Tag: Architect

  • ಎಂಜಿನಿಯರಿಂಗ್, ವೆಟರಿನರಿ, ಫಾರ್ಮ್ ಸೈನ್ಸ್, ಆರ್ಕಿಟೆಕ್ಟರ್ ಕೋರ್ಸುಗಳಿಗೆ ಪ್ರವೇಶಾತಿ ಅಕ್ಟೋಬರ್ 30ಕ್ಕೆ ವಿಶೇಷ ಸುತ್ತು: KEA

    ಎಂಜಿನಿಯರಿಂಗ್, ವೆಟರಿನರಿ, ಫಾರ್ಮ್ ಸೈನ್ಸ್, ಆರ್ಕಿಟೆಕ್ಟರ್ ಕೋರ್ಸುಗಳಿಗೆ ಪ್ರವೇಶಾತಿ ಅಕ್ಟೋಬರ್ 30ಕ್ಕೆ ವಿಶೇಷ ಸುತ್ತು: KEA

    ಬೆಂಗಳೂರು: ಸರ್ಕಾರಿ ಕಾಲೇಜುಗಳಲ್ಲಿ ಲಭ್ಯವಿರುವ ಎಂಜಿನಿಯರಿಂಗ್ ಸೀಟುಗಳ ಜೊತೆಗೆ 2ನೇ ಮುಂದುವರಿದ ಸುತ್ತಿನ ಸೀಟು ಹಂಚಿಕೆಯ ನಂತರ ರದ್ದುಪಡಿಸಿಕೊಂಡಿರುವ ಪ್ರವೇಶ ಪಡೆಯದಿರುವ ಕಾರಣಕ್ಕೆ ಖಾಲಿ ಸೀಟುಗಳು ಎಂದು ಗುರುತಿಸಲಾಗಿರುವ ವೆಟರಿನರಿ, ಫಾರ್ಮ್ ಸೈನ್ಸ್, ಆರ್ಕಿಟೆಕ್ಟರ್ ಸೀಟುಗಳ ಹಂಚಿಕೆ ಅಕ್ಟೋಬರ್ 30ರಂದು ನಡೆಯಲಿದೆ. ಈ ಕುರಿತು ಮಾಧ್ಯಮ ಹೇಳಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಬಿಡುಗಡೆ ಮಾಡಿದೆ.

    ಅಕ್ಟೋಬರ್ 27ರ ಮಧ್ಯಾಹ್ನ 1:00 ರಿಂದ ಇಚ್ಚೆ ಆಯ್ಕೆಗಳನ್ನು ದಾಖಲಿಸಲು ಆನ್‌ಲೈನ್ ಪೋರ್ಟಲ್ ಸಕ್ರಿಯಗೊಳಿಸಲಾಗುವುದು. 2023ನೇ ಸಾಲಿನಲ್ಲಿ ಯಾವುದೇ ಕೋರ್ಸಿಗೆ ಸೀಟು ಹಂಚಿಕೆ ಮಾಡಿಕೊಳ್ಳದಿರುವವರಿಗೆ ಮಾತ್ರ ಇದು ಅನ್ವಯವಾಗುತ್ತದೆ. ಇಚ್ಚೆ ಆಯ್ಕೆಗಳನ್ನು ದಾಖಲಿಸಲು ಅಕ್ಟೋಬರ್ 29ರ ಬೆಳಗ್ಗೆ 10 ರವರೆಗೆ ಕಾಲಾವಕಾಶವಿರುತ್ತದೆ. ಇಲ್ಲಿಯವರೆಗೆ 2023ನೇ ಸಾಲಿನಲ್ಲಿ ಯಾವುದೇ ಸೀಟನ್ನು ಪ್ರಾಧಿಕಾರದ ಮೂಲಕ ಹಂಚಿಕೆ ಮಾಡಿಕೊಳ್ಳದಿರುವ ಆಸಕ್ತ ಅರ್ಹ ಅಭ್ಯರ್ಥಿಗಳು ಪೋರ್ಟಲ್‌ನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಹಾಗೂ ವೆಟರಿನರಿ, ಫಾರ್ಮ್ ಸೈನ್ಸ್, ಆರ್ಕಿಟೆಕ್ಟರ್ ಸೀಟುಗಳ ಲಭ್ಯತೆಯನ್ನು ಗಮನಿಸಿ, ನಂತರ ತಮ್ಮ ಇಚ್ಛೆ ಆಯ್ಕೆಗಳನ್ನು ಆದ್ಯತೆಯ ಮೇರೆಗೆ ದಾಖಲಿಸಬಹುದು. ಇದನ್ನೂ ಓದಿ: ಭಾರತದ ಕಾನೂನು ಬದಲಿಸುವ ಮೂರು ಮಸೂದೆಗಳು ಶೀಘ್ರದಲ್ಲಿ ಅಂಗೀಕಾರ: ಅಮಿತ್ ಶಾ

    ವಿಶೇಷ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಅಕ್ಟೋಬರ್ 29ರ ಸಂಜೆ 6 ಗಂಟೆಯ ನಂತರ ಪ್ರಕಟಿಸಲಾಗುವುದು. ವಿಶೇಷ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಅಕ್ಟೋಬರ್ 30ರಂದು ಚಲನ್ ಡೌನ್‌ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಿ, ಪ್ರವೇಶ ಆದೇಶ ಡೌನ್‌ಲೋಡಿ ಮಾಡಿಕೊಂಡು ಅದೇ ದಿನವೇ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು (Deemed Admission). ಉಳಿದಂತೆ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಖಾಲಿ ಇರುವ ಎಂಜಿನಿಯರಿಂಗ್ ಸೀಟುಗಳ ಮಾಹಿತಿಯನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಸಂಬಂಧಿಸಿದ ಎಂಜಿನಿಯರಿಂಗ್ ಕಾಲೇಜುಗಳನ್ನು ನೇರವಾಗಿ ಸಂಪರ್ಕಿಸಿ ಸರ್ಕಾರಿ ಕೋಟಾ ಶುಲ್ಕ ಪಾವತಿಸಿ ಎಂಜಿನಿಯರಿಂಗ್ ಸೀಟನ್ನು ಅಕ್ಟೋಬರ್ 30ರ ಸಂಜೆ 5:30 ರೊಳಗೆ ಪಡೆಯಬಹುದಾಗಿದೆ. ಇದನ್ನೂ ಓದಿ: 3 ದಿನ ಮುಳ್ಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ನಿಷೇಧ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಶ್ವದ ಅತ್ಯಂತ ಪ್ರಸಿದ್ಧ ವಾಸ್ತುಶಿಲ್ಪಿ ರಿಚರ್ಡ್ ರೋಜರ್ಸ್ ನಿಧನ

    ವಿಶ್ವದ ಅತ್ಯಂತ ಪ್ರಸಿದ್ಧ ವಾಸ್ತುಶಿಲ್ಪಿ ರಿಚರ್ಡ್ ರೋಜರ್ಸ್ ನಿಧನ

    ಲಂಡನ್: ಪ್ಯಾರಿಸ್‍ನ ಪಾಂಪಿಡೌ ಸೆಂಟರ್ ಸೇರಿದಂತೆ ವಿಶ್ವದ ಹಲವು ಪ್ರಸಿದ್ಧ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದ ಬ್ರಿಟಿಷ್ ವಾಸ್ತುಶಿಲ್ಪಿ ರಿಚರ್ಡ್ ರೋಜರ್ಸ್ 88 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

    ‘ಮಿಲೇನಿಯಮ್ ಡೋಮ್’ ಮತ್ತು ‘ಚೀಸ್‍ಗ್ರೇಟರ್’ ನಂತಹ ವಿಶಿಷ್ಟ ರಚನೆಗಳೊಂದಿಗೆ ಲಂಡನ್ ಸ್ಕೈಲೈನ್ ಅನ್ನು ಬದಲಾಯಿಸಿದ ರೋಜರ್ಸ್ ಶನಿವಾರ ರಾತ್ರಿ ನಿಧನರಾಗಿದ್ದು, ಅವರ ಮಗ ರೂ ರೋಜರ್ಸ್ ತಂದೆ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಇದನ್ನೂ ಓದಿ: ಚೀನಾದ 135 ವರ್ಷದ ವೃದ್ಧೆ ಸಾವು

    ಇಟಾಲಿಯನ್ ಮೂಲದ ವಾಸ್ತುಶಿಲ್ಪಿ 2007 ರ ‘ಪ್ರಿಟ್ಜಕರ್ ಪ್ರಶಸ್ತಿ’ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಅವರು ಗೆದ್ದಿದ್ದಾರೆ. ಗಾಜು ಮತ್ತು ಉಕ್ಕಿನಂತಹ ಕೈಗಾರಿಕಾ ವಸ್ತುಗಳನ್ನು ಒಳಗೊಂಡಿರುವ ರಚನೆಗಳಿಂದ ಗುರುತಿಸಲ್ಪಟ್ಟ ‘ಹೈ-ಟೆಕ್’ ಆರ್ಕಿಟೆಕ್ಚರ್ ಚಳುವಳಿಯ ಪ್ರವರ್ತಕರಲ್ಲಿ ಇವರು ಸಹ ಒಬ್ಬರಾಗಿದ್ದರು. ರಿಚರ್ಡ್ ಅವರು ಫ್ರಾನ್ಸ್‍ನ ಪಾಂಪಿಡೌ ಸೆಂಟರ್‍ನ ಸಹ-ಸೃಷ್ಟಿಕರ್ತರಾಗಿದ್ದಾರೆ.

    ಸ್ಟ್ರಾಸ್‍ಬರ್ಗ್‍ನ ಯುರೋಪಿಯನ್ ಕೋರ್ಟ್ ಆಫ್ ಹ್ಯೂಮನ್ ರೈಟ್ಸ್ ಮತ್ತು ನ್ಯೂಯಾರ್ಕ್‍ನಲ್ಲಿರುವ ಮೂರು ವಿಶ್ವ ವ್ಯಾಪಾರ ಕೇಂದ್ರ, ಹಾಗೆಯೇ ಮ್ಯಾಡ್ರಿಡ್ ಮತ್ತು ಲಂಡನ್‍ನ ಹೀಥ್ರೂದಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ರಿಚರ್ಡ್ ಅವರೇ ವಿನ್ಯಾಸಗೊಳಿಸಿದ್ದರು.

    ಫ್ಲಾರೆನ್ಸ್‌ನಲ್ಲಿ ರಿಚರ್ಡ್ ಅವರು 1933ರಲ್ಲಿ ಜನಿಸಿದ್ದು, ಅವರ ತಂದೆ ವೈದ್ಯರಾಗಿದ್ದು, ತಾಯಿ ಪ್ರಸಿದ್ಧ ಐರಿಶ್ ಬರಹಗಾರ ಜೇಮ್ಸ್ ಜಾಯ್ಸ್ ಅವರ ಮಾಜಿ ಶಿಷ್ಯರಾಗಿದ್ದರು. ಈ ಕುಟುಂಬವು ಮುಸೊಲಿನಿಯ ಸರ್ವಾಧಿಕಾರದಿಂದ ಪಲಾಯನ ಮಾಡಿ, 1938 ರಲ್ಲಿ ಇಂಗ್ಲೆಂಡ್ ಗೆ ಬಂದು ನೆಲೆಸಿತು. ಇದನ್ನೂ ಓದಿ: ಮಹಾತ್ಮರ ಪುತ್ಥಳಿ ಹಾಳು ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ: ಬಿಎಸ್‍ವೈ

    ರಿಚರ್ಡ್ ಅವರು 1951 ರಲ್ಲಿ ಶಾಲೆಯನ್ನು ತೊರೆದಿದ್ದು, ಲಂಡನ್‍ನ ಆರ್ಕಿಟೆಕ್ಚರಲ್ ಅಸೋಸಿಯೇಷನ್ ಸ್ಕೂಲ್‍ಗೆ ಪ್ರವೇಶ ಪಡೆದರು. ಅವರು 1962 ರಲ್ಲಿ ತಮ್ಮ ವಾಸ್ತುಶಿಲ್ಪದ ಅಧ್ಯಯನವನ್ನು ಪೂರ್ಣಗೊಳಿಸಿ ವೃತ್ತಿಜೀವನವನ್ನು ಆರಂಭಿಸಿದರು.

  • ಉದ್ಯೋಗಿಗಳ ಸೆಕ್ಸ್ ಲೈಫ್ ಬಗ್ಗೆ ಸಮೀಕ್ಷೆ

    ಉದ್ಯೋಗಿಗಳ ಸೆಕ್ಸ್ ಲೈಫ್ ಬಗ್ಗೆ ಸಮೀಕ್ಷೆ

    – ಸಮೀಕ್ಷೆಯಲ್ಲಿ ಕೃಷಿಕರಿಗೆ ಮೊದಲ ಸ್ಥಾನ

    ಲಂಡನ್: ಬೇರೆ ಉದ್ಯೋಗಿಗಳಿಗಿಂತ ಕೃಷಿಕರ ಸೆಕ್ಸ್ ಲೈಫ್ ಉತ್ತಮವಾಗಿರುತ್ತದೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ.

    ಸೆಕ್ಸ್ ಆಟಿಕೆ ಕಂಪನಿ ಲೆಲೋ 2 ಸಾವಿರ ಪುರುಷ ಮತ್ತು ಮಹಿಳೆಯರನ್ನು ಸಂದರ್ಶಿಸಿ ಈ ಸಮೀಕ್ಷೆಯನ್ನು ಮಾಡಿದೆ.

    ಸಮೀಕ್ಷೆಯಲ್ಲಿ ರೈತರ ಹೆಚ್ಚು ಸೆಕ್ಸ್ ಮಾಡುತ್ತಾರೆ ಎನ್ನುವ ಫಲಿತಾಂಶ ಪ್ರಕಟವಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಕೃಷಿಕರ ಪೈಕಿ ಶೇ.33 ರಷ್ಟು ಮಂದಿ ನಾವು ಪ್ರತಿನಿತ್ಯ ಸೆಕ್ಸ್ ಮಾಡುತ್ತೇವೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

    ಕೃಷಿಕರ ನಂತರದ ಸ್ಥಾನವನ್ನು ವಾಸ್ತುಶಿಲ್ಪಿಗಳು, ಕೇಶ ವಿನ್ಯಾಸಕಾರರು ಪಡೆದುಕೊಂಡಿದ್ದಾರೆ. ವಾಸ್ತು ಶಿಲ್ಪಿಗಳ ಪೈಕಿ ಶೇ.21 ರಷ್ಟು ಮಂದಿ ಪ್ರತಿದಿನ ಸೆಕ್ಸ್ ಮಾಡುತ್ತೇವೆ ಎಂದು ಹೇಳಿದರೆ ಕೇಶ ವಿನ್ಯಾಸಕರರ ಪೈಕಿ ಶೇ.17 ರಷ್ಟು ಮಂದಿ ಪ್ರತಿ ದಿನ ಮಿಲನ ಮಾಡುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ.

    ಸಮೀಕ್ಷೆಯಲ್ಲಿ ಕೊನೆಯ ಸ್ಥಾನದಲ್ಲಿ ಪತ್ರಕರ್ತರಿದ್ದು ತಿಂಗಳಿಗೆ ಒಂದು ಬಾರಿ ಸೆಕ್ಸ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಉದ್ಯೋಗಿಗಳ ಲೈಫ್ ಸ್ಟೈಲ್ ಸೆಕ್ಸ್ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆಫೀಸಿನಲ್ಲಿ ಹೆಚ್ಚು ಸಮಯ ಕೆಲಸ ಮಾಡುವುದು ಉದ್ಯೋಗಿಗಳ ಫಿಟ್‍ನೆಸ್ ಮತ್ತು ಶಕ್ತಿ ಕಡಿಮೆಯಾಗುತ್ತದೆ ಸಮೀಕ್ಷೆ ಹೇಳಿದೆ.