Tag: Arbaz Khan

  • ಚಿತ್ರದಲ್ಲಿ ಸಲ್ಮಾನ್ ಕಿಸ್ ಮಾಡಲ್ಲ ಏಕೆ? ರಹಸ್ಯ ಬಿಚ್ಚಿಟ್ಟ ಸೋದರ

    ಚಿತ್ರದಲ್ಲಿ ಸಲ್ಮಾನ್ ಕಿಸ್ ಮಾಡಲ್ಲ ಏಕೆ? ರಹಸ್ಯ ಬಿಚ್ಚಿಟ್ಟ ಸೋದರ

    ಮುಂಬೈ: ನಿರೂಪಕ ಕಪಿಲ್ ಶರ್ಮಾ ಸಾರಥ್ಯದ ಕಾಮಿಡಿ ಶೋ ಮತ್ತೊಮ್ಮೆ ಆರಂಭವಾಗಿದೆ. ಕಳೆದ ವಾರ ನಟ ರಣ್‍ವೀರ್ ಸಿಂಗ್, ನಟಿ ಸಾರಾ ಅಲಿಖಾನ್ ಮತ್ತು ನಿರ್ದೇಶಕ ರೋಹಿತ್ ಶೆಟ್ಟಿ ಆಗಮಿಸಿದ್ದರು. ಈ ವಾರ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್, ಅರ್ಬಾಜ್ ಖಾನ್ ಮತ್ತು ಸೋಹೈಲ್ ಖಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಶನಿವಾರ ಮತ್ತು ಭಾನುವಾರ ಸಂಚಿಕೆ ಪ್ರಸಾರವಾಗಲಿದ್ದು, ಪ್ರೋಮೋಗಳು ಭಾರೀ ಸದ್ದು ಮಾಡುತ್ತಿವೆ. ಬಿಡುಗಡೆಯಾಗಿರುವ ಎರಡ್ಮೂರು ಪ್ರೋಮೋಗಳಲ್ಲಿ ಸಲ್ಮಾನ್ ಚಿತ್ರದಲ್ಲಿ ಕಿಸ್ ಮಾಡಲ್ಲ ಎಂಬ ರಹಸ್ಯವನ್ನು ಅರ್ಬಾಜ್ ಖಾನ್ ಬಿಚ್ಚಿಟ್ಟಿದ್ದಾರೆ.

    ನಿರೂಪಕ ಕಪಿಲ್ ಶರ್ಮಾ, ಒಂದು ಸಿನಿಮಾ ಒಪ್ಪಿಕೊಂಡಾಗ ಹೊಸ ನಟಿ ಬಂದರೆ ಹೇಗೆ? ಈ ಹಿಂದೆ ಒಂದೆರೆಡು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ನಟಿಯಾದ್ರೆ ಪರವಾಗಿಲ್ಲ. ಹೊಸ ನಟಿಯೊಂದಿಗೆ ತೆರೆ ಹಂಚಿಕೊಳ್ಳುವ ನಿಮ್ಮ ಅನುಭವ ಹೇಗಿರುತ್ತೆ ಎಂದು ಸಲ್ಮಾನ್ ಗೆ ಪ್ರಶ್ನೆ ಮಾಡಿದರು. ಕಪಿಲ್ ಪ್ರಶ್ನೆಗೆ ಉತ್ತರಿಸಿದ ಸಲ್ಮಾನ್, ಮೊದಲನೇಯದಾಗಿ ಕಿಸ್ಸಿಂಗ್ ಸೀನ್ ಮಾಡಲ್ಲ. ಹಾಗಾಗಿ ಯಾವುದೇ ತೊಂದರೆ ನನಗೆ ಆಗಲ್ಲ ಎಂದು ಹೇಳಿದರು.

    ಸಲ್ಮಾನ್ ಉತ್ತರ ಕೇಳುತ್ತಿದ್ದಂತೆ ಪಕ್ಕದಲ್ಲಿಯೇ ಕುಳಿತಿದ್ದ ಅರ್ಬಾಜ್, ಆಫ್ ಸ್ಕ್ರೀನ್ ನಲ್ಲಿಯೇ ತುಂಬಾನೇ ಕಿಸ್ ಮಾಡ್ತಾರೆ. ತೆರೆಯ ಮೇಲೆ ಮತ್ಯಾಕೆ ಎಂದು ಸೋದರನ ಕಾಲೆಳೆದರು. ಸದ್ಯ ಪ್ರೋಮೋ ಮಾತ್ರ ಬಿಡುಗಡೆಯಾಗಿದ್ದು, ಸೋದರರು ಯಾರ ಯಾರ ಕಾಲೆಳೆದಿದ್ದಾರೆ ಎಂಬುದನ್ನು ಸಂಚಿಕೆ ನೋಡಿದಾಗಲೇ ತಿಳಿಯುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತನಗಿಂತ 12 ವರ್ಷ ಹಿರಿಯ ನಟಿಯ ಜೊತೆ ಅರ್ಜುನ್ ಕಪೂರ್ ಮದುವೆ?

    ತನಗಿಂತ 12 ವರ್ಷ ಹಿರಿಯ ನಟಿಯ ಜೊತೆ ಅರ್ಜುನ್ ಕಪೂರ್ ಮದುವೆ?

    ಮುಂಬೈ: ಪ್ರೀತಿಗೆ ಕಣ್ಣಿಲ್ಲ. ಪ್ರೇಮಿಗಳು ಒಬ್ಬರಿಗೊಬ್ಬರು ಇಷ್ಟಪಟ್ಟರೆ ವಯಸ್ಸಿನ ಅಂತರವೂ ಗೊತ್ತಾಗಲ್ಲ ಎಂಬ ಮಾತನ್ನು ಕೇಳಿರುತ್ತೇವೆ. ಇತ್ತೀಚೆಗೆ ನಟಿ ಪ್ರಿಯಾಂಕ ಚೋಪ್ರಾ ತಮಗಿಂತ 10 ವರ್ಷ ಚಿಕ್ಕವನಾದ ನಿಕ್ ಜೋನ್ಸ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು. ಇದೀಗ ನಿರ್ಮಾಪಕ ಬೋನಿ ಕಪೂರ್ ಮಗ, 33 ವರ್ಷದ ಅರ್ಜುನ್ ಕಪೂರ್ ತನಗಿಂತ 12 ವರ್ಷ ಹಿರಿಯ ನಟಿ ಮಲೈಕಾ ಅರೋರ ಜೊತೆ ಮುಂದಿನ ವರ್ಷ ಮದುವೆ ಆಗಲಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

    ಇತ್ತೀಚಿನ ಕೆಲವು ದಿನಗಳಲ್ಲಿ ಅರ್ಜುನ್ ಕಪೂರ್ ಮತ್ತು 45 ವರ್ಷದ ಮಲೈಕಾ ಅರೋರಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಇಬ್ಬರ ಸಂಬಂಧದ ಬಗ್ಗೆ ಹಲವು ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡಿದುತಿತ್ತು. ಆದ್ರೆ ಇಬ್ಬರು ಒಂದು ವರ್ಷದಿಂದ ಸಾರ್ವಜನಿಕವಾಗಿ ಇಬ್ಬರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಮಲೈಕಾ ಅರೋರಾ ಖಾಸಗಿ ವಾಹಿನಿಯ ರಿಯಾಲಿಟಿ ಶೋದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದ ಕಾರ್ಯಕ್ರಮದಲ್ಲಿ ಅರ್ಜುನ್ ಭಾಗಿಯಾಗಿದ್ದರು. ಸಿನಿಮಾ ಪ್ರಮೋಶನ್ ಅಂತಾ ಮೇಲ್ನೋಟಕ್ಕೆ ಹೇಳಿದ್ರೂ, ಮಲೈಕಾ ಪ್ರೀತಿಗಾಗಿ ಅರ್ಜುನ್ ಭಾಗಿಯಾಗಿದ್ದರು ಎಂಬುವುದು ಇನ್ ಸೈಡ್‍ಸ್ಟೋರಿ.

    ಇದೂವರೆಗೂ ಮಲೈಕಾ ಅಥವಾ ಅರ್ಜುನ್ ತಮ್ಮ ಪ್ರೀತಿ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ತಾವಿಬ್ಬರು ಪ್ರೀತಿಯಲ್ಲಿ ಇರೋದನ್ನು ಅಧಿಕೃತವಾಗಿ ಹೇಳಿಕೊಂಡಿಲ್ಲ. ಮಾಧ್ಯಮಗಳ ಮುಂದೆ ನಾವಿಬ್ಬರು ಒಳ್ಳೆಯ ಗೆಳೆಯರು ಎಂಬುದನ್ನು ಹೇಳುತ್ತಾ ಬಂದಿದ್ದಾರೆ. ಮಲೈಕಾ ಈಗಾಗಲೇ ಪತಿ ಅರ್ಬಾಜ್ ಖಾನ್ ಗೆ ವಿಚ್ಛೇದನ ನೀಡಿ 16 ವರ್ಷದ ಮಗ ಅರ್ಹಾನ್ ಖಾನ್ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಇತ್ತೀಚೆಗೆ ಮಲೈಕಾ ಪತಿ, ಸಲ್ಮಾನ್ ಖಾನ್ ಸೋದರ ಅರ್ಬಾಜ್ ಖಾನ್ ತಮ್ಮ ಹೊಸ ಗೆಳತಿ ಜಾರ್ಜಿಯಾ ಆಂಡ್ರಿಯಾನಿ ಜೊತೆ ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಐಪಿಎಲ್ ಬೆಟ್ಟಿಂಗ್: ಬಾಲಿವುಡ್ ಸ್ಟಾರ್ ಅರ್ಬಾಜ್ ಖಾನ್ ಗೆ ಸಮನ್ಸ್

    ಐಪಿಎಲ್ ಬೆಟ್ಟಿಂಗ್: ಬಾಲಿವುಡ್ ಸ್ಟಾರ್ ಅರ್ಬಾಜ್ ಖಾನ್ ಗೆ ಸಮನ್ಸ್

    ಮುಂಬೈ: ಹಿಂದಿ ಚಿತ್ರ ನಟ ಹಾಗೂ ನಿರ್ದೇಶಕ ಅರ್ಬಾಜ್ ಖಾನ್ ಗೆ ಐಪಿಎಲ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಣೆ ಪೊಲೀಸರು ಸಮನ್ಸ್ ನೀಡಿದ್ದಾರೆ.

    ಹೈ ಪ್ರೊಫೈಲ್ ಬುಕ್ಕಿ 42 ವರ್ಷದ ಸೂನ್ ಜಲಾನ್ ದೇಶ ವಿದೇಶಗಳಲ್ಲಿ ಬೆಟ್ಟಿಂಗ್ ಮಾಡಿದ್ದು ಇತ್ತೀಚೆಗಷ್ಟೆ ಪೊಲೀಸರು ಬಂಧಿಸಿದ್ದರು. ಈತನ ವಿಚಾರಣೆ ವೇಳೆ ಅರ್ಬಾಜ್ ಖಾನ್ ಹೆಸರು ಕೇಳಿ ಬಂದಿತ್ತು. ಹಾಗಾಗಿ ಥಾಣೆ ಅಪರಾಧ ವಿಭಾಗದ ಪೊಲೀಸರು ಹೇಳಿಕೆ ದಾಖಲಿಸಲು ಸಮನ್ಸ್ ಜಾರಿ ಮಾಡಿದ್ದಾರೆ.

    ಪಂದ್ಯ ಒಂದರ ಬೆಟ್ಟಿಂಗ್ ನಲ್ಲಿ ಜಲಾನ್ ಅರ್ಬಾಜ್ ಜೊತೆ ಸೋತಿದ್ದನು. ಇದೇ ಕಾರಣಕ್ಕೆ ಅರ್ಬಾಜ್ ನನ್ನು ಹೆದರಿಸಿದ್ದನು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ತಿಳಿಸಿದ್ದಾರೆ.

    ಜಲಾನ್ ಬಂಧನದ ನಂತರ ಅವನ ಮನೆಯಲ್ಲಿ ಒಂದು ಡೈರಿ ಸಿಕ್ಕಿತು. ಡೈರಿಯಲ್ಲಿ 100 ಕ್ಕೂ ಹೆಚ್ಚು ಬುಕ್ಕಿಗಳ ಫೋನ್ ನಂಬರ್ ಪತ್ತೆಯಾಗಿದೆ. ಇದರಲ್ಲಿ ಬಾಲಿವುಡ್ ಸೆಲಿಬ್ರಿಟಿಗಳ, ಗುತ್ತಿಗೆದಾರರ, ಬಿಲ್ಡರ್ ಗಳ ಹೆಸರುಗಳು ಪತ್ತೆಯಾಗಿದೆ. ಇದೇ ವಿಚಾರವಾಗಿ ಜಲಾನ್ ನ ವಿಚಾರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ದುಬೈನಲ್ಲಿ ಪಂದ್ಯ ಫಿಕ್ಸ್ ಮಾಡುವ ಸಭೆಯನ್ನು ಜಲಾನ್ ವ್ಯವಸ್ಥೆ ಮಾಡಿದ್ದು ಸೆಲಿಬ್ರಿಟಿ ಕೂಡ ಬಾಗಿಯಾಗಿದ್ದರು ಎನ್ನುವುದು ತಿಳಿದುಬಂದಿದೆ. ಯಾವ ಪಂದ್ಯ ಎನ್ನುವುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.

  • ಕಿಚ್ಚ ಸುದೀಪ್‍ರನ್ನು ಭೇಟಿ ಮಾಡಿದ ಸಲ್ಮಾನ್ ಖಾನ್ ಸಹೋದರರು!

    ಕಿಚ್ಚ ಸುದೀಪ್‍ರನ್ನು ಭೇಟಿ ಮಾಡಿದ ಸಲ್ಮಾನ್ ಖಾನ್ ಸಹೋದರರು!

    ಬೆಂಗಳೂರು: ಸ್ಯಾಂಡಲ್ ವುಡ್ ಕಿಚ್ಚ ಸುದೀಪ್ ಅವರು ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಸಲ್ಮಾನ್ ಖಾನ್ ಸಹೋದರರು ಸೋಹೆಲ್ ಖಾನ್ ಹಾಗೂ ಅರ್ಬಾಜ್ ಖಾನ್ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ.

    ಇತ್ತೀಚೆಗೆ ಸಲ್ಮಾನ್ ಖಾನ್ ಸಹೋದರರು ಸೋಹೆಲ್ ಖಾನ್ ಬೆಂಗಳೂರಿಗೆ ಬಂದಿದ್ದರು. ಆಗ ಕಿಚ್ಚನನ್ನು ಭೇಟಿ ಮಾಡಿದ್ದಾರೆ. ಇದೊಂದು ಸಾಮಾನ್ಯ ಭೇಟಿ ಎಂದು ಹೇಳಲಾಗಿದೆ. ಕಿಚ್ಚನನ್ನು ಭೇಟಿ ಮಾಡಲು ಸೋಹೆಲ್‍ಗೆ ತನ್ನ ಸಹೋದರ ಅರ್ಬಾಜ್ ಖಾನ್ ಹಾಗೂ ಸೋನು ಸೂದ್ ಕೂಡ ಸಾಥ್ ನೀಡಿದ್ದರು.

    ಭೇಟಿ ಹಿನ್ನೆಲೆ: ಕರ್ನಾಟಕದಲ್ಲಿ ಚುನಾವಣಾ ಕಾವು ಹೆಚ್ಚಾಗಿದ್ದು, ಸ್ಯಾಂಡಲ್‍ವುಡ್ ತಾರೆಯರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಬಾಲಿವುಡ್ ಕಲಾವಿದರಾದ ಸೋಹೆಲ್ ಖಾನ್, ಅರ್ಬಾಜ್ ಖಾನ್ ಹಾಗೂ ಸೋನು ಸೂದ್ ಕೂಡ ಕರ್ನಾಟಕ ಚುನಾವಣೆಯಲ್ಲಿ ಪ್ರಚಾರ ಮಾಡಲು ಬೆಂಗಳೂರಿಗೆ ಬಂದಿದ್ದರು. ಎಂಇಪಿ ಪಕ್ಷದ ಪರವಾಗಿ ಪ್ರಚಾರ ನಡೆಸಲು ಬಂದಿದ್ದ ವೇಳೆ ಇವರಿಬ್ಬರು ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. ಸಿಸಿಎಲ್ ಪಂದ್ಯ ಶುರುವಾದಾಗಿನಿಂದಲೂ ಸುದೀಪ್ ಸೋಹೆಲ್ ಖಾನ್, ಅರ್ಬಾಜ್ ಖಾನ್ ಹಾಗೂ ಸೋನು ಸೂದ್ ತುಂಬಾ ಆತ್ಮೀಯವಾಗಿ ಇರುತ್ತಾರೆ.

    ಸೋಹೆಲ್ ಖಾನ್, ಅರ್ಬಾಜ್ ಖಾನ್ ಹಾಗೂ ಸೋನು ಸೂದ್ ಜೊತೆ ಸುದೀಪ್ ಸೆಲ್ಫಿ ತೆಗೆದುಕೊಂಡು ಅದನ್ನು ತಮ್ಮ ಟ್ವಿಟ್ಟರಿನಲ್ಲಿ ಹಾಕಿದ್ದಾರೆ. ನನ್ನ ಸಹೋದರರಾದ ಸೋಹೆಲ್ ಖಾನ್ ಹಾಗೂ ಅರ್ಬಾಜ್ ಖಾನ್ ಜೊತೆ ಕೆಲ ಕಾಲ ಕಳೆದಿದ್ದು ಖುಷಿಯಾಯಿತ್ತು. ಮುಂದೆ ಕೂಡ ಈ ರೀತಿಯ ಭೇಟಿಗಾಗಿ ಕಾಯುತ್ತಿದ್ದೇನೆ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.

    ಕಿಚ್ಚನ ಜೊತೆ ಸ್ಯಾಂಡಲ್‍ವುಡ್ ನಟ ಚಂದನ್, ಖಾಸಗಿ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, ಐಪಿಎಲ್ ಆಟಗಾರ ಕಾರಿಯಪ್ಪ ಹಾಗೂ ಕ್ರಿಕೆಟರ್ ರಿತೇಶ್ ಭಟ್ಕಳ್ ಕೂಡ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

  • ಸನ್ನಿ ಲಿಯೋನ್ ಜೊತೆ ಹಾಟ್ ಸೀನ್ ಗಳಲ್ಲಿ ಅರ್ಬಾಜ್ ಖಾನ್-ರಿಲೀಸ್ ಆಯ್ತು ಟ್ರೇಲರ್

    ಸನ್ನಿ ಲಿಯೋನ್ ಜೊತೆ ಹಾಟ್ ಸೀನ್ ಗಳಲ್ಲಿ ಅರ್ಬಾಜ್ ಖಾನ್-ರಿಲೀಸ್ ಆಯ್ತು ಟ್ರೇಲರ್

    ಮುಂಬೈ: ಬಾಲಿವುಡ್ ನ ಮಾದಕ ಬೆಡಗಿ ಸನ್ನಿ ಲಿಯೋನ್ ಜೊತೆ ಮೊದಲ ಬಾರಿಗೆ ಅರ್ಬಾಜ್ ಖಾನ್ ಸಖತ್ ಹಾಟ್ ಸೀನ್ ಗಳಲ್ಲಿ ಕಾಣಿಸಿಕೊಂಡಿದ್ದು, `ತೇರಾ ಇಂತಜಾರ್’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಟ್ರೇಲರ್ ನಲ್ಲಿ ಸನ್ನಿ ಮತ್ತು ಅರ್ಬಾಜ್ ನಡುವಿನ ಹಾಟ್ ಆ್ಯಂಡ್ ಸೆಕ್ಸಿ ಸೀನ್‍ಗಳ ಕೆಮಿಸ್ಟ್ರಿ ವರ್ಕೌಟ್ ಆಗಿದೆ.

    ಸನ್ನಿ ಲಿಯೋನ್ ಬಹುದಿನಗಳ ನಂತರ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೇರಾ ಇಂತಜಾರ್ ಸಿನಿಮಾದಲ್ಲಿ ಸನ್ನಿಯೊಂದಿಗೆ ಅರ್ಬಾಜ್ ಖಾನ್ ಬೋಲ್ಡ್ ಆಗಿ ನಟಿಸುವುದರ ಜೊತೆಗೆ ಕೆಲವು ಕಡೆ ಲಿಪ್ ಲಾಕ್ ಸಹ ಮಾಡಿದ್ದಾರೆ. ಎಂದಿನಂತೆ ಸನ್ನಿ ತಮ್ಮ ಮೈಮಾಟದ ಮೂಲಕ ಅಭಿಮಾನಿ ಬಳಗವನ್ನು ಸಿನಿಮಾದತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

    ಸಿನಿಮಾದಲ್ಲಿ ಸನ್ನಿ ಮತ್ತು ಅರ್ಬಾಜ್ ಪರಸ್ಪರ ಒಬ್ಬರಿಗೊಬ್ಬರು ಪ್ರೀತಿಸುತ್ತಿರುತ್ತಾರೆ. ಇದ್ದಕ್ಕಿದಂತೆ ನಾಯಕ ನಟ ಅರ್ಬಾಜ್ ಕಾಣೆಯಾಗುತ್ತಾನೆ. ಕಾಣೆಯಾದ ಬಳಿಕ ಅರ್ಬಾಜ್ ಕೊಲೆಯೂ ನಡೆಯುತ್ತದೆ. ಪ್ರಿಯತಮನ ಕೊಲೆಯ ರಹಸ್ಯವನ್ನು ಬೇಧಿಸುವಲ್ಲಿ ಕಥಾ ನಾಯಕಿ ಸಕ್ರೀಯಳಾಗುತ್ತಾಳೆ. ಕೊಲೆಯ ರಹಸ್ಯವನ್ನು ತಿಳಿಯಲು ನಾಯಕಿ ಅನುಭವಿಸುವ ತೊಂದರೆಗಳನ್ನು ಟ್ರೇಲರ್ ನಲ್ಲಿ ನೋಡಬಹುದಾಗಿದೆ.

    ಸನ್ನಿ ಮತ್ತು ಅರ್ಬಾಜ್ ಜೊತೆ ಸುಧಾ ಚಂದ್ರನ್, ಸಲಿಲ್ ಅಂಕೋಲಾ, ಋಚಾ ಶರ್ಮಾ, ಗೌಹರ್ ಖಾನ್, ಹನೀಫ್ ನೊಯಿಡಾ, ಭಾನಿ ಸಿಂಹ ಮತ್ತು ಆರ್ಯ ಬಬ್ಬರ್ ಸೇರಿದಂತೆ ದೊಡ್ಡ ತಾರಾಗಣವನ್ನು ಸಿನಿಮಾ ಹೊಂದಿದೆ. ಸಿನಿಮಾಗೆ ಅಮನ್ ಮೆಹ್ತಾ ಮತ್ತು ಬಿಜಲ್ ಮೆಹ್ತಾ ಬಂಡವಾಳ ಹೂಡಿದ್ದು, ರಾಜೀವ್ ವಾಲಿಯಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ತೇರಾ ಇಂತಜಾರ್ ರೋಮ್ಯಾಂಟಿಕ್ ಮತ್ತು ಸಸ್ಪೆನ್ಸ್ ಕಥಾ ಹಂದರವನ್ನು ಹೊಂದಿದ್ದು, ನವೆಂಬರ್ 24ರಂದು ದೇಶಾದದ್ಯಂತ ತೆರೆಕಾಣಲಿದೆ.