Tag: aravind limbavali

  • ಕ್ಷಮೆ ಕೇಳೋಕೆ ಸಿದ್ಧ, ಒತ್ತುವರಿ ತೆರವು ಮಾಡಿಸಿ- ಕಾಂಗ್ರೆಸ್‍ಗೆ ಲಿಂಬಾವಳಿ ಟಾಂಗ್

    ಕ್ಷಮೆ ಕೇಳೋಕೆ ಸಿದ್ಧ, ಒತ್ತುವರಿ ತೆರವು ಮಾಡಿಸಿ- ಕಾಂಗ್ರೆಸ್‍ಗೆ ಲಿಂಬಾವಳಿ ಟಾಂಗ್

    ಬೆಂಗಳೂರು: ಮಹಿಳೆಯ ಮೇಲೆ ದರ್ಪ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶಾಸಕ ಅರವಿಂದ ಲಿಂಬಾವಳಿ ಸ್ಪಷ್ಟನೆ ನೀಡುವ ಮೂಲಕ ಕಾಂಗ್ರೆಸ್‍ಗೆ ಟಾಂಗ್ ನೀಡಿದ್ದಾರೆ.

    ಬೆಳ್ಳಂದೂರು ಬಳಿ ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಮಹಿಳೆಯ ಜೊತೆ ಕ್ಷಮೆ ಕೇಳೋಕೆ ಸಿದ್ಧನಿದ್ದೇನೆ. ನೀವು ನಿಮ್ಮ ಕಾರ್ಯಕರ್ತೆಯ ಕಟ್ಟಡ ಒತ್ತುವರಿ ತೆರವು ಮಾಡಿಸಿ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಮನವಿ ಸಲ್ಲಿಸಲು ಬಂದ ಮಹಿಳೆಗೆ ಗದರಿದ ಅರವಿಂದ ಲಿಂಬಾವಳಿ

    ಅರೋಪಗಳನ್ನು ಮಾಡುತ್ತಾರೆ. ಆದರೆ ಇದಕ್ಕೆಲ್ಲ ನಾನು ತಲೆಕೆಡಿಸಿಕೊಳಲ್ಲ. ಒತ್ತುವರಿಯಾಗಿರುವ ಜಾಗ ಬಿಡಿ, ಜನರಿಗೆ ತೊಂದರೆಯಿಂದ ತಪ್ಪಿಸಿ ಎಂದು ಹೇಳುವ ಮೂಲಕ ಟಿಜೆಡ್ ಅಪಾರ್ಟ್ ಮೆಂಟ್‌ಗೆ ನೀರು ತುಂಬಿದೆ ನಿಮ್ಮಿಂದ ಎಂದು ಮಹಿಳೆಗೆ ಟಾಂಗ್ ನೀಡಿದರು. ಜನರಿಗೆ ತೊಂದರೆ ಕೊಡೊದೇ ನಿಮ್ಮ ಉದ್ದೇಶನಾ ಎಂದು ಪ್ರಶ್ನಿಸಿದರು.

    ಏನಿದು ಪ್ರಕರಣ..?: ಮಳೆಯಿಂದ ಹಾನಿಗೊಳಗಾದ ಪ್ರದೇಶವಾದ ವರ್ತೂರು ಕೆರೆ ಕೋಡಿ ವೀಕ್ಷಿಸಲು ಅಧಿಕಾರಿಗಳ ಜೊತೆ ಅರವಿಂದ ಲಿಂಬಾವಳಿ ಬಂದಿದ್ದರು. ಈ ವೇಳೆ ಸಮಸ್ಯೆ ಹೇಳಲು ಬಂದ ಮಹಿಳೆಗೆ, ನಿನಗೆ ಮಾನ ಮರ್ಯಾದೆ ಇದ್ಯಾ? ನಿನಗೆ ನಾಚಿಕೆ ಆಗಲ್ವಾ ಎಂದು ಏರು ದನಿಯಲ್ಲಿ ಅವಾಜ್ ಹಾಕಿದ್ದಾರೆ. ನಂತರ ಮಹಿಳೆಯನ್ನು ಸ್ಟೇಷನ್‍ಗೆ ಕರೆದುಕೊಂಡು ಹೋಗಿ ಕೂರಿಸಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಒಬ್ಬ ಜನಪ್ರತಿನಿಧಿಯಾಗಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದು ಅಕ್ಷಮ್ಯ : ಲಿಂಬಾವಳಿ ವಿರುದ್ಧ ಕಾಂಗ್ರೆಸ್ ಕಿಡಿ

    ಶಾಸಕ ಅರವಿಂದ ಲಿಂಬಾವಳಿಯಿಂದ ನಿಂದನೆಗೆ ಒಳಗಾಗಿದ್ದ ಮಹಿಳೆಯ ಮೇಲೆ ಬಿಬಿಎಂಪಿ ಎಂಜಿನಿಯರ್ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ವಿಚಾರಕ್ಕೆ ಕ್ರಮ ಕೈಗೊಳ್ಳಲು ಹೋದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಮಹಿಳೆ ವಿರುದ್ಧ ಆರೋಪಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಾನು ಯಾರ ಮಗಳು ಗೊತ್ತಾ? – ಟ್ರಾಫಿಕ್ ಪೊಲೀಸರಿಗೆ ಆವಾಜ್‌ ಹಾಕಿದ ಅರವಿಂದ ಲಿಂಬಾವಳಿ ಪುತ್ರಿಗೆ 10,000 ಫೈನ್‌

    ನಾನು ಯಾರ ಮಗಳು ಗೊತ್ತಾ? – ಟ್ರಾಫಿಕ್ ಪೊಲೀಸರಿಗೆ ಆವಾಜ್‌ ಹಾಕಿದ ಅರವಿಂದ ಲಿಂಬಾವಳಿ ಪುತ್ರಿಗೆ 10,000 ಫೈನ್‌

    ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲದೇ ಪೊಲೀಸರಿಗೆ ಆವಾಜ್ ಹಾಕಿದ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿಗೆ 10,000 ರೂ. ದಂಡ ವಿಧಿಸಲಾಗಿದೆ.

    ಟ್ರಾಫಿಕ್ ಪೊಲೀಸರು ತಪಾಸಣೆ ವೇಳೆ ಕಾರು ತಡೆದ ಹಿನ್ನೆಲೆಯಲ್ಲಿ ಸಿಟ್ಟಾದ ಲಿಂಬಾವಳಿ ಪುತ್ರಿ, ಕಾರಿನಿಂದ ಇಳಿದ ಕೂಡಲೇ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ನಾನು MLA ಅರವಿಂದ ಲಿಂಬಾವಳಿ ಮಗಳು ಗೊತ್ತಾ? ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಾರೆ. ಅಲ್ಲದೆ ಇದು MLA ಗಾಡಿ, ನಾನು ಅರವಿಂದ ಲಿಂಬಾವಳಿ ಅವರ ಪುತ್ರಿ ಎಂದು ವಾಗ್ವಾದ ನಡೆಸಿದ್ದಾರೆ. ಇದನ್ನೂ ಓದಿ: ನಿಖಿಲ್ ಕುಮಾರ್ ಸ್ವಾಮಿ ಮಗನ ಪೂರ್ತಿ ಹೆಸರು ಅವ್ಯನ್ ದೇವ್ ಎನ್.ಕೆ : ಈ ಹೆಸರು ಸೂಚಿಸಿದ್ದು ಯಾರು?

    10 ಸಾವಿರ ದಂಡ ಕೊಟ್ಟ ಬಳಿಕ ಕಾರುಬಿಟ್ಟ ಪೊಲೀಸರು: ರ‍್ಯಾಷ್ ಡ್ರೈವಿಂಗ್ ಮಾಡಿಕೊಂಡು ಬಂದಿದ್ದಲ್ಲದೆ ಟ್ರಾಫಿಕ್ ಪೊಲೀಸರಿಗೇ ಆವಾಜ್ ಹಾಕಿದ ಶಾಸಕ ಅರವಿಂದ ಲಿಂಬಾವಳಿ ಪುತ್ರಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ. 10 ಸಾವಿರ ರೂ. ದಂಡ ಕಟ್ಟಿದ ಬಳಿಕ ಪೊಲೀಸರು ಕಾರನ್ನು ಬಿಟ್ಟು, ಯಾವುದೇ ಪ್ರಕರಣ ದಾಖಲಿಸಿಕೊಳ್ಳದೆ ಕಳುಹಿಸಿದ್ದಾರೆ. 

    ರ‍್ಯಾಷ್ ಡ್ರೈವಿಂಗ್ ಮಾಡಿಕೊಂಡು ಬಂದ ಲಿಂಬಾವಳಿ ಪುತ್ರಿ, ಪೊಲೀಸರಿಗೂ ಕೇರ್ ಮಾಡದೇ ಪೊಲೀಸರ ಮೇಲೆಯೇ ಕಾರು ಹತ್ತಿಸುವಂತೆ ಕಾರು ಚಲಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆನ್ನತ್ತಿದ ಪೊಲೀಸರನ್ನು ನೋಡಿ ಕ್ಯಾಪಿಟಲ್ ಹೋಟೆಲ್ ಒಳಗೆ ಕಾರು ಚಲಾಯಿಸಿದ್ದಾರೆ. ಕಾರು ವಾಪಸ್ ಬರುತ್ತಿದ್ದ ವೇಳೆ ಹೋಟೆಲ್ ಗೇಟ್ ಬಳಿಯೇ ಪೊಲೀಸರು ತಡೆದಿದ್ದಾರೆ. ಈ ವೇಳೆ ಟ್ರಾಫಿಕ್ ಪೊಲೀಸರ ಮೇಲೆಯೇ ದರ್ಪ ತೋರಿ `ನಾನು ಅರವಿಂದ ಲಿಂಬಾವಳಿ ಮಗಳು’ ಎಂದು ಆವಾಜ್ ಹಾಕಿದ್ದಾರೆ. ಇದನ್ನೂ ಓದಿ: ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ

    ಶಾಸಕರ ಹೆಸರು ಹೇಳುತ್ತಿದ್ದಂತೆ ಸೈಲೆಂಟ್ ಆದ ಟ್ರಾಫಿಕ್ ಪೊಲೀಸರು ಯಾವುದೇ ಕೇಸ್ ದಾಖಲಿಸದೇ ಹಾಗೇ ಬಿಟ್ಟು ಕಳುಹಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ, ನಂತರ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

  • ಬೆಂಗಳೂರಿಗೆ ಆಗಮಿಸಿದ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್

    ಬೆಂಗಳೂರಿಗೆ ಆಗಮಿಸಿದ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್

    ಬೆಂಗಳೂರು: ಕೇಂದ್ರ ರಕ್ಷಣಾ ಸಚಿವರಾದ ರಾಜ್‍ನಾಥ್ ಸಿಂಗ್ ಅವರು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ.

    ಹೆಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್ ಹಾಗೂ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ರಕ್ಷಣಾ ಸಚಿವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ರಾಜ್‍ನಾಥ್ ಸಿಂಗ್, ರಾಜಭವನಕ್ಕೆ ಭೇಟಿ ನೀಡಿ ನಂತರ ಕೇಂದ್ರ ಸಂಸದೀಯ ವ್ಯವಹಾರ ಸಚಿವರಾದ ಪ್ರಹ್ಲಾದ್ ಜೋಶಿ ಅವರ ಪುತ್ರಿಯ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಗೆ ಅಮಿತ್ ಶಾರನ್ನು ಆತ್ಮೀಯವಾಗಿ ಬರಮಾಡಿಕೊಂಡ ಸಿಎಂ

    ಅಮಿತ್ ಶಾ ರಾಜ್ಯ ಪ್ರವಾಸ:
    ಸೆಪ್ಟೆಂಬರ್ 2 ರಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ರಾಜ್ಯ ಪ್ರವಾಸಕೈಗೊಂಡಿದ್ದರು. ಲೋಕಸಭಾ ಅಧ್ಯಕ್ಷ ಓಂ ಪ್ರಕಾಶ್ ಬಿರ್ಲಾ ಹಾಗೂ ಕೇಂದ್ರ ಸರ್ಕಾರದ ಸಚಿವರುಗಳೊಂದಿಗೆ ಕರ್ನಾಟಕ ರಾಜ್ಯ ಪ್ರವಾಸ ಕೈಗೊಂಡಿದ್ದ ಅಮಿತ್ ಶಾ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದರು. ಈ ವೇಳೆ ಬೊಮ್ಮಾಯಿ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅವರನ್ನೆಲ್ಲ ಆತ್ಮೀಯವಾಗಿ ಬರಮಾಡಿಕೊಂಡರು. ಇದನ್ನೂ ಓದಿ: ರಾಜ್ಯಾದ್ಯಂತ ಮಳೆಯ ಅಬ್ಬರ – ಮತ್ತೆ ಪ್ರವಾಹ ಭೀತಿ

    ಅಮಿತ್ ಶಾ ಅವರಿಗೆ ಶಾಲುಹೊದಿಸಿ, ಹಾರ ತೊಡಿಸಿದ ಸಿಎಂ ಲೇಖಕ ದೀಪಕ್ ಚೋಪ್ರಾ ಬರೆದಿರುವ ಬುದ್ಧ- ದ ಸ್ಟೋರಿ ಆಫ್ ಎನಲೈಟ್‍ಮೆಂಟ್ ಪುಸ್ತಕವನ್ನು ನೀಡಿದ್ದರು.

  • ಎಎಪಿ ಮಾನಸಿಕ ಕಿರುಕುಳ ನೀಡುತ್ತಿದೆ- ಕಟ್ಟಡ ಮಾಲೀಕ ಆರೋಪ

    ಎಎಪಿ ಮಾನಸಿಕ ಕಿರುಕುಳ ನೀಡುತ್ತಿದೆ- ಕಟ್ಟಡ ಮಾಲೀಕ ಆರೋಪ

    ಆನೇಕಲ್: ಕಟ್ಟಡ ಮಾಲೀಕನೋರ್ವನಿಗೆ ಮಾನಸಿಕ ಕಿರುಕುಳ ನೀಡಿರುವ ಆರೋಪವೊಂದು ಎಎಪಿ ವಿರುದ್ಧ ಕೇಳಿಬಂದಿದೆ.

    ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಕಸವನಹಳ್ಳಿಯಲ್ಲಿ ಎಎಪಿ ಮುಖಂಡರು ವಾಣಿಜ್ಯ ಮಳಿಗೆ ತೆರೆಯಲೆಂದು ಕಟ್ಟಡವನ್ನು ಬಾಡಿಗೆಗೆ ಪಡೆದು, ಅದರಲ್ಲಿ ಪಕ್ಷದ ಕಚೇರಿ ತೆರೆದಿದ್ದಲ್ಲದೆ ವಿನಾಕಾರಣ ಕಟ್ಟಡ ಮಾಲೀಕರು ಹಾಗೂ ಮಹದೇವಪುರ ಕ್ಷೇತ್ರದ ಶಾಸಕರ ಹೆಸರಿಗೆ ಕಳಂಕ ತರುವಂತಹ ಕಾರ್ಯಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಎಎಪಿ ಕಚೇರಿ ಕಟ್ಟಡದ ಮಾಲೀಕರಿಗೆ ಅರವಿಂದ ಲಿಂಬಾವಳಿ ಬೆದರಿಕೆ ಆರೋಪ!

    ಇದೇ ಆಗಸ್ಟ್ 15 ರಂದು ಬೆಳ್ಳಂದೂರು ವಾರ್ಡ್‍ನ ಕಸವನಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ವಾಣಿಜ್ಯ ಮಳಿಗೆ ತೆರೆಯಲೆಂದು ಬಾಡಿಗೆಗೆ ಪಡೆದು ಎಎಪಿ ಕಚೇರಿಯನ್ನು ತೆರೆದಿದ್ದು, ಇದನ್ನು ಕಟ್ಟಡ ಮಾಲೀಕರು ಪ್ರಶ್ನಿಸಿದ್ದಾರೆ. ಈ ವೇಳೆ ಕಟ್ಟಡ ಮಾಲೀಕರು ನಮ್ಮ ಕಟ್ಟಡದಲ್ಲಿ ರಾಜಕೀಯ ಪಕ್ಷದ ಕಚೇರಿ ತೆರೆಯಲು ಅವಕಾಶ ನೀಡುವುದಿಲ್ಲವೆಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಎಪಿಯವರು, ನಮಗೆ ಸ್ಥಳೀಯ ರಾಜಕೀಯ ಮುಖಂಡರುಗಳಿಂದ ಬೆದರಿಕೆ ಇದೆಯೆಂದು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: ಅವಳಿ-ಜವಳಿ ಕಥೆ ಹೇಳಿ 2ನೇ ಮದುವೆಗೆ ಸಿದ್ಧನಾಗಿ ಪೊಲೀಸರ ಬಲೆಗೆ ಬಿದ್ದ

    ಅಲ್ಲದೆ ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗೋಷ್ಠಿ ನಡೆಸಿದ ಎಎಪಿಯವರು, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ರವರು ಕಟ್ಟಡ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆಂದು ಹೇಳಿದ್ದಾರೆ. ಆದರೆ ಈ ವಿಷಯಕ್ಕೂ ಶಾಸಕರಿಗೂ ಯಾವುದೇ ಸಂಬಂಧವಿಲ್ಲ. ಜೊತೆಗೆ ನಮಗೆ ಯಾವುದೇ ಬೆದರಿಕೆ ಕರೆಗಳು ಬಂದಿಲ್ಲ, ಎಎಪಿ ಕಡೆಯವರಿಂದ ನಮಗೆ ಮಾನಸಿಕ ತೊಂದರೆ ಉಂಟಾಗಿದೆ ಎಂದು ಕಟ್ಟಡ ಮಾಲೀಕರಾದ ಶ್ರೀಕಾಂತ್ ಸ್ಪಷ್ಟಪಡಿಸಿದ್ದಾರೆ.

  • ಎಎಪಿ ಕಚೇರಿ ಕಟ್ಟಡದ ಮಾಲೀಕರಿಗೆ ಅರವಿಂದ ಲಿಂಬಾವಳಿ ಬೆದರಿಕೆ ಆರೋಪ!

    ಎಎಪಿ ಕಚೇರಿ ಕಟ್ಟಡದ ಮಾಲೀಕರಿಗೆ ಅರವಿಂದ ಲಿಂಬಾವಳಿ ಬೆದರಿಕೆ ಆರೋಪ!

    ಬೆಂಗಳೂರು: ಆಮ್ ಆದ್ಮಿ ಪಾರ್ಟಿಯು ಭ್ರಷ್ಟ ರಾಜಕಾರಣಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದು, ನಮಗೆ ಕಚೇರಿ ತೆರೆಯಲು ಅವಕಾಶ ನೀಡಿದ ಕಟ್ಟಡದ ಮಾಲೀಕರಿಗೆ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಬೆದರಿಕೆ ಹಾಕಿರುವುದೇ ಇದಕ್ಕೆ ಸಾಕ್ಷಿ ಎಂದು ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋಹನ್ ದಾಸರಿ, ಮಹದೇವಪುರ ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷರಾದ ಅಶೋಕ್ ಮೃತ್ಯುಂಜಯರವರು ಕಸವನಹಳ್ಳಿ ವೃತ್ತದಲ್ಲಿ ಕಟ್ಟಡವೊಂದನ್ನು ಲೀಸ್‍ಗೆ ಪಡೆದು, ಅಲ್ಲಿ ಬೆಳ್ಳಂದೂರು ವಾರ್ಡ್ ಕಚೇರಿಯನ್ನು ಭಾನುವಾರ ಆರಂಭಿಸಿದ್ದರು. ವಿಷಯ ತಿಳಿದ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿಯವರು ಕಚೇರಿಗೆ ಕಟ್ಟಡವನ್ನು ಬಾಡಿಗೆ ನೀಡಿದ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ. ಕಚೇರಿಯನ್ನು ಖಾಲಿ ಮಾಡಿಸದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಪಕ್ಷವೊಂದು ಕಚೇರಿ ತೆರೆಯುವುದನ್ನೂ ಸಹಿಸಲಾರದಷ್ಟು ಅರವಿಂದ್ ಲಿಂಬಾವಳಿ ಹತಾಶರಾಗಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

    ಜನರ ಕಲ್ಯಾಣವೊಂದೇ ಆಮ್ ಆದ್ಮಿ ಪಾರ್ಟಿಯ ಆಶಯವಾಗಿದೆ. ದ್ವೇಷ ರಾಜಕಾರಣದಲ್ಲಿ ನಾವು ಆಸಕ್ತಿ ಹೊಂದಿಲ್ಲ. ನಮ್ಮ ಸಹನೆಯನ್ನು ದೌರ್ಬಲ್ಯವೆಂದು ಬಿಜೆಪಿಯವರು ಭಾವಿಸಬಾರದು. ಗೂಂಡಾಗಿರಿಯು ಬಿಜೆಪಿಯ ಸಂಸ್ಕೃತಿಯಾಗಿದ್ದು, ಶಾಸಕರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನಮಗೆ ಕಿರುಕುಳ ನೀಡುತ್ತಿದ್ದಾರೆ. ಲಿಂಬಾವಳಿಯವರ ಪ್ರಜಾಪ್ರಭುತ್ವ ವಿರೋಧಿ ನಡೆಗೆ ಪ್ರಜಾಪ್ರಭುತ್ವದ ಮಾರ್ಗದಲ್ಲಿಯೇ ತಕ್ಕ ಪಾಠ ಕಲಿಸುವುದು ನಮಗೆ ತಿಳಿದಿದೆ ಎಂದು ಮೋಹನ್ ದಾಸರಿ ಹೇಳಿದರು.

    ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂರವರು ಮಾತನಾಡಿ, ಕ್ಷೇತ್ರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕೆರೆ ಒತ್ತುವರಿ ವಿರುದ್ಧ ಎಎಪಿ ದನಿ ಎತ್ತಿತ್ತು. ಇದರಿಂದ ಕಂಗೆಟ್ಟಿರುವ ಶಾಸಕ ಲಿಂಬಾವಳಿಯವರು ತಮ್ಮ ಇನ್ನಷ್ಟು ಅಕ್ರಮ ಬಯಲಾಗಬಹುದು ಎಂಬ ಭಯದಿಂದ ಬೆದರಿಕೆ ಹಾಕಿದ್ದಾರೆ. ಅವರ ಗೂಂಡಾಗಿರಿ ಮುಂದುವರಿದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಕಚೇರಿ ಆರಂಭಿಸುವುದು ಪ್ರಜಾಪ್ರಭುತ್ವ ನಮಗೆ ನೀಡಿರುವ ಹಕ್ಕಾಗಿದ್ದು, ಈ ಹಕ್ಕನ್ನು ಕಿತ್ತುಕೊಳ್ಳುವ ದುಸ್ಸಾಹಸದಿಂದ ಲಿಂಬಾವಳಿಯವರು ಹಿಂದೆ ಸರಿಯಬೇಕು ಎಂದು ಕಿಡಿಕಾರಿದರು.

    ಶಾಸಕ ಅರವಿಂದ ಲಿಂಬಾವಳಿಯವರು ತಮ್ಮ ಕ್ಷೇತ್ರವನ್ನು ರಿಪಬ್ಲಿಕ್ ಆಫ್ ಮಹದೇವಪುರ ಮಾಡಲು ಹೊರಟಿದ್ದಾರೆ. ಅಧಿಕಾರದ ಮದದಿಂದ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಬೇರೆ ಪಕ್ಷಗಳ ಏಳಿಗೆಯನ್ನು ಹತ್ತಿಕ್ಕಲು ಯಾವ ಮಟ್ಟಕ್ಕಾದರೂ ಇಳಿಯುವ ಹಂತ ತಲುಪಿದ್ದಾರೆ. ಎಎಪಿಯ ಕಚೇರಿಯ ಆರಂಭಕ್ಕೆ ಅಡ್ಡಗಾಲು ಹಾಕುವ ಬದಲು, ತಾಕತ್ತಿದ್ದರೆ ಮುಂಬರುವ ಚುನಾವಣೆಗಳಲ್ಲಿ ನಮ್ಮನ್ನು ಎದುರಿಸಲಿ ಎಂದು ಜಗದೀಶ್ ವಿ. ಸದಂ ಸವಾಲು ಹಾಕಿದರು.

  • ಸೋಂಕಿನಿಂದ ನಿಧನರಾದವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಚಿವ ಅರವಿಂದ ಲಿಂಬಾವಳಿ

    ಸೋಂಕಿನಿಂದ ನಿಧನರಾದವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಚಿವ ಅರವಿಂದ ಲಿಂಬಾವಳಿ

    ಬೆಂಗಳೂರು: ಕೊರೊನಾದಿಂದ ನಿಧನರಾದ ಮಹದೇವಪುರ ಕ್ಷೇತ್ರದ ವಿವಿಧ ಭಾಗಗಳಲ್ಲಿ ಅನೇಕರ ಮನೆಗಳಿಗೆ ಭೇಟಿ ನೀಡಿ ಅವರ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸವನ್ನು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಮಾಡಿದ್ದಾರೆ. ಇದನ್ನೂ ಓದಿ: ವೀಡಿಯೋ ವೈರಲ್: ಸೀರೆಯುಟ್ಟು ಮ್ಯಾನ್‍ಹೋಲ್‍ಗೆ ಇಳಿದ ಮುನ್ಸಿಪಲ್ ಆಫೀಸರ್

    ಕಳೆದ ನಾಲ್ಕು ದಿನಗಳಿಂದ ಈ ರೀತಿ ಸಾವಿಗೀಡಾದವರ ಅನೇಕರ ಮನೆಗಳಿಗೆ ಸತತವಾಗಿ ಭೇಟಿನೀಡುತ್ತಿರುವ ಸಚಿವ ಅರವಿಂದ ಲಿಂಬಾವಳಿ ಅವರು ಇಂದೂ ಸಹ ಮುಂದುವರೆಸಿದ್ದಾರೆ. ಇಂದು ಹೂಡಿಯಲ್ಲಿ ಕೋವಿಡ್ ನಿಂದ ನಿಧನರಾದ ಶ್ರೀ ವೆಂಕಟೇಶ ರೆಡ್ಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿಸಲು ಅವರ ಮನೆಗೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಧೈರ್ಯ ತುಂಬಿದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಬುದ್ಧಿ ಇಲ್ಲ, ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿರಲು ವಿಫಲ: ಈಶ್ವರಪ್ಪ

    ಕಾಡ ಅಗ್ರಹಾರದ ಶ್ರೀ ವೆಂಕಟೇಶ ಅವರು ಕೋವಿಡ್ ನಿಂದ ನಿಧನರಾದ ಹಿನ್ನೆಲೆಯಲ್ಲಿ ಇಂದು ಅವರ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಕುಟುಂಬ ಸದಸ್ಯರ ಭಾವನೆಗಳಿಗೆ ಸ್ಪಂದಿಸಿದ ಸಚಿವ ಅರವಿಂದ ಲಿಂಬಾವಳಿ ಅವರ ನೆರವಿಗೆ ನಾವು ಸದಾ ಇರುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ.

  • ದರ್ಶನ್‍ಗೆ ಕೃತಜ್ಞತೆ ಸಲ್ಲಿಸಿದ ಅರವಿಂದ ಲಿಂಬಾವಳಿ

    ದರ್ಶನ್‍ಗೆ ಕೃತಜ್ಞತೆ ಸಲ್ಲಿಸಿದ ಅರವಿಂದ ಲಿಂಬಾವಳಿ

    ಬೆಂಗಳೂರು: ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಪೋಷಿಸುತ್ತಿರುವ ಹಾಗೂ ಮೃಗಾಲಯದ ಪ್ರಾಣಿ ದತ್ತು ತೆಗೆದುಕೊಳ್ಳಲು ಕರೆನೀಡಿದ ಕನ್ನಡ ಚಿತ್ರರಂಗದ ಜನಪ್ರಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕೆಲಸಕ್ಕಾಗಿ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಕೃತಜ್ಞತೆ ಸಲ್ಲಿಸಿದ್ದಾರೆ.

    ಈ ಬಗ್ಗೆ ಹೇಳಿಕೆ ನೀಡಿರುವ ಅವರು ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾದ ದರ್ಶನ್ ಅವರು ರಾಜ್ಯದ ಮೃಗಾಲಯದ ಪ್ರಾಣಿಗಳ ಬಗ್ಗೆ ಪ್ರೀತಿ ಮತ್ತು ಆಸಕ್ತಿ ಹೊಂದಿದ್ದಾರೆ, ಅವರು ಸ್ವಇಚ್ಛೆಯಿಂದ ಪ್ರಾಣಿ ಪ್ರಿಯರಲ್ಲಿ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವಂತೆ ಕರೆಕೊಟ್ಟರು ಅವರ ಕರೆಯ ಮೇರೆಗೆ 40 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದೆ.

    ಕೊರೊನಾದ ಈ ಕಷ್ಟಕಾಲದಲ್ಲಿ ಸರ್ಕಾರ ಜನರ ರಕ್ಷಣೆಯ ಹೊಣೆ ಹೊತ್ತಿರುವ ಹಾಗೆ ದರ್ಶನ್ ಅವರು ಮೃಗಾಲಯದ ಪ್ರಾಣಿಗಳ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು, ಹಾಗೆಯೇ ಪ್ರಾಣಿ ದತ್ತು ಪಡೆಯಲು ದೇಣಿಗೆ ನೀಡಿದ ಎಲ್ಲ ಪ್ರಾಣಿಪ್ರಿಯರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಾನು ಸಹ ರಾಜ್ಯದ ಎಲ್ಲಾ ಪ್ರಾಣಿ ಪ್ರಿಯರಲ್ಲಿ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯಬೇಕು ಮತ್ತು ಈ ಉದ್ದೇಶಕ್ಕಾಗಿ ಹೆಚ್ಚಿನ ನೆರವು ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಇದನ್ನೂ ಓದಿ: ಮೃಗಾಲಯಗಳನ್ನ ಉಳಿಸಿ ಬೆಳೆಸಿ: ದರ್ಶನ್ ಮನವಿ

  • ಅಮೇಜಾನ್ ವಿರುದ್ಧ ಕಾನೂನು ಕ್ರಮ: ಅರವಿಂದ ಲಿಂಬಾವಳಿ

    ಅಮೇಜಾನ್ ವಿರುದ್ಧ ಕಾನೂನು ಕ್ರಮ: ಅರವಿಂದ ಲಿಂಬಾವಳಿ

    ಬೆಂಗಳೂರು: ಹೆಣ್ಣು ಮಕ್ಕಳ ಒಳ ಉಡುಪಿನ ಮೇಲೆ ಕನ್ನಡದ ಬಾವುಟದ ಬಣ್ಣಗಳನ್ನು ಹಾಗೂ ಕರ್ನಾಟಕದ ರಾಜ್ಯ ಲಾಂಛನವನ್ನು ಬಳಸಿರುವ ಅಮೇಜಾನ್ ಕೆನಡಾ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ,ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

    ಕನ್ನಡದ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ನೆಲದ ಶ್ರೇಷ್ಠತೆಯ ಅರಿವಿಲ್ಲದ ವಿದೇಶಿ ಸಂಸ್ಥೆಗಳು ಕನ್ನಡದ ಅಸ್ಮಿತೆಗೆ ಅವಮಾನ ಮಾಡುವಂತಹ ಯಾವುದೇ ಕೆಲಸ ಮಾಡಿದರೂ ಅದನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ ಎಂದರು. ಇದನ್ನೂ ಓದಿ: ಬ್ರಾ, ಪ್ಯಾಂಟಿ ಮೇಲೆ ಕರ್ನಾಟಕದ ಲಾಂಛನ, ಕನ್ನಡದ ಬಣ್ಣ- ಗೂಗಲ್ ಬಳಿಕ ಅಮೇಜಾನ್ ಅವಾಂತರ

    ಕನ್ನಡ ನೆಲದ ಭಾವನೆಗೆ ಧಕ್ಕೆ ಮಾಡುವಂತಹ ಯಾವುದೇ ಕ್ರಮಕ್ಕೆ ನನ್ನ ತೀವ್ರ ವಿರೋಧವಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿ ನಾನು ಇಂತಹ ಕೃತ್ಯದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅವಶ್ಯವೆಂದು ಭಾವಿಸಿ ಅಮೇಜಾನ್ ಕೆನಡಾ ಸಂಸ್ಥೆಯ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಲು ಸೂಚಿಸುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.  ಇದನ್ನೂ ಓದಿ: ಕನ್ನಡಿಗರಲ್ಲಿ ಕನ್ನಡದಲ್ಲೇ ಕ್ಷಮೆ ಕೇಳಿದ ಗೂಗಲ್

     

  • ಸಾಹಿತಿ ಪ್ರೊ.ವಸಂತ ಕುಷ್ಟಗಿ ನಿಧನಕ್ಕೆ ಲಿಂಬಾವಳಿ ಸಂತಾಪ

    ಸಾಹಿತಿ ಪ್ರೊ.ವಸಂತ ಕುಷ್ಟಗಿ ನಿಧನಕ್ಕೆ ಲಿಂಬಾವಳಿ ಸಂತಾಪ

    ಬೆಂಗಳೂರು: ಕನ್ನಡದ ಹಿರಿಯ ಬರಹಗಾರ, ಕವಿ, ಪ್ರೊ.ವಸಂತ ಕುಷ್ಟಗಿ ಅವರ ನಿಧನಕ್ಕೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಸಂತಾಪ ವ್ಯಕ್ತಪಡಿಸಿದ್ದಾರೆ.

    ಕನ್ನಡ ಪುಸ್ತಕಲೋಕಕ್ಕೆ ತಮ್ಮ ಅನನ್ಯ ಕಾವ್ಯ ಪ್ರತಿಭೆಯಿಂದ ಮಹತ್ವದ ಕೊಡುಗೆ ಕೊಟ್ಟ ಲೇಖಕರಲ್ಲಿ ಪ್ರೊಫೆಸರ್ ವಸಂತ ಕುಷ್ಟಗಿ ಅವರೂ ಒಬ್ಬರು. ಕಲಬುರಗಿ ಮೂಲದ ವಸಂತ ಕುಷ್ಟಗಿ, ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಎ.ಪದವಿ ಪಡೆದ ನಂತರ ಬೀದರ್ ನ ಭೂಮಿ ರೆಡ್ಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ನಂತರ ವಿವಿಧ ಕಾಲೇಜುಗಳಲ್ಲಿ ಅನೇಕ ಹಂತದ ಹುದ್ದೆಗಳನ್ನು ನಿರ್ವಹಿಸಿ, ಪ್ರಾಂಶುಪಾಲರಾಗಿ ನಿವೃತ್ತರಾದರು. ರಮನಂದ ತೀರ್ಥ ಸಂಶೋಧನಾ ಸಂಸ್ಥೆಯ ಗೌರವ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು ಎಂದು ನೆನೆದಿದ್ದಾರೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕದ ಹಿರಿಯ ಸಾಹಿತಿ ವಸಂತ ಕುಷ್ಟಗಿ ಇನ್ನಿಲ್ಲ

    ಅವರ ಭಕ್ತಿ ಗೋಪುರ, ಹೊಸ ಹೆಜ್ಜೆ, ಗಾಂಧಾರಿಯ ಕರುಣೆ, ಬೆತ್ತಲೆಯ ಬಾನು, ಚಂದ್ರಲಾ, ಮಾನ್ಯಖೇಟ ಮತ್ತು ಇತ್ತೀಚೆಗಿನ ಅಪ್ ಆ್ಯಂಡ್ ಡೌನ್ ಋತುಚಕ್ರ ಮುಂತಾದ ಕೃತಿಗಳು ಬಹು ಜನಪ್ರಿಯವಾಗಿವೆ. ಪ್ರತಿಷ್ಠಿತ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ, ಸರ್ ಎಂ.ವಿ. ಪ್ರಶಸ್ತಿ ಸೇರಿದಂತೆ ಅಸಂಖ್ಯಾತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಎಂದು ಸ್ಮರಿಸಿದ್ದಾರೆ.

    ವಸಂತ ಕುಷ್ಟಗಿ ಅವರ ನಿಧನದಿಂದ ಕನ್ನಡ ಸಾಹಿತ್ಯಲೋಕ ಒಬ್ಬ ಅತ್ಯುತ್ತಮ ಲೇಖಕನನ್ನು ಕಳೆದುಕೊಂಡಿದೆ. ಭಗವಂತ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಮತ್ತು ಅಭಿಮಾನಿ ಬಳಗಕ್ಕೆ ನೀಡಲಿ ಎಂದು ಸಚಿವ ಅರವಿಂದ ಲಿಂಬಾವಳಿ ಶೋಕ ವ್ಯಕ್ತಪಡಿಸಿದ್ದಾರೆ.

  • ಏನಪ್ಪಾ ಶಿವಮೂರ್ತಿ, ನಾನು ಅರವಿಂದ್ ಲಿಂಬಾವಳಿ ಮಾತಾಡ್ತಾ ಇರೋದು!

    ಏನಪ್ಪಾ ಶಿವಮೂರ್ತಿ, ನಾನು ಅರವಿಂದ್ ಲಿಂಬಾವಳಿ ಮಾತಾಡ್ತಾ ಇರೋದು!

    ನಪ್ಪಾ ಶಿವಮೂರ್ತಿ ನಾನು ಅರವಿಂದ ಲಿಂಬಾವಳಿ ಮಾತಾಡ್ತಾ ಇದ್ದೀನಿ, ನೀವು ಧೈರ್ಯವಾಗಿರಬೇಕು, ತುಂಬಾ ಹೆದರಿದ್ದೀರಿ ಅನ್ಸುತ್ತೆ ಅದಕ್ಕೆ ನಿಮ್ಮ ಬಿಪಿ ಜಾಸ್ತಿ ಇದೆ. ಆರಾಮಾಗಿರಿ ನಿಮಗೆ ಬೇಕಾದ ಚಿಕಿತ್ಸೆ ನಾವು ಕೊಡ್ತೀವಿ. ನಿನಗೆ ಯಾವ ಆಸ್ಪತ್ರೆಯಲ್ಲಿ ಬೆಡ್ ಬೇಕು,” ಹೀಗೊಂದು ಸಂಭಾಷಣೆ ಮತ್ತು ಸನ್ನಿವೇಶ ನಡೆದಿದ್ದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದಲ್ಲಿ. ಟ್ರಯಾ ಜಿಂಗ್ ಕೇಂದ್ರಗಳಿಂದ ನೇರವಾಗಿ ಕೋವಿಡ್ ಆಸ್ಪತ್ರೆಗಳಿಗೆ ಬೆಡ್ ಬುಕ್ ಮಾಡಲು ಸಿದ್ಧಪಡಿಸಿರುವ ಹೊಸ ತಂತ್ರಾಂಶ ಲೋಕಾರ್ಪಣೆ ಮಾಡಿದ ಸಂದರ್ಭ.

    ತಂತ್ರಾಂಶ ಲೋಕಾರ್ಪಣೆ ಮಾಡಿದ ನಂತರ ಆನ್‍ಲೈನ್ ಮೂಲಕ ಮಹದೇವಪುರದ ಜಿಂಕ್ ಹೋಟೆಲ್ ನ ಟ್ರಯಾಜಿಂಗ್ ಕೇಂದ್ರವನ್ನು ಸಂಪರ್ಕ ಮಾಡಿದ ವಾರ್ ರೂಮ್ ಅಧಿಕಾರಿಗಳು ಅಲ್ಲಿನ ಡಾಕ್ಟರ್ ಮಹೇಶ್ವರಿ ಅವರನ್ನು ಸಂಪರ್ಕಿಸಿದರು, ಅವರು ತಪಾಸಣೆ ಮಾಡುತ್ತಿದ್ದ ಕೋವಿಡ್ ಸೋಂಕಿತ ಶಿವಮೂರ್ತಿ ಎನ್ನುವ ಚೆನ್ನಸಂದ್ರ ನಿವಾಸಿ ಜೊತೆ ಸಚಿವರು ಮಾತನಾಡಿದರು. ಈ ವೇಳೆ ಮೇಲ್ಕಂಡ ಸಂಭಾಷಣೆ ನಡೆಯಿತು.

    ಡಾಕ್ಟರ್ ಮಹೇಶ್ವರಿ ಅವರಿಗೆ ಶಿವಮೂರ್ತಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ ಸಚಿವರು ಅವರಿಗೆ ಆಸ್ಪತ್ರೆಗೆ ಸೇರಿಸುವ ಅವಶ್ಯಕತೆ ಇದೆಯೇ ಎಂದು ಕೇಳಿದರು. ಶಿವಮೂರ್ತಿಯವರು ಹೃದಯ ಸಂಬಂಧಿ ಕಾಯಿಲೆ ಮತ್ತು ಸಕ್ಕರೆ ಕಾಯಿಲೆಗಳಿಂದ ಬಳಲುತ್ತಿರುವುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸುವುದು ಸೂಕ್ತ ಎಂದು ಡಾಕ್ಟರ್ ಮಹೇಶ್ವರಿ ಹೇಳಿದಾಗ, ಸಚಿವರು ಯಾವ ಆಸ್ಪತ್ರೆ ಬೇಕು ಶಿವ ಮೂರ್ತಿಯವರೇ ಎಂದರು.

    ಶಿವಮೂರ್ತಿ ಅವರ ಮನೆಗೆ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಹತ್ತಿರವಿರುವುದರಿಂದ ತಮಗೆ ಅಲ್ಲಿ ಚಿಕಿತ್ಸೆಗೆ ಅವಕಾಶ ಮಾಡಿಕೊಡುವಂತೆ ಸಚಿವರಿಗೆ ಮನವಿ ಮಾಡಿದರು. ಕೂಡಲೇ ಸಚಿವರು ಅವರಿಗೆ ಬೆಡ್ ಬುಕ್ ಮಾಡುವಂತೆ ಸೂಚಿಸಿದರು. ಕೆಲವೇ ಕ್ಷಣಗಳಲ್ಲಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಅವರಿಗೆ ಹಾಸಿಗೆ ಮೀಸಲಿಡಲಾಗಿತ್ತು ಮತ್ತು ಎಸ್‍ಎಂಎಸ್ ಮೂಲಕ ಮಾಹಿತಿ ಕೂಡ ನೀಡಲಾಯಿತು.

    ಈ ವ್ಯವಸ್ಥೆ ತುಂಬಾ ಚೆನ್ನಾಗಿದೆ ಸರ್ ಎಂದು ಶಿವಮೂರ್ತಿ ಹಾಗೂ ಅವರನ್ನು ತಪಾಸಣೆ ಮಾಡಿದ ವೈದ್ಯೆ ಡಾಕ್ಟರ್ ಮಹೇಶ್ವರಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.