Tag: Arjun Kapoor

  • ಶ್ರೀದೇವಿಯ ಅಂತ್ಯಕ್ರಿಯೆ ಮಾಡ್ತಾರಾ ಮಲಮಗ ಅರ್ಜುನ್ ಕಪೂರ್!

    ಶ್ರೀದೇವಿಯ ಅಂತ್ಯಕ್ರಿಯೆ ಮಾಡ್ತಾರಾ ಮಲಮಗ ಅರ್ಜುನ್ ಕಪೂರ್!

    ಮುಂಬೈ: ಶ್ರೀದೇವಿ ನನ್ನ ಸ್ವಂತ ತಾಯಿಯಲ್ಲ. ಜಾಹ್ನವಿ ಕಪೂರ್ ನನ್ನ ಸ್ವಂತ ತಂಗಿಯಲ್ಲ ಎಂದು ಈ ಮೊದಲು ನಟ ಅರ್ಜುನ್ ಕಪೂರ್ ಹೇಳಿಕೆ ನೀಡಿದ್ದರು. ಆದರೆ ಶ್ರೀದೇವಿ ಜೊತೆಗೆ ಅರ್ಜುನ್ ಕಪೂರ್ ಉತ್ತಮ ಬಾಂಧವ್ಯ ಹೊಂದಿದ್ದರು ಎಂದೆನಿಸುತ್ತದೆ. ಹೀಗಾಗಿ ಅರ್ಜುನ್ ಕಪೂರ್ ಚಿಕ್ಕಮ್ಮ ಶ್ರೀದೇವಿ ಅವರ ಅಂತ್ಯಸಂಸ್ಕಾರ ಮಾಡ್ತಾರಾ ಎಂಬ ಪ್ರಶ್ನೆ ಎದ್ದಿದೆ.

    ಕಾರ್ಯಕ್ರಮವೊಂದರಲ್ಲಿ ಅರ್ಜುನ್ ಕಪೂರ್ ತಮ್ಮ ಹಾಗೂ ಶ್ರೀದೇವಿ ಮಧ್ಯೆ ಇರುವ ಸಂಬಂಧ ಉತ್ತಮವಾಗಿದೆ ಎಂದು ತಿಳಿಸಿದ್ದರು. ನನ್ನ ತಂದೆ ಬದುಕಿನಲ್ಲಿರುವ ಪ್ರತಿಯೊಂದು ವ್ಯಕ್ತಿಯನ್ನು ನಾನು ಗೌರವಿಸುತ್ತೇನೆ. ಏಕೆಂದರೆ ನನ್ನ ತಂದೆ ನನ್ನಿಂದ ಅದನ್ನು ನಿರೀಕ್ಷಿಸುತ್ತಾರೆ. ಹಾಗಾಗಿ ನಾನು ಶ್ರೀದೇವಿಯನ್ನು ಗೌರವಿಸುತ್ತೇನೆ. ಅವರಿಗೆ ಕೆಟ್ಟದನ್ನು ಬಯಸುವುದಿಲ್ಲ ಎಂದು ಅರ್ಜುನ್ ಕಪೂರ್ ಹೇಳಿದ್ದರು.

    ಶ್ರೀದೇವಿ ಸಾವಿನ ಸಂದರ್ಭದಲ್ಲಿ ಅರ್ಜುನ್ ತಮ್ಮ ಕುಟುಂಬದ ಜೊತೆ ಇರಬೇಕೆಂದು ಮುಂಬೈಗೆ ಬಂದಿಳಿದಿದ್ದಾರೆ. ಕುಟುಂಬದ ಜೊತೆಯಿದ್ದು, ತಂಗಿ ಜಾಹ್ನವಿಗೆ ಸಾಂತ್ವಾನ ಹೇಳಲು ಮುಂಬೈಗೆ ಬಂದಿದ್ದಾರೆ. ಈ ವೇಳೆ ಶ್ರೀದೇವಿ ಮನೆ ಮುಂದೆ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ಕಾಯುತ್ತಿದ್ದಾರೆ.

    ಅರ್ಜುನ್ ಕಪೂರ್ ಬೋನಿ ಕಪೂರ್ ಹಾಗೂ ಅವರ ಮೊದಲನೇ ಪತ್ನಿ ಮೋನಾ ಕಪೂರ್ ಮಗ. ಬಳಿಕ ಬೋನಿ ಶ್ರೀದೇವಿಯನ್ನು ಮದುವೆಯಾಗಿದ್ದರು. ಶ್ರೀದೇವಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರ ಮಲಮಗ ಅರ್ಜುನ್ ಅಂತ್ಯಕ್ರಿಯೆ ಮಾಡುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.

    ಶ್ರೀದೇವಿ ಹೃದಯಾಘಾತದಿಂದ ದುಬೈಯಲ್ಲಿ ಶನಿವಾರ ರಾತ್ರಿ ಮೃತಪಟ್ಟರು. ತಮ್ಮ ಪತಿ ಬೋನಿ ಕಪೂರ್ ಮತ್ತು ಕಿರಿಯ ಪುತ್ರಿ ಖುಷಿ ಜೊತೆ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತಗೊಂಡು ನಿಧನರಾಗಿದ್ದಾರೆ.

     

  • ಅರ್ಜುನ್ ಕಪೂರ್ ಅಲ್ಲ ರಣ್‍ವೀರ್ ಸಿಂಗ್ ಆಗಲಿದ್ದಾರೆ ಕಪಿಲ್ ದೇವ್

    ಅರ್ಜುನ್ ಕಪೂರ್ ಅಲ್ಲ ರಣ್‍ವೀರ್ ಸಿಂಗ್ ಆಗಲಿದ್ದಾರೆ ಕಪಿಲ್ ದೇವ್

    ಮುಂಬೈ: ರಣ್‍ವೀರ್ ಸಿಂಗ್ ತಮ್ಮ ಎಲ್ಲಾ ಚಿತ್ರಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ರಣ್‍ವೀರ್ ಸಿಂಗ್ ಮಾಜಿ ಕ್ರಿಕೆಟರ್ ಕಪಿಲ್ ದೇವ್ ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    ಈ ಮೊದಲು ಕಪಿಲ್ ದೇವ್ ಜೀವನಾಧರಿತ ಸಿನಿಮಾದಲ್ಲಿ ಅರ್ಜುನ್ ಕಪೂರ್ ನಟಿಸಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದ್ದವು. ಈ ಸಿನಿಮಾದ ನಟನೆಗಾಗಿ ರಣ್‍ವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್ ಮಧ್ಯೆ ಭಾರೀ ಪೈಪೋಟಿ ನಡೆದಿತ್ತು. ನಿಜ ಜೀವನದಲ್ಲಿ ರಣ್‍ವೀರ್ ಹಾಗೂ ಅರ್ಜುನ್ ಒಳ್ಳೆಯ ಸ್ನೇಹಿತರು ಆದರೆ ಚಿತ್ರದಲ್ಲಿ ಪಾತ್ರದ ವಿಷಯ ಬಂದಾಗ ಇಬ್ಬರೂ ಎದುರಾಳಿಗಳಾಗುತ್ತಾರೆ. ಆದರೆ ಈಗ ಕಪಿಲ್ ಅವರ ಚಿತ್ರ ರಣ್‍ವೀರ್‍ಗೆ ಒಲಿದಿದೆ.

    1983ರಲ್ಲಿ ಲಂಡನ್‍ನಲ್ಲಿ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಗೆದ್ದಿತ್ತು. ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಭಾರತ ಜಯಿಸಿದ ಕ್ಷಣಗಳನ್ನು ಬೆಳ್ಳಿ ಪರದೆ ಮೇಲೆ ತರಲು ಕಬಿರ್ ಖಾನ್ ತರಲು ಪ್ರಯತ್ನಿಸಿದ್ದಾರೆ.

    ಭಜರಂಗಿ ಭಾಯ್‍ಜಾನ್ ಚಿತ್ರದ ನಿರ್ದೇಶಕ ಕಬಿರ್ ಖಾನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈ ವೀಕೆಂಡ್‍ನಲ್ಲಿ ರಣವೀರ್ ಭೇಟಿ ಆಗಿ ಎಲ್ಲಾ ಮಾತುಕತೆ ನಡೆಸಿದ್ದಾರೆ. ಈ ಚಿತ್ರದ ಕಥೆಯನ್ನು ರಾಷ್ಟ್ರ ಪ್ರಶಸ್ತಿ ವಿಜೇತರಾದ ನಿರ್ದೇಶಕ ಸಂಜಯ್ ಪುರಾನ್ ಸಿಂಗ್ ಚೌಹಾನ್ ಬರೆಯಲಿದ್ದಾರೆ. ಫ್ಯಾಂಟಮ್ ಫಿಲ್ಮ್ಸ್ ಹಾಗೂ ಸಿಸಿಎಲ್‍ನ ಮ್ಯಾನೆಜಿಂಗ್ ಡೈರೆಕ್ಟರ್ ಆದ ವಿಷ್ಣುವರ್ಧನ್ ಇಂದೂರಿ ಈ ಚಿತ್ರದ ಸಹ-ನಿರ್ಮಾಪಕರಾಗಿದ್ದಾರೆ.