Tag: Argument

  • Andhra Pradesh| ಕತ್ತು ಹಿಸುಕಿ 8 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಪಾಪಿ ಪತಿ

    Andhra Pradesh| ಕತ್ತು ಹಿಸುಕಿ 8 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಪಾಪಿ ಪತಿ

    ಅಮರಾವತಿ: ಗಂಡ-ಹೆಂಡತಿಯ ನಡುವೆ ಜಗಳ ನಡೆದು, ಪತಿ 8 ತಿಂಗಳ ಗರ್ಭಿಣಿ ಪತ್ನಿಯನ್ನು (Preganant Wife) ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣದಲ್ಲಿ ಸೋಮವಾರ ನಡೆದಿದೆ.

    ಅನುಷಾ (27) ಮೃತ ಪತ್ನಿ. ಪತಿ ಜ್ಞಾನೇಶ್ವರ್ ಹಾಗೂ ಪತ್ನಿ ಅನುಷಾ ಸೋಮವಾರ ಬೆಳಗ್ಗೆ ಜಗಳವಾಡಿದ್ದು, ಈ ಜಗಳ ತಾರಕಕ್ಕೇರಿ ಜ್ಞಾನೇಶ್ವರ್ ತನ್ನ ಪತ್ನಿಯ ಕತ್ತು ಹಿಸುಕಿದ್ದಾನೆ. ಈ ಸಂದರ್ಭ ಅನುಷಾ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಕೂಡಲೇ ಪತಿ, ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಅಷ್ಟರಲ್ಲಾಗಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಇದನ್ನೂ ಓದಿ: ತುಮಕೂರು | ಬೀದಿ ದೀಪ ಆರಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿ ಶಿಕ್ಷಕ ಸಾವು

    ವಿಶಾಖಪಟ್ಟಣಂನ (Visakhapatnam) ಪಿಎಂ ಪಾಲೆಂನ ಉಡಾ ಕಾಲೋನಿಯಲ್ಲಿ ಘಟನೆ ನಡೆದಿದೆ. ಆರೋಪಿ ಪತಿ ನಗರದ ಸ್ಕೌಟ್ಸ್ ಮತ್ತು ಸಾಗರ್‌ನಗರ ವೀಕ್ಷಣಾ ಕೇಂದ್ರದ ಬಳಿ ಫಾಸ್ಟ್ ಫುಡ್ ಸೆಂಟರ್ ನಡೆಸುತ್ತಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಅನುಷಾಳೊಂದಿಗೆ ಪ್ರೇಮ ವಿವಾಹವಾಗಿದ್ದರು. ಬಳಿಕ ಹಲವಾರು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿ ದಂಪತಿ ಆಗಾಗ ಜಗಳವಾಡುತ್ತಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸೆಂಚುರಿ ಬಾರಿಸಿದ್ದಕ್ಕೆ ಪಾಕ್‌ ಸೂಪರ್‌ ಲೀಗಲ್ಲಿ ಸಿಕ್ಕಿದ್ದು ಹೇರ್ ಡ್ರೈಯರ್‌!

    ಘಟನೆಯ ಬಳಿಕ ಆರೋಪಿ ಪತಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪತ್ನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮುಸ್ಲಿಮರದ್ದು ಕಾಂಟ್ರ್ಯಾಕ್ಟ್‌ ಮ್ಯಾರೇಜ್, ಹಿಂದೂಗಳ ರೀತಿ ಏಳು ಜನ್ಮದ ಅನುಬಂಧ ಅಲ್ಲ: ರಾಯರೆಡ್ಡಿ

  • ಕುಡಿದು ಬಂದ ಪತಿಯ ಕತ್ತು ಹಿಸುಕಿ ಕೊಂದ ಪತ್ನಿ!

    ಕುಡಿದು ಬಂದ ಪತಿಯ ಕತ್ತು ಹಿಸುಕಿ ಕೊಂದ ಪತ್ನಿ!

    ಹೈದರಾಬಾದ್: ಪತಿಯೊಂದಿಗೆ ಜಗಳವಾಡುತ್ತಾ ಆತನ ಕತ್ತು ಹಿಸುಕು ಕೊಂದಿರುವ ಘಟನೆ ಸೋಮವಾರ ರಾತ್ರಿ ಅಜ್ಜಂಪುರ ಕಾಲೋನಿಯಲ್ಲಿ ನಡೆದಿದೆ.

    ಶೇಖ್ ಅಫ್ರೋಜ್(35) ಮೃತನಾಗಿದ್ದಾನೆ. ಫರ್ಜಾನಾ ಬೇಗಂ ಪತಿಯನ್ನು ಕೊಂದ ಆರೋಪಿ. ಪತಿ ಕುಡಿದ ಮತ್ತಿನಲ್ಲಿ ಮನೆಗೆ ಬರುತ್ತಿದ್ದನು. ಆತನೊಂದಿಗೆ ನಿರಂತರವಾಗಿ ಜಗಳವಾಡುತ್ತಿದ್ದ ಫರ್ಜಾನಾ ಒಂದು ದಿನ ಪತಿಯ ಕತ್ತು ಹಿಸುಕಿ ಕೊಂದಿದ್ದಾಳೆ. ಇದನ್ನೂ ಓದಿ: ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡಿದವನು ಸೇರಿ 5 ಜನ ಅರೆಸ್ಟ್ 

    ಶೇಖ್ ಅಫ್ರೋಜ್ ಸಣ್ಣ ವ್ಯಾಪಾರವನ್ನು ಮಾಡುತ್ತಾ ಜೀವನವನ್ನು ಸಾಗಿಸುತ್ತಿದ್ದರು. ದಂಪತಿಗಳ ನಡುವೆ ಕೆಲವು ವಿಚರಗಳಿಗೆ ಮನಸ್ಥಾಪವಿತ್ತು. ಹೀಗಾಗಿ ಇಬ್ಬರ ನಡುವೆ ಪ್ರತಿನಿತ್ಯ ಜಗಳವಾಗುತ್ತಿತ್ತು. ಶೇಖ್ ಕುಡಿದು ಮನೆಗೆ ಬರುತ್ತಿದ್ದನು. ಇದು ಫರ್ಜಾನಾಗೆ ಇಷ್ಟವಾಗುತ್ತಿರಲಿಲ್ಲ. ಈ ವಿಚಾವಾಗಿ ಇಬ್ಬರ ಮಧ್ಯೆ ಹಲವು ಬಾರಿ ಜಗಳವಾಗಿದೆ. ಶೇಖ್ ಅವರಿಗೆ ಫರ್ಜಾನಾ ಎರಡನೇ ಪತ್ನಿಯಾಗಿದ್ದಾಳೆ. ಈ ದಂತಿಗೆ ಒಂದು ಮಗುವಿದೆ. ಆಕೆ ಬಟ್ಟೆಯಯಲ್ಲಿ ಶೇಖ್ ಕತ್ತು ಹಿಸುಕಿ ಕೊಂದಿದ್ದಾಳೆ ಎಂದು ಕೊಲೆಗೆ ಸಂಬಂಧಿಸಿದಂತೆ ಶೇಖ್ ಸಹೋದರ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ನೆಟ್ಟಿಗರ ಆಕ್ರೋಶಕ್ಕೆ ಮಣಿದು ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ದಾರ್ಥ್

    ದೂರಿನ ಆಧಾರದ ಮೇಲೆ ಪೊಲೀಸರು ಫರ್ಜಾನಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.

  • ಪ್ರಕರಣದ ನ್ಯೂನತೆ ಪ್ರಸ್ತಾಪಿಸಿ ಒಂದೂವರೆ ಗಂಟೆ ಶಂಕಿತ ನಕ್ಸಲ್ ನಾಯಕನಿಂದ ವಾದ ಮಂಡನೆ

    ಪ್ರಕರಣದ ನ್ಯೂನತೆ ಪ್ರಸ್ತಾಪಿಸಿ ಒಂದೂವರೆ ಗಂಟೆ ಶಂಕಿತ ನಕ್ಸಲ್ ನಾಯಕನಿಂದ ವಾದ ಮಂಡನೆ

    ಮಡಿಕೇರಿ: 7ನೇ ಬಾರಿ ವಿಚಾರಣೆಗೆ ಆಗಮಿಸಿದ ಶಂಕಿತ ನಕ್ಸಲ್ ನಾಯಕ ರೂಪೇಶ್, ಇಂದು ನ್ಯಾಯಾಲಯದಲ್ಲಿ ತನ್ನ ಪರವಾಗಿ ತಾನೇ ವಾದ ಮಾಡಿದ್ದಾನೆ.

    2010ರಲ್ಲಿ ಕೊಡಗಿನ ಮುಂಡ್ರೋಟು ಅರಣ್ಯದಲ್ಲಿ ಕಾಣಿಸಿಕೊಂಡಿದ್ದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ಹಿನ್ನೆಲೆ ಇಂದು ಜೆಎಂಎಫ್‍ಸಿ ನ್ಯಾಯಾಲಯಕ್ಕೆ ರೂಪೇಶ್‍ನನ್ನು ಹಾಜರುಪಡಿಸಲಾಗಿತ್ತು.

    ಈ ವೇಳೆ ಸಮಯ ಕೇಳಿ ಕೋರ್ಟ್ ಹಾಲ್‍ನಲ್ಲಿ ಕೇಸ್ ಬಗ್ಗೆ ಅಧ್ಯಯನ ಮಾಡಿದ ರೂಪೇಶ್, ಒಂದೂವರೆ ಗಂಟೆಗೂ ಅಧಿಕ ಕಾಲ ತನ್ನ ವಾದ ಮಂಡಿಸಿದ್ದಾನೆ. ಕೊಡಗು ಪ್ರಕರಣ ಮತ್ತು ಕೇರಳ ಪ್ರಕರಣದಲ್ಲಿ ಒಂದೇ ಸಮಯದಲ್ಲಿ ರೂಪೇಶ್ ಭಾಗಿಯಾಗಿದ್ದಾನೆ ಎಂದು ದಾಖಲು ಮಾಡಲಾಗಿತ್ತು. ಎರಡೂ ಕಡೆಗಳಲ್ಲಿ ಒಂದೇ ಸಮಯದಲ್ಲಿ ನಾನು ಇರಲು ಹೇಗೆ ಸಾಧ್ಯ ಎಂಬುದನ್ನು ಮುಂದಿಟ್ಟುಕೊಂಡು ಪ್ರಕರಣದ ನ್ಯೂನತೆ ಎತ್ತಿ ಹಿಡಿದ್ದಾನೆ. ಜೊತೆಗೆ ನಕ್ಸಲ್ ವಿಚಾರದಲ್ಲಿ ಸುಪ್ರಿಂ ಕೋರ್ಟ್ ನೀಡಿದ ತೀರ್ಪುಗಳ ಉಲ್ಲೇಖಿಸಿದ ರೂಪೇಶ್ ಪ್ರಕರಣದಿಂದ ನನ್ನನ್ನು ಕೈ ಬಿಡಬೇಕು ಎಂದು ವಾದಿಸಿದ್ದಾನೆ.

    ರೂಪೇಶ್‍ನ ವಾದ ಆಲಿಸಿದ ಮಡಿಕೇರಿ ನ್ಯಾಯಾಧೀಶರಾದ ವೀರಪ್ಪ ವಿ ಮಲ್ಲಾಪುರ್ ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿದರು ಮತ್ತು ಜುಲೈ 23ಕ್ಕೆ ಸರ್ಕಾರಿ ಅಭಿಯೋಜಕರಿಗೆ ವಾದ ಮಂಡಿಸಲು ಅವಕಾಶ ನೀಡಿದರು. ವಿಚಾರಣೆ ಮುಗಿಸಿದ ರೂಪೇಶ್ ನನ್ನು ಬಿಗಿ ಭದ್ರತೆಯಲ್ಲಿ ಕೇರಳಕ್ಕೆ ಕರೆದುಕೊಂಡು ಹೋಗಲಾಯಿತು.

    ರೂಪೇಶ್ ಯಾರು?
    ವೃತ್ತಿಯಲ್ಲಿ ಹೈಕೋರ್ಟ್ ವಕೀಲನಾದ ರೂಪೇಶ್ ಕೇರಳದ ಕೊಚ್ಚಿನ್ ಮೂಲದವನು. ಇವನ ತಂದೆ ಹೆಸರು ರಾಮಚಂದ್ರ. ತನ್ನದೇ ಆದ ನಕ್ಸಲ್ ತಂಡವನ್ನು ಕಟ್ಟಿಕೊಂಡು ಸರ್ಕಾರದ ವಿರುದ್ಧ ಹಾಗೂ ಮೇಲ್ವರ್ಗದ ವಿರುದ್ಧ ಹೋರಾಟ ಮಾಡಿಕೊಂಡು ಕರಪತ್ರ ಹಂಚುತ್ತಾ ಕಾಡಿನಲ್ಲಿ ಅಲೆಯುತ್ತಿದ್ದನು. 2013ರ ಮೇ ತಿಂಗಳಿನಲ್ಲಿ ರೂಪೇಶ್ ಭಾಗಮಂಡಲ ಕೆಲ ಪ್ರದೇಶ ಕಾಣಿಸಿಕೊಂಡಿದ್ದ. ಈ ಕಾರಣಕ್ಕೆ ಅವನ ಮೇಲೆ ಅಲ್ಲಿನ ಪೊಲೀಸರು ಸೆಕ್ಷನ್ 143, 144, 147, 342, 506, 149 ಐಪಿಸಿ ಸೆಕ್ಷನ್ 3 ಹಾಗೂ 25 ರಂತೆ ಭಾರತೀಯ ಬಂದೂಕು ಕಾಯ್ದೆ ಸೆಕ್ಷನ್ 20, 1967ರಂತೆ ಕಾನೂನು ಬಾಹಿರ ಚಟುವಟಿಕೆ ಪ್ರಕರಣ ದಾಖಲಿಸಿದ್ದರು.

    ಆರೋಪಗಳೇನು?
    2010ರಲ್ಲಿ ಕೊಡಗು ಜಿಲ್ಲೆಯ ಕಾಲೂರು ಎಂಬಲ್ಲಿ ರೂಪೇಶ್ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಮತ್ತು 2013ರಲ್ಲಿ ರೂಪೇಶ್ ನಾಯಕತ್ವದ ನಕ್ಸಲ್ ತಂಡ ಭಾಗಮಂಡಲ ಕೆಲ ಮನೆಗಳಿಗೆ ಭೇಟಿ ನೀಡಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಮತ್ತು ಸರ್ಕಾರದ ವಿರುದ್ಧದ ಕರಪತ್ರವನ್ನು ಹಂಚಿದ್ದ ಎಂದು ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದವು. ಈ ಪ್ರಕರಣ ಕುರಿತಂತೆ ಕಳೆದ 5 ವರ್ಷಗಳಿಂದ ವಿಚಾರಣೆ ನಡೆಯುತ್ತಿದೆ.

  • ಮಹಿಳಾ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ ಬಿಜೆಪಿ ಶಾಸಕ- ವಿಡಿಯೋ ವೈರಲ್

    ಮಹಿಳಾ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ ಬಿಜೆಪಿ ಶಾಸಕ- ವಿಡಿಯೋ ವೈರಲ್

    ಡೆಹ್ರಾಡೂನ್: ಉತ್ತರಾಖಂಡ್‍ದ ಬಿಜೆಪಿ ಶಾಸಕರೊಬ್ಬರು ಮಹಿಳಾ ಸಬ್‍ಇನ್ಸ್‌ಪೆಕ್ಟರ್ ಗೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರುದ್ರಪುರ್ ಕ್ಷೇತ್ರದ ಶಾಸಕ ರಾಜ್‍ಕುಮಾರ್ ತುಕ್ರಾಲ್ ಅವರ ಇಬ್ಬರು ಸಹಚರರು ಸಂಚಾರ ನಿಯಮ ಉಲ್ಲಂಘಿಸಿದ್ದರು. ಹೀಗಾಗಿ ಅವರನ್ನು ರುದ್ರಪುರ್ ಸಂಚಾರ ಠಾಣೆಯ ಪೊಲೀಸರು ಬಂಧಿಸಿದ್ದರು. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆಗೆ ಬಂದ ಶಾಸಕರು ಸಬ್‍ಇನ್ಸ್‌ಪೆಕ್ಟರ್ ಅನಿತಾ ಗೈರೊಲಾ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ.

    ಬಂಧನಕ್ಕೆ ಕಾರಣ ತಿಳಿಸುತ್ತಿದ್ದರೂ ಕೇಳದ ಶಾಸಕ, ಅನಿತಾ ಗೈರೊಲಾ ಅವರ ಮೇಲೆ ಹರಿಹಾಯ್ದು, ಬೆದರಿಕೆ ಒಡ್ಡಿದ್ದಾರೆ. ಬಳಿಕ ಹಿಂಬಾಲಕರು ಹೇಳಿದ್ದರಿಂದ ಮತ್ತೇ ಠಾಣೆ ಬಾಗಿಲ ಬಳಿ ನಿಂತು, ಬಂಧಿತರನ್ನು ಬಿಡುವಂತೆ ಒತ್ತಾಯಿಸಿದ್ದಾರೆ.

    ಸ್ಥಳದಲ್ಲಿಯೇ ಇದ್ದ ವ್ಯಕ್ತಿಯೊಬರು ತಮ್ಮ ಮೊಬೈಲ್‍ನಲ್ಲಿ ದೃಶ್ಯ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಭಾರೀ ಟೀಕೆ ವ್ಯಕ್ತವಾಗಿದೆ.

    ಇದೇ ಮೊದಲಲ್ಲ, ಈ ಹಿಂದೆಯೂ ಯುವಕನೊಬ್ಬ ಪರಿಶಿಷ್ಟ ಜಾತಿಯ ಯುವತಿಯ ಜೊತೆಗೆ ಓಡಿ ಹೋಗಿದ್ದನು. ಹೀಗಾಗಿ ಯುವತಿಯ ಕುಟುಂಬದ ಮೂರು ಜನ ಮಹಿಳೆಯರ ಮೇಲೆ ಶಾಸಕರು ಹಲ್ಲೆ ಮಾಡಿದ್ದಾರೆ. ನಡು ರಸ್ತೆಯಲ್ಲಿಯೇ ಯುವತಿಯ ತಾಯಿ ಸೇರಿದಂತೆ ಇಬ್ಬರು ಸಹೋದರಿಯರನ್ನು ಥಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv