Tag: Archaeologist

  • 1,200 ವರ್ಷದಷ್ಟು ಹಳೆಯ ಮಕ್ಕಳ, ವಯಸ್ಕರ ಅವಶೇಷ ಪತ್ತೆ!

    1,200 ವರ್ಷದಷ್ಟು ಹಳೆಯ ಮಕ್ಕಳ, ವಯಸ್ಕರ ಅವಶೇಷ ಪತ್ತೆ!

    ಲಿಮಾ: 1,200 ವರ್ಷದಷ್ಟು ಹಳೆಯ ಮಕ್ಕಳ ಮತ್ತು ವಯಸ್ಕರ ಅವಶೇಷಗಳು ಲಿಮಾದಲ್ಲಿ ಪತ್ತೆಯಾಗಿವೆ.

    ಪೆರುವಿಯನ್ ಪುರಾತತ್ತ್ವ ಶಾಸ್ತ್ರಜ್ಞರು 800-1,200 ವರ್ಷಗಳ ಹಿಂದೆ ಸಮಾಧಿ ಮಾಡಲಾಗಿದ್ದ ಎಂಟು ಮಕ್ಕಳು ಮತ್ತು 12 ವಯಸ್ಕರ ದೇಹವನ್ನು ಪತ್ತೆ ಮಾಡಿದ್ದಾರೆ. ಶೋಧ ಕಾರ್ಯವನ್ನು ಮಾಡಿ ನಿನ್ನೆ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಪೂರ್ವ-ಇಂಕಾನ್ ಕಾಜಮಾಕ್ರ್ವಿಲ್ಲಾದ ಲಿಮಾ ಪೂರ್ವದಲ್ಲಿ ಈ ಶೋಧ ಕಾರ್ಯ ನಡೆದಿದೆ. ಇದನ್ನೂ ಓದಿ:  ನಮ್ಮ ಮನೆಯ ಮಕ್ಕಳು ಅಮಾಯಕರು – ಬಂಧಿತರ ಕುಟುಂಬದವರ ಅಳಲು

    Peruvian archaeologists present pre-Incan mummies recently unearthed, in Lima

    ಈ ಅವಶೇಷಗಳು ಸಮಾಧಿಯಿಂದ ಮೇಲೆ ಬಂದಿದ್ದವು. ಈ ಹಿನ್ನೆಲೆ ಕಳೆದ ವರ್ಷ ನವೆಂಬರ್‍ನಲ್ಲಿ ಪೆರುವಿನ ಸ್ಯಾನ್ ಮಾರ್ಕೋಸ್ ವಿಶ್ವವಿದ್ಯಾಲಯದ ತಂಡವು ಈ ಕುರಿತು ಶೋಧ ಕಾರ್ಯ ಮಾಡಲು ಪ್ರಾರಂಭಿಸಿತು. ಭ್ರೂಣವನ್ನು ಹಗ್ಗಗಳಿಂದ ಸುತ್ತಲ್ಪಟ್ಟಿದ್ದು, ಪ್ರಾಚೀನ ಕಾಲದ ಮಮ್ಮಿಗಳಂತೆ ಕಂಡುಬಂದಿದೆ.

    Peruvian archaeologists present pre-Incan mummies recently unearthed, in Lima

    ಪುರಾತತ್ವಶಾಸ್ತ್ರಜ್ಞ ಪೀಟರ್ ವ್ಯಾನ್ ಡೇಲೆನ್ ಈ ಕುರಿತು ಮಾತನಾಡಿದ್ದು, ಕೆಲವು ಪುರಾತನ ಮಮ್ಮಿಗಳನ್ನು ರಕ್ಷಿಸಲಾಗಿದೆ. ಇತರ ಅಸ್ಥಿಪಂಜರಗಳನ್ನು ಪ್ರಾಚೀನ ಪೂರ್ವ-ಹಿಸ್ಪಾನಿಕ್ ಆಚರಣೆಯ ಭಾಗವಾಗಿ ಬಟ್ಟೆಗಳ ವಿವಿಧ ಪದರಗಳಲ್ಲಿ ಸುತ್ತಿಡಲಾಗಿತ್ತು. ಇನ್ನೂ ಹೆಚ್ಚು ಮಮ್ಮಿಗಳು ನಾಪತ್ತೆಯಾಗಿರಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಮೇಲಾಧಿಕಾರಿಗಳ ಕಿರುಕುಳ – ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿ

    1,200-year-old remains of sacrificed adults, kids unearthed in Peru

    ಅವರಿಗೆ ಸಾವು ಅಂತ್ಯವಲ್ಲ. ಅವರ ಪ್ರಕಾರ, ಸತ್ತವರು ಜಗತ್ತಿಗೆ ಪರಿವರ್ತನೆಯಾಗುತ್ತಾರೆ. ಸತ್ತವರ ಆತ್ಮಗಳು ಜೀವಂತ ರಕ್ಷಕರಂತಿರುತ್ತವೆ ಎಂದು ನಂಬಲಾಗಿದೆ. 1,700 ವರ್ಷಗಳ ಹಿಂದಿನ ಆಡಳಿತಗಾರನಾದ ಲಾರ್ಡ್ ಆಫ್ ಸಿಪಾನ್‍ನ ಸಮಾಧಿಯನ್ನು ಉಲ್ಲೇಖಿಸಿರುವ ವ್ಯಾನ್ ಡೇಲೆನ್, ಸಿಪಾನ್ ಸಮಾಧಿ ಮಾದರಿಯಲ್ಲಿ ಈ ಸಮಾಧಿ ಇದೆ ಎಂದು ವಿವರಿಸಿದ್ದಾರೆ.

  • ಅಂದು ಹೇಳಿದಾಗ ಟೀಕೆ ಬಂದಿತ್ತು, ಇಂದು ನನ್ನ ಸಾಕ್ಷ್ಯ ಆಧಾರಿಸಿ ತೀರ್ಪು ಬಂದಿದೆ- ಕೆ.ಕೆ.ಮೊಹಮ್ಮದ್ ಸಂತಸ

    ಅಂದು ಹೇಳಿದಾಗ ಟೀಕೆ ಬಂದಿತ್ತು, ಇಂದು ನನ್ನ ಸಾಕ್ಷ್ಯ ಆಧಾರಿಸಿ ತೀರ್ಪು ಬಂದಿದೆ- ಕೆ.ಕೆ.ಮೊಹಮ್ಮದ್ ಸಂತಸ

    – ನಾವೆಲ್ಲರೂ ಕನಸು ಕಾಣುತ್ತಿದ್ದ ತೀರ್ಪು ಇಂದು ಪ್ರಕಟ
    – ಅಂದು ಕಟ್ಟುಕಥೆ ಎಂದು ನಮ್ಮನ್ನು ತೆಗಳಿದರು

    ನವದೆಹಲಿ: ರಾಮ ಮಂದಿರದ ಅವಶೇಷಗಳ ಮೇಲೆ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೇಳಿದ ಏಕೈಕ ಪುರಾತತ್ವಶಾಸ್ತ್ರಜ್ಞ ಕೆ.ಕೆ.ಮುಹಮ್ಮದ್. ಆದರೆ ಸುಮಾರು ಮೂರು ದಶಕಗಳಿಂದ ಮೊಹಮ್ಮದ್ ಅವರ ಹೇಳಿಕೆಗೆ ತೀವ್ರವಾಗಿ ಟೀಕೆಗಳು ಕೇಳಿ ಬಂದಿದ್ದವು. ಈಗ ಅವರು ನೀಡಿದ ಅನೇಕ ಆಧಾರಗಳ ಮೇಲೆ ಸುಪ್ರೀಂ ಕೋರ್ಟ್ ಅಯೋಧ್ಯೆ ವಿವಾದವನ್ನು ಇತ್ಯರ್ಥಗೊಳಿಸಿ ತೀರ್ಪು ನೀಡಿದೆ.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಕೆ.ಕೆ.ಮುಹಮ್ಮದ್, ಅಯೋಧ್ಯೆಯ ಬಾಬರಿ ಮಸೀದಿಗೂ ಮುಂಚೆಯೇ ರಾಮ ಮಂದಿರ ಇತ್ತು ಎಂದು ಹೇಳಿದ್ದಕ್ಕೆ ಅಂದು ನೂರಾರು ಜನರು ನನ್ನನ್ನು ಸುತ್ತುವರಿದಿದ್ದರು. ಅವರು ನನ್ನ ವಿರುದ್ಧ ಎಲ್ಲಾ ರೀತಿಯ ಸಂಚು ರಚಿಸಿದರು. ಗೌರವಾನ್ವಿತ ಸುಪ್ರೀಂ ಕೋರ್ಟ್ ಇಂದು ನಾನು ಸಲ್ಲಿಸಿದ ದಾಖಲೆಗಳನ್ನು ಮಾನ್ಯ ಮಾಡಿದೆ. ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‍ಐ) ತಯಾರಿಸಿದ ಸಾಕ್ಷ್ಯಗಳ ತುಣುಕುಗಳು ಸರಿಯೆಂದು ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.

    ಮಸೀದಿಯನ್ನು ದೇವಾಲಯದ ಮೇಲೆ ಮಾತ್ರವಲ್ಲದೆ ದೇವಾಲಯದ ಕೆಲವು ಅವಶೇಷಗಳನ್ನು ಮಸೀದಿ ನಿರ್ಮಿಸಲು ಬಳಸಲಾಗಿದೆಯೆಂದು ತೋರಿಸಿದ ಹಲವಾರು ಪುರಾವೆಗಳು ಇದ್ದವು. ಉದಾಹರಣೆಗೆ ರಾಮ ದೇವಾಲಯಗಳ 14 ಸ್ತಂಭಗಳ ಬೆಂಬಲದೊಂದಿಗೆ ಮಸೀದಿಯ ಗೋಡೆಗಳನ್ನು ನಿರ್ಮಿಸಲಾಗಿದೆ. ಜೊತೆಗೆ ಈ ಸ್ತಂಭಗಳ ಕೆಳಗೆ 11ರಿಂದ 12ನೇ ಶತಮಾನದ ದೇವಾಲಯದ ಕುರುಹುಗಳನ್ನು ನಾನು ನೋಡಿದೆ ಎಂದು ಮುಹಮ್ಮದ್ ನೆನೆದರು.

    ಎಎಸ್‍ಐ ಉತ್ಖನನ ವರದಿಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯದಿದ್ದರೆ, ನಮ್ಮ ಹಕ್ಕನ್ನು ಯಾವಾಗಲೂ ಸುಳ್ಳು ಮತ್ತು ಕಟ್ಟು ಕಥೆಗಳಂತೆ ನೋಡಲಾಗುತ್ತಿತ್ತು. ಇದು ಹೆಚ್ಚು ಸಮತೋಲಿತ ಮತ್ತು ಪರಿಪೂರ್ಣ ತೀರ್ಪು. ಇದು ನಾವೆಲ್ಲರೂ ಕನಸು ಕಾಣುತ್ತಿದ್ದ ತೀರ್ಪು ಎಂದು ಮುಹಮ್ಮದ್ ಸಂತಸ ವ್ಯಕ್ತಪಡಿಸಿದರು.

    1976-77ರಲ್ಲಿ ಅಯೋಧ್ಯೆಯ ರಾಮ್ ಜನ್ಮಭೂಮಿಯ ಮೊದಲ ಉತ್ಖನನವನ್ನು ಪ್ರೊಫೆಸರ್ ಬಿಬಿ ಲಾಲ್ ನೇತೃತ್ವದ ಎಎಸ್‍ಐ ತಂಡವು ನಡೆಸಿತ್ತು. ದೆಹಲಿಯ ಪುರಾತತ್ವ ಸಂಸ್ಥೆಯ ಹನ್ನೆರಡು ವಿದ್ಯಾರ್ಥಿಗಳು ತಂಡದ ಸದಸ್ಯರಾಗಿದ್ದರು. ಅದರಲ್ಲಿ ಕೆ.ಕೆ.ಮುಹಮ್ಮದ್ ಕೂಡ ಅವರಲ್ಲಿ ಒಬ್ಬರು. ಮುಹಮ್ಮದ್ ಅವರು ಡಿಸೆಂಬರ್ 15, 1990ರಂದು ಮೊದಲ ಬಾರಿಗೆ ಉತ್ಖನನದ ಸಮಯದಲ್ಲಿ ದೇವಾಲಯದ ಅವಶೇಷಗಳನ್ನು ನೋಡಿದ್ದೇನೆ ಎಂದು ತಿಳಿಸಿದ್ದರು.