Tag: army personnel

  • ಹಿಮದಿಂದ ಕೂಡಿದ್ದ ಟ್ರ್ಯಾಕ್‌ನಿಂದ ಜಾರಿ ಕಮರಿಗೆ ಬಿದ್ದ ವಾಹನ – 3 ಯೋಧರು ಹುತಾತ್ಮ

    ಹಿಮದಿಂದ ಕೂಡಿದ್ದ ಟ್ರ್ಯಾಕ್‌ನಿಂದ ಜಾರಿ ಕಮರಿಗೆ ಬಿದ್ದ ವಾಹನ – 3 ಯೋಧರು ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಕುಪ್ವಾರದ ಮಚ್ಚಲ್ ಸೆಕ್ಟರ್‌ನ ಮುಂಚೂಣಿ ಪ್ರದೇಶದಲ್ಲಿ ಕಾರ್ಯಾಚರಣೆ ವೇಳೆ ಸಂಭವಿಸಿದ ಅಪಘಾತದಲ್ಲಿ ಮೂವರು ಭಾರತೀಯ ಸೇನಾ ಸಿಬ್ಬಂದಿ (Army Personnel) ಹುತಾತ್ಮರಾಗಿದ್ದಾರೆ.

    ಒಬ್ಬರು ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಮತ್ತು ಇಬ್ಬರು ಇತರ ಶ್ರೇಣಿಯ (OR) ಅಧಿಕಾರಿಗಳು ಪ್ರಯಾಣಿಸುತ್ತಿದ್ದ ವಾಹನವು ಹಿಮದಿಂದ ತುಂಬಿದ ಟ್ರ್ಯಾಕ್‌ನಿಂದ ಜಾರಿ ಕಮರಿಗೆ ಬಿದ್ದಿದೆ. ಇದನ್ನೂ ಓದಿ: ಮದುವೆಯಾಗಲು ಹೆಣ್ಣು ಹುಡುಕಿಕೊಡುವಂತೆ ಯುವಕ ಕರೆ- ಡಿಟೇಲ್ಸ್ ಕಳುಹಿಸು ಅಂದ್ರು ಶಾಸಕ

    ದುರಂತದಲ್ಲಿ ಮೂವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಹುತಾತ್ಮ ಯೋಧರ ಪಾರ್ಥೀವ ಶರೀರಗಳನ್ನು ಪಡೆಯಲಾಗಿದೆ ಎಂದು ಸೇನೆಯ ಚಿನಾರ್‌ ಕಾರ್ಪ್ಸ್‌ ತಿಳಿಸಿದ್ದಾರೆ.

    ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಕ್ಕಿಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 16 ಮಂದಿ ಭಾರತೀಯ ಸೈನಿಕರು ಮಡಿದಿದ್ದರು. ಟ್ರಕ್‌ ಸಿಕ್ಕಿಂನಲ್ಲಿ ಕಮರಿಗೆ ಬಿದ್ದು ಮೂವರು ಅಧಿಕಾರಿಗಳು ಸೇರಿ 16 ಸೈನಿಕರು ಹುತಾತ್ಮರಾಗಿದ್ದರು. ಇದನ್ನೂ ಓದಿ: 50 ಪ್ರಯಾಣಿಕರನ್ನು ಬಿಟ್ಟುಹೋದ ವಿಮಾನ – ಗೋ ಫಸ್ಟ್‌ಗೆ DGCA ನೋಟಿಸ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಯೋತ್ಪಾದಕರ ಎನ್‍ಕೌಂಟರ್ ವೇಳೆ ಸೇನಾ ಸಿಬ್ಬಂದಿಗೆ ಗಂಭೀರ ಗಾಯ

    ಭಯೋತ್ಪಾದಕರ ಎನ್‍ಕೌಂಟರ್ ವೇಳೆ ಸೇನಾ ಸಿಬ್ಬಂದಿಗೆ ಗಂಭೀರ ಗಾಯ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‍ಕೌಂಟರ್‌ನಲ್ಲಿ ಸೇನಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆ ಭಯೋತ್ಪಾದಕರಿದ್ದ ಕುಲ್ಗಾಮ್ ಸ್ಥಳಕ್ಕೆ ಪ್ರವೇಶಿಸಿ ಗುಂಡಿನ ದಾಳಿ ಪ್ರಾರಂಭಿಸಿದೆ. ಈ ವೇಳೆ 34 ಆರ್‌ಆರ್‌ನ  ಸೇನಾ ಯೋಧ ಜೈ ಕುಮಾರ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: 2 ಲಡಾಖ್ ಪರ್ವತವನ್ನು ಹತ್ತಿದ 13 ವರ್ಷದ ಪೋರ  

    ದಕ್ಷಿಣ ಕಾಶ್ಮೀರದ ಕುಲ್ಗಾಮ್‍ನ ಯರಿಪೋರಾದ ಬ್ರೈಹಾರ್ಡ್ ಕಥ್ಪೋರಾ ಪ್ರದೇಶದಲ್ಲಿ ಎನ್‍ಕೌಂಟರ್ ನಡೆಯಿತು. ಈ ವೇಳೆ 2 ರಿಂದ 3 ಉಗ್ರರು ಸಿಕ್ಕಿಬಿದ್ದಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕಟ್ಟಡ ಕುಸಿದು 6 ಮಂದಿ ಸೇನಾ ಸಿಬ್ಬಂದಿ ಸಾವು

    ಕಟ್ಟಡ ಕುಸಿದು 6 ಮಂದಿ ಸೇನಾ ಸಿಬ್ಬಂದಿ ಸಾವು

    ಶಿಮ್ಲಾ: ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಸೇನಾ ಸಿಬ್ಬಂದಿ ಸೇರಿದಂತೆ ಏಳು ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಸೋಲನ್‍ನಲ್ಲಿ ನಡೆದಿದೆ.

    ಭಾನುವಾರ ಸೋಲನ್ ಜಿಲ್ಲೆಯಲ್ಲಿ ಬಹುಮಹಡಿ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡದ ಅವಶೇಷಗಳಡಿ 37 ಮಂದಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

    ಭಾನುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ರಾಜ್ಯ ರಾಜಧಾನಿ ಶಿಮ್ಲಾದಿಂದ 45 ಕಿ.ಮೀ ದೂರದಲ್ಲಿರುವ ಸೋಲನ್‍ನ ಕುಮಾರ್ಹಟ್ಟಿ-ನಹಾನ್ ಹೆದ್ದಾರಿಯಲ್ಲಿ ಈ ಕಟ್ಟಡ ಇದ್ದು, ಭಾರೀ ಮಳೆಯಿಂದಾಗಿ ಕುಸಿದಿದೆ ಎನ್ನಲಾಗಿದೆ. ಸದ್ಯ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಉಳಿದವರ ರಕ್ಷಣೆಗಾಗಿ ಕಾರ್ಯಾಚರಣೆ ಪ್ರಗತಿಯಲ್ಲಿದೆ.

    ಇಲ್ಲಿಯವರೆಗೆ ಸುಮಾರು 17 ಸೇನಾ ಸಿಬ್ಬಂದಿ ಮತ್ತು 11 ನಾಗರಿಕರನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ಅವಶೇಷದಡಿ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಇಂದು ಮಧ್ಯಾಹ್ನದೊಳಗೆ ಪೂರ್ಣಗೊಳಿಸಲಾಗುವುದು. ಈ ಘಟನೆಯಲ್ಲಿ ಆರು ಸೇನಾ ಸಿಬ್ಬಂದಿ ಮತ್ತು ಸಾರ್ವಜನಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಸೋಲನ್‍ನ ಉಪ ಆಯುಕ್ತ ಕೆ.ಸಿ.ಚಮನ್ ತಿಳಿಸಿದ್ದಾರೆ.

    ಘಟನೆ ನಡೆದಾಗ ಒಟ್ಟು 30 ಸಿಬ್ಬಂದಿ ಮತ್ತು ಇತರೆ ಕೆಲವರು ಕಟ್ಟಡದಲ್ಲಿದ್ದರು ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‍ಡಿಆರ್‍ಎಫ್) ಸಿಬ್ಬಂದಿ ನಡೆಸುತ್ತಿದ್ದಾರೆ.

    ಹಿಮಾಚಲ ಪ್ರದೇಶದ ಸಿಎಂ ಜೈರಾಮ್ ಠಾಕೂರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆ ಹಾಗೂ ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

  • ಸಮುದ್ರದಲ್ಲಿ ಕೊಚ್ಚಿ ಹೋಗ್ತಿದ್ದ ಸೇನಾ ಸಿಬ್ಬಂದಿಯ ರಕ್ಷಣೆ

    ಸಮುದ್ರದಲ್ಲಿ ಕೊಚ್ಚಿ ಹೋಗ್ತಿದ್ದ ಸೇನಾ ಸಿಬ್ಬಂದಿಯ ರಕ್ಷಣೆ

    ಪಣಜಿ: ಸಮುದ್ರದ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಸೇನಾ ಸಿಬ್ಬಂದಿಯನ್ನು ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ.

    ಪುಣೆ ಮೂಲದ ಸೇನಾ ಸಿಬ್ಬಂದಿಯೊಬ್ಬರು ರಜೆಗೆಂದು ಗೋವಾ ಪ್ರವಾಸ ಕೈಗೊಂಡಿದ್ದರು. ಹೀಗೆ ದಕ್ಷಿಣ ಗೋವಾ ಜಿಲ್ಲೆಯ `ಕಬೋ ಡ ರಾಮ ಕೋಟೆ’ಯ ಬಳಿ ನಡೆದು ಸಾಗುವಾಗ ಕಾಲು ಜಾರಿ ಸಮುದ್ರದಕ್ಕೆ ಬಿದ್ದಿದ್ದಾರೆ. ಬೀಚ್‍ಗಳಲ್ಲಿ ಜನರು ಸಮುದ್ರಪಾಲಾದರೆ ಅವರ ರಕ್ಷಣೆ ಮಾಡಲೆಂದೇ `ದೃಷ್ಟಿ ಲೈಫ್ ಸೇವಿಂಗ್ ಸಂಸ್ಥೆ’ಯು ಲೈಫ್ ಗಾರ್ಡ್ ಗಳನ್ನು ನೇಮಿಸಿದೆ. ಈ ವೇಳೆ ಸೇನಾ ಸಿಬ್ಬಂದಿ ಸಮುದ್ರದ ಅಲೆಗಳಲ್ಲಿ ಕೊಚ್ಚಿ ಹೋಗುತ್ತಿರುವುದನ್ನ ಕಂಡ ಲೈಫ್ ಗಾರ್ಡ್ ಸಿಬ್ಬಂದಿ ಅವರನ್ನು ರಕ್ಷಿಸಲು ತಕ್ಷಣವೇ ನೀರಿಗೆ ಹಾರಿದ್ದಾರೆ. ಆದರೆ ಅಲೆಗಳ ಸೆಳೆತ ಹೆಚ್ಚಾಗಿದ್ದರಿಂದ ಅವರನ್ನು ಆ ಕ್ಷಣ ರಕ್ಷಿಸಲು ಸಾಧ್ಯವಾಗಲಿಲ್ಲ.

    ಬಳಿಕ ಕೋಸ್ಟಲ್ ಗಾರ್ಡ್ ಹೆಲಿಕಾಪ್ಟರನ್ನು ಸ್ಥಳಕ್ಕೆ ಕರೆಸಿ, ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಸಮುದ್ರದಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಸೇನಾ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ಪತ್ತೆ ಹಚ್ಚಿ ರಕ್ಷಣೆ ಮಾಡಲಾಗಿದೆ. ನಂತರ ಅವರನ್ನು ಹತ್ತಿರದ ಕೋಸ್ಟಲ್ ಗಾರ್ಡ್ ಏರ್ ಎನ್‍ಕ್ಲೇವ್‍ಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ಆ ಮೇಲೆ ಹೆಚ್ಚಿನ ಚಿಕಿತ್ಸೆಗಾಗಿ ಐನ್‍ಎಸ್‍ಹೆಚ್ ಜೀವಂತಿ ಆಸ್ಪತ್ರೆಗೆ ಅವರನ್ನು ರವಾನಿಸಲಾಯಿತು.

    ಸೇನಾ ಸಿಬ್ಬಂದಿಯನ್ನು ಸಮುದ್ರದಲ್ಲಿ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿರುವ ವಿಡಿಯೋವನ್ನು ಸುದ್ದಿ ಸಂಸ್ಥೆಯೊಂದು ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಸೇನಾ ಸಿಬ್ಬಂದಿ ಅಲೆಗಳ ಹೊಡೆತಕ್ಕೆ ತತ್ತರಿಸಿ ತನ್ನ ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ದೃಶ್ಯ ಸೆರೆಯಾಗಿದೆ. ಅಲೆಗಳ ಸೆಳೆತ ಜೋರಾಗಿದ್ದ ಕಾರಣಕ್ಕೆ ರಕ್ಷಣಾ ಕಾರ್ಯ ತುಸು ಕಷ್ಟವಾದರೂ ಕೋಸ್ಟ್ ಗಾರ್ಡ್ ಗಳು ಒಂದು ಜೀವವನ್ನು ಉಳಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಗೋವಾದ ಬೀಚ್‍ಗಳಲ್ಲಿ ಕೊಚ್ಚಿ ಹೋಗಿದ್ದ ಮೂವರು ಪ್ರವಾಸಿಗರನ್ನು ಬುಧುವಾರದಂದು ಕೋಸ್ಟ್ ಗಾರ್ಡ್‍ಗಳು ರಕ್ಷಿಸಿದ್ದಾರೆ.