Tag: Archana Jois

  • ಸೆಟ್ಟೇರಿತು ‘ತೀರ್ಥರೂಪ ತಂದೆಯವರಿಗೆ’ ಸಿನಿಮಾ: ಅರ್ಚನಾ ನಾಯಕಿ

    ಸೆಟ್ಟೇರಿತು ‘ತೀರ್ಥರೂಪ ತಂದೆಯವರಿಗೆ’ ಸಿನಿಮಾ: ಅರ್ಚನಾ ನಾಯಕಿ

    ಹೊಂದಿಸಿ ಬರೆಯಿರಿ ಸಿನಿಮಾ ಮೂಲಕ ಬದುಕು ಬಂದಂತೆ ಸ್ವೀಕರಿಸಿ ಎಂಬ ಸ್ವೀಟ್ ಸಂದೇಶ ಕೊಟ್ಟು ಫ್ಯಾಮಿಲಿ ಪ್ರೇಕ್ಷಕ ಪ್ರಭುವಿನಿಂದ ಚಪ್ಪಾಳೆ‌ ಪಡೆದಿದ್ದ ರಾಮೇನಹಳ್ಳಿ ಜಗನ್ನಾಥ (Ramenahalli Jagannath) ಈಗ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ದಿನವಾದ ಇಂದು ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ ಚಿತ್ರ ಸೆಟ್ಟೇರಿದೆ. ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಅವರ ಪುತ್ರಿ ಸಿನಿಮಾಗೆ ಕ್ಲ್ಯಾಪ್ ಮಾಡಿದರೆ, ನವೀನ್ ಶಂಕರ್ (Naveen Shankar) ಹಾಗೂ ಅರ್ಚನಾ ಜೋಯಿಸ್ (Archana Jois) ಕ್ಯಾಮೆರಾಗೆ ಚಾಲನೆ ನೀಡಿದರು. ಜಗನ್ನಾಥ ಅವರ ಹೊಸ ಪ್ರಯತ್ನಕ್ಕೆ ತೀರ್ಥರೂಪ ತಂದೆಯವರಿಗೆ ಎಂಬ ಆಕರ್ಷಕ ಟೈಟಲ್ ಇಡಲಾಗಿದೆ.

    ತೆಲುಗಿನಲ್ಲಿ ಗುಪ್ಪೆಡಂತ ಮನಸು ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರ ಪ್ರೀತಿ ಪಡೆದಿರುವ ನಿಹಾರ್ ಮುಖೇಶ್ ತೀರ್ಥರೂಪ ತಂದೆಯವರಿಗೆ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಸದ್ಯ ಮುಖೇಶ್ ಹೀರೋ ಆಗಿ ಬಣ್ಣ ಹಚ್ಚಿರುವ ಗೀತಾ ಶಂಕರಂ‌ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿದೆ. ಇದರ ಬೆನ್ನೆಲ್ಲೇ‌ ನಿಹಾರ್ ಮುಖೇಶ್ ತೀರ್ಥರೂಪ ತಂದೆಯವರಿಗೆ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಚಿತ್ರ ಮೂಡಿ ಬರುತ್ತಿದೆ. ತೆಲುಗಿನಲ್ಲಿ ಪ್ರಿಯಮೈನ ನಾನ್ನಕು ಎಂಬ ಶೀರ್ಷಿಕೆ ಇಡಲಾಗಿದೆ.

    ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್ ನಡಿ ತೀರ್ಥರೂಪ ತಂದೆಯವರಿಗೆ ಸಿನಿಮಾ ನಿರ್ಮಾಣವಾಗುತ್ತಿದ್ದು, ರಾಮೇನಹಳ್ಳಿ ಜಗನ್ನಾಥ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹೊಂದಿಸಿ ಬರೆಯಿರಿ ಚಿತ್ರ ನಿರ್ಮಾಣ ಮಾಡಿದ್ದ ಸಂಡೇ ಸಿನಿಮಾಸ್ ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದೆ. ಬ್ಲಿಂಕ್ ಸಿನಿಮಾ ಖ್ಯಾತಿಯ ರವಿಚಂದ್ರ ಎ.ಜೆ ತೀರ್ಥರೂಪ ತಂದೆಯವರಿಗೆ ಚಿತ್ರಕ್ಕೆ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಸಾಥ್ ಕೊಟ್ಟಿದ್ದಾರೆ. ಕೌಟುಂಬಿಕ ಹಿನ್ನೆಲೆ ಕಥೆಯುಳ್ಳ ಸಿನಿಮಾಗೆ ದೀಪಕ್ ಯರಗೇರಾ ಛಾಯಾಗ್ರಹಣ, ಪ್ರಶಾಂತ್ ರಾಜಪ್ಪ ಸಂಭಾಷಣೆ ಇರಲಿದೆ. ಸದ್ಯ ಮುಹೂರ್ತ ನೆರವೇರಿದ್ದು, ಶೀಘ್ರದಲ್ಲೇ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಎಂಟ್ರಿ‌ ಕೊಡಲಿದೆ.

  • ನವೀನ್ ಶಂಕರ್ ಅಭಿನಯದ ‘ಕ್ಷೇತ್ರಪತಿ’ ರಿಲೀಸ್ ಡೇಟ್ ಫಿಕ್ಸ್

    ನವೀನ್ ಶಂಕರ್ ಅಭಿನಯದ ‘ಕ್ಷೇತ್ರಪತಿ’ ರಿಲೀಸ್ ಡೇಟ್ ಫಿಕ್ಸ್

    ಗುಲ್ಟು, ಹೊಂದಿಸಿ ಬರೆಯಿರಿ, ಹೊಯ್ಸಳ ಚಿತ್ರಗಳ ಮೂಲಕ  ಜನಮನ್ನಣೆ ಪಡೆದಿರುವ ನವೀನ್ ಶಂಕರ್ (Naveen) ಅಭಿನಯದ ‘ಕ್ಷೇತ್ರಪತಿ’ (Kshetrapati) ಚಿತ್ರದ ನೂತನ ಪೋಸ್ಟರ್ ಬಿಡುಗಡೆಯಾಗಿದೆ‌. ಬಸವ ಪಾತ್ರದಲ್ಲಿ ನವೀನ್ ಶಂಕರ್ ಕಾಣಿಸಿಕೊಳ್ಳುತ್ತಿದ್ದು, ಭೂಮಿಕಾ ಎಂಬ ಹೆಸರಿನಿಂದ ಹೊಸ ತಲೆಮಾರಿನ ಪತ್ರಕರ್ತೆ ಪಾತ್ರದಲ್ಲಿ ಅರ್ಚನಾ ಜೋಯಿಸ್ ಅಭಿನಯಿಸಿದ್ದಾರೆ.

    ರೈತರ ಹೋರಾಟಕ್ಕೆ ಮಹಿಳಾ ಆಯಾಮ (women perspective) ಅರ್ಚನಾ ಜೋಯಿಸ್ ಪಾತ್ರ ನೀಡುತ್ತದೆ. ಈ ಹಿಂದೆ ಹೊಂದಿಸಿ ಬರೆಯಿರಿ ಚಿತ್ರದಲ್ಲಿ ಮೋಡಿ ಮಾಡಿದ್ದ ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ (Archana Jois) ಜೋಡಿ ಕ್ಷೇತ್ರಪತಿ ಚಿತ್ರದಲ್ಲಿ ಮತ್ತೆ ಪ್ರೇಕ್ಷಕರನ್ನು ರಂಜಿಸಲಿದೆ. ಈಗಾಗಲೇ ಕ್ಷೇತ್ರಪತಿ ಚಿತ್ರದ ಟೀಸರ್ ನೋಡುಗರ ಮನ ಗೆದ್ದಿದೆ.  ಇದನ್ನೂ ಓದಿ:ಮತ್ತೆ ಪ್ರೀತಿಯಲ್ಲಿ ಬಿದ್ರಾ ಸಮಂತಾ- ಏನಿದು ಹೊಸ ಕಹಾನಿ?

    ರವಿ ಬಸ್ರೂರ್ ಮ್ಯೂಸಿಕ್ ಮತ್ತು ಮೂವೀಸ್ ಅರ್ಪಿಸುತ್ತಿರುವ, ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಕ್ಷೇತ್ರಪತಿ ಚಿತ್ರ ಪೊಲಿಟಿಕಲ್ ಡ್ರಾಮಾ ಕಥಾಹಂದರ ಹೊಂದಿದೆ. ದಿ ಇಮೋಷನ್ಸ್ ಫ್ಯಾಕ್ಟರಿ ಗ್ರೂಪ್ ಸಹ ನಿರ್ಮಾಣವಿರುವ ಈ ಚಿತ್ರ ಆಗಸ್ಟ್ 18 ರಂದು ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಬಿಡುಗಡೆಯಾಗುತ್ತಿದೆ. ಶ್ರೀಕಾಂತ್ ಕಟಗಿ (Srikanta Katagi) ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

    ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ (Ravi Basrur) ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವೈ. ವಿ. ಬಿ. ಶಿವಸಾಗರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಜೀವನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.  ನವೀನ್ ಶಂಕರ್ , ಅರ್ಚನಾ ಜೋಯಿಸ್, ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಜಯ್ ರಾವ್ ಚಿತ್ರಕ್ಕೆ ಕೆಜಿಎಫ್ ನಟಿ ಅರ್ಚನಾ ಜೋಯಿಸ್ ನಾಯಕಿ

    ಅಜಯ್ ರಾವ್ ಚಿತ್ರಕ್ಕೆ ಕೆಜಿಎಫ್ ನಟಿ ಅರ್ಚನಾ ಜೋಯಿಸ್ ನಾಯಕಿ

    ತಾಜ್ ಮಹಲ್, ಕೃಷ್ಣ ಲೀಲಾ, ಕೃಷ್ಣ ರುಕ್ಮಿಣಿ ಖ್ಯಾತಿಯ ನಟ ಅಜಯ್ ರಾವ್ (Ajay Rao) ಇದೀಗ ಮತ್ತೊಂದು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರಕ್ಕೆ ಕೆಜಿಎಫ್ (KGF 2) ಖ್ಯಾತಿಯ ನಟಿ ಅರ್ಚನಾ ಜೋಯಿಸ್ (Archana Jois) ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರಕ್ಕೆ ‘ಯುದ್ಧಕಾಂಡ’ ಎಂದು ಟೈಟಲ್ ಇಡಲಾಗಿದ್ದು, ಅಜಯ್ ರಾವ್ ತಮ್ಮದೇ ನಿರ್ಮಾಣ ಸಂಸ್ಥೆ ‘ಶ್ರೀಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್’ ಮತ್ತು ‘ಅಜಯ್ ರಾವ್ ಪ್ರೊಡಕ್ಷನ್ಸ್’ ನಡಿ ನಿರ್ಮಾಣ ಮಾಡುತ್ತಿದ್ದಾರೆ.

    ‘ಯುದ್ಧಕಾಂಡ’ (Yudhkanda) ಎಂದಾಗ ಎಲ್ಲರಿಗೂ ನೆನಪಾಗೋದು ಲೆಜೆಂಡರಿ ರವಿ ಸರ್ ಸಿನಿಮಾ. ಆ ಸಿನಿಮಾದ ನಿರ್ದೇಶಕರಾದ ಕೆ. ವಿ ರಾಜು ಸರ್ ಜೊತೆ ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ ಅದು ನನ್ನ ಅದೃಷ್ಟ. ಈ ಸಿನಿಮಾ ಲಾಂಚ್ ಮಾಡೋವಾಗ ಮೊದಲು ರವಿ ಸರ್ ಭೇಟಿ ಮಾಡಿ ಆಶೀರ್ವಾದ ತೆಗೆದುಕೊಂಡು ಬಂದೆ. ಒಳ್ಳೆದಾಗ್ಲಿ ಎಂದು ಆಶೀರ್ವಾದ ಮಾಡಿದ್ರು. ಆದ್ರೆ ಆಗ ಬಂದ ‘ಯುದ್ಧಕಾಂಡ’ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಇದು ರಿಮೇಕ್ ಸಿನಿಮಾ ಕೂಡ ಅಲ್ಲ ಎಂದು ಅಜಯ್ ರಾವ್ ಮಾಹಿತಿ ನೀಡುತ್ತಾರೆ.

    ‘ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷ ಆಯ್ತು. ನಟನಾಗಿ ಯಶಸ್ಸು, ಸೋಲು ಎರಡನ್ನು ನೋಡಿದ್ದೇನೆ. ಕೇವಲ ನಟನಾಗಿ ಉಳಿಯದೇ ಸಿನಿಮಾದ ಎಲ್ಲಾ ಕ್ಷೇತ್ರದಲ್ಲಿ ಪ್ರಯೋಗ ಮಾಡಬೇಕು ಎಂದುಕೊಂಡು ಬೆಂಗಳೂರಿಗೆ ಬಂದವನು ನಾನು. ಹೀರೋ ಆಗಿದ್ದವನು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿಯೂ ಮಾಡಿದ್ದೇನೆ. ಕೃಷ್ಣ ಲೀಲಾ ಸಿನಿಮಾ ಮೂಲಕ ನಿರ್ಮಾಪಕನೂ ಆಗಿದ್ದೇನೆ. ಇದೀಗ ಏಳು ವರ್ಷದ ನಂತರ ಎರಡನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದೇನೆ ಎನ್ನುವುದು ಅಜಯ್ ರಾವ್ ಮಾತು. ಇದನ್ನೂ ಓದಿ:ಮದುವೆಯಾಗಿ 14 ಕಳೆದರೂ ಮಕ್ಕಳಾಗದ್ದಕ್ಕೆ ಮಹತ್ವದ ನಿರ್ಧಾರ ಕೈಗೊಂಡ ‘ಲಾಲಿಹಾಡು’ ನಟಿ

    ‘ಯುದ್ಧಕಾಂಡ’ ಸಿನಿಮಾವನ್ನು ಕಟಿಂಗ್ ಶಾಪ್ ಸಿನಿಮಾ ಖ್ಯಾತಿಯ ಪವನ್ ಭಟ್ ನಿರ್ದೇಶಿಸುತ್ತಿದ್ದಾರೆ. ಕಾರ್ತಿಕ್ ಶರ್ಮಾ ಕ್ಯಾಮೆರಾ ವರ್ಕ್, ಕೆ.ಬಿ.ಪ್ರವೀಣ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ‘ಯುದ್ಧಕಾಂಡ’ ಸಿನಿಮಾ ಈಗಾಗಲೇ ಶೇಕಡಾ 50 ರಷ್ಟು ಚಿತ್ರೀಕರಣ ಕೂಡ ಆಗಿದೆ.

  • ʻಘೋಸ್ಟ್ʼ ಸಿನಿಮಾದಲ್ಲಿ ಪತ್ರಕರ್ತೆಯಾದ ಕೆಜಿಎಫ್‌ ನಟಿ ಅರ್ಚನಾ ಜೋಯಿಸ್

    ʻಘೋಸ್ಟ್ʼ ಸಿನಿಮಾದಲ್ಲಿ ಪತ್ರಕರ್ತೆಯಾದ ಕೆಜಿಎಫ್‌ ನಟಿ ಅರ್ಚನಾ ಜೋಯಿಸ್

    ಶಿವಣ್ಣ ನಟನೆಯ `ಘೋಸ್ಟ್’ (Ghost) ಸಿನಿಮಾ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುಲೇ ಇದೆ. ಸ್ಟಾರ್ ಕಲಾವಿದರ ದಂಡೇ ಶಿವಣ್ಣನ ಟೀಮ್‌ಗೆ ಸೇರ್ಪಡೆಯಾಗುತ್ತಿದೆ. ಸದ್ಯ `ಕೆಜಿಎಫ್’ ಖ್ಯಾತಿಯ ಅರ್ಚನಾ ಜೋಯಿಸ್ (Archana Jois) `ಘೋಸ್ಟ್’ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ.

     

    View this post on Instagram

     

    A post shared by Archana Jois (@jois_archie)

    `ವೇದ’ ಬಳಿಕ ಶಿವಣ್ಣ ನಟನೆಯ `ಘೋಸ್ಟ್’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇತ್ತೀಚಿಗೆ ಚಿತ್ರತಂಡಕ್ಕೆ ಅನುಪಮ್ ಖೇರ್, ಜಯರಾಮ್, ಪ್ರಶಾಂತ್ ನಾರಾಯಣ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಈಗ ನಟಿ ಅರ್ಚನಾ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಜೀವತುಂಬಿದ್ದಾರೆ. ಇದನ್ನೂ ಓದಿ: ರಾಕಿಂಗ್ ಸ್ಟಾರ್ ಮನೆ ಮುಂದೆ ಜನಸಾಗರ: ಯಶ್‌ ಜೊತೆಗೆ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

    ಶ್ರೀನಿ ನಿರ್ದೇಶನದ ಈ ಚಿತ್ರದಲ್ಲಿ `ಕೆಜಿಎಫ್’ (Kgf) ನಟಿ ಅರ್ಚನಾ ಪತ್ರಕರ್ತೆಯ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ತಮ್ಮ ಭಾಗದ ಚಿತ್ರೀಕರಣ ಕೂಡ ಕಂಪ್ಲೀಟ್ ಮಾಡಿದ್ದಾರೆ. ಎಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ಅರ್ಚನಾ ನಟಿಸಿದ್ದಾರೆ.

    ಸಂದೇಶ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಶಿವಣ್ಣ ವಿಭಿನ್ನ ಗೆಟಪ್‌ನಲ್ಲಿ ನಟಿಸಿದ್ದಾರೆ. ಈಗಾಗಲೇ ಸಿನಿಮಾ 60ರಷ್ಟು ಚಿತ್ರೀಕರಣ ಆಗಿದೆ. ಸದ್ಯದಲ್ಲೇ 3ನೇ ಹಂತದ ಶೂಟಿಂಗ್ ಶುರುವಾಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಳಕಿನ ಹಬ್ಬಕ್ಕೆ ‘ಕೆಜಿಎಫ್’ ಬೆಡಗಿಯ ಹೊಸ ಫೋಟೋ ಶೂಟ್

    ಬೆಳಕಿನ ಹಬ್ಬಕ್ಕೆ ‘ಕೆಜಿಎಫ್’ ಬೆಡಗಿಯ ಹೊಸ ಫೋಟೋ ಶೂಟ್

    ದುಕಿನ ಕತ್ತಲೆಯನ್ನು ಕಳೆದು ಬೆಳಕಿನ ಭರವಸೆ ನೀಡುವ ದೀಪಗಳ ಹಬ್ಬ ದೀಪಾವಳಿಯನ್ನು (Deepavali) ಎಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ. ಚಂದನವನದಲ್ಲೂ ದೀಪಾವಳಿಯ ಸಂಭ್ರಮ ಜೋರಾಗಿಯೇ ಮನೆ ಮಾಡಿದೆ. ಕೆಜಿಎಫ್ (KGF) ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಖ್ಯಾತಿ ಗಳಿಸಿರೋ ನಟಿ ಅರ್ಚನಾ ಜೋಯಿಸ್ ದೀಪಾವಳಿ ಸಂಭ್ರಮದಲ್ಲಿದ್ದು, ಹೊಸದೊಂದು ಫೋಟೋಶೂಟ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

    ದೀಪಾವಳಿ ಪ್ರಯುಕ್ತ ಕಲರ್ ಫುಲ್ ಬೆಳಕಿನ ನಡುವೆ ಅರ್ಚನಾ ಜೋಯಿಸ್ (Archana Jois) ಫೋಟೋಶೂಟ್ ಮಾಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, ಕಲರ್ ಫುಲ್ ಆಗಿ ಮಿಂಚಿರೋ ನಟಿಯನ್ನು ಕಂಡು ಎಲ್ಲರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದನ್ನೂ ಓದಿʻಹೆಡ್‌ ಬುಷ್‌ʼ ವಿವಾದ – ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಆಯ್ತು #WeStandWithDhananjaya ಹ್ಯಾಷ್‌ ಟ್ಯಾಗ್‌

    ಸೆಲೆಬ್ರೆಟಿ ಫೋಟೋಗ್ರಾಫರ್ ನಾಗರಾಜ್ ಸೋಮಯಾಜಿ ರೂಪಿಸಿದ್ದ ಕಾನ್ಸೆಪ್ಟ್ ನಡಿ ಫೋಟೋಗಳನ್ನು ಸೆರೆ ಹಿಡಿಯಲಾಗಿದೆ. ನಾಗರಾಜ್ ಸೋಮಯಾಜಿ ತಮ್ಮ ಫೋಕಸ್ ಫೋಟೋಗ್ರಫಿ ಸರ್ವಿಸ್ ನಡಿ ಈ ಕಲರ್ ಫುಲ್ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಅರ್ಚನಾ ಜೋಯಿಸ್ ಚೆಂದದ ಈ ಫೋಟೋಗಳಿಗೆ ಯೋಗಿತ ಕಾಸ್ಟ್ಯೂಮ್ ಡಿಸೈನ್, ರೇಣುಕ ಹೇರ್ ಸ್ಟೈಲ್ ಮತ್ತು ಮೇಕಪ್ ಮಾಡಿದ್ದಾರೆ.

    ಫೋಟೋಶೂಟ್ (Photo Shoot) ಬಗ್ಗೆ ಪ್ರತಿಕ್ರಿಯೆಸಿರುವ ನಟಿ ಅರ್ಚನಾ ಜೋಯಿಸ್ ದೀಪಾವಳಿ ಪ್ರಯುಕ್ತ ಫೋಟೋಶೂಟ್ ಮಾಡಲಾಗಿದೆ. ದೀಪಾವಳಿ ಅಂದ್ರೆ ಬೆಳಕು ಅದನ್ನೇ ಥೀಮ್ ಆಗಿಸಿಕೊಂಡು ನಾಗರಾಜ್ ಸೋಮಯಾಜಿ ಫೋಟೋಶೂಟ್ ಮಾಡಿದ್ದಾರೆ ಎಂದು ತಿಳಿಸಿದ್ರು. ಹಾಗೆ ದೀಪಾವಳಿ ಸಂಭ್ರಮದ ಬಗ್ಗೆಯೂ ಅನಿಸಿಕೆ ಹಂಚಿಕೊಂಡಿದ್ದು, ಪಟಾಕಿ ಹೊಡೆಯೋ ಅಭ್ಯಾಸ ಹೊರಟು ಹೋಗಿದೆ. ದೀಪಗಳ ಮೂಲಕವೇ ದೀಪಾವಳಿ ಸೆಲೆಬ್ರೇಟ್ ಮಾಡುತ್ತಿದ್ದೇವೆ. ನನಗೆ ಈ ಬಾರಿ ದೀಪಾವಳಿ ತುಂಬಾ ಸ್ಪೆಷಲ್. ಯಾಕಂದ್ರೆ ‘ಹೊಂದಿಸಿ ಬರೆಯಿರಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಪ್ರಚಾರ ಕೂಡ ಜೋರಾಗಿ ನಡೆಯುತ್ತಿದೆ ಎಂದು ತಿಳಿಸಿದ್ರು.

    ಕೆಜಿಎಫ್ ಸಿನಿಮಾ ನಂತರ ಸ್ಯಾಂಡಲ್ ವುಡ್ ಅಂಗಳದಲ್ಲಿ ಅರ್ಚನಾ ಜೋಯಿಸ್ ಸಖತ್ ಬ್ಯುಸಿಯಾಗಿದ್ದಾರೆ. ಇವರು  ನಟಿಸಿರುವ ‘ಹೊಂದಿಸಿ ಬರೆಯಿರಿ’ ಸಿನಿಮಾ ನವೆಂಬರ್ 18ರಂದು ಬಿಡುಗಡೆಯಾಗುತ್ತಿದ್ದು, ‘ಕ್ಷೇತ್ರಪಾಲ’ ಸಿನಿಮಾ ಕೂಡ ಬಿಡುಗಡೆಯ ಸನಿಹದಲ್ಲಿದೆ.

    Live Tv
    [brid partner=56869869 player=32851 video=960834 autoplay=true]

  • ‘ಸುಮ್ಮನೆ’ ಹಾಡುತ್ತಾ ಹೊಂದಿಸಿ ಬರೆಯಿರಿ ಅಂತಿದ್ದಾರೆ ಕೆಜಿಎಫ್ ಅರ್ಚನಾ

    ‘ಸುಮ್ಮನೆ’ ಹಾಡುತ್ತಾ ಹೊಂದಿಸಿ ಬರೆಯಿರಿ ಅಂತಿದ್ದಾರೆ ಕೆಜಿಎಫ್ ಅರ್ಚನಾ

    ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಹೊಂದಿಸಿ ಬರೆಯಿರಿ’ ಸಿನಿಮಾ ಸಾಕಷ್ಟು ವಿಶೇಷತೆಗಳಿಂದ ಗಮನಸೆಳೆಯುತ್ತಿದೆ. ತಾರಾಗಣ, ಕಂಟೆಂಟು, ಕ್ವಾಲಿಟಿ , ಟೀಸರ್ ಹಾಗೂ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾದಿಂದ ಬದುಕಿ ಸುಮ್ಮನೆ ಎಂಬ ಮೆಲೋಡಿ ಹಾಡು ಬಿಡುಗಡೆಯಾಗಿದೆ. ರಾಮೇನಹಳ್ಳಿ ಜಗನ್ನಾಥ್ ಅರ್ಥಪೂರ್ಣ ಪದಪುಂಜಗಳನ್ನು ಪೊಣಿಸಿ ರಚಿಸಿರುವ ಹಾಡಿಗೆ ಜೋ ಕೋಸ್ಟ ಅದ್ಭುತ ಸಂಗೀತ ನೀಡುವುದರ ಜೊತೆಗೆ ಹಾಡಿಗೆ ಧ್ವನಿಯಾಗಿದ್ದಾರೆ.

    ಗುಳ್ಟು ಖ್ಯಾತಿಯ ನವೀನ್ ಹಾಗೂ ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ಅಮ್ಮನಾಗಿ ನಟಿಸಿದ್ದ ಅರ್ಚನಾ ಜೋಯಿಸ್  ಕೆ. ಜಿ. ಎಫ್ ನಂತರ ಹೊಂದಿಸಿ ಬರೆಯಿರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪರಿಸ್ಥಿತಿಗಳನ್ನು ಹೊಂದಿಕೊಂಡು ಸಾಗುವ ಬದುಕಿನ ಪಯಣದ ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಏಳು ಯುವಕ-ಯುವತಿಯರ ಒಂದೊಂದು ಕಥೆ, ಪ್ರೀತಿ ತುಂಬಿದೆ. ಈಗಾಗಲೇ ಹೊಂದಿಸಿ ಬರೆಯಿರಿ ಸಿನಿಮಾದ  ಶೂಟಿಂಗ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಟಗರು  ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ‘ಗುಳ್ಟು’ ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದ ಶಾಂತಿ ಸಾಗರ್‌ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಇದನ್ನೂ ಓದಿ:ಕರೀನಾ ಬರೆದ ಪ್ರೆಗ್ನೆನ್ಸಿ ಬೈಬಲ್ ಪುಸ್ತಕ ಕೇಸು: ಸರ್ಕಾರದ ಮೂಲಕ ದೂರು ದಾಖಲಿಸಿ ಎಂದ ಹೈಕೋರ್ಟ್

    ಕೋಸ್ಟ ಸಂಗೀತ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ದೊಡ್ಡ ತಾರಾಬಳಗವೇ ನಟಿಸಿರುವ ಹೊಂದಿಸಿ ಬರೆಯಿರಿ ಸಿನಿಮಾವನ್ನು “ಸಂಡೇ ಸಿನಿಮಾಸ್ “ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಅವರ ಸ್ನೇಹಿತರು ನಿರ್ಮಾಣ ಮಾಡಿದ್ದು, ಚೂರಿಕಟ್ಟೆ ಖ್ಯಾತಿಯ ಪ್ರವೀಣ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಗಜಾನನ ಅಂಡ್ ಗ್ಯಾಂಗ್ ಖ್ಯಾತಿಯ ಶ್ರೀಮಹಾದೇವ್, ಗಾಳಿಪಟ ಚಿತ್ರ ಖ್ಯಾತಿಯ ಭಾವನಾರಾವ್ ಹೀಗೆ ಹಲವು ಪ್ರತಿಭೆಗಳು ಸಿನಿಮಾದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕರ್ಮದ ಬಗ್ಗೆ ಎಚ್ಚರಿಕೆ ನೀಡ್ತಿದೆ ‘ಕಾಲಾಂತಕ’

    ಕರ್ಮದ ಬಗ್ಗೆ ಎಚ್ಚರಿಕೆ ನೀಡ್ತಿದೆ ‘ಕಾಲಾಂತಕ’

    ಪ್ರಯೋಗಾತ್ಮಕ ಮತ್ತು ವಿಭಿನ್ನ ಕಥಾ ವಸ್ತು ಹೊಂದಿರುವ ಸಿನಿಮಾ ‘ಕಾಲಾಂತಕ’. ಮಾರ್ಕಂಡೇಯನ ಪುರಾಣದಲ್ಲಿ ಶಿವನನ್ನು ಕಾಲಾಂತಕ ಎಂಬ ಹೆಸರಿನಿಂದ ಕರೆಯುತ್ತಾರೆ. ಇದೋಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸದ್ದು ಮಾಡಿದ್ದು, ಕುತೂಹಲ ಹುಟ್ಟಿಸಿದೆ. ಸದ್ಯ ‘ಕಲಾಂತಕ’ ಸಿನಿಮಾದ ಟೀಸರ್ ರಿಲೀಸ್ ಮಾಡಿರುವ ಚಿತ್ರತಂಡ ಮನುಷ್ಯನ ಪಾಪ ಪ್ರಜ್ಞೆಯನ್ನು ನೆನಪಿಸುತ್ತಿದೆ.

    ಆ ಕತ್ತಲ ರಾತ್ರಿ, ಜೋರು ಸುಳಿವ ಮಳೆಯಲ್ಲಿ ಪಾದದ ಗುರುತು ಕಾಣಲ್ಲ. ಆದ್ರೆ ಮಾಡಿದ ಪಾಪ ಕಾಡದೆ ಬಿಡಲ್ಲ. ದೇಹ ಮತ್ತು ದ್ವೇಷ ಎರಡು ಭಿನ್ನವಾಗಿರುತ್ತೆ ಎಂಬ ವಿಷಯವನ್ನ ಸಿನಿಮಾದ ಟೀಸರ್ ನಲ್ಲಿ ತೋರಿಸಲಾಗಿದೆ. ಸಿನಿಮಾ ಟೀಸರ್ ನೋಡಿದಾಗಿನಿಂದ ಮುಂದಿನ ಅಪ್ ಡೇಟ್ ಗಾಗಿ ಕಾಯುವಂತ ಕುತೂಹಲ ಹುಟ್ಟಿದೆ.

    ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಕಾಲಾಂತಕ’ ಚಿತ್ರ, ಈಗಾಗಲೇ ಸದ್ದಿಲ್ಲದೆ ಚಿತ್ರೀಕರಣವನ್ನು ಪೂರ್ಣಗೊಳಿಸಿ, ರಿಲೀಸ್‍ಗೆ ರೆಡಿಯಾಗಿದೆ. ಈ ಹಿಂದೆ ‘ಜ್ವಲಂತಂ’ ಎನ್ನುವ ಹೆಸರಿನ ಚಿತ್ರವನ್ನು ನಿರ್ದೇಶಿಸಿದ್ದ ಅಂಬರೀಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

    ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಸೇರಿದಂತೆ ಸುಮಾರು 40 ದಿನಗಳ ಕಾಲ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಸದ್ಯ ಟೀಸರ್ ಮೂಲಕ ಸದ್ದು ಮಾಡುತ್ತಿರುವ ‘ಕಾಲಾಂತರ’ದಲ್ಲಿ ಯಶ್ವಂತ್ ಶೆಟ್ಟಿ, ಕಾರ್ತಿಕ್ ಸಾಮಗ, ಸುಶ್ಮಿತಾ ಜೋಷಿ, ಶ್ರೀಧರ್, ಧಮೇಂದ್ರ ಅರಸ್, ಪ್ರಕಾಶ್, ಕಡ್ಡಿಪುಡಿ ಚಂದ್ರು ಅನೇಕರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಲೇಶ್ ಛಾಯಾಗ್ರಹಣ, ಹರೀಶ್ ಕೊಮ್ಮೆ ,ಫಿನ್ನಿ ಕುರಿಯನ್ ಸಂಗೀತ ಸಂಯೋಜಿಸಿದ್ದಾರೆ. ಭಾಸ್ಕರ್ ಮೂವೀ ಲೈನ್ಸ್ ಬ್ಯಾನರ್‍ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಕೆಜಿಎಫ್ ಸಿನಿಮಾದ ಜೂನಿಯರ್ ಯಶ್ ತಾಯಿ ಪಾತ್ರ ಮಾಡಿದ್ದ ಅರ್ಚನಾ ಜೋಯಿಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  • ‘ಕೆಜಿಎಫ್’ ನಲ್ಲಿ ರಾಕಿ ತಾಯಿ ಅರ್ಚನಾ ಮಾತು

    ‘ಕೆಜಿಎಫ್’ ನಲ್ಲಿ ರಾಕಿ ತಾಯಿ ಅರ್ಚನಾ ಮಾತು

    ಬೆಂಗಳೂರು: ಒಂದು ಸಣ್ಣಪಾತ್ರ ಹೊಸ ಜೀವನಕ್ಕೆ ನಾಂದಿಯಾಗುತ್ತೆ ಎಂಬುದಕ್ಕೆ ಕೆಜಿಎಫ್ ಸಿನಿಮಾದಲ್ಲಿ ನಟ ಯಶ್ ಅವರಿಗೆ ತಾಯಿ ಪಾತ್ರದಲ್ಲಿ ಅಭಿನಯಿಸಿರುವ ಅರ್ಚನಾ ಜೋಯಿಸ್ ಅವರೇ ತಾಜಾ ಉದಾಹರಣೆಯಾಗಿದ್ದಾರೆ.

    ಬೆಳ್ಳಿಪರದೆ ಮೇಲೆ ಪಾತ್ರಗಳು ಬರುವುದು ಕೆಲವು ನಿಮಿಷಗಳಾದರೂ, ಅವರು ಹೇಳುವ ಮಾತುಗಳಿಂದ ಜನಮನದಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತದೆ. ಈಗ ‘ಕೆಜಿಎಫ್’ ಸಿನಿಮಾದ ಮೇಜರ್ ಹೈಲೈಟ್‍ಗಳಲ್ಲಿ ತಾಯಿ ಪಾತ್ರ ಕೂಡ ಒಂದಾಗಿದೆ. ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ತಾಯಿ ಪಾತ್ರ ಮಾಡಿರುವುದು ಅರ್ಚನಾ ಜೋಯಿಸ್. ಇವರು ಕಿರುತೆರೆಯ ಪ್ರತಿಭೆಯಾಗಿದ್ದು, ಸೀರಿಯಲ್‍ ಗಳಲ್ಲಿ ಅಭಿನಯಿಸಿಕೊಂಡು ಭರತನಾಟ್ಯದಲ್ಲಿ ಬ್ಯುಸಿಯಾಗಿದ್ದರು.

    ಯಾವುದೂ ಅಸಾಧ್ಯವಲ್ಲ ಅನ್ನೋದಕ್ಕೆ ರಾಕಿಭಾಯ್ ತಾಯಿ ಲುಕ್‍ ನಲ್ಲಿ ಕಾಣಿಸಿಕೊಂಡಿರುವ ಅರ್ಚನಾ ಸಾಕ್ಷಿಯಾಗಿದ್ದರು. ಸೀರಿಯಲ್‍ಗಳಲ್ಲಿ ಕಾಣಿಸಿಕೊಂಡು, ಭರತನಾಟ್ಯ ಮಾಡಿಕೊಂಡಿದ್ದ ಅರ್ಚನಾ ಇಂದು ನ್ಯಾಷನಲ್ ಲೆವೆಲ್‍ನಲ್ಲಿ ಗುರುತಿಸಿಕೊಂಡಿದ್ದಾರೆ. ಬೇರೆ ಚಿತ್ರರಂಗದ ನಿರ್ದೇಶಕರು, ಟೆಕ್ನೀಷಿಯನ್‍ ಗಳು ಇವರಿಗೆ ಮೆಸೇಜ್ ಮಾಡಿ ಶುಭಾಶಯ ಮಾಡುತ್ತಿದ್ದಾರೆ. ಎಲೆಮರೆ ಕಾಯಿಯಂತಿದ್ದ ಅರ್ಚನಾರನ್ನು ಇಂದು 5 ಭಾಷೆ ಜನ ಗುರುತಿಸುತ್ತಿದ್ದಾರೆ.

    ಪಬ್ಲಿಕ್  ಟಿವಿ ಜೊತೆಯ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ನನ್ನ ಸ್ನೇಹಿತೆ ಫೋನ್ ಮಾಡಿ ಯಶ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದೆ ಎಂದು ಹೇಳಿದರು. ಆಗ ತುಂಬಾ ಸಂತಸ ಪಟ್ಟೆ. ಆದರೆ ಅವರ ತಾಯಿ ಪಾತ್ರದಲ್ಲಿ ಅಭಿನಯಿಸಬೇಕು ಎಂದಾಗ ನಾನು ಇಷ್ಟು ಚಿಕ್ಕವಯಸ್ಸಿಗೆ ತಾಯಿ ಪಾತ್ರ ಮಾಡೋದಾ ಬೇಡವಾ ಅನ್ನೋ ಡೌಟ್ ಇತ್ತು. ಕೊನೆಗೆ ಮನೆಯವರ ಜೊತೆ ಮಾತನಾಡಿ ಒಪ್ಪಿಕೊಂಡೆ. ಆಗ ನಿರ್ದೇಶಕ ಪ್ರಶಾಂತ್ ನೀಲ್ ಪಾತ್ರದ ಬಗ್ಗೆ ವಿವರಿಸಿ ಪಾತ್ರ ಮಾಡುವಂತೆ ಒತ್ತಾಯಿಸಿದರು ಎಂದು ಹೇಳಿದ್ದಾರೆ.

    ಮೇಕಪ್ ಆದ ಮೇಲೆ ನಾನು ತುಂಬಾ ವಿಭಿನ್ನವಾಗಿ ಕಾಣಿಸುತ್ತಿದ್ದೆ. ನನ್ನ ಫಸ್ಟ್ ಸೀನ್ ಗರ್ಭಿಣಿ ಪಾತ್ರ ಮೊದಲು ಮುಜುಗರವಾಗಿತ್ತು. ನಾನು ಕೆಜಿಎಫ್ ಜರ್ನಿಯಲ್ಲಿ ಕೆಲಸ ಮಾಡಿರುವುದು 10 ದಿನ ಮಾತ್ರ. ನಾನು ತೆರೆಮೇಲೆ ಬರುವುದು 4 ರಿಂದ 5 ನಿಮಿಷ ಮಾತ್ರವಾಗಿದ್ದು, ಆದರೆ ಈ ಪಾತ್ರದ ಖದರ್ ಹೇಗಿದೆ ಅಂದರೆ ಸಿನಿಮಾ ನೋಡಿ ಥಿಯೇಟರ್ ನಿಂದ ಹೊರಗಡೆ ಬಂದ ಮೇಲೂ ಆ ಡೈಲಾಗ್ ಕಿವಿಯಲ್ಲಿ ಮೊಳಗುತ್ತಿರುತ್ತದೆ. ಮನದಲ್ಲಿ ಮನೆ ಮಾಡಿ ನೆಲೆಸಿರುತ್ತದೆ ಎಂದು ಕೆಜಿಎಫ್ ಅನುಭವವನ್ನು ಅರ್ಚನಾ ಮೆಲುಕು ಹಾಕಿದ್ದಾರೆ.

    ಟ್ರೇಲರ್ ಬಂದ ಮೇಲೆ ನನಗೆ ಎಲ್ಲರೂ ಗೌರವ ಕೊಡುತ್ತಿದ್ದಾರೆ. ನನಗೆ ಈಗ ಜವಾಬ್ದಾರಿ ಹೆಚ್ಚಾಗಿದೆ. ಬೇರೆ ರಾಷ್ಟ್ರದಿಂದ ಮೆಸೇಜ್ ಮಾಡಿ ಶುಭಾಶಯವನ್ನು ತಿಳಿಸುತ್ತಿದ್ದಾರೆ ಎಂದು ಅರ್ಚನಾ ಹೇಳಿದ್ದಾರೆ. ಒಟ್ಟಿನಲ್ಲಿ ‘ಕೆಜಿಎಫ್’ ಅರ್ಚನಾಗೆ ಒಂದು ಗಟ್ಟಿನೆಲೆಯನ್ನ ಕಟ್ಟಿಕೊಟ್ಟಿದೆ. ಯಾವ ಪಾತ್ರವೂ ಚಿಕ್ಕದಲ್ಲ, ಯಾವೂದು ಅಸಾಧ್ಯವಲ್ಲ ಅನ್ನೋದನ್ನ ಮತ್ತೊಮ್ಮೆ ‘ಕೆಜಿಎಫ್’ ಸಾಬೀತು ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv