Tag: Aresst

  • ಒಂದೇ ಗ್ರಾಮದಲ್ಲಿದ್ದ 33 ಸೈಬರ್ ವಂಚಕರು ಅರೆಸ್ಟ್

    ಒಂದೇ ಗ್ರಾಮದಲ್ಲಿದ್ದ 33 ಸೈಬರ್ ವಂಚಕರು ಅರೆಸ್ಟ್

    ಪಾಟ್ನಾ: ಸೈಬರ್ ವಂಚನೆಯಲ್ಲಿ ತೊಡಗಿದ್ದ 33 ವಂಚಕರನ್ನು ಬಿಹಾರದ ಥಾಲಪೋಶ್ ಗ್ರಾಮದಲ್ಲಿ ಬಂಧಿಸಲಾಗಿದೆ.

    ಸ್ಥಳೀಯ ಮಾಹಿತಿದಾರರು ನೀಡಿದ ಸುಳಿವಿನ ಮೇರೆಗೆ ದಾಳಿ ನಡೆಸಲಾಗಿದೆ. ಅದರಂತೆ, ವಿಶೇಷ ತಂತ್ರಗಳು ಮತ್ತು ಶಸ್ತ್ರಾಸ್ತ್ರಗಳ ಜಂಟಿ ತಂಡ ಹಾಗೂ ನಾವಡ ಪೊಲೀಸರು ಗ್ರಾಮದ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಾವಡದ ಎಸ್‍ಡಿಪಿಒ ಮುಖೇಶ್ ಸಹಾ ತಿಳಿಸಿದ್ದಾರೆ.

    ನಾವು ಇಲ್ಲಿಯವರೆಗೆ ಒಂದೇ ದಾಳಿಯಲ್ಲಿ ಅತಿ ಹೆಚ್ಚು ಸೈಬರ್ ವಂಚಕರನ್ನು ಬಂಧಿಸಿದ್ದೇವೆ. 3 ಲ್ಯಾಪ್‍ಟಾಪ್‍ಗಳು, 3 ಡಜನ್‍ಗಿಂತಲೂ ಹೆಚ್ಚು ಮೊಬೈಲ್ ಫೋನ್‍ಗಳು, 1 ಮೋಟಾರ್ ಬೈಕ್ ಮತ್ತು ಇತರ ಉಪಕರಣಗಳನ್ನು ವಂಚಕರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಿರಿಯ ಗಾಯಕ ಬಪ್ಪಿ ಲಹರಿ ಇನ್ನಿಲ್ಲ

    ಅಪರಾಧಗಳನ್ನು ಕಾರ್ಯಗತಗೊಳಿಸಲು ಪ್ರತಿದಿನ ಥಾಲಪೋಶ್ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಸೈಬರ್ ವಂಚಕರು ಸೇರುತ್ತಿದ್ದರು. ಈ ಕುರಿತು ನಾವಡ ಎಸ್ಪಿಗೆ ಮಾಹಿತಿ ನೀಡಿ ಎರಡು ಠಾಣೆಗಳ ಪೊಲೀಸ್ ಸಿಬ್ಬಂದಿ ಹಾಗೂ ಸ್ವಾಟ್ ತಂಡವನ್ನೊಳಗೊಂಡ ದೊಡ್ಡ ತಂಡವನ್ನು ರಚಿಸಿ ಗ್ರಾಮಕ್ಕೆ ದಾಳಿ ಮಾಡಿದೆವು ಎಂದು ತಿಳಿಸಿದರು.

    ಗ್ರಾಮದ ಕೃಷಿ ಭೂಮಿಯಲ್ಲಿ ವಂಚಕರು ಜಮಾಯಿಸಿದ್ದರು. ಪೊಲೀಸರನ್ನು ಕಂಡ ಅವರು ಪರಾರಿಯಾಗಲು ಯತ್ನಿಸಿದರು. ಆದರೂ ನಾವು ಅವರನ್ನು ಬೆನ್ನಟ್ಟಿ 33 ಮಂದಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು. ಇದನ್ನೂ ಓದಿ: ಹಿಜಬ್‍ಗಾಗಿ ಪಟ್ಟು ಹಿಡಿದ ವಿದ್ಯಾರ್ಥಿನಿಯರ ಮನವೊಲಿಸಿದ ಅಧಿಕಾರಿಗಳು

    ಕೆಲವು ಸೈಬರ್ ಆರೋಪಿಗಳು ಸ್ಥಳದಿಂದ ಪರಾರಿಯಾದರು. ಅವರು ಅಪರಾಧವನ್ನು ಕಾರ್ಯಗತಗೊಳಿಸಲು ಕೃಷಿ ಕ್ಷೇತ್ರದಲ್ಲಿ ವರ್ಚುವಲ್ ಕಾಲ್ ಸೆಂಟರ್ ನಡೆಸುತ್ತಿದ್ದರು ಎಂದರು.

    ಗ್ರಾಮದಲ್ಲಿ ಮೊಬೈಲ್ ಟವರ್‌ಗಳ ಸಿಗ್ನಲ್ ಚೆನ್ನಾಗಿದ್ದ ಕಾರಣ ಅವರು ಅಪರಾಧವನ್ನು ಕಾರ್ಯಗತಗೊಳಿಸಲು ಆ ಗ್ರಾಮದಲ್ಲಿ ಸೇರುತ್ತಿದ್ದರು ಎಂದು ಮಾಹಿತಿ ನೀಡಿದರು.

    ವಂಚಕರು ಮೊಬೈಲ್ ಸಂಖ್ಯೆಗಳಲ್ಲಿ ಪಠ್ಯ ಸಂದೇಶಗಳು ಮತ್ತು ಲಿಂಕ್‍ಗಳನ್ನು ಕಳುಹಿಸುತ್ತಿದ್ದರು. ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡು ಕರೆಗಳನ್ನು ಅನುಸರಿಸುತ್ತಾರೆ. ಆ ಲಿಂಕ್‍ಗಳಿಗೆ ಯಾರಾದರೂ ಉತ್ತರಿಸಿದರೆ, ಅವರು ಆ ವ್ಯಕ್ತಿಗಳನ್ನು ವಂಚಿಸುತ್ತಿದ್ದರು ಎಂದು ತಿಳಿಸಿದರು.

  • ಬೆಂಗಳೂರಿನಲ್ಲಿ ಕುಖ್ಯಾತ ಮೂವರು ಕಳ್ಳರು ಅರೆಸ್ಟ್

    ಬೆಂಗಳೂರಿನಲ್ಲಿ ಕುಖ್ಯಾತ ಮೂವರು ಕಳ್ಳರು ಅರೆಸ್ಟ್

    ಬೆಂಗಳೂರು: ಕುಖ್ಯಾತ 3 ಕಳ್ಳರನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 30 ಲಕ್ಷ ಬೆಲೆಬಾಳುವ 65 ಗ್ರಾಂ ಚಿನ್ನ, 25 ಬೈಕ್ 1 ಆಟೋ, ವಿವಿಧ ಕಂಪನಿಯ 24 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಕಬೀರ್ ಪಾಷಾ, ಸಯ್ಯದ್ ಖಲೀಂ, ಅಪ್ತಬ್ ಪಾಷಾ ಬಂಧಿತ ಆರೋಪಿಗಳು. ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಸುಲಿಗೆ, ಬೆಂಗಳೂರಿನ ಬ್ಯಾಟರಾಯನಪುರ, ಕೆಂಗೇರಿ, ವಿಜಯ ನಗರ, ಚಂದ್ರಾಲೇಔಟ್, ಕೆ.ಪಿ ಅಗ್ರಹಾರ, ಚಾಮರಾಜಪೇಟೆ, ಡಿ.ಜೆ.ಹಳ್ಳಿ, ಗೋವಿಂದರಾಜನಗರ, ಸುಬ್ರಮಣ್ಯನಗರ ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದಾರೆ.  ಇದನ್ನೂ ಓದಿ: ಬಿಜೆಪಿ ತನ್ನ ಅನುಕೂಲಕ್ಕಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ: ಉದ್ಧವ್ ಠಾಕ್ರೆ

    ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಕ್ ಕಳ್ಳತನ ಪ್ರಕರಣದಲ್ಲಿ ಆರೋಪಿಗಳು ಸಿಕ್ಕಿ ಬಿದ್ದಾಗ ಅಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ.

    ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಕಲೇಶಪುರದಲ್ಲಿ ಕಲ್ಲು ಎತ್ತಿ ಹಾಕಿ ವೃದ್ಧೆಯ ಬರ್ಬರ ಹತ್ಯೆ

  • ತ್ರಿಬಲ್ ಎಕ್ಸ್ ವಾಟ್ಸಪ್ ಗ್ರೂಪ್‍ಗೆ ಮಹಿಳೆಯನ್ನ ಸೇರಿಸಿದ್ದ ಯುವಕ ಅರೆಸ್ಟ್!

    ತ್ರಿಬಲ್ ಎಕ್ಸ್ ವಾಟ್ಸಪ್ ಗ್ರೂಪ್‍ಗೆ ಮಹಿಳೆಯನ್ನ ಸೇರಿಸಿದ್ದ ಯುವಕ ಅರೆಸ್ಟ್!

    ಮುಂಬೈ: ಒಪ್ಪಿಗೆ ಪಡೆಯದೆ ತ್ರಿಬಲ್ ಎಕ್ಸ್ ಹೆಸರಿನ ವಾಟ್ಸಪ್ ಗ್ರೂಪ್‍ಗೆ ಮಹಿಳೆಯನ್ನು ಸೇರಿಸಿದ್ದ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಪಶ್ಚಿಮ ಬಂಗಾಳ ಮೂಲದ ಕಾರ್ಪೇಂಟರ್ ಮುಸ್ತಾಕ್ ಅಲಿ ಶೈಖ್ (24) ಬಂಧಿತ ಆರೋಪಿ. ಮುಸ್ತಾಕ್‍ನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮುಂಬೈನ ಮಾತುಂಗಾ ಠಾಣೆಯ ಪೊಲೀಸರು ಗುರುವಾರ ತಿಳಿಸಿದ್ದಾರೆ.

    ಏನಿದು ಪ್ರಕರಣ?:
    ತ್ರಿಬಲ್ ಎಕ್ಸ್ ಹೆಸರಿನ ಗ್ರೂಪ್‍ಗೆ ಅಡ್ಮಿನ್ ಆಗಿದ್ದ ಮುಸ್ತಾಕ್ ಮುಂಬೈ ಮೂಲದ ಮಹಿಳೆಯನ್ನು ಸೇರಿಸಿದ್ದಾನೆ. ಗ್ರೂಪ್ ಸೇರಿದ ಮಹಿಳೆ ಮೊದಲ ಕೆಲವು ಅಶ್ಲೀಲ ಮೆಸೇಜ್ ನೋಡಿ ಯಾರೋ ಗ್ರೂಪ್‍ನಲ್ಲಿ ಚೇಷ್ಟೆ ಮಾಡುತ್ತಿದ್ದಾರೆ ಅಂತಾ ತಿಳಿದಿದ್ದರು. ಆದರೆ ಸೆಕ್ಸ್ ಸಂದೇಶಗಳು, ನೀಲಿ ಚಿತ್ರಗಳು ಗ್ರೂಪ್‍ನಲ್ಲಿ ಹರಿದಾಡಿದ್ದರಿಂದ ಮಹಿಳೆ ಅಸಮಾಧಾನ ಹೊರಹಾಕಿದ್ದಾರೆ. ಬಳಿಕ ಸಮೀಪದ ಪೊಲೀಸ್ ಠಾಣೆಗೆ ಹೋಗಿ, ದೂರು ನೀಡಿದ್ದಾರೆ.

    ನಾನು ಗ್ರೂಪ್ ಸದಸ್ಯರ ಲಿಸ್ಟ್ ನೋಡಿದಾಗ ಯಾರೊಬ್ಬರೂ ನನಗೆ ಪರಿಚಯ ಇಲ್ಲದವೇ ಆಗಿದ್ದರು. ಆದರೂ ನನ್ನ ನಂಬರ್ ಅನ್ನು ತ್ರಿಬಲ್ ಎಕ್ಸ್ ಗ್ರೂಪ್‍ಗೆ ಸೇರಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

    ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಗ್ರೂಪ್ ಅಡ್ಮಿನ್ ಇರುವ ಸ್ಥಳವನ್ನು ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಒಂದು ತಂಡವನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಿ ಆರೋಪಿಯನ್ನು ಬಂಧಿಸಿ ಮುಂಬೈಗೆ ತಂದಿದ್ದಾರೆ.

    ನಾನು ಉದ್ದೇಶ ಪೂರ್ವಕವಾಗಿ ಹೀಗೆ ಮಾಡಿಲ್ಲ. ನನ್ನ ಮಾವನ ನಂಬರ್ ಎಂದು ಭಾವಿಸಿ ಮಹಿಳೆಯ ನಂಬರ್ ಅನ್ನು ಗ್ರೂಪ್‍ಗೆ ಸೇರಿಸಿದ್ದೇನೆ. ಯಾರಿಗೂ ನೋವು ಕೊಡುವ ಉದ್ದೇಶವಿಲ್ಲ. ಗ್ರೂಪ್‍ನಲ್ಲಿ ಇರುವ ಎಲ್ಲ ಸದಸ್ಯರು ಪುರುಷರು ಅಂತಾ ಮುಸ್ತಾಕ್ ವಿಚಾರಣೆ ವೇಳೆ ಕ್ಷಮೆ ಯಾಚಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಆರೋಪಿ ವಿರುದ್ಧ ಐಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ, ಮುಸ್ತಾಕ್ ಫೋನ್ ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿಯ ಬಳಿಕ ಆರೋಪಿ ಮುಸ್ತಾಕ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ರೀತಿಯ ಪ್ರಕರಣದಲ್ಲಿ ಮೊದಲ ಬಾರಿಗೆ ಸಿಕ್ಕಿಬಿದ್ದ ಆರೋಪಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಒಂದು ವೇಳೆ ಮತ್ತೆ ಇದೇ ತಪ್ಪು ಮರಳಿ ನಡೆದರೆ 7 ವರ್ಷ ಜೈಲು ಹಾಗೂ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಅಂತಾ 2000ರ ಐಟಿ ಕಾಯ್ದೆಯಲ್ಲಿ ತಿಳಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv