ಕ್ರಿಕೆಟರ್ ಶರತ್ ಬಿ.ಆರ್ (Sharath B.R) ಜೊತೆ ನಟಿ ಅರ್ಚನಾ ಕೊಟ್ಟಿಗೆ (Archana Kottige) ದಾಂಪತ್ಯ ಜೀವನಕ್ಕೆ (Wedding) ಕಾಲಿಟ್ಟಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಈ ಮದುವೆ ಸಂಭ್ರಮಕ್ಕೆ ಸ್ಯಾಂಡಲ್‌ವುಡ್ ಕಲಾವಿದರು ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ: ಉಗ್ರರ ದಾಳಿ ಬಗ್ಗೆ ಸುದೀಪ್ ಕಿಡಿ

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಕ್ರಿಕೆಟರ್ ಶರತ್ ಬಿ.ಆರ್ ಜೊತೆ ಇಂದು (ಏ.23) ನಟಿ ಹಸೆಮಣೆ ಏರಿದ್ದಾರೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಈ ಮದುವೆ ಜರುಗಿದೆ. ಇದನ್ನೂ ಓದಿ:ಸ್ಟಾರ್ ಕ್ರಿಕೆಟರ್‌ನೊಂದಿಗೆ ಎಂಗೇಜ್ ಆದ ‘ಡಿಯರ್ ಸತ್ಯ’ ನಟಿ ಅರ್ಚನಾ

ನಿನ್ನೆ (ಏ.22) ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ, ಸಪ್ತಮಿ ಗೌಡ, ಸ್ವಾನಿ ಸುದೀಪ್, ಆಶಿಕಾ ರಂಗನಾಥ್, ಖುಷಿ ರವಿ, ಅಮೃತಾ ಅಯ್ಯಂಗಾರ್, ತೇಜಸ್ವಿನಿ ಶರ್ಮಾ, ಸಾನ್ಯ ಅಯ್ಯರ್, ಯುವ ರಾಜ್‌ಕುಮಾರ್ ಸೇರಿದಂತೆ ಅನೇಕರು ಭಾಗಿಯಾಗಿ ನವಜೋಡಿ ಶುಭಕೋರಿದರು.

ಕ್ರಿಕೆಟರ್ ಪ್ರಸಿದ್ಧ್ ಕೃಷ್ಣ, ವೈಶಾಖ್ ವಿಜಯ್ ಕುಮಾರ್, ದೇವದತ್ ಪಡಿಕ್ಕಲ್ ಅನೇಕರು ಭಾಗಿಯಾಗಿ ಸ್ನೇಹಿತ ಶರತ್ ಹಾಗೂ ಅರ್ಚನಾ ದಂಪತಿಗೆ ಶುಭಹಾರೈಸಿದರು.

ಅಂದಹಾಗೆ, ಅರ್ಚನಾ ಅವರು ಡಿಯರ್ ಸತ್ಯ, ಎಲ್ರ ಕಾಲೆಳೆಯುತ್ತೆ ಕಾಲ, ಶಬರಿ, ಒಂದು ಅಲಂಕಾರ ವಿದ್ಯಾರ್ಥಿ, ಹೊಂದಿಸಿ ಬರೆಯಿರಿ ಸೇರಿದಂತೆ 8ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತ ಶರತ್ ಅವರು ಕರ್ನಾಟಕ ಕ್ರಿಕೆಟರ್ ಆಟಗಾರ. ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿದ್ದಾರೆ. 2019ರ ನವೆಂಬರ್‌ನಲ್ಲಿ ಬಾಂಗ್ಲಾದೇಶದ ನಡೆದ ಉದಯೋನ್ಮುಕ ತಂಡಗಳ ಏಷ್ಯಾ ಕಪ್‌ನಲ್ಲಿ ಅವರು ಭಾರತ ತಂಡದ ನಾಯಕನಾಗಿದ್ದರು. ಕಳೆದ ವರ್ಷದ ಐಪಿಎಲ್‌ನಲ್ಲಿ ಅವರು ಗುಜರಾತ್ ಟೈಟನ್ಸ್ ತಂಡದಲ್ಲಿದ್ದರು.


ಕುಟುಂಬಸ್ಥರ ಸಮ್ಮುಖದಲ್ಲಿ ಕ್ರಿಕೆಟರ್ ಶರತ್ ಬಿ.ಆರ್ ಮತ್ತು ನಟಿ ಅರ್ಚನಾ (Archana Kottige) ಸರಳವಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಇದೇ ಏ.23ರಂದು ಶರತ್ ಜೊತೆ ನಟಿ ಹಸೆಮಣೆ ಏರಲಿದ್ದಾರೆ. ಇದನ್ನೂ ಓದಿ:



ಈ ಸಿನಿಮಾಗೆ ರಘು ಪವನ್ ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾ ಮೇಲಿನ ಆಸಕ್ತಿ ಇಂದು ನಿರ್ಮಾಣಕ್ಕೆ ಕರೆದು ನಿಲ್ಲಿಸಿದೆ. ರಘು ಪವನ್ ಒಬ್ಬ ಪ್ಯಾಷನೇಟ್ ನಿರ್ಮಾಪಕ ಎಂಬುದೇ ಇಡೀ ಚಿತ್ರತಂಡದ ಖುಷಿಗೆ ಕಾರಣವಾಗಿದೆ. ಸಿನಿಮಾ ಮೇಲೆ ಪ್ಯಾಷನ್ ನಿರ್ಮಾಪಕನಿಗಿದ್ದರೆ ಆ ಸಿನಿಮಾದಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ. ತಂತ್ರಜ್ಞರು, ಕಲಾವಿದರು ಖುಷಿ ಖುಷಿಯಾಗಿ ಸಿನಿಮಾ ಮುಗಿಸುತ್ತಾರೆ. ರಘು ಪವನ್ ಕೂಡ ಅದೇ ರೀತಿ ಇರುವವರು. ಇದನ್ನೂ ಓದಿ:
ಮುಹೂರ್ತ ಮುಗಿಸಿಕೊಂಡಿರುವ ‘ಗಾಳಿಗುಡ್ಡ’ ಸಿನಿಮಾ ಕಳಸ, ಕುದರೆಮುಖ, ಚಿಕ್ಕಮಗಳೂರು ಮುಂತಾದ ಜಾಗಗಳಲ್ಲಿ ಶೂಟಿಂಗ್ ಮಾಡಲು ಪ್ಲ್ಯಾನ್ ಮಾಡಿದೆ. ಎಲ್ಲಾ ಅಂದುಕೊಂಡಂತೆ ಆದರೆ 2025 ಬೇಸಿಗೆಗೆ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.










