Tag: Area

  • ರಾತ್ರೋರಾತ್ರಿ ಪುನೀತ್ ಹೆಸರಿಟ್ಟಿದ್ದ ಬಡಾವಣೆ ನಾಮಫಲಕ ಧ್ವಂಸ – ಸ್ಥಳೀಯರ ಆಕ್ರೋಶ

    ರಾತ್ರೋರಾತ್ರಿ ಪುನೀತ್ ಹೆಸರಿಟ್ಟಿದ್ದ ಬಡಾವಣೆ ನಾಮಫಲಕ ಧ್ವಂಸ – ಸ್ಥಳೀಯರ ಆಕ್ರೋಶ

    ಕೋಲಾರ: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಿಟ್ಟಿದ್ದ ಬಡಾವಣೆ ನಾಮಫಲಕವನ್ನು ದುಷ್ಕರ್ಮಿಗಳು ಜೆಸಿಬಿಯಿಂದ ರಾತ್ರೋರಾತ್ರಿ ಧ್ವಂಸ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ದೇಶಿಹಳ್ಳಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಮಾಜಿ ಪುರಸಭಾ ಸದಸ್ಯ ಮುರಗಯ್ಯ ಎಂಬುವರು ನಿರ್ಮಾಣ ಮಾಡಿದ್ದ ಬಡಾವಣೆಗೆ ಯಾವುದೇ ಹೆಸರು ಇಟ್ಟಿರಲಿಲ್ಲ. ಆದರೆ ಬಡಾವಣೆ ನಿವಾಸಿಗಳೆಲ್ಲಾ ನಿರ್ಧಾರ ಮಾಡಿ ಇತ್ತೀಚೆಗೆ ಕೆಸರನಹಳ್ಳಿ ಪಂಚಾಯತಿಗೆ ಮನವಿ ಪತ್ರ ಕೊಟ್ಟು ಬಡಾವಣೆಗೆ ಪುನೀತ್ ರಾಜ್ ಕುಮಾರ್ ಅವರ ಹೆಸರು ಇಡಲು ಅನುಮತಿ ಕೋರಿದ್ದರು. ನಂತರ ಪಂಚಾಯತಿ ಅಧಿಕಾರಿಗಳ ಮೌಖಿಕ ಒಪ್ಪಿಗೆ ಹಾಗೂ ಆಶ್ವಾಸನೆ ಮೇರೆಗೆ ನಾಮಫಲಕ ಅಳವಡಿಸಿದ್ದರು. ಇದನ್ನೂ ಓದಿ: ತಲೆಕೂದಲು ತೆಗೆದ ಫೋಟೋ ಶೇರ್ ಮಾಡಿ ಶಾಕಿಂಗ್ ಸುದ್ದಿ ಕೊಟ್ಟ ಮೋಹಿನಿ ನಟಿ

    ಭಾನುವಾರ ರಾತ್ರಿ ಬಡಾವಣೆ ನಿರ್ಮಾಣ ಮಾಡಿದ್ದ ಮಾಜಿ ಪುರಸಭೆ ಸದಸ್ಯ ಮುರಗಯ್ಯ ಜೆಸಿಬಿ ಕಳುಹಿಸಿ ಬೋರ್ಡ್ ಧ್ವಂಸ ಮಾಡಿ ತೆರವು ಮಾಡಿಸಿದ್ದಾರೆ. ಈ ವಿಷಯ ತಿಳಿದ ಬಡಾವಣೆ ನಿವಾಸಿಗಳು ರಾತ್ರಿಯೇ ನಾಮಫಲಕವನ್ನು ತೆರೆವು ಮಾಡದಂತೆ ಪ್ರತಿರೋಧ ಒಡ್ಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಬಂಗಾರಪೇಟೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ಜೆಸಿಬಿ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಬಡಾವಣೆ ನಿವಾಸಿಗಳು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲು ಮಾಡಿಕೊಂಡಿರುವ ಬಂಗಾರಪೇಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪುನೀತ್ ಸಿನಿಮಾದ ಕಥೆಗೆ ಯುವರಾಜ್ ಕುಮಾರ್ ನಾಯಕ?

  • ಹುಡುಗರ ಜೊತೆ ಸೇರ್ಬೇಡ ವೈಷ್ಣವಿಗೆ ಅಮ್ಮನ ವಾರ್ನಿಂಗ್!

    ಹುಡುಗರ ಜೊತೆ ಸೇರ್ಬೇಡ ವೈಷ್ಣವಿಗೆ ಅಮ್ಮನ ವಾರ್ನಿಂಗ್!

    – ರಿವೀಲ್ ಆಯ್ತು ವೈಷ್ಣವಿ ಇರುವ ಏರಿಯಾ

    ಬಿಗ್‍ಬಾಸ್ ಮನೆಗೆ ಕಳುಹಿಸುವ ಮುನ್ನ ಹುಡುಗರ ಜೊತೆ ಹೆಚ್ಚಾಗಿ ಸೇರಬೇಡ ಎಂದು ಅಮ್ಮ ಹೇಳಿದ್ದ ವಿಚಾರವನ್ನು ವೈಷ್ಣವಿ ಇಂದು ಬಹಿರಂಗ ಮಾಡಿದ್ದಾರೆ.

    ಬಿಗ್‍ಬಾಸ್ ಮನೆಯಿಂದ ಹೊರಗೆ ಹೋಗುತ್ತಿರುವ ಸ್ಪರ್ಧಿಗಳಿಗೆ ಏನಾದರೂ ಭಯ ಕಾಡುತ್ತಿದ್ಯಾ ಎಂದು ಕಣ್ಮಣಿ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ವೈಷ್ಣವಿ ನಮ್ಮ ಅಮ್ಮ ದೊಡ್ಮನೆಗೆ ಬರುವಾಗ ಹುಡುಗರ ಜೊತೆ ಜಾಸ್ತಿ ಸೇರಬೇಡ, ಇರಬೇಡ ಎಂದು ಹೇಳಿ ಕಳುಹಿಸಿದ್ದರು. ಆದರೆ ನಾನು ಇಲ್ಲಿ ಇದ್ದಿದ್ದೆ ಹೆಚ್ಚಾಗಿ ಹುಡುಗರ ಜೊತೆ ಹಾಗಾಗಿ ಭಯ ಆಗುತ್ತಿದೆ. ಇನ್ನೊಂದು ವಿಪರ್ಯಾಸ ಎಂದರೆ ಈ ಎಪಿಸೋಡ್‍ನ ನಾನು ಅವರೊಟ್ಟಿಗೆಯೇ ಕುಳಿತು ನೋಡಬೇಕು. ಸೋ ಹಾಗಾಗಿ ಸ್ವಲ್ಪ ಟೆನ್ಷನ್ ಆಗ್ತಿದೆ ಎನ್ನುತ್ತಾರೆ.

    ಈ ವೇಳೆ ರಘು ನಾನು ಕೂಡ ಆಗಾಗ ಎಕ್ಸ್ ಗರ್ಲ್ ಫ್ರೆಂಡ್, ಹಾಗೇ, ಹೀಗೆ ಅಂತ ಹೇಳಿಬಿಟ್ಟಿದ್ದೇನೆ. ಸೋ ನೀವು ಸ್ವಲ್ಪ ಎಕ್ಸ್‌ಪ್ಲೇನ್ ಮಾಡಿ ಬಿಡಿ ಕಣ್ಮಣಿ ಎಂದು ಹೇಳುತ್ತಾಳೆ. ಆಗ ಕಣ್ಮಣಿ ಇನ್ನೂ ನಾಲ್ಕೆ ಘಂಟೆ ರಘು ನೀವೇ ಮಾಡಬಹುದು ಅಂತಾಳೆ.

    ನಂತರ ವೈಷ್ಣವಿಗೆ ಒಂದೇ ಒಂದು ಪ್ರಶ್ನೆ ಕೇಳುತ್ತೇನೆ. ನಿಮ್ಮ ಮನೆ ಇರುವುದು ಯಾವ ಏರಿಯಾ ಎಂದು ಕಣ್ಮಣಿ ಕೇಳುತ್ತಾಳೆ. ಆಗ ವೈಷ್ಣವಿ ರಾಜಾಜಿನಗರ ಎಂಬ ಸತ್ಯ ರಿವೀಲ್ ಮಾಡಿದ್ದಾರೆ. ನಂತರ ರಘುಗೆ ಆ ಕಡೆ ತಲೆ ಹಾಕಿ ಕೂಡ ಮಲಗಬೇಡಿ ಅಂತ ಕಣ್ಮಣಿ ಅಣುಗಿಸುತ್ತಾಳೆ. ಈ ವೇಳೆ ನಗುತ್ತಾ ರಘು ನಮ್ಮಿಬ್ಬರದ್ದು ಒಂದೇ ಏರಿಯಾ ನಮ್ಮ ಏರಿಯಾಗೆ ಹೋಗಲೇ ಬೇಕು ಕಣ್ಮಣಿ ನಾನೇದರೂ ಜಾಸ್ತಿ ಮಾತನಾಡಿದ್ನಾ ಎಂದು ಕೇಳುತ್ತಾರೆ.

    ವೈಷ್ಣವಿ ಬಿಗ್‍ಬಾಸ್ ಕಾರ್ಯಕ್ರಮದ ಆರಂಭದಲ್ಲಿ ನೀವು ವೇದಿಕೆ ಮೇಲೆ ಸುದೀಪ್ ಅವರ ಜೊತೆ ಹೇಳಿದ್ದನ್ನೆಲ್ಲಾ ರಘು ಜೊತೆ ಹಂಚಿಕೊಂಡಿದ್ದೀರಾ, ಅದೇ ನಿಮ್ಮ ಅಮ್ಮ ಯಾವ ಯಾವದರಲ್ಲಿ ನಿಮಗೆ ಹೊಡೆಯುತ್ತಾರೆ ಅಂತ ಎಂದು ಕಣ್ಮಣಿ ನೆನಪಿಸುತ್ತಾರೆ. ಆಗ ಮನೆಮಂದಿ ಜೋರಾಗಿ ನಗುತ್ತಾ ಚಪ್ಪಾಳೆ ಹೊಡೆಯುತ್ತಾರೆ.

    ಈ ವೇಳೆ ರಘು ಈ ಸೈಡ್ ಹೋದರೆ ನನ್ನ ಹೆಂಡತಿ, ಆ ಸೈಡ್ ಹೋದರೆ ವೈಷ್ಣವಿ ಅಮ್ಮ ನಾನು ಎಲ್ಲಿ ಹೋಗಲಿ ಎಂದು ಹೇಳುತ್ತಾ ಹಾಸ್ಯ ಮಾಡುತ್ತಾರೆ.

  • ಏರಿಯಾದಲ್ಲಿ ನನ್ನ ಹವಾನೇ ಜಾಸ್ತಿ ಇರಬೇಕು ಅಂತ ಸ್ನೇಹಿತನನ್ನೇ ಕೊಂದ!

    ಏರಿಯಾದಲ್ಲಿ ನನ್ನ ಹವಾನೇ ಜಾಸ್ತಿ ಇರಬೇಕು ಅಂತ ಸ್ನೇಹಿತನನ್ನೇ ಕೊಂದ!

    ಬೆಂಗಳೂರು: ಏರಿಯಾದಲ್ಲಿ ಹವಾ ಮೆಂಟೈನ್ ಮಾಡಬೇಕೆಂದು ಯುವಕನೋರ್ವ ತನ್ನ ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಗಂಗಮ್ಮನಗುಡಿಯಲ್ಲಿ ನಡೆದಿದೆ.

    ಕೊಲೆಯಾದ ಯುವಕನನ್ನು ಕಾರ್ತಿಕ್ ಎಂದು ಗುರುತಿಸಲಾಗಿದೆ. ಕಾರ್ತಿಕ್ ಸ್ನೇಹಿತರೇ ಆದ ಅಶೋಕ್ ಮತ್ತು ಅವನ ಸಹಚರರು ಹತ್ಯೆ ಮಾಡಿದ್ದಾರೆ. ಹತ್ಯೆಯಾದ ಕಾರ್ತಿಕ್ ಹಾಗೂ ಹಂತಕ ಅಶೋಕ್ ಒಂದೇ ಗ್ಯಾಂಗ್‍ನ ಸದಸ್ಯರಾಗಿದ್ದು, ಏರಿಯಾದಲ್ಲಿ ನಾನೇ ಜಾಸ್ತಿ ಹವಾ ಮಾಡಬೇಕೆಂದು ಆಶೋಕ್ ಸ್ನೇಹಿತ ಕಾರ್ತಿಕ್ ಅನ್ನೇ ಕೊಲೆ ಮಾಡಿದ್ದಾನೆ.

    ಕಾರ್ತಿಕ್ ಮತ್ತು ಅಶೋಕ್ ತಮ್ಮ ಸ್ನೇಹಿತರ ಜೊತೆ ಸೇರಿಕೊಂಡು ನಿನ್ನೆ ಮಧ್ಯಾಹ್ನ ಎಣ್ಣೆ ಪಾರ್ಟಿ ಮಾಡಿದ್ದಾರೆ. ಪಾರ್ಟಿ ವೇಳೆ ಅವರವರ ಮಧ್ಯೆಯೇ ಜಗಳ ಶುರುವಾಗಿದೆ. ಈ ವೇಳೆ ಅಶೋಕ್ ಮತ್ತು ಅವರ ಸಹಚರರು ಏರಿಯಾದಲ್ಲಿ ನಮ್ಮ ಹವಾನೇ ಜಾಸ್ತಿ ಇರಬೇಕು ಎಂದು ಚಾಕುವಿನಿಂದ ಕಾರ್ತಿಕ್‍ನನ್ನು ರಸ್ತೆ ಪಕ್ಕದಲ್ಲೇ ಬರ್ಬರವಾಗಿ ಹತ್ಯೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

    ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಹುಡುಕುತ್ತಿದ್ದಾರೆ. ಈ ಸಂಬಂಧ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೊಡಗು ಜಿಲ್ಲೆಯ 6 ಪ್ರದೇಶಗಳು ಸೀಲ್ ಡೌನ್

    ಕೊಡಗು ಜಿಲ್ಲೆಯ 6 ಪ್ರದೇಶಗಳು ಸೀಲ್ ಡೌನ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇಷ್ಟು ದಿನ ನಿಯಂತ್ರಣದಲ್ಲಿದ್ದ ಕೊರೊನಾ ಮಹಾಮಾರಿ ಬುಧವಾರ ಸ್ಫೋಟಗೊಂಡಿದೆ. ಒಂದೇ ದಿನ 14 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದರಿಂದ ಕೊಡಗಿನ 6 ಏರಿಯಾಗಳನ್ನು ನಿನ್ನೆ ರಾತ್ರಿ ಸೀಲ್‍ಡೌನ್ ಮಾಡಲಾಗಿದೆ.

    ಮಡಿಕೇರಿ ನಗರದ ಓಂಕಾರೇಶ್ವರ ದೇವಾಸ್ಥಾನ ರಸ್ತೆ, ಪುಟಾಣಿ ನಗರ, ಡೇರಿ ಫಾರಂ, ಮಡಿಕೇರಿ ತಾಲೂಕಿನ ತಾಳತ್ ಮನೆ ಮತ್ತು ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮದ ಏರಿಯಾ ಒಂದನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ. ಏರಿಯಾಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಪೊಲೀಸ್ ನಿಯೋಜಿಸಲಾಗಿದೆ.

    ಈ ಮೂಲಕ ಜನರು ಸೀಲ್‍ಡೌನ್ ಏರಿಯಾಗಳಿಂದ ಜನರು ಹೊರ ಹೋಗದಂತೆ ಮತ್ತು ಹೊರಗಿನವರು ಒಳಗೆ ಬರದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಒಟ್ಟಿನಲ್ಲಿ ಕೊಡಗಿನಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ಜಿಲ್ಲೆಯ ಜನತೆಯಲ್ಲಿ ತೀವ್ರ ಆತಂಕ ಎದುರಾಗಿದೆ.