Tag: Aravindh

  • ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

    ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

    – ಸಂಬರ್ಗಿಯವರು ತಾಯಿ ಮೇಲೆ ಆಣೆ ಮಾಡಲಿ

    ಬೆಂಗಳೂರು: ಸಾಮಾಜಿಕ ಕಾರ್ಯಕರ್ತನೆಂದು ಹೇಳಿಕೊಂಡು ತಿರುಗುವ ಪ್ರಶಾಂತ್ ಸಂಬರ್ಗಿ ಓರ್ವ ನೆಲಹಿಡುಕ. ಬಿಗ್‍ಬಾಸ್ ಶೋ ನಲ್ಲಿ ಎಲ್ಲರಿಗೂ ಪಾರ್ಟಿಕೊಟ್ಟು ಅರವಿಂದ್‍ನ ವೀಡಿಯೋ ಮಾಡಿ ಟ್ರೋಲಿಗನಿಗೆ ಕೊಟ್ಟಿದ್ದಾರೆ ಎಂದು ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಚಂದ್ರಚೂಡ್, ಸಂಬರ್ಗಿಗೆ ಜೀವದ ಗೆಳೆಯರಿರುವುದು ನನಗೆ ಅರಿವಿಲ್ಲ. ಎಲ್ಲರ ಮಾತು, ಎಲ್ಲರ ವೀಡಿಯೋ ರೆಕಾರ್ಡ್ ಮಾಡುವ ನೀಚ. ಬಿಗ್‍ಬಾಸ್ ನ ಎರಡನೇ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಖಾಸಗಿ ವಾಹಿನಿ ಮಾಡಿದ್ದ ಕ್ವಾರೈಂಟೈನ್ ಸಂದರ್ಭದಲ್ಲಿ ಬಿಗ್‍ಬಾಸ್ ಸ್ಪರ್ಧಿ ಅರವಿಂದ್ ಸೇರಿದಂತೆ ಹಲವರಿಗೆ ಮದ್ಯಪಾನದ ಪಾರ್ಟಿಕೊಟ್ಟು(ಚಾನಲ್ ನಿಯಮಾವಳಿ ವಿರೋಧಿಸಿ) ವೀಡಿಯೋ ಮಾಡಿದ್ದರು. ಈ ಸಂದರ್ಭ ನಾನು ಇದನ್ನು ಗಮನಿಸಿ, ಕ್ಷಣಮಾತ್ರದಲ್ಲಿ ಕುತಂತ್ರ ಕಂಡುಹಿಡಿದು ಅಲ್ಲಿದ್ದ ಹೆಣ್ಣುಮಕ್ಕಳನ್ನು ರೂಮ್‍ನಿಂದ ಹೋಗುವಂತೆ ಮಾಡಿದೆ ಎಂದು ಹೇಳಿದರು. ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅನ್ನಲು ಸಂಬರ್ಗಿ ಬಳಿ ದಾಖಲೆ ಏನಿದೆ..?: ಚಂದ್ರಚೂಡ್

    ಆದರೂ ಅರವಿಂದ್ ಅವರ ವೀಡಿಯೋ ಮಾಡಿ ಅದನ್ನು ಯಾವಾಗ ಬಿಡುಗಡೆ ಮಾಡಬೇಕೆಂದು ಚಂದನ್ ಎಂಬ ಟ್ರೋಲಿಗನಿಗೆ ಕೊಟ್ಟುಬಂದಿದ್ದರು. ಈ ಸುದ್ದಿಯನ್ನು ನಾನು ಖಾಸಗಿ ಚಾನಲ್ ಗೆ ತಿಳಿಸಿದ ಬಳಿಕ ಆ ವೀಡಿಯೋವನ್ನು ತಡೆಹಿಡಿಯಲಾಗಿದೆ. ತಾಯಿ ಪುಷ್ಪ ಸಂಬರ್ಗಿ ಅವರ ತಲೆಮೇಲೆ ಕೈಇಟ್ಟು ಈ ಬಗ್ಗೆ ನಾ ಇಂತಹ ಕೆಟ್ಟ ಕೆಲಸ ಮಾಡಲಿಲ್ಲವೆಂದು ಸಂಬರ್ಗಿ ಹೇಳಲಿ. ಇಲ್ಲದಿದ್ದಲ್ಲಿ ತನ್ನ ಮೊಬೈಲ್‍ನ್ನು ಪೊಲೀಸರಿಗೆ ತನಿಖೆಗೆ ಕೊಡಲಿ. ಟ್ರೋಲ್ ಮಾಡಬೇಕು. ನೆಗೆಟಿವ್ ಮಾಡಬೇಕು. ಕುತಂತ್ರ ಮಾಡಿ ಅವರ ಶಕ್ತಿ ಕುಂದಿಸಬೇಕು. ಅವರನ್ನು ಜನರ ಮುಂದೆ ಕೆಟ್ಟವರಾಗಿ ತೋರಿಸಬೇಕು. ಈ ಮೂಲಕ ತಾನು ಒಳ್ಳೆಯವನಾಗಿ ಗುರುತಿಸಿಕೊಳ್ಳಬೇಕೆಂಬ ಹಂಬಲ ಸಂಬರ್ಗಿಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್

    ನಿಜಕ್ಕೂ ಖಾಸಗಿ ಚಾನಲ್ ಆಯೋಜಕರು ಯಾವ ಪರಿ ಬುದ್ಧಿವಾದ ಹೇಳಿ ಎಂಜಲು ಖರ್ಚು ಮಾಡಿದರೆಂದು ತನಿಖೆಯ ಸಣ್ಣ ಅಭ್ಯಾಸವಿದ್ದವರು ತಿಳಿದುಕೊಳ್ಳಬಹುದು. ಇವರು ಸಾಮಾಜಿಕ ಕಾರ್ಯಕರ್ತ ಎನ್ನುವುದಕ್ಕೆ ಯೋಗ್ಯನಲ್ಲ ಎಂದು ವಾಗ್ದಾಳಿ ನಡೆಸಿದರು.

  • ಪ್ರಶಾಂತ್ ಸಂಬರಗಿ ಮನದಾಸೆ ಈಡೇರಿಸಿದ ಬಿಗ್‍ಬಾಸ್

    ಪ್ರಶಾಂತ್ ಸಂಬರಗಿ ಮನದಾಸೆ ಈಡೇರಿಸಿದ ಬಿಗ್‍ಬಾಸ್

    ಬಿಗ್‍ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಈ ವಾರ ಕೊನೆಯವಾರ ಆಗಿರುವುದರಿಂದ ಅವರು ಬಿಗ್ ಮನೆಯಲ್ಲಿರುವ ಕೃತಕ ಕಿವಿಯಲ್ಲಿ ವ್ಯಕ್ತಪಡಿಸಿರುವ ಅವರ ಮನದಾಸೆಯನ್ನು ಈಡೇರಿಸುತ್ತಿದ್ದಾರೆ.

    ಅರವಿಂದ್ ಅವರು ಬಿಗ್‍ಮನೆಗೆ ಬಂದ ತಮ್ಮ ಬೈಕ್‍ನ್ನು ಮತ್ತೆ ಮನೆಯಲ್ಲಿ ನೋಡಬೇಕು ಎಂದಿದ್ದರು ಅವರ ಆಸೆಯನ್ನು ಬಿಗ್‍ಬಾಸ್ ತಿರಿಸಿದ್ದಾರೆ, ನಂತರ ದಿವ್ಯಾ ಉರುಡುಗ ಅವರು ಇಷ್ಟದ ಊಟ ಕೇಳಿದ್ದರು ಅದೂ ಕೂಡ ಪೂರೈಸಿದ್ದಾರೆ. ಇದೀಗ ಪ್ರಶಾಂತ್ ಸಂಬರಗಿ ಅವರು ತಮ್ಮ ಕುಟುಂಬವನ್ನು ಈ ಮನೆಯಲ್ಲಿ ನೋಡಬೇಕು ಎಂದಿದ್ದರು. ಇದೀಗ ಬಿಗ್‍ಬಾಸ್ ಅವರ ಕುಟುಂಬದ ಫೋಟೋವನ್ನು ಬಿಗ್ ಮನೆಯಲ್ಲಿ ಹಾಕುವ ಮೂಲಕ ಅವರ ಆಸೆಯನ್ನು ಪೂರೈಸಿದ್ದಾರೆ.

    ಸಂಬರಗಿ ಬಿಗ್ ಮನೆಯಲ್ಲಿ ಅವರ ಕುಟುಂಬದ ಫೋಟೋ ನೋಡುತ್ತಿದ್ದಂತೆ ತುಂಬಾ ಖುಷಿ ಪಟ್ಟರು. ನಂತರ ಇಷ್ಟು ದೊಡ್ಡ ಫೋಟೋ ಹಾಕಿದ್ದಾರೆ, ತುಂಬಾ ಖುಷಿ ಆಯ್ತು ಎಂದರು. ಬಳಿಕ ದಿವ್ಯಾ ಉರುಡುಗ ನಿಮ್ಮ ಕುಟುಂಬ ತುಂಬಾ ಮುದ್ದಾಗಿದೆ, ನಿಮ್ಮ ಹೆಂಡತಿ ಮತ್ತು ನಿಮ್ಮ ಸಣ್ಣ ಮಗ ತುಂಬಾ ಮುದ್ದಾಗಿದ್ದಾರೆ ಎಂದರು. ಇದನ್ನೂ ಓದಿ: ಏನಪ್ಪಾ ಇದು ವೈಭೋಗ, ನನ್ನ ಜಾತಕದಲ್ಲಿ ಇದೆಲ್ಲಾ ಇದೆ ಅಂತ ಗೊತ್ತಿರಲಿಲ್ಲ: ಮಂಜು

    ಪ್ರಶಾಂತ್ ಸಂಬರಗಿ ಅವರ ಕುಟುಂಬವನ್ನು ಎಲ್ಲರಿಗೂ ಪರಿಚಯ ಮಾಡಿಕೊಟ್ಟರು. ನನ್ನ ಸಣ್ಣ ಮಗನನ್ನು ಫೋಟೋಗೆ ಅಲ್ಲಿ ನಿಲ್ಲಿಸಿರುವುದು ನನ್ನ ಭಾಗ್ಯ ಎಂದು ನಗೆ ಚಟಾಕಿ ಹಾರಿಸಿದರು. ದಿವ್ಯಾ ಸುರೇಶ್ ನಿಮ್ಮ ದೊಡ್ಡ ಮಗ ನಿಮ್ಮಂತೆ ಇದ್ದಾರೆ. ಸಣ್ಣ ಮಗ ನಿಮ್ಮ ಹೆಂಡತಿಯಂತೆ ಇದ್ದಾರೆ ಎಂದು ಹೋಲಿಕೆ ಮಾಡಿದರು.

    ಸಂಬರಗಿ ಎಲ್ಲರನ್ನು ಕರೆದು ನನ್ನ ಕುಟುಂಬದ ಜೊತೆ ಒಂದು ಫೋಟೋ ತೆಗೆಸಿಕೊಳ್ಳನ ಎಂದು ಎಲ್ಲರೊಂದಿಗೆ ಫೋಟೋ ತೆಗೆಸಿಕೊಂಡರು. ಬಿಗ್‍ಬಾಸ್ ನೀವು ನನ್ನ ಫ್ಯಾಮಿಲಿಯನ್ನು ಕರೆದುಕೊಂಡು ಬಂದಿಲ್ಲ ಎಂದರು ಕೂಡ ನನ್ನ ಫ್ಯಾಮಿಲಿಯನ್ನು ಫೋಟೋ ಸಮೇತ ತಂದಿರುವುದು ಸಂತೋಷವಾಯಿತು. ನಾನು ಬದುಕಿರುವುದೇ ನನ್ನ ಕುಟುಂಬಕೋಸ್ಕರ. ಈ ಮನೆಯಲ್ಲಿ ನನ್ನ ಪರಿವಾರದ ಫೋಟೋ ನೋಡಿ ತುಂಬಾ ಖುಷಿ ಆಯ್ತು ಧನ್ಯವಾದ ಎಂದರು.

  • ಬಿಗ್‍ಬಾಸ್ ಮನೆಯಲ್ಲಿ ಅರವಿಂದ್‍ಗೆ ಸ್ಲೆಡ್ಜಿಂಗ್ ಮಾಡಿದ್ಯಾರು?

    ಬಿಗ್‍ಬಾಸ್ ಮನೆಯಲ್ಲಿ ಅರವಿಂದ್‍ಗೆ ಸ್ಲೆಡ್ಜಿಂಗ್ ಮಾಡಿದ್ಯಾರು?

    ಬೆಂಗಳೂರು: ಬಿಗ್ ಮನೆಯಲ್ಲಿ ಹೊಸ ಕ್ಯಾಪ್ಟನ್‍ನ ನೇಮಕವಾಗಿದೆ. ಅರವಿಂದ್ ಅವರಿಗೆ ಕ್ಯಾಪ್ಟನ್ ಪಟ್ಟ ಸಿಗುತ್ತಿದ್ದಂತೆ ಕೆಲವರು ಸಂತೋಷ ಪಟ್ಟರೆ ಕೆಲವರು ತಮ್ಮ ಅಸಮಾಧಾನವನ್ನು ತೋರ್ಪಡಿಸಿದರು. ಈ ನಡುವೆ ಅರವಿಂದ್ ನನ್ನನ್ನು ಸ್ಪರ್ಧಿಯೊಬ್ಬರು ಸ್ಲೆಡ್ಜಿಂಗ್ ಮಾಡಲು ಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.

    ಜೋಡಿ ಟಾಸ್ಕ್‍ನಲ್ಲಿ ಜೋಡಿಯಾಗಿ ಸ್ಪರ್ಧಿಸಿದ್ದ ಅರವಿಂದ್ ಮತ್ತು ದಿವ್ಯ ಉರುಡುಗ ತಡರಾತ್ರಿ ಮಾತಿಗಿಳಿಯುತ್ತಿದ್ದಂತೆ, ಇಂದು ಕ್ಯಾಪ್ಟನ್ ಆಗಿರುವ ಖುಷಿಗೆ ಚೆನ್ನಾಗಿ ನಿದ್ದೆ ಮಾಡಿ, ನನಗೆ ನೀವು ಮನೆಯ ಕ್ಯಾಪ್ಟನ್ ಆಗಿರುವುದು ತುಂಬಾ ಖುಷಿ ಕೊಟ್ಟಿದೆ ಎಂದು ದಿವ್ಯ ಅರವಿಂದ್ ಜೊತೆ ಸಂತೋಷ ಹಂಚಿಕೊಂಡರು. ಈ ವೇಳೆ ಅರವಿಂದ್ ಖುಷಿ ಸದ್ಯಕ್ಕೆ ಏನಿಲ್ಲ. ಮುಂದಿನ ದಿನಗಳಲ್ಲಿ ಖುಷಿ ಆಗಬಹುದು. ನಾನು ಕ್ಯಾಪ್ಟನ್ ಆಗಿರುವುದರಿಂದ ಕೆಲವರು ಸಪ್ಪೆ ಮೋರೆ ಹಾಕಿಕೊಂಡು ಕೂತಿದ್ದಾರೆ ಎಂದರು.

    ನಂತರ ದಿವ್ಯ ಉರುಡುಗ ಅರವಿಂದ್ ನೀವು ಕ್ಯಾಪ್ಟನ್ ಆಗುತ್ತಿದ್ದಂತೆ, ನಿಧಿ ಸುಬ್ಬಯ್ಯ ಮಂಜ ಯೂ ಮೈ ಟೂ ಕ್ಯಾಪ್ಟನ್ ಎಂದು ಹೇಳಿದರು ಇದನ್ನು ನೋಡಿದರೆ ನಿಧಿಗೆ ನೀವು ಕ್ಯಾಪ್ಟನ್ ಆಗಿರುವುದು ಇಷ್ಟ ಆಗಿಲ್ಲ ಅನಿಸುತ್ತೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅರವಿಂದ್ ನಿಧಿ ನನಗೆ ಸ್ಲೆಡ್ಜಿಂಗ್ ಮಾಡಲು ಯತ್ನಿಸುತ್ತಿದ್ದಾಳೆ. ಅವಳಿಗೆ ಗೊತ್ತಿಲ್ಲ ನಾನು ಯಾರು ಅಂತ, ಅವಳು ಆ ರೀತಿ ಇರುವುದಕ್ಕೆ ಬಿಗ್ ಬಾಸ್ ಮನೆಯಲ್ಲಿ ಇರುವುದೆಂದು ಅಭಿಪ್ರಾಯ ಹಂಚಿಕೊಂಡರು.

    ಪ್ರತಿ ದಿನ ನಡೆಯುವ ಟಾಸ್ಕ್ ಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಒಬ್ಬರಲ್ಲ ಒಬ್ಬರ ಅಸಲಿ ಮುಖ ಕಾಣಿಸುತ್ತಿದೆ. ಬಿಗ್ ಮನೆಯಲ್ಲಿರುವ ಕೆಲವರಿಗೆ ಕೆಲವರನ್ನು ಕಂಡರೆ ಇಷ್ಟವಾದರೆ ಕೆಲವರಿಗೆ ಹೊಟ್ಟೆಯುರಿ ಇದ್ದಂತಿದೆ. ಇದು ಮುಂದಿನ ದಿನಗಳಲ್ಲಿ ಹೇಗೆ ಮುಂದುವರಿಯುತ್ತದೆ ಎಂಬುದನ್ನು ಕಾದು ನೋಡ ಬೇಕಾಗಿದೆ.