Tag: Archaeological Survey

  • ವಿವಾದಿತ ಭೋಜಶಾಲಾ ಮಸೀದಿಯಲ್ಲಿ ಮಂದಿರದ ಕುರುಹು – ಪುರಾತತ್ವ ಇಲಾಖೆಯ 2,000 ಪುಟಗಳ ವರದಿಯಲ್ಲಿ ಏನಿದೆ?

    ವಿವಾದಿತ ಭೋಜಶಾಲಾ ಮಸೀದಿಯಲ್ಲಿ ಮಂದಿರದ ಕುರುಹು – ಪುರಾತತ್ವ ಇಲಾಖೆಯ 2,000 ಪುಟಗಳ ವರದಿಯಲ್ಲಿ ಏನಿದೆ?

    – 13-14ನೇ ಶತಮಾನದ ನಾಣ್ಯಗಳು, 94 ಪುರಾತನ ಶಿಲ್ಪಗಳು ಪತ್ತೆ

    ಭೋಪಾಲ್‌: ಮಧ್ಯಪ್ರದೇಶದ ಧಾರ್‌ನಲ್ಲಿರುವ ವಿವಾದಿತ ಭೋಜ್‌ಶಾಲಾ-ಕಮಲ್‌ಮೌಲಾ ಮಸೀದಿ ಸಂಕೀರ್ಣದಲ್ಲಿ (Bhojshala complex) ವೈಜ್ಞಾನಿಕ ಸಮೀಕ್ಷೆ ನಡೆಸಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಮಧ್ಯಪ್ರದೇಶ ಹೈಕೋರ್ಟ್‌ಗೆ 2,000 ಪುಟಗಳ ವರದಿ ಸಲ್ಲಿಸಿದೆ. ಪುರಾತತ್ವ ಇಲಾಖೆಯ ವೈಜ್ಞಾನಿಕ ಸಮೀಕ್ಷೆಯಲ್ಲಿ, ಈ ಸ್ಥಳದಲ್ಲಿ ಹಿಂದೂ ದೇವಾಲಯ ಇತ್ತೆಂಬ ಬಗ್ಗೆ ಅಪಾರ ಪ್ರಮಾಣದ ಕುರುಹುಗಳು ಪತ್ತೆಯಾದ ಬಗ್ಗೆ ಉಲ್ಲೇಖಿಸಿದೆ.

    31 ಪುರಾತನ ನಾಣ್ಯಗಳು ಪತ್ತೆ:
    ಮಾರ್ಚ್ 22ರಂದು ಎಎಸ್‌ಐ ವೈಜ್ಞಾನಿಕ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯ ವೇಳೆ ಬೆಳ್ಳಿ, ತಾಮ್ರ, ಅಲ್ಯೂಮಿನಿಯಂ, ಉಕ್ಕಿನಿಂದ ತಯಾರಿಸಿದ ಒಟ್ಟು 31 ನಾಣ್ಯಗಳು (Coins) ಪತ್ತೆಯಾಗಿವೆ. ಇವು ಪುರಾತನ ಕಾಲದ ನಾಣ್ಯಗಳಾಗಿವೆ ಎಂದು ವರದಿ ಹೇಳಿದೆ. ಈ ನಾಣ್ಯಗಳು ಇಂಡೋ-ಸಸ್ಸಾನಿಯನ್ (10ನೇ-11ನೇ ಶತಮಾನ), ದೆಹಲಿ ಸುಲ್ತಾನೇಟ್ (13ನೇ-14ನೇ ಶತಮಾನ), ಮಾಲ್ವಾ ಸುಲ್ತಾನೇಟ್ (15ನೇ-16ನೇ ಶತಮಾನ), ಮೊಘಲ್ (16ನೇ-18ನೇ ಶತಮಾನ), ಧಾರ್ ರಾಜ್ಯ (19ನೇ ಶತಮಾನ), ಮತ್ತು ಬ್ರಿಟಿಷ್ (19-20 ನೇ ಶತಮಾನ)‌ ಕಾಲದ ನಾಣ್ಯಗಳು ಎಂಬುದನ್ನು ವರದಿ ತಿಳಿಸಿದೆ.

    ಅಲ್ಲದೇ ಸಮೀಕ್ಷೆಯು ಒಟ್ಟು 94 ಶಿಲ್ಪಗಳು, ಶಿಲ್ಪಗಳ ತುಣುಕುಗಳು ಮತ್ತು ವಾಸ್ತುಶಿಲ್ಪದ ಅಂಶಗಳನ್ನು ಬಹಿರಂಗಪಡಿಸಿದೆ. ಈ ಶಿಲ್ಪಗಳು ಬಸಾಲ್ಟ್, ಅಮೃತಶಿಲೆ, ಸ್ಕಿಸ್ಟ್, ಮೃದು ಕಲ್ಲು, ಮರಳುಗಲ್ಲು ಮತ್ತು ಸುಣ್ಣದ ಕಲ್ಲುಗಳಿಂದ ಮಾಡಲ್ಪಟ್ಟಿದೆ. ಅವರು ಗಣೇಶ, ಬ್ರಹ್ಮ, ನರಸಿಂಹ, ಭೈರವ, ಇತರ ದೇವರುಗಳು ಮತ್ತು ದೇವತೆಗಳು, ಮನುಷ್ಯರು ಮತ್ತು ಪ್ರಾಣಿಗಳಂತಹ ದೇವತೆಗಳ ಆಕೃತಿಗಳು ಕಂಡುಬಂದಿವೆ.

    ಇನ್ನೂ ಪ್ರಾಣಿಗಳ ಆಕೃತಿಗಳಲ್ಲಿ ಸಿಂಹ, ಆನೆ, ಕುದುರೆಗಳು, ನಾಯಿ, ಕೋತಿ, ಹಾವು, ಆಮೆ, ಹಂಸ ಮತ್ತು ಪಕ್ಷಿಗಳನ್ನೊಳಗೊಂಡ ಆಕೃತಿಗಳು ಕಂಡುಬಂದಿವೆ. ಅಲ್ಲದೇ ಭಗ್ನಗೊಂಡ ಸ್ಥಿತಿಯಲ್ಲಿ ವಿಷ್ಣುವಿನ ವಿಗ್ರಹ, ದೇವಾಲಯದ ಕುರುಹುಗಳು, ತ್ರಿಶೂಲದ ಗೋಡೆ ಬರಹ, ಸಂಸ್ಕೃತ, ಪ್ರಾಕೃತ ಭಾಷೆಯ ಶಾಸನಗಳು, ಶಾಸನದಲ್ಲಿ ಓಂ ನಮಃ ಶಿವಾಯ ಬರಹ, ಶಾಸನದಲ್ಲಿ ಓಂ ಸರಸ್ವತಿಯೇ ನಮಃ ಬರಹ, ಪರಂಪರಾ ಅವಧಿಯ ನಿರ್ಮಾಣ ಶೈಲಿಯ ದೇಗುಲ ಕುರುಹು ಪತ್ತೆಯಾಗಿವೆ. ಅಲ್ಲದೇ ಭೋಜಶಾಲೆಯು ಶತಮಾನಗಳ ಹಿಂದೆ ಮಹತ್ವದ ಶೈಕ್ಷಣಿಕ ಕೇಂದ್ರವಾಗಿತ್ತು ಎಂದು ಹೇಳಲಾಗಿದೆ.

    ಹಿಂದೂ-ಮುಸ್ಲಿಮರಿಂದ ಪೂಜೆ:
    ಇನ್ನೂ ಭೋಜಶಾಲಾ ಸಂಕೀರ್ಣವು 11ನೇ ಶತಮಾನದಲ್ಲಿ ಸರಸ್ವತಿ ದೇವಿಯ ದೇವಾಲಯವಾಗಿತ್ತು, ಮುಸ್ಲಿಮರು ಇದನ್ನು ಕಮಲ್ ಮೌಲಾ ಮಸೀದಿ ಎಂದು ಕರೆದರು. ಕಳೆದ 21 ವರ್ಷಗಳಿಂದ ಭೋಜಶಾಲೆಯಲ್ಲಿ ಪ್ರತಿ ಮಂಗಳವಾರ ಹಿಂದೂಗಳು ಪೂಜೆ ಸಲ್ಲಿಸಿದರೆ, ಶುಕ್ರವಾರದಂದು ಮುಸ್ಲಿಮರು ನಮಾಜ್‌ ಆಚರಿಸುತ್ತಾರೆ ಎಂದು ವಿದ್ವಾಂಸರು ತಿಳಿಸಿದ್ದಾರೆ.

    ಈ ಸಂಬಂಧ ಹಿಂದೂ ಫ್ರಂಟ್ ಫಾರ್ ಜಸ್ಟಿಸ್ ಸಂಘಟನೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ವೈಜ್ಞಾನಿಕ ಸಮೀಕ್ಷೆಗೆ ಮನವಿ ಮಾಡಿತ್ತು. ಅದರಂತೆ ಹೈಕೋರ್ಟ್‌ ಎಎಸ್‌ಐಗೆ ಮಾರ್ಚ್ 11ರಂದು ಸಮೀಕ್ಷೆ ನಡೆಸುವಂತೆ ಆದೇಶಿಸಿತ್ತು. ಸಮೀಕ್ಷೆ ಪೂರ್ಣಗೊಳಿಸಲು ಎಎಸ್‌ಐಗೆ 6 ವಾರಗಳ ಕಾಲಾವಕಾಶ ನೀಡಲಾಗಿತ್ತು. ಎಎಸ್‌ಐ ಮಾರ್ಚ್ 22 ರಂದು ವಿವಾದಿತ ಸಂಕೀರ್ಣದ ಸಮೀಕ್ಷೆಯನ್ನು ಪ್ರಾರಂಭಿಸಿ, ಇತ್ತೀಚೆಗಷ್ಟೇ ಸಮೀಕ್ಷೆ ಮುಕ್ತಾಯಗೊಂಡಿತ್ತು.

    ಇದಾದ ಬಳಿಕ ಸಮೀಕ್ಷೆಯ ಪೂರ್ಣ ವರದಿಯನ್ನು ಜುಲೈ 15ರ ಒಳಗೆ ಹಾಜರುಪಡಿಸಲು ಎಎಸ್‌ಐಗೆ ಹೈಕೋರ್ಟ್‌ ಜುಲೈ 4 ರಂದು ಆದೇಶಿಸಿತ್ತು. ಅದರಂತೆ ಪುರಾತ್ವ ಇಲಾಖೆ 2000 ಪುಟಗಳ ವರದಿ ಸಲ್ಲಿಸಿದದು, ಜುಲೈ 22 ರಂದು ಹೈಕೋರ್ಟ್ ಪ್ರಕರಣದ ವಿಚಾರಣೆ ನಡೆಸಲಿದೆ.

  • ಶ್ರೀಕೃಷ್ಣ ಜನ್ಮಭೂಮಿ ವಿವಾದ – ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ಮಥುರಾ ಕೋರ್ಟ್ ಆದೇಶ

    ಶ್ರೀಕೃಷ್ಣ ಜನ್ಮಭೂಮಿ ವಿವಾದ – ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ಮಥುರಾ ಕೋರ್ಟ್ ಆದೇಶ

    ಲಕ್ನೋ: ಶ್ರೀಕೃಷ್ಣ ಜನ್ಮಭೂಮಿಯಲ್ಲಿ (Krishna Janmabhoomi) ನಿರ್ಮಾಣವಾಗಿದೆ ಎಂದು ಹೇಳಲಾದ ಶಾಹಿ ಈದ್ಗಾ ಮಸೀದಿಯನ್ನು (Shahi Idgah Mosque) ಸಮೀಕ್ಷೆ ಮಾಡಲು ಉತ್ತರ ಪ್ರದೇಶದ ಮಥುರಾ ನ್ಯಾಯಾಲಯವು (Mathura Court) ಮಹತ್ವದ ಆದೇಶ ನೀಡಿದೆ.

    ಜನವರಿ 2 ರಿಂದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ (Archaeological Survey Of India) ಸಮೀಕ್ಷೆ ಮಾಡಲು ಕೋರ್ಟ್ ಆದೇಶಿಸಿದೆ. ಅಲ್ಲದೇ ಇದಕ್ಕೆ ಸಂಬಂಧಪಟ್ಟ ವರದಿಯನ್ನು ಜನವರಿ 20ರ ನಂತರ ನೀಡುವಂತೆಯೂ ಕೋರ್ಟ್ ಸೂಚಿಸಿದೆ. ಇದನ್ನೂ ಓದಿ: ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್‌, ಪ್ಲ್ಯಾಂಟ್‌ಗಳ ಕಾರ್ಯನಿರ್ವಹಣೆ ಬಗ್ಗೆ ಗಮನ ಹರಿಸಿ – ಕೇಂದ್ರದಿಂದ ರಾಜ್ಯಗಳಿಗೆ ಎಚ್ಚರಿಕೆ

    ಹಿಂದೂ ಸೇನೆಯ (Hindu Sena) ವಿಷ್ಣು ಗುಪ್ತಾ ಅವರು ಸಲ್ಲಿಸಿದ್ದ ಮೊಕದ್ದಮೆಯ ಮೇರೆಗೆ ನ್ಯಾಯಾಲಯ ಈ ಆದೇಶ ನೀಡಿದೆ. ಕತ್ರಾ ಕೇಶವ್ ದೇವ್ ದೇವಸ್ಥಾನದಿಂದ 17ನೇ ಶತಮಾನದ ಶಾಹಿ ಈದ್ಗಾ ಮಸೀದಿಯನ್ನು ಕೆಡವಲು ಒತ್ತಾಯಿಸಿ ಹಿಂದೂ ಸಂಘಟನೆಗಳು ಮಾಡಿದ್ದ ಮೊಕದ್ದಮೆಗಳಲ್ಲಿ ಇದು ಒಂದಾಗಿದೆ. ಈ ಮಸೀದಿಯನ್ನು ಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ ಎಂಬುದು ಹಿಂದೂ ಸಂಘಟನೆಗಳ ವಾದವಾಗಿದೆ. ಇದನ್ನೂ ಓದಿ: ಶ್ರೀಕೃಷ್ಣನ ಜನ್ಮಸ್ಥಳದಲ್ಲಿರೋ ಮಸೀದಿಯಲ್ಲಿ ಮುಸ್ಲಿಮರ ಪ್ರಾರ್ಥನೆಗೆ ನಿರ್ಬಂಧ ವಿಧಿಸಿ: ಕೋರ್ಟ್‌ಗೆ ಮನವಿ

    ಜ್ಞಾನವ್ಯಾಪಿ ಮಸೀದಿ (Gyanvapi Mosque) ಸಮೀಕ್ಷೆಗೆ ಅನುಮತಿ ಸಿಕ್ಕಿದ ಬೆನ್ನಲ್ಲೇ ಕಳೆದ ಮೇ 19ರಂದೇ ಮಥುರಾದ ಶ್ರೀಕೃಷ್ಣ ಜನ್ಮಭೂಮಿ ವಿವಾದ ಸಂಬಂಧ ಸಲ್ಲಿಕೆಯಾದ ಅರ್ಜಿ ವಿಚಾರಣೆಗೆ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ಕೋರಿ ಸಲ್ಲಿಸಿದ್ದ ಅರ್ಜಿಗಳು ವಿಚಾರಣೆಗೆ ಅರ್ಹವಾಗಿದೆ ಎಂದು ಮಥುರಾ ಜಿಲ್ಲಾ ನ್ಯಾಯಾಲಯ ಹೇಳಿತ್ತು. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆಸಲಾಯಿತು. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ವಾರಣಾಸಿ ಕೋರ್ಟ್‌ ವಿಚಾರಣೆಗೆ ಸುಪ್ರೀಂ ತಡೆ

    ಏನಿದು ವಿವಾದ?
    ಮಥುರಾ ಶ್ರೀಕೃಷ್ಣನ ಜನ್ಮ ಸ್ಥಳವಾಗಿದೆ. ಪ್ರಸ್ತುತ ಈಗ ಇರುವ ಶಾಹಿ ಈದ್ಗಾ ಮಸೀದಿಯನ್ನು ಅಕ್ರಮ ಎಂದು ಘೋಷಿಸಿ ಅದನ್ನು ನೆಲಸಮಗೊಳಿಸಬೇಕು ಮತ್ತು 13.37 ಎಕರೆ ಸಂಪೂರ್ಣ ಭೂಮಿಯನ್ನು ಡಿ-ಫಾಕ್ಟೋ ಮಾಲೀಕ ಭಗವಾನ್ ಶ್ರೀಕೃಷ್ಣ ವಿರಾಜಮಾನರಿಗೆ ಹಸ್ತಾಂತರಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ವಕೀಲರಾದ ರಂಜನಾ ಅಗ್ನಿಹೋತ್ರಿ ಸೇರಿ ಇತರ ಆರು ಮಂದಿ ಕಳೆದ ವರ್ಷ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಇನ್ನೂ ಅನೇಕ ಮಂದಿ ಅರ್ಜಿ ಸಲ್ಲಿಸಿದ್ದರು. ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್, ಶಾಹಿ ಈದ್ಗಾ ಮಸೀದಿ, ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ಮತ್ತು ಶ್ರೀಕೃಷ್ಣ ಜನ್ಮಭೂಮಿ ಸೇವಾ ಸಂಸ್ಥಾನವನ್ನು ಪ್ರಕರಣದಲ್ಲಿ ಭಾಗಿ ಮಾಡಲಾಗಿದ್ದು, ಮೇ 6 ರಂದು ಕೋರ್ಟ್ ವಿಚಾರಣೆ ಅಂತ್ಯಗೊಳಿಸಿತ್ತು.

    ಅರ್ಜಿಯಲ್ಲಿ ಏನಿತ್ತು?
    ಶಾಹಿ ಈದ್ಗಾ ಮಸೀದಿಯನ್ನು ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ 1669-70ರಲ್ಲಿ ಶ್ರೀಕೃಷ್ಣನ ಜನ್ಮಸ್ಥಳದ ಸಮೀಪವಿರುವ ಕತ್ರಾ ಕೇಶವ್ ದೇವ್ ದೇವಸ್ಥಾನದ ಬಳಿ ನಿರ್ಮಿಸಲಾಗಿದೆ. 13.37 ಎಕರೆ ಜಾಗದಲ್ಲಿ ಹರಡಿರುವ ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನದ ಒಂದು ಭಾಗವನ್ನು ಕೆಡವಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ. ಈ ಜಾಗದ ಸಂಪೂರ್ಣ ಹಕ್ಕು ಭಗವಾನ್ ಶ್ರೀಕೃಷ್ಣ ವಿರಾಜಮಾನರಿಗೆ ನೀಡಬೇಕು. ಹೀಗಾಗಿ ಶಾಹಿ ಈದ್ಗಾ ಮಸೀದಿಯನ್ನು ತೆರವು ಮಾಡಿ ಮಂದಿರಕ್ಕೆ ಭೂಮಿಯನ್ನು ವಾಪಸ್ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • 7 ಸುತ್ತಿನ ಕೋಟೆ ರಕ್ಷಿಸಿ ವಿಶ್ವಪರಂಪರೆ ಪಟ್ಟಿಗೆ ಸೇರಿಸಿ – ಸ್ಥಳೀಯರಿಂದ ಆಗ್ರಹ

    7 ಸುತ್ತಿನ ಕೋಟೆ ರಕ್ಷಿಸಿ ವಿಶ್ವಪರಂಪರೆ ಪಟ್ಟಿಗೆ ಸೇರಿಸಿ – ಸ್ಥಳೀಯರಿಂದ ಆಗ್ರಹ

    ಚಿತ್ರದುರ್ಗ: ವಿನಾಶದ ಅಂಚಿನಲ್ಲಿರುವ ಐತಿಹಾಸಿಕ ಪ್ರವಾಸಿ ತಾಣ, ಚಿತ್ರದುರ್ಗದ 7 ಸುತ್ತಿನ ಕೋಟೆಯನ್ನು ರಕ್ಷಿಸಿ ವಿಶ್ವಪರಂಪರೆ ತಾಣಗಳ ಪಟ್ಟಿಗೆ ಸೇರಿಸುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

    ವಿಶ್ವದಲ್ಲಿ ಎಲ್ಲೂ ಈ ರೀತಿಯ 7 ಸುತ್ತಿನ ಕೋಟೆ ಇಲ್ಲ. ಅದ್ದರಿಂದ ಈ ಕೋಟೆಗೆ ನಿತ್ಯವೂ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ಈ ಕೋಟೆಯಲ್ಲಿರೋ ಸಾವಿರಾರು ದೇಗುಲಗಳು, ಬುರುಜು, ಬತ್ತೇರಿಗಳು, ಓಬವ್ವನ ಕಿಂಡಿ ಸೊಬಗನ್ನು ಸವಿದು ಆನಂದಿಸುತ್ತಾರೆ. ಹೀಗಾಗಿ ಈ ಐತಿಹಾಸಿಕ ತಾಣದಿಂದ ಪುರಾತತ್ವ ಇಲಾಖೆಗೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ.

    ವಿಶ್ವಪರಂಪರೆ ಪಟ್ಟಿಗೆ ಸೇರಿಸಬೇಕಾದ ಎಲ್ಲಾ ಅರ್ಹತೆಗಳು ಇದ್ದರೂ ಸಹ ಈ ಕೋಟೆಯನ್ನು ಇನ್ನೂ ವಿಶ್ವಪರಂಪರೆ ಪಟ್ಟಿಗೆ ಸೇರಿಸದೇ ಇರುವುದು ದುರದೃಷ್ಟಕರ. ಹೀಗಾಗಿ ಈ ಬಾರಿಯಾದರೂ ಈ ಐತಿಹಾಸಿಕ ಸ್ಮಾರಕವನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸಬೇಕೆಂದು ಇತಿಹಾಸ ಸಂಶೋಧಕರು ಆಗ್ರಹಿಸಿದ್ದಾರೆ.

    ಕೋಟೆಗೆ ನಿತ್ಯ ಪ್ರವಾಸಿಗರು ಬರುವುದರಿಂದ ರಕ್ಷಣೆ ಹಾಗು ಸ್ವಚ್ಛತೆಯ ಜವಾಬ್ದಾರಿಯನ್ನು ಪುರತತ್ವ ಇಲಾಖೆ ವಹಿಸಿಕೊಂಡಿದೆ. ಆದರೆ ಕೋಟೆಯ ಬುರುಜುಗಳು ಹಾಗು ಕೋಟೆಯ ತಡೆಗೋಡೆಗಳು ಬೀಳುವ ಸ್ಥಿತಿಗೆ ತಲುಪಿವೆ. ಆದರೆ ಇಲಾಖೆ ಮಾತ್ರ ಏನು ಆಗಿಲ್ಲವೆಂಬಂತೆ ಕಣ್ಮುಚ್ಚಿ ಕುಳಿತಿದೆ. ಹೀಗಾಗಿ ಕೂಡಲೇ ಕೋಟೆಯ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡು ರಕ್ಷಿಸಬೇಕೆಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]