Tag: Aravind

  • ಇದ್ದಕ್ಕಿದ್ದಂತೆ ದಿವ್ಯಾ ಉರುಡುಗ ಆಸ್ಪತ್ರೆಗೆ ದಾಖಲು- ಅರವಿಂದ್ ಶಾಕ್

    ಇದ್ದಕ್ಕಿದ್ದಂತೆ ದಿವ್ಯಾ ಉರುಡುಗ ಆಸ್ಪತ್ರೆಗೆ ದಾಖಲು- ಅರವಿಂದ್ ಶಾಕ್

    ದಿವ್ಯಾ ಉರುಡುಗ ಅವರು ಇದ್ದಕ್ಕಿದ್ದಂತೆ ಕಾಣೆಯಾಗಿದ್ದು, ಮನೆಮಂದಿಗೆಲ್ಲ ಅಚ್ಚರಿ ಮೂಡಿಸಿತ್ತು. ಆದರೆ ಕಾಣೆಯಾದರು ಎಂಬುದನ್ನು ಬಿಗ್ ಬಾಸ್ ರಾತ್ರಿ ವೇಳೆ ತಿಳಿಸಿದ್ದು, ಸುದ್ದಿ ಕೇಳಿದ ಅರವಿಂದ್ ಫುಲ್ ಶಾಕ್ ಆಗಿದ್ದಾರೆ. ಜೊತೆಗೆ ಮನೆ ಮಂದಿ ಸಹ ಬೇಸರ ವ್ಯಕ್ತಪಡಿಸಿದ್ದಾರೆ.

    ದಿವ್ಯಾ ಉರುಡುಗ ಅವರಿಗೆ ಆರೋಗ್ಯ ಸಮಸ್ಯೆ ಇರುವುದು ಹೊಸದೇನಲ್ಲ. ಆಗಾಗ ಚೆಕಪ್ ಸಹ ಮಾಡಿಸುತ್ತಿದ್ದರು. ಆದರೆ ಇದೀಗ ಇದ್ದಕ್ಕಿಂತೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ಮೂಲಕ ಮನೆ ಮಂದಿಗೆಲ್ಲ ಅಚ್ಚರಿ ಹಾಗೂ ಬೇಸರಕ್ಕೆ ಒಳಗಾಗಿದ್ದಾರೆ.

    ದಿವ್ಯಾ ಅವರಿಗೆ ಸ್ಕ್ಯಾನಿಂಗ್ ಮಾಡಿಸಬೇಕೆಂದು ವೈದ್ಯರು ಸೂಚಿಸಿದ್ದರಿಂದ ಅವರನ್ನು ತಪಾಸಣೆಗೆ ಕರೆದೊಯ್ಯಲಾಗಿದೆ, ಅವರು ಕ್ಷೇಮವಾಗಿದ್ದಾರೆ ಎಂದು ಆರಂಭದಲ್ಲಿ ಬಿಗ್ ಬಾಸ್ ಮನೆ ಮಂದಿಗೆ ತಿಳಿಸುತ್ತಾರೆ. ಇದನ್ನು ಹೇಳುತ್ತಿದ್ದಂತೆ ಅರವಿಂದ್ ಸ್ವಲ್ಪ ಭಾವುಕರಾಗಿದ್ದಾರೆ. ಬಳಿಕ ಬಿಗ್ ಬಾಸ್ ವಾಯ್ಸ್ ಕೇಳಿಸಿದ್ದು, ಸ್ಕ್ಯಾನಿಂಗ್ ಬಳಿಕ ಯೂರಿನರಿ ಇನ್‍ಫೆಕ್ಷನ್ ಕಂಡು ಬಂದಿರುವುದರಿಂದ ದಿವ್ಯಾ ಉರುಡುಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳುತ್ತಾರೆ.

    ಹೀಗೆ ಹೇಳುತ್ತಿದ್ದಂತೆ ಮನೆಯ ಸದಸ್ಯರು ಅವರು ಹುಶಾರಾಗುತ್ತಾರೆ ಎಂದು ಅರವಿಂದ್‍ಗೆ ಹೇಳುತ್ತಾರೆ. ಆಗ ಅರವಿಂದ್ ಭಾವುಕರಾಗಿಯೇ ಯಾ ಯಾ ಎಂದು ಹೇಳುತ್ತಾರೆ. ಅಲ್ಲದೆ ಇಲ್ಲಿಗಿಂತ ಅಲ್ಲಿ ಚೆನ್ನಾಗಿರುತ್ತಾಳೆ ಎಂದು ಹೇಳುತ್ತಾರೆ. ದಿವ್ಯಾ ಉರುಡುಗ ಅವರು ಯಾವಾಗ ಮನೆ ಬಿಟ್ಟು ಹೊರ ಹೋದರು ಎಂಬುದನ್ನು ಸಹ ತೋರಿಸಲಾಗಿಲ್ಲ. ಆದರೆ ಸ್ಕ್ಯಾನಿಂಗ್ ಮಾಡಿಸಲು ಹೋಗಿದ್ದಾರೆ ಎಂದು ಬಿಗ್ ಬಾಸ್ ಒಮ್ಮೆಲೆ ಹೇಳುತ್ತಾರೆ.

  • ‘1 ಗಂಟೆ ಆಯ್ತು, ಸಾಕು ಬಿಡಿ’

    ‘1 ಗಂಟೆ ಆಯ್ತು, ಸಾಕು ಬಿಡಿ’

    ಬಿಗ್ ಬಾಸ್ ಮನೆಯ ಕ್ಯೂಟ್ ಜೋಡಿಯಾಗಿರುವ ಅರವಿಂದ್ ಮತ್ತು ದಿವ್ಯಾ ಅವರನ್ನು ಸದಸ್ಯರು ಆಗಾಗ ಕಾಲೆಳೆಯುತ್ತಿರುತ್ತಾರೆ. ಅಷ್ಟೇ ಅಲ್ಲದೇ ಈ ಹಿಂದೆ ವೀಕೆಂಡ್ ಚರ್ಚೆಯಲ್ಲಿ ಸುದೀಪ್ ಅವರು, ಪರೀಕ್ಷೆ ಆದ ಬಳಿಕವೂ ಸ್ಟುಡೆಂಟ್ಸ್ ರಿವಿಷನ್ ಮಾಡೋದನ್ನು ನಾನು ನೋಡೇ ಇರಲಿಲ್ಲ ಎಂದು ಹೇಳಿ ಇಬ್ಬರನ್ನು ಕಾಲೆಳೆದಿದ್ದರು. ಈಗ ಬಿಗ್ ಮನೆಯ ಸದಸ್ಯರು ಮತ್ತೊಮ್ಮೆ ಈ ಜೋಡಿಯನ್ನು ತಮಾಷೆ ಮಾಡಿದ್ದಾರೆ.

    64ನೇ ದಿನ ಮನೆಯ ಸದಸ್ಯರು ಲಿವಿಂಗ್ ಏರಿಯಾದಲ್ಲಿ ಟಾಸ್ಕ್ ನಿಯಮ ತಿಳಿಯಲು ಸೇರಿದ್ದರು. ಟಾಸ್ಕ್ ಗೂ ಮೊದಲು ಮಂಜು, ಅರವಿಂದ್, ದಿವ್ಯಾ ಉರುಡುಗ, ರಾಘು, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್ ಅವರು ತನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು. ಸದಸ್ಯರ ಮಾತುಗಳು ಮುಗಿದ ಬಳಿಕ ನಾಯಕರಾದ ಚಂದ್ರಚೂಡ್,”ನಾವೆಲ್ಲ ಹ್ಯೂಮನ್ ಚೈನ್ ಮಾಡಿ ಹಗ್ ಮಾಡೋಣ” ಎಂದು ಹೇಳಿದರು.

    ಎಲ್ಲರೂ ಕುಳಿತ್ತಿದ್ದ ಸ್ಥಳದಿಂದ ಎದ್ದು ಹಗ್ ಮಾಡಲು ಆರಂಭಿಸಿದರು. ಎಲ್ಲರೂ ಅಪ್ಪಿಕೊಂಡಂತೆ ದಿವ್ಯಾ ಮತ್ತು ಅರವಿಂದ್ ಹಗ್ ಮಾಡಿದರು. ಇಬ್ಬರನ್ನು ನೋಡಿದ ದಿವ್ಯಾ ಎಸ್ ಮತ್ತು ಶುಭಾ ಪೂಂಜಾ,”ಓ..ಕೆ…. ಓಕೆ …. ಸಾಕು” ಎಂದು ಹೇಳಿದರೆ, ಪ್ರಶಾಂತ್ ಸಂಬರಗಿ, “ಅರ್ಧ ಗಂಟೆ ಆಯ್ತು.. ಒಂದು ಗಂಟೆ ಆಯ್ತು.. ಬಿಡಿ” ಎಂದು ಕಾಲೆಳೆದರು. ಮನೆಯ ಸದಸ್ಯರು ತಮಾಷೆ ಮಾಡುತ್ತಿದ್ದರೂ ತಲೆ ಕೆಡಿಸಿಕೊಳ್ಳದ ಅರವಿಂದ್ ಗುಡ್ ಲಕ್ ಚೆನ್ನಾಗಿ ಆಡು ಎಂದು ವಿಶ್ ಮಾಡಿದ್ರೆ ದಿವ್ಯಾ ಗುಡ್ ಲಕ್ ಅಂತ ಹೇಳಿದರು.

    ಬಿಗ್ ಬಾಸ್ ಮನೆಯ ಎಲ್ಲ ಸದಸ್ಯರು ಬೆಳಗ್ಗೆ ಎದ್ದ ಕೂಡಲೇ ಹಗ್ ಮಾಡುತ್ತಾರೆ. ಅದರಲ್ಲೂ ದಿವ್ಯಾ ಅರವಿಂದ್ ಬಳಿ ಹೋಗಿ ಗುಡ್ ಮಾರ್ನಿಂಗ್ ವಿಶ್ ಮಾಡ್ತಾರೆ. ಈ ಹಿಂದೆ ವೈಷ್ಣವಿ ಅವರು ಹಗ್ ಮಾಡುವ ವಿಚಾರವನ್ನು ಪ್ರಸ್ತಾಪಿಸಿ ದಿವ್ಯಾ ಅವರನ್ನು ಕಾಲೆಳೆದಿದ್ದರು. ಅಷ್ಟೇ ಅಲ್ಲದೆ ಅರವಿಂದ್‍ಗೆ ನೀರು ಕುಡಿಸಲು ನಿಮಗೆ ಒಪ್ಪಿಗೆಯೇ ಎಂದು ದಿವ್ಯಾ ಅವರನ್ನು ಬಿಗ್ ಬಾಸ್ ಕೇಳಿದಾಗ ರಾಜೀವ್, ರೋಗಿ ಬಯಸಿದ್ದು ಹಾಲು, ವೈದ್ಯ ಕೊಟ್ಟದ್ದು ಹಾಲು ಎಂದು ಹೇಳಿ ಕಾಲೆಳೆದಿದ್ದರು.

  • ಮಿರರ್ ಮುಂದೆ ನಿಂತು ಹೈಟ್ ಚೆಕ್ ಮಾಡ್ಕೊಂಡ ಅರವಿಂದ್, ದಿವ್ಯಾ ಉರುಡುಗ!

    ಮಿರರ್ ಮುಂದೆ ನಿಂತು ಹೈಟ್ ಚೆಕ್ ಮಾಡ್ಕೊಂಡ ಅರವಿಂದ್, ದಿವ್ಯಾ ಉರುಡುಗ!

    ಬಿಗ್‍ಬಾಸ್ ಮನೆಯ ಕ್ಯೂಟೆಸ್ಟ್ ಪೇರ್ ಅಂದರೆ ಅರವಿಂದ್ ಹಾಗೂ ದಿವ್ಯಾ ಉರುಡುಗ ಎಂದೇ ಹೇಳಬಹುದು. ಬಿಗ್‍ಬಾಸ್ ನೀಡಿದ್ದ ಜೋಡಿ ಟಾಸ್ಕ್ ವೇಳೆ ಇಬ್ಬರು ಒಬ್ಬರಿಗೊಬ್ಬರು ಬಹಳ ಹಚ್ಚಿಕೊಂಡಿದ್ದು, ಇದೀಗ ಎಲ್ಲಿ ನೋಡಿದರೂ ಜೊತೆ ಜೊತೆಯಾಗಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

    ಇವರಿಬ್ಬರ ನಡುವಿನ ಹೊಂದಾಣಿಕೆ, ಹಾವಭಾವ ಎಲ್ಲವನ್ನು ಗಮನಿಸಿದ ಮನೆ ಮಂದಿ ಇಬ್ಬರು ಒಂದಾದರೆ ಜೋಡಿ ಚೆನ್ನಾಗಿರುತ್ತದೆ ಎಂದು ಕಾಮೆಂಟ್ ಕೂಡ ಮಾಡಿದ್ದಾರೆ. ಸದ್ಯ ನಿನ್ನೆ ಅರವಿಂದ್ ಹಾಗೂ ದಿವ್ಯಾ ಉರುಡುಗ ಬಾತ್‍ರೂಮ್ ಏರಿಯಾದ ಮಿರರ್ ಮುಂದೆ ನಿಂತು ಹೈಟ್ ಚೆಕ್ ಮಾಡಿಕೊಂಡಿದ್ದಾರೆ.

    ದಿವ್ಯಾ ಉರುಡುಗ ಅರವಿಂದ್ ಮುಂದೆ ನಿಂತು ನಾನು ನಿಮ್ಮ ಬಾಯಿಯಷ್ಟು ಎತ್ತರ ಬರುತ್ತೇನೆ ಎಂದಾಗ, ಅರವಿಂದ್ ಇಲ್ಲ ನೀನು ಇನ್ನೂ ಕುಳ್ಳಗೆ ಇದ್ದೀಯಾ, ನನ್ನ ಕಿವಿ ಕೆಳಗೆ ಬರುತ್ತೀಯಾ ಎಂದು ಹೇಳುತ್ತಾರೆ. ಆಗ ದಿವ್ಯಾ ಉರುಡುಗ ಇಲ್ಲ ನಾನು ನಿಮ್ಮ ಮೂಗಿನ ತನಕ ಬರುತ್ತೇನೆ ಎನ್ನುತ್ತಾ ಹೈಟ್ ನೋಡುತ್ತಾರೆ.

    ಬಳಿಕ ನಾನು ನಿಮ್ಮ ಮುಂದೆ ನಿಂತಾಗ ನೀವು ತಲೆ ಎತ್ತಿತ್ತೀರಾ ಎಂದು ಹೇಳುತ್ತಾ ಮತ್ತೆ ನಿಲ್ಲುತ್ತಾರೆ. ಇಲ್ಲ ಈಗಲೂ ನೀನು ನನ್ನ ಅಪ್ಪರ್ ಲಿಪ್‍ಗಿಂತ ಕೆಳಗೆ ಬರುತ್ತೀಯಾ ಎಂದು ಅರವಿಂದ್ ದಿವ್ಯಾ ಜೊತೆ ವಾದ ಮಾಡುವಾಗ, ಸ್ಲಿಪರ್ ನೋಡಿ ಅಯ್ಯೋ ಕಾಲಿನಲ್ಲಿ ಹಿಲ್ಸ್ ಸ್ಲಿಪ್ಪರ್ ಹಾಕಿಕೊಂಡಿದ್ದೀಯಾ ಅದು ತೆಗೆ ಎಂದು ಹೇಳುತ್ತಾರೆ. ಇದಕ್ಕೆ ದಿವ್ಯಾ ನೀವು ಶೂ ಹಾಕಿಕೊಂಡಿದ್ದೀರಾ ನೀವು ತೆಗೆಯಿರಿ ಎಂದು ಇಬ್ಬರು ಸ್ಲಿಪ್ಪರ್ ಬಿಚ್ಚಿ ಹೈಟ್ ಚೆಕ್ ಮಾಡುತ್ತಾರೆ.

    ಕೊನೆಗೆ ಸ್ಲಿಪ್ಪರ್ ಬಿಚ್ಚಿದಾಗ ದಿವ್ಯ ಉರುಡುಗ ಅರವಿಂದ್ ಅವರ ಬಾಯಿಯಿಂದ ಕೆಳಗೆ ಬರುತ್ತಾರೆ. ಆಗ ಅರವಿಂದ್ ಈಗ ನೀನು ನನ್ನ ಲೋವರ್ ಲಿಪ್‍ಗೆ ಬರುತ್ತೀಯಾ ಎಂದು ವಾದಿಸಿದರೆ, ದಿವ್ಯಾ ಇಲ್ಲ ನಾನು ಅದಕ್ಕಿಂತಲೂ ಮೇಲೆ ಬರುತ್ತೇನೆ ಎಂದು ವಾದಿಸುತ್ತಾರೆ. ಒಟ್ಟಾರೆ ಇವರಿಬ್ಬರ ಮುದ್ದಾದ ಕಿತ್ತಾಟ ಮುಗಿಯುವುದು ಇಲ್ಲ ಎಂಬಂತೆ ಮುಂದುವರಿಸುತ್ತಾರೆ.

  • ಅರವಿಂದ್ ಕಾಲಿಗೆ ಕ್ರೀಮ್ ಹಚ್ಚಿದ ದಿವ್ಯಾ ಉರುಡುಗ!

    ಅರವಿಂದ್ ಕಾಲಿಗೆ ಕ್ರೀಮ್ ಹಚ್ಚಿದ ದಿವ್ಯಾ ಉರುಡುಗ!

    ಬಿಗ್‍ಬಾಸ್ ಮನೆಯಲ್ಲಿ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ಗೆ  ದಿವ್ಯಾ ಸುರೇಶ್, ಅರವಿಂದ್ ಹಾಗೂ ನಿಧಿ ಸುಬ್ಬಯ್ಯ ಆಯ್ಕೆಯಾಗಿದ್ದರು. ಅದರಂತೆ ಬಿಗ್‍ಬಾಸ್ ನಿನ್ನೆ ಹಗ್ಗದ ಸಹಾಯದಿಂದ ಬಕೆಟ್‍ನನ್ನು ಹಿಡಿದುಕೊಳ್ಳಬೇಕು. ಈ ಟಾಸ್ಕ್‌ನಲ್ಲಿ ಯಾರು ಹೆಚ್ಚು ಸಮಯ ಬಕೆಟ್‍ನನ್ನು ಹಿಡಿದುಕೊಂಡಿರುತ್ತಾರೋ ಅವರು ಈ ವಾರದ ಕ್ಯಾಪ್ಟನ್ ಆಗುತ್ತಾರೆ ಎಂದು ಸೂಚಿಸಿರುತ್ತಾರೆ.

    ಅದರ ಅನುಸಾರ ಟಾಸ್ಕ್ ವೇಳೆ ಮೊದಲು ನಿಧಿ ಸುಬ್ಬಯ್ಯ ಬಕೆಟ್‍ನನ್ನು ಬಿಟ್ಟು ಔಟ್ ಆಗುತ್ತಾರೆ. ನಂತರ ಅರವಿಂದ್ ಹಾಗೂ ದಿವ್ಯಾ ಸುರೇಶ್ ಟಾಸ್ಕ್ ಮುಂದುವರಿಸುತ್ತಾರೆ. ಈ ವೇಳೆ ಸೊಳ್ಳೆಗಳಿಂದ ದಿವ್ಯಾ ಸುರೇಶ್ ಹಾಗೂ ಅರವಿಂದ್‍ಗೆ ಕಿರಿಕಿರಿ ಆಗುತ್ತಿರುತ್ತದೆ. ಅದನ್ನು ಕಂಡು ದಿವ್ಯಾ ಉರುಡುಗ ಕ್ರೀಮ್ ತಂದು ದಿವ್ಯಾ ಸುರೇಶ್‍ಗೆ ಹಚ್ಚಲಾ ಎಂದು ಕೇಳುತ್ತಾರೆ. ಆಗ ದಿವ್ಯಾ ಸುರೇಶ್ ಬೇಡ ಎನ್ನುತ್ತಾರೆ. ಬಳಿಕ ಅರವಿಂದ್ ರವರಿಗೆ ಹಚ್ಚಲಾ ಎಂದಾಗ ಅರವಿಂದ್ ಹೌದು ಎಂದಾಗ ದಿವ್ಯಾ ಉರುಡುಗ ಅರವಿಂದ್ ಕಾಲಿಗೆ ಕ್ರೀಮ್‍ನನ್ನು ಹಚ್ಚುತ್ತಾರೆ.

    ಇದನ್ನು ಕಂಡು ದಿವ್ಯಾ ಸುರೇಶ್ ನೈಸ್ ಕಮೆಂಟ್ ಹಾಕುತ್ತಾ ಜೋರಾಗಿ ನಗುತ್ತಾರೆ. ಆಗ ಮನೆ ಮಂದಿ ಕೂಡ ದಿವ್ಯಾ ಅರವಿಂದ್ ನೋಡಿ ನಗುತ್ತಾರೆ. ಈ ವೇಳೆ ದಿವ್ಯಾ ಸುರೇಶ್ ಆದಾದ ನಂತರ ನನನಗೆ ಲಿಪ್‍ಸ್ಟಿಕ್ ಹಾಕುತ್ತಿಯಾ ಎಂದು ಕೇಳುತ್ತಾರೆ. ಖಂಡಿತ ಹಚ್ಚುತ್ತೇನೆ ಎಂದು ಟಾಸ್ಕ್ ಮಧ್ಯೆ ಲಿಪ್ ಸ್ಟಿಕ್ ಹಚ್ಚುತ್ತಾರೆ. ಆಗ ಮನೆ ಮಂದಿಯೆಲ್ಲಾ ಓ… ಎಂದು ಜೋರಾಗಿ ಕಿರುಚುತ್ತಾ ನಗುತ್ತಾರೆ.

  • ದಿವ್ಯಾಗೆ ಅರವಿಂದ್ ಬರೆದ  ಲೆಟರ್‌ಗಳಲ್ಲೇನಿದೆ ಗೊತ್ತಾ?

    ದಿವ್ಯಾಗೆ ಅರವಿಂದ್ ಬರೆದ ಲೆಟರ್‌ಗಳಲ್ಲೇನಿದೆ ಗೊತ್ತಾ?

    ಬಿಗ್‍ಬಾಸ್ ಬಾಯ್ಸ್ ಹಾಸ್ಟೆಲ್‍ನ ಹುಡುಗರು, ಗರ್ಲ್ ಹಾಸ್ಟೆಲ್ ಹುಡುಗಿಯರಿಗೆ ಪತ್ರಗಳನ್ನು ಬರೆದು ನೀಡಬೇಕು ಹಾಗೂ ಹುಡುಗಿಯರು ಅದನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಟಾಸ್ಕ್ ನೀಡಿದ್ದರು. ಅದರಂತೆ ಬಿಗ್‍ಬಾಸ್ ಮನೆಯ ಎಲ್ಲ ಬಾಯ್ಸ್ ಕದ್ದುಮುಚ್ಚಿ ಹುಡುಗಿಯರಿಗೆಲ್ಲಾ ಲೆಟರ್ ಪಾಸ್ ಮಾಡುತ್ತಿದ್ದಾರೆ. ಆದರೆ ಈ ಎಲ್ಲದರ ಮಧ್ಯೆ ವಿಶೇಷವೆನಪ್ಪಾ ಅಂದರೆ ಅರವಿಂದ್ ದಿವ್ಯಾ ಉರುಡುಗಗೆ ಮಾತ್ರ ತಮ್ಮ ಎಲ್ಲ ಲೆಟರ್‌ಗಳನ್ನು ಬರೆದಿದ್ದಾರೆ.

    ನಿನ್ನೆ ಅರವಿಂದ್ ಲೆಟರ್ ಬರೆದು, ರಂಗೋಲಿ ಹಾಕುತ್ತಿದ್ದ ದಿವ್ಯಾ ಉರುಡುಗಗೆ ನೀಡುತ್ತಾರೆ. ಬಳಿಕ ಅದನ್ನು ಕ್ಯಾಮೆರಾ ಮುಂದೆ ದಿವ್ಯಾ, ಪ್ರೀತಿಯ ಕೆ, ಮೊದಲನೇ ದಿನ ನನ್ನ ನಿನ್ನ ಚಿಕ್ಕ ಇಂಟ್ರೋಡಕ್ಷನ್‍ನಲ್ಲಿ ನೀನು ಏನೋ ಹೇಳಲು ಬಂದು, ಹೇಳದೇ ಹೋದ ರೀತಿ, ಈಗ ನಾವು ಇರುವ ಕ್ಲೋಸ್‍ನೆಸ್ ಗೆ ತುಂಬಾನೇ ವ್ಯತ್ಯಾಸ ಇದೆ. ಈ ಮನೆಯಲ್ಲಿ ನನ್ನ ಮೊದಲನೆಯ ಸಪೋರ್ಟರ್, ಶುಭ ಹಾರೈಸುವ ಒಳ್ಳೆಯ ಗೆಳತಿ ನೀನು ಪ್ರೀತಿ ಇರಲಿ ಅರವಿಂದ್ ಕೆಪಿ ಎಂದು ಮೊದಲನೇ ಲೆಟರ್ ಓದುತ್ತಾರೆ.

    ಬಳಿಕ ಮತ್ತೊಂದು ಲೆಟರ್‌ನಲ್ಲಿ ಪ್ರೀತಿಯ ಕೆ, ಈ ಬಿಗ್‍ಬಾಸ್ ಮನೆಯ ಪಯಣ ನಿನ್ನ ಗೆಳೆತನದಿಂದ ಇನ್ನಷ್ಟು ಮಜಾ ಹಾಗೂ ಸಂತೋಷಕರವಾಗಿದೆ. ನಿನ್ನ ಪ್ರೆಸೆನ್ಸ್ ಇರುವುದರಿಂದ  ಟಾಸ್ಕ್‌ಗಳಲ್ಲಿ, ದೈನಂದಿನ ಚಟುವಟಿಕೆಗಳಲ್ಲಿ ಲವಲವಿಕೆಯಿಂದ ಸಾಗುತ್ತಿದೆ. ನಿನ್ನ ಎಲ್ಲ ವಿಚಾರಗಳು ನನಗೆ ಇಷ್ಟ, ನೀನು ನಗುವಾಗ ತುಂಬಾನೇ ಇಷ್ಟ. ಪ್ರೀತಿ ಇರಲಿ ಅರವಿಂದ್ ಕೆ.ಪಿ. ಎಂದು ಬರೆದಿದ್ದಾರೆ. ಇದನ್ನು ಓದಿದ ದಿವ್ಯಾ ಸೋ ಕ್ಯೂಟ್ ಎಂದು ಪ್ರತಿಕ್ರಿಯಿಸುತ್ತಾರೆ.

    ಇದಾದ ನಂತರ ಗಾರ್ಡನ್ ಏರಿಯಾ ಕ್ಯಾಮೆರಾ ಬಳಿ ದಿವ್ಯಾ ಅರವಿಂದ್ ಬರೆದ ಇನ್ನೊಂದು ಲೆಟರ್ ಓದುತ್ತಾರೆ. ಪ್ರೀತಿಯ ಕೆ ನನ್ನ ಲೋವೆಸ್ಟ್ ಪಾಯಿಂಟ್‍ನಲ್ಲಿ ನನ್ನೊಂದಿಗೆ ನಿಂತು ನಡೆಸುವ ಸಪೋರ್ಟ್ ತುಂಬಾನೇ ಶ್ರೇಷ್ಠವಾದದ್ದು, ಬೇರೆ ಯಾವ ಸಂದರ್ಭದಲ್ಲಿಯೂ ಅಷ್ಟು ಬೇಜಾರು ಮಾಡಿಕೊಂಡಿಲ್ಲ. ನನ್ನ ಫ್ರೆಂಡ್ಸ್ ನನ್ನ ನಿರ್ಣಯವನ್ನು ತಪ್ಪು ಎಂದು ಭಾವಿಸಿದ್ದರು. ಆಗ ನನಗೆ ನೀನು, ನಿನಗೆ ನಾನು ಸಮಾಧಾನ ಹೇಳಿಕೊಂಡು ಕಳೆದಿರುವ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಪ್ರೀತಿ ಇರಲಿ ಅರವಿಂದ್ ಕೆ.ಪಿ ಎಂದು ಓದುತ್ತಾರೆ. ಈ ವೇಳೆ ದಿವ್ಯಾ ಪತ್ರ ಓದುವಾಗ ಮನೆಯ ಇತರ ಸದಸ್ಯರು ಸಹಾಯ ಮಾಡುವ ಮೂಲಕ ಸಾಥ್ ನೀಡಿದ್ದಾರೆ.

    ಮಧ್ಯರಾತ್ರಿ ಲಿವಿಂಗ್ ಏರಿಯಾದಲ್ಲಿ ಕ್ಯಾಮೆರಾ ಮುಂದೆ ಅರವಿಂದ್ ಲೆಟರ್ ಬರೆದುಕೊಡುತ್ತಾರೆ. ಈ ವೇಳೆ ದಿವ್ಯಾ, ಪ್ರೀತಿಯ ಕೆ ನೀನು ನಗುತ್ತೀಯಾ ಹೃದಯದಿಂದ ನನಗೆ ಕೇಳುತ್ತದೆ. ಬಹಳ ದೂರದಿಂದ ನಿನ್ನ ಕಣ್ಣುಗಳು ಹೇಳುತ್ತಿದೆ ಮಾತೊಂದ.. ಬೇಗ ಓದು ಗಾರ್ಡನ್ ಏರಿಯಾಗೆ ವಾರ್ಡನ್ ಬರುವ ಮುನ್ನ. ಪ್ರೀತಿ ಇರಲಿ ಅರವಿಂದ್ ಕೆ ಪಿ ಎಂದು ಹಾಸ್ಯವಾಗಿರುವ ಲೆಟರ್ ಓದಿ ಜೋರಾಗಿ ನಗುತ್ತಾರೆ.

    ಒಟ್ಟಾರೆ ಅರವಿಂದ್ ದಿವ್ಯಾಗೆ ಬರೆದಿರುವ ಇಂಟ್ರೆಸ್ಟಿಂಗ್ ಲೆಟರ್‌ನಲ್ಲಿ ಅವರಿಬ್ಬರ ಇರುವ ಪ್ರೀತಿ ಭಾವನೆಗಳು ಎದ್ದು ಕಾಣಿಸುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು.

  • ಅರವಿಂದ್ ಪ್ರಶಾಂತ್ ಮಧ್ಯೆ ಮತ್ತೆ ಹೊತ್ತಿತು ತುಪ್ಪದ ಕಿಡಿ!

    ಅರವಿಂದ್ ಪ್ರಶಾಂತ್ ಮಧ್ಯೆ ಮತ್ತೆ ಹೊತ್ತಿತು ತುಪ್ಪದ ಕಿಡಿ!

    ಬಿಗ್‍ಬಾಸ್ ಮನೆಯಲ್ಲಿ ನಿನ್ನೆ ಯುಗಾದಿ ಹಬ್ಬದ ಸಡಗರ ಸಂಭ್ರಮ ಮನೆಮಾಡಿತ್ತು. ಹಬ್ಬವನ್ನು ವಿಜೃಂಭಣೆಯಾಗಿ ಆಚರಿಸಿದ ಮನೆ ಮಂದಿ ಎಲ್ಲರೂ ಒಟ್ಟಾಗಿ ಕುಳಿತು ಹಬ್ಬದೂಟ ಸವಿದರು. ಈ ವೇಳೆ ಅರವಿಂದ್ ಹಾಗೂ ಪ್ರಶಾಂತ್ ಮಧ್ಯೆ ತುಪ್ಪದ ವಿಚಾರಕ್ಕೆ ಮತ್ತೆ ವಾಗ್ವಾದ ನಡೆದಿದೆ.

    ಊಟ ಮಾಡುವ ವೇಳೆ ವೈಷ್ಣವಿ ಎಲ್ಲರಿಗೂ ಒಂದು ಕಡೆಯಿಂದ ತುಪ್ಪ ಬಡಿಸಿಕೊಂಡು ಬರುತ್ತಿರುತ್ತಾರೆ. ಈ ವೇಳೆ ಅರವಿಂದ್‍ಗೆ ಎರಡು ಬಾರಿ ತುಪ್ಪ ಬಡಿಸಿದ್ಯಾ ಎಂದು ಪ್ರಶಾಂತ್ ಹೇಳುತ್ತಾರೆ.

    ಆಗ ಅರವಿಂದ್ ನೀವು ನನ್ನ ತಟ್ಟೆ ಯಾಕೆ ನೋಡುತ್ತೀರಾ? ನೀವು ಊಟ ಮಾಡಿ, ನಿಮಗೂ ಬೇಕಾದರೆ ಕೇಳಿ ಹಾಕಿಸಿಕೊಳ್ಳಿ. ನನ್ನ ಸುದ್ದಿಗೆ ಯಾಕೆ ಬರುತ್ತೀರಾ, ಅರವಿಂದ್‍ಗೆ ಎರಡು ಬಾರಿ ಹಾಕಿದ್ಯಾ, ನಾಲ್ಕು ಬಾರಿ ಹಾಕಿದ್ಯಾ ಅಂತ ನೀವು ಹಾಕಿಸಿಕೊಳ್ಳಿ ಪ್ರಶಾಂತ್‍ರವರೇ ಎನ್ನುತ್ತಾರೆ. ಈ ವೇಳೆ ಮನೆಯ ಸದಸ್ಯರು ಪರವಾಗಿಲ್ಲ ಇಂದು ಜಗಳ ಬೇಡ ಎಂದು ಸಮಾಧಾನ ಪಡಿಸುತ್ತಾರೆ. ಆಗ ಪ್ರಶಾಂತ್‍ರವರು ಯಾವಾಗಲೂ ನನ್ನ ತಂಟೆಗೆ ಬರುತ್ತಾರೆ. ಯುಗಾದಿಗಾದರೂ ಬಿಟ್ಟು ಬಿಡಿ ಎಂದು ಕೆಂಡಾಕಾರಿದ್ದಾರೆ.

    ನಂತರ ಈ ಬಗ್ಗೆ ಬಾತ್ ರೂಮ್ ಏರಿಯಾದಲ್ಲಿ ಚಕ್ರವರ್ತಿ ಆ ರೀತಿ ಒಪನ್ ಕಮೆಂಟ್ ಮಾಡಬಾರದು ಎಂದು ಅರವಿಂದ್‍ಗೆ ಹೇಳಿದಾಗ, ಅವರೇ ಮಾಡುತ್ತಾರೆ. ನಾವು ಅವರಷ್ಟು ಮಾಡುವುದಿಲ್ಲ. ಅವರು ಮಾಡುವಾಗ ನಾವು ಮುಚ್ಚಿಕೊಂಡು ಇರುವುದಿಲ್ವಾ ಎನ್ನುತ್ತಾರೆ. ಆಗ ಚಕ್ರವರ್ತಿ ನಾನು ಹೇಳುವುದೆಂದರೆ ಎಲ್ಲರ ಎದುರಿಗೆ ಒಪನ್ ಕಮೆಂಟ್ ಮಾಡುವುದು ಸರಿಯಲ್ಲ. ನಾನು ಊಟ ತಿಂಡಿ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸುವುದಿಲ್ಲ. ಬಂದರೆ ಆ ವಿಚಾರವನ್ನು ಖಾಸಗಿಯಾಗಿ ಇಡುತ್ತೇನೆ ಎಂದು ಹೇಳುತ್ತಾರೆ.

  • ಕಳೆದು ಹೋಗಿದ್ದ ರಿಂಗ್ ಸಿಕ್ಕಿದ್ದು ಹೇಗೆ ಗೊತ್ತಾ?

    ಕಳೆದು ಹೋಗಿದ್ದ ರಿಂಗ್ ಸಿಕ್ಕಿದ್ದು ಹೇಗೆ ಗೊತ್ತಾ?

    ಬಿಗ್‍ಬಾಸ್ ಮನೆಯ ಪ್ರಣಯದ ಪಕ್ಷಿಗಳಾಗಿದ್ದ ಅರವಿಂದ್ ಮತ್ತು ದಿವ್ಯಾ ಬಿಗ್‍ಬಾಸ್ ಮನೆಯಲ್ಲಿ ಸಖತ್ ಮುದ್ದಾಗಿ ಕಾಣಿಸಿಕೊಳ್ಳುತ್ತಾರೆ. ನಿನ್ನೆ ಬಿಗ್‍ಬಾಸ್ ನೀಡಿರುವ ಟಾಸ್ಕ್ ಅನ್ವಯವಾಗಿ ಪ್ರೀತಿ ಪಾತ್ರರಿಗೆ ಉಡುಗೊರೆಯನ್ನು ನಿಡಬೇಕಾಗಿತ್ತು. ಆಗ ದಿವ್ಯಾ ಅರವಿಂದ್ ಅವರಿಗೆ ತಮ್ಮ ತಂದೆ ಕೊಟ್ಟ್ ಉಂಗುರವನ್ನು ನೀಡಿದ್ದರು.

    ನಾನು ತುಂಬಾ ಮಾತನಾಡಲ್ಲ. ಮಾತಿಲ್ಲದೇ ಅವಳಿಗೆ ಅರ್ಥ ಮಾಡಿಕೊಳ್ಳುತ್ತಾಳೆ ಎಂದು ಪ್ರೀತಿಯಿಂದ ಅರವಿಂದ್ ಅವರು ದಿವ್ಯಾಗೆ ಬಲೂನ್ ಕೊಟ್ಟಿದ್ದಾರೆ. ಅರವಿಂದ್ ಜೀವ ಪರ್ಯಂತ ನನ್ನ ಜೊತೆಗೆ ಇರಬೇಕು. ನಾನು ನನ್ನ ಅಪ್ಪಾಜಿ ಕೊಟ್ಟಿರುವ ರಿಂಗ್ ಅನ್ನು ಅರವಿಂದ್‍ಗೆ ಕೊಡುತ್ತೇನೆ ಎಂದು ದಿವ್ಯಾ ಹೇಳುತ್ತಿರುವಾಗ ಅರವಿಂದ್ ಕಣ್ಣೀರು ಹಾಕಿದ್ದಾರೆ. ದಿವ್ಯಾ ತನ್ನ ಕೈಯಲ್ಲಿರುವ ಉಂಗುರವನ್ನು ತೆಗೆದು ಅರವಿಂದ್ ಅವರಿಗೆ ಹಾಕಿ ಪ್ರೀತಿಯಿಂದ ಇಬ್ಬರು ತಬ್ಬಿಕೊಂಡಿದ್ದಾರೆ.

    ಪ್ರೀತಿಯಿಂದ ದಿವ್ಯಾ ಕೊಟ್ಟ ಉಂಗುರವನ್ನು ಅರವಿಂದ್ ಖುಷಿಯಿಂದ ಹಾಕ್ಕೋತಾರೆ. ಸ್ವಲ್ಪ ಹೊತ್ತಾದ ಮೇಲೆ ನೋಡಿದರೆ ಕೈಬೆರಳಲ್ಲಿರೋ ಉಂಗುರ ಕಾಣ್ತಾ ಇಲ್ಲ. ಅರವಿಂದ್ ಇಡೀ ಮನೆ ಹುಡುಕಾಡಿದ್ದಾರೆ. ಸಿಕ್ಕಿದ್ದನ್ನೆಲ್ಲಾ ಜಾಲಾಡ್ತಾರೆ. ಇದು ಗೊತ್ತಾಗಿ ಮನೆಯವರೆಲ್ಲಾ ರಿಂಗ್ ಹುಡುಕುವುದಕ್ಕೆ ಅರವಿಂದ್‍ಗೆ ಸಹಾಯ ಮಾಡ್ತಾರೆ. ಪ್ರತಿಯೊಬ್ಬರು ಉಂಗುರವನ್ನು ಹುಡುಕಿದ್ದಾರೆ ಯಾರಿಗೂ ಸಿಕ್ಕಿಲ್ಲ.

    ಅಲ್ಲೇ ಕೂತಿರೋ ದಿವ್ಯಾಗೆ ಏನಾಗ್ತಿದೆ ಅಂತ ಯಾರೂ ಹೇಳ್ತಿಲ್ಲ. ಹುಡುಕ್ತಾ ಇರುವಷ್ಟೂ ಹೊತ್ತು ಅರವಿಂದ್ ಕಣ್ಣು ಒದ್ದೆಯಾಗಿದೆ. ರಿಂಗ್ ಹುಡುಕಿ ಸಿಗದೆ ಇದ್ದಾಗ. ನಾನು ನೀನು ಕೊಟ್ಟಿರುವ ಉಂಗುರವನ್ನು ಕೆಳೆದುಕೊಂಡಿದ್ದೇನೆ. ಆದರೆ ಹುಡುಕುತ್ತೇನೆ ಎಂದು ದಿವ್ಯಾಗೆ ಹೇಳುವಾಗ ದಿವ್ಯಾ ಮಾತ್ರ ಏನು ಮಾತನಾಡದೆ ಸುಮ್ಮನೇ ಕುಳಿತಿದ್ದಾರೆ. ಅರವಿಂದ್ ಅಳುವುದನ್ನು ಕಂಡ ದಿವ್ಯಾ ಬೇಡಾ ನೀವು ಅಳಬೇಡಿ ನನಗೆ ಬೇಜಾರ್ ಇಲ್ಲ ಎಂದು ಹೇಳಿ ಸಮಾಧಾನ ಮಾಡಿದ್ದಾರೆ. ಅರವಿಂದ್ ಕಣ್ಣಂಚಲಿ ನೀರು ತುಂಬಿಕೊಂಡಿತ್ತು.

    ಅರವಿಂದ್ ಇಡೀ ಮನೆಯಲ್ಲಿ ಜಾಲಾಡಿದ್ದಾರೆ. ಮನೆಯ ಸ್ಪರ್ಧಿಗಳು ಒಂದು ಟಾಸ್ಕ್ ನಂತೆ ಎಲ್ಲರೂ ಒಟ್ಟಾಗೆ ಸೇರಿ ಹುಡುಕಿದ್ದಾರೆ. ಯಾರಿಗೂ ರಿಂಗ್ ಸಿಗದೆ ಇದ್ದಾಗ ಅರವಿಂದ್ ಕ್ಯಾಮೆರಾ ಮುಂದೆ ನಿಂತು ಬಿಗ್‍ಬಾಸ್ ರಿಂಗ್ ಕಾಣುತ್ತಿಲ್ಲ. ಕ್ಯಾಮೆರಾ ಕಣ್ಣಿಗೆ ಏನಾದರೂ ಬಿದ್ದಿದ್ದರೆ ಹೇಳಿ ಎಂದು ಮನವಿ ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ ಅರವಿಂದ್ ಓಡಿ ಹೋಗಿ ಮತ್ತೆ ದಿವ್ಯಾ ಬಳಿ ಬಂದಿದ್ದಾರೆ. ಆಗ ಕಳೆದು ಹೋಗಿದ್ದ ರಿಂಗ್ ಸಿಕ್ಕಿರುವ ವಿಚಾರವನ್ನು ಹೇಳಿದ್ದಾರೆ.

    ನಾನು ಕ್ರೀಮ್ ಹಾಕಿಕೊಳ್ಳುತ್ತಿರುವಾಗ ನನ್ನ ಒಳ ಉಡುಪಿನಲ್ಲಿ ಸಿಕ್ಕಿಕೊಂಡಿತ್ತು. ಇದೀಗ ಸಿಕ್ಕಿದೆ ಎಂದು ಹೇಳುತ್ತಾ ಇಬ್ಬರು ತಬ್ಬಿಕೊಂಡಿದ್ದಾರೆ. ಇದನ್ನು ನಿನ್ನ ಹತ್ರ ಇಟ್ಟ್ಕೊಂಡಿರು ನಾನು ಮತ್ತೆ ನಿನ್ನಿಂದ ತಗೊಳ್ಳತ್ತೇನೆ ಎಂದು ಅರವಿಂದ್ ದಿವ್ಯಾಗೆ ಹೇಳಿದ್ದಾರೆ.

    ದಿವ್ಯಾ, ಅರವಿಂದ್ ಜೋಡಿ ಬಿಗ್‍ಬಾಸ್ ನೀಡಿದ ಜೋಡಿ ಟಾಸ್ಕ್ ನಿಂದ ಜೊತೆಯಾಗಿರುವ ಈ ಜೋಡಿ ಬಿಟ್ಟು ಹೋಗುವಂತೆ ಕಾಣುತ್ತಿಲ್ಲ. ಪ್ರತಿ ನಿತ್ಯ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ. ಇದೀಗ ಇಬ್ಬರು ಕಳೆದು ಹೋಗಿದ್ದ ರಿಂಗ್ ಸಿಕ್ಕಿರುವ ಖುಷಿಯಲ್ಲಿದ್ದಾರೆ.

  • ದಿವ್ಯಾ-ಅರವಿಂದ್ ಲವ್ ಸ್ಟೋರಿಗೆ ಶಮಂತ್ ಬಳಿಯಲ್ಲಿದೆ ಸಾಕ್ಷಿ!

    ದಿವ್ಯಾ-ಅರವಿಂದ್ ಲವ್ ಸ್ಟೋರಿಗೆ ಶಮಂತ್ ಬಳಿಯಲ್ಲಿದೆ ಸಾಕ್ಷಿ!

    ಬಿಗ್‍ಬಾಸ್ ಮನೆಯಲ್ಲಿ ಅರವಿಂದ್, ದಿವ್ಯಾ ಲವ್ ಸ್ಟೋರಿ ನಡೆಯುತ್ತಿದೆ ಎಂಬುವುದಕ್ಕೆ ಶಮಂತ್ ಸಾಕ್ಷಿ ಸಮೇತವಾಗಿ ಕಿಚ್ಚ ಸುದೀಪ್ ಎದುರಿಗೆ ಸಾಬೀತು ಪಡಿಸಿದ್ದಾರೆ.

    ಪ್ರತಿವಾರದಂತೆ ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಸಂಚಿಕೆಯಲ್ಲಿ ನಿನ್ನೆ ಯೆಸ್ ಆರ್ ನೋ ರೌಂಡ್ಸ್ ನಡೆಯಿತು ಈ ವೇಳೆ ಕಿಚ್ಚ ಸುದೀಪ್ ದಿವ್ಯಾ ಯು ಅವರಿಗೆ ಇತ್ತೀಚೆಗೆ ರಾತ್ರಿ ಹೊತ್ತು ನಿದ್ದೆಯೇ ಬರುತ್ತಿಲ್ಲ ಎಂದು ಪ್ರಶ್ನೆ ಕೇಳುತ್ತಾರೆ.

    ಆಗ ಮನೆಮಂದಿಯೆಲ್ಲಾ ಯೆಸ್ ಎಂದು ಬೋರ್ಡ್ ತೋರಿಸುತ್ತಾರೆ. ಈ ವೇಳೆ ಶಮಂತ್ ಅರವಿಂದ್ ಮಲಗುವವರೆಗೂ ದಿವ್ಯಾ ಮಲಗುವುದಿಲ್ಲ. ಎಂಬುದಕ್ಕೆ ನನ್ನ ಕತ್ತು ಹಿಡಿದುಕೊಂಡಿರುವುದೇ ಸಾಕ್ಷಿ. ನಿನ್ನೆ ಸರಿಯಾಗಿರುವ ಬಟ್ಟೆಗಳನ್ನು ಮತ್ತೆ ಮತ್ತೆ ಮಡಚಿಡುತ್ತಿದ್ದರು. ಅರವಿಂದ್ ಅವರು ಎಲ್ಲಿಯವರೆಗೂ ಮಲಗಲ್ಲವೋ ಅಲ್ಲಿಯವರೆಗೂ ಬಟ್ಟೆ ಮಡಚುತ್ತಲೇ ಇರುತ್ತಿದ್ದರು. ನಾನು ನೋಡುವವರೆಗೂ ನೋಡಿದೆ. ಕೊನೆಗೆ ಕತ್ತು ನೋವು ಬಂತು. ಹಾಗಾಗಿ ಈ ಕಡೆ ತಿರುಗಿಕೊಂಡು ಮಲಗಿಕೊಂಡೆ. ಆದರೆ ಬೆಳಗ್ಗೆ ನೋಡಿದರೆ ಕತ್ತು ಹಿಡಿದುಕೊಂಡಿದೆ ಎಂದು ಹೇಳಿದ್ದಾರೆ.

    ಇನ್ನೂ ಈ ವೇಳೆ ನಿಧಿ ಸುಬ್ಬಯ್ಯ, ಅವನು ನಿದ್ದೆ ಮಾಡಿಕೊಂಡು ಗೊರಕೆ ಹೊಡೆಯುವಾಗ, ದಿವ್ಯಾ ಕೈನಲ್ಲಿ ಹಾರ್ಟ್ ಚಿಹ್ನೆ ಮಾಡಿ ತೋರಿಸುತ್ತಿರುತ್ತಾರೆ. ಆದಾದ ಮೇಲೆ ಬೆಳಗ್ಗೆ ಎದ್ದಿದ ಕೂಡಲೇ ಇಬ್ಬರು ಎಂದು ಒಬ್ಬರಿಗೊಬ್ಬರು ತಬ್ಬಿಕೊಳ್ಳುತ್ತಾರೆ. ಆಗ ದಿವ್ಯಾ ಅರವಿಂದ್‍ನನ್ನು ಫುಲ್ ತಬ್ಬಿಕೊಂಡಿದ್ದರೆ, ಅರವಿಂದ್ ಒಂದು ಕೈನಲ್ಲಿ ತಬ್ಬಿಕೊಂಡು ಮತ್ತೊಂದು ಕೈನಲ್ಲಿ ಮೂಗಿಗೆ ಕೈ ಹಾಕಿಕೊಂಡು ಗೊಣ್ಣೆ ತೆಗೆಯುತ್ತಿರುತ್ತಾನೆ ಎಂದು ಹೇಳುತ್ತಾರೆ.

    ಒಟ್ಟಾರೆ ನಿಧಿ ಶಮಂತ್ ಹಾಗೂ ನಿಧಿ ಸುಬ್ಬಯ್ಯ ಮಾತು ಕೇಳಿ ಮನೆ ಮಂದಿ ಜೊತೆ ಕಿಚ್ಚ ಕೂಡ ಜೋರಾಗಿ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾರೆ.

  • ಬಿಗ್‍ಬಾಸ್ ನೀಡಿದ ಟಾಸ್ಕ್ ನಿಂದ್ಲೇ ಹತ್ತಿರವಾಗ್ತಿದ್ದಾರಾ ಅರವಿಂದ್, ದಿವ್ಯಾ?

    ಬಿಗ್‍ಬಾಸ್ ನೀಡಿದ ಟಾಸ್ಕ್ ನಿಂದ್ಲೇ ಹತ್ತಿರವಾಗ್ತಿದ್ದಾರಾ ಅರವಿಂದ್, ದಿವ್ಯಾ?

    – ದಿವ್ಯಾಗೆ ಊಟ ಮಾಡಿಸಿದ ಅರವಿಂದ್

    ಬಿಗ್‍ಬಾಸ್ ನೀಡಿದ ಜೋಡಿ ಟಾಸ್ಕ್ ಮೂಲಕ ಒಂದಾಗಿದ್ದ ಅರವಿಂದ್ ಹಾಗೂ ದಿವ್ಯಾ ಉರುಡುಗ, ಇದೀಗ ಮತ್ತೆ ಬಿಗ್‍ಬಾಸ್ ನೀಡಿದ ಟಾಸ್ಕ್ ಮೂಲಕವೇ ಇನ್ನಷ್ಟು ಹತ್ತಿರವಾಗ್ತಿದ್ದಾರೆ ಅನ್ನೋ ಗುಮಾನಿ ಎದ್ದಿದೆ.

    ನಿನ್ನೆ ಬಿಗ್‍ಬಾಸ್ ಶುಭಾ ಪೂಂಜಾರವರಿಗೆ ಕನ್ಫೆಷನ್ ರೂಮ್‍ಗೆ ಕರೆದು ಒಂದು ಪ್ಲೇಟ್‍ನಲ್ಲಿ ಚಿಕನ್ ನೀಡಿ, ಮುಂದಿನ ಆದೇಶದವರೆಗೂ ಮನೆಯ ಸದಸ್ಯರು ಚಿಕನ್‍ನನ್ನು ಒಬ್ಬೊಬ್ಬರು ಬಜರ್ ಆದ ಬಳಿಕ ವರ್ಗಾಹಿಸಿಕೊಂಡು ಕೆಳಗೆ ಇಡದಂತೆ ನೋಡಿಕೊಳ್ಳಬೇಕು. ಹೀಗೆ ಜಾಗೃತರಾಗಿ ನೋಡಿಕೊಂಡರೆ ಲಕ್ಷುರಿ ಬಜೆಟ್‍ನಲ್ಲಿ ಕಳೆದುಕೊಂಡಿರುವ ಚಿಕನ್‍ನನ್ನು ಹಿಂಪಡೆಯಬಹುದು ಎಂದು ತಿಳಿಸಿದ್ದರು.

    ಅದರಂತೆ ಮೊದಲಿಗೆ ಶುಭಾ ಚಿಕನ್‍ನನ್ನು ಕೈಯಲ್ಲಿ ಇಟ್ಟುಕೊಂಡು ಜೋಪಾನವಾಗಿ ನೋಡಿಕೊಂಡರು. ಬಳಿಕ ಬಜರ್ ಆದನಂತರ ದಿವ್ಯಾ ಉರುಡಗೆ ಚಿಕನ್ ಪ್ಲೇಟ್‍ನನ್ನು ಪಾಸ್ ಮಾಡಿದರು. ಚಿಕನ್ ನೋಡಿ ದಿವ್ಯಾ ಉರುಡಗ ಖುಷಿಖುಷಿಯಿಂದ ಸ್ವೀಕರಿಸಿ ಅರವಿಂದ್ ಪಕ್ಕದಲ್ಲಿ ಕುಳಿತುಕೊಳ್ಳಲು ಬರುತ್ತಾರೆ. ಆಗ ದಿವ್ಯಾ ಕುಳಿತುಕೊಳ್ಳಲು ಮೈಕ್ ಅಡ್ಡ ಬರುತ್ತದೆ ಎಂದು ಅರವಿಂದ್ ದಿವ್ಯಾ ಮೈಕ್‍ನನ್ನು ಪಕ್ಕಕ್ಕೆ ಸರಿಸುತ್ತಾರೆ.

    ನಂತರ ದಿವ್ಯಾ ನನ್ನ ಕೆನ್ನೆ ಮೇಲೆ ಸೊಳ್ಳೆ ಕಚ್ಚುತ್ತಿರುವುದಾಗಿ ತಿಳಿಸಿದಾಗ, ಅರವಿಂದ್ ಕೂಡಲೇ ಎಲ್ಲಿ ಎಂದು ಕೆನ್ನೆ, ಹಣೆ ಹಾಗೂ ಗಲ್ಲದ ಮೇಲೆ ಕೈನಲ್ಲಿ ಸವರುತ್ತಾರೆ. ಬಳಿಕ ಬಾಯಿಯಿಂದ ಗಾಳಿಯನ್ನು ಊದಿ, ಯಾವ ಸೊಳ್ಳೆಯು ಇಲ್ಲ ಎಂದು ಹೇಳುತ್ತಾರೆ. ಇದಾದ ನಂತರ ಮನೆಯಲ್ಲಿ ಎಲ್ಲರೂ ತಮ್ಮ ಪಾಡಿಗೆ ತಾವು ಊಟ ಮಾಡುತ್ತಿರುತ್ತಾರೆ. ಈ ವೇಳೆ ಅರವಿಂದ್ ತಾವು ಊಟ ಮಾಡದೇ ಅನ್ನ, ಸಾಂಬಾರ್ ತಂದು ದಿವ್ಯಾ ಉರುಡುಗಗೆ ಒಂದೊಂದೇ ತುತ್ತು ತಿನ್ನಿಸಿದ್ದಾರೆ.

    ಒಟ್ಟಾರೆ ಈ ಕ್ಯೂಟ್ ಪೇರ್ ಒಬ್ಬರ ಮೇಲೊಬ್ಬರು ಹೊಂದಿರುವ ಕಾಳಜಿ ನೋಡಿ ಫಿದಾ ಆಗಿರುವ ಪ್ರೇಕ್ಷಕರು, ಈ ಜೋಡಿಗೆ ದೃಷ್ಟಿ ತಾಗದಿರಲಿ ಎಂದು ಆಶಿಸುತ್ತಿದ್ದಾರೆ ಎಂದೇ ಹೇಳಬಹುದು.

  • ಬಿಗ್‍ಬಾಸ್ ಮನೆಯ ಸೂಪರ್ ಚಕ್ಕರ್ ಯಾರು ಗೊತ್ತಾ?

    ಬಿಗ್‍ಬಾಸ್ ಮನೆಯ ಸೂಪರ್ ಚಕ್ಕರ್ ಯಾರು ಗೊತ್ತಾ?

    ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಆಟದ ವೈಕರಿ ದಿನೇ ದಿನೇ ರಂಗೇರುತ್ತಿದ್ದಂತೆ, ಮಾತಿನ ಚಕಮಕಿ ಕೂಡ ಹೆಚ್ಚಾಗುತ್ತಿದೆ. ಟಾಸ್ಕ್ ಗಾಗಿ ಬಿಗ್‍ಬಾಸ್ ಮಾಡಿರುವ ಎರಡು ತಂಡಗಳ ನಡುವೆ ಒಂದಲ್ಲ ಒಂದು ವಿಷಯವಾಗಿ ಸ್ಪರ್ಧಿಗಳು ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಕಿಕೊಳ್ಳುತ್ತಿದ್ದಾರೆ. ಎರಡು ತಂಡಗಳು ಇಟ್ಟಿಗೆಯನ್ನು ಹೆಚ್ಚಿಸಿಕೊಳ್ಳುವ ಟಾಸ್ಕ್ ನಲ್ಲಿ ಎದುರಾಳಿ ವಿರುದ್ಧ ಜಯಗಳಿಸಲು ರಾತ್ರಿ ಹಗಲು ಹೋರಾಟ ನಡೆಸಿತ್ತು.

    ಈ ನಡುವೆ ಶುಭಾ ನೇತೃತ್ವದ ಜಾತ್ರೆ ಟೀಂನ ವೈಷ್ಣವಿ ಮತ್ತು ದಿವ್ಯಾ ಉರುಡುಗ ನೇತೃತ್ವದ ಅನುಬಂಧ ತಂಡದ ದಿವ್ಯಾ ಸುರೇಶ್, ನೀರಿಗೊಂದು ಎಲ್ಲೆ ಎಲ್ಲಿದೆ ಟಾಸ್ಕ್ ನಲ್ಲಿ ಗೆಲ್ಲಲೇ ಬೇಕೆಂದು ಹಗಲು ರಾತ್ರಿ ನಿದ್ದೆ ಬಿಟ್ಟು ಸ್ವಿಮ್ಮಿಂಗ್ ಪೂಲ್‍ನಲ್ಲಿ ನಿಂತು ಹೋರಾಟ ನಡೆಸಿದ್ದರೆ ಇತ್ತ ಎರಡು ತಂಡದ ಸದಸ್ಯರು ಮೇಲ್ಭಾಗದಲ್ಲಿ ತಮ್ಮ ತಂಡದ ಇಟ್ಟಿಗೆಯನ್ನು ಹೆಚ್ಚಿಸುವ ಸಾಹಸಕ್ಕೆ ಇಳಿದಿದ್ದರು.

    ಮುಂಜಾನೆಯಾಗುತ್ತಿದ್ದಂತೆ ಮೇಲ್ಭಾಗದಲ್ಲಿ ಕೂತಿದ್ದ ಜಾತ್ರೆ ತಂಡದ ಪ್ರಶಾಂತ್ ಸಂಬರಗಿ ಮತ್ತು ರಘು ಒಂದು ಕ್ಷಣ ನಿದ್ದೆಗೆ ಜಾರಿದ್ದಾರೆ. ಈ ವೇಳೆ ಅನುಬಂಧ ತಂಡದ ಅರವಿಂದ್ ಮೆಲ್ಲನೆ ಇಟ್ಟಿಗೆಯನ್ನು ತೆಗೆದುಕೊಂಡು ಹೋಗಿ ತಮ್ಮ ಇಟ್ಟಿಗೆಯ ಶೇಖರಣೆಯ ಕೆಲಸದಲ್ಲಿ ತೊಡಗಿದ್ದರು. ಈ ಸಂದರ್ಭ ವೈಷ್ಣವಿ ತಂಡದ ಸದಸ್ಯನಾದ ರಘು ಅವರನ್ನು ಕರೆದರು. ಎಚ್ಚರ ಆಗುವಷ್ಟರಲ್ಲಿ ಅರವಿಂದ್ ಇಟ್ಟಿಗೆ ಜೋಡಿಸಿ ಆಗಿತ್ತು. ನಂತರ ಎಚ್ಚರಗೊಂಡ ಪ್ರಶಾಂತ್ ಸಂಬರಗಿ ಯಾಕೆ ಜೋಡಿಸಿದ್ದು, ನಾನು ನಿದ್ದೆ ಮಾಡಿರಲ್ಲಿ ಎಂದು ಅರವಿಂದ್ ಬಳಿ ವಾದಕ್ಕೆ ಇಳಿದರು. ಆಗ ಅರವಿಂದ್ ಸರ್ ನೀವು ನಿದ್ದೆಗೆ ಜಾರಿದಾಗ ನಾನು ತೆಗೆದುಕೊಂಡು ಹೋಗಿದ್ದು, ನಿಮಗೆ ನಾನು ಇಟ್ಟಿಗೆ ತೆಗೆದದ್ದೆ ಗೊತ್ತಿಲ್ಲ ಎಂದರು. ಪ್ರಶಾಂತ್ ಇಲ್ಲ ನಾನು ನಿದ್ದೆ ಮಾಡಿಲ್ಲ ತಲೆ ಮಾತ್ರ ಬಗ್ಗಿಸಿದ್ದೆ ಎಂದರು. ಇದನ್ನು ಕೇಳಿದ ಅರವಿಂದ್ ನೀವು ವಾದ ಮಾಡಬೇಡಿ ಎಂದರು ಅದಕ್ಕೆ ಪ್ರಶಾಂತ್ ನೀನೆ ಇಲ್ಲಿ ಸೂಪರ್ ಚಕ್ಕರ್ ಎಂದು ಕೊಂಡಿದ್ದೀಯ ಎಂದರು.

    ನಂತರ ಮಾತು ಮುಂದುವರಿಸಿದ ಪ್ರಶಾಂತ್ ಇದು ಮೋಸ ನೀವು ಮೋಸದ ಆಟ ಆಡುತ್ತಿದ್ದೀರಿ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ದಿವ್ಯ ಉರುಡುಗ ಅರವಿಂದ್ ನೀನು ಮಾತನಾಡಬೇಡ ಎಂದು ತಮ್ಮ ತಂಡವನ್ನು ಸುಮ್ಮನಿರುವಂತೆ ಕೇಳಿಕೊಂಡರು. ಕೊನೆಗೆ ಅರವಿಂದ್ ತಾವು ಜೋಡಿಸಿದ್ದ ಇಟ್ಟಿಗೆಯನ್ನು ಹೊಡೆದು ತಮ್ಮ ನಿಲುವನ್ನು ಪ್ರದರ್ಶಿಸಿದರು.

    ಬಿಗ್ ಮನೆಯಲ್ಲಿ ಟಾಸ್ಕ್ ಕೊಡುತ್ತಿದ್ದಂತೆ ಸ್ಪರ್ಧಿಗಳು ತಮ್ಮ ಮಾತಿನ ಚಕಮಕಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು ಟಾಸ್ಕ್ ನಂತರ ಒಂದಾಗಿ ಬೆರೆದು ಜಗಳವನ್ನು ಮರೆಯುತ್ತಿದ್ದಾರೆ.