Tag: arkavathy layout

  • ಕಾರ ಹುಣ್ಣಿಮೆಯಂದು ಎತ್ತು ಗುದ್ದಿ, ಸೈನಿಕನಾಗುವ ಕನಸು ಹೊತ್ತ ಯುವಕ ಸಾವು

    ಕಾರ ಹುಣ್ಣಿಮೆಯಂದು ಎತ್ತು ಗುದ್ದಿ, ಸೈನಿಕನಾಗುವ ಕನಸು ಹೊತ್ತ ಯುವಕ ಸಾವು

    ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಕಾರಹುಣ್ಣಿಮೆ ಪ್ರಯುಕ್ತ ಕರಿಹರಿಯುವ ಹಬ್ಬದ ಸಂದರ್ಭದಲ್ಲಿ ಎತ್ತು ಗುದ್ದಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

    ಕೋವಿಡ್-19 ಹಿನ್ನೆಲೆ ಕಾರಹುಣ್ಣಿಮೆ ದಿನ ಎತ್ತುಗಳನ್ನು ಓಡಿಸುವ ಹಬ್ಬ ಆಚರಣೆ ಮಾಡಬಾರದು ಎಂದು ತಾಲೂಕಾಡಳಿತ, ಪೊಲೀಸ್ ಮತ್ತು ಗ್ರಾ.ಪಂ ನವರು ಸೂಚಿಸಿದ್ದರು. ಸರ್ಕಾರದ ನಿಯಮ ಉಲ್ಲಂಘಿಸಿ ಗ್ರಾಮದಲ್ಲಿ ಗುರುವಾರ ಸಂಜೆ ಕರಿ ಹರಿಯುವ ಹಬ್ಬ ಆಚರಣೆ ಮಾಡಿದ್ದರು. ಈ ವೇಳೆ ರಭಸದಿಂದ ಓಡಿ ಬಂದ ಎತ್ತೊಂದು ಗ್ರಾಮದ ಯುವಕ ಕಿರಣಕುಮಾರ್ ಮಲಕಾಜಪ್ಪ ನೆರ್ತಿ (22) ಎಂಬಾತನಿಗೆ ಬಲವಾಗಿ ಗುದ್ದಿದೆ. ತೀವ್ರ ಗಾಯಗೊಂಡ ಯುವಕನನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

    ಮೃತ ಯುವಕ ಪದವೀಧರನಾಗಿದ್ದು, ತಂದೆ ನಿವೃತ್ತ ಸೈನಿಕ. ಯುವಕನೂ ತಂದೆಯ ಸೈನಿಕ ಕೋಟಾದಡಿ ಸೈನ್ಯ ಸೇವೆ ಸೇರಲು ದೈಹಿಕ ಪರೀಕ್ಷೆಯಲ್ಲಿ ಪಾಸಾಗಿ ಲಿಖಿತ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ. ಆದರೆ ವಿಧಿಯ ಆಟಕ್ಕೆ ಸೈನಿಕನಾಗುವ ಕನಸು ಹೊತ್ತ ಯುವಕ ಮಸನ ಸೇರಿದ್ದು ವಿಪರ್ಯಾಸ. ಯುವಕನ ಸಾವಿನ ಸುದ್ದಿ ತಿಳಿದು ಇಡೀ ಊರಿಗೆ ಊರೆ ಶೋಕಸಾಗರದಲ್ಲಿ ಮುಳುಗಿದಂತಿದೆ.

    ಸೂರಣಗಿ ಗ್ರಾಮದ ದೊಡ್ಡ ಆಂಜನೇಯ ದೇವರ ಗುಡಿಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ನಿನ್ನೆ ಕೋವಿಡ್ ನಿಯಮ ಉಲ್ಲಂಘಿಸಿ ಎತ್ತುಗಳನ್ನು ಓಡಿಸುವ ಹಬ್ಬವನ್ನು ಆಯೋಜಿಸಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಜನರೂ ಸೇರಿದ್ದರು. ಕರಿ ಹರಿಯುವ ಹಬ್ಬದಲ್ಲಿ ರಭಸದಿಂದ ಓಡಿ ಬಂದ ಎತ್ತು ತನ್ನನ್ನು ಹಿಡಿಯಲು ಪ್ರಯತ್ನಿಸಿದ ಯುವಕ ಕಿರಣ್ ಕುಮಾರ್ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಬಲವಾಗಿ ಗುದ್ದಿದ ಪರಿಣಾಮ, ಯುವಕ ಗಂಭೀರವಾಗಿ ಗಾಯಗೊಂಡಿದ್ದ.

    ಯುವಕ ಸಾವನ್ನಪ್ಪಿದ್ದರಿಂದ ನಿಯಮ ಮೀರಿ ಕರಿ ಹರಿಯುವ ಹಬ್ಬದಲ್ಲಿ ಪಾಲ್ಗೊಂಡಿದ್ದ ಆರೋಪದಲ್ಲಿ ಗ್ರಾಮದ 21 ಜನರ ವಿರುದ್ಧ ಕೋವಿಡ್ ನಿಯಮಾನುಸಾರ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಕೇಸ್:  ಸಿಎಂ ಸಿದ್ದರಾಮಯ್ಯಗೆ ಕ್ಲೀನ್‍ಚಿಟ್?

    ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಕೇಸ್: ಸಿಎಂ ಸಿದ್ದರಾಮಯ್ಯಗೆ ಕ್ಲೀನ್‍ಚಿಟ್?

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದ್ದ ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದ ತನಿಖಾ ವರದಿಯನ್ನು ಸರ್ಕಾರಕ್ಕೆ ನ್ಯಾ.ಕೆಂಪಣ್ಣ ಆಯೋಗ ಸಲ್ಲಿಸಿದೆ. ವರದಿಯಲ್ಲಿ ರಿಡೂಗೆ ಹೇಳಿದ್ದೆ ಅಂತ ಹೇಳುತ್ತಿರುವ ಸಿಎಂ ಸಿದ್ದರಾಮಯ್ಯಗೆ ಕ್ಲೀನ್‍ಚಿಟ್ ಸಿಕ್ಕಿದೆ ಎನ್ನಲಾಗಿದೆ.

    ಮೂರು ವರ್ಷಗಳ ಸುದೀರ್ಘ ತನಿಖೆ ನಡೆಸಿದ ನ್ಯಾ.ಕೆಂಪಣ್ಣ ಅವರು 9 ಸಂಪುಟಗಳ 1,861 ಪುಟಗಳ ವರದಿಯನ್ನ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್‍ಚಂದ್ರ ಕುಂಠಿಯಾಗೆ ಇವತ್ತು ಸಲ್ಲಿಸಿದರು. ಬಳಿಕ ಮಾತನಾಡಿದ ನ್ಯಾ. ಕೆಂಪಣ್ಣ, ಸರ್ಕಾರ ಡಿನೋಟಿಫೈ ಮಾಡಿಲ್ಲ. ಲೋಪ ಎಸಗಿಲ್ಲ ಅಂತ ಸಿಎಂಗೆ ಕ್ಲೀನ್‍ಚಿಟ್ ಕೊಟ್ರೂ ಕೆಳಹಂತದ ಅಧಿಕಾರಿಗಳಿಂದ ಲೋಪ ಆಗಿರೋದು ವರದಿಯಲ್ಲಿದೆ ಅಂತ ತಿಳಿದುಬಂದಿದೆ.

    1030 ಪುಟಗಳ ಸಾಕ್ಷಿಗಳ ಹೇಳಿಕೆ, ವಿಚಾರಣೆ ವೇಳೆ ಬಂದ 85 ಅರ್ಜಿಗಳಲ್ಲಿ 43 ಅರ್ಜಿಗಳ ವಿಚಾರಣೆ ನಡೆದಿದೆ. ಬಿಡಿಎ ಪರವಾಗಿ 6 ಸಾಕ್ಷಿಗಳು ಇವೆ. ಅರ್ಜಿದಾರರಿಗೆ ಪರವಾಗಿ ಯಾವುದೇ ಸಾಕ್ಷಿಗಳು ಬಂದಿಲ್ಲ ಎಂದು ಹೇಳಿದರು.

    ಹಾಗಿದ್ರೆ ಮುಂದೇನು..?
    * ಪರಾಮರ್ಶೆಗಾಗಿ ವರದಿ ನಗರಾಭಿವೃದ್ಧಿಗೆ ಇಲಾಖೆಗೆ ಹೋಗುತ್ತೆ
    * ಬಳಿಕ ವರದಿ ರಾಜ್ಯ ಸಚಿವ ಸಂಪುಟದ ಮುಂದೆ ಬರುತ್ತೆ
    * ಸರ್ಕಾರ ವರದಿಯನ್ನ ಸ್ವೀಕರಿಸಬಹುದು, ತಿರಸ್ಕರಿಸಬಹುದು
    * ಸಂಪುಟದ ಉಪ ಸಮಿತಿ ರಚಿಸಿ ವರದಿಯನ್ನ ಒಪ್ಪಿಸಬಹುದು
    * ಅಧಿವೇಶನದಲ್ಲಿ ಸರ್ಕಾರ ವರದಿಯನ್ನು ಮಂಡಿಸಬಹುದು
    * ನ್ಯಾ.ಕೆಂಪಣ್ಣ ಆಯೋಗ ಹೇಳಿದ ತಪ್ಪಿತಸ್ಥರ ವಿರುದ್ಧ ಕ್ರಮ ಆಗಬಹುದು