Tag: arhaan khan

  • ಮಗ ಅರ್ಹಾನ್ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರಾ? ಅರ್ಬಾಜ್ ಖಾನ್ ಪ್ರತಿಕ್ರಿಯೆ

    ಮಗ ಅರ್ಹಾನ್ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರಾ? ಅರ್ಬಾಜ್ ಖಾನ್ ಪ್ರತಿಕ್ರಿಯೆ

    ಬಾಲಿವುಡ್‌ನಲ್ಲಿ ಸ್ಟಾರ್ ನಟರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹಾಗಾಗಿ ಇತ್ತೀಚೆಗೆ ಅರ್ಜಾಜ್ ಖಾನ್- ಮಲೈಕಾ ಅರೋರಾ ಪುತ್ರ ಅರ್ಹಾನ್ (Arhaan Khan) ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಸುದ್ದಿಯಾಗಿತ್ತು. ಅರ್ಹಾನ್‌ರನ್ನು ಸಲ್ಮಾನ್ ಖಾನ್ (Salman Khan) ಲಾಂಚ್ ಮಾಡ್ತಾರೆ ಎಂದೇ ಹೇಳಲಾಗಿತ್ತು. ಈ ಕುರಿತು ಸ್ವತಃ ನಟ ಅರ್ಬಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:‘ಓ ಮೈ ಲಿಲ್ಲಿ’ ಎಂದು ಅನುಪಮಾ ಜೊತೆ ಸಿದ್ದು ಡ್ಯುಯೇಟ್

    ಈಗಾಗಲೇ ಶಾರುಖ್ ಖಾನ್ ಪುತ್ರಿ ಸುಹಾನಾ, ಸೈಫ್ ಪುತ್ರ ಇಬ್ರಾಹಿಂ, ಶ್ರೀದೇವಿ ಪುತ್ರಿ ಖುಷಿ ಕಪೂರ್ ಸೇರಿದಂತೆ ಅನೇಕ ಸ್ಟಾರ್ ಕಲಾವಿದರ ಮಕ್ಕಳು ಬಿಟೌನ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಹಾಗಾಗಿ ಸಹಜವಾಗಿ ಅರ್ಬಾಜ್ ಖಾನ್ ಮಗನ ಎಂಟ್ರಿಯ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.

    ಮಗ ಅರ್ಹಾನ್ ಖಾನ್ ಚಿತ್ರರಂಗಕ್ಕೆ ಎಂಟ್ರಿ ಕೊಡುವ ವಿಚಾರ ಕೇವಲ ವದಂತಿ ಅಷ್ಟೇ ಎಂದು ಅರ್ಬಾಜ್ ಖಾನ್ (Arbaaz Khan) ಮಾತನಾಡಿದ್ದಾರೆ. ಅರ್ಹಾನ್ ಸದ್ಯ ಅವರ ವೃತ್ತಿಜೀವನದತ್ತ ಗಮನ ನೀಡುತ್ತಿದ್ದಾರೆ. ಈಗ ಅವನಿಗೆ 22 ವರ್ಷ, ಅವನ ತಯಾರಿಯಲ್ಲಿ ಬ್ಯುಸಿಯಾಗಿದ್ದಾನೆ ಎಂದು ಮಾತನಾಡಿದ್ದಾರೆ. ಈ ಮೂಲಕ ಸದ್ಯಕ್ಕೆ ಅರ್ಹಾನ್ ಖಾನ್ ಚಿತ್ರರಂಗಕ್ಕೆ ಬರುವ ಯೋಚನೆ ಮಾಡಿಲ್ಲ ಎಂದು ಮಾತನಾಡಿದ್ದಾರೆ.

    ಅರ್ಹಾನ್ ಖಾನ್ ಅಮೆರಿಕಾದಲ್ಲಿ ಆಕ್ಟಿಂಗ್ ಕೋರ್ಸ್ ಮಾಡಿದ್ದಾರೆ. ಚಿತ್ರರಂಗಕ್ಕೆ ಬರೋದಕ್ಕೆ ಅರ್ಹಾನ್ ದೇಹ ದಂಡಿಸುತ್ತಿದ್ದಾರೆ. ವಿವಿಧ ರೀತಿಯಲ್ಲಿ ತೆರೆಮರೆಯಲ್ಲಿ ತಯಾರಿ ಮಾಡುತ್ತಿದ್ದಾರೆ.

  • ತಂದೆಯ ಮದುವೆಗೆ ಬಂದ ಅರ್ಬಾಜ್ ಪುತ್ರ, ಮಲೈಕಾ ಕೇಕ್ ಉಡುಗೊರೆ

    ತಂದೆಯ ಮದುವೆಗೆ ಬಂದ ಅರ್ಬಾಜ್ ಪುತ್ರ, ಮಲೈಕಾ ಕೇಕ್ ಉಡುಗೊರೆ

    ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ಮತ್ತು ನಟ ಅರ್ಬಾಜ್ ಖಾನ್ ದಂಪತಿ ಪುತ್ರ ಅರ್ಹಾನ್ ಖಾನ್ (Arhaan Khan) ಭಾರತಕ್ಕೆ ಬಂದಿಳಿದಿದ್ದಾರೆ. ತಂದೆ ಅರ್ಬಾಜ್ ಅವರ ಎರಡನೇ ಮದುವೆಯಲ್ಲಿ ಅವರು ಪಾಲ್ಗೊಂಡಿದ್ದಾರೆ. ನೇರವಾಗಿ ತಂದೆಯ ಮದುವೆಯಲ್ಲಿ ಪುತ್ರ ಪಾಲ್ಗೊಂಡಿದ್ದರೆ, ಮಾಜಿ ಪತಿಗೆ ಕೇಕ್ ನೀಡುವ ಮೂಲಕ ಮಲೈಕಾ ಶುಭಾಶಯ ಕೋರಿದ್ದಾರೆ.

    ನಟ ಸಲ್ಮಾನ್ ಖಾನ್ ಕಿರಿಯ ಸಹೋದರ ಅರ್ಬಾಜ್ ಖಾನ್ (Arbaaz Khan) ನಿನ್ನೆ (ಡಿ.24) ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೇಕಪ್ ಆರ್ಟಿಸ್ಟ್ ಶುರಾ ಖಾನ್ (Shura Khan) ಜೊತೆ ಅರ್ಬಾಜ್ ಮದುವೆ (Marriage) ನಡೆಸಿದ್ದು, ಮುಂಬೈನಲ್ಲಿರುವ ಕುಟುಂಬದ ಸದಸ್ಯರು ಮತ್ತು ಆತ್ಮೀಯರಿಗೆ ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದಾರೆ.

    ಸಹೋದರಿ ಅರ್ಪಿತಾ ಖಾನ್ ಮನೆಯಲ್ಲಿ ಭಾನುವಾರ ನಡೆದ ನಿಕಾಹ್ ಗಾಗಿ ವಧು ಶುರಾ ಕಾಣ್ ಲೈಟ್ ವೈಟ್ ಪೀಚ್ ಲೆಹೆಂಗಾ ಧರಿಸಿದ್ದರು. ಅರ್ಬಾಜ್ ಕೂಡ ಅಷ್ಟೇ ಗ್ರ್ಯಾಂಡ್ ಆಗಿರುವ ಕಾಸ್ಟ್ಯೂಮ್ ಹಾಕಿಕೊಂಡಿದ್ದರು. ತಮ್ಮ ಇನ್ಸ್ಟಾ ಪೇಜ್ ನಲ್ಲಿ ಮದುವೆ ಕುರಿತು ಅರ್ಬಾಜ್ ಬರೆದುಕೊಂಡಿದ್ದಾರೆ.

    ಮಲೈಕಾ ಅರೋರಾ ಜೊತೆ ಅರ್ಬಾಜ್ 1998ರಲ್ಲಿ ಮದುವೆ ಆಗಿದ್ದರು. ನಂತರ ಇಬ್ಬರೂ ಡಿವೋರ್ಸ್ ಪಡೆದುಕೊಂಡು ದೂರವಾದರು. 19 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಮಲೈಕಾ ಮತ್ತು ಅರ್ಬಾಜ್ ಅವರಿಗೆ ಒಬ್ಬ ಮಗ ಕೂಡ ಇದ್ದಾನೆ. ನಂತರ ಅರ್ಬಾಜ್ ರೂಪದರ್ಶಿ ಜಾರ್ಜಿಯಾ ಜೊತೆ ಡೇಟ್ ಮಾಡುತ್ತಿದ್ದರು. ಆ ಸಂಬಂಧವೂ ಮುರಿದು ಬಿದ್ದಿತ್ತು.

     

    ಒಂಟಿಯಾಗಿ ಜೀವನ ನಡೆಸುತ್ತಿದ್ದ ಅರ್ಬಾಜ್ ಖಾನ್ ಇದೀಗ ಮೇಕಪ್ ಕಲಾವಿದೆ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರ್ಬಾಜ್ ಖಾನ್ ಅವರಿಗೂ ಮತ್ತು ಶುರಾ ಖಾನ್ ಅವರ ವಯಸ್ಸಿನ ಅಂತ ಬರೋಬ್ಬರಿ 22 ವರ್ಷ ಎಂದು ಹೇಳಲಾಗುತ್ತಿದೆ.

  • ಮುನಿಸು ಮರೆತು ಮಗನಿಗಾಗಿ ಮತ್ತೆ ಒಂದಾದ ಅರ್ಬಾಜ್- ಮಲೈಕಾ ಅರೋರಾ

    ಮುನಿಸು ಮರೆತು ಮಗನಿಗಾಗಿ ಮತ್ತೆ ಒಂದಾದ ಅರ್ಬಾಜ್- ಮಲೈಕಾ ಅರೋರಾ

    ಬಾಲಿವುಡ್ (Bollywood) ನಟಿ ಮಲೈಕಾ ಅರೋರಾ(Malaika Arora) ಮತ್ತು ಅರ್ಬಾಜ್ ಖಾನ್ (Arbaaz Khan) ಜೋಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಮಗ ಅರ್ಹಾನ್‌ಗಾಗಿ ಮಾಜಿ ದಂಪತಿ ಮಲೈಕಾ, ಅರ್ಬಾಜ್ ಮುಂಬೈ ನಿಲ್ದಾಣದಲ್ಲಿ ಕಾದು ನಿಂತಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಮಲೈಕಾ ಮತ್ತು ಅರ್ಬಾಜ್ ಖಾನ್ (Arbaaz Khan) ಪ್ರೀತಿಸಿ, ಮದುವೆಯಾದ ಜೋಡಿ ಆದರೆ ಸಾಕಷ್ಟು ವೈಯಕ್ತಿಕ ಕಾರಣದಿಂದ 2017ರಲ್ಲಿ ಡಿವೋರ್ಸ್ ಪಡೆದು ದೂರವಾಗಿದ್ದರು. ಆದರೆ ಈಗ ಮಗನಿಗಾಗಿ ಮತ್ತೆ ಜೊತೆಯಾಗಿದ್ದಾರೆ. ಹೌದು.. ಅರ್ಹಾನ್ ಖಾನ್ (Arhaan Khan) ಪ್ರಸ್ತುತ ಯುಎಸ್‌ನಲ್ಲಿ ಚಲನಚಿತ್ರ ನಿರ್ಮಾಣದ ಕೋರ್ಸ್ ಅಧ್ಯಯನ ಮಾಡ್ತಿದ್ದಾರೆ. ಇದೀಗ ಭಾರತಕ್ಕೆ ಮರಳುತ್ತಿರುವ ಮಗನನ್ನ ಸ್ವಾಗತಿಸಲು ಮುಂಬೈ ವಿಮಾನ ನಿಲ್ದಾಣದಲ್ಲಿ ಜೊತೆಯಾಗಿ ನಿಂತಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಇವರಿಬ್ಬರ ಡಿವೋರ್ಸ್ ನಂತರ ಅರ್ಜುನ್ ಕಪೂರ್ ಜೊತೆ ಮಲೈಕಾ ಎಂಗೇಜ್ ಆಗಿದ್ದಾರೆ. ಆದರೆ ಅಸಮಾಧಾನವನ್ನೆಲ್ಲಾ ಪಕ್ಕಕ್ಕಿಟ್ಟು ಪೋಷಕರಾಗಿರುವ ಮಲೈಕಾ, ಅರ್ಬಾಜ್ ಮಗನಿಗಾಗಿ ಜೊತೆಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಮಗ ಬಂದ ತಕ್ಷಣ ಮಲೈಕಾ ತಬ್ಬಿ, ಮುದ್ದು ಮಾಡಿದ್ದಾರೆ. ತಂದೆ ಅರ್ಬಾಜ್ ನೋಡಿ, ನಗುತ್ತಾ ಸ್ವಾಗತಿಸಿದ್ದಾರೆ. ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆ ಡೇಟ್ ಫಿಕ್ಸ್

    ಇಂತಹ ಪ್ರಬುದ್ಧ ಪೋಷಕರನ್ನ ನೋಡಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಮುನಿಸು ಮರೆತು ಮಗನಿಗಾಗಿ ಒಂದಾದ ಜೋಡಿಗೆ ಬಗೆ ಬಗೆಯ ಕಾಮೆಂಟ್ ಮಾಡುವ ಮೂಲಕ ಭೇಷ್ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]