Tag: army day

  • ವಿಶ್ವದಲ್ಲೇ ಭಾರತದ ಅತೀ ದೊಡ್ಡ ಖಾದಿ ರಾಷ್ಟ್ರಧ್ವಜ ಪ್ರದರ್ಶನ

    ಜೈಪುರ: ಶನಿವಾರ ದೇಶಾದ್ಯಂತ 74ನೇ ಸೇನಾ ದಿನವನ್ನು ಆಚರಿಸಲಾಯಿತು. ಈ ದಿನ ವಿಶ್ವದಲ್ಲೇ ಅತೀ ದೊಡ್ಡ ಭಾರತದ ಖಾದಿ ರಾಷ್ಟ್ರಧ್ವಜವನ್ನು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಅನಾವರಣ ಮಾಡಲಾಗಿದೆ.

    1971ರಲ್ಲಿ ಭಾರತ-ಪಾಕಿಸ್ತಾನ ನಡುವೆ ರಾಜಸ್ಥಾನದ ಲೋಂಗೇವಾಲಾ ಗಡಿಯಲ್ಲಿ ಐತಿಹಾಸಿಕ ಯುದ್ಧ ನಡೆದಿತ್ತು. ಈ ಪ್ರದೇಶದಲ್ಲಿ ವಿಶ್ವದ ಅತೀ ದೊಡ್ಡ ಭಾರತದ ಧ್ವಜವನ್ನು ಶನಿವಾರ ಪ್ರದರ್ಶನಕ್ಕೆ ಇಡಲಾಗಿದೆ. ಇದನ್ನೂ ಓದಿ: ಭಾರತೀಯ ಸೇನೆ ಹೊಸ ಸಮವಸ್ತ್ರ ಅನಾವರಣ – ಏನಿದರ ವಿಶೇಷತೆ?

    225 ಅಡಿ ಉದ್ದ, 150 ಅಡಿ ಅಗಲದ ಹಾಗೂ 1,400 ಕೆಜಿ ಭಾರವಿರುವ ಭಾರತೀಯ ಧ್ವಜವನ್ನು ಸಂಪೂರ್ಣ ಖಾದಿಯಿಂದ ತಯಾರಿಸಲಾಗಿದೆ. 70 ಮಂದಿ ಖಾದಿ ಕುಶಲ ಕರ್ಮಿಗಳು ಈ ಧ್ವಜವನ್ನು ತಯಾರಿಸಲು 49 ದಿನಗಳನ್ನು ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಮಿಸೆಸ್ ವರ್ಲ್ಡ್ 2022 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಹಳ್ಳಿ ಸುಂದರಿ ನವ್ದೀಪ್ ಕೌರ್

    2021ರ ಅಕ್ಟೋಬರ್ 2 ರಂದು ಭಾರತದ ಅತೀ ದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಮೊದಲ ಬಾರಿಗೆ ಲಡಾಖ್‌ನ ಲೇಹ್‌ನಲ್ಲಿ ಪ್ರದರ್ಶಿಸಲಾಗಿತ್ತು. ಶನಿವಾರ ಈ ಧ್ವಜವನ್ನು 5ನೇ ಬಾರಿ ಪ್ರದರ್ಶನಕ್ಕೆ ಇಡಲಾಗಿದೆ.

  • ಅಭ್ಯಾಸದ ವೇಳೆ ಧ್ರುವ್ ಹೆಲಿಕಾಪ್ಟರ್‍ನಿಂದ ಕೆಳಗೆ ಬಿದ್ದು ಗಾಯಗೊಂಡ ಯೋಧರು: ವಿಡಿಯೋ ನೋಡಿ

    ಅಭ್ಯಾಸದ ವೇಳೆ ಧ್ರುವ್ ಹೆಲಿಕಾಪ್ಟರ್‍ನಿಂದ ಕೆಳಗೆ ಬಿದ್ದು ಗಾಯಗೊಂಡ ಯೋಧರು: ವಿಡಿಯೋ ನೋಡಿ

    ನವದೆಹಲಿ: ಜನವರಿ 15ರ ಸೇನಾ ದಿನಾಚರಣೆ ಅಂಗವಾಗಿ ಅಭ್ಯಾಸ ಮಾಡುವ ವೇಳೆ ಮೂವರು ಭಾರತೀಯ ಯೋಧರು ಧ್ರುವ್ ಹೆಲಿಕಾಪ್ಟರ್‍ನಿಂದ ಕೆಳಗೆ ಬಿದ್ದು ಗಾಯಗೊಂಡ ಘಟನೆ ದೆಹಲಿಯಲ್ಲಿ ನಡೆದಿದೆ.

    ಯೋಧರು ಹೆಲಿಕಾಪ್ಟರ್‍ನಿಂದ ಹಗ್ಗ ಹಿಡಿದು ಕೆಳಗಿಳಿಯುತ್ತಿದ್ದರು. ಇಬ್ಬರು ಯೋಧರು ಹಗ್ಗದ ಮೇಲೆ ಇಳಿಯುತ್ತಿದ್ದರು. ಇನ್ನೇನು ಮೂರನೇ ಯೋಧ ಹಗ್ಗದಿಂದ ಇಳಿಯಬೇಕು ಎನ್ನುವಾಗ ಹಗ್ಗ ಕಟ್ ಆಗಿದೆ. ಪರಿಣಾಮ ಮೂವರು ಯೋಧರು ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ಯೋಧರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಎಲ್ಲಾ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ಘಟನೆ ಮಂಗಳವಾರದಂದು ನಡೆದಿದ್ದು, ಇದರ ವಿಡಿಯೋ ರಾಷ್ಟ್ರೀಯ ಮಾಧ್ಯಮಗಳಲ್ಲಿ ಇಂದು ಪ್ರಸಾರವಾಗಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ವರದಿಯಾಗಿದೆ.

    1949ರ ಜನವರಿ 15ರಂದು ಲೆಫ್ಟಿನೆಂಟ್ ಜೆನರಲ್ ಕೆಎಂ ಕಾರ್ಯಪ್ಪ ಭಾರತ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಕೊನೆಯ ಬ್ರಿಟಿಷ್ ಕಮಾಂಡರ್ ಇನ್ ಚೀಫ್ ಆದ ಜನರಲ್ ಸರ್ ಫ್ರಾನ್ಸಿಸ್ ಬುಚ್ಚರ್ ರಿಂದ ಅಧಿಕಾರ ವಹಿಸಿಕೊಂಡಿದ್ದರು. ಇದರ ಅಂಗವಾಗಿ ಪ್ರತಿ ವರ್ಷ ಜನವರಿ 15ರಂದು ಸೇನಾ ದಿನಾಚರಣೆ ಆಚರಿಸಲಾಗುತ್ತದೆ.