Tag: Ardr

  • ಆರ್ಡರ್ ಮಾಡಿದ್ದು ಐಫೋನ್- ಮನೆಗೆ ಬಂದಿದ್ದು ಮೊಸರು ಪ್ಯಾಕ್

    ಆರ್ಡರ್ ಮಾಡಿದ್ದು ಐಫೋನ್- ಮನೆಗೆ ಬಂದಿದ್ದು ಮೊಸರು ಪ್ಯಾಕ್

    ಬೀಜಿಂಗ್: ಐ ಪೋನ್ ಆರ್ಡ್‍ರ್ ಮಾಡಿದ್ದ ಮಹಿಳೆಯ ಮನೆಗೆ ಬಂದು ತಲುಪಿದ್ದು ಮಾತ್ರ ರುಚಿಯಾದ ಆ್ಯಪಲ್ ಪ್ಲೇವರ್ ಮೊಸರಿನ ಪ್ಯಾಕೆಟ್ ಆಗಿದೆ. ಇಂತಹ ಒಂದು ವಿಚಿತ್ರ ಘಟನೆ ಚೀನಾದಲ್ಲಿ ನಡೆದಿದೆ.

    ಲಿಯು ಎಂಬ ಮಹಿಳೆ ಒಂದು ಆನ್‍ಲೈನ್ ವೆಬ್ ಸೈಟ್ ಮೂಲಕವಾಗಿ ಐಫೋನ್ 12 ಮ್ಯಾಕ್ಸ್ ಪ್ರೋ ಖರೀದಿಸಲು ಆರ್ಡರ್ ಮಾಡಿದ್ದಾರೆ. ಇದಕ್ಕಾಗಿಯೇ 1,09,600 ರೂಪಾಯಿ ಹಣವನ್ನು ಪಾವತಿ ಮಾಡಿದ್ದಾರೆ. ಆದರೆ ಮಹಿಳೆಗೆ ಫೋನ್ ಬಂದಿದೆ ಎಂಬ ಖುಷಿಯಲ್ಲಿ ಬಾಕ್ಸ್ ತೆರೆದು ನೋಡಿದಾಗ ಮೊಸರು ಪ್ಯಾಕ್ ಇರುವುದು ಪತ್ತೆಯಾಗಿದೆ. ಈ ಸುದ್ದಿ ಚೀನಾದಾದ್ಯಂತ ಹಬ್ಬಿತ್ತು. ಘಟನೆ ಕುರಿತಾಗಿ ಮಾಹಿತಿ ಪಡೆದ ಪೊಲೀಸರು ಲಂಗ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

    ಈತ ಕೊರಿಯರ್ ತಲುಪಿಸುವ ವೇಳೆ ಆ್ಯಪಲ್ ಫೋನ್ ಇರುವುದನ್ನು ತಿಳಿದುಕೊಂಡು ಫೋನ್ ಎಗರಿಸಿದ್ದಾನೆ. ಈತ ತಾತ್ಕಾಲಿಕವಾಗಿ ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದನು. ಈ ಕುರಿತಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.