Tag: Arms Act

  • ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟ ಆರೋಪ – ಮಹೇಶ್ ಶೆಟ್ಟಿ ತಿಮರೋಡಿಗೆ ಬಂಧನ ಭೀತಿ

    ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟ ಆರೋಪ – ಮಹೇಶ್ ಶೆಟ್ಟಿ ತಿಮರೋಡಿಗೆ ಬಂಧನ ಭೀತಿ

    – ಇಂದು ಬೆಳ್ತಂಗಡಿ ಠಾಣೆಗೆ ಹಾಜರಾಗಲು ಪೊಲೀಸರ ಸೂಚನೆ

    ಮಂಗಳೂರು: ಬುರುಡೆ ಗ್ಯಾಂಗ್ ಮಹೇಶ್ ಶೆಟ್ಟಿ ತಿಮರೋಡಿಗೆ (Mahesh Shetty Thimarody) ಬಂಧನ ಭೀತಿ ಎದುರಾಗಿದೆ. ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟಿದ್ದ ಹಿನ್ನೆಲೆ ಇಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ (Belthangady Police Station) ಹಾಜರಾಗಲು ಪೊಲೀಸರು ಸೂಚಿಸಿದ್ದಾರೆ. ಇಂದು ಹಾಜರಾದರೂ, ಆಗದಿದ್ದರೂ ತಿಮರೋಡಿ ಬಂಧನ ಆಗುವ ಸಾಧ್ಯತೆ ಇದೆ.

    ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣ ಷಡ್ಯಂತ್ರ ಅನ್ನೋದು ಇದೀಗ ಸಾಬೀತಾಗುವ ಹಂತಕ್ಕೆ ಬಂದಿದೆ. ಈ ಷಡ್ಯಂತ್ರ ನಡೆಸಿರೋ ಬುರುಡೆ ಗ್ಯಾಂಗ್‌ನ ಮಹೇಶ್ ಶೆಟ್ಟಿ ತಿಮರೋಡಿಗೆ ಒಂದರ ಮೇಲೊಂದು ಸಂಕಷ್ಟ ಎದುರಾಗಿದೆ. ಒಂದೆಡೆ ಷಡ್ಯಂತ್ರ ನಡೆಸಿರುವ ಪ್ರಕರಣದ ಸೂತ್ರಧಾರಿ ಇದೇ ಮಹೇಶ್ ಶೆಟ್ಟಿ ತಿಮರೋಡಿ ಅನ್ನೋದು ಭಾಗಶಃ ಕನ್ಫರ್ಮ್ ಆಗಿದ್ದು, ಎಸ್‌ಐಟಿ ತನಿಖೆಯಲ್ಲೂ ಇದಕ್ಕೆ ಬೇಕಾದ ಸಾಕ್ಷಿ, ದಾಖಲೆಗಳು ಸಿಕ್ಕಿದೆ. ಇನ್ನೊಂದೆಡೆ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟಿದ್ದ ಪ್ರಕರಣದಲ್ಲೂ ತಿಮರೋಡಿಗೆ ಬಂಧನ ಆಗುವ ಭೀತಿ ಎದುರಾಗಿದೆ. ಇದನ್ನೂ ಓದಿ: ತುಮಕೂರಲ್ಲಿ ಇಬ್ಬರು ಮಕ್ಕಳ ಜೊತೆ ತಾಯಿ ನೇಣುಬಿಗಿದುಕೊಂಡು ಆತ್ಮಹತ್ಯೆ ಕೇಸ್;‌ ಮಹಿಳೆಯ ಪತಿ, ಅತ್ತೆ ಬಂಧನ

    ಆರೋಪಿ ಚಿನ್ನಯ್ಯ ಬಂಧನವಾದ ಬಳಿಕ ತನಗೆ ಆಶ್ರಯ ಕೊಟ್ಟಿದ್ದು ಷಡ್ಯಂತ್ರದ ಸೂತ್ರಧಾರಿ ಮಹೇಶ್ ಶೆಟ್ಟಿ ತಿಮರೋಡಿ ಎಂದು ಆತ ಬಾಯ್ಬಿಟ್ಟಿದ್ದ. ಹೀಗಾಗಿ ತಿಮರೋಡಿಯ ಉಜಿರೆಯಲ್ಲಿರೋ ಮನೆಗೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದರು. ಈ ವೇಳೆ ಮನೆಯಲ್ಲಿ ಮಾರಕಾಸ್ತ್ರಗಳು ಸೇರಿ 5.5 ಎಂಎಂನ ಏರ್ ಗನ್ ಪತ್ತೆಯಾಗಿದ್ದು, ಅದನ್ನ ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ನಾಳೆಯಿಂದಲೇ ಹಿಂದುಳಿದ ಆಯೋಗದಿಂದ ಸಮೀಕ್ಷೆ – 60 ಪ್ರಶ್ನೆಗಳಿಗೆ ಉತ್ತರ ಪಡೆಯಲಿರೋ ಸರ್ವೇಯರ್ಸ್

    ಇನ್ನು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡ ಬಳಿಕ ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತನಿಖೆಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ವಶಕ್ಕೆ ಪಡೆದ ಗನ್‌ಗೆ ಲೈಸೆನ್ಸ್ ಇಲ್ಲದಿದ್ದರೆ ತಿಮರೋಡಿಯನ್ನು ಇಂದು ಬಂಧಿಸುವ ಸಾಧ್ಯತೆ ಇದೆ. ಇದರಿಂದ ಮಹೇಶ್ ಶೆಟ್ಟಿ ತಿಮರೋಡಿ ಎದೆಬಡಿತ ಜೋರಾಗಿದೆ. ಇದನ್ನೂ ಓದಿ: Hassan | ಕಲ್ಲಿನ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು

    ಆರ್ಮ್ ರೂಲ್ಸ್ 2016ರ ಪ್ರಕಾರ ಏರ್ ಗನ್ ವಿಥ್ ಮಝಲ್ ಎನರ್ಜಿ 0.177 ಇಂಚಿಗೆ (4.5ಎಂಎಂ) ಲೈಸೆನ್ಸ್ ಬೇಡ. ಆದರೆ ತಿಮರೋಡಿ ಬಳಿ 22 ಕ್ಯಾಲಿಬ್ರೆ (5.5 ಎಂಎಂ) ಬಂದೂಕು ಪತ್ತೆಯಾಗಿತ್ತು. 22 ಕ್ಯಾಲಿಬ್ರೆ (5.5 ಎಂಎಂ) ಏರ್ ಗನ್‌ಗಳಿಗೆ ಆರ್ಮ್ ಆಕ್ಟ್ ಅಡಿಯಲ್ಲಿ ಲೈಸೆನ್ಸ್ ಕಡ್ಡಾಯವಾಗಿದ್ದು, ತಿಮರೋಡಿ ಬಳಿ ಇರುವ ಜೆಎಎಂಆರ್-65, ಡಿಎಡಬ್ಲ್ಯೂ ಎ060 ಸಿಎಎಲ್.22/5.5 ಎಂಎಂ ಬಂದೂಕಿಗೆ ಲೈಸೆನ್ಸ್ ಕಡ್ಡಾಯ. ಹೀಗಾಗಿ ಲೈಸೆನ್ಸ್ ಇಲ್ಲದೇ ಇದ್ದರೆ ತಿಮರೋಡಿ ವಿರುದ್ಧ ಕಾನೂನು ಕ್ರಮ ಫಿಕ್ಸ್ ಆಗಲಿದ್ದು, ಬಂಧನ ಆಗೋ ಸಾಧ್ಯತೆ ಇದೆ. ಇದನ್ನೂ ಓದಿ: ಮಹಾಲಯ ಅಮಾವಾಸ್ಯೆ; ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡು

  • ವಾಹನ ತಪಾಸಣೆ ವೇಳೆ 500 ಸ್ನೈಪರ್ ರೈಫಲ್ ಬುಲೆಟ್‍ಗಳು ಪತ್ತೆ – ಆರೋಪಿ ಪರಾರಿ

    ವಾಹನ ತಪಾಸಣೆ ವೇಳೆ 500 ಸ್ನೈಪರ್ ರೈಫಲ್ ಬುಲೆಟ್‍ಗಳು ಪತ್ತೆ – ಆರೋಪಿ ಪರಾರಿ

    ನವದೆಹಲಿ: ಪಶ್ಚಿಮ ದೆಹಲಿಯ (Delhi) ಮೋತಿ ನಗರ ಪ್ರದೇಶದಲ್ಲಿ ವಾಹನ ತಪಾಸಣೆ ವೇಳೆ ಬೈಕ್‍ನಲ್ಲಿ ಸಾಗಿಸುತ್ತಿದ್ದ 500 ಸ್ನೈಪರ್ ರೈಫಲ್ ಬುಲೆಟ್‍ಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು (Delhi Police) ತಿಳಿಸಿದ್ದಾರೆ.

    ಟ್ರಾಫಿಕ್ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಬೈಕ್ ಸವಾರನಿಗೆ ನಿಲ್ಲಿಸುವಂತೆ ಸೂಚಿಸಿದರು. ಆದರೆ ಆತ ವೇಗವಾಗಿ ಬೈಕನ್ನು ಚಲಾಯಸಿಕೊಂಡು ಹೋಗಿದ್ದಾನೆ. ಈ ವೇಳೆ ಪೊಲೀಸರು ಬೈಕ್‍ನ್ನು ಬೆನ್ನಟ್ಟಿದ್ದಾರೆ. ಆಗ ಆತ ಸಿಗ್ನಲ್ ಬಳಿ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಳಿಕ ಬೈಕ್ ಪರಿಶೀಲಿಸಿದಾಗ ಬ್ಯಾಗ್‍ನಲ್ಲಿ 7.62 ಕ್ಯಾಲಿಬರ್‍ನ 500 ಸಜೀವ ಗುಂಡುಗಳ ಕಾಟ್ರಿಡ್ಜ್‌ಗಳನ್ನು ಹೊಂದಿರುವ 10 ಬಾಕ್ಸ್‌ಗಳು ಪತ್ತೆಯಾಗಿವೆ. ಈ ಬಗ್ಗೆ ಮೋತಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಕಾಟ್ರಿಡ್ಜ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶಸ್ತ್ರಾಸ್ತ್ರ ಕಾಯ್ದೆಯಡಿ (Arms Act) ಎಫ್‍ಐಆರ್ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಮತ್ತು ಆರೋಪಿಗಳು ಸಾಗಿದ ಮಾರ್ಗವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

    7.62 ಕಾಟ್ರಿಡ್ಜ್‌ಗಳನ್ನು ಎಕೆ -47 ರೈಫಲ್‍ಗಳು, ಸ್ವಯಂ-ಲೋಡಿಂಗ್ ರೈಫಲ್‍ಗಳು (ಎಸ್‍ಎಲ್‍ಆರ್), ಲೈಟ್ ಮೆಷಿನ್ ಗನ್‍ಗಳು ಮತ್ತು ಸ್ನೈಪರ್ ರೈಫಲ್‍ಗಳಿಗೆ ಬಳಸಲಾಗುತ್ತದೆ. ಇಂತಹ ಗುಂಡುಗಳು ಪತ್ತೆಯಾಗಿದ್ದು ತೀವ್ರ ಕಳವಳಕಾರಿಯಾಗಿದೆ. ಪ್ರತಿ ಬುಲೆಟ್‍ಗೆ ಅದರ ಬ್ಯಾಚ್ ಸಂಖ್ಯೆಗಳನ್ನು ಗುರುತಿಸಿರುವುದರಿಂದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  • ಜಮ್ಮು ಕಾಶ್ಮೀರದಲ್ಲಿ ನಾಲ್ವರು ಭಯೋತ್ಪಾದಕರ ಬಂಧನ – ಅಪಾರ ಶಸ್ತ್ರಾಸ್ತ್ರ ವಶ

    ಜಮ್ಮು ಕಾಶ್ಮೀರದಲ್ಲಿ ನಾಲ್ವರು ಭಯೋತ್ಪಾದಕರ ಬಂಧನ – ಅಪಾರ ಶಸ್ತ್ರಾಸ್ತ್ರ ವಶ

    ಶ್ರೀನಗರ: ಶ್ರೀನಗರದಲ್ಲಿ (Srinagar) ನಾಲ್ವರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರನ್ನು ಭದ್ರತಾ ಪಡೆ (Security forces) ಬಂಧಿಸಿದೆ.

    ನಿರ್ದಿಷ್ಟ ಮಾಹಿತಿಯ ಮೇರೆಗೆ ನಿಷೇಧಿತ ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿರುವ ನಾಲ್ವರು ಬರುತ್ತಿದ್ದಾರೆ ಎಂಬ ಮಾಹಿತಿ ಇತ್ತು. ಇದರಿಂದ ಶನಿವಾರ ಸಂಜೆ ನಗರದ ಹೊರವಲಯದಲ್ಲಿರುವ ನೌಗಾಮ್‍ನ ಕೆನಿಹಮಾ ಪ್ರದೇಶದಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗಿತ್ತು. ತಪಾಸಣೆಯ ಸಮಯದಲ್ಲಿ, ಭದ್ರತಾ ಪಡೆಗಳು ವಾಹನವನ್ನು ತಡೆದು ನಾಲ್ವರನ್ನು ಬಂಧಿಸಲಾಯಿತು ಎಂದು ಸೇನೆಯ (Indian Army) ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ಉಗ್ರರ ಅಟ್ಟಹಾಸ- 70ಕ್ಕೂ ಹೆಚ್ಚು ಮಂದಿ ದುರ್ಮರಣ

    ಬಂಧಿತರನ್ನು ಮೊಹಮ್ಮದ್ ಯಾಸೀನ್ ಭಟ್, ಶೆರಾಜ್ ಅಹ್ಮದ್ ರಾಥರ್, ಗುಲಾಮ್ ಹಸನ್ ಖಾಂಡೆ ಹಾಗೂ ಇಮ್ತಿಯಾಜ್ ಅಹ್ಮದ್ ಭಟ್ ಎಂದು ಗುರುತಿಸಿದ್ದಾರೆ. ಬಂಧಿತರು ಲಕ್‍ನಂಬಲ್ ಜಫ್ರಾನ್ ಕಾಲೋನಿ ಪಂಥಾ ಚೌಕ್ ಮತ್ತು ಫ್ರೆಸ್ಟಾಬಲ್ ಪಾಂಪೋರ್‌ನ ನಿವಾಸಿಗಳು ಎಂಬುದು ತಿಳಿದು ಬಂದಿದೆ.

    ಉಗ್ರರಿಂದ ಮೂರು ಮ್ಯಾಗಜೀನ್‍ಗಳು, ಎಕೆ 56 ರೈಫಲ್, 7.62, 39 ಎಂಎಂನ 75 ಸುತ್ತುಗಳು, ಎರಡು ಮ್ಯಾಗಜೀನ್‍ಗಳಿರುವ ಗ್ಲೋಕ್ ಪಿಸ್ತೂಲ್, 9 ಎಂಎಂನ 26 ಸುತ್ತುಗಳು ಮತ್ತು ಆರು ಚೈನೀಸ್ ಗ್ರೆನೇಡ್‍ಗಳು ಸೇರಿದಂತೆ ಅಪಾರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಾಥಮಿಕ ತನಿಖೆಯ ವೇಳೆ, ಬಂಧಿತ ವ್ಯಕ್ತಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆ ಜೆಎಂ ಜೊತೆ ನಂಟು ಹೊಂದಿರುವುದು ತಿಳಿದು ಬಂದಿದೆ.

    ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚೆನ್ನೈ ಆಸ್ಪತ್ರೆಯಿಂದ ಹೆಚ್‌ಡಿಕೆ ಡಿಸ್ಚಾರ್ಜ್‌ – ಇಂದು ಬೆಂಗಳೂರಿಗೆ

  • ತಂದೆಗೆ ಬಿಜೆಪಿ ಟಿಕೆಟ್ ಸಿಕ್ಕ ಖುಷಿಗೆ ಗಾಳಿಯಲ್ಲಿ ಗುಂಡು ಪ್ರಕರಣ – ಅಭ್ಯರ್ಥಿ ಪುತ್ರನ ವಿರುದ್ಧ ಎಫ್‍ಐಆರ್

    ತಂದೆಗೆ ಬಿಜೆಪಿ ಟಿಕೆಟ್ ಸಿಕ್ಕ ಖುಷಿಗೆ ಗಾಳಿಯಲ್ಲಿ ಗುಂಡು ಪ್ರಕರಣ – ಅಭ್ಯರ್ಥಿ ಪುತ್ರನ ವಿರುದ್ಧ ಎಫ್‍ಐಆರ್

    ವಿಜಯಪುರ: ಬಿಜೆಪಿ (BJP) ಟಿಕೆಟ್ ಘೋಷಣೆ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಸಮರ್ಥ ಪಾಟೀಲ್ ವಿರುದ್ಧ ಗಾಂಧಿ ಚೌಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಜಿಲ್ಲೆಯ ಬಬಲೇಶ್ವರ (Babaleshwar) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜಯಕುಮಾರ್ ಪಾಟೀಲ್ ಅವರಿಗೆ ಟಿಕೆಟ್ ಘೋಷಣೆ ಮಾಡಿದ ದಿನ ಅವರ ಪುತ್ರ ಸಮರ್ಥ ಪಾಟೀಲ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಈ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಆರೋಪಿಸಿದ್ದರು. ಇದರ ವಿಸ್ತೃತ ವರದಿಯನ್ನು ‘ಪಬ್ಲಿಕ್ ಟಿವಿ’ ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಸಮರ್ಥ ವಿರುದ್ಧ ಪ್ರಕರಣ ದಾಖಲಿಸಿದೆ. ಇದನ್ನೂ ಓದಿ: ಇವಿಎಂ ಖರೀದಿಯಲ್ಲಿ ಅಕ್ರಮ ಆರೋಪ – ಚುನಾವಣಾ ಆಯೋಗದ ವಿರುದ್ಧದ ಪಿಐಎಲ್ ವಜಾಗೊಳಿಸಿದ ಸುಪ್ರೀಂ

    ಟನೆಯ ವಿರುದ್ಧ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಕಿಡಿಕಾರಿದ್ದರು. ಗುಂಡು ಹಾರಿಸುವುದು ಸರಿಯಾದ ವರ್ತನೆಯಲ್ಲ ಎಂಬ ಆರೋಪವನ್ನು ಕಾಂಗ್ರೆಸ್ (Congress) ಮುಖಂಡರು ಮಾಡಿದ್ದರು. ಅಲ್ಲದೇ ಬಿಜೆಪಿ ಅಭ್ಯರ್ಥಿಯ ಪುತ್ರನ ಮೇಲೆ ಕೇಸ್ ದಾಖಲಿಸುವಂತೆ ಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದರು.

    ಸಮರ್ಥ ಪಾಟೀಲ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ (Arms Act) ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 12 ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡಿದ ಪಾಕ್ ವಿದೇಶಾಂಗ ಸಚಿವ