ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ನಿನ್ನೆ ನಡೆದ ಗಡಿಗೋಪುರ ಟಾಸ್ಕ್ ವೇಳೆ ಶುಭಾ ಅವರ ಸಾರಥ್ಯದ ಜಾತ್ರೆ ಟೀಂ ಮತ್ತು ದಿವ್ಯ ಉರುಡುಗ ಮುಂದಾಳತ್ವದ ಅನುಬಂಧ ತಂಡಗಳ ನಡುವೆ ಜಿದ್ದಾಜಿದ್ದಿನ ಕಾದಾಟ ನಡೆದಿದೆ. ಈ ವೇಳೆ ಹಲ್ಲು ಮುರಿದುಕೊಂಡ ಜಾತ್ರೆ ಟೀಂನ ಮಂಜು ಅವರನ್ನು ಅನುಬಂಧ ತಂಡದ ಸದಸ್ಯ ಅರವಿಂದ್ ಅವರು ತಬ್ಬಿಕೊಂಡು ಸಮಾಧಾನ ಹೇಳಿದ್ದಾರೆ.

ಬಿಗ್‍ಬಾಸ್ ಕೊಟ್ಟ ಗಡಿಗೋಪುರ ಟಾಸ್ಕ್ ವೇಳೆ ಜಾತ್ರೆ ಟೀಂನ ಮಂಜು ಮತ್ತು ಅನುಬಂಧ ಟೀಂನ ರಾಜೀವ್ ನಡುವೆ ನಡೆದ ಆಟದಲ್ಲಿ ರಾಜೀವ್‍ನ ಮುಂಗೈ ಮಂಜು ಹಲ್ಲಿಗೆ ತಾಕಿ ಅರ್ಧ ಹಲ್ಲು ತುಂಡಾಗಿ ನೆಲಕ್ಕೆ ಬಿತ್ತು. ನಂತರ ಮಂಜು ಹಲ್ಲುಮುರಿದನ್ನು ಕಂಡು ತಂಡದ ಸದಸ್ಯರು ಗಾಬರಿಗೊಂಡರೆ, ಇತ್ತ ರಾಜೀವ್ ಮುಂಗೈಗಾದ ಗಾಯದಿಂದ ನರಳಾಡಿದರು. ನಂತರ ಕೆಲ ಹೊತ್ತಿನ ನಂತರ ಟಾಸ್ಕ್ ಮುಂದುವರಿಯಿತು.

ಬಣ್ಣದ ಇಟ್ಟಿಗೆ ಜೋಡಿಸುವ ಟಾಸ್ಕ್ ನಂತರ ಕೋಳಿ ಜಗಳ ಟಾಸ್ಕ್ ನಡೆಯುತ್ತದೆ. ಇದರಲ್ಲಿ ಮಂಜುವನ್ನು ಅರವಿಂದ್ ಸೋಲಿಸುತ್ತಾರೆ. ನಂತರ ಶಮಂತ್ ಅವರು ಪ್ರಶಾಂತ್ ಸಂಬರಗಿ ಅವರನ್ನು ಸೋಲಿಸಿ ಅನುಬಂಧ ತಂಡ ಗೆಲ್ಲುವಂತೆ ಮಾಡುತ್ತಾರೆ.

ಈ ಟಾಸ್ಕ್ ಮುಗಿದ ಬಳಿಕ ಅರವಿಂದ್ ಮಂಜುವನ್ನು ತಬ್ಬಿಕೊಂಡರು. ನಂತರ ಎರಡು ನಿಮಿಷ ಹೀಗೆ ಇರು ಅಂದಾಗ ಮಂಜು ಅವರ ಕಣ್ಣಲ್ಲಿ ಕಣ್ಣೀರು ಹರಿಯತೊಡಗಿತು. ಈ ವೇಳೆ ಅರವಿಂದ್ ಏನಾಯಿತು ನೀನು ಅಳಬಾರದು ಎಂದು ಸಮಾಧಾನ ಮಾಡಿದರೆ, ನಂತರ ಅವರ ಬಳಿ ಬಂದ ಶುಭಾ ನೀನು ಈ ರೀತಿ ಆಡ್‍ಬೇಡ ಎಂದು ಹೇಳಿದರೆ, ದಿವ್ಯ ಉರುಡುಗ ನಿನಗೆ ಇದು ಸೂಟ್ ಆಗಲ್ಲ ಮಂಜ “ಡೋಂಟ್ ಡೂ ದಿಸ್” ಎಂದರು.
ನಂತರ ಬ್ರೋ ಗೌಡ ಮಂಜುವನ್ನು ನಗಾಡಿಸಲು ಪ್ರಯತ್ನಿಸಿದರು. ಈ ವೇಳೆ ಮಂಜು ಬಳಿ ಬಂದ ರಾಜೀವ್ ನೀನು ಹಲ್ಲು ಹೋಗಿರುವ ಕುರಿತು ತಲೆಕೆಡಿಸಿಕೊಳ್ಳಬೇಡ. ನೀನು ಮುಂದಿನ ಟಾಸ್ಕ್ ಬಗ್ಗೆ ಯೋಚನೆ ಮಾಡು ಎಂದು ಸಮಾಧಾನ ಮಾಡಿದರು.



ಬಳಿಕ ಶುಭ, ನಾನು ನಿನ್ನನ್ನು ಇದೇ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ನಿಮ್ಮ ಮನೆಯಲ್ಲಿ ದಿವ್ಯಾ ಉರುಡಗರನ್ನು ಮದುವೆಯಾಗ್ತೀನಿ ಎಂದರೆ ಒಪ್ಪಿಕೊಳ್ಳುತ್ತಾರಾ ಎಂದು ಅರವಿಂದ್‍ಗೆ ಕೇಳುತ್ತಾರೆ. ಆಗ ಅರವಿಂದ್ ನಮ್ಮ ಮನೆಯಲ್ಲಿ ನಾನು ಇಷ್ಟಪಡುವುದನ್ನೇ ಅವರು ಬಯಸುತ್ತಾರೆ ಒಪ್ಪಿಕೊಳ್ಳುತ್ತಾರೆ. ನಿನ್ನೆ ಪ್ರಶಾಂತ್ ಅವರು ಕೂಡ ಕೇಳಿದಾಗ, ಹೌದು ಇಲ್ಲಿ ಇರುವವರಲ್ಲಿ ನನಗೆ ಹೊಂದಿಕೊಳ್ಳುವವರು ಎಂದರೆ ದಿವ್ಯಾ, ಇಲ್ಲಿರುವವರಲ್ಲಿ ನಾನು ಬಹಳ ಇಷ್ಟ ಪಡುವ ವ್ಯಕ್ತಿಯೂ ದಿವ್ಯಾ. ಅವಳು ಮಾಡುವ ಕೆಲಸ, ಅವಳು ಇರುವ ರೀತಿ ಎಲ್ಲವೂ ಸರಿಯಾಗಿದೆ. ಅವಳು ನೋಡಲು ಕ್ಯೂಟ್ ಆಗಿ ಕೂಡ ಇದ್ದಾಳೆ. ಮುಂದಿನ ಬಗ್ಗೆ ನಾನು ಇಲ್ಲಿ ಮಾತನಾಡಲು ಆಗುವುದಿಲ್ಲ. ಒಬ್ಬರು ಹೇಗೆ ಏನು ಎಂದು 25 ದಿನಗಳಲ್ಲಿ ನಿರ್ಧರಿಸಲು ಆಗುವುದಿಲ್ಲ. ಹಾಗಾಗಿ ಈಗಲೇ ಅದರ ಬಗ್ಗೆ ಮಾಡನಾಡುವುದು ತಪ್ಪು ಎಂದು ಹೇಳುತ್ತಾರೆ.






ಹೌದು. ಜೋಡಿ ಟಾಸ್ಕ್‍ನಲ್ಲಿ ಆಡಲು ದಿವ್ಯ ಉರುಡುಗ ಅವರು ಅರವಿಂದ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಆ ಬಳಿಕದಿಂದ ಇಬ್ಬರೂ ಹೆಚ್ಚು ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ದಿವ್ಯ ಹಾಗೂ ಅರವಿಂದ್ ಮಧ್ಯೆ ಏನೋ ನಡೆಯುತ್ತಿದೆ ಅಂತ ಮನೆ ಮಂದಿ ಪಿಸು ಪಿಸು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಹಿಂದೆ ದಿವ್ಯ ಉರುಡುಗ ಅವರು ಪ್ರಶಾಂತ್ ಸಂಬರ್ಗಿ ಜೊತೆ ಚೆನ್ನಾಗಿಯೇ ಇದ್ದರು. ಆದರೆ ಜೋಡಿ ಟಾಸ್ಕ್ ಬಂದ ಬಳಿಕ ದಿವ್ಯ ಉರುಡುಗ ವರ್ತನೆ ಬದಲಾಗಿದೆ ಎಂದು ನಿಧಿ ಸುಬ್ಬಯ್ಯ ಹಾಗೂ ಶುಭಾ ಪೂಂಜಾ ಮಾತನಾಡಿಕೊಂಡಿದ್ದಾರೆ.







