Tag: arjun film

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾಂಕಾ ಚೋಪ್ರಾ ಸಹೋದರಿ ಮೀರಾ

    ಹಾಲಿವುಡ್, ಹಿಂದಿ ಸಿನಿಮಾ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸಹೋದರಿ ಮೀರಾ ಚೋಪ್ರಾ (Meera Chopra) ಅವರು ಬಹುಕಾಲದ ಗೆಳೆಯನ  ಜೊತೆ ಮದುವೆಯಾಗಿದ್ದಾರೆ. ಮಾರ್ಚ್ 12ರಂದು ರಕ್ಷಿತ್ (Rakshit) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮೀರಾ ಹಂಚಿಕೊಂಡಿದ್ದಾರೆ.

    ಎಂದೆಂದಿಗೂ ಸಂತೋಷ, ಜಗಳ, ನಗು, ಕಣ್ಣೀರು, ಮತ್ತು ನೆನಪುಗಳು ಈ ಜೀವಮಾನದಲ್ಲಿ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಿಮ್ಮೊಂದಿಗೆ ಪ್ರತಿ ಜನ್ಮ ಬದುಕುತ್ತೇನೆ ಎಂದು ಮೀರಾ ಮದುವೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಝೈದ್ ಖಾನ್ ಚಿತ್ರಕ್ಕೆ ‘ಉಪಾಧ್ಯಕ್ಷ’ ಖ್ಯಾತಿಯ ನಿರ್ದೇಶಕನಿಂದ ಆ್ಯಕ್ಷನ್ ಕಟ್

    ಕನ್ನಡದ ‘ಅರ್ಜುನ್’ ಸಿನಿಮಾದಲ್ಲಿ ನಟಿಸಿದ್ದ, ಬಾಲಿವುಡ್ ನಟಿ ಮೀರಾ ಚೋಪ್ರಾ ಅವರು ಮಾರ್ಚ್ 11ರಂದು ಮೆಹೆಂದಿ, ಸಂಗೀತ ಕಾರ್ಯಕ್ರಮದ ಜೊತೆ ಸೆಲೆಬ್ರೆಟಿ ಸ್ನೇಹಿತರಿಗೆ ಕಾಕ್‌ಟೈಲ್ ಪಾರ್ಟಿ ಆಯೋಜಿಸಿದ್ದರು. ಇಂದು (ಮಾ.12) ಅದ್ಧೂರಿಯಾಗಿ ಜೈಪುರನಲ್ಲಿ ಮದುವೆಯಾಗಿದ್ದಾರೆ.

    ಮುಂಬೈ ಬೆಡಗಿ ಪ್ರಿಯಾಂಕಾ ಚೋಪ್ರಾ ಸಹೋದರಿ ಮೀರಾ ಚೋಪ್ರಾ ಉದ್ಯಮಿ ರಕ್ಷಿತ್ ಎನ್ನುವವರ ಜೊತೆ ಮದುವೆ ಆಗುತ್ತಿದ್ದಾರೆ. ಜೈಪುರ ಮತ್ತು ದೆಹಲಿ ಹೆದ್ದಾರಿ ಬಳಿಯಿರುವ ಐಷಾರಾಮಿ ರೆಸಾರ್ಟ್‌ವೊಂದರಲ್ಲಿ ಮೀರಾ ಮದುವೆ ನಡೆದಿದೆ. ಮೀರಾ ಮದುವೆ ಸಂಭ್ರಮದಲ್ಲಿ ಬಾಲಿವುಡ್ ನಟ-ನಟಿಯರು ಭಾಗಿಯಾಗಿದ್ದಾರೆ.

    ಮೀರಾ ಚೋಪ್ರಾ ಮೂಲತಃ ಮುಂಬೈ ಹುಡುಗಿ ಆಗಿದ್ರೂ ಅವರಿಗೆ ಕನ್ನಡಕ್ಕೆ ನಂಟಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ (Darshan) ನಾಯಕಿ ನಟಿಸಿ ಸೈ ಎನಿಸಿಕೊಂಡಿದ್ದರು. ಕನ್ನಡಿಗರಿಗೆ ಅರ್ಜುನ್ (Arjun Kannada Film) ಚಿತ್ರದ ನಟಿ ಅಂದರೆ ಅವರು ಎಂಬುದು ನೆನಪಾಗುತ್ತಾರೆ.

    ಸಹೋದರಿ ಸಂಬಂಧಿ ಪ್ರಿಯಾಂಕಾರಂತೆ ಅವರಿಗೆ ಮೀರಾ ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಸಿಗಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಇದ್ದರೂ ಕೂಡ ಸಿನಿಮಾರಂಗ ಅವರ ಕೈಹಿಡಿಯಲಿಲ್ಲ. ಇದನ್ನೂ ಓದಿ:ಪತಿ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ ಯಾಮಿ ಗೌತಮ್

    ‘1920 ಲಂಡನ್’, ‘ಸೆಕ್ಷನ್ 375’, ‘ಕಾಮಾತಿಪುರ’ ಎಂಬ ಹಿಂದಿ ಸಿನಿಮಾಗಳಲ್ಲಿ ಮೀರಾ ಚೋಪ್ರಾ ನಟಿಸಿದ್ದಾರೆ. ‘ಸಫೇದ್’ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ.

  • ಮದುವೆಗೆ ಸಜ್ಜಾದ ಪ್ರಿಯಾಂಕಾ ಚೋಪ್ರಾ ಸಹೋದರಿ ಮೀರಾ

    ಮದುವೆಗೆ ಸಜ್ಜಾದ ಪ್ರಿಯಾಂಕಾ ಚೋಪ್ರಾ ಸಹೋದರಿ ಮೀರಾ

    ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineti Chopra) ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ ಅವರ ಸಹೋದರ ಸಂಬಂಧಿ ಮೀರಾ ಚೋಪ್ರಾ (Meera Chopra) ಮದುವೆ ಬಗ್ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ನಟಿಯ ಡೇಟ್ ಫಿಕ್ಸ್ ಆಗಿದೆ.

    ಪ್ರಿಯಾಂಕಾ ಚೋಪ್ರಾ(Priyanka Chopra), ಪರಿಣಿತಿ ಚೋಪ್ರಾ ಸಹೋದರ ಸಂಬಂಧಿ ಮೀರಾ ಸಂದರ್ಶನವೊಂದರಲ್ಲಿ ತಮ್ಮ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮದುವೆ (Wedding) ಪ್ಲ್ಯಾನ್ ಬಗ್ಗೆ ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕಾಟೇರ ರಿಲೀಸ್ ದಿನವೇ ರಮ್ಯಾ ನಿರ್ಮಾಣದ ಸಿನಿಮಾ ಒಟಿಟಿಗೆ

    ಹೌದು.. ನಾನು ಮದುವೆ (Wedding) ಆಗುತ್ತಿದ್ದೇನೆ. 2024ರ ಫೆಬ್ರವರಿಯಲ್ಲಿ ಮದುವೆ ನಡೆಯಲಿದೆ. ಈಗಾಗಲೇ ನಮ್ಮ ಕುಟುಂಬದ ಸದಸ್ಯರು ಮದುವೆಗೆ ತಯಾರಿ ಮಾಡುತ್ತಿದ್ದಾರೆ. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆ ನಡೆಯಲಿದೆ. ಮದುವೆಗೆ 150 ಜನರಿಗೆ ಕರೆಯಲು ಚಿಂತನೆ ಮಾಡಿದ್ದೇವೆ ಎಂದು ಮೀರಾ ತಿಳಿಸಿದ್ದಾರೆ.‌ ಆದರೆ ಹುಡುಗ ಯಾರು ಎಂಬುದನ್ನ ನಟಿ ರಿವೀಲ್‌ ಮಾಡಿಲ್ಲ.

    ರಾಜಸ್ಥಾನದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಬಳಿಕ ಮುಂಬೈನಲ್ಲಿ ಸ್ನೇಹಿತರಿಗೆ ಆಪ್ತರಿಗಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ನಟಿ ಹೇಳಿದ್ದಾರೆ. ಇದನ್ನೂ ಓದಿ:ಕಾಟೇರ ರಿಲೀಸ್ ದಿನವೇ ರಮ್ಯಾ ನಿರ್ಮಾಣದ ಸಿನಿಮಾ ಒಟಿಟಿಗೆ

    ಇನ್ನೂ ಕನ್ನಡದ ಸ್ಟಾರ್ ನಟ ದರ್ಶನ್ (Darshan) ನಟಿಸಿರುವ ‘ಅರ್ಜುನ್’ (Arjun) ಸಿನಿಮಾದಲ್ಲಿ ಮೀರಾ ಚೋಪ್ರಾ ನಾಯಕಿಯಾಗಿ ನಟಿಸಿದ್ದರು. ಇದೀಗ ಸೌತ್- ಬಾಲಿವುಡ್ ಚಿತ್ರಗಳಲ್ಲಿ ಮೀರಾ ಆ್ಯಕ್ಟೀವ್ ಆಗಿದ್ದಾರೆ.