೇನಾ ವಾಹನ – ನಾಲ್ವರು ಯೋಧರು ಹುತಾತ್ಮ!

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡೀಪೋರಾ (Bandipore) ಜಿಲ್ಲೆಯಲ್ಲಿ ಶನಿವಾರ ಸೇನಾ ವಾಹನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ (Army Vehicle Falls) ಪರಿಣಾಮ ನಾಲ್ವರು ಯೋಧರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ.

    ಮಧ್ಯಾಹ್ನ 2.30ರ ಸುಮಾರಿಗೆ ಎಸ್‌ಕೆ ಪೇಯೆನ್ ಪ್ರದೇಶದ ಬಳಿ ಕೆಟ್ಟ ಹವಾಮಾನ ಪರಿಸ್ಥಿತಿಯಿಂದ ವಾಹನವು ಚಾಲಕನ ನಿಯಂತ್ರಣ ತಪ್ಪಿ, ದುರಂತ ಸಂಭವಿಸಿದೆ. ಕೂಡಲೇ ಗಂಭೀರವಾಗಿ ಗಾಯಗೊಂಡಿದ್ದ ಯೋಧರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಚಿಕಿತ್ಸೆ ಫಲಕಾರಿಯಾಗದೇ ನಾಲ್ವರು ಸಾವನ್ನಪ್ಪಿದ್ದಾರೆ. ಮೂವರ ಸ್ಥಿತಿ ಸ್ಥಿರವಾಗಿದ್ದು, ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

    ಅಪಘಾತ ಸ್ಥಳದಲ್ಲಿ ಭದ್ರತಾ ಪಡೆಗಳು ಮತ್ತು ಪೊಲೀಸ್‌ ಸಿಬ್ಬಂದಿಯನ್ನ ಮೇಲ್ವಿಚಾರಣೆಗೆ ನಿಯೋಜಿಸಲಾಗಿದೆ. ಇದನ್ನೂ ಓದಿ: 32 ವರ್ಷಗಳಿಂದ ಸ್ನಾನವನ್ನೇ ಮಾಡದ ಛೋಟಾ ಬಾಬಾ – ‘ಕುಂಭ ಮೇಳ’ದ ಆಕರ್ಷಣೆ ಕೇಂದ್ರಬಿಂದು ಇವರೇ!

    ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ವಾಹನ ಅಪಘಾತಕ್ಕೀಡಾಗಿರುವುದು ಇದೇ ಮೊದಲೇನಲ್ಲ. ಇತ್ತೀಚೆಗೆ 2024ರ ಡಿಸೆಂಬರ್‌ 24ರಂದು ಪೂಂಚ್‌ನಲ್ಲಿ ಸೇನಾವಾಹನ 350 ಆಳದ ಪ್ರಪಾತಕ್ಕೆ ಬಿದ್ದು, ಐವರು ಸೈನಿಕರು ಸಾವನ್ನಪ್ಪಿದ್ದರು ಮತ್ತು ಐವರು ಗಾಯಗೊಂಡಿದ್ದರು. ಈ ಪೈಕಿ ಕರ್ನಾಟಕದ ಮೂವರು ಯೋಧರು ಹುತಾತ್ಮರಾದರು. ಇದನ್ನೂ ಓದಿ: Delhi Assembly Election | 29 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬಿಜೆಪಿ

    ಇದಕ್ಕೂ ಮುನ್ನ 2024ರ ನವೆಂಬರ್‌ 4ರಂದು ರಜೌರಿ ಜಿಲ್ಲೆಯಲ್ಲಿ ಸೇನಾ ವಾಹನವು ರಸ್ತೆಯಿಂದ ಸ್ಕಿಡ್ ಆಗಿ ಕಮರಿಗೆ ಬಿದ್ದು ಓರ್ವ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದರು, ಮತ್ತೊಬ್ಬರು ಗಾಯಗೊಂಡಿದ್ದರು. ನವೆಂಬರ್‌ 2ರಂದು ರಿಯಾಸಿ ಜಿಲ್ಲೆಯಲ್ಲಿ ಕಾರೊಂದು ಕಮರಿಗೆ ಬಿದ್ದು 10 ತಿಂಗಳ ಮಗು ಸೇರಿ ಮೂವರು ಸಾವನ್ನಪ್ಪಿದ್ದರು ಹಾಗೂ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಇದನ್ನೂ ಓದಿ: ಕೆಲವರು ಗ್ರಾಮೀಣ ಭಾಗದಲ್ಲಿ ಜಾತಿ ರಾಜಕಾರಣದ ಹೆಸರಿನಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ: ಮೋದಿ

  • ಸೈನಿಕರ ವಾಹನದ ಮೇಲೆ ದಾಳಿ ಪ್ರಕರಣ – 12 ಶಂಕಿತರು ವಶಕ್ಕೆ

    ಸೈನಿಕರ ವಾಹನದ ಮೇಲೆ ದಾಳಿ ಪ್ರಕರಣ – 12 ಶಂಕಿತರು ವಶಕ್ಕೆ

    ಶ್ರೀನಗರ: ಸೈನಿಕರು ಸಂಚರಿಸುತ್ತಿದ್ದ ವಾಹನದ (Army Truck) ಮೇಲೆ ಗುರುವಾರ ದಾಳಿ ನಡೆಸಿ ಐವರು ಸೈನಿಕರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶುಕ್ರವಾರ 12 ಜನ ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಭಯೋತ್ಪಾದಕ ಸಂಘಟನೆಗಳ ಜೊತೆಗಿನ ನಂಟನ್ನು ಖಚಿತಪಡಿಸಿಕೊಳ್ಳಲು ಬಂಧನಕ್ಕೊಳಗಾದವರನ್ನು ವಿವಿಧ ಹಂತಗಳಲ್ಲಿ ಪ್ರಶ್ನಿಸಲಾಗುತ್ತಿದೆ. ಹಾಗೂ ಪೂಂಚ್ ಸೆಕ್ಟರ್‌ನಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಭಯೋತ್ಪಾದಕ ಚಟುವಟಿಕೆಗಳು ಸಕ್ರಿಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಯೋಧರ ವಾಹನದ ಮೇಲೆ ಉಗ್ರರಿಂದ ಗುಂಡಿನ ದಾಳಿ – ಗ್ರೆನೇಡ್ ಬಳಕೆ ಸಾಧ್ಯತೆ

    ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರ (Jammu and Kashmir) ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಅವರು ತನಿಖೆಯ ಮೇಲ್ವಿಚಾರಣೆಗಾಗಿ ನೆರೆಯ ರಜೌರಿ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದ್ದರು. ಇಬ್ಬರು ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

    ಡೆಪ್ಯುಟಿ ಇನ್ಸ್‍ಪೆಕ್ಟರ್ ಜನರಲ್ ಶ್ರೇಣಿಯ (Deputy Inspector General rank officer) ಅಧಿಕಾರಿಯ ನೇತೃತ್ವದ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ.

    ಪ್ರಾಥಮಿಕ ವರದಿಯಲ್ಲಿ ಸುಮಾರು ಐವರು ಭಯೋತ್ಪಾದಕರು ದಾಳಿಯಲ್ಲಿ ಭಾಗವಹಿಸಿದ ಬಗ್ಗೆ ಮಾಹಿತಿ ಇದೆ. ಸೇನಾ ಟ್ರಕ್ ಮೇಲೆ ಮೂರು ಕಡೆಗಳಿಂದ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿಯ ನಂತರ, ಭಯೋತ್ಪಾದಕರು ಗ್ರೆನೇಡ್‍ಗಳು ಮತ್ತು ಬಾಂಬ್‍ಗಳನ್ನು ಬಳಸಿ ವಾಹನವನ್ನು ಸುಟ್ಟು ಹಾಕಿರುವ ಸಾಧ್ಯತೆಯಿದೆ ಎನ್ನಲಾಗಿದೆ.

    ಭದ್ರತಾ ದೃಷ್ಟಿಯಿಂದ ಭಿಂಬರ್ ಗಲಿ ಮತ್ತು ಜರ್ರಾನ್ ವಾಲಿ ಗಲಿ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸತತ ಎರಡನೇ ದಿನವೂ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದಾಳಿ ನಡೆಸಿದವರು ಒಂದು ವರ್ಷಕ್ಕೂ ಹೆಚ್ಚು ಕಾಲ ರಜೌರಿ ಮತ್ತು ಪೂಂಚ್‍ನಲ್ಲಿ ವಾಸವಾಗಿದ್ದರು. ಇಂತಹ ಕಠಿಣವಾದ ಭೂಪ್ರದೇಶದ ಬಗ್ಗೆ ಸಾಕಷ್ಟು ಜ್ಞಾನವನ್ನು ಹೊಂದಿದ್ದರು. ಪ್ರಸ್ತುತ ಈ ಪ್ರದೇಶದಲ್ಲಿ ಮೂರರಿಂದ ನಾಲ್ಕು ಭಯೋತ್ಪಾದಕ ಗುಂಪುಗಳು ಸಕ್ರಿಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜೈಶ್-ಎ-ಮೊಹಮ್ಮದ್‍ನ ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫ್ರಂಟ್ ನಿಷೇಧಿತ ಭಯೋತ್ಪಾದಕ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಇದು ನಿಷೇಧಿತ ಲಷ್ಕರ್-ಎ-ತೊಯ್ಬಾ ಗುಂಪಿನ ಕೈವಾಡ ಎನ್ನಲಾದ ಮಾಹಿತಿ ಇದೆ ಎಂದು ಮೂಲಗಳು ತಿಳಿಸಿವೆ.

    ಭಯೋತ್ಪಾದಕರನ್ನು ಪತ್ತೆ ಹಚ್ಚಲು ಡ್ರೋನ್‍ಗಳು ಮತ್ತು ಸ್ನಿಫರ್ ಡಾಗ್‍ಗಳನ್ನು (Sniffer Dogs) ಬಳಸಲಾಗುತ್ತಿದೆ. ಸೇನೆ ಎಂಐ- ಚಾಪರ್‌ನೊಂದಿಗೆ ( MI-chopper) ಪ್ರದೇಶದ ಪರಿಶೀಲನೆಯನ್ನು ಸಹ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ದಾಳಿಯ ನಂತರ ಅವರ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ಗುರುವಾರ ಐವರು ಸೇನಾ ಸಿಬ್ಬಂದಿ ಸಾವನ್ನಪ್ಪಿದರು ಮತ್ತು ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಗೊಳಗಾದವರು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ನಿಯೋಜಿಸಲಾದ ರಾಷ್ಟ್ರೀಯ ರೈಫಲ್ಸ್ ಘಟಕದ ಯೋಧರಾಗಿದ್ದು ಅವರ ಮೃತದೇಹಗಳನ್ನು ಅವರವರ ಊರಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಕಟ್ಟೆಚ್ಚರ ಹೆಚ್ಚಿರುವ ಹಿನ್ನೆಲೆಯಲ್ಲಿ ಅವಳಿ ಗಡಿ ಜಿಲ್ಲೆಗಳಾದ ರಾಜೌರಿ ಮತ್ತು ಪೂಂಚ್‍ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಗಜ್ನವಿ ಫೋರ್ಸ್‌ನ  ಕಮಾಂಡರ್ ರಫೀಕ್ ಅಹ್ಮದ್ ಅಲಿಯಾಸ್ ರಫೀಕ್ ನಯಿ ಅವರು ಇದೇ ಪ್ರದೇಶದ ನಿವಾಸಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದಾಳಿಯ ವಿರುದ್ಧ ಬಿಜೆಪಿ (BJP), ವಿಎಚ್‍ಪಿ (VHP), ಬಜರಂಗದಳ (Bajrang Dal), ಶಿವಸೇನೆ (Shiv Sena), ಡೋಗ್ರಾ ಫ್ರಂಟ್ ಮತ್ತು ಜಮ್ಮು ರಾಜ್ಯತ್ವ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಸೇನಾ ವಾಹನಕ್ಕೆ ಬೆಂಕಿ ತಗುಲಿ 4 ಯೋಧರು ಸಜೀವದಹನ

  • ಕಣಿವೆಗೆ ಉರುಳಿದ ಸೇನಾ ವಾಹನ – 16 ಸೈನಿಕರು ಹುತಾತ್ಮ

    ಕಣಿವೆಗೆ ಉರುಳಿದ ಸೇನಾ ವಾಹನ – 16 ಸೈನಿಕರು ಹುತಾತ್ಮ

    ಗ್ಯಾಂಗ್ಟಾಕ್: ಭಾರತೀಯ ಸೇನಾ ವಾಹನವು (Army Truck) ಕಣಿವೆಗೆ ಉರುಳಿ 16 ಯೋಧರು ಹುತಾತ್ಮರಾಗಿರುವ ದುರ್ಘಟನೆ ಉತ್ತರ ಸಿಕ್ಕಿಂನ (Sikkim) ಝೆಮಾ ಎಂಬಲ್ಲಿ ನಡೆದಿದೆ.

    ಸೈನಿಕರು (Soldiers) ಪ್ರಯಾಣಿಸುತ್ತಿದ್ದ ಟ್ರಕ್ ಕಡಿದಾದ ಇಳಿಜಾರಿನಲ್ಲಿ ಆಯತಪ್ಪಿ ಕಣಿವೆಗೆ ಬಿದ್ದಿದ್ದರಿಂದ ಭಾರತೀಯ ಸೇನೆಯ ಮೂವರು ಜೂನಿಯರ್ ಕಮಿಷನ್ಡ್ ಅಧಿಕಾರಿಗಳು ಸೇರಿದಂತೆ 16 ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ನಿವೃತ್ತ ಪ್ರಾಧ್ಯಾಪಕಿ ಶೆಲ್ಲಿ ದೆಹಲಿ ಮೇಯರ್ ಅಭ್ಯರ್ಥಿಯಾಗಿ ಘೋಷಣೆ

    ಈ ವಾಹನವು ಮೂರು ವಾಹನಗಳ ಬೆಂಗಾವಲು ಪಡೆಯ ಭಾಗವಾಗಿತ್ತು. ಬೆಳಗ್ಗೆ ಚಾಟೆನ್‌ನಿಂದ ಥಾಂಗು ಕಡೆಗೆ ಹೊರಟಿತ್ತು. ಝೆಮಾದಲ್ಲಿ ಸಾಗುತ್ತಿದ್ದಾಗ ವಾಹನವು ತೀಕ್ಷ್ಣವಾದ ತಿರುವಿನಲ್ಲಿ ಆಯತಪ್ಪಿ ಕಣಿವೆಗೆ ಉರುಳಿದೆ ಎಂದು ಸೇನೆ ಹೇಳಿದೆ. ಅಪಘಾತದಲ್ಲಿ ಗಾಯಗೊಂಡ ನಾಲ್ವರು ಯೋಧರನ್ನು ಚಿಕಿತ್ಸೆಗಾಗಿ ಏರ್‌ಲಿಫ್ಟ್‌ ಮಾಡಲಾಗಿದೆ.

    ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh), ಹುತಾತ್ಮ ಯೋಧರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. “ಉತ್ತರ ಸಿಕ್ಕಿಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ ಭಾರತೀಯ ಸೇನೆಯ ಸಿಬ್ಬಂದಿಯ ಪ್ರಾಣಹಾನಿಯಿಂದ ತೀವ್ರ ನೋವಾಗಿದೆ. ಅವರ ಸೇವೆ ಮತ್ತು ಬದ್ಧತೆಗೆ ರಾಷ್ಟ್ರವು ಆಳವಾಗಿ ಕೃತಜ್ಞವಾಗಿದೆ. ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ

    Live Tv
    [brid partner=56869869 player=32851 video=960834 autoplay=true]

  • ಅಪಘಾತದಲ್ಲಿ ಗಾಯಗೊಂಡ ಯೋಧರಿಗೆ ಕಾಶ್ಮೀರದ ಜನರ ಸಹಾಯ- ವಿಡಿಯೋ ವೈರಲ್

    ಅಪಘಾತದಲ್ಲಿ ಗಾಯಗೊಂಡ ಯೋಧರಿಗೆ ಕಾಶ್ಮೀರದ ಜನರ ಸಹಾಯ- ವಿಡಿಯೋ ವೈರಲ್

     

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ಯೋಧರಿಗೆ ಸ್ಥಳಿಯರು ಸಹಾಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಇಲ್ಲಿನ ಬುದ್ಗಾಮ್ ಜಿಲ್ಲೆಯಲ್ಲಿ ಸೇನಾ ಟ್ರಕ್‍ವೊಂದು ಅಪಘಾತಕ್ಕೆ ಸಿಲುಕಿತ್ತು. ಇದನ್ನ ಕಂಡ ಸ್ಥಳೀಯರು ಕೂಡಲೇ ಸೈನಿಕರ ನೆರವಿಗೆ ಧಾವಿಸಿದ್ದಾರೆ. ಭಾನುವಾರದಂದು ಈ ಅಪಘಾತ ನಡೆದಿದೆ.

    ಇಲ್ಲಿನ ಚಾದೂರಾ ಪ್ರದೇಶದ ಮಾರ್ಗವಾಗಿ ವಾಹನ ಚಲಿಸುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ರಸ್ತೆಯಿಂದ ಪಕ್ಕಕ್ಕೆ ಹೋಗಿತ್ತು. ಅಪಘಾತದಿಂದಾಗಿ ಹಲವು ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡ ಸೈನಿಕರಿಗೆ ನೆರವಾದ್ರು ಎಂದು ಪೊಲೀಸರು ಹೇಳಿದ್ದಾರೆ. ಸೈನಿಕರಿಗೆ ಕುಡಿಯಲು ನೀರು ಹಾಗೂ ಪ್ರಥಮ ಚಿಕಿತ್ಸೆ ನೀಡಿ ಸ್ಥಳೀಯರು ಮಾನವೀಯತೆ ಮೆರೆದಿದ್ದಾರೆ.

    ಕಳೆದ ವರ್ಷವೂ ಕೂಡ ಇಲ್ಲಿನ ಪರಿಂಪೋರಾ – ಪಂತ ಚೌಕ್ ಬೈಪಾಸ್‍ನ ಲಸ್ಜನ್ ಬಳಿ ಟ್ರಕ್ ಅಪಘಾತಕ್ಕೆ ಸಿಲುಕಿದ್ದಾಗ ಗಾಯಗೊಂಡ ಸೈನಿಕರು ಹೊರಬರಲು ಸ್ಥಳೀಯರು ಸಹಾಯ ಮಾಡಿದ್ದರು.