Tag: arm

  • ಮೂರು ಯುಗದ ಕಥೆ ಹೇಳಲಿದ್ದಾರೆ ಸ್ಟಾರ್ ನಟ ಟೋವಿನೊ

    ಮೂರು ಯುಗದ ಕಥೆ ಹೇಳಲಿದ್ದಾರೆ ಸ್ಟಾರ್ ನಟ ಟೋವಿನೊ

    ಲಯಾಳಂ (Malayalam)ಚಿತ್ರರಂಗದಲ್ಲಿ ಹೀರೋಗಿರಿಯ ಸಿನಿಮಾಗಳಿಗೆ ಕಟ್ಟು ಬೀಳದೆ ತಮ್ಮದೇ ಆದ ಮಾದರಿಯಲ್ಲಿ ಸಿನಿಮಾಗಳನ್ನು ಮಾಡುತ್ತಿರುವ ಸ್ಟಾರ್ ನಟ ಟೋವಿನೊ ಥಾಮಸ್ (Tovino Thomas). ಒಂದರ ಮೇಲೊಂದು ಹಿಟ್ ಸಿನಿಮಾ ನೀಡುವ ಜೊತೆಗೆ ಅಭಿಮಾನಿಗಳನ್ನೂ ಸಹ ಸಂಪಾದಿಸುತ್ತಾ ಸಾಗುತ್ತಿರುವ  ಈ ತಾರೆಗಿಂದು ಜನ್ಮದಿನದ ಸಂಭ್ರಮ. ಟೋವಿನೋ ಥಾಮಸ್ ಹುಟ್ಟಹಬ್ಬಕ್ಕೆ ARM ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಲಾಗಿದೆ.

    AMR ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಜಿತಿಲ್ ಲಾಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮ್ಯಾಜಿಕ್ ಫ್ರೇಮ್ಸ್ ಮತ್ತು ಯುಜಿಎಂ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಸಂಪೂರ್ಣ 3ಡಿಯಲ್ಲಿ AMR ಚಿತ್ರ ತಯಾರಾಗಲಿದ್ದು, ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿ ಅತಿ ದೊಡ್ಡ ಬಜೆಟ್ ಸಿನಿಮಾ ಇದಾಗಿದೆ.

    AMR ಸಿನಿಮಾ 3 ಯುಗಗಳ ಕಥೆ ಹೇಳುತ್ತದೆ. ಟೋವಿನೋ ಥಾಮಸ್, ಮಣಿಯನ್, ಅಜಯನ್ ಮತ್ತು ಕುಂಜಿಕೇಲು ಎಂಬ 3 ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ದೃಶ್ಯ ವೈಭೋಗದಲ್ಲಿ ಮೂಡಿ ಬರಲಿರುವ ಈ ಚಿತ್ರ ಮಲಯಾಳಂ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ಮತ್ತು ಕನ್ನಡ – 6 ಭಾಷೆಗಳಲ್ಲಿ ತಯಾರಾಗಲಿದೆ.

    ಕೃತಿ ಶೆಟ್ಟಿ, ಐಶ್ವರ್ಯ ರಾಜೇಶ್ ಮತ್ತು ಸುರಭಿ ಲಕ್ಷ್ಮಿ ನಾಯಕಿಯರಾಗಿ ನಟಿಸುತ್ತಿದ್ದು, ಪ್ರಮುಖ ನಟರಾದ ಬಾಸಿಲ್ ಜೋಸೆಫ್, ಜಗದೀಶ್, ಹರೀಶ್ ಉತ್ತಮನ್, ಹರೀಶ್ ಪೆರಾಡಿ, ಪ್ರಮೋದ್ ಶೆಟ್ಟಿ ಮತ್ತು ರೋಹಿಣಿ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಸುಜಿತ್ ನಂಬಿಯಾರ್ ಚಿತ್ರಕಥೆಯನ್ನು ಬರೆದಿದ್ದಾರೆ ಮತ್ತು ದಿಬು ನೈನನ್ ಥಾಮಸ್ ಈ ಅದ್ಭುತ  ಸಂಗೀತ ನೀಡಲಿದ್ದಾರೆ.

  • ಮಾಲಿವುಡ್ ಸ್ಟಾರ್ ಗೆ ಸಿಂಪಲ್ ಸ್ಟಾರ್ ಸಾಥ್

    ಮಾಲಿವುಡ್ ಸ್ಟಾರ್ ಗೆ ಸಿಂಪಲ್ ಸ್ಟಾರ್ ಸಾಥ್

    ಮಿನ್ನಲ್ ಮುರಳಿ ಎಂಬ ಸೂಪರ್ ಹೀರೋ ಸಿನಿಮಾ ಮೂಲಕ ಖ್ಯಾತಿ ಪಡೆದಿರುವ ಟೊವಿನೋ ಥಾಮಸ್ (Tovino Thomas) ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ಅಜಯಂತೆ ರಂದಂ ಮೋಷನಂ (ARM) ಟೀಸರ್ ರಿಲೀಸ್ ಆಗಿದೆ. ಹಿಂದಿಯಲ್ಲಿ ಹೃತಿಕ್ ರೋಷನ್, ತೆಲುಗಿನಲ್ಲಿ ನಾನಿ, ತಮಿಳಿನಲ್ಲಿ ಲೋಕೇಶ್ ಕನಕರಾಜ್ ಮತ್ತು ಆರ್ಯ, ಕನ್ನಡದಲ್ಲಿ ರಕ್ಷಿತ್ ಶೆಟ್ಟಿ (Rakshit Shetty), ಮಲಯಾಳಂ ಪೃಥ್ವಿರಾಜ್ ಸುಕುಮಾರನ್ ಸೋಷಿಯಲ್ ಮೀಡಿಯಾ ಮೂಲಕ ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

    ಟೊವಿನೋ ಥಾಮಸ್ ಮಾಸ್ ಅವತಾರ ತಾಳಿದ್ದಾರೆ. ಹಳ್ಳಿಗಾಡಿನಲ್ಲಿ ನಡೆಯುವ ಘಟನೆ ಸುತ್ತ ಇಡೀ ಟೀಸರ್ ಸಾಗುತ್ತದೆ. ಟೊವಿನೋ ಥಾಮಸ್ ವೃತ್ತಿ ಜೀವನದ ಬಹುವಿಶೇಷ ಸಿನಿಮಾ ಇದಾಗಿದೆ. ಈ  ಚಿತ್ರದಲ್ಲಿ ಟೊವಿನೋ ಥಾಮಸ್ ತ್ರಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಕಲಾವಿದನಾಗಿ ಮೊದಲ ಬಾರಿ ಬಹು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದು ಪ್ಯಾನ್ ಇಂಡಿಯಾ  ಸ್ಟಾರ್ ಆಗಿ ಹೊರ ಹೊಮ್ಮುತ್ತಿದ್ದಾರೆ.  ಮಲಯಾಳಂ ಖ್ಯಾತ ನಟ ಟೊವಿನೋ ಥಾಮಸ್ ವೃತ್ತಿ ಜೀವನದ ಬಹು ವಿಶೇಷ ಸಿನಿಮಾ ಇದಾಗಿದೆ.  ಇದನ್ನೂ ಓದಿ:ಕಾಲೆಳೆದ ನಟಿಗೆ ಸ್ನೇಹದ ಹಸ್ತಚಾಚಿದ ರಶ್ಮಿಕಾ ಮಂದಣ್ಣ

    ಚಿತ್ರದಲ್ಲಿ ಟೊವಿನೋ ಥಾಮಸ್ ತ್ರಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಕಲಾವಿದನಾಗಿ ಮೊದಲ ಬಾರಿ ಬಹು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮುತ್ತಿದ್ದಾರೆ. ಸೌತ್ ಸಿನಿರಂಗದ ಸೆನ್ಸೇಷನಲ್ ನಟಿ ಕೃತಿ ಶೆಟ್ಟಿಗೂ (Kriti Shetty) ಸ್ಪೆಷಲ್ ಆಗಿದ್ದು ತೆಲುಗು, ತಮಿಳಿನಲ್ಲಿ ಮಿಂಚಿದ್ದ ಕೃತಿ ಶೆಟ್ಟಿ ಈಗ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ನೀಡುತ್ತಿದ್ದಾರೆ. ಟೊವಿನೋ ಥಾಮಸ್ ಜೋಡಿಯಾಗಿ ಕೃತಿ ನಟಿಸುತ್ತಿದ್ದು, ಉಳಿದಂತೆ ನಟಿಯರಾದ ಐಶ್ವರ್ಯ ರಾಜೇಶ್, ಸುರಭಿ ಲಕ್ಷಿ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

    ‘ಅಜಯಂತೆ ರಂದಂ ಮೋಷನಂ’ ನಿರ್ದೇಶಕ ಜಿತಿನ್ ಲಾಲ್ ನಿರ್ದೇಶಿಸುತ್ತಿದ್ದು ಇದು ಇವರ ಮೊದಲ ಸಿನಿಮಾ. ಸುಜಿತ್ ನಂಬಿಯಾರ್ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದು, ಬಾಸಿಲ್ ಜೋಸೆಫ್, ಕಿಶೋರ್, ಹರೀಶ್ ಉತ್ತಮನ್, ಹರೀಶ್ ಪೆರಾಡಿ, ಜಗದೀಶ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ನಿರ್ಮಾಣವಾಗುತ್ತಿರುವ 3ಡಿಯಲ್ಲಿ ತೆರೆ ಕಾಣುವ ‘ಅಜಯಂತೆ ರಂದಂ ಮೋಷನಂ’ ಚಿತ್ರವನ್ನು ಯುಜಿಎಂ ಪ್ರೊಡಕ್ಷನ್ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ಮ್ಯಾಜಿಕ್ ಫ್ರೇಮ್ಸ್ ಸಹ ನಿರ್ಮಾಣ ಮಾಡುತ್ತಿದೆ.

  • ಲಿಫ್ಟ್ ಗೆ ಸಿಲುಕಿ ಎಡಗೈ ಕಟ್ ಆದ್ರೂ 1 ಕಿ.ಮೀ ಓಡಿಕೊಂಡು ಮನೆಗೆ ಬಂದ ಬಾಲಕಿ

    ಲಿಫ್ಟ್ ಗೆ ಸಿಲುಕಿ ಎಡಗೈ ಕಟ್ ಆದ್ರೂ 1 ಕಿ.ಮೀ ಓಡಿಕೊಂಡು ಮನೆಗೆ ಬಂದ ಬಾಲಕಿ

    ಥಾಣೆ: ಬಾಲಕಿಯೊಬ್ಬಳ ಎಡಗೈ ಲಿಫ್ಟ್ ಗೆ ಸಿಲುಕಿ ತುಂಡಾಗಿದ್ದರೂ ಆಕೆ 1 ಕಿ.ಮೀ ದೂರ ಓಡಿಕೊಂಡು ಮನೆಗೆ ವಾಪಸ್ ಬಂದ ಘಟನೆ ಥಾಣೆಯಲ್ಲಿ ನಡೆದಿದೆ.

    ಮಂಗಳವಾರ ಸಂಜೆ 8 ವರ್ಷದ ಬಾಲಕಿ ಅರ್ಚನಾಳ ತಾಯಿ ಮನೆ ಬಾಗಿಲು ತೆಗೆದು ನೋಡಿದಾಗ ಮಗಳ ಮೈಮೇಲೆಲ್ಲಾ ರಕ್ತ ಇದ್ದಿದ್ದು ಕಂಡು ಶಾಕ್ ಆಗಿದ್ರು. ಅಲ್ಲದೆ ಆಕೆಯ ಎಡಗೈ ಕೂಡ ಕಾಣಿಸುತ್ತಿರಲಿಲ್ಲ. ಅರ್ಚನಾ ಅಳುತ್ತಿರಲಿಲ್ಲ. ಬದಲಿಗೆ ಶಾಂತವಾಗಿಯೇ ನಡೆದಿದ್ದನ್ನು ಅಮ್ಮನಿಗೆ ವಿವರಿಸಿದ್ದಳು. ಅರ್ಚನಾ ಟ್ಯೂಷನ್ ಕ್ಲಾಸ್‍ಗೆ ಹೋಗುವ ಥಾಣೆಯ ಕಾಸರವಡಾವ್ಲಿಯ ಕಟ್ಟಡದಲ್ಲಿ ಲಿಫ್ಟ್ ನ ಬಾಗಿಲಿಗೆ ಸಿಲುಕಿ ಕೈ ಕಟ್ ಆಗಿತ್ತು.

    ಈ ವಿಷಯವನ್ನ ತಾಯಿಗೆ ತಿಳಿಸಲು ಆಕೆ 1 ಕಿ.ಮೀ ದೂರ ಓಡಿಕೊಂಡು ಮನೆಗೆ ವಾಪಸ್ ಬಂದಿದ್ದಾಳೆ. ಆಸ್ಪತ್ರೆಯಲ್ಲಿ ವೈದ್ಯರು ಕಟ್ ಆದ ಕೈ ಎಲ್ಲಿ ಎಂದು ಕೇಳಿದ ನಂತರವಷ್ಟೇ ಪೋಷಕರು ಕಟ್ಟಡದ ಲಿಫ್ಟ್ ಬಳಿ ಹುಡುಕಲು ಹೋಗಿದ್ದಾರೆ. ದುರಾದೃಷ್ಟವೆಂಬಂತೆ ಅರ್ಚನಾಳ ನರಗಳು ಹಾಗೂ ರಕ್ತನಾಳಗಳಿಗೆ ಗಂಭೀರ ಹಾನಿಯಾಗಿದ್ದು, ಶಸ್ತ್ರಚಿಕಿತ್ಸೆಯಿಂದ ಕೈ ಮರುಜೋಡಣೆ ಮಾಡಲು ಅಸಾಧ್ಯವಾಗಿದೆ. ಅರ್ಚನಾ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿದ್ದು, ಥಾಣೆಯ ಆದರ್ಶ ವಿದ್ಯಾ ಮಂದಿರದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

    ಲಿಫ್ಟ್ ನಲ್ಲಿ ಶೂ ಸಿಕ್ಕಿಹಾಕೊಂಡಿತ್ತು: ಅರ್ಚನಾ ಇತ್ತೀಚೆಗಷ್ಟೇ ಟ್ಯೂಷನ್‍ಗೆ ಸೇರಿಕೊಂಡಿದ್ದಳು. ಲಿಫ್ಟ್ ನ ಸಂದಿಯಲ್ಲಿ ಆಕೆಯ ಪಾದರಕ್ಷೆ ಸಿಲುಕಿಕೊಂಡಿದ್ದು, ಅದನ್ನ ಬಿಡಿಸಿಕೊಳ್ಳಲು ಯತ್ನಿಸಿದಾಗ ಲಿಫ್ಟ್ ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗಿ ಎಡಗೈ ಸಿಲುಕಿಕೊಳ್ತು ಎಂದು ನಮಗೆ ಹೇಳಿದಳು ಅಂತ ಅರ್ಚನಾಳ ಸಂಬಂಧಿ ನವಿತ್ ಹೇಳಿದ್ದಾರೆ.

    ಇಷ್ಟಾದರೂ ಅರ್ಚನಾ ಗಾಬರಿಯಾಗದೇ, ಶಾಂತ ರೀತಿಯಲ್ಲೇ ಘಟನೆಯನ್ನ ವಿವರಿಸಿದ್ದು ನೋಡಿ ಕುಟುಂಬಕ್ಕೆ ಶಾಕ್ ಆಗಿದೆ. ಗೋಧ್‍ಬುಂದರ್ ರಸ್ತೆಯಿಂದ ಕೆಇಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಆಕೆ ಎಚ್ಚರವಾಗೇ ಇದ್ದಳು. ನಮ್ಮೊಂದಿಗೆ ಮಾತಾಡುತ್ತಿದ್ದಳು. ವೈದ್ಯರು ಕೇಳಿದ ನಂತರವಷ್ಟೇ ನಮಗೆ ಆಕೆಯ ಕಟ್ ಆಗಿದ್ದ ಎಡಗೈ ನಮ್ಮ ಬಳಿ ಇಲ್ಲದಿರುವುದು ಗೊತ್ತಾಯಿತು. ಥಾಣೆಯ ನರ್ಸಿಂಗ್ ಹೋಮ್‍ವೊಂದರಲ್ಲಿ ಡ್ರೆಸ್ಸಿಂಗ್ ಮಾಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಹೇಳಿದ್ರು ಎಂದು ನವಿತ್ ಹೇಳಿದ್ದಾರೆ.

    ಅರ್ಚನಾಳ ಎಡಗೈಯಲ್ಲಿ ಮೊಣಕೈಯಿಂದ ಮೇಲ್ಭಾಗಕ್ಕೆ ಆಂಪ್ಯುಟೇಷನ್ ಚಿಕಿತ್ಸೆ ನೀಡಲಾಗಿದೆ. ಈಗ ಆಕೆಯ ಸ್ಥಿತಿ ಸಹಜವಾಗಿದೆ. ಆರ್ಥೋಪೆಡಿಕ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವೈದ್ಯರಾದ ಡಾ. ಅವಿನಾಶ್ ಸುಪೆ ಹೇಳಿದ್ದಾರೆ.

    ಕಾಸರವಡಾವ್ಲಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಡಿಎಸ್ ಧೋಲೆ ಈ ಬಗ್ಗೆ ಮಾತನಾಡಿ, ದೂರು ದಾಖಲಿಸಲು ಬಯಸುತ್ತೀರಾ ಎಂದು ನಾವು ಅವರ ಕುಟುಂಬಕ್ಕೆ ಕೇಳಿದೆವು. ಆದ್ರೆ ಅವರು ನಿರಾಕರಿಸಿದ್ರು. ಇದು ಬಾಲಕಿಯ ತಪ್ಪೇ ಇರಬಹುದು ಎಂದು ಹೇಳಿದ್ರು. ಆದ್ರೆ ನಾವು ಬಾಲಕಿಯ ಹೇಳಿಕೆ ಪಡೆಯಲು ನಮ್ಮ ಅಧಿಕಾರಿಗಳನ್ನ ಆಸ್ಪತ್ರೆಗೆ ಕಳಿಸಿದ್ದೇವೆ ಅಂದ್ರು.

    ಕೈ ದಾನ: ಈ ಕಥೆ ಇಷ್ಟಕ್ಕೇ ಮುಗಿಯಲಿಲ್ಲ. ಬಾಲಕಿಯ ಮುರಿದ ಕೈಯನ್ನ ದಾನ ಮಾಡಲು ಕುಟುಂಬಸ್ಥರು ಮುಂದಾಗಿದ್ದಾರೆ. ಬಾಲಕಿಯ ಕೈನ ರಕ್ತನಾಳಗಳಿಗೆ ತೀವ್ರವಾದ ಗಾಯವಾಗಿದ್ರಿಂದ ಅದನ್ನು ಮರುಜೋಡಣೆ ಮಾಡಲು ಸಾಧ್ಯವಿಲ್ಲ. ಆದ್ರೆ ಕಟ್ ಆಗಿರೋ ಕೈಯನ್ನ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸಬಹುದು. ಮೂಳೆ ಮತ್ತು ಸ್ನಾಯುಗಳು ಉಪಯೋಗಕ್ಕೆ ಬರುತ್ತದೆ ಎಂದು ವೈದ್ಯರು ತಿಳಿಸಿದ್ದಾಗಿ ಅರ್ಚನಾ ಸಂಬಂಧಿ ಹೇಳಿದ್ದಾರೆ. ಶೀಘ್ರದಲ್ಲೇ ನಾವು ಕೈ ದಾನದ ಎಲ್ಲಾ ಪ್ರಕ್ರಿಯೆ ಮುಗಿಸಲಿದ್ದೇವೆ ಎಂದಿದ್ದಾರೆ.