ಚೆನ್ನೈ: ಫುಟ್‌ಬಾಲ್ (Football) ತಾರೆ, ಅರ್ಜೆಂಟಿನಾದ (Argentina) ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ಕೇರಳಕ್ಕೆ (Kerala) ಭೇಟಿ ಕನ್ಫರ್ಮ್ ಆಗಿದ್ದು, ಇದೇ ನವೆಂಬರ್‌ನಲ್ಲಿ ಭೇಟಿ ನೀಡಲಿದ್ದಾರೆ ಎಂದು ಕೇರಳದ ಕ್ರೀಡಾ ಸಚಿವ ವಿ. ಅಬ್ದುರ್ ಹಿಮಾನ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೇರಳದಲ್ಲಿ ಆಯೋಜನೆಗೊಳ್ಳಲಿರುವ ಸೌಹಾರ್ದ ಪಂದ್ಯದಲ್ಲಿ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಆಡಲು ಸಜ್ಜಾಗಿದೆ. ಈ ಪಂದ್ಯಾವಳಿಗಾಗಿ ಫಿಫಾದ ಅಗ್ರ 50 ತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಈ ಕುರಿತು ಈಗಾಗಲೇ ಆಸ್ಟ್ರೇಲಿಯಾ ತಂಡ ಉತ್ಸುಕತೆ ತೋರಿದೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ವಾಟ್ಸಪ್‌ನಲ್ಲಿ ಬಂತು ಮದುವೆ ಕಾರ್ಡ್ – ಕ್ಲಿಕ್ ಮಾಡ್ತಿದ್ದಂಗೆ 2 ಲಕ್ಷ ರೂ. ಕಳೆದುಕೊಂಡ ಸರ್ಕಾರಿ ನೌಕರ
ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೆಷನ್ (Argentine Football Association) ಕೂಡ ಈ ಕುರಿತು ಮಾಹಿತಿಯನ್ನು ದೃಢಪಡಿಸಿದೆ. ಅಕ್ಟೋಬರ್ 6ರಿಂದ 14ರವರೆಗೆ ಯುಎಸ್‌ನಲ್ಲಿ, ಬಳಿಕ ಅಂಗೋಲಾದ ಲುವಾಂಡಾದಲ್ಲಿ, ಆನಂತರ ನವೆಂಬರ್ 10ರಿಂದ 18ರವರೆಗೆ ಭಾರತದ ಕೇರಳದಲ್ಲಿ ಆಡಲಿದೆ ಎಂದು ತಿಳಿಸಿದೆ.
ಸದ್ಯ ಭಾರತದಲ್ಲಿ ಆಡಲು ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ತಯಾರಾಗಿದ್ದು, ಕೇರಳ ಸರ್ಕಾರ ಮೆಸ್ಸಿ ಭೇಟಿಯನ್ನು ಖಚಿತಪಡಿಸಿದೆ. ಈ ಹಿಂದೆ 2011ರಲ್ಲಿ ಮೆಸ್ಸಿ ಒಳಗೊಂಡ ಅರ್ಜೆಂಟೀನಾ ತಂಡವು ವೆನೆಜುವೆಲಾ ವಿರುದ್ಧ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಆಡಿತ್ತು.ಇದನ್ನೂ ಓದಿ: ಬಾಘಿ-4 ಟ್ರೈಲರ್‌ಗೆ ಮುಹೂರ್ತ ಫಿಕ್ಸ್
ಬ್ಯೂನಸ್ ಐರಿಸ್: ಟ್ರಿನಿಡಾಡ್ ಮತ್ತು ಟೊಬಾಗೋ ದೇಶದ ಬಳಿಕ ಇಂದು ಅರ್ಜೆಂಟೀನಾ ತಲುಪಿದ ಪ್ರಧಾನಿ ಮೋದಿಯವರನ್ನು ಬ್ಯೂನಸ್ ಐರಿಸ್‌ನಲ್ಲಿ ಭಾರತೀಯ ಸಮಯದಾಯವೊಂದು ಸ್ವಾಗತಿಸಿತು.
ಐದು ದೇಶಗಳ ಪ್ರವಾಸದಲ್ಲಿರುವ ಎರಡು ದಿನಗಳ ಟ್ರಿನಿಡಾಡ್ ಮತ್ತು ಟೊಬಾಗೋ ದೇಶದ ಪ್ರವಾಸದ ಬಳಿಕ ಇಂದು ಅರ್ಜೆಂಟೀನಾದ ದೇಶದ ಬ್ಯೂನಸ್ ಐರಿಸ್‌ಗೆ ಬಂದಿಳಿದರು. ಈ ವೇಳೆ ಅರ್ಜೆಂಟೀನಾದಲ್ಲಿರುವ ಭಾರತೀಯರು ಮೋದಿಯವರನ್ನು ಸ್ವಾಗತ ಮಾಡಿದರು. ಇದೇ ಸಂದರ್ಭದಲ್ಲಿ ಅರ್ಜೆಂಟೀನಾದಲ್ಲಿರುವ ಭಾರತೀಯ ಮೂಲದ ವಿಜಯ್ ಕುಮಾರ್ ಗುಪ್ತಾ ಪ್ರಧಾನಿ ಮೋದಿಯವರನ್ನು ಭೇಟಿಯಾಗಲು 400 ಕಿ.ಮೀ ಪ್ರಯಾಣಿಸಿ ಬ್ಯೂನಸ್ ಐರಿಸ್‌ಗೆ ಬಂದಿದ್ದರು.ಇದನ್ನೂ ಓದಿ: ಪಾರ್ಟಿ ಮಾಡಲು ಪಬ್‌ಗೆ ಕರೆದು ಸ್ನೇಹಿತನಿಂದಲೇ ಸುಲಿಗೆ – ನಾಲ್ವರ ಬಂಧನ
ಈ ಕುರಿತು ವಿಜಯ್ ಕುಮಾರ್ ಗುಪ್ತಾ ಮಾತನಾಡಿ, ತಮ್ಮ ದೀರ್ಘ ಕಾಲದ ಪ್ರಯಾಣದ ಅನುಭವವನ್ನು ಹಂಚಿಕೊAಡಿದ್ದಾರೆ. ನಾನು ಪ್ರಧಾನಿಯನ್ನು ಭೇಟಿಯಾಗಲು 400ಕಿ.ಮೀ ದೂರದಿಂದ ಬಂದಿದ್ದೇನೆ. ಜೊತೆಗೆ ಮೋದಿಯವರ ಕೈಕುಲುಕಿ ಮಾತನಾಡಿಸುವ ಅವಕಾಶವೂ ನನಗೆ ಸಿಕ್ಕಿದೆ ಎಂದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನೂ ಅರ್ಜೆಂಟೀನಾ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅಧ್ಯಕ್ಷ ಜೇವಿಯರ್ ಮಿಲಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಐದು ರಾಷ್ಟçಗಳ ಪೈಕಿ ಮೋದಿ ಘಾನಾ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊಗೆ ಭೇಟಿ ನೀಡಿದ್ದು, ಅರ್ಜೆಂಟೀನಾ ಬಳಿಕ ಬ್ರೆಜಿಲ್ ಮತ್ತು ನಮೀಬಿಯಾಕ್ಕೆ ಭೇಟಿ ನೀಡಲಿದ್ದಾರೆ.ಇದನ್ನೂ ಓದಿ: ಫಾರಂ ಹೌಸ್‌ನಲ್ಲಿ ಚಾಮುಂಡಿ ಪೂಜೆ ನೆರವೇರಿಸಿದ ದರ್ಶನ್
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಜು.2 ರಿಂದ 9ರವರೆಗೆ ವಿದೇಶ ಪ್ರವಾಸಕ್ಕೆ ತೆರಳಲಿದ್ದು, ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾ ದೇಶಗಳಿಗೆ ಭೇಟಿ ನೀಡಲಿದ್ದಾರೆ.
ಗ್ಲೋಬಲ್ ಸೌತ್ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ಬಲಪಡಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ. `ಆಪರೇಷನ್ ಸಿಂಧೂರ’ (Operation Sindoor) ಮೂಲಕ ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ಜಾಗತಿಕವಾಗಿ ಮಂಡಿಸುವುದು ಮತ್ತು ರಾಜತಾಂತ್ರಿಕ ಸಹಕಾರವನ್ನು ಉತ್ತೇಜಿಸುವುದಾಗಿದೆ. ಈ ಭೇಟಿಯು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುವುದರ ಜೊತೆಗೆ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಗುರಿಯನ್ನು ಹೊಂದಿದೆ.ಇದನ್ನೂ ಓದಿ: ಸಾರ್ವಕಾಲಿಕ ದಾಖಲೆಯತ್ತ ತೆಂಗಿನಕಾಯಿ ದರ – ಕೆಜಿಗೆ ಬರೋಬ್ಬರಿ 70-80 ರೂ.
ಘಾನಾ:
ನಾಳೆ ವಿದೇಶ ಪ್ರವಾಸ ಕೈಗೊಳ್ಳಲಿರುವ ಮೋದಿ ಮೊದಲು ಘಾನಾ ದೇಶಕ್ಕೆ ಭೇಟಿ ನೀಡಲಿದ್ದಾರೆ. ಕಳೆದ 30 ವರ್ಷಗಳಲ್ಲಿ ಭಾರತದ ಪ್ರಧಾನಮಂತ್ರಿಯ ಮೊದಲ ಭೇಟಿ ಇದಾಗಿದೆ. ಜುಲೈ 2-3ರಂದು ನಡೆಯುವ ಈ ಭೇಟಿಯಲ್ಲಿ ಘಾನಾದ ರಾಷ್ಟ್ರಪತಿ ಜಾನ್ ಡ್ರಮಾನಿ ಮಹಾಮಾರೊಡನೆ ಮಾತುಕತೆ ನಡೆಸಲಿದ್ದಾರೆ. ಆರ್ಥಿಕ ಸಹಕಾರ, ಲಸಿಕೆ ಉತ್ಪಾದನಾ ಕೇಂದ್ರ ಸ್ಥಾಪನೆ, ಡಿಜಿಟಲ್ ತಂತ್ರಜ್ಞಾನ ಮತ್ತು ಕೃಷಿ ಕ್ಷೇತ್ರದಲ್ಲಿ ಸಹಕಾರವನ್ನು ವೃದ್ಧಿಗೊಳಿಸುವುದು ಈ ಭೇಟಿಯ ಮುಖ್ಯ ಗುರಿಯಾಗಿದೆ. ಭಾರತ ಮತ್ತು ಘಾನಾದ ದ್ವಿಪಕ್ಷೀಯ ವ್ಯಾಪಾರವು 3 ಬಿಲಿಯನ್ ಡಾಲರ್ ಮೌಲ್ಯದ್ದಾಗಿದ್ದು, ಭಾರತವು ಘಾನಾದಿಂದ ಚಿನ್ನವನ್ನು ಆಮದು ಮಾಡಿಕೊಳ್ಳುವ ಪ್ರಮುಖ ರಾಷ್ಟ್ರವಾಗಿದೆ. ಈ ವೇಳೆ ಮೋದಿಯವರು ಘಾನಾದ ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಟ್ರಿನಿಡಾಡ್ ಮತ್ತು ಟೊಬಾಗೊ
ಜುಲೈ 3-4ರಂದು ಮೋದಿ ಟ್ರಿನಿಡಾಡ್ ಮತ್ತು ಟೊಬಾಗೊ ದೇಶಕ್ಕೆ ಭೇಟಿ ನೀಡಲಿದ್ದಾರೆ, 1999ರ ನಂತರ ಭಾರತದ ಪ್ರಧಾನಮಂತ್ರಿಯ ಮೊದಲ ಭೇಟಿ ಇದಾಗಿದೆ. ಈ ವರ್ಷ ಭಾರತೀಯ ವಲಸಿಗರು ಈ ದೇಶಕ್ಕೆ ಆಗಮಿಸಿದ 180ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದ್ದು, ಈ ಭೇಟಿಯು ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಟ್ರಿನಿಡಾಡ್‌ನ ರಾಷ್ಟ್ರಪತಿ ಕ್ರಿಸ್ಟಿನ್ ಕಾಂಗಲೂ ಮತ್ತು ಪ್ರಧಾನಮಂತ್ರಿ ಕಮಲಾ ಪರ್ಸಾದ್-ಬಿಸ್ಸೇಸರ್ ಇಬ್ಬರೂ ಭಾರತೀಯ ಮೂಲದವರಾಗಿದ್ದಾರೆ. ಇದು ಈ ಭೇಟಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಮೋದಿಯವರು ಟ್ರಿನಿಡಾಡ್ ಸಂಸತ್ತಿನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಯುಪಿಐ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲು ಒಪ್ಪಂದವನ್ನು ಮಾಡಿಕೊಳ್ಳಲಾಗುವುದು.
ಅರ್ಜೆಂಟೀನಾ
ಜುಲೈ 4-5ರಂದು, ಮೋದಿಯವರು ಅರ್ಜೆಂಟೀನಾಕ್ಕೆ ಭೇಟಿ ನೀಡಿ ರಾಷ್ಟ್ರಪತಿ ಜೇವಿಯರ್ ಮಿಲೇ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. 57 ವರ್ಷಗಳಲ್ಲಿ ಭಾರತದ ಪ್ರಧಾನ ಮಂತ್ರಿಯ ಮೊದಲ ಭೇಟಿ ಇದಾಗಿದೆ. ರಕ್ಷಣಾ ಸಹಕಾರ, ಕೃಷಿ, ಗಣಿಗಾರಿಕೆ, ಶೆಲ್ ಗ್ಯಾಸ್ ಮತ್ತು ನವೀಕರಣ ಶಕ್ತಿಯ ಕ್ಷೇತ್ರಗಳಲ್ಲಿ ಸಹಕಾರವನ್ನು ವೃದ್ಧಿಗೊಳಿಸುವುದು ಈ ಭೇಟಿಯ ಗುರಿಯಾಗಿದೆ. ಅರ್ಜೆಂಟೀನಾದಲ್ಲಿ ಭಾರತದ ಗಣಿಗಾರಿಕೆ ಕಂಪನಿಯಾದ KABIL ಲಿಥಿಯಂ ಮತ್ತು ತಾಮ್ರದಂತಹ ಅಪರೂಪದ ಖನಿಜಗಳ ಶೋಧನೆಗೆ ಒಪ್ಪಂದವನ್ನು ಮಾಡಿಕೊಂಡಿದೆ.
ಬ್ರೆಜಿಲ್:
ಜುಲೈ 5-8 ರಂದು, ಮೋದಿಯವರು ಬ್ರೆಜಿಲ್‌ಗೆ ಭೇಟಿ ನೀಡಿ 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಶೃಂಗಸಭೆಯು ಜಾಗತಿಕ ಆಡಳಿತ ಸುಧಾರಣೆ, ಶಾಂತಿ, ಎಐ ನಿಯಂತ್ರಣ, ಹವಾಮಾನ ಬದಲಾವಣೆ ಮತ್ತು ಆರೋಗ್ಯ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಲಿದೆ. ಭಾರತವು 2026ರಲ್ಲಿ ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ. ಬ್ರೆಜಿಲ್‌ನ ರಾಷ್ಟ್ರಪತಿ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಜೊತೆ ದ್ವಿಪಕ್ಷೀಯ ಮಾತುಕತೆಯಲ್ಲಿ ರಕ್ಷಣಾ ಉತ್ಪಾದನೆ, ಸಮುದ್ರ ಗಸ್ತು ಹಡಗುಗಳು, ಮತ್ತು ಆಕಾಶ್ ಕ್ಷಿಪಣಿ ವ್ಯವಸ್ಥೆಯಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಗಟ್ಟಿಗೊಳಿಸಲಾಗುವುದು. `ಆಪರೇಷನ್ ಸಿಂಧೂರ’ದಲ್ಲಿ ಬಳಸಲಾದ ಭಾರತದ ರಕ್ಷಣಾ ತಂತ್ರಜ್ಞಾನದ ಬಗ್ಗೆ ಬ್ರೆಜಿಲ್ ಆಸಕ್ತಿಯನ್ನು ತೋರಿದೆ.ಇದನ್ನೂ ಓದಿ: ರಾಜ್ಯದಲ್ಲಿ ಐದೂವರೆ ವರ್ಷದಲ್ಲಿ 82 ಹುಲಿಗಳ ಸಾವು; ಸಮಗ್ರ ವರದಿ ಕೇಳಿದ ಅರಣ್ಯ ಸಚಿವ
ನಮೀಬಿಯಾ:
ಭೇಟಿಯ ಕೊನೆಯ ತಾಣವಾದ ನಮೀಬಿಯಾಕ್ಕೆ ಜುಲೈ 9 ರಂದು ಮೋದಿಯವರು ಭೇಟಿ ನೀಡಲಿದ್ದಾರೆ. 27 ವರ್ಷಗಳಲ್ಲಿ ಭಾರತದ ಪ್ರಧಾನಮಂತ್ರಿಯ ಮೊದಲ ಭೇಟಿ ಇದಾಗಿದೆ. ನಮೀಬಿಯಾದ ರಾಷ್ಟ್ರಪತಿ ನೆಟುಂಬೊ ನಾಂಡಿ-ನ್ಡೈತ್ವಾಹ್ ಜೊತೆ ಮಾತುಕತೆ ನಡೆಸಲಾಗುವುದು ಮತ್ತು ಯುಪಿಐ ವ್ಯವಸ್ಥೆಯನ್ನು ಜಾರಿಗೆ ತರಲು ಒಪ್ಪಂದವನ್ನು ಮಾಡಿಕೊಳ್ಳಲಾಗುವುದು. ಮೋದಿಯವರು ನಮೀಬಿಯಾದ ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಡಿಕೋಲನೈಸೇಶನ್ ಐಕಾನ್ ಸ್ಯಾಮ್ ನುಜೋಮಗೆ ಗೌರವ ಸಲ್ಲಿಸಲಿದ್ದಾರೆ.
ಭಯೋತ್ಪಾದನೆಯ ವಿರುದ್ಧ ಜಾಗತಿಕ ನಿಲುವು
ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಮೇ 7ರಂದು ಪಾಕಿಸ್ತಾನದಲ್ಲಿನ ಉಗ್ರರ ತಾಣಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಕಾರ್ಯಾಚರಣೆಯೇ `ಆಪರೇಷನ್ ಸಿಂಧೂರ’. ಈ ಭೇಟಿಯು ಪ್ರಮುಖವಾಗಿ ಈ ಕಾರ್ಯಾಚರಣೆಗೆ ಸಂಬಂಧಿಸಿದೆ. ಇದು ಭಯೋತ್ಪಾದನೆಯ ವಿರುದ್ಧ ಭಾರತದ ಜಾಗತಿಕ ಕರೆಗೆ ಬೆಂಬಲವನ್ನು ಕೋರಲಿದೆ.
ಗ್ಲೋಬಲ್ ಸೌತ್‌ನೊಂದಿಗೆ ಭಾರತದ ರಾಜತಾಂತ್ರಿಕತೆ
ಈ ಐದು ರಾಷ್ಟ್ರಗಳ ಭೇಟಿಯು ಗ್ಲೋಬಲ್ ಸೌತ್ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ಬಲಪಡಿಸುವ ಒಂದು ಕಾರ್ಯತಂತ್ರದ ಹೆಜ್ಜೆಯಾಗಿದೆ. ರಕ್ಷಣಾ ಸಹಕಾರ, ಡಿಜಿಟಲ್ ಮೂಲಸೌಕರ್ಯ, ಕೃಷಿ, ಮತ್ತು ಶಕ್ತಿಯಂತಹ ಕ್ಷೇತ್ರಗಳಲ್ಲಿ ಭಾರತವು ತನ್ನ ಪಾಲುದಾರಿಕೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.ಇದನ್ನೂ ಓದಿ: ಎಷ್ಟೇ ದುಡ್ಡು ಕೊಟ್ರೂ `ಆ’ ಕೆಲಸ ಮಾಡಲ್ಲವೆಂದ ರಶ್ಮಿಕಾ!
ಬ್ಯೂನಸ್ ಐರಿಸ್: ಅರ್ಜೆಂಟೀನಾದ ಉಶುವಾಯಾದಿಂದ ದಕ್ಷಿಣಕ್ಕೆ 136 ಮೈಲುಗಳಷ್ಟು ದೂರದಲ್ಲಿರುವ ಡ್ರೇಕ್ ಪ್ಯಾಸೇಜ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ದಕ್ಷಿಣ ಚಿಲಿ (Chile) ಮತ್ತು ಅರ್ಜೆಂಟೀನಾದಲ್ಲಿ (Argentina) ಸುನಾಮಿ (Tsunami) ಎಚ್ಚರಿಕೆ ನೀಡಲಾಗಿದೆ.
❗️🌊🇨🇱🇦🇷 – URGENT: Tsunami Warning in Chile and Argentina:
Forecasts predict waves of up to three meters along Chile’s coast, prompting immediate concern. Authorities have issued evacuation orders for coastal areas in southern Chile to ensure public safety.
ಚಿಲಿಯ ಮಗಲ್ಲೇನ್ಸ್ ಪ್ರದೇಶ ಮತ್ತು ಅಂಟಾರ್ಕ್ಟಿಕ್ ಪ್ರದೇಶದ ಕರಾವಳಿ ಪ್ರದೇಶಗಳಲ್ಲಿ 3 ಮೀಟರ್‌ಗಳವರೆಗೆ ಅಲೆಗಳು ಏಳವ ಸಾಧ್ಯತೆ ಇದೆ. ಇದರಿಂದ ಸ್ಥಳೀಯ ನಿವಾಸಿಗಳು ತಕ್ಷಣವೇ ಎತ್ತರದ ಪ್ರದೇಶಕ್ಕೆ ಹೋಗುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಜೊತೆ ವಿಜಯನ್, ತರೂರ್ ಕುಳಿತಿರುವುದು ಹಲವರ ನಿದ್ದಗೆಡಿಸುತ್ತೆ: ಮೋದಿ
ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದೆ. ಚಿಲಿಯ ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ವಹಣಾ ಕಚೇರಿ (ONEMI) ಸ್ಥಳಾಂತರಗೊಂಡ ನಿವಾಸಿಗಳಿಗೆ ತಾತ್ಕಾಲಿಕ ಆಶ್ರಯದ ವ್ಯವಸ್ಥೆ ಮಾಡಿದೆ ಎಂದು ವರದಿಯಾಗಿದೆ.
ಎರಡೂ ದೇಶಗಳ ಕರಾವಳಿ ಭಾಗಗಳು ಹೆಚ್ಚಿನ ಅಪಾಯದಲ್ಲಿದ್ದು, ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಮಾಹಿತಿ ಪಡೆಯಲಾಗುತ್ತಿದೆ. ಕರಾವಳಿಯ ನಿವಾಸಿಗಳು ಅಧಿಕೃತ ಮಾಹಿತಿ ನೀಡುವವರೆಗೆ ಮತ್ತು ಕರಾವಳಿ ಪ್ರದೇಶಗಳಲ್ಲಿ ಅಲೆಗಳ ಆತಂಕ ಕಡಿಮೆಯಾಗುವವರೆಗೂ ಸುರಕ್ಷಿತ ಪ್ರದೇಶಗಳಲ್ಲೇ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಭಾರೀ ಮಳೆ; ಹಲವೆಡೆ ಧರೆಗುರುಳಿದ ಮರ – ಎಲ್ಲೆಲ್ಲಿ ಎಷ್ಟು ಮಳೆ?
ನವದೆಹಲಿ: ಭಾರತ (India) ಮತ್ತು ಅರ್ಜೆಂಟೀನಾ (Argentina) ನಡುವೆ 5 ಲಿಥಿಯಂ ಬ್ಲಾಕ್‌ಗಳ ಪರಿಶೋಧನೆ ಹಾಗೂ ಗಣಿಗಾರಿಕೆಗೆ ಒಪ್ಪಂದ ಏರ್ಪಟ್ಟಿದೆ.
ಅರ್ಜೆಂಟೀನಾದ ಕ್ಯಾಟಮಾರ್ಕಾ ಪ್ರಾಂತ್ಯದಲ್ಲಿ 5 ಲಿಥಿಯಂ ಬ್ಲಾಕ್‌ಗಳ ಪರಿಶೋಧನೆ ಮತ್ತು ಗಣಿಗಾರಿಕೆ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ ಎಂದು ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಟ್ವಿಟ್ಟರ್ ಮೂಲಕ ಮಾಹಿತಿ ರವಾನಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ರೇಸ್‌ನಿಂದ ಹೊರಗುಳಿದ ಭಾರತೀಯ ಮೂಲದ ವಿವೇಕ್ – ಟ್ರಂಪ್‌ಗೆ ಬೆಂಬಲ
ಅರ್ಜೆಂಟೀನಾದಲ್ಲಿ 5 ಲಿಥಿಯಂ ಬ್ಲಾಕ್‌ಗಳಲ್ಲಿ ಗಣಿಗಾರಿಕೆ (Lithium Mining) ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಹಿ ಹಾಕುವ ಮೂಲಕ ಭಾರತ ಹೊಸ ಮೈಲಿಗಲ್ಲು ಸಾಧಿಸಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಎಂಎಸ್ ಧೋನಿಗೆ ಆಹ್ವಾನ
ಬೀಜಿಂಗ್: ಜೂನ್ 15ರಂದು ವರ್ಕಸ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ನಡೆಯಲಿರುವ ಸೌಹಾರ್ದ ಪಂದ್ಯಕ್ಕೆ ತೆರಳುತ್ತಿದ್ದ ವೇಳೆ ಅರ್ಜೆಂಟೀನಾ ಫುಟ್ಬಾಲ್ ತಂಡದ (Argentina Football Team) ನಾಯಕ ಲಿಯೋನೆಲ್ ಮೆಸ್ಸಿ (Lionel Messi) ಅವರನ್ನು ಬೀಜಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಘಟನೆ ನಡೆದಿದೆ.
Earlier today at the Beijing airport, Leo Messi faced some issues with his passport. pic.twitter.com/rLNwI3W4nJ
— Leo Messi ???? Fan Club (@WeAreMessi) June 10, 2023
ಅರ್ಜೆಂಟೀನಾ ಮತ್ತು ಆಸ್ಟ್ರೇಲಿಯಾ ನಡುವಿನ ಸೌಹಾರ್ದ ಪಂದ್ಯದಲ್ಲಿ ತನ್ನ ದೇಶವನ್ನು ಮುನ್ನಡೆಸಲು ಲಿಯೋನೆಲ್ ಮೆಸ್ಸಿ ಚೀನಾಕ್ಕೆ ಆಗಮಿಸಿದರು. ಆಗ ಅವರನ್ನು ಚೀನಾದ ಬಾರ್ಡರ್ ಪೊಲೀಸರು (Chinese Border Police) ವಿಮಾನ ನಿಲ್ದಾಣದಲ್ಲಿ ತಡೆದು ಬಂಧಿಸಿದರು.
ಮೂಲಗಳ ಪ್ರಕಾರ, ಮೆಸ್ಸಿ ಅವರ ವೀಸಾ ವಿಳಂಬವಾಗಿತ್ತು. ಮೆಸ್ಸಿ ತಮ್ಮ ಅರ್ಜೆಂಟೀನಾದ ಪಾಸ್‌ಪೋರ್ಟ್ ಬದಲಾಗಿ ತಮ್ಮ ಸ್ಪ್ಯಾನಿಷ್ ಪಾಸ್‌ಪೋರ್ಟ್ನೊಂದಿಗೆ ಪ್ರಯಾಣಿಸಿದ್ದರು. ಆದರೆ ಅದು ಚೀನಾ ವೀಸಾವನ್ನು (Chinese Visa) ಹೊಂದಿರಲಿಲ್ಲ. ತಮ್ಮ ಅಜಾಗರೂಕತೆಯಿಂದಾಗಿ ಮೆಸ್ಸಿ ಚೀನಾ ಬಾರ್ಡರ್ ಪೊಲೀಸರಿಂದ ಬಂಧಿತರಾಗಿದ್ದರು. ಸುಮಾರು 30 ನಿಮಿಷಗಳ ನಂತರ ಪರಿಸ್ಥಿತಿಯನ್ನು ಬಗೆಹರಿಸಲಾಯಿತು. ಅನಂತರ ಲಿಯೋನೆಲ್ ಮೆಸ್ಸಿ ವಿಮಾನ ನಿಲ್ದಾಣದಿಂದ ನಿರ್ಗಮಿಸಿದರು.
ಮೆಸ್ಸಿ ಫುಟ್ಬಾಲ್ ಲೋಕದಲ್ಲಿ ಶ್ರೀಮಂತ ಆಟಗಾರರಲ್ಲಿ ಒಬ್ಬರು. ಅವರು ಈವರೆಗೆ ಬಾರ್ಸಿಲೋನಾ ಕ್ಲಬ್ ಪರ 778 ಪಂದ್ಯಗಳ ಮೂಲಕ ಬರೋಬ್ಬರಿ 672 ಗೋಲ್‌ಗಳನ್ನು ಬಾರಿಸಿದ್ದಾರೆ. ಮೆಸ್ಸಿ 21 ವರ್ಷದವರಿದ್ದಾಗಲೇ 8 ಗೋಲುಗಳನ್ನು ಸಿಡಿಸುವ ಮೂಲಕ ಅಸಾಧಾರಣ ಪ್ರತಿಭೆ ಪ್ರದರ್ಶಿಸಿದ್ದರು. ಜೊತೆಗೆ ಅರ್ಜೆಂಟೀನಾ ತಂಡ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ನಿರ್ಣಾಯಕ ಪಾತ್ರ ವಹಿಸಿದ್ದರು. ಈ ಹಿಂದೆ ನಡೆದ ಫಿಫಾ ವಿಶ್ವಕಪ್‌ನಲ್ಲೂ ಮೆಸ್ಸಿ ಮ್ಯಾಜಿಕ್‌ನಿಂದಾಗಿಯೇ ಅರ್ಜೆಂಟೀನಾ ಕಪ್ ಗೆಲ್ಲಲು ಸಾಧ್ಯವಾಗಿತ್ತು. ಇದನ್ನೂ ಓದಿ: ICC ಟೂರ್ನಿಗಳಲ್ಲಿ ಟೀಂ ಇಂಡಿಯಾ ಫೇಲ್ ಆಗ್ತಿರೋದೇಕೆ? – ಕಾರಣ ತಿಳಿಸಿದ ChatGPT
ಬ್ಯೂನಸ್ ಐರಿಸ್: ಫಿಫಾ ವಿಶ್ವಕಪ್ (FIFA WorldCup) ವಿಜೇತ, ಅಜೆಂಟಿನಾ ಫುಟ್ಬಾಲ್ ತಂಡದ ನಾಯಕ ಲಿಯೋನಲ್ ಮೆಸ್ಸಿ (Lionel Messi) ಅವರ ಕುಟುಂಬಕ್ಕೆ ಸೇರಿದ ಸೂಪರ್ ಮಾರ್ಕೆಟ್ ಮೇಲೆ ಗುಂಡಿನ ದಾಳಿ ನಡೆಸಿದ್ದು, ಮೆಸ್ಸಿಗೂ ಬೆದರಿಕೆ ನೀಡಿದ್ದಾರೆ.
ರಾತ್ರೋ ರಾತ್ರಿ ಬಂದ ಇಬ್ಬರು ಬಂದೂಕುದಾರಿಗಳು ಸೂಪರ್ ಮಾರ್ಕೆಟ್ (Messi Super Market) ಮುಂಭಾಗಕ್ಕೆ 14 ಗುಂಡುಗಳನ್ನು ಹಾರಿಸಿದ್ದಾರೆ. ಜೊತೆಗೆ `ಮೆಸ್ಸಿ, ನಾವು ನಿಮಗಾಗಿ ಕಾಯುತ್ತಿದ್ದೇವೆ. ಜಾವ್ಕಿನ್ ಒಬ್ಬ ನಾರ್ಕೋ, ಅವನು… ನಿನ್ನನ್ನ ನೋಡಿಕೊಳ್ಳುವುದಿಲ್ಲ’ ಎಂದು ಕೈಬರಹ ಸಂದೇಶವನ್ನು ಬರೆದುಹೋಗಿದ್ದಾರೆ. ಆ ಸಮಯದಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಪಾಬ್ಲೊ ಜಾವ್ಕಿನ್ ಅವರು ಮೆಸ್ಸಿಯ ತವರು ರೊಸಾರಿಯೊದ ಮೇಯರ್ ಆಗಿದ್ದಾರೆ. ಅಲ್ಲಿ ಮೆಸ್ಸಿ ಕುಟುಂಬದ ಸೂಪರ್ ಮಾರ್ಕೆಟ್ ಇದೆ. ಇದು ರಾಜಧಾನಿ ಬ್ಯೂನಸ್ ಐರಿಸ್ ನಿಂದ ವಾಯುವ್ಯಕ್ಕೆ 320 ಕಿಮೀ ದೂರದಲ್ಲಿದೆ.
ಇಬ್ಬರು ವ್ಯಕ್ತಿಗಳು 3 ಗಂಟೆ ಸುಮಾರಿಗೆ ಮೋಟಾರ್ ಬೈಕ್‌ನಲ್ಲಿ ಬಂದಿರುವುದನ್ನು ಪ್ರತ್ಯಕ್ಷದರ್ಶಿಗಳು ದೃಢಪಡಿಸಿದ್ದಾರೆ. ಅವರಲ್ಲಿ ಒಬ್ಬರು ಇಳಿದು ಗುಂಡು ಹಾರಿಸಿದ ಎಂದಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರು (Police) ತನಿಖೆ ಕೈಗೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: WPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ಬಾಲಿವುಡ್ ತಾರೆಯರು
ರೊಸಾರಿಯೊ ಪರಾನಾ ನದಿಯ ಬಂದರು ನಗರವಾಗಿದೆ. ಇದೀಗ ಮಾದಕವಸ್ತು ಕಳ್ಳಸಾಗಣೆಯ ಕೇಂದ್ರವಾಗಿ ಮಾರ್ಪಟ್ಟಿದ್ದು, ಅರ್ಜೆಂಟಿನಾದ ಅತ್ಯಂತ ಹಿಂಸಾತ್ಮಕ ನಗರ ಎನಿಸಿಕೊಂಡಿದೆ. 2022ರಲ್ಲಿಯೂ ಈ ನಗರದಲ್ಲಿ 287 ಹತ್ಯೆಗಳು ನಡೆದಿವೆ. ಇದನ್ನೂ ಓದಿ: ಎರಡನೇ ದಿನ 16 ವಿಕೆಟ್ ಪತನ – ಆಸೀಸ್ ಗೆಲುವಿಗೆ ಬೇಕು 76 ರನ್
ಪ್ಯಾರಿಸ್: 2022ರ ಫಿಫಾ ವಿಶ್ವಕಪ್ (FIFA WorldCup 2022) ಚಾಂಪಿಯನ್ ಆಗಿ ಹೊರಹೊಮ್ಮಿದ ಅರ್ಜೆಂಟಿನಾ ತಂಡದ ಕ್ಯಾಪ್ಟನ್ ಲಿಯೋನೆಲ್ ಮೆಸ್ಸಿ (Lionel Messi) `2022ರ ಅತ್ಯುತ್ತಮ ಪುರುಷ ಆಟಗಾರ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ಯಾರಿಸ್‌ನ ಸಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮೆಸ್ಸಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಫಿಫಾ ಫುಟ್ಬಾಲ್ ಫೈನಲ್‌ನಲ್ಲಿ ನಾಯಕ ಲಿಯೋನೆಲ್ ಮೆಸ್ಸಿ ಅವರ ಅದ್ಭುತ ಆಟದಿಂದಾಗಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದನ್ನೂ ಓದಿ: RCB, MI, Delhi ಅಭಿಮಾನಿಗಳಿಗೆ ನಿರಾಸೆ – 2023ರ ಐಪಿಎಲ್‌ನಿಂದ ಈ ಸ್ಟಾರ್ ಆಟಗಾರರು ಔಟ್
ಕಾಲ್ಚೆಂಡಿನ ಈ ಕ್ಲೈಮ್ಯಾಕ್ಸ್ ಪಂದ್ಯದಲ್ಲಿ ಮ್ಯಾಜಿಕ್ ಮೆಸ್ಸಿ 2 ಗೋಲುಗಳನ್ನು ಬಾರಿಸುವ ಮೂಲಕ ವಿಶ್ವಕಪ್ ಗೆಲುವಿನ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದರು. ಅಲ್ಲದೇ ಫಿಫಾದಲ್ಲಿ ಒಟ್ಟು 13 ಗೂಲುಗಳನ್ನು ಬಾರಿಸಿದ್ದರು. ಫಿಫಾದಲ್ಲಿ ಬೆಸ್ಟ್ ಪರ್ಫಾರ್ಮೆನ್ಸ್ ನೀಡಿದ ಮೆಸ್ಸಿ ಇದೀಗ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ: ಬೆತ್ ಮೂನಿ ಭರ್ಜರಿ ಫಿಫ್ಟಿ – ಆಸ್ಟ್ರೇಲಿಯಾಗೆ 6ನೇ ಬಾರಿಗೆ ವಿಶ್ವಕಪ್ ಚಾಂಪಿಯನ್ ಕಿರೀಟ
ಇದರೊಂದಿಗೆ ಅರ್ಜೆಂಟೀನಾ (Argentina) ಕೋಚ್ ಲಿಯೋನೆಲ್ ಸ್ಕಾಲೋನಿ ಅತ್ಯುತ್ತಮ ಪುರುಷ ಕೋಚ್ ಪ್ರಶಸ್ತಿ ಪಡೆದಿದ್ದಾರೆ. ಎಮಿಲಿಯಾನೋ ಮಾರ್ಟಿನೆಜ್ (ಅರ್ಜೆಂಟೀನಾ) ಅತ್ಯುತ್ತಮ ಪುರುಷರ ಗೋಲ್‌ಕೀಪರ್ ಪ್ರಶಸ್ತಿ ಮುಡಿಗೇರಿಸಿಕೊಂಡರೇ, ಅರ್ಜೆಂಟೀನಾದ ಬೆಂಬಲಿಗರು `ಅತ್ಯುತ್ತಮ ಅಭಿಮಾನಿ’ ಪ್ರಶಸ್ತಿಯನ್ನ ಪಡೆದು ಸಂಭ್ರಮಿಸಿದ್ದಾರೆ.
ಬಳಿಕ ಮೆಸ್ಸಿ ಮಾತನಾಡಿ, ಇದೊಂದು ಅದ್ಭುತ ವರ್ಷ, ನಾನಿಲ್ಲಿ ಬಂದು ಪ್ರಶಸ್ತಿ ಸ್ವೀಕರಿಸುತ್ತಿರುವುದು ನನಗೆ ಮಹತ್ತರ ಗೌರವವೆನಿಸಿದೆ. ಅಲ್ಲದೇ ನಾನು ನನ್ನ ಕನಸು ನನಸಾಗಿಸಿಕೊಂಡಿದ್ದೇನೆ ಎಂಬ ಸಂತೋಷವಿದೆ ಎಂದು ಭಾವುಕರಾದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಫ್ರಾನ್ಸ್ ತಂಡದ ನಾಯಕ ಕಿಲಿಯನ್ ಎಂಬಾಪ್ಪೆ (Mbappe) ಸಹ ಮೆಸ್ಸಿಯೊಂದಿಗೆ ಪಾಲ್ಗೊಂಡಿದ್ದರು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಅರ್ಜೆಂಟೀನಾ (Argentina) ಫುಟ್ಬಾಲ್ ತಂಡದ ನಾಯಕ ಲಿಯೊನೆಲ್ ಮೆಸ್ಸಿ (Lionel Messi) ಹೆಸರಿನ ಜೆರ್ಸಿಯನ್ನು ಉಡುಗೊರೆಯಾಗಿ ನೀಡಲಾಗಿದೆ.
ಬೆಂಗಳೂರಿನಲ್ಲಿ (Bengaluru) ನಡೆದ ಇಂಡಿಯಾ ಎನರ್ಜಿ ವೀಕ್‌ನ ಅಂಗವಾಗಿ ಅರ್ಜೆಂಟೀನಾದ ವೈಪಿಎಫ್ ಅಧ್ಯಕ್ಷ ಪಾಬ್ಲೊ ಗೊನ್ಜಾಲೆಜ್ ಅವರು, ವಿಶ್ವಕಪ್ ವಿಜೇತ ಚಾಂಪಿಯನ್ ಲಿಯೊನೆಲ್ ಮೆಸ್ಸಿ ಅವರ ಹೆಸರನ್ನು ಒಳಗೊಂಡ ಅರ್ಜೆಂಟೀನಾ ಫುಟ್ಬಾಲ್ ತಂಡದ ಜೆರ್ಸಿಯನ್ನು (Messi Jersey) ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ – ವಿಕ್ಟೋರಿಯಾ ಗೌರಿ ಪ್ರಮಾಣ ವಚನ ಸ್ವೀಕಾರ
This will be remembered as one of the most thrilling Football matches! Congrats to Argentina on becoming #FIFAWorldCup Champions! They’ve played brilliantly through the tournament. Millions of Indian fans of Argentina and Messi rejoice in the magnificent victory! @alferdez
ಕಳೆದ ವರ್ಷ ಡಿಸೆಂಬರ್‌ನಲ್ಲಿ ಅರ್ಜೆಂಟೀನಾ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡದ ವಿರುದ್ಧ ಜಯಗಳಿಸಿತು. ಅರ್ಜೆಂಟೀನಾ ಪೆನಾಲ್ಟಿಗಳಲ್ಲಿ 4-2 ಗೋಲುಗಳಿಂದ ಅಂತಿಮ ಪಂದ್ಯವನ್ನು ಗೆದ್ದುಕೊಂಡಿತು.
ಫಿಫಾ 2022 ವಿಶ್ವಕಪ್ (FIFA World Cup 2022) ಗೆದ್ದ ಅರ್ಜೆಂಟೀನಾವನ್ನು ಅಭಿನಂದಿಸಿದ್ದ ಪ್ರಧಾನಿ ಮೋದಿ, ಅರ್ಜೆಂಟೀನಾ ಮತ್ತು ಲಿಯೊನೆಲ್ ಮೆಸ್ಸಿ ಅವರ ವಿಜಯವನ್ನು ಲಕ್ಷಾಂತರ ಭಾರತೀಯರು ಆಚರಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದರು.
“ಇದು ಅತ್ಯಂತ ರೋಮಾಂಚಕ ಫುಟ್‌ಬಾಲ್ ಪಂದ್ಯಗಳಲ್ಲಿ ಒಂದಾಗಿ ನೆನಪಿನಲ್ಲಿ ಉಳಿಯುತ್ತದೆ. FIFA World Cup ಚಾಂಪಿಯನ್ ಆದ ಅರ್ಜೆಂಟೀನಾಗೆ ಅಭಿನಂದನೆಗಳು. ಟೂರ್ನಿಯಲ್ಲಿ ಅವರು ಅದ್ಭುತವಾಗಿ ಆಡಿದ್ದಾರೆ. ಅರ್ಜೆಂಟೀನಾ ಮತ್ತು ಮೆಸ್ಸಿಯ ಲಕ್ಷಾಂತರ ಭಾರತೀಯ ಅಭಿಮಾನಿಗಳು ವಿಜಯದಲ್ಲಿ ಭಾಗಿಯಾಗಿದ್ದಾರೆ” ಎಂದು ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದರು. ಇದನ್ನೂ ಓದಿ: T20I ನಾಯಕ ಆರನ್ ಫಿಂಚ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ
Live Tv
[brid partner=56869869 player=32851 video=960834 autoplay=true]
ಬ್ಯೂನಸ್ ಐರಿಸ್: 36 ವರ್ಷಗಳ ಬಳಿಕ ಫಿಫಾ ವಿಶ್ವಕಪ್ (FIFA World Cup 2022) ಗೆದ್ದ ಅರ್ಜೆಂಟೀನಾ (Argentina) ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಬ್ಯೂನಸ್ ಐರಿಸ್‌ನಲ್ಲಿ 46 ಲಕ್ಷ ಮಂದಿ ಬೀದಿಗಳಲ್ಲಿ ಸಂಭ್ರಮಿಸುತ್ತಾ ವಿಶ್ವ ವಿಜೇತ ಮೆಸ್ಸಿ (Lionel Messi) ಪಡೆಯನ್ನು ಸ್ವಾಗತಿಸಿದ್ದಾರೆ. ಬಸ್ ಟಾಪಲ್ಲಿ ಕುಳಿತು, ನಿಂತು ಕರತಾಡನ ಮಾಡುವ ಮೂಲಕ ಲಕ್ಷಾಂತರ ಅಭಿಮಾನಿಗಳ ಪ್ರೀತಿಯನ್ನು ಕಣ್ತುಂಬಿಕೊಂಡಿದ್ದಾರೆ.
ಇದೀಗ ಮ್ಯಾಜಿಕ್ ಮೆಸ್ಸಿ ಕೈಯಲ್ಲಿ ಅರಳಿದ ಟ್ಯಾಟು (lotus Tattoo) ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ಮೆಸ್ಸಿ ಬಲಗೈನಲ್ಲಿ ಕೇಸರಿ ಬಣ್ಣದಲ್ಲಿ ಬಿಡಿಸಿದ ಟ್ಯಾಟು ಒಂದು ಬಿಜೆಪಿ ಪಕ್ಷದ ಚಿನ್ಹೆಯನ್ನೇ ಹೋಲುವಂತಿದೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇದು ಈಗ ಭಾರತೀಯರ ಗಮನ ಸೆಳೆದಿದೆ. `ಮೆಸ್ಸಿ ಗೆಲುವು ಕೂಡಾ ಬಿಜೆಪಿ (BJP) ಕೈಯಲ್ಲಿದೆ’ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: 2ನೇ ಟೆಸ್ಟ್ ಆರಂಭಕ್ಕೂ ಮುನ್ನ ಗಾಯಗೊಂಡ ಕ್ಯಾಪ್ಟನ್ ರಾಹುಲ್ – ಟೀಂ ಇಂಡಿಯಾಗೆ ಪೂಜಾರ ಸಾರಥಿ?
ವಿಜಯೋತ್ಸವದಲ್ಲಿ ತಪ್ಪಿದ ದುರಂತ:
ಇನ್ನೂ ಅರ್ಜೆಂಟೀನಾ ಸಂಭ್ರಮಿಸುತ್ತಿದ್ದ ಈ ಹೊತ್ತಲ್ಲೇ ಮೆಸ್ಸಿ ಪಡೆ ಭಾರೀ ಅವಘಡದಿಂದ ಪಾರಾಗಿದೆ. ಬಸ್ ಮೇಲ್ಭಾಗದಲ್ಲಿ ಕುಳಿತು ಚಲಿಸುವಾಗ ವಿದ್ಯುತ್ ತಂತಿಯೊಂದ್ರಿಂದ ಸ್ವಲ್ಪದ್ರಲ್ಲಿ ಪಾರಾಗಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಟಿ ಅನನ್ಯ ಪಾಂಡೆ ಕಾಪಿ ಮಾಡಿದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ
ಓರ್ವ ಆಟಗಾರನ ಕ್ಯಾಪ್ ವಿದ್ಯುತ್ ತಂತಿಗೆ ತಗುಲಿ ಕೆಳಗೆ ಬಿದ್ದಿದೆ. ಇನ್ನೂ ಮೆಸ್ಸಿ ಪಡೆ ತೆರಳ್ತಿದ್ದ ಓಪನ್ ಟಾಪ್ ಬಸ್ ಮೇಲೆ ಕೆಲ ಅಭಿಮಾನಿಗಳು ಸೇತುವೆ ಮೇಲಿಂದ ಜಿಗಿದಿದ್ದಾರೆ. ಕೆಲವರು ಚಲಿಸ್ತಿದ್ದ ಬಸ್ ಹತ್ತಲು ಪ್ರಯತ್ನಿಸಿದ್ದಾರೆ. ಲಕ್ಷಾಂತರ ಮಂದಿ ಅಭಿಮಾನಿಗಳಿಂದಾಗಿ ಒಂದು ಹಂತದಲ್ಲಿ ಬಸ್ ಮುಂದಕ್ಕೆ ಚಲಿಸೋದೇ ಕಷ್ಟವಾಗಿತ್ತು. ಇದ್ರಿಂದಾಗಿ ಮೆರವಣಿಗೆಯನ್ನು ಅರ್ಧಕ್ಕೆ ನಿಲ್ಲಿಸಲಾಯ್ತು.
ಮೆಸ್ಸಿ ಪಡೆಯನ್ನು ಹೆಲಿಕಾಪ್ಟರ್ ಮೂಲಕ ಫುಟ್ಬಾಲ್ ಸಂಘದ ಪ್ರಧಾನ ಕಚೇರಿಗೆ ಕರೆದೊಯ್ಯಲಾಗಿದೆ. ವಿಜಯೋತ್ಸವದ ಮೆರವಣಿಗೆ ಅರ್ಧಕ್ಕೆ ಮೊಟಕಾಗಿದ್ದಕ್ಕೆ ಫುಟ್ಬಾಲ್ ಸಂಘ ಅಭಿಮಾನಿಗಳ ಕ್ಷಮೆ ಕೇಳಿದೆ.
Live Tv
[brid partner=56869869 player=32851 video=960834 autoplay=true]