Tag: Arha

  • ಅಪ್ಪನ ಮೇಣದ ಪ್ರತಿಮೆ ಮುಂದೆ ಕುಣಿದು ಕುಪ್ಪಳಿಸಿದ ಅಲ್ಲು ಅರ್ಜುನ್ ಪುತ್ರಿ

    ಅಪ್ಪನ ಮೇಣದ ಪ್ರತಿಮೆ ಮುಂದೆ ಕುಣಿದು ಕುಪ್ಪಳಿಸಿದ ಅಲ್ಲು ಅರ್ಜುನ್ ಪುತ್ರಿ

    ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 21 ವರ್ಷ ಕಳೆದಿದೆ. 2003 ಮಾರ್ಚ್ 28ರಂದು ಗಂಗೋತ್ರಿ ಸಿನಿಮಾ ಮೂಲಕ ಬನ್ನಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅಲ್ಲು ಸಿನಿಪಯಣಕ್ಕೆ 21 ವರ್ಷ ಪೂರೈಸಿದೆ. ಈ ಖುಷಿ ಕ್ಷಣ ನಡುವೆಯೇ ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಅನಾವರಣಗೊಂಡಿದೆ.

    ದುಬೈನ (Dubai) ಮೇಡಮ್ ಟುಸ್ಸಾಡ್ಸ್ ಮ್ಯೂಸಿಕ್ ನಲ್ಲಿ ಅಲ್ಲು ಅರ್ಜುನ್ (Allu Arjun) ಮೇಣದ ಪ್ರತಿಮೆ ಲೋಕಾರ್ಪಣೆಗೊಂಡಿದೆ. ‘ಅಲವೈಕುಂಠಪುರಂಲೋ’ ಚಿತ್ರದ ಅಲ್ಲು ಅರ್ಜುನ್ ಲುಕ್ ನ ಮೇಣದ ಪ್ರತಿಮೆಯನ್ನು ಮಾರ್ಚ್ 28 ರ ರಾತ್ರಿ ಅನಾವರಣ ಮಾಡಲಾಯ್ತು. ತಮ್ಮದೇ ಮೇಣದ ಪ್ರತಿಮೆ ಲುಕ್ ನಲ್ಲಿ ಕೆಂಪು ಬಣ್ಣದ ಸೂಟ್ ಧರಿಸಿ ಬನ್ನಿ ಕಾಣಿಸಿಕೊಂಡಿದ್ದಾರೆ.  ಡೂಡ್ಲಿಕೇಟ್ ಪಕ್ಕ ನಿಂತು ತಗ್ಗೋದೇ ಇಲ್ಲ ಅಂತಾ ಪುಷ್ಪ ಸ್ಟೈಲ್ ನಲ್ಲಿ ಪೋಸ್ ಕೊಟ್ಟಿದ್ದಾರೆ.

    ಮೇಣದ ಪ್ರತಿಮೆ (wax statue)  ಲೋಕಾರ್ಪಣೆ ವೇಳೆ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ (Arha), ಸಂಭ್ರಮ ಮುಗಿಲು ಮುಟ್ಟಿತ್ತು. ಅಪ್ಪನ ಪ್ರತಿಮೆಯ ಪಕ್ಕದಲ್ಲಿ ನಿಂತು ಅರ್ಹಾ ತಗ್ಗೊದೇ ಇಲ್ಲ ಎಂದು ಪೋಸ್ ಕೊಟ್ಟಿದ್ದಾಳೆ. ಇನ್ನು ಸ್ಟೈಲಿಶ್ ಸ್ಟಾರ್ ಕೂಡ ತಮ್ಮದೇ ತಮ್ಮದೇ ಮೇಣದ ಪ್ರತಿಮೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ತಗ್ಗೊದೆ ಇಲ್ಲ ಎಂದು ಬರೆದುಕೊಂಡಿದ್ದಾರೆ. ಸದ್ಯ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಜೊತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬನ್ನಿಗೆ ಫ್ಯಾನ್ಸ್ ವಿಷ್ ಮಾಡುತ್ತಿದ್ದಾರೆ.

    ಭಾರತೀಯ ಚಿತ್ರರಂಗದ ಹಲವು ತಾರೆಯರ ಮೇಣದ ಪ್ರತಿಮೆಗಳು ಲಂಡನ್ ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿವೆ. ಆದ್ರೆ ಅಲ್ಲು ಅರ್ಜುನ್ ಪ್ರತಿಮೆ ಮಾತ್ರ ದುಬೈ ಮ್ಯೂಸಿಯಂನಲ್ಲಿದೆ. ದುಬೈನಲ್ಲಿ ಮೇಣದ ಪ್ರತಿಭೆಗೆ ಭಾಜನರಾಗಿರುವ ದಕ್ಷಿಣ ಭಾರತದ ಮೊದಲ ನಟ ಎಂಬ ಖ್ಯಾತಿ ಅಲ್ಲು ಅರ್ಜುನ್ ತಮ್ಮದಾಗಿಸಿಕೊಂಡಿದ್ದಾರೆ. ಅಂದಹಾಗೇ ಲಂಡನ್ ಮ್ಯೂಸಿಯಂನಲ್ಲಿ ಪ್ರಭಾಸ್, ಮಹೇಶ್ ಬಾಬು, ಹಾಗೂ ಕಾಜಲ್ ಮೇಣದ ಪ್ರತಿಮೆಗಳಿವೆ.

    ‘ಪುಷ್ಪ: ದಿ ರೈಸ್’ನಲ್ಲಿ ಮೂಲಕ ಅಲ್ಲು ಅರ್ಜುನ್ ಖ್ಯಾತಿ ಹೆಚ್ಚಾಗಿದೆ. ಈ ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟ, ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು. ಈಗ ‘ಪುಷ್ಪಾ 2: ದಿ ರೂಲ್’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಆಗಸ್ಟ್ 15 ರಿಂದ ಚಿತ್ರ ತೆರೆಗೆ ಬರಲಿದೆ.

  • ವಿದೇಶದಿಂದ ಮರಳಿದ ಅಲ್ಲು ಅರ್ಜುನ್‍ಗೆ ಮಗಳ ಮುದ್ದು ಸ್ವಾಗತ

    ವಿದೇಶದಿಂದ ಮರಳಿದ ಅಲ್ಲು ಅರ್ಜುನ್‍ಗೆ ಮಗಳ ಮುದ್ದು ಸ್ವಾಗತ

    ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ಅಲ್ಲು ಅರ್ಜುನ್ ಮಗಳು ಅರ್ಹ ಅಪ್ಪನನ್ನು ಮುದ್ದಾಗಿ ಸ್ವಾಗತಿಸಿದ್ದಾಳೆ. ಈ ಫೋಟೋಗಳನ್ನು ಅಲ್ಲು ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Allu Arjun (@alluarjunonline)

    ಶೂಟಿಂಗ್‍ಗಾಗಿ ವಿದೇಶಕ್ಕೆ ಹೋಗಿದ್ದ ಅಲ್ಲು ಅರ್ಜುನ್ 16 ದಿನಗಳ ನಂತರ ಮತ್ತೆ ಮನೆಗೆ ಮರಳಿದ್ದಾರೆ. ಅಪ್ಪನಿಗೆ ಸರ್‌ಪ್ರೈಸ್ ಕೊಡಬೇಕು ಎಂದು ಮಗಳು ಅರ್ಹ, ವಿಶೇಷವಾಗಿ ತಯಾರಿ ಮಾಡಿಕೊಂಡಿದ್ದಳು. ಮಗಳು ಮುದ್ದಾಗಿ ಸ್ವಾಗತ ಮಾಡಿದ ಫೋಟೋವನ್ನು ಅಲ್ಲು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದು, ಈ ಫೊಟೋದಲ್ಲಿ ಮಗಳು ಅರ್ಹ, ಹೂಗಳಿಂದ ನೆಲದ ಮೇಲೆ ‘ಸುಸ್ವಾಗತ ಅಪ್ಪ’ ಎಂದು ಬರೆದಿದ್ದಾಳೆ. ಈ ಫೋಟೋಗೆ ಅಲ್ಲು ಅರ್ಜುನ್, 16 ದಿನಗಳ ವಿದೇಶಿ ಪ್ರವಾಸದಿಂದ ಹಿಂತಿರುಗಿದಾಗ ಸ್ವೀಟೆಸ್ಟ್ ಸ್ವಾಗತ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಟ್ರೋಲಿಗರಿಗೆ ಖಡಕ್ ವಾರ್ನಿಂಗ್ ಕೊಟ್ಟ ಅಮೀರ್ ಪುತ್ರಿ ಇರಾ – ಸೋನಾ ಮೋಹಪತ್ರಾ ಸಾಥ್

    ಅಲ್ಲು ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು, ತಮ್ಮ ಮಕ್ಕಳ ಜೊತೆಗೆ ಕಾಲಕಳೆಯುವ ವೀಡಿಯೋ-ಫೋಟೋವನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಮಗ ಅಲ್ಲು ಅಯಾನ್ ಮತ್ತು ಮಗಳು ಅಲ್ಲು ಅರ್ಹ ಜೊತೆಗಿನ ವಿಶೇಷ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.

    ಸುಕುಮಾರ್ ನಿರ್ದೇಶನದ ‘ಪುಷ್ಪ: ದಿ ರೈಸ್’ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸಿದ್ದು, ಸಿನಿಮಾ ಯಶಸ್ಸನ್ನು ತಂದುಕೊಟ್ಟಿದೆ. ಈ ಸಿನಿಮಾದಲ್ಲಿ ಕನ್ನಡದ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಈ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಿದ್ದು, ಅಲ್ಲಿಯೂ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ನಿದ್ದೆಗಳಿಲ್ಲದ ರಾತ್ರಿ ಕಳೆಯಲು ಸಿದ್ಧರಾಗಿ – ಪ್ರಿಯಾಂಕಾಗೆ ಅನುಷ್ಕಾ ಶರ್ಮಾ ವಿಶ್