Tag: Archana

  • ಚಂದನ್ ಶೆಟ್ಟಿ ಜೊತೆ ಹೆಜ್ಜೆ ಹಾಕಿದ ತುಪ್ಪದ ಬೆಡಗಿ ರಾಗಿಣಿ

    ಚಂದನ್ ಶೆಟ್ಟಿ ಜೊತೆ ಹೆಜ್ಜೆ ಹಾಕಿದ ತುಪ್ಪದ ಬೆಡಗಿ ರಾಗಿಣಿ

    ಷಾ ಗೋವಿಂದರಾಜು ನಿರ್ಮಾಣದ, ಸುಜಯ್ ಶಾಸ್ತ್ರಿ (Sujay Shastri) ನಿರ್ದೇಶನದಲ್ಲಿ ಚಂದನ್ ಶೆಟ್ಟಿ (Chandan) ನಾಯಕರಾಗಿ ನಟಿಸುತ್ತಿರುವ ‘ಎಲ್ರ ಕಾಲೆಳಿಯತ್ತೆ ಕಾಲ’ ಚಿತ್ರದ ಪ್ರಮೋಷನ್ ಸಾಂಗ್ ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಯಿತು. ಈ ಹಾಡಿನಲ್ಲಿ ಚಂದನ್ ಶೆಟ್ಟಿ ಅವರ ಜೊತೆ ರಾಗಿಣಿ ದ್ವಿವೇದಿ (Ragini,) ನಟಿಸಿದ್ದಾರೆ. ಚಂದನ್ ಶೆಟ್ಟಿ ಅವರೆ ಈ ಹಾಡನ್ನು ಬರೆದಿದ್ದು, ಮಂಗ್ಲಿ ಹಾಗೂ ಚಂದನ್ ಶೆಟ್ಟಿ ಹಾಡಿದ್ದಾರೆ. ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಾಡಿಗೆ ಮಾತ್ರ ಚಂದನ್ ಶೆಟ್ಟಿ ಅವರೆ ಸಂಗೀತ ನೀಡಿದ್ದಾರೆ. ಪ್ರವೀಣ್ – ಪ್ರದೀಪ್ ಈ ಚಿತ್ರದ ಸಂಗೀತ ನಿರ್ದೇಶಕರು.

    ನಾನು ಕೆಂಪೇಗೌಡ ಚಿತ್ರದಿಂದಲೂ ರಾಗಿಣಿ ಅವರ ಅಭಿಮಾನಿ. ಈಗ ಅವರ ಜೊತೆ ಹಾಡೊಂದರಲ್ಲಿ ನಟಿಸಿರುವುದು ಸಂತೋಷವಾಗಿದೆ. ಹಾಡು ಹಾಗೂ ಚಿತ್ರ ಎಲ್ಲರ ಮನ ಗೆಲಲ್ಲಿದೆ.  ಇದು ನಾನು ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ . ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಚಂದನ್ ಶೆಟ್ಟಿ. ಇದನ್ನೂ ಓದಿ: ಕ್ರಿಕೆಟರ್ ಆಗುವ ಕನಸು ಕಂಡ ಬಡ ಹುಡುಗಿಗೆ ನಟ ಅರ್ಜುನ್ ಕಪೂರ್ ಸಾಥ್

    ಈ ಹಾಡು ಚೆನ್ನಾಗಿದೆ. ಚಂದನ್ ಶೆಟ್ಟಿ ಪ್ರತಿಭಾವಂತ. ಅವರು ಸಂಗೀತ ನೀಡಿ, ಹಾಡುವ ಹಾಡುಗಳು ನನಗೆ ಇಷ್ಟ‌. ಬಹಳ ದಿನಗಳಿಂದ ಅವರ ಜೊತೆ ನಟಿಸುವ ಕುರಿತು ಮಾತುಕತೆ ನಡೆಯುತ್ತಿತ್ತು. ಈಗ ಈ ಚಿತ್ರದ ಪ್ರಮೋಷನ್ ಸಾಂಗ್ ನಲ್ಲಿ ಒಟ್ಟಿಗೆ ಅಭಿನಯಿಸಿದ್ದೇವೆ ಎಂದು ತಿಳಿಸಿದ ನಟಿ ರಾಗಿಣಿ ದ್ವಿವೇದಿ ಚಿತ್ರಕ್ಕೆ ಶುಭ ಕೋರಿದರು.

    ಇದು 80/90 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಈ ಕಥೆಯನ್ನು ಇಷ್ಟಪಟ್ಟು ನಿರ್ಮಾಣಕ್ಕೆ ಮುಂದಾದ ಗೋವಿಂದರಾಜು ಅವರಿಗೆ ಹಾಗೂ ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ ನನ್ನ ಧನ್ಯವಾದ. ಸದ್ಯದಲ್ಲೇ ನಿಮ್ಮ ಮುಂದೆ ಬರುತ್ತೇವೆ ಎಂದು ನಿರ್ದೇಶಕ ಸುಜಯ್ ಶಾಸ್ತ್ರಿ ತಿಳಿಸಿದರು.

    ನಿರ್ದೇಶಕರು ಹೇಳಿದ ಕಥೆ ಕೇಳಿ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ಈ ಹಾಡು ಹಾಗೂ ಚಿತ್ರ ನೋಡಿ ಸಂತೋಷವಾಗಿದೆ. ನಾವು ಅಂದಕೊಂಡದಿಕ್ಕಿಂತ ಚಿತ್ರ ಚೆನ್ನಾಗಿ ಬಂದಿದೆ ಎಂದರು ನಿರ್ಮಾಪಕ ಗೋವಿಂದರಾಜು.

    ನಾಯಕಿ ಅರ್ಚನಾ ಕೊಟ್ಟಿಗೆ ಚಿತ್ರದಲ್ಲಿ ನಟಿಸಿರುವ ರಜನಿಕಾಂತ್, ರಾಕೇಶ್ ಪೂಜಾರಿ, ಕಥೆ ಬರೆದಿರುವ ರಾಜ್ ಗುರು, ಛಾಯಾಗ್ರಹಕ ವಿಶ್ವಜಿತ್ ರಾವ್ ಚಿತ್ರದ ಕುರಿತು ಮಾತನಾಡಿದರು. ಸಮಾರಂಭಕ್ಕೆ ಆಗಮಿಸಿದ್ದ ಚಿತ್ರರಂಗದ ಗಣ್ಯರು ಚಿತ್ರಕ್ಕೆ ಶುಭ ಕೋರಿದರು.

  • ‘ಸಂಸ್ಕಾರ ಭಾರತ’ದಲ್ಲಿ ಅನಾಮಿಕನ ರೋಚಕ ಸ್ಟೋರಿ

    ‘ಸಂಸ್ಕಾರ ಭಾರತ’ದಲ್ಲಿ ಅನಾಮಿಕನ ರೋಚಕ ಸ್ಟೋರಿ

    ’ಸಂಸ್ಕಾರ ಭಾರತ’ (Sanskar Bharat) ಎನ್ನುವ ಚಿತ್ರದ ಮುಹೂರ್ತ ಸಮಾರಂಭವು ರಾಜಾಜಿನಗರದ ಗಣೇಶ ದೇವಸ್ಥಾನದಲ್ಲಿ ನಡೆಯಿತು. ಡಾ.ಟಿ.ಶಿವಕುಮಾರ್ ನಾಗರನವಿಲೆ, ಅಧ್ಯಕ್ಷರು, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಇವರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ನಾಗೇಶ್.ಎನ್ (Nagesh) ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವುದು ಎರಡನೇ ಅನುಭವ. ಡಾ.ವಿ.ನಾಗರಾಜ್ ಅವರು ಗ್ಲೋಬಲ್ ಮ್ಯಾನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ’ಅನಾಮಿಕ ಮತ್ತು ಇತರೆ ಕಥೆಗಳು’ ಎನ್ನುವ ಕಥಾಸಂಕಲನದಿಂದ ಆಯ್ದ ’ಅನಾಮಿಕ’ ಕಥೆಯು ಚಿತ್ರರೂಪದಲ್ಲಿ ಮೂಡಿಬರುತ್ತಿದೆ. ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ಮೋದಿ, ಹೇಮಾ ಮಾಲಿನಿಗೆ ರಾಖಿ ಸಾವಂತ್ ಥ್ಯಾಂಕ್ಸ್ ಹೇಳಿದ್ದೇಕೆ?

    ನಾಯಕ ಭಾರತೀಯ ಸಂಪ್ರದಾಯದವನು. ವೈಚಾರಿಕತೆ ಹಾಗೂ ಅದರ ಹಿಂದಿರುವ ವೈಜ್ಞಾನಿಕತೆಯ ಕುರಿತಾಗಿ ಸಂಶೋಧನೆ ನಡೆಸಲು ಅನಾಮಿಕ ಹೆಸರಿನಲ್ಲಿ ಲೇಖನ ಬರೆಯುತ್ತಿದ್ದ ಪಂಡಿತರೊಬ್ಬರನ್ನು ಅರಸಿ ರಾಜ್ಯದ ಕೆಲವು ಪ್ರದೇಶಗಳಲ್ಲಿ ಹುಡುಕಾಡುವಾಗ ಅವನಿಗೆ ಕಾಡುವ ಅನೇಕ ಜೀವಂತ ಸಮಸ್ಯೆಗಳು ಸನ್ನಿವೇಶಗಳ ರೂಪದಲ್ಲಿ ಎದುರಾಗುತ್ತದೆ. ಮುಂದೆ ಅದನ್ನು ಹೇಗೆ ಎದುರಿಸುತ್ತಾನೆ, ಅನಾಮಿಕನನ್ನು ಯಾವ ರೀತಿ ಕಂಡು ಹಿಡಿಯುತ್ತಾನೆ? ಆ ಮೂಲಕ ಸಂಶೋಧನೆ ನಡೆಸಿ ನಮ್ಮ ಸಂಸ್ಕ್ರತಿಯನ್ನು ಹೇಗೆ ಎತ್ತಿ ಹಿಡಿಯುತ್ತಾನೆ ಎಂಬುದು ಚಿತ್ರದ ಸಾರಾಂಶವಾಗಿದೆ. ದೃಶ್ಯಗಳು ಸಹಜತೆಗೆ ಹತ್ತಿರ ಇರುವಂತೆ ಸೆರೆಹಿಡಿಯಲಾಗುತ್ತಿದೆ.

    ಸ್ವದೇಶವನ್ನು ಇಷ್ಟ ಪಡುವ ಹುಡುಗನಾಗಿ ಅಶೋಕ್ (Ashok) ನಾಯಕ. ಸದಾ ವಿದೇಶದ ಬಗ್ಗೆ ವ್ಯಾಮೋಹ ಹೊಂದಿರುವ ಹುಡುಗಿಯಾಗಿ ಅರ್ಚನಾ (Archana) ನಾಯಕಿ. ಮತ್ತೊಂದು ಮುಖ್ಯ ಪಾತ್ರದಲ್ಲಿ ಎಂ.ಡಿ.ಕೌಶಿಕ್ ಇವರೊಂದಿಗೆ ಎಂ.ಕೆ.ಮಠ, ಗಿರೀಶ್‌ಬೈಂದೂರು, ನಾಗರಾಜ್.ವಿ, ಪೂರ್ಣಿಮಾ, ರಾಧಿಕಾ, ಅನಿಲ್, ಹಮ್ಜಾ, ಬೇಬಿ ಫಾತಿಮಾ, ಮಾಸ್ಟರ್ ಫಹದ್ ನಟಿಸುತ್ತಿದ್ದಾರೆ. ಡಾ.ದೊಡ್ಡೆರಂಗೇಗೌಡ ಸಾಹಿತ್ಯದ ಗೀತೆಗಳಿಗೆ ರಾಜ್‌ಭಾಸ್ಕರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಪಿ.ವಿ.ಆರ್.ಸ್ವಾಮಿ, ಸಂಕಲನ ನಾಗೇಶ್ ನಾರಾಯಣ್, ಪ್ರಸಾಧನ ಶಿವು ಚಿತ್ರಕ್ಕಿದೆ. ಕುಂದಾಪುರ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣವನ್ನು 25 ದಿನಗಳ ಕಾಲ ಮೂರು ಹಂತಗಳಲ್ಲಿ ನಡೆಸಲು ಯೋಜನೆ ರೂಪಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅಂದು ಬೆಸ್ಟ್ ಫ್ರೆಂಡ್ ಹೆಂಡ್ತಿಯಾದ್ರು, ಇಂದು ಪತ್ನಿಯೇ ಬೆಸ್ಟ್ ಫ್ರೆಂಡ್: ರಮೇಶ್

    ಅಂದು ಬೆಸ್ಟ್ ಫ್ರೆಂಡ್ ಹೆಂಡ್ತಿಯಾದ್ರು, ಇಂದು ಪತ್ನಿಯೇ ಬೆಸ್ಟ್ ಫ್ರೆಂಡ್: ರಮೇಶ್

    ಬೆಂಗಳೂರು: ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟ, ನಿರ್ದೇಶಕ, ಸೃಜನ ಶೀಲ ವ್ಯಕ್ತಿ ರಮೇಶ್ ಅರವಿಂದ್. ಇತ್ತೀಚೆಗಷ್ಟೇ ತಮ್ಮ ಮಗಳ ಮದುವೆಯನ್ನು ನಟ ಅದ್ದೂರಿಯಾಗಿ ನೆರವೇರಿಸಿದ್ರು. ಇದೀಗ ಅವರು ತಮ್ಮ ವೈವಾಹಿಕ ಜೀವನದ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ.

    ಹೌದು. ಇಂದು ನಟ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿ ತಮ್ಮ 30 ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಇಂದು ತಮ್ಮ ಮದುವೆಯ 2 ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ವಿಶೇಷ ಸಾಲು ಕೂಡ ಬರೆದುಕೊಂಡಿದ್ದಾರೆ. ‘ಅಂದು ಬೆಸ್ಟ್ ಫ್ರೆಂಡ್ ಹೆಂಡತಿಯಾದರು, ಇಂದು ಹೆಂಡತಿಯೇ ಬೆಸ್ಟ್ ಫ್ರೆಂಡ್’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನಟ ತಮ್ಮ ಪತ್ನಿಯನ್ನು ಒಳ್ಳೆಯ ಗೆಳತಿ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಜು.12 ರಂದು ಯಾರೂ ಮನೆಯ ಬಳಿ ಬರಬೇಡಿ: ಶಿವಣ್ಣ ಮನವಿ

    ರಮೇಶ್ ಅವರು ಜುಲೈ 7 ರಂದು 1991 ರಲ್ಲಿ ತಾವು ಪ್ರೀತಿಸಿದ ಅರ್ಚನಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಂದಿಗೆ ಅವರ ದಾಂಪತ್ಯಕ್ಕೆ 30 ವರ್ಷವಾಗಿದೆ. ಒಟ್ಟಿನಲ್ಲಿ ರಮೇಶ್ ಅರವಿಂದ್ ಪರ್ಫೆಕ್ಟ್ ನಟ, ನಿರ್ದೇಶಕ ಎನಿಸಿಕೊಂಡಂತೆ ತಮ್ಮ ವೈಯಕ್ತಿಕ ಜೀವನದಲ್ಲೂ ಪರ್ಫೆಕ್ಟ್ ಗೃಹಸ್ಥ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದ ಡಿಸೆಂಬರ್ ನಲ್ಲಿ ಸಹೋದ್ಯೋಗಿ ಅಕ್ಷಯ್ ಜೊತೆ ರಮೇಶ್ ಪುತ್ರಿ ನಿಹಾರಿಕಾ ಅವರ ಮದುವೆ ನೆರವೇರಿತ್ತು.

  • ವೈವಾಹಿಕ ಜೀವನಕ್ಕೆ ಕಾಲಿಟ್ಟ `ಆ ದಿನಗಳು’ ನಟಿ

    ವೈವಾಹಿಕ ಜೀವನಕ್ಕೆ ಕಾಲಿಟ್ಟ `ಆ ದಿನಗಳು’ ನಟಿ

    ಬೆಂಗಳೂರು: ಸ್ಯಾಂಡಲ್‍ವುಡ್‍ನ `ಆ ದಿನಗಳು’ ಸಿನಿಮಾ ಖ್ಯಾತಿಯ ಅರ್ಚನಾ ವೇದಾ ತಮ್ಮ ಪ್ರಿಯಕರನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಅರ್ಚನಾ ವೇದಾ ತಮ್ಮ ಗೆಳೆಯ ಜಗದೀಶ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೈದರಾಬಾದಿನಲ್ಲಿ ಗುರು-ಹಿರಿಯರ ನಿಶ್ಚಯಿಸಿದ್ದ ಮೂಹೂರ್ತದಲ್ಲಿ ಈ ಜೋಡಿಯ ಮದುವೆ ಸಾಂಪ್ರದಾಯಿಕವಾಗಿ ನಡೆದಿದೆ.

    ಅರ್ಚಾನಾ ಮತ್ತು ಜಗದೀಶ್ ಅವರ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಟಾಲಿವುಡ್‍ ನ ಅನೇಕ ನಟ, ನಟಿಯರು, ನಿರ್ದೇಶಕರು ಬಂದು ನವ ಜೋಡಿಗೆ ಶುಭಾಶಯವನ್ನು ಕೋರಿದ್ದಾರೆ. ಆರತಕ್ಷತೆಯಲ್ಲಿ ಅರ್ಚನಾ ನೀಲಿ ಬಣ್ಣದ ಗೌನ್ ಧರಿಸಿ ಮಿಂಚಿದ್ದರೆ, ವರ ಜಗದೀಶ್ ಬಿಳಿ ಹಾಗೂ ಗೋಲ್ಡನ್ ಬಣ್ಣದ ಕುರ್ತಾ ಧರಿಸಿದ್ದರು.

    ಅರ್ಚನಾ ಹಲವು ದಿನಗಳಿಂದ ಜಗದೀಶ್ ಎಂಬವರನ್ನು ಪ್ರೀತಿಸುತ್ತಿದ್ದರು. ಇವರು ಹೆಲ್ತ್ ಕೇರ್ ಕಂಪನಿಯೊಂದರ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಪ್ರೀತಿಯ ವಿಚಾರವನ್ನು ಕುಟುಂಬದವರಿಗೆ ತಿಳಿಸಿದ್ದರು. ಎರಡೂ ಕುಟುಂಬದವರು ಸಂತೋಷದಿಂದ ಇಬ್ಬರ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದರು.

    ನಂತರ ಎರಡೂ ಫ್ಯಾಮಿಲಿ ಒಪ್ಪಿ ಅರ್ಚನಾ ಮತ್ತು ಜಗದೀಶ್ ಇಬ್ಬರ ನಿಶ್ಚಿತಾರ್ಥವನ್ನು ಎರಡು ತಿಂಗಳ ಹಿಂದೆಯಷ್ಟೆ ಹೈದರಾಬಾದಿನ ರಾಡಿಸನ್ ಹೋಟೆಲ್‍ನಲ್ಲಿ ಅದ್ಧೂರಿಯಾಗಿ ಮಾಡಿದ್ದರು. ಗುರು-ಹಿರಿಯರು ನಿಶ್ಚಯ ಮಾಡಿದ್ದ ಮುಹೂರ್ತದಲ್ಲಿ ರಿಂಗ್ ಬದಲಾಯಿಸಿಕೊಳ್ಳುವ ಮೂಲಕ ಅರ್ಜನಾ ಹಾಗೂ ಜಗದೀಶ್ ಎಂಗೇಜ್ ಆಗಿದ್ದರು. ಈ ಕಾರ್ಯಕ್ರಮಕ್ಕೆ ಹಲವಾರು ಸಿನಿಮಾ ಸೆಲೆಬ್ರಿಟಿಗಳು ಬಂದು ನವಜೋಡಿಗೆ ವಿಶ್ ಮಾಡಿದ್ದರು. ಇದನ್ನೂ ಓದಿ: ಪ್ರಿಯಕರನೊಂದಿಗೆ ಸ್ಯಾಂಡಲ್‍ವುಡ್ ನಟಿ ನಿಶ್ಚಿತಾರ್ಥ

    ಅರ್ಚನಾ ತಮ್ಮ ಫೇಸ್‍ಬುಕ್ ಪೇಜಿನಲ್ಲಿ ಮದುವೆಯಾದ ಸುಂದರ ಕ್ಷಣಗಳನ್ನು ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ನಟಿ ಅರ್ಚನಾ ಕನ್ನಡದಲ್ಲಿ `ಮೈತ್ರಿ’ `ಮಿಂಚು’ ಮತ್ತು `ಮೇಘ ವರ್ಷಿಣಿ’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರು ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲೂ ಅಭಿನಯಸಿದ್ದಾರೆ. ಅಲ್ಲದೇ ತೆಲುಗಿನ ಬಿಗ್ ಬಾಸ್ ಸೀಸನ್ ಒಂದರಲ್ಲೂ ಅರ್ಚನಾ ಪಾಲ್ಗೊಂಡಿದ್ದರು.

  • ಮದ್ವೆಯಾಗಿ ಮೊದ್ಲ ಬಾರಿಗೆ ಪತಿಯ ಮನೆಗೆ ಈ ಕಾರಿನಲ್ಲೇ ಬಂದಿದ್ದೆ: ಕಾರ್ ಮಾಲಕಿ ಕಣ್ಣೀರು

    ಮದ್ವೆಯಾಗಿ ಮೊದ್ಲ ಬಾರಿಗೆ ಪತಿಯ ಮನೆಗೆ ಈ ಕಾರಿನಲ್ಲೇ ಬಂದಿದ್ದೆ: ಕಾರ್ ಮಾಲಕಿ ಕಣ್ಣೀರು

    -ಪುಟ್ಟ ಮಗುವಿನಂತೆ ನೋಡಿಕೊಳ್ತಿದ್ರು

    ಬೆಂಗಳೂರು: ನಾನು ಮದುವೆಯಾಗಿ ಪತಿಯ ಮನೆಗೆ ಮೊದಲ ಬಾರಿಗೆ ಹೋಗಬೇಕಾದರೆ ಇದೇ ಕಾರು ನನ್ನನ್ನು ಕರೆದುಕೊಂಡು ಹೋಗಿತ್ತು. ಪುಟ್ಟ ಮಗುವಿನ ರೀತಿ ಕಾರನ್ನು ನೋಡಿಕೊಂಡಿದ್ವಿ, ಈಗ ತುಂಬಾ ನೋವಾಗುತ್ತಿದೆ ಎಂದು ಏರೋ ಇಂಡಿಯಾ ಶೋನಲ್ಲಿ ನಡೆದ ಅಗ್ನಿ ದುರಂತದಲ್ಲಿ ಕಾರ್ ಕಳೆದುಕೊಂಡ ಮಹಿಳೆಯೊಬ್ಬರು ಕಣ್ಣೀರು ಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಾರು ಕಳೆದುಕೊಂಡ ಅರ್ಚನಾ ಅವರು, ಟಿಕೆಟ್ ಎಲ್ಲ ಕ್ಲಿಯರ್ ಮಾಡಿಕೊಂಡು ಒಳಗೆ ಹೋಗಿದ್ದೆವೆ. ಆದರೆ ಐದು ನಿಮಿಷಗಳಲ್ಲಿಯೇ ಅಲ್ಲಿಂದ ಹೊಗೆ ಬರುತ್ತಿತ್ತು. ಏರ್ ಶೋ ನಡೆಯುತ್ತಿದ್ದ ಜಾಗದಿಂದ ಪಾಕ್ ಪಾರ್ಕಿಂಗ್ ಮಾಡಿದ್ದ ಜಾಗಕ್ಕೂ ಸುಮಾರು 2-3 ಕಿ.ಮೀ ದೂರವಿತ್ತು. ಹೀಗಾಗಿ ನಮಗೆ ಏನಾಯ್ತು ಎಂದು ಗೊತ್ತಾಗಿಲ್ಲ ಎಂದು ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ.

    ಸ್ವಲ್ಪ ಸಮಯದ ನಂತರ ನನ್ನ ಸಹೋದರಿ ಫೋನ್ ಮಾಡಿ ಮಾಧ್ಯಮಗಳಲ್ಲಿ ಅಗ್ನಿ ಅವಘಡ ಆಗಿದೆ ಎಂದು ಸುದ್ದಿ ಬರುತ್ತಿದೆ ಅಂತ ಹೇಳಿದ್ದಳು. ತಕ್ಷಣ ನಾವು ಬಂದು ನೋಡಿದಾಗ ಸಾಲು ಸಾಲು ಕಾರುಗಳಿಗೂ ಬೆಂಕಿ ಹೊತ್ತಿಕೊಂಡಿತ್ತು. ಯಾವ ಕಾರು ಎಂದು ಕಂಡು ಹಿಡಿಯಲು ಸಾಧ್ಯವಾಗದ ರೀತಿಯಲ್ಲಿ ಎಲ್ಲವೂ ಸುಟ್ಟು ಹೋಗಿವೆ. ಸ್ವಲ್ಪ ಸ್ವಲ್ಪ ಮಾರ್ಕ್ ನೋಡಿಕೊಂಡು ನಮ್ಮ ಕಾರನ್ನು ಹುಡುಕಬೇಕು. ಆದರೆ ಕಾರ್ ನೋಡಿದರೆ ದುಃಖವಾಗಿದೆ. ಎಲ್ಲರಿಗೂ ಇದೊಂದು ದೊಡ್ಡ ಆಘಾತವಾಗಿದೆ. ಆದರೆ ಜನಕ್ಕೆ ಏನು ಆಗದಿದ್ದರೆ ಸಾಕು, ಪೊಲೀಸರು ಮತ್ತು ಇಲ್ಲಿನ ಜನರು ಸಹಾಯ ಮಾಡುತ್ತಿದ್ದಾರೆ ಎಂದು ಅರ್ಚನಾ ಹೇಳಿದ್ದಾರೆ.

    ಇದೆಲ್ಲಾ 5-10 ನಿಮಿಷದಲ್ಲಿ ಆಗಿದೆ. ನಮ್ಮ ಕಾರು ಐ-20 ಆಗಿದ್ದು, ನನಗೆ ಇತ್ತೀಚೆಗೆ ಮದುವೆಯಾಗಿದೆ. ನಾನು ಮದುವೆಯಾಗಿ ಪತಿಯ ಮನೆಗೆ ಮೊದಲ ಬಾರಿಗೆ ಹೋಗಬೇಕಾದರೆ ಇದೇ ಕಾರು ನನ್ನನ್ನು ಕರೆದುಕೊಂಡು ಹೋಗಿತ್ತು. ನಮ್ಮ ಮನೆಯವರು ಮೂರು ವರ್ಷಗಳ ಹಿಂದೆ ಕಾರ್ ತೆಗೆದುಕೊಂಡಿದ್ದು, ಕಾರನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದರು. ನಮ್ಮ ಮನೆಯವರಲ್ಲಿ ಒಬ್ಬರಂತೆ ಕಾರಿನ ಮೇಲೆ ತುಂಬಾ ಅಫೆಕ್ಷನ್ ಇತ್ತು. ಆದರೆ ಇಂದು ಈ ರೀತಿ ಆಗಿದೆ ತುಂಬಾ ನೋವಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.

    ನಮ್ಮ ಮನೆಯವರು ಮದುವೆಯಾಗಿಂದ ಅದನ್ನು ಪುಟ್ಟ ಮಗುವಿನಂತೆ ನೋಡಿಕೊಳ್ಳುತ್ತಿದ್ದರು. ಅವರಿಗೆ ಕಾರ್ ಎಂದರೆ ತುಂಬಾ ಪ್ರೀತಿ ಇದೆ. ನನ್ನಿಂದ ಅವರಿಗೂ ತುಂಬಾ ನೋವಾಗಿದೆ. ಇದೇ ಮೊದಲ ಬಾರಿಗೆ ಈ ರೀತಿಯಾಗಿ ಅವಘಡ ಏರೋ ಇಂಡಿಯಾದಲ್ಲಿ ಆಗಿದೆ. ಆದರೆ ಈ ಅವಘಡದಿಂದ ಯಾರಿಗೂ ತೊಂದರೆ ಆಗಬಾದರು. ಎಲ್ಲರೂ ಸಣ್ಣ ಸಣ್ಣ ಸೇವಿಂಗ್ಸ್ ಇಟ್ಟುಕೊಂಡು ಕಾರ್ ತೆಗೆದುಕೊಂಡಿರುತ್ತಾರೆ. ಈ ರೀತಿ ಆದರೆ ಮಧ್ಯಮ ವರ್ಗದ ನಮಗೆ ತುಂಬಾ ನೋವಾಗುತ್ತದೆ ಎಂದು ಹೇಳಿದ್ದಾರೆ.

    https://www.youtube.com/watch?v=NCs_XVL0SKE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೆದೇವ್ರು ಬೆಡಗಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೆದೇವ್ರು ಬೆಡಗಿ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿರ್ಮಾಣದಲ್ಲಿ ಮೂಡಿ ಬಂದಿದ್ದ `ಮನೆದೇವ್ರು’ ಧಾರಾವಾಹಿಯಲ್ಲಿ ನಟಿಸಿದ ನಾಯಕಿ ಅರ್ಚನಾ ಲಕ್ಷ್ಮಿನಾರಾಯಣ ಸ್ವಾಮಿ ಅವರು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಅರ್ಚನಾ ಲಕ್ಷ್ಮೀನಾರಾಯಣ ಸ್ವಾಮಿ ಕೆಲವು ದಿನಗಳ ಹಿಂದೆ ವಿಘ್ನೇಶ್ ಎಂಬವರು ಜೊತೆ ಮದುವೆಯಾಗಿದ್ದಾರೆ. ಕುಟುಂಬದವರು, ಸ್ನೇಹಿತರ ಸಮ್ಮುಖದಲ್ಲಿ ಗುರುಹಿರಿಯರು ನಿಶ್ಚಯಿಸಿದ್ದ ದಿನದಂದು ಸಾಂಪ್ರದಾಯಕವಾಗಿ ವಿವಾಹವಾಗಿದ್ದಾರೆ. ತಮ್ಮ ಮೆಹಂದಿ, ಅರಿಶಿಣ ಶಾಸ್ತ್ರದ ಮತ್ತು ಮದುವೆ, ಆರತಕ್ಷತೆಯ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.

    ಇದೇ ವರ್ಷ ಜುಲೈ ತಿಂಗಳಿನಲ್ಲಿ ನಟಿ ಅರ್ಚನಾ, ವಿಘ್ನೇಶ್ ಶರ್ಮಾ ಅವರ ಜೊತೆ ಮನೆಯವರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ವಿಘ್ನೇಶ್ ಮೂಲತಃ ಬೆಂಗಳೂರಿನವರೇ ಆಗಿದ್ದು, ನ್ಯೂಯಾರ್ಕ್ ನಲ್ಲಿ ವಾಸವಿದ್ದಾರೆ.

    ನಟಿ ಅರ್ಚನಾ ಮೂಲತಃ ಮೈಸೂರಿನವರಾಗಿದ್ದು, 2013ರಲ್ಲಿ ಮಿಸ್ ಕರ್ನಾಟಕ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು. ನಂತರ ಅಲ್ಲಿಂದ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಅಭಿನಯಿಸಲು ಶುರು ಮಾಡಿದ್ದರು. ಅರ್ಚನಾ `ಮಧುಬಾಲ’, `ಮನೆದೇವ್ರು’ ಧಾರಾವಹಿಯಲ್ಲಿ ನಟಿಸಿದ್ದರು. ಬಳಿಕ `ನೂರೊಂದು ನೆನಪು’ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾತಿನ ಮನೆಯಲ್ಲಿ ‘ಯಾವಾಗಲೂ ನಿನ್ನೊಂದಿಗೆ’

    ಮಾತಿನ ಮನೆಯಲ್ಲಿ ‘ಯಾವಾಗಲೂ ನಿನ್ನೊಂದಿಗೆ’

    ಬೆಂಗಳೂರು: ಡೈರೆಕ್ಟರ್ ಡ್ರೀಂ ಕ್ರಿಯೇಷನ್ಸ್ ಲಾಂಛನದಲ್ಲಿ ಗಿರೀಶ್ ಜಿ ರಾಜ್ ನಿರ್ಮಿಸುತ್ತಿರುವ ‘ಯಾವಾಗಲೂ ನಿನ್ನೊಂದಿಗೆ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರಕ್ಕೆ ಈಗ ಜಾನ್ಸನ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಬೆಂಗಳೂರು, ಮೈಸೂರು, ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರ ಡಿಸೆಂಬರ್‍ನಲ್ಲಿ ತೆರೆಗೆ ಬರಲಿದೆ.

    ರೂಪೇಶ್ ಜಿ ರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸತೀಶ್ ಬಾಬು ಅವರ ಸಂಗೀತ ನಿರ್ದೇಶನವಿದೆ. ರೇಣುಕುಮಾರ್ ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ರಾಜು ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ನಾಯಕನಾಗಿ ರೂಪೇಶ್ ಜಿ ರಾಜ್ ಅಭಿನಯಿಸಿದ್ದಾರೆ. ಅರ್ಚನಾ ಈ ಚಿತ್ರದ ನಾಯಕಿ. ವಿ.ಮನೋಹರ್, ಹರೀಶ್ ರಾಯ್, ಟೆನ್ನಿಸ್ ಕೃಷ್ಣ, ಕುರಿ ರಂಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಅನಾಥ ಮಗುವಿಗೆ ಹಾಲುಣಿಸಿದ ಮಹಿಳಾ ಪೊಲೀಸ್ ಪೇದೆಗೆ ಕೆಂಪೇಗೌಡ ಪ್ರಶಸ್ತಿ

    ಅನಾಥ ಮಗುವಿಗೆ ಹಾಲುಣಿಸಿದ ಮಹಿಳಾ ಪೊಲೀಸ್ ಪೇದೆಗೆ ಕೆಂಪೇಗೌಡ ಪ್ರಶಸ್ತಿ

    ಬೆಂಗಳೂರು: ಜೂನ್ 1 ರಂದು ಕಸದ ತೊಟ್ಟಿಯಲ್ಲಿ ಸಿಕ್ಕ ನವಜಾತ ಶಿಶುವಿಗೆ ಹಾಲುಣಿಸಿ ಮೆಚ್ಚುಗೆಗೆ ಪಾತ್ರವಾಗಿದ್ದ ಪೊಲೀಸ್ ಮಹಿಳಾ ಪೇದೆ ಅರ್ಚನಾ ಅವರಿಗೆ ಕೆಂಪೇಗೌಡ ಪ್ರಶಸ್ತಿ ನೀಡಲು ತೀರ್ಮಾನಿಸಿದ್ದಾಗಿ ಬಿಬಿಎಂಪಿ ಮೇಯರ್ ಸಂಪತ್ ರಾಜ್ ತಿಳಿಸಿದ್ದಾರೆ.

    ಇಂದು ಅರ್ಚನಾರನ್ನು ಸನ್ಮಾನಿಸಿ ಬಳಿಕ ಮಾತನಾಡಿದ ಅವರು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಪೇದೆ ಅರ್ಚನಾ ಅವರ ಮಾನವೀಯತೆ ಕಾರ್ಯ ಮೆಚ್ಚುವಂತಹದ್ದು. ಅದ್ದರಿಂದ ಅವರಿಗೆ ಸನ್ಮಾನ ಮಾಡಿ ಸೀರೆ ಹಾಗೂ ಕೆಂಪೇಗೌಡ ಪದಕ ನೀಡಲಾಗಿದೆ. ಅಲ್ಲದೇ ಈ ಬಾರಿಯ ಕೆಂಪೇಗೌಡ ಪ್ರಶಸ್ತಿಯನ್ನ ಮೊದಲು ಅರ್ಚನಾ ಅವರಿಗೆ ನೀಡಲು ಪಕ್ಷಾತೀತವಾಗಿ ತೀರ್ಮಾನ ಮಾಡಿದ್ದೇವೆ. ಈಗಾಗಲೇ ಸಿಎಂ ಹಾಗೂ ಡಿಸಿಎಂ ಜೊತೆ ಈ ಕುರಿತು ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಏನಿದು ಘಟನೆ?
    ಜೂನ್ 1 ರಂದು ಅನೈತಿಕ ಸಂಬಂಧಕ್ಕೋ ಅಥವಾ ಮದುವೆಗೆ ಮುಂಚೆ ಹುಟ್ಟಿದ್ದಕ್ಕೋ ತಾಯಿಯೊಬ್ಬಳು ತನ್ನ ಮಗುವನ್ನು ಪೊದೆಯೊಂದರ ಬಳಿ ಎಸೆದು ಹೋಗಿದ್ದಳು. ರಸ್ತೆಯಲ್ಲಿ ಓಡಾಡೋ ಜನ ಮಗುವಿನ ಅಳುವಿನ ಶಬ್ಧ ಕೇಳಿ ಮಗುವನ್ನು ರಕ್ಷಿಸಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಒಪ್ಪಿಸಿದ್ದರು.

    ಹೊಟ್ಟೆ ಹಸಿವಿನಿಂದ ಅಳುತ್ತಿದ್ದ ಮಗುವಿನ ಕೂಗಿಗೆ ಕೆಲವು ದಿನಗಳ ಹಿಂದಷ್ಟೇ ಬಾಣಂತನ ಮುಗಿಸಿ ಕೆಲಸಕ್ಕೆ ಬಂದಿದ್ದ ಮಹಿಳಾ ಪೇದೆ ಅರ್ಚನಾ ಹಿಂದು-ಮುಂದು ನೋಡದೆ ಹಾಲುಣಿಸಿ ಮಗುವನ್ನು ಬಾಲವಿಹಾರಕ್ಕೆ ಕಳುಹಿಸಿದ್ದರು. ಆದರೆ ಕೆಲ ದಿನಗಳ ಬಳಿಕ ಬಾಲ ವಿಹಾರದಲ್ಲಿದ್ದ ಮಗು ಅನಾರೋಗ್ಯದಿಂದ ಮೃತಪಟ್ಟಿತ್ತು. ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅರ್ಚನಾ, ಮಗುವಿನ ಆತ್ಮಕ್ಕೆ ಶಾಂತಿ ಸಿಗಲಿ ಮುಂದಿನ ಜನ್ಮದಲ್ಲಾದ್ರೂ ಮಗುವಿಗೆ ಒಳ್ಳೆ ತಾಯಿ ಸಿಗಲಿ ಎಂದು ಹೇಳಿದ್ದರು. ಅಲ್ಲದೇ ಒಂದು ಬಾರಿ ಹಾಲುಣಿಸಿದ್ದ ಮಗುವಿನ ಸಾವನ್ನು ತನಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಮಾತನಾಡುತ್ತಲೇ, ದುಃಖ ತಡೆಯಲಾರದೆ ಅಳುತ್ತಾ ತೆರಳಿದ್ದರು.