Tag: Arindam Bagchi

  • Israel Hamas War: ಸಂಕಷ್ಟದಲ್ಲಿರುವ ಪ್ಯಾಲೆಸ್ತೀನಿಯರಿಗೆ ಭಾರತದಿಂದ ಮಾನವೀಯ ನೆರವು

    Israel Hamas War: ಸಂಕಷ್ಟದಲ್ಲಿರುವ ಪ್ಯಾಲೆಸ್ತೀನಿಯರಿಗೆ ಭಾರತದಿಂದ ಮಾನವೀಯ ನೆರವು

    ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧದ (Israel Hamas War) ನಡುವೆ ಗಾಜಾ ಪಟ್ಟಿಯಲ್ಲಿ ಸಿಲುಕಿ ನಲುಗುತ್ತಿರುವ ಪ್ಯಾಲೆಸ್ತೀನಿಯರಿಗೆ (Palestinian) ಭಾರತ ಭಾನುವಾರ (ಅ.22) ಮಾನವೀಯ ನೆರವು ಕಳುಹಿಸಿದೆ.

    ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಪ್ಯಾಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ (Mahmoud Abbas) ಅವರೊಂದಿಗೆ ಮಾತನಾಡಿ ಮಾನವೀಯ ನೆರವು ಕಳಿಸುವ ಭರವಸೆ ನೀಡಿದ್ದರು. ಅಲ್ಲದೇ ಈ ನೆರವು ದೀರ್ಘಕಾಲ ಮುಂದುವರಿಯಲಿದೆ ಎಂದು ಭರವಸೆ ನೀಡಿದ್ದರು. ಅದರಂತೆ ಮೊದಲ ಹಂತವಾಗಿ ಸುಮಾರು 6.5 ಟನ್ ವೈದ್ಯಕೀಯ ಸಾಮಗ್ರಿಗಳ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ. ಅದು ಈಜಿಪ್ಟ್ ಮೂಲಕ ದೇಶವನ್ನು ತಲುಪಲಿದೆ. ಇದನ್ನೂ ಓದಿ: ಹಮಾಸ್‌ ಉಗ್ರರ ಕೃತ್ಯ ಖಂಡಿಸಿದ್ದಕ್ಕೆ ಬಹರೇನ್‌ನಲ್ಲಿ ಮಂಗಳೂರಿನಲ್ಲಿ ಓದಿದ ವೈದ್ಯ ಅರೆಸ್ಟ್‌

    ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 6.5 ಟನ್ ವೈದ್ಯಕೀಯ ಸಾಮಗ್ರಿಗಳ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ ಭಾರತೀಯ ವಾಯುಪಡೆಯ C-17 ವಿಮಾನವು ಈಜಿಪ್ಟ್‌ನ ಎಲ್-ಅರಿಶ್ ವಿಮಾನ ನಿಲ್ದಾಣಕ್ಕೆ ಹೊರಟಿದೆ. ವಸ್ತುಗಳನ್ನು ಈಜಿಪ್ಟ್ ಮತ್ತು ಗಾಜಾ ನಡುವಿನ ರಫಾ ಗಡಿಯ ಮೂಲಕ ಪ್ಯಾಲೆಸ್ತೀನ್‌ಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿಂದು ದಸರಾ ಏರ್‌ಶೋ ರಿಹರ್ಸಲ್‌ – ಸಾರ್ವಜನಿಕರಿಗೆ ಇಂದು ಉಚಿತ, ನಾಳೆ ಪಾಸ್‌ ಖಚಿತ

    ಭಾರತದಿಂದ ನೀಡಲಾಗುತ್ತಿರುವ ಮಾನವೀಯ ನೆರವು ಜೀವ ಉಳಿಸುವ ಅಗತ್ಯ ಔಷಧಗಳು, ಶಸ್ತ್ರಚಿಕಿತ್ಸಾ ಸಾಮಗ್ರಿಗಳು, ಟೆಂಟ್‌ಗಳು, ಮಲಗುವ ಚೀಲಗಳು, ಟಾರ್ಪಾಲಿನ್‌ಗಳು, ನೈರ್ಮಲ್ಯ ಉಪಯುಕ್ತತೆಯ ವಸ್ತುಗಳು ಹಾಗೂ ನೀರು ಶುದ್ಧೀಕರಣ ಮಾತ್ರೆಗಳು ಇತರ ಅಗತ್ಯ ವಸ್ತುಗಳನ್ನು ಒಳಗೊಂದಿದೆ. ಇದನ್ನೂ ಓದಿ: ಇಶಾನ್‌ಗೆ ಜೇನುಹುಳು ಕಂಟಕ, ಸೂರ್ಯನಿಗೆ ಮೊಣಕೈ ಗಾಯ – ಪಂದ್ಯ ಆರಂಭಕ್ಕೂ ಮುನ್ನವೇ ಭಾರತಕ್ಕೆ ತ್ರಿಬಲ್‌ ಶಾಕ್‌

    ಇತ್ತೀಚೆಗೆ ಗಾಜಾ ಪಟ್ಟಿಯ ಆಸ್ಪತ್ರೆಯೊಂದರ ಮೇಲೆ ನಡೆದ ಬಾಂಬ್ ದಾಳಿಗೆ ಸಾಕಷ್ಟು ಜೀವಗಳು ಬಲಿಯಾಗಿದ್ದವು. ದಾಳಿಯಲ್ಲಿ ಮೃತರಿಗೆ ಸಂತಾಪ ಸೂಚಿಸಿದ್ದ ಪ್ರಧಾನಿ ಮೋದಿ ಅವರು, ಮಾನವೀಯ ನೆರವು ನೀಡುವುದಾಗಿ ಭರವಸೆ ನೀಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳು ಕತಾರ್‌ನಲ್ಲಿ ಬಂಧನ – ಎಂಇಎ

    ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳು ಕತಾರ್‌ನಲ್ಲಿ ಬಂಧನ – ಎಂಇಎ

    ನವದೆಹಲಿ: ಭಾರತೀಯ ನೌಕಾಪಡೆಯ (Indian Navy) 8 ಮಾಜಿ ಅಧಿಕಾರಿಗಳು ಕತಾರ್‌ನಲ್ಲಿ (Qatar) ಬಂಧನದಲ್ಲಿದ್ದಾರೆ. ಅವರ ಯೋಗಕ್ಷೇಮವನ್ನು ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿಕೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ.

    ಈ ಬಗ್ಗೆ ಮಾಹಿತಿ ನೀಡಿದ ಎಂಇಎ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi), ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಂಧನದಲ್ಲಿರುವ 8 ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳ ಯೋಗಕ್ಷೇಮವನ್ನು ವಿಚಾರಿಸಿದೆ. ಅವರನ್ನು ಅಲ್ಲಿಂದ ಬಿಡುಗಡೆಗೊಳಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಗುಂಡಿನ ದಾಳಿ – ಪಿಎಂ ಸೇರಿ ಮೂವರ ಮೇಲೆ ಇಮ್ರಾನ್ ಖಾನ್‌ಗೆ ಅನುಮಾನ

    ವರದಿಗಳ ಪ್ರಕಾರ ಕತಾರ್ ಎಮಿರಿ ನೌಕಾಪಡೆಗೆ ತರಬೇತಿ ಮತ್ತು ಇತರ ಸೇವೆಗಳನ್ನು ಒದಗಿಸುವ ಕಂಪನಿಯೊಂದಿಗೆ ಅಲ್ಲಿ ಕೆಲಸ ಮಾಡುತ್ತಿರುವ 8 ಮಾಜಿ ಭಾರತೀಯ ನೌಕಾಪಡೆ ಅಧಿಕಾರಿಗಳು ಬಂಧನವಾಗಿದ್ದಾರೆ. ಈ ಬಂಧನವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ದೃಢಪಡಿಸಿದೆ. ಆದರೆ ಅವರ ವಿರುದ್ಧ ಯಾವ ಆರೋಪಗಳಿವೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ: ಕೊಚ್ಚಿ, ತುಂಡು ಮಾಡಿ ನಾಯಿಗೆ ಬಿಸಾಕ್ತೀವಿ- ಮುತಾಲಿಕ್‌ಗೆ ಜೀವ ಬೆದರಿಕೆ

    ಬಳಿಕ ಮಾತನಾಡಿದ ಬಾಗ್ಚಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರ ರಷ್ಯಾ ಭೇಟಿ ಬಗ್ಗೆ ತಿಳಿಸಿದರು. ಜೈಶಂಕರ್ ಅವರು ನವೆಂಬರ್ 7-8 ರಂದು ರಷ್ಯಾಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ರಷ್ಯಾದ ವಿದೇಶಾಂಗ ಸಚಿವ ಸರ್ಗೇಯ್ ಲಾವ್ರೋ ಅವರನ್ನು ಭೇಟಿಯಾಗಲಿದ್ದಾರೆ. ದ್ವಿಪಕ್ಷೀಯ ವಿಷಯಗಳ ಕುರಿತು ಹಾಗೂ ಅಂತಾರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್‌ನಲ್ಲಿ ಸಂಘರ್ಷ ಉಲ್ಬಣ- ಕಳವಳ ವ್ಯಕ್ತಪಡಿಸಿದ ಭಾರತ

    ಉಕ್ರೇನ್‌ನಲ್ಲಿ ಸಂಘರ್ಷ ಉಲ್ಬಣ- ಕಳವಳ ವ್ಯಕ್ತಪಡಿಸಿದ ಭಾರತ

    ನವದೆಹಲಿ: ಉಕ್ರೇನ್‌ನಲ್ಲಿನ (Ukraine) ಸಂಘರ್ಷ ಉಲ್ಬಣಗೊಳ್ಳುತ್ತಿರುವ ಬಗ್ಗೆ ಭಾರತ (India) ತೀವ್ರ ಕಳವಳ ವ್ಯಕ್ತಪಡಿಸಿದೆ. ಯುದ್ಧವನ್ನು (War) ತಕ್ಷಣವೇ ನಿಲ್ಲಿಸಲು, ರಾಜತಾಂತ್ರಿಕತೆ ಮತ್ತು ತುರ್ತಾಗಿ ಮಾತುಕತೆ ನಡೆಸಲು ಭಾರತ ಕರೆ ನೀಡಿದೆ.

    ಸಂಘರ್ಷದ ಕುರಿತು ಭಾರತದ ನಿಲುವನ್ನು ಪುನರುಚ್ಚರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi), ಸಂಘರ್ಷವನ್ನು ಹೆಚ್ಚಿಸುವುದು ಯಾರ ಹಿತಾಸಕ್ತಿಯೂ ಅಲ್ಲ. ಪರಿಸ್ಥಿತಿಯನ್ನು ತಗ್ಗಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸಲು ಭಾರತ ಸಿದ್ಧವಾಗಿದೆ ಎಂದು ಟ್ವೀಟ್‌ನಲ್ಲಿ ಹೇಳಿದರು.

    ಟ್ವೀಟ್‌ನಲ್ಲೇನಿದೆ?
    ಉಕ್ರೇನ್‌ನಲ್ಲಿ ಮೂಲಭೂತ ಸೌಕರ್ಯಗಳು ಮತ್ತು ನಾಗರಿಕರ ಸಾವು ಸೇರಿದಂತೆ ಸಂಘರ್ಷದ ಉಲ್ಬಣಕ್ಕೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಇದನ್ನೂ ಓದಿ: ಸೇಡಿಗೆ ಸೇಡು – ಇರಾನ್‌ ಡ್ರೋನ್ ಬಳಸಿ ರಷ್ಯಾ, ಉಕ್ರೇನ್ ಮೇಲೆ ದಾಳಿ

    ಹಗೆತನವನ್ನು ಹೆಚ್ಚಿಸುವುದು ಯಾರ ಹಿತಾಸಕ್ತಿಯಲ್ಲ ಎಂಬುದನ್ನು ನಾವು ಪುನರುಚ್ಚರಿಸುತ್ತೇವೆ. ಯುದ್ಧವನ್ನು ತಕ್ಷಣವೇ ನಿಲ್ಲಿಸಲು, ರಾಜತಾಂತ್ರಿಕತೆ ಮತ್ತು ಮಾತುಕತೆಯ ಹಾದಿಗೆ ತುರ್ತಾಗಿ ಮರಳಲು ನಾವು ಒತ್ತಾಯಿಸುತ್ತೇವೆ. ಯುದ್ಧವನ್ನು ನಿಲ್ಲಿಸುವ ಗುರಿಯನ್ನು ಹೊಂದಿರುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸಲು ಭಾರತ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

    ಸೋಮವಾರ ಉಕ್ರೇನ್‌ನ ಅನೇಕ ನಗರಗಳ ಮೇಲೆ ರಷ್ಯಾ ದಾಳಿ ನಡೆಸಿದೆ. ಡೌನ್‌ಟೌನ್, ಕೀವ್ ಸೇರಿದಂತೆ ಹಲವೆಡೆ ರಾಕೆಟ್ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ಡೆಡ್ಲಿ ರಾಕೆಟ್ ದಾಳಿ- ಸೇತುವೆ ಉಡೀಸ್ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡ ರಷ್ಯಾ

    Live Tv
    [brid partner=56869869 player=32851 video=960834 autoplay=true]

  • ನಕಲಿ ಉದ್ಯೋಗ ದಂಧೆ – ಮ್ಯಾನ್ಮಾರ್‌ನಲ್ಲಿ ಸಿಲುಕಿದ್ದ 45 ಭಾರತೀಯರ ರಕ್ಷಣೆ

    ನಕಲಿ ಉದ್ಯೋಗ ದಂಧೆ – ಮ್ಯಾನ್ಮಾರ್‌ನಲ್ಲಿ ಸಿಲುಕಿದ್ದ 45 ಭಾರತೀಯರ ರಕ್ಷಣೆ

    ನವದೆಹಲಿ: ಮ್ಯಾನ್ಮಾರ್‌ನಲ್ಲಿ (Myanmar) ನಕಲಿ ಉದ್ಯೋಗ ದಂಧೆಯಲ್ಲಿ (Fake Job Racket) ಸಿಲುಕಿದ್ದ ಸುಮಾರು 45 ಭಾರತೀಯರನ್ನು (Indians) ರಕ್ಷಿಸಲಾಗಿದೆ (Rescued) ಎಂದು ಭಾರತ ಬುಧವಾರ ತಿಳಿಸಿದೆ.

    ಮ್ಯಾನ್ಮಾರ್‌ನಲ್ಲಿ ಭಾರತೀಯರು ನಕಲಿ ಉದ್ಯೋಗ ದಂಧೆಯಲ್ಲಿ ಸಿಕ್ಕಿಬಿದ್ದಿರುವ ಪ್ರರಣವನ್ನು ಭಾರತ ಸಕ್ರಿಯವಾಗಿ ಪರಿಶೀಲಿಸುತ್ತಿದೆ. 32 ಭಾರತೀಯರನ್ನು ಈ ಮೊದಲೇ ರಕ್ಷಿಸಲಾಗಿದ್ದು, ಇದೀಗ 13 ಭಾರತೀಯರನ್ನೂ ರಕ್ಷಿಸಲಾಗಿದೆ. ಇಂದು ಅವರೆಲ್ಲರೂ ತಮಿಳುನಾಡನ್ನು ತಲುಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi) ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

    ಇನ್ನೂ ಕೆಲ ಭಾರತೀಯರನ್ನು ನಕಲಿ ಉದ್ಯೋಗದಾತರಿಂದ ರಕ್ಷಿಸಲಾಗಿದ್ದು, ಅವರೆಲ್ಲರೂ ಮ್ಯಾನ್ಮಾರ್‌ನ ಅಧಿಕಾರಿಗಳ ವಶದಲ್ಲಿದ್ದಾರೆ. ಅವರನ್ನು ಭಾರತಕ್ಕೆ ವಾಪಸ್ ಕರೆತರಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಿಂದ ಭಯೋತ್ಪಾದನೆಯನ್ನು ನಿರ್ನಾಮ ಮಾಡುತ್ತೇವೆ: ಅಮಿತ್ ಶಾ

    ಇಂತಹ ನಕಲಿ ಉದ್ಯೋಗ ದಂಧೆ ಮ್ಯಾನ್ಮಾರ್‌ನಲ್ಲಿ ಮಾತ್ರವಲ್ಲದೇ ಲಾವೋಸ್ ಹಾಗೂ ಕಾಂಬೋಡಿಯಾದಲ್ಲೂ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ವಿಯೆಂಟಿಯಾನ್, ನಾಮ್ ಪೆನ್ ಹಾಗೂ ಬ್ಯಾಂಕಾಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಅಲ್ಲಿಂದ ಭಾರತೀಯರನ್ನು ವಾಪಸ್ ಕಳುಹಿಸಲು ಸಹಾಯ ಮಾಡುತ್ತಿದೆ ಎಂದು ವರದಿಯಾಗಿದೆ.

    ಈ ರೀತಿ ಸಂಶಯಾಸ್ಪದವಾಗಿ ಉದ್ಯೋಗಾವಕಾಶಗಳು ಬಂದರೆ, ಮೊದಲಿಗೆ ಅದರ ಬಗ್ಗೆ ಕ್ರಾಸ್ ಚೆಕ್ ಮಾಡುವಂತೆ ಹಾಗೂ ಎಚ್ಚರಿಕೆ ವಹಿಸುವಂತೆ ಬಾಗ್ಚಿ ನಾಗರಿಕರಲ್ಲಿ ಮನವಿ ಮಾಡಿದ್ದಾರೆ. ಇಂತಹ ನಕಲಿ ಉದ್ಯೋಗ ದಂಧೆಗಳಿಗೆ ಐಟಿ ನುರಿತ ಯುವಕರೇ ಹೆಚ್ಚಾಗಿ ಗುರಿಯಾಗಿದ್ದಾರೆ ಎಂದು ಬಾಗ್ಚಿ ಸೆಪ್ಟೆಂಬರ್‌ನಲ್ಲಿ ತಿಳಿಸಿದ್ದರು. ಇದನ್ನೂ ಓದಿ: ಕೊಡಚಾದ್ರಿ ಸೇರಿದಂತೆ ದೇಶದ 18 ಕಡೆ ರೋಪ್‌ವೇ ನಿರ್ಮಿಸಲು ಕೇಂದ್ರ ಯೋಜನೆ

    Live Tv
    [brid partner=56869869 player=32851 video=960834 autoplay=true]

  • ಅಫ್ಘಾನಿಸ್ತಾನಲ್ಲಿ ಭಾರತ – ತಾಲಿಬಾನ್ ಆಡಳಿತದ ಜೊತೆ ಮೊದಲ ಮಾತುಕತೆ

    ಅಫ್ಘಾನಿಸ್ತಾನಲ್ಲಿ ಭಾರತ – ತಾಲಿಬಾನ್ ಆಡಳಿತದ ಜೊತೆ ಮೊದಲ ಮಾತುಕತೆ

    ಕಾಬೂಲ್: ಅಫ್ಘಾನಿಸ್ತಾನವನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ವಶಪಡಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಭಾರತದ ನಿಯೋಗ ಹಾಗೂ ತಾಲಿಬಾನ್ ಶುಕ್ರವಾರ ಭೇಟಿಯಾಗಿವೆ.

    ಅಫ್ಘಾನಿಸ್ತಾನದಲ್ಲಿ ಹಳೆ ಸರ್ಕಾರ ಪತನಗೊಂಡು ತಾಲಿಬಾನ್ ಹಿಡಿತ ಸಾಧಿಸಿದ ಸಂದರ್ಭ ಭಾರತೀಯ ಮಿಷನ್ ಸಿಬ್ಬಂದಿ ಅಲ್ಲಿಂದ ಭಾರತಕ್ಕೆ ಹಿಂತಿರುಗಿದ್ದರು.

    ಇಂದು ಹಿರಿಯ ರಾಜತಾಂತ್ರಿಕ ಜೆಪಿ ಸಿಂಗ್ ನೇತೃತ್ವದ ತಂಡ ಕಾಬೂಲ್‌ನಲ್ಲಿ ಹಿರಿಯ ತಾಲಿಬಾನ್ ನಾಯಕ ಅಮೀರ್ ಖಾನ್ ಮೊಟ್ಟಕಿ ಅವರನ್ನು ಭೇಟಿಯಾದರು. ಮೂಲಭೂತ ಅಗತ್ಯಗಳಿಗಾಗಿ ಹೆಣಗಾಡುತ್ತಿದ್ದ ಅಫ್ಘಾನಿಸ್ತಾನದ ಜನರಿಗೆ ಭಾರತ ನೀಡುವ ಮಾನವೀಯ ನೆರವಿನ ಬಗ್ಗೆ ಚರ್ಚೆ ನಡೆದಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ 2 ಪ್ರತ್ಯೇಕ ಸ್ಥಳಗಳಲ್ಲಿ ಗುಂಡಿನ ದಾಳಿ- ಮೂವರು ಸಾವು

    ಭಾರತ ತನ್ನ ಸ್ಥಗಿತಗೊಳಿಸಿದ ಯೋಜನೆಗಳನ್ನು ಪುನರಾರಂಭಿಸಲು, ರಾಜತಾಂತ್ರಿಕ ಉಪಸ್ಥಿತಿಯನ್ನು ಮತ್ತೆ ಸಕ್ರಿಯಗೊಳಿಸಲು ಹಾಗೂ ಅಫ್ಘಾನಿಸ್ತಾನದ ಜನರಿಗೆ, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ರೋಗಿಗಳಿಗೆ ಸೇವೆಗಳನ್ನು ನೀಡಲು ಬಯಸುತ್ತದೆ. ವ್ಯಾಪಾರದಲ್ಲಿಯೂ ಅಫ್ಘಾನಿಸ್ತಾನದೊಂದಿಗೆ ಕೆಲಸ ಮಾಡಲು ತಾಲಿಬಾನ್ ಭಾರತವನ್ನು ಕೇಳಿಕೊಂಡಿದೆ ಎಂದು ಹೇಳಿದರು.

    ಅಫ್ಘಾನಿಸ್ತಾನದಲ್ಲಿ ಹದಗೆಡುತ್ತಿದ್ದ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಗಸ್ಟ್ 15 ರ ಬಳಿಕ ಭಾರತ ಮೂಲದ ಅಧಿಕಾರಿಗಳನ್ನು ಮರಳಿ ಕರೆತರಲು ನಿರ್ಧರಿಸಲಾಯಿತು. ಆದರೂ ಸ್ಥಳೀಯ ಸಿಬ್ಬಂದಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿ, ಅಲ್ಲಿನ ಸರಿಯಾದ ನಿರ್ವಹಣೆ ಬಗ್ಗೆ ಮಾಹಿತಿ ನೀಡುತ್ತಿದ್ದರು ಎಂದು ಬಾಗ್ಚಿ ತಿಳಿಸಿದರು. ಇದನ್ನೂ ಓದಿ: ತಿಂಗಳ ಅಂತ್ಯದಲ್ಲಿ ಸೌದಿಗೆ ಭೇಟಿ ನೀಡಲಿದ್ದಾರೆ ಬೈಡನ್

    ಅಫ್ಘಾನಿಸ್ತಾನದಲ್ಲಿ ಭಾರತದ ನೆರವಿನ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವ ಹಲವಾರು ಸ್ಥಳಗಳಿಗೆ ಭೇಟಿ ನೀಡಲು ಭಾರತೀಯ ತಂಡ ಪ್ರಯತ್ನಿಸಲಿದೆ. ಆದರೆ ತಂಡದ ಸಂಯೋಜನೆ, ಪ್ರವಾಸದ ಅವಧಿ, ಭೇಟಿ ನೀಡಬೇಕಾದ ಸ್ಥಳಗಳು ಮತ್ತು ನಿಗದಿತ ಸಭೆಗಳ ವಿವರಗಳನ್ನು ನೀಡಿಲ್ಲ.

  • ಜಮ್ಮು-ಕಾಶ್ಮೀರಕ್ಕೆ ಮೋದಿ ಭೇಟಿ ಬಗ್ಗೆ ಮಾತನಾಡುವ ಹಕ್ಕು ಪಾಕಿಸ್ತಾನಕ್ಕಿಲ್ಲ: ಭಾರತ ತಿರುಗೇಟು

    ಜಮ್ಮು-ಕಾಶ್ಮೀರಕ್ಕೆ ಮೋದಿ ಭೇಟಿ ಬಗ್ಗೆ ಮಾತನಾಡುವ ಹಕ್ಕು ಪಾಕಿಸ್ತಾನಕ್ಕಿಲ್ಲ: ಭಾರತ ತಿರುಗೇಟು

    ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭೇಟಿ ಕುರಿತು ಮಾತನಾಡುವ ಯಾವುದೇ ಹಕ್ಕು ಪಾಕಿಸ್ತಾನಕ್ಕೆ ಇಲ್ಲ ಎಂದು ಭಾರತ ತಿರುಗೇಟು ನೀಡಿದೆ.

    ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಕುರಿತು ಪಾಕಿಸ್ತಾನದ ಟೀಕೆ ವ್ಯಕ್ತಪಡಿಸಿತ್ತು. ಟೀಕೆಗೆ ಪ್ರತಿಕ್ರಿಯಿಸಿರುವ ಭಾರತ, ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ ಎಂದು ಕುಟುಕಿದೆ. ಇದನ್ನೂ ಓದಿ: ಹಿಂಸಾಚಾರದಿಂದ ಯಾರಿಗೂ ಪ್ರಯೋಜನವಾಗಲ್ಲ: ಮೋಹನ್ ಭಾಗವತ್

    ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾತನಾಡಿ, ಪ್ರಧಾನಿಗೆ ದೊರೆತ ಸ್ವಾಗತ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಆಗಿರುವ ಬದಲಾವಣೆಗಳು, ಭೇಟಿ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವಾಗಿದೆ ಎಂದು ಪಾಕಿಸ್ತಾನಕ್ಕೆ ಟಾಂಗ್‌ ಕೊಟ್ಟಿದ್ದಾರೆ.

    ಜಮ್ಮು ಮತ್ತು ಕಾಶ್ಮೀರ ಭೇಟಿ ವೇಳೆ ಪ್ರಧಾನಿ ಮೋದಿ ಅವರಿಗೆ ಸಿಕ್ಕ ಸ್ವಾಗತ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ವಿಷಯಗಳು ನಿಮ್ಮ ಯಾವುದೇ ಪ್ರಶ್ನೆಗಳಿಗೆ ಬಹಳ ಸ್ಪಷ್ಟ ಉತ್ತರವಾಗಿದೆ ಎಂದು ನಾನು ಭಾವಿಸುತ್ತೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಮಾತನಾಡಲು ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: PSI ನೇಮಕಾತಿ ಅಕ್ರಮ ಪ್ರಕರಣದ ಕ್ವೀನ್‍ಪಿನ್ ದಿವ್ಯಾ ಹಾಗರಗಿ ಅರೆಸ್ಟ್

    PAK

    ಕಳೆದ ಭಾನುವಾರ ಪ್ರಧಾನಿ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ಕೇಂದ್ರಾಡಳಿತ ಪ್ರದೇಶದಲ್ಲಿ ಸುಮಾರು 20,000 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದರು.

  • ಉಕ್ರೇನ್‍ಗೆ ಭಾರತದಿಂದ ವೈದ್ಯಕೀಯ ನೆರವು: ಅರಿಂದಮ್ ಬಾಗ್ಚಿ

    ಉಕ್ರೇನ್‍ಗೆ ಭಾರತದಿಂದ ವೈದ್ಯಕೀಯ ನೆರವು: ಅರಿಂದಮ್ ಬಾಗ್ಚಿ

    ನವದೆಹಲಿ: ಉಕ್ರೇನ್‍ಗೆ ಭಾರತದಿಂದ ವೈದ್ಯಕೀಯ ನೆರವನ್ನು ಕಳುಹಿಸಲಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದಮ್ ಬಾಗ್ಚಿ ಸೋಮವಾರ ತಿಳಿಸಿದ್ದಾರೆ.

    ರಷ್ಯಾ ದಾಳಿಯಿಂದಾಗಿ ಉಕ್ರೇನ್ ತತ್ತರಿಸಿ ಹೋಗಿದೆ. ಸೈನಿಕರು ಮಾತ್ರವಲ್ಲದೇ ದೇಶವನ್ನು ರಕ್ಷಿಸಲು ಬಯಸುವ ನಾಗರಿಕರಿಗೂ ಉಕ್ರೇನ್ ಶಸ್ತ್ರಾಸ್ತ್ರ ನೀಡುತ್ತಿದೆ. ಇದೀಗ ಯುದ್ಧದಿಂದ ನಲುಗಿರುವ ದೇಶಕ್ಕೆ ಸಹಾಯ ಮಾಡಲು ಭಾರತ ವೈದ್ಯಕೀಯ ಹಾಗೂ ಮಾನವೀಯ ನೆರವನ್ನು ನೀಡಲು ಮುಂದಾಗಿದೆ. ಇದನ್ನೂ ಓದಿ: ಫಸ್ಟ್‌ ಟೈಂ ಸೆಬಿಗೆ ಮಹಿಳೆ ಬಾಸ್‌

    ಮಾಧ್ಯಮಗಳೊಂದಿಗೆ ಮಾತನಾಡಿದ ಬಾಗ್ಚಿ ಆಪರೇಷನ್ ಗಂಗಾ ಯೋಜನೆ ಅಡಿಯಲ್ಲಿ ಈಗಾಗಲೇ 6 ವಿಮಾನಗಳನ್ನು ಕಳುಹಿಸಿ 1,400 ಭಾರತೀಯರನ್ನು ಕರೆತರಲಾಗಿದೆ. ಭಾರತೀಯ ರಾಯಭಾರಿಯ ಆದೇಶ ಬರುತ್ತಿದ್ದಂತೆ ಸುಮಾರು 8,000 ಭಾರತೀಯರು ಉಕ್ರೇನ್ ತೊರೆದಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ದಿಢೀರ್‌ ಭಾರೀ ಪ್ರಮಾಣದಲ್ಲಿ ಬಡ್ಡಿದರ ಏರಿಸಿದ ರಷ್ಯನ್‌ ಬ್ಯಾಕ್‌

    ಉಕ್ರೇನ್ ಗಡಿಯಲ್ಲಿರುವ 4 ದೇಶಗಳಿಗೆ ವಿಶೇಷ ರಾಯಭಾರಿಗಳನ್ನು ಕಳುಹಿಸಲಾಗುವುದು. ಇಂದು ರಾತ್ರಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಉಕ್ರೇನ್, ಕಿರಣ್ ರಿಜಿಜು ಸ್ಲೋವೆಕಿಯಾ ಗಣರಾಜ್ಯ, ಹರ್ದೀಪ್ ಸಿಂಗ್ ಪುರಿ ಹಂಗೇರಿ ಹಾಗೂ ಜನರಲ್ ವಿಕೆ ಸಿಂಗ್ ಪೋಲೆಂಡ್‍ಗೆ ಪ್ರಯಾಣಿಸಲಿದ್ದಾರೆ ಎಂದು ಬಾಗ್ಚಿ ತಿಳಿಸಿದರು.

  • ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ

    ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ

    ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಎರಡೂ ಕಡೆಗಳಲ್ಲಿ ಧಾರ್ಮಿಕ ಸ್ಥಳಗಳಿಗೆ ಯಾತ್ರಾರ್ಥಿಗಳಿಗೆ ಹೆಚ್ಚು ಅವಕಾಶ ನೀಡಬೇಕು ಎಂಬ ಪಾಕಿಸ್ತಾನ ಪ್ರಸ್ತಾವನೆ ಬಗ್ಗೆ ಚರ್ಚೆ ಮಾಡಲು ಭಾರತ ಸಿದ್ಧವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದರು.

    ಲಾಹೋರ್ ಮತ್ತು ಕರಾಚಿಯಿಂದ ಭಾರತಕ್ಕೆ ಯಾತ್ರಾರ್ಥಿಗಳನ್ನು ಕೊಂಡೊಯ್ಯಲು ಪಾಕಿಸ್ತಾನ ಇಂಟರ್‍ನ್ಯಾಶನಲ್ ಏರ್‍ಲೈನ್ಸ್‍ನ ಎರಡು ಚಾರ್ಟರ್ಡ್ ವಿಮಾನಗಳಿಗೆ ಅನುಮತಿ ನೀಡಬೇಕು. ಈ ಕುರಿತು ಪಾಕಿಸ್ತಾನ್ ಹಿಂದೂ ಕೌನ್ಸಿಲ್‍ನಿಂದ ನವದೆಹಲಿಯಲ್ಲಿರುವ ಪಾಕಿಸ್ತಾನಿ ಮಿಷನ್ ಇತ್ತೀಚೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ರವಾನಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಹಿಳಾ ಪೊಲೀಸ್ ಕರ್ತವ್ಯದ ಸಮಯ ಕಡಿತ

    ವಕ್ತಾರ ಅರಿಂದಮ್ ಬಾಗ್ಚಿ ಈ ಕುರಿತು ಮಾತನಾಡಿದ್ದು, 1974 ರ ದ್ವಿಪಕ್ಷೀಯ ‘ಧಾರ್ಮಿಕ ದೇವಾಲಯಗಳಿಗೆ ಭೇಟಿ ನೀಡುವ ಪ್ರೋಟೋಕಾಲ್’ ಅಡಿಯಲ್ಲಿ ಎರಡೂ ದೇಶಗಳ ಯಾತ್ರಾರ್ಥಿಗಳು ಭೇಟಿ ನೀಡಬಹುದಾದ ದೇಗುಲಗಳ ಪಟ್ಟಿಯ ವಿಸ್ತರಣೆಯನ್ನು ಚರ್ಚಿಸಲು ಭಾರತ ಸಿದ್ಧವಾಗಿದೆ ಎಂದು ಹೇಳಿದರು.

    ಭಾರತ ಮತ್ತು ಪಾಕಿಸ್ತಾನದ ನಡುವಿನ 1974 ರ ಪ್ರೋಟೋಕಾಲ್ ಅಡಿಯಲ್ಲಿ, ಧಾರ್ಮಿಕ ದೇವಾಲಯಗಳಿಗೆ ನಿಯಮಿತವಾಗಿ ಭೇಟಿ ನೀಡಲಾಗುತ್ತಿದೆ. ದೇಗುಲಗಳ ಒಪ್ಪಿಗೆ ಪಟ್ಟಿ ಮತ್ತು ಪ್ರಯಾಣದ ವಿಧಾನವನ್ನು ವಿಸ್ತರಿಸಲು ಎರಡೂ ಕಡೆಗಳಲ್ಲಿ ಆಸಕ್ತಿ ಇದೆ. ಸ್ವಾಭಾವಿಕವಾಗಿ ಪ್ರೋಟೋಕಾಲ್ ಅಡಿಯಲ್ಲಿ ಈ ಚರ್ಚೆ ನಡೆಸಬೇಕಾಗಿದೆ ಎಂದು ವಿವರಿಸಿದರು.

    ಕೋವಿಡ್ -19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಪ್ರಸ್ತುತ ಪ್ರಯಾಣದ ಮೇಲೆ ನಿರ್ಬಂಧಗಳಿವೆ. ಪರಿಸ್ಥಿತಿ ಸಾಮಾನ್ಯವಾಗುತ್ತಿದ್ದಂತೆ, ದ್ವಿಪಕ್ಷೀಯ ಪೆÇ್ರೀಟೋಕಾಲ್ ಅಡಿಯಲ್ಲಿ ಚರ್ಚೆ ನಡೆಸಲು ಈ ಸಮಯವನ್ನು ಬಳಸಿಕೊಳ್ಳಬಹುದು. ಈ ವಿಷಯದಲ್ಲಿ ಭಾರತವು ಸಕಾರಾತ್ಮಕ ಧೋರಣೆಯನ್ನು ಹೊಂದಿದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದರು.

    Willing to engage with Pak on shrines: India – Kashmir Reader

    ಪ್ರೋಟೋಕಾಲ್‍ನಲ್ಲಿ ಪ್ರಸ್ತುತ ಭಾರತದ ಭಾಗದಲ್ಲಿ ಐದು ಮುಸ್ಲಿಂ ದೇವಾಲಯಗಳನ್ನು ಮತ್ತು ಪಾಕಿಸ್ತಾನದ ಭಾಗದಲ್ಲಿ 15 ದೇವಾಲಯಗಳನ್ನು ಒಳಗೊಂಡಿದೆ. ಅವುಗಳಲ್ಲಿ ಬಹುಪಾಲು ಗುರುದ್ವಾರಗಳು. ಹೆಚ್ಚಿನ ಪಾಕಿಸ್ತಾನಿ ಮುಸ್ಲಿಮರು, ಅಜ್ಮೀರ್ ಷರೀಫ್, ನಿಜಾಮುದ್ದೀನ್ ದರ್ಗಾ ಮತ್ತು ಇತರ ದೇವಾಲಯಗಳಿಗೆ ಭೇಟಿ ನೀಡಲು ಭಾರತಕ್ಕೆ ಬರಲು ಇಚ್ಛಿಸುತ್ತಾರೆ ಎಂದು ತಿಳಿಸಿದರು.

    ಭಾರತೀಯ ಯಾತ್ರಾರ್ಥಿಗಳನ್ನು ಪಾಕಿಸ್ತಾನಕ್ಕೆ ಕೊಂಡೊಯ್ಯಲು ಏರ್ ಇಂಡಿಯಾ ವಿಮಾನಗಳಿಗೆ ಅವಕಾಶ ನೀಡಬಹುದು ಎಂದು ಸಲಹೆ ನೀಡಿದರು. ಇದರಿಂದಾಗಿ ಅವರು ಖೈಬರ್-ಪಖ್ತುಂಖ್ವಾದಲ್ಲಿನ ತೇರಿ ಗ್ರಾಮದ ಪರಿಹಾನ್ಸ್ ಮಹಾರಾಜರ ಸಮಾಧಿ ಮತ್ತು ಬಲೂಚಿಸ್ತಾನದ ಹಿಂಗ್ಲಾಜ್ ಮಾತಾ ಮಂದಿರಗಳಿಗೆ ಭೇಟಿ ನೀಡಬಹುದು ಎಂದು ವಿವರಿಸಿದರು. ಇದನ್ನೂ ಓದಿ: ಟ್ರೋಲಿಗರಿಗೆ ಖಡಕ್ ವಾರ್ನಿಂಗ್ ಕೊಟ್ಟ ಅಮೀರ್ ಪುತ್ರಿ ಇರಾ – ಸೋನಾ ಮೋಹಪತ್ರಾ ಸಾಥ್

    2019 ರಲ್ಲಿ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಭಾರತ ಮತ್ತು ಪಾಕ್ ಮಧ್ಯೆ ವ್ಯಾಪಾರ ಮತ್ತು ಹೆಚ್ಚಿನ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ದೇವಾಲಯ ನೋಡಲು ಭಕ್ತರಿಗಾಗಿ ಅವಕಾಶ ಮಾಡಿಕೊಂಡಬೇಕು ಎಂದು ಪಾಕ್ ಕೇಳಿಕೊಂಡಿದ್ದು, ಭಾರತ ಸಹ ಚರ್ಚೆ ಮಾಡಲು ಒಪ್ಪಿಗೆ ಸೂಚಿಸಿದೆ. ಪ್ರಸ್ತುತ, ಯಾತ್ರಾರ್ಥಿಗಳಿಗೆ ವಾಘಾ ಭೂ ಗಡಿ ಮತ್ತು ಕರ್ತಾರ್‍ಪುರ ಕಾರಿಡಾರ್ ಮೂಲಕ ಮಾತ್ರ ಪ್ರಯಾಣಿಸಲು ಅನುಮತಿಸಲಾಗಿದೆ.

  • ಯಾವುದೇ ದೇಶಕ್ಕೆ ವೈದ್ಯಕೀಯ ಉಪಕರಣ ಪೂರೈಸಲು, ನೆರವು ನೀಡಲು ಭಾರತ ಸಿದ್ಧ: ಅರಿಂದಮ್ ಬಾಗ್ಚಿ

    ಯಾವುದೇ ದೇಶಕ್ಕೆ ವೈದ್ಯಕೀಯ ಉಪಕರಣ ಪೂರೈಸಲು, ನೆರವು ನೀಡಲು ಭಾರತ ಸಿದ್ಧ: ಅರಿಂದಮ್ ಬಾಗ್ಚಿ

    ನವದೆಹಲಿ: ಕೊರೊನಾ ವೈರಸ್ ಹೊಸ ರೂಪಾಂತರಿ ತಳಿ ಓಮಿಕ್ರಾನ್ ಹರಡುವಿಕೆ ಮಧ್ಯೆ ಆಫ್ರಿಕಾ ಸೇರಿದಂತೆ ಯಾವುದೇ ದೇಶಕ್ಕೆ ವೈದ್ಯಕೀಯ ಉಪಕರಣಗಳು ಮತ್ತು ಜೀವರಕ್ಷಕ ಔಷಧಿಗಳನ್ನು ಪೂರೈಸಲು ನಮ್ಮ ಭಾರತ ಸಿದ್ಧವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದರು.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ರೀತಿಯ ಸಮಸ್ಯೆಯೊಂದಿಗೆ ಯಾವುದೇ ದೇಶವು ಮುಂದೆ ಬಂದರೂ ಅವರಿಗೆ ವೈದ್ಯಕೀಯ ಉಪಕರಣಗಳು, ನೆರವು ಮತ್ತು ಸಹಯೋಗವನ್ನು ನೀಡಲು ನಾವು ಸಿದ್ಧರಿದ್ದೇವೆ. ವೈರಸ್ ಗುಣಲಕ್ಷಣ ಅಥವಾ ಜೀನೋಮಿಕ್ ಕಣ್ಗಾವಲು ಆಗಿರಲಿ, ನಮ್ಮ ವೈದ್ಯಕೀಯ ಸಹಕಾರ ಅಥವಾ ಸಹಯೋಗವನ್ನು ನೀಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಂಗಳಾರತಿ ಪಡೆದಿದ್ದಕ್ಕೆ ಮಸೀದಿ ಅಧ್ಯಕ್ಷ ಸ್ಥಾನದಿಂದ ವಜಾ

    ವಿಮಾನಗಳ ನಿರ್ಬಂಧದ ಕುರಿತು ಮಾತನಾಡಿದ ಅವರು, ಓಮಿಕ್ರಾನ್ ಬರುತ್ತೆ ಎಂದು ಕೆಲವು ದೇಶಗಳು ಕೆಲವೊಂದು ಪ್ರದೇಶದಿಂದ ವಿಮಾನಗಳನ್ನು ನಿಲ್ಲಿಸಿವೆ. ಆದರೆ ಅದನ್ನು ನಾವು ಮಾಡಿಲ್ಲ ಎಂದರು.

    ನಾವು ಸೋಂಕು ಇರುವ ದೇಶಗಳಿಂದ ಬರುವವರ ಮೇಲೆ ಕಣ್ಗಾವಲನ್ನು ಇಟ್ಟಿದ್ದೇವೆ. ಅದಕ್ಕೆ ನಮ್ಮ ಕಾರ್ಯವಿಧಾನಗಳು ಮತ್ತು ಪ್ರೋಟೋಕಾಲ್‍ಗಳನ್ನು ತೀವ್ರಗೊಳಿಸಿದ್ದೇವೆ. ಇದನ್ನು ಕೇವಲ ಓಮಿಕ್ರಾನ್‍ಗೆ ಸೀಮಿತವಾಗಿಸಿಲ್ಲ ಎಂದು ಸ್ಪಷ್ಟಪಡಿಸಿದರು.

    ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಗರ್ವಾಲ್ ಈ ಕುರಿತು ಮಾತನಾಡಿದ್ದು, ಅಪಾಯದ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗುತ್ತಿದೆ. ಅವರನ್ನು ಆರ್‍ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತೆ. ಒಂದು ವೇಳೆ ಅವರಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದರೆ, ಅವರಿಗೆ ಕ್ಲಿನಿಕಲ್ ಮ್ಯಾನೇಜ್‍ಮೆಂಟ್ ಪ್ರೋಟೋಕಾಲ್ ಅಡಿಯಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದೆ.

    ಅಪಾಯದಲ್ಲಿರುವ ದೇಶಗಳಿಂದ ಬರುವ ಪ್ರಯಾಣಿಕರಲ್ಲಿ ಕೋವಿಡ್-19 ನೆಗೆಟಿವ್ ಬಂದರೂ ಅವರನ್ನು 7 ದಿನಗಳವರೆಗೆ ಹೋಮ್ ಕ್ವಾರಂಟೈನ್ ಮಾಡಲಾಗುತ್ತೆ ಎಂದು ಹೇಳಿದರು. ಇದನ್ನೂ ಓದಿ: ಸಮಂತಾ ಬ್ಯೂಟಿಯನ್ನು ಹೊಗಳಿದ ಕಂಗನಾ

    ಕಳೆದ ತಿಂಗಳು, ಓಮಿಕ್ರಾನ್ ಪೀಡಿತ ದೇಶಗಳೊಂದಿಗೆ ಭಾರತವು ತನ್ನ ಒಗ್ಗಟ್ಟನ್ನು ವ್ಯಕ್ತಪಡಿಸಿತ್ತು. ನಾವು ವೈರಸ್‍ನಿಂದ ಬಳಲುತ್ತಿರುವ ದೇಶದ ಜೊತೆ ಇರುತ್ತೇವೆ ಎಂದು ಭಾರತ ಭರವಸೆಯನ್ನು ನೀಡಿದೆ.

    ಪ್ರಸ್ತುತ ಭಾರತದ ಕರ್ನಾಟಕದಲ್ಲಿ ಹೊಸ ರೂಪಾಂತರಿ ಓಮಿಕ್ರಾನ್ ದೃಢಪಟ್ಟ ಎರಡು ಪ್ರಕರಣಗಳು ವರದಿಯಾಗಿದೆ.