Tag: aravind kp

  • ದಿವ್ಯಾ, ಅರವಿಂದ್ ಮಧ್ಯೆ ಏನಿದು ಉಡುಪಿ ಹೋಟೆಲ್?

    ದಿವ್ಯಾ, ಅರವಿಂದ್ ಮಧ್ಯೆ ಏನಿದು ಉಡುಪಿ ಹೋಟೆಲ್?

    ಬಿಗ್‍ಬಾಸ್ ಕೊನೆಯ ದಿನ ಮನೆ ಮಂದಿಗೆ ದಿವ್ಯಾ ಉರುಡುಗ ವಾಯ್ಸ್ ನೋಟ್ ಕಳುಹಿಸಿ ಸರ್ಪ್ರೈಸ್ ನೀಡಿದ್ರು. ಮನೆ ಮಂದಿಗೆ ಸರ್ಪ್ರೈಸ್ ನೀಡಿದ ದಿವ್ಯಾ ಈಗ ತಮ್ಮ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.

    ಜೋಡಿ ಟಾಸ್ಕ್ ನಿಂದ ಜೊತೆಯಾಗಿ ಮನೆಯಲ್ಲಿ ಅತಿ ಹೆಚ್ಚು ಸಮಯ ಕಳೆಯುತ್ತಿದ್ದ ಅರವಿಂದ್ ಅವರ ಜೊತೆ ಮಾತನಾಡಿದ ದಿವ್ಯಾ ಕೊನೆಯಲ್ಲಿ “ಉಡುಪಿ ಹೊಟೇಲ್ ಬಗ್ಗೆ ಥಿಂಕ್ ಮಾಡಿ” ಎಂದು ಹೇಳಿದ್ದರು. ಇಲ್ಲಿಯವರೆಗೆ ಇವರಿಬ್ಬರ ನಡುವಿನ ಸಂಭಾಷಣೆಯಲ್ಲಿ “ಉಡುಪಿ ಹೋಟೆಲ್” ಬಗ್ಗೆ ಪ್ರಸ್ತಾಪವಾಗಿರಲಿಲ್ಲ. ಈಗ ದಿವ್ಯಾ ಹೇಳಿದ್ದರಿಂದ ಏನಿದು ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

    ಎಲ್ಲರಿಗೂ ವಾಯ್ಸ್ ನೋಟ್ ಕಳುಹಿಸಿದ್ದ ದಿವ್ಯಾ ಕೊನೆಗೆ ಅರವಿಂದ್ ಜೊತೆ ಮಾತನಾಡಿದರು. ಹಾಯ್ ಅವಿ ಹೇಗಿದ್ದೀರಾ ಅಂದ ದಿವ್ಯಾ ಅವರ ಧ್ವನಿಯಲ್ಲೇ ತುಂಬಾ ಮಿಸ್ ಮಾಡಿಕೊಂಡ ಭಾವ ಅಡಗಿತ್ತು.”ನಿಮ್ ಬಗ್ಗೆ ಏನ್ ಹೇಳಿದ್ರು ಎಷ್ಟ್ ಹೇಳಿದ್ರು ಕಡಿಮೇನೆ. ಖುಷಿ ಬೇಜಾರ್ ಏನ್ ಆದ್ರೂ ನನ್ ಹತ್ರ ಹೇಳ್ಕೋಳ್ತಾ ಇದ್ರಿ. ನಂಗೊತ್ತು ನಾನ್ ಇಲ್ಲ ಅಂದ್ರೆ ಬೇಜಾರಾಗಿರ್ತೀರಾ. ಯಾವಾಗ್ಲೂ ನಗ್ತಾ ಇರಿ, ಗೇಮ್ ಚೆನ್ನಾಗ್ ಆಡಿ, ತುಂಬಾ ಮಿಸ್ ಮಾಡ್ಕೋಳ್ತಾ ಇದ್ದೀನಿ, ಆರಾಮಾಗಿ ಇದ್ದೀನಿ. ಉಡುಪಿ ಹೊಟೇಲ್ ಬಗ್ಗೆ ಥಿಂಕ್ ಮಾಡಿ, ಪ್ರೀತಿ ಇರ್ಲಿ. ಮಿಸ್ ಯು ಆಲ್, ಆದಷ್ಟು ಬೇಗ ಸಿಕ್ತೇನೆ” ಅಂತ ಹೇಳಿ ಟಾಟಾ ಬಾಯ್ ಬಾಯ್ ಹೇಳಿದ್ರು. ಅರವಿಂದ್ ಕಣ್ಣಲ್ಲಿ ದಿವ್ಯ ವಾಯ್ಸ್ ಕೇಳಿ ನೋಡಿದ ಖುಷಿ ಕಾಣಿಸ್ತಾ ಇತ್ತು.

    https://twitter.com/SHREEDHARB8/status/1392279704862826500

    ಅರವಿಂದ್ ಅವರಿಗೆ ಖುಷಿ ಆಗಿದ್ದರೆ ಇತ್ತ ಅಭಿಮಾನಿಗಳು ಉಡುಪಿ ಹೋಟೆಲ್ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಇಲ್ಲಿಯವರೆಗಿನ ಎಪಿಸೋಡ್‍ನಲ್ಲಿ ಈ ವಿಚಾರ ಪ್ರಸ್ತಾಪವೇ ಆಗಿಲ್ಲ. ಲೈವ್‍ನಲ್ಲಿ ಈ ಬಗ್ಗೆ ಮಾತನಾಡಿರಬಹುದು ಎಂದು ಹೇಳುತ್ತಿದ್ದಾರೆ.

    ಇನ್ನು ಕೆಲವರು ಹೋಟೆಲ್ ಉದ್ಯಮದಲ್ಲಿ ಉಡುಪಿ ಹೋಟೆಲ್ ಅಂದ್ರೆ ಒಂದು ಹೆಸರು ಇದೆ. ಅಷ್ಟೇ ಅಲ್ಲದೇ ಅರವಿಂದ್ ಮಣಿಪಾಲದವರು. ಹೀಗಾಗಿ ಇವರಿಬ್ಬರು ಅಡುಗೆ ಮನೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಕಾರಣ ಅದಕ್ಕೆ ಮುಂದೆ ಉಡುಪಿ ಹೋಟೆಲ್ ಇಡೋಣ ಎಂದು ಸುಮ್ನೆ ತಮಾಷೆ ಮಾಡುತ್ತಿರಬೇಕು. ಅದಕ್ಕಾಗಿ ಈ ವಿಚಾರವನ್ನು ಪ್ರಸ್ತಾಪ ಮಾಡಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಅರವಿಂದ್ ಮತ್ತು ದಿವ್ಯಾ ಬಿಗ್ ಬಾಸ್‍ಗೆ ಯಾಮಾರಿಸಿ ಯಾವುದೋ ವಿಷಯವನ್ನು ನೇರವಾಗಿ ಹೇಳಲು ಸಾಧ್ಯವಾಗದ ಕಾರಣ ಕೋಡ್ ವರ್ಡ್ ನಲ್ಲಿ ಸಂಭಾಷಣೆ ಮಾಡುತ್ತಿರಬೇಕು. ಆ ಕೋಡ್ ವರ್ಡ್ ಈ ಉಡುಪಿ ಹೋಟೆಲ್ ಆಗಿರಬಹುದು ಎಂದು ಹೇಳುತ್ತಿದ್ದಾರೆ.

    ಒಂದು ವೇಳೆ ಬಿಗ್ ಬಾಸ್ ಶೋ ಮುಂದುವರಿಯುತ್ತಿದ್ದರೆ ಸುದೀಪ್ ಅವರು ಈ ಪ್ರಶ್ನೆಯನ್ನು ಗ್ಯಾರಂಟಿ ಕೇಳುತ್ತಿದ್ದರು. ಆದರೆ ಶೋ ಈಗ ಅರ್ಧಕ್ಕೆ ನಿಂತಿದೆ. ಮುಂದೆ ಸಾಮಾಜಿಕ ಜಾಲತಾಣದಲ್ಲಿ ಈ ಪ್ರಶ್ನೆಗೆ ಉತ್ತರ ಸಿಗಬಹುದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

  • ದಿವ್ಯಳ ವಾಯ್ಸ್ ಕೇಳಿ ಅರವಿಂದ್‍ಗೆ ಕಣ್ತುಂಬಿ ಬಂತು

    ದಿವ್ಯಳ ವಾಯ್ಸ್ ಕೇಳಿ ಅರವಿಂದ್‍ಗೆ ಕಣ್ತುಂಬಿ ಬಂತು

    ನೆ ಮಂದಿಗೆ ಇದು ಕೊನೆಯ ದಿನ. ದಿವ್ಯ ಯು ಅವರನ್ನ ಮನೆ ಮಂದಿ ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಮಿಸ್ ಮಾಡಿಕೊಳ್ಳೋದಕ್ಕಿಂತ ಹೆಚ್ಚಾಗಿ ಆಕೆಯ ಆರೋಗ್ಯ ಬಗ್ಗೆ ಕಾಳಜಿ ಇತ್ತು. ಹೀಗಾಗಿ ಚಕ್ರವರ್ತಿ ಅವರು ಕೂಡ ಸ್ಪೆಷಲ್ ಆಗಿ ಬಿಗ್ಬಾಸ್ ಹತ್ರ ರಿಕ್ವೆಸ್ಟ್ ಮಾಡಿದ್ರು. ದಿವ್ಯಳ ವಾಯ್ಸ್ ನೋಟ್ ಕಳ್ಸಿ ಅಂತ. ಅದರಂತೆ ಮನೆಮಂದಿಯ ಕಡೆ ದಿನಗಳ ಎಲ್ಲಾ ಆಸೆಗಳನ್ನು ಬಿಗ್ಬಾಸ್ ಈಡೇರಿಸಿದ್ರು. ಇದನ್ನು ಕೂಡ ಈಡೇರಿಸಿಯೇ ಬಿಟ್ರು. ದಿವ್ಯಳಿಂದ ವಾಯ್ಸ್ ನೋಟ್ ಬಂದಿತ್ತು.

    ಹಾಯ್ ಸರ್ಪೈಸ್ ಅಂತ ದಿವ್ಯ ಮಾತು ಶುರು ಮಾಡಿದ್ರು. ದಿವ್ಯಳ ವಾಯ್ಸ್ ಎಲ್ರಿಗೂ ಬೇಗ ಗೊತ್ತಾಗುತ್ತೆ. ಎಲ್ಲರು ಹೇಗಿದ್ದೀರಾ ಎಂದಾಕ್ಷಣ ಅರವಿಂದ್ ಕಣ್ಣು ಅರಳಿತು. ದಿವ್ಯ ಮಾತಾಡುತ್ತಾ ಎಲ್ಲರನ್ನು ವಿಚಾರಿಸಿಕೊಂಡ್ರು. ನೀವೆಷ್ಟು ಮಿಸ್ ಮಾಡಿಕೊಳ್ತಿರೋ ನಾನು ನಿಮ್ಮನ್ನೆಲ್ಲಾ ಅಷ್ಟೆ ಮಿಸ್ ಮಾಡಿಕೊಳ್ತೀನಿ ಶುಭಾ ಅಕ್ಕ ನಿನ್ನ ತುಂಬಾ ಮಿಸ್ ಮಾಡ್ಕೋಳ್ತೀನಿ. ನಾನಿಲ್ಲ ಅಂದಾಗ ನೀನು ಅತ್ತಿದ್ದು ನೋಡಿ ನಂಗು ಅಳು ಬಂತು, ಈಗ ಯಾರನ್ನ ಗೋಳೊಯ್ಕೋಳ್ತೀಯಾ, ವೈಶ್ ನೀನು ನಂಗೆ ಹುಷಾರಿಲ್ಲ ಅಂದಾಗ ಎಷ್ಟು ಚೆನ್ನಾಗ್ ನೋಡ್ಕೊಂಡೆ. ಪ್ರಶಾಂತ್ ಬ್ರೋ ಸೆಕೆಂಡ್ ಟೈಮ್ ಕ್ಯಾಪ್ಟನ್ ಆಗಿದ್ದೀರಾ, ಕಂಗ್ರಾಟ್ಸ್ ಹಾಗೇ ಕ್ಯಾಪ್ಟನ್ ಆದಾಗ ನಂಗೆ ಡೆಡಿಕೇಟ್ ಮಾಡಿದ್ದಕ್ಕೆ ಥ್ಯಾಂಕ್ಸ್ ಅಂದ್ರು. ಆಮೇಲೆ ಶಾಮ ನಾನ್ ಚೆನ್ನಾಗಿದ್ದೀನಿ ನಿನ್ ಸಾಂಗ್ ಇಷ್ಟ ಆಯ್ತು. ನೀನು ಮತ್ತು ರಘು ಪ್ರೇ ಮಾಡಿದ್ದು ಇಷ್ಟ ಆಯ್ತು. ಮಂಜ ಸಿಗೋ ನೀನು ಮಾಡ್ತೀನಿ. ಸ್ಟ್ರೆಚ್ಚರ್ ಸ್ಟ್ರೆಚ್ಚರ್ ಅಂತ ಹೇಳಿ ಅದ್ರಲ್ಲೆ ಕಳ್ಸಿದ್ದಿಯಾ ಅಂತ ರೇಗಿದ್ಲು.

    ಅರವಿಂದ್ ನನ್ನು ಯಾವಾಗ ಮಾತಾಡಿಸ್ತಾಳೆ ಅಂತ ಕಾಯ್ತಿದ್ದ ಪ್ರೇಕ್ಷಕರಿಗೆ ಕಡೆಗೆ ಅರವಿಂದ್ ನನ್ನು ಮಾತಾಡಿಸಿದ್ರು ದಿವ್ಯ. ಹಾಯ್ ಅವಿ ಹೇಗಿದ್ದೀರಾ ಅಂದ ಆ ಧ್ವನಿಯಲ್ಲೇ ತುಂಬಾ ಮಿಸ್ ಮಾಡಿಕೊಂಡ ಭಾವ ಅಡಗಿತ್ತು. ನಿಮ್ ಬಗ್ಗೆ ಏನ್ ಹೇಳಿದ್ರು ಎಷ್ಟ್ ಹೇಳಿದ್ರು ಕಡಿಮೇನೆ, ಖುಷಿ ಬೇಜಾರ್ ಏನ್ ಆದ್ರೂ ನನ್ ಹತ್ರ ಹೇಳ್ಕೋಳ್ತಾ ಇದ್ರಿ. ನಂಗೊತ್ತು ನಾನ್ ಇಲ್ಲ ಅಂದ್ರೆ ಬೇಜಾರಾಗಿರ್ತೀರಾ. ಯಾವಾಗ್ಲೂ ನಗ್ತಾ ಇರಿ, ಗೇಮ್ ಚೆನ್ನಾಗ್ ಆಡಿ, ತುಂಬಾ ಮಿಸ್ ಮಾಡ್ಕೋಳ್ತಾ ಇದ್ದೀನಿ, ಆರಾಮಾಗಿ ಇದ್ದೀನಿ. ಉಡುಪಿ ಹೊಟೇಲ್ ಬಗ್ಗೆ ಥಿಂಕ್ ಮಾಡಿ, ಪ್ರೀತಿ ಇರ್ಲಿ. ಮಿಸ್ ಯು ಆಲ್, ಆದಷ್ಟು ಬೇಗ ಸಿಕ್ತೇನೆ ಅಂತ ಹೇಳಿ ಟಾಟಾ ಬಾಯ್ ಬಾಯ್ ಹೇಳಿದ್ರು. ಅರವಿಂದ್ ಕಣ್ಣಲ್ಲಿ ದಿವ್ಯ ವಾಯ್ಸ್ ಕೇಳಿ ನೋಡಿದ ಖುಷಿ ಕಾಣಿಸ್ತಾ ಇತ್ತು.

    ಊಟಕ್ಕೆ ಕುಂತಾಗ ಪ್ರಶಾಂತ್ ಹತ್ತಿರ ನನ್ನನ್ನ ಲಾಸ್ಟ್ ಗೆ ತಗೊಂಡ್ಲು, ನಾನು ಕೂಡ ಅವ್ಳನ್ನ ಲಾಸ್ಟ್ ಗೆ ತಗೊಳೋದ್ ಅಲ್ವಾ ಅದ್ಕೆ ಲಾಸ್ಟ್ ನಲ್ಲೇ ತಗೊಂಡ್ಲು ಅಂತ ನಗ್ತಾ ನಗ್ತಾ ದಿವ್ಯಳ ಬುದ್ಧಿವಂತಿಕೆಯನ್ನ ಹೊಗಳಿದ್ರು. ಆಮೇಲೆ ಕಣ್ಮಣಿ ಹತ್ರಾನು ಥ್ಯಾಂಕ್ಸ್ ಹೇಳಿದ್ರು. ಇವತ್ತು ದಿವ್ಯ ಹಾಗೂ ಅರವಿಂದ್ ಮ್ಯಾಚಿಂಗ್ ಡ್ರೆಸ್ ಹಾಕೋಳೋದಕ್ಕೆ ಪ್ಯ್ಲಾನ್ ಮಾಡಿದ್ರು, ಆದ್ರೆ ದಿವ್ಯ ಇಲ್ಲದ ಕಾರಣ ಒಬ್ರೆ ಅದೇ ಡ್ರೆಸ್ ಹಾಕೊಂಡಿದ್ರು.

     

  • ವೈಷ್ಣವಿ ಕೆಲಸಕ್ಕೆ ಅರವಿಂದನ ಮೆಚ್ಚುಗೆಯ ಚಪ್ಪಾಳೆ

    ವೈಷ್ಣವಿ ಕೆಲಸಕ್ಕೆ ಅರವಿಂದನ ಮೆಚ್ಚುಗೆಯ ಚಪ್ಪಾಳೆ

    ದೊಡ್ಮನೆಯಲ್ಲಿ ‘ಜೀವನವೇ ಶೂನ್ಯ’ ಎಂದು ಹೇಳುತ್ತಾ ಮನೆ ಮಂದಿಗೆ ಆಗಾಗ ಒಂದು ಸಾಲಿನ ಜೋಕ್ ಹೇಳಿ ನಗಿಸುತ್ತಿದ್ದ ವೈಷ್ಣವಿ ಅವರ ಕೆಲಸವನ್ನು ಅರವಿಂದ್ ಹಾಡಿ ಹೊಗಳಿದ್ದಾರೆ.

    ಪ್ರಶಾಂತ್ ಸಂಬರಗಿ ಮತ್ತು ಅರವಿಂದ್ ಗಾರ್ಡನ್ ಏರಿಯಾದಲ್ಲಿ ಕುಳಿತು ಕಿಚನ್ ಡಿಪಾರ್ಟ್‍ಮೆಂಟ್ ಬಗ್ಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ,”ಡೈನಿಂಗ್ ಟೇಬಲ್‍ನಲ್ಲಿ ಕುಳಿತು ಮಾತನಾಡುವುದು ಬಹಳ ಸುಲಭ. ಕೆಲಸ ಮಾಡುವಾಗ ಏನು ಕಷ್ಟ ಅನ್ನೋದು ಗೊತ್ತಾಗುತ್ತದೆ”ಎಂದು ಅರವಿಂದ್ ಹೇಳುತ್ತಾರೆ.

     

    ಇದಕ್ಕೆ ಪ್ರಶಾಂತ್ ಸಂಬರಗಿ,”ಹೌದು. ಬೆಳಗ್ಗೆ 6:30ಕ್ಕೆ ಎದ್ದು ಮಾಡುತ್ತಿದ್ದಳು” ಎಂದು ತಮ್ಮ ಒಪ್ಪಿಗೆಯನ್ನು ಸೂಚಿಸುತ್ತಾರೆ. ತನ್ನ ಮಾತನ್ನು ಮುಂದುವರಿಸಿದ ಅರವಿಂದ್,”ನಾವು ಏಳುತ್ತಲೇ ಇರಲಿಲ್ಲ. ಅರ್ಧ ಮುಕ್ಕಾಲು ಗಂಟೆಯ ಮೊದಲೇ ಕೆಲಸ ಮಾಡಿ ಮುಗಿಸುತ್ತಿದ್ದಳು. ಇಷ್ಟು ಮಾಡಿಯೂ ಬಾತ್ ರೂಂ ಕೊಡುತ್ತಿರಲಿಲ್ಲ. ಒಬ್ಬರನ್ನು ದೂರುವುದು ಸುಲಭ. ಆದರೆ ಅವರ ಕಷ್ಟ ಯಾರಿಗೂ ಗೊತ್ತಾಗುವುದಿಲ್ಲ. ದೂರು ಕೊಟ್ಟವರಿಗೆ ಈಗ ಗೊತ್ತಾಗುತ್ತಿರಬಹುದು. ಯಾರೂ ಇಲ್ಲಿ ಸರ್ವಿಸ್ ಮಾಡಲು ಬಂದಿಲ್ಲ. ಮನೆಯಲ್ಲಿ ಎಲ್ಲ ರೀತಿಯ ಮಕ್ಕಳು ಇರುತ್ತಾರೆ. ಹೊಂದಾಣಿಕೆ ಮಾಡಿಕೊಂಡು ಹೋಗಬೇಕು” ಎಂದು ಹೇಳಿ ವೈಷ್ಣವಿ ಕೆಲಸಕ್ಕೆ ಮೆಚ್ಚುಗೆ ಸೂಚಿಸುತ್ತಾರೆ.

    ಅರವಿಂದ್ ವೈಷ್ಣವಿ ಅವರನ್ನು ಹೊಗಳಲು ಕಾರಣವಿದೆ. ದೊಡ್ಮನೆಯಲ್ಲಿ ವೈಷ್ಣವಿ, ರಘು, ದಿವ್ಯಾ, ಅರವಿಂದ್ ಹೆಚ್ಚಾಗಿ ಕಿಚನ್ ವಿಭಾಗವನ್ನು ನೋಡಿಕೊಳ್ಳುತ್ತಿದ್ದರು. ಈ ನಾಲ್ಕು ಮಂದಿಯೂ ಬಹಳ ಹೊಂದಾಣಿಕೆಯಿಂದ ಎಲ್ಲ ಅಡುಗೆ ಕೆಲಸಗಳನ್ನು ಮಾಡುತ್ತಿದ್ದರು. ವೈಷ್ಣವಿ, ದಿವ್ಯಾ ಆಗಬಹುದು. ರಘು, ಅರವಿಂದ್ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಬಂದಿರಲಿಲ್ಲ.

    ವೈಷ್ಣವಿ ಮತ್ತು ದಿವ್ಯಾ ಅಡುಗೆ ಮಾಡುತ್ತಿದ್ದರೆ ಅರವಿಂದ್, ರಘು ಇತರ ಕೆಲಸವನ್ನು ಮಾಡಿ ಟಾಸ್ಕ್ ಇದ್ದರೂ ಸರಿಯಾದ ಸಮಯಕ್ಕೆ ಮಧ್ಯಾಹ್ನದ ಊಟ, ರಾತ್ರಿಯ ಊಟಕ್ಕೆ ತಯಾರು ಮಾಡುತ್ತಿದ್ದರು. ಅದರಲ್ಲೂ ದಿವ್ಯಾ ಮತ್ತು ವೈಷ್ಣವಿ ಇಬ್ಬರು ಒಂದೇ ವಯಸ್ಸಿನವರಾಗಿದ್ದರು. ಇಬ್ಬರನ್ನು ಬಿಗ್‍ಬಾಸ್ ವೀಕ್ಷಕರು ಅಕ್ಕ ತಂಗಿಯರಿಗೆ ಹೋಲಿಸುತ್ತಿದ್ದರು. ಅನಾರೋಗ್ಯ ಬಂದಾಗಲೂ ಅರವಿಂದ್ ಜೊತೆ ದಿವ್ಯಾ ಅವರನ್ನು ವೈಷ್ಣವಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಈ ನಾಲ್ಕು ಮಂದಿಯೂ ಕೆಲಸ ಮುಗಿಸಿದ ಮೇಲೆ ಸ್ವಚ್ಛವಾಗಿ ಕಿಚನ್ ಇಡುತ್ತಿದ್ದರು. ವಾರದ ರೇಷನ್‍ಗೆ ಸಮಸ್ಯೆ ಆಗದಂತೆ ಕೆಲಸ ಮುಗಿಸುತ್ತಿದ್ದರು. ಈ ಕಾರಣಕ್ಕೆ ಅರವಿಂದ್ ಅವರು ವೈಷ್ಣವಿಯ ಕೆಲಸವನ್ನು ನೋಡಿ ಪ್ರೀತಿಯಿಂದ ಚಪ್ಪಾಳೆ ಹೊಡೆದಿದ್ದಾರೆ.

    ಟಾಸ್ಕ್ ಮುಗಿದ ನಂತರ ಎಲ್ಲರಿಗೂ ಹಸಿವಾಗಿರುತ್ತದೆ. ಈ ವೇಳೆ ಊಟ ಆಯ್ತಾ? ಇನ್ನು ಎಷ್ಟು ಹೊತ್ತು ಬೇಕು? ಎಂದು ಆಗಾಗ ವೈಷ್ಣವಿಗೆ ಪ್ರಶ್ನೆ ಕೇಳುತ್ತಿರುತ್ತಾರೆ. ಹೀಗೆ ಸ್ಪರ್ಧಿಗಳು ಕೇಳುತ್ತಿದ್ದರೂ ವೈಷ್ಣವಿ ಸಮಾಧಾನದಿಂದ ಉತ್ತರ ನೀಡಿ ಎಲ್ಲವನ್ನು ನಿಭಾಯಿಸುತ್ತಿದ್ದರು. ಈ ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿ ವೈಷ್ಣವಿ ಅವರನ್ನು ‘ಅನ್ನಾದಾತೆ’ ಎಂದು ಕರೆಯುತ್ತಿದ್ದರು.

  • ವಯಸ್ಸಾಗಿದೆ ಫ್ಲರ್ಟ್ ಮಾಡ್ಬಾರ್ದು- ಸಂಬರಗಿ, ಅರವಿಂದ್ ಗುಸುಗುಸು

    ವಯಸ್ಸಾಗಿದೆ ಫ್ಲರ್ಟ್ ಮಾಡ್ಬಾರ್ದು- ಸಂಬರಗಿ, ಅರವಿಂದ್ ಗುಸುಗುಸು

    ಯಾವಾಗಲೂ ಒಬ್ಬರಿಗೊಬ್ಬರು ಜಗಳವಾಡುತ್ತಿದ್ದ ಅರವಿಂದ್ ಹಾಗೂ ಪ್ರಶಾಂತ್ ಸಂಬರಗಿ ಇದೀಗ ಒಟ್ಟಿಗೆ ಕೂತು ಗುಸು ಗುಸು ಮಾತನಾಡಿದ್ದು, ಅದೂ ಸಹ ಹುಡುಗಿಯರ ಜೊತೆ ಫ್ಲರ್ಟ್ ಮಾಡುವ ವಿಚಾರದ ಕುರಿತು ಗಂಭೀರ ಚರ್ಚೆ ನಡೆಸಿದ್ದಾರೆ.

    ಚಕ್ರವರ್ತಿಯವರು ಪ್ರಿಯಾಂಕಾ ಜೊತೆ ಹೆಚ್ಚು ಮಾತನಾಡುವುದು ತಿಳಿದೇ ಇದೆ. ಆದರೆ ಪ್ರಿಯಾಂಕಾ ಚಕ್ರವರ್ತಿ ಅವರ ಜೊತೆ ಮಾತನಾಡಲು ಹಿಂಜರಿಗೆ ಇರುವುದು ಸಹ ಗೊತ್ತಿರುವ ವಿಚಾರ. ಈ ಬಗ್ಗೆ ಇದೀಗ ಗಾರ್ಡನ್ ಏರಿಯಾದಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಅರವಿಂದ್ ಒಟ್ಟಿಗೆ ಕೂತು ಮಾತನಾಡಿದ್ದಾರೆ. ಹುಡುಗಿಯರಿಗೆ ನೀವು ದೇವತೆ, ಹಾಗೇ ಹೀಗೆ ಎಂದು ಮಾತನಾಡುತ್ತಾರೆ. ಆ ರೀತಿ ಮಾತನಾಡಬೇಡ ನಾಟಕೀಯವಾಗುತ್ತೆ ಎಂದು ಹಲವು ಬಾರಿ ಅವರಿಗೆ ತಿಳಿ ಹೇಳಿದ್ದೇನೆ. ತುಂಬಾ ನಾಟಕೀಯ ಎಂದು ಚಕ್ರವರ್ತಿ ಹೆಸರು ಪ್ರಸ್ತಾಪಿಸದೇ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

    ನಾನು ಊಟ ಬಡಿಸುವವರೆಗೆ ಊಟ ಮಾಡಬೇಡಿ, ನೀನು ಕಾಫಿ ಮಾಡಿಕೊಟ್ಟರೆ ದೇವತೆ ಮಾಡಿ ಕೊಟ್ಟಂಗಿರುತ್ತೆ ಮಾಡಿಕೊಡು ಎನ್ನುವುದು, ದೇವಲೋಕದಲ್ಲಿ ಯಾರಾದರೂ ತಂಗಿ ಇದ್ದರೆ ನಿನ್ನಂತೆ ಇರಲಿ ಎಂದು ವೈಷ್ಣವಿಗೆ ಹೇಳುವುದು ಸರಿಯಲ್ಲ. ಒಂದು ಸಾರಿ ಆದರೆ ಓಕೆ ಪ್ರತಿ ಬಾರಿ ಹೀಗೆ ಹೇಳಿದೆ ಒಳ್ಳೆಯದಲ್ಲ, ಹೀಗೆ ಮಾಡಬೇಡ, ಅತಿಯಾಗಿ ಕಾಣುತ್ತೆ, ಫೇಕ್ ಆಗಿ ಕಾಣುತ್ತೆ, ನಮ್ಮ ವಯಸ್ಸಿಗೆ ಅದು ಸರಿ ಕಾಣುವುದಿಲ್ಲ ಎಂದು ಪಬ್ಲಿಕ್‍ನಲ್ಲೂ ಹೇಳಿದ್ದೇನೆ, ಪ್ರೈವೇಟ್ ಆಗಿಯೂ ಹೇಳಿದ್ದೇನೆ ಎಂದು ಸಂಬರಗಿ ಹೇಳಿದ್ದಾರೆ.

    ಪ್ರಿಯಾಂಕಾ ಜೊತೆ ಫ್ಲರ್ಟ್ ಮಾಡಬೇಡ, ಸರಿ ಕಾಣುವುದಿಲ್ಲ, ಆ ಕಡೆಯಿಂದ ಅವಳು ಫ್ಲರ್ಟ್ ಮಾಡಿದರೆ ನೀನು ಫ್ಲರ್ಟ್ ಮಾಡು, ಫೋರ್ಸ್ ಮಾಡಬಾರದು. ಹಾಗೆ ಫ್ಲರ್ಟ್ ಮಾಡುವ ಅವಶ್ಯಕತೆ ಇಲ್ಲ ಬಾಸ್ ಎಂದು ಅರವಿಂದ್ ಬಳಿ ಹೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅರವಿಂದ್, ಅವಶ್ಯಕತೆ ಅಂತಲ್ಲ, ಮಾಡಬಾರದು ಎಂದಿದ್ದಾರೆ.

  • ಬಿಗ್‍ಬಾಸ್ ಮನೆಗೆ ಅಪ್ಪಳಿಸಿತು ಲಾಕ್‍ಡೌನ್ ಸುದ್ದಿ – ಬಿಕ್ಕಿ ಬಿಕ್ಕಿ ಅತ್ತ ಸ್ಪರ್ಧಿಗಳು

    ಬಿಗ್‍ಬಾಸ್ ಮನೆಗೆ ಅಪ್ಪಳಿಸಿತು ಲಾಕ್‍ಡೌನ್ ಸುದ್ದಿ – ಬಿಕ್ಕಿ ಬಿಕ್ಕಿ ಅತ್ತ ಸ್ಪರ್ಧಿಗಳು

    ಳೆದ 71 ದಿನಗಳ ಕಾಲ ದೊಡ್ಮನೆಯಲ್ಲಿ ಟಾಸ್ಕ್, ಮನರಂಜನೆ, ಹರಟೆಯಲ್ಲಿ ತೊಡಗಿದ್ದ ಸ್ಪರ್ಧಿಗಳು ಕರ್ನಾಟಕದಲ್ಲಿ ಲಾಕ್‍ಡೌನ್ ಘೋಷಣೆಯಾಗಿರುವ ಸುದ್ದಿಯನ್ನು ಕೇಳಿ ಶಾಕ್ ಆಗಿದ್ದಾರೆ.

    ಹೋಟೆಲಿನಲ್ಲಿ ಕ್ವಾರಂಟೈನ್ ಬಳಿಕ ಮನೆ ಪ್ರವೇಶಿಸಿದ್ದ ಸ್ಪರ್ಧಿಗಳಿಗೆ ಹೊರ ಜಗತ್ತಿನ ಸಂಪರ್ಕ ಕಡಿತವಾಗಿತ್ತು. ಮೊಬೈಲ್, ಸಾಮಾಜಿಕ ಜಾಲತಾಣದಿಂದ ಹೊರಗಡೆ ಇದ್ದ ಇವರಿಗೆ ಹೊರ ಪ್ರಪಂಚದಲ್ಲಿ ಏನು ನಡೆಯುತ್ತದೆ ಎನ್ನುವುದು ತಿಳಿದಿರುವುದಿಲ್ಲ. ಇವರ ಜೊತೆ ನೇರವಾಗಿ ಸುದೀಪ್ ಬಿಟ್ಟರೆ ಬೇರೆಯವರ ಸಂಪರ್ಕ ಇರುತ್ತಿರಲಿಲ್ಲ.

    ಬಿಗ್ ಬಾಸ್ ಮನೆಯಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಸ್ಪರ್ಧಿಗಳಿಗೆ 71ನೇ ದಿನ ಬ್ರೇಕಿಂಗ್ ನ್ಯೂಸ್ ತೋರಿಸಲಾಗುತ್ತದೆ. ಈ ವೇಳೆ ಕರ್ನಾಟಕದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ ಕೊರೊನಾ ಸೋಂಕು ಸುದ್ದಿಯನ್ನು ಆರಂಭದಲ್ಲಿ ಪ್ರಸಾರ ಮಾಡಲಾಗುತ್ತದೆ. ಬಳಿಕ ಸಿಎಂ ಯಡಿಯೂರಪ್ಪನವರು ರಾಜ್ಯಾದ್ಯಂತ ಸಂಪೂರ್ಣ ಲಾಕ್‍ಡೌನ್ ಘೋಷಣೆ ಮಾಡಿದ ತುಣುಕನ್ನು ತೋರಿಸಲಾಗುತ್ತದೆ.

    ಇಲ್ಲಿಯವರೆಗೆ ಹೊರ ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯದ ಸ್ಪರ್ಧಿಗಳು ಲಾಕ್‍ಡೌನ್ ಘೋಷಣೆಯ ಸುದ್ದಿಯನ್ನು ಕೇಳುತ್ತಿದ್ದಂತೆ ಶಾಕ್‍ಗೆ ಒಳಗಾಗುತ್ತಾರೆ. ಸ್ಪರ್ಧಿಗಳು ಬಿಕ್ಕಿ ಬಿಕ್ಕಿ ಅಳತೊಡಗುತ್ತಾರೆ. ಇನ್ನು ಮೂರು ವಾರಗಳ ಕಾಲ ಮನೆಯಲ್ಲಿರಬಹುದು ಎಂಬ ಕನಸು ಛಿದ್ರಗೊಳ್ಳುತ್ತದೆ.ಪ್ರಶಾಂತ್ ಸಂಬರಗಿ ಎರಡು ಕೈಯನ್ನು ತಲೆ ಮೇಲೆ ಹಾಕಿ ಕಣ್ಣೀರು ಹಾಕುತ್ತಾರೆ.

    ಲಾಕ್‍ಡೌನ್ ಘೋಷಣೆಯಾಗಿದ್ದು ಚಿತ್ರೀಕರಣಕ್ಕೆ ಅನುಮತಿ ನೀಡದ ಕಾರಣ ಬಿಗ್ ಬಾಸ್ 8ನೇ ಅವೃತ್ತಿಯನ್ನು ವಾಹಿನಿ ನಿಲ್ಲಿಸಿದೆ. ಈ ಸಂಬಂಧ ಮೇ 8ರಂದು ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಪೋಸ್ಟ್ ಮಾಡಿ ನಿಲ್ಲಿಸುವ ವಿಚಾರವನ್ನು ತಿಳಿಸಿದ್ದರು. ನೂರಾರು ದಿನಗಳ ಕೆಲಸ. ನೂರಾರು ಜನರ ಕೆಲಸ. ಎಲ್ಲವನ್ನೂ ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ ಒಂದು ತಂಡದ ಕನಸು ಅರ್ಧಕ್ಕೇ ನಿಂತಿದೆ. ಕಷ್ಟದ ತೀರ್ಮಾನವಾದರೂ ಸಮಾಧಾನ ಕೊಟ್ಟ ತೀರ್ಮಾನ ಎಂದು ಹೇಳಿದ್ದರು.

  • ನನ್ನ ಮೇಲೆ ವರ್ಷಕ್ಕೆ 3 ಕೋಟಿ ಇನ್ವೆಸ್ಟ್ ಮಾಡ್ತಾರೆ

    ನನ್ನ ಮೇಲೆ ವರ್ಷಕ್ಕೆ 3 ಕೋಟಿ ಇನ್ವೆಸ್ಟ್ ಮಾಡ್ತಾರೆ

    ಬಿಗ್‍ಬಾಸ್ ಶೋ ಆರಂಭದ ದಿನ ಅರವಿಂದ್ ಅವರು ವೇದಿಕೆಗೆ ಬೈಕನ್ನು ಏರಿ ಬಂದಿದ್ದರು. ಈ ಕಾರ್ಯಕ್ರಮಕ್ಕೆ ನಾನು ಅಂದು ಹೇಗೆ ತಯಾರಾಗಿದ್ದೆ ಎಂಬುದನ್ನು ಅರವಿಂದ್ ಅವರು ವಿವರಿಸಿದ್ದಾರೆ.

    ಅರವಿಂದ್, ಚಕ್ರವರ್ತಿ ಚಂದ್ರಚೂಡ್ ಮತ್ತು ಪ್ರಶಾಂತ್ ಸಂಬರಗಿ ಅವರು ಲಿವಿಂಗ್ ಏರಿಯಾದಲ್ಲಿ ಬೈಕ್ ಜಾಕೆಟ್ ಬಗ್ಗೆ ಮಾತುಕತೆ ನಡೆಸುತ್ತಿದ್ದರು. ಮಾತುಕತೆಯ ಸಮಯದಲ್ಲಿ,”ನಾನು ಬೈಕಿನಲ್ಲಿ ಸ್ಟೇಜ್‍ಗೆ ಬಂದೆ” ಎಂದು ಅರವಿಂದ್ ಹೇಳುತ್ತಾರೆ. ಇದಕ್ಕೆ ಚಕ್ರವರ್ತಿ,”ಬೈಕನ್ನು ನೀವು ಹಾರಿಸಿದ್ರಾ?” ಎಂದು ಪ್ರಶ್ನಿಸುತ್ತಾರೆ. ಆಗ ಅರವಿಂದ್,”ನಾನು ಬೈಕ್ ಹಾರಿಸಿಲ್ಲ. ಬೈಕಿನಲ್ಲೇ ಇಳ್ಕೊಂಡು ಬಂದೆ. 5 ನಿಮಿಷ ಮೊದಲು ಪ್ರಾಕ್ಟಿಸ್ ಮಾಡಿದ್ದೆ. ಎಲ್ಲೆಲ್ಲಿ ಸ್ಟಾಪ್ ಕೊಡಬೇಕು ಎಂದು ಹೇಳಿದ್ರು. ಅದೇ ರೀತಿ ಮಾಡಿದೆ” ಎಂದು ಉತ್ತರ ನೀಡುತ್ತಾರೆ.

    ಪ್ರಶಾಂತ್ ಸಂಬರಗಿ,”450 ಆರ್‍ಆರ್ ಬೈಕ್.. ಸಿಕ್ಕಾಪಟ್ಟೆ ಸೌಂಡ್ ಇರುತ್ತಾ”ಅಂತ ಪ್ರಶ್ನೆ ಮಾಡ್ತಾರೆ. ಇದಕ್ಕೆ ಅರವಿಂದ್, “ಅದು 450 ಆರ್‍ಆರ್ ಟಿವಿಎಸ್ ಫ್ಯಾಕ್ಟರಿ ಬೈಕ್. ನಾನು ಸರ್ಕಿಟ್ ರೇಸ್‍ನಲ್ಲಿ ಇಲ್ಲ. ಈಗ ರೇಸರ್ ಗಳು ಮೊಣಕಾಲು ಅಲ್ಲ. ಭುಜವನ್ನು ಟಚ್ ಮಾಡುತ್ತಾರೆ. ಈ ವೇಳೆ ಬೈಕ್ 120 ರಲ್ಲಿ ಇರುತ್ತದೆ” ಎಂದು ವಿವರಿಸುತ್ತಾರೆ.

    ಈ ಹಿಂದೆ ಗಾರ್ಡನ್ ಏರಿಯಾದಲ್ಲಿ ತಮ್ಮ ಬೈಕ್ ರೇಸ್ ಜೀವನದ ಅನುಭವ ಕಥೆಯನ್ನು ರಾಜೀವ್, ನಿಧಿ, ಮಂಜು ಅವರಿಗೆ ಅರವಿಂದ್ ವಿವರಿಸುತ್ತಿದ್ದರು. ರಾಜೀವ್ ಅವರು,”ಬೇರೆ ಕಂಪನಿಯರು ಅಪ್ರೋಚ್ ಮಾಡಿಲ್ವ?” ಎಂದು ಕೇಳಿದ್ದರು. ಅದಕ್ಕೆ ಅರವಿಂದ್,”ನನ್ನನ್ನು ಅಪ್ರೋಚ್ ಮಾಡಿದ್ರು. ಸುಮ್ನೆ ದುಡ್ಡು ಸಿಗುತ್ತೆ ಎಂಬ ಕಾರಣಕ್ಕೆ ಬೇರೆ ಕಡೆ ಹೋಗಬಾರದು. ನನಗೆ ಕಂಪನಿ ನನಗೆ ಬಹಳಷ್ಟು ನೀಡಿದೆ. ಒಮ್ಮೆ ಬದಲಾವಣೆ ಮಾಡಿದ್ರೆ ಪ್ರೋಗ್ರಾಂ, ಕ್ರೀವ್ ಎಲ್ಲವೂ ಬದಲಾವಣೆ ಮಾಡಬೇಕಾಗುತ್ತದೆ. ಮತ್ತೆ ಅದಕ್ಕೆ ಅಡ್ಜಸ್ಟ್ ಆಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ” ಎಂದು ಹೇಳುತ್ತಾರೆ.

    “ನಮ್ಮ ಜೀವನದಲ್ಲಿ 45 ವರ್ಷ ಓಡಿಸಬಹುದು. ಆದರೆ ಈ ರೀತಿ ಗಾಯ ಮಾಡಿದ್ರೆ ಯಾರೂ ಓಡಿಸಲ್ಲ. ಮುಂದೆ ನಾನು 5 ವರ್ಷ ಆರಾಮವಾಗಿ ಓಡಿಸಬಹುದು. ಎಲ್ಲ ವಿಷಯಗಳು ನಮ್ಮ ಪರವಾಗಿ ಇರಬೇಕು. ಫಿಟ್‍ನೆಸ್, ಬೈಕ್ ಫಾರ್ ಆಗಿರಬೇಕು, ಮುಖ್ಯವಾಗಿ ಇಂಜುರಿ ಫ್ರೀ ಆಗಿರಬೇಕು” ಎಂದು ವಿವರಿಸುತ್ತಾರೆ.

    ತನ್ನನ್ನು ಪ್ರೋತ್ಸಾಹಿಸುತ್ತಿರುವ ಕಂಪನಿಯ ಬಗ್ಗೆ ಮಾತನಾಡಿದ ಅವರು,”ಯುಎಸ್ ವೀಸಾಗೆ ಅಪ್ಲೈ ಮಾಡಿದಾಗ ನನ್ನ ಬ್ಯಾಂಕ್ ಖಾತೆಯಲ್ಲಿ 700 ರೂ. ಇತ್ತು. ಆದರೆ ಅಮೆರಿಕದ ವೀಸಾ ಪಡೆಯಬೇಕಾದರೆ ಬ್ಯಾಂಕ್ ಖಾತೆಯಲ್ಲಿ ಕನಿಷ್ಟ 10 ಸಾವಿರ ಡಾಲರ್ ಇರಬೇಕು. ಮನೆಯವರ ಜೊತೆ ಲಕ್ಷ ಹಣ ಹಾಕಿ ಎಂದರೆ ಅವರಿಗೆ ಶಾಕ್ ಆಗಬಹುದು. ಆದರೆ ಎಲ್ಲವನ್ನೂ ಕಂಪನಿಯೇ ನನಗೆ ನೀಡಿದೆ. ತರಬೇತಿ, ವಿಮಾನ ಟಿಕೆಟ್ ಎಲ್ಲ ಸೇರಿ ವರ್ಷಕ್ಕೆ ನನ್ನ ಮೇಲೆ 3 ಕೋಟಿ ರೂ. ಹಣವನ್ನು ಕಂಪನಿ ಇನ್‍ವೆಸ್ಟ್ ಮಾಡುತ್ತೆ. ಅಷ್ಟೇ ಅಲ್ಲದೇ ಗಾಯವಾದರೂ ವಿಮಾನದಲ್ಲಿ ಟಿಕೆಟ್ ಮಾಡಿ ಕರೆದುಕೊಂಡು ಬರುತ್ತದೆ. ಎಲ್ಲದ್ದಕ್ಕೂ ಟ್ರಸ್ಟ್ ಬಹಳ ಮುಖ್ಯ” ಎಂದು ಕಂಪನಿಯ ಬಗ್ಗೆ ಅಭಿಮಾನದ ಮಾತನ್ನು ಅರವಿಂದ್ ವ್ಯಕ್ತಪಡಿಸಿದ್ದರು.

  • ದಿವ್ಯಾ ಜೊತೆ ಹೆಚ್ಚಿದ್ರೂ ಎಲ್ಲರ ಜೊತೆ ಬೆರೀತಾನೆ, ಅರವಿಂದ್ ಒಳ್ಳೆ ಹುಡ್ಗ ಗುರು

    ದಿವ್ಯಾ ಜೊತೆ ಹೆಚ್ಚಿದ್ರೂ ಎಲ್ಲರ ಜೊತೆ ಬೆರೀತಾನೆ, ಅರವಿಂದ್ ಒಳ್ಳೆ ಹುಡ್ಗ ಗುರು

    ರವಿಂದ್ ದಿವ್ಯಾ ಉರುಡುಗ ಜೊತೆ ಎಷ್ಟೇ ಇದ್ದರೂ ಎಲ್ಲರನ್ನೂ ಸಂಭಾಳಿಸುತ್ತಾನೆ, ಮಾತನಾಡಿಸುತ್ತಾನೆ, ನಮಗೂ ಟೈಮ್ ಕೊಡುತ್ತಾನೆ. ದಿವ್ಯಾ ಉರುಡುಗ ಬಂದ್ರೆ ಅರವಿಂದ್ ಸರಿ ಹೋಗಬಹುದು ಎಂದು ಚಕ್ರವರ್ತಿ ಚಂದ್ರಚೂಡ್ ಮತ್ತೆ ಬಿಗ್ ಮನೆಯಲ್ಲಿ ದಿವ್ಯಾ ನೆನಪಿಸಿಕೊಂಡಿದ್ದಾರೆ.

    ಹುಡ್ಗ-ಹುಡ್ಗಿ ಜೋಡಿಯಾಗಿದ್ರೆ ಒಂದು ರೀತಿಯ ಪ್ಯಾಂಪರಿಂಗ್ ಇರುತ್ತೆ, ಹುರುಪಿನಿಂದ ಟಾಸ್ಟ್ ಮಾಡುತ್ತಾರೆ. ಆದರೆ ನಮಗೆ ಪೇರ್ ಇಲ್ಲದಕ್ಕೆ ಹೀಗೆ ಆಗುತ್ತಿದೆ. ಈಗ ದಿವ್ಯಾ ಇಲ್ಲದ್ದಕ್ಕೆ ಅರವಿಂದ್ ಎನರ್ಜಿ ಕುಸಿಯುತ್ತಿದೆ. ವೈಷ್ಣವಿ ಹಾಗೂ ಅರವಿಂದ್‍ಗೂ ಪೇರ್ ಆಗಲ್ಲ. ಈಗ ದಿವ್ಯಾ ಬಂದ್ರೆ ಅರವಿಂದ್ ಸರಿ ಹೋಗಬಹುದು. ಆದರೆ ಅರವಿಂದ್ ತುಂಬಾ ಒಳ್ಳೆ ಹುಡುಗ ಗುರು, ನನಗೆ ಒಬ್ಬಬ್ಬರ ಬಗ್ಗೆ ಹೇಳಿ ಎಂದು ಕೇಳಿದರೆ, ಸರಿಯಾಗಿ ಹೇಳುತ್ತೇನೆ. ಇವರೆಗೆಲ್ಲ ಹೆದರುವುದಿಲ್ಲ ಎಂದು ಚಕ್ರವರ್ತಿ ನೇರವಾಗಿ ಮಾತನಾಡಿದ್ದಾರೆ.

    ಮಂಜು ಪಾವಗಡ ಬಗ್ಗೆ ಸಹ ಚಕ್ರವರ್ತಿ ಅಸಮಾಧಾನ ಹೊರ ಹಾಕಿದ್ದಾರೆ. ಮನೆಯ ಎಂಟರ್‍ಟೈನರ್, ವಿದೂಷಕ ಎನ್ನುವುದು ತಿಳಿದ ವಿಚಾರ. ಆದರೆ ಮಂಜು ತಮ್ಮ ಹಾಸ್ಯ ಪ್ರಜ್ಞೆ ಬಗ್ಗೆ ಮೈಮರೆತಿದ್ದಾರೆ. ಹೀಗಾಗಿ ಮನೆಯಲ್ಲಿ ಗುಸುಗುಸು ಶುರುವಾಗಿದ್ದು, ಒಂದು ಹುಡುಗಿಗಾಗಿ ಎನರ್ಜಿ ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದು ಚಕ್ರವರ್ತಿ ಹೇಳಿದ್ದಾರೆ.

    ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿಯವರು ಎಲ್ಲ ಸ್ಪರ್ಧಿಗಳ ಬಗ್ಗೆ ಮಾತನಾಡುತ್ತಿರುವಾಗ ಮಂಜು ಪಾವಗಡ ಬಗ್ಗೆ ಸಹ ಮಾತನಾಡಿದ್ದು, ವಿದೂಷಕರಾಗಿ ಕೆಲಸ ಮಾಡುವುದು ತುಂಬಾ ಕಷ್ಟ. ಮತ್ತೊಬ್ಬರನ್ನು ನಗಿಸುವುದು ಸುಲಭವಲ್ಲ, ಆದರೆ ಒಂದು ಹುಡುಗಿಗಾಗಿ ಮಂಜು ತನ್ನ ಎನರ್ಜಿ ಹಾಳು ಮಾಡಿಕೊಳ್ಳುತ್ತಿದ್ದಾನೆ. ಗೆಲ್ಲುವ ಅವಕಾಶ ಕಳೆದುಕೊಳ್ಳುತ್ತಿದ್ದಾನೆ ಎಂದು ಚಕ್ರವರ್ತಿ ಬೇಸರ ವ್ಯಕ್ತಪಡಿಸಿದ್ದಾರೆ. ಕೇವಲ ಚಕ್ರವರ್ತಿ ಮಾತ್ರವಲ್ಲ, ಈ ಹಿಂದೆ ಕಿಚ್ಚ ಸುದೀಪ್ ಸಹ ಮಂಜುಗೆ ನೇರವಾಗಿ ಹೇಳಿದ್ದರು. ನೀವು ಒಬ್ಬ ಎಂಟರ್‍ಟೈನರ್, ಹಾಸ್ಯ ಕಲಾವಿದರು ಎನ್ನುವುದನ್ನೇ ಮರೆಯುತ್ತಿದ್ದೀರಿ ಎಂದು ಎಚ್ಚರಿಸಿದ್ದರು. ಆದರೂ ಮಂಜು ಮಾತ್ರ ಎಚ್ಚರವಾಗಿಲ್ಲ.

    ಮಂಜು ಬಗ್ಗೆ ಮುಂದುವರಿದು ಮಾತನಾಡಿರುವ ಚಕ್ರವರ್ತಿ, ದಿವ್ಯಾ ಸುರೇಶ್ ಹೋದರೆ ಮಂಜು ಕಥೆ ಅಷ್ಟೇ ಎಂದು ಚಕ್ರವರ್ತಿ ಹೇಳುತ್ತಾರೆ. ಇಲ್ಲ ದಿವ್ಯಾ ಹೋದರೆ ಮತ್ತೊಬ್ಬರನ್ನು ಜೊತೆ ಮಾಡಿಕೊಳ್ಳುತ್ತಾನೆ ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

    ಇಂದು ಎಲ್ಲ ಸ್ಪರ್ಧಿಗಳ ಜೊತೆ ಮಾತನಾಡಿದ ಕಣ್ಮಣಿ ಸಹ ಮಂಜುಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಹಾಸ್ಯ ಕಲಾವಿದರಾಗಿ ಎಲ್ಲರನ್ನೂ ನಗಿಸಲು ಇನ್ನೂ ಎಷ್ಟು ದಿನಗಳು ಬೇಕು ಎಂದು ಪ್ರಶ್ನಿಸಿದ್ದಾರೆ. ಆಗ ನಾನು ಮನೆಯಲ್ಲಿದ್ದರೆ ಸೋಮವಾರದಿಂದ ನಗಿಸುತ್ತೇನೆ ಎಂದು ಮಂಜು ಹೇಳಿದ್ದಾರೆ. ಆದರೆ ಈಗ ಒಂದು ವಾರ ವೇಸ್ಟ್ ಆಯಿತಲ್ಲ ಎಂದು ಕಣ್ಮಣಿ ಬೇಸರ ವ್ಯಕ್ತಪಡಿಸಿದ್ದಾರೆ.

  • ‘ತಲೆ’ ತಿಂದ ಸಂಬರಗಿಯ ಬಾಯಿ ಮುಚ್ಚಿಸಿದ ಅರವಿಂದ್

    ‘ತಲೆ’ ತಿಂದ ಸಂಬರಗಿಯ ಬಾಯಿ ಮುಚ್ಚಿಸಿದ ಅರವಿಂದ್

    ಬಿಗ್ ಬಾಸ್ ಮನೆಯಲ್ಲಿ ಮತ್ತು ವೀಕ್ಷಕರ ನಡುವೆ ‘ನುಸುಳಿದ ಚೆಂಡು’ ಟಾಸ್ಕ್ ಬಗ್ಗೆ ಈಗಾಗಲೇ ಭಾರೀ ಚರ್ಚೆಗಳು ನಡೆದಿದೆ. ಈ ಟಾಸ್ಕ್‍ನಲ್ಲಿ ಅರವಿಂದ್ ಗೆದ್ದಿಲ್ಲ, ಪ್ರಶಾಂತ್ ಗೆದ್ದಿದ್ದಾರೆ, ಪ್ರಿಯಾಂಕ ಅವರ ವಾದ ಸರಿ ಇತ್ತು ಈ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿತ್ತು.

    ಮನೆಯಲ್ಲೂ, ಮನೆಯ ಹೊರಗಡೆ ಈ ಟಾಸ್ಕ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾದ ಹಿನ್ನೆಲೆಯಲ್ಲಿ ಈ ವಾರ ‘ಕಣ್ಮಣಿ’ ಈ ವಿಚಾರದ ಬಗ್ಗೆ ಜಾಸ್ತಿ ಮಾತನಾಡಿದ್ದಾಳೆ. ಕೊನೆಗೆ ಮಂಜು, ವೈಷ್ಣವಿ, ಚಕ್ರವರ್ತಿ ಚಂದ್ರಚೂಡ್ ಅವರು ಮೊದಲೇ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡಿದ್ದರೆ ಈ ರೀತಿಯ ಗೊಂದಲ ಇರುತ್ತಿರಲಿಲ್ಲ. ಗೊಂದಲವಾದರೂ ಆಟಗಾರರ ಬಳಿ ಹೋಗಿ ಮತ್ತೊಮ್ಮೆ ಆಡುವಂತೆ ಮನವಿ ಮಾಡಿ ಒಪ್ಪಿಸುವ ಪ್ರಯತ್ನ ಮಾಡಬಹುದಿತ್ತು. ಆದರೆ ಅಂಪೈರ್‍ಗಳಾದವರೂ ಯಾವುದೇ ಪ್ರಯತ್ನ ಮಾಡದೇ ಗೊಂದಲ ಮೂಡಿಸಿದರು ಎಂದು ಹೇಳಿ ತನ್ನ ಅಂತಿಮ ತೀರ್ಪು ಹೇಳಿದಳು.

    ಕಣ್ಮಣಿ ಹೇಳಿದ ಬಳಿಕ ಮನೆಯ ಗಾರ್ಡನ್ ಏರಿಯಾದಲ್ಲಿ ಅರವಿಂದ್, ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರಗಿ ಕುಳಿತು ಆ ಆಟದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಈ ವೇಳೆ ಪ್ರಶಾಂತ್,”ನಾನು ತಲೆಯ ಬಗ್ಗೆ ಹೇಳಿದ ಮಾತನ್ನು ಬಿಗ್ ಬಾಸ್ ಒಪ್ಪಿದ್ದಾರೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಈ ವೇಳೆ ಅರವಿಂದ್,”ನೀವು ಆಟ ಆಡುವ ಮೊದಲು ಇದನ್ನು ಕೇಳಬೇಕಿತ್ತು. ಆಟ ಆಡಿದ ನಂತ್ರ ಕೇಳುವುದಲ್ಲ. ತಲೆ ಎಂಬುದಕ್ಕೆ ಬಿಗ್ ಬಾಸ್ ಸ್ಪಷ್ಟವಾಗಿ ತಿಳಿಸಿಲ್ಲ. ಅದನ್ನು ನಮ್ಮ ವಿವೇಚನೆಗೆ ಬಿಟ್ಟಿದ್ದಾರೆ. ತಲೆ ಅಂದ್ರೆ ‘ಇದು ಮಾತ್ರ’ ಎಲ್ಲಿ ಹೇಳಿದ್ದಾರೆ” ಅಂತ ಪ್ರಶ್ನಿಸಿದರು. ಇದಕ್ಕೆ ಸಂಬರಗಿ ಸಮರ್ಥನೆ ನೀಡುವ ಪ್ರಯತ್ನ ಮಾಡಿದರೂ ಕೊನೆಗೆ ನಾನು ಹೇಳಿದ್ದಕ್ಕೆ ಬಿಗ್ ಬಾಸ್ ಹಿಂಟ್ ನೀಡಿದ್ದಾರೆ ಅಂತ ಉತ್ತರಿಸಿದರು.

    ಹಿಂಟ್ ಎಂಬ ಉತ್ತರ ಕೇಳಿದ ಕೂಡಲೇ ಅರವಿಂದ್,”ತಲೆ ಅಂದ್ರೆ ಕೂದಲು ಇರುವ ಜಾಗ ಮಾತ್ರ ಅಂತ ಹೇಳಿದ್ರಾ?” ಎಂದು ಮರು ಪ್ರಶ್ನೆ ಹಾಕಿದರು. ಇದಕ್ಕೆ ಧ್ವನಿಗೂಡಿಸಿದ ಚಕ್ರವರ್ತಿ,”ಈ ಹಿಂಟ್ ತಗೊಂಡೆ ಇಷ್ಟು ದಿನ ನೀನು ತಪ್ಪಾಗಿದ್ದು. ಅವರು ತಲೆ ಎಂಬುದಕ್ಕೆ ಏನೂ ಹೇಳಿಲ್ಲ” ಎಂದು ಸಂಬರಗಿಗೆ ತಿಳಿಸುವ ಪ್ರಯತ್ನ ಮಾಡಿದರು. ಅರವಿಂದ್ ಮತ್ತು ಚಕ್ರವರ್ತಿ ತನ್ನ ವಾದವನ್ನು ಒಪ್ಪುವುದಿಲ್ಲ ಎಂಬುದು ಯಾವಾಗ ಸಂಬರರಗಿಗೆ ಗೊತ್ತಾಯಿತೋ ಕೂಡಲೇ ಸಂಬರಗಿ, “ಸಾಕು ಈ ವಿಚಾರ ಇವತ್ತು. ಊಟಕ್ಕೆ ಏನು” ಎಂದು ಪ್ರಶ್ನಿಸಿ ಮಾತುಕತೆಯನ್ನು ಬೇರೆ ಕಡೆ ತಿರುಗಿಸುವ ಪ್ರಯತ್ನ ಮಾಡಿದರು.

    ಸಂಬರಗಿಯಿಂದ ಈ ಉತ್ತರ ಕೇಳಿದ ಕೂಡಲೇ ಅರವಿಂದ್ ಮತ್ತು ಚಕ್ರವರ್ತಿ ನಕ್ಕರು. ಕೊನೆಗೆ ಅರವಿಂದ್,”ನೀವು ಹಿಂಗೆ ಮಾತನಾಡಿದ್ರೆ ನಿಮಗೆ ತಲೆ ಇಲ್ಲ ಅಂತ ಅರ್ಥ. ನಿಮಗೆ ತಲೆ ಇದೆ. ಈ ವಿಷಯ ಮುಗಿದು ಹೋಯ್ತು ಅಷ್ಟೇ ಫಿನೀಶ್” ಎಂದು ಹೇಳಿ ಈ ಮಾತುಕತೆಯನ್ನು ಕೊನೆಗೊಳಿಸಿದರು.

    ಸಂಬರಗಿ ಮತ್ತು ಅರವಿಂದ್ ಬಿಗ್ ಬಾಸ್ ಮನೆಯಲ್ಲೇ ಎಷ್ಟೇ ಕಿತ್ತಾಡಿದರೂ ಕೊನೆಗೆ ಒಂದಾಗುತ್ತಾರೆ. ಈ ಹಿಂದೆಯೂ ನಾವಿನೇಷನ್ ಸಮಯದಲ್ಲಿ ಅರವಿಂದ್ ಪ್ರಶಾಂತ್ ಅವರು ಇರಬೇಕು ಎಂದು ಹೇಳಿದ್ದರು.

    ತಲೆ ಬಗ್ಗೆ ಚರ್ಚೆಯಾದ ನಂತರ ಕಿಚನ್ ರೂಮಿನಲ್ಲಿ ಅರವಿಂದ್ ಪ್ರಶಾಂತ್ ಅವರಲ್ಲಿ,”ನೀವು ಹೇಳುವುದು ಸರಿ ಇದೆ. ಆದರೆ ಹೇಳುವ ಶೈಲಿ ಮಾತ್ರ ಸರಿಯಿಲ್ಲ. ಅದರಿಂದಾಗಿ ಕಿರಿಕ್ ಆಗುತ್ತದೆ. ಜೊತೆಗೆ ನೀವು ಹೇಳಿದ್ದೆ ಸರಿ ಎಂಬುದನ್ನು ಬಿಟ್ಟು ಉಳಿದವರು ಏನು ಹೇಳುತ್ತಾರೆ ಎಂಬದುನ್ನು ಕೇಳಬೇಕು” ಎಂದು ಸಲಹೆ ನೀಡಿದರು.

    ಒಟ್ಟಿನಲ್ಲಿ ‘ನುಸುಳುವ ಚೆಂಡು’ ಟಾಸ್ಕ್‍ನಿಂದ ಎದ್ದ ತಲೆ ಎಂದರೇನು ಪ್ರಶ್ನೆ ಬಿಗ್ ಬಾಸ್ ಮನೆಯವರ ಜೊತೆ ವೀಕ್ಷಕರ ತಲೆಯನ್ನು ತಿಂದಿದೆ. ತಲೆ ತಿಂದ ಟಾಸ್ಕ್ ಬಗ್ಗೆ ಈಗ ನಿಮ್ಮ ತಲೆಯಲ್ಲಿ ಏನು ಓಡುತ್ತಿದೆ ಕಮೆಂಟ್ ಮಾಡಿ ತಿಳಿಸಿ.

  • ಒಂದೇ ಡೈಲಾಗಿನಿಂದ ನಿಧಿ, ದಿವ್ಯಾ, ಮಂಜುಗೆ ತಿವಿದ ಅರವಿಂದ್

    ಒಂದೇ ಡೈಲಾಗಿನಿಂದ ನಿಧಿ, ದಿವ್ಯಾ, ಮಂಜುಗೆ ತಿವಿದ ಅರವಿಂದ್

    ಬಿಗ್ ಬಾಸ್ ಮನೆಯಲ್ಲಿ ಈ ವಾರದ ನಾಯಕರಾಗಿರುವ ಅರವಿಂದ್ ಒಂದೇ ಒಂದು ಡೈಲಾಗ್‌ನಿಂದ ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್, ಮಂಜು ಅವರನ್ನು ತಿವಿದು ಫುಲ್ ಕ್ಲಾಸ್ ಮಾಡಿದ್ದಾರೆ.

    ಕಳೆದ ವಾರದ ಕಳಪೆ ಮತ್ತು ಅತ್ಯುತ್ತಮ ಆಟಗಾರ ಆಯ್ಕೆ ನಡೆಯುತ್ತಿತ್ತು. ಹಾಸ್ಟೆಲ್ ಟಾಸ್ಕ್ ನಲ್ಲಿ ವಾರ್ಡನ್‌ಗಳಾಗಿದ್ದ ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ ಜೊತೆ ದಿವ್ಯಾ ಸುರೇಶ್ ಅವರನ್ನು ಮನೆ ಸದಸ್ಯರು ಕಳಪೆಗೆ ನಾಮಿನೆಟ್ ಮಾಡಿದರು.

    ಕೊನೆಗೆ ನಾಯಕನ ಸರದಿ ಬಂತು. ಈ ವೇಳೆ ಅರವಿಂದ್, “ನಾನು ನಿಧಿಗೆ ಕಳಪೆ ಕೊಡುತ್ತೇನೆ. ನಾನು ತುಂಬಾ ಫೇತ್ ಇಟ್ಟಿದ್ದೆ. ಹೀಗೆ ಆಗಲ್ಲ ಅಂತ. ಹೇಗೆ ಎಕ್ಸ್ಪ್ರೆಸ್ ಮಾಡಬೇಕು ಅಂತ ಗೊತ್ತಾಗುತ್ತಿಲ್ಲ. ಬಹಳ ಬೇಸರವಾಯ್ತು. ನನ್ನ ಲೆಕ್ಕದಲ್ಲಿ ಮೂವರು ಇದ್ದಾರೆ. ಟಾಸ್ಕ್ ಅಂತ ಬಂದಾಗ ನೀವು ಸ್ಟ್ರಾಟಜಿ ಅಂತೀರಾ. ಆದರೆ ತಂತ್ರಗಾರಿಕೆ ಮಾಡಬೇಕು. ಆದರೆ ಕುತಂತ್ರ ಮಾಡಬೇಕು ಎಂದು ಎಲ್ಲಿಯೂ ಬರೆದಿಲ್ಲ. ಮೋಸದಾಟ ಮಾಡಬಾರದು” ಎಂದು ಹೇಳಿ ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್, ಮಂಜು ಅವರನ್ನು ನೇರವಾಗಿ ಕಟು ಮಾತಿನಲ್ಲೇ ತಿವಿದರು. ಇದನ್ನೂ ಓದಿ: ಮಾತಿನ ಮಧ್ಯೆ ಮೂಗು ತೂರಿಸಿದ ದಿವ್ಯಾ ಸುರೇಶ್‍ಗೆ ತರಾಟೆ ತೆಗೆದುಕೊಂಡ ಅರವಿಂದ್!

    ಅಂತಿಮವಾಗಿ ನಿಧಿ ಸುಬ್ಬಯ್ಯ ಮತ್ತು ಪ್ರಶಾಂತ್ ಸಂಬರಗಿ ಪರವಾಗಿ 5 ವೋಟುಗಳು ಬಿದ್ದ ಹಿನ್ನೆಲೆಯಲ್ಲಿ ನಾಯಕನ ವಿಶೇಷ ಅಧಿಕಾರ ಚಲಾಯಿಸಿದ ಅರವಿಂದ್ ನಿಧಿ ಅವರನ್ನು ‘ಕಳಪೆ’ಗೆ ಆಯ್ಕೆ ಮಾಡಿದರು. ಉತ್ತಮ ಪತ್ರಗಳನ್ನು ಬರೆದ ಚಕ್ರವರ್ತಿ ಚಂದ್ರಚೂಡ್ ಅವರನ್ನು ವಾರದ ‘ಅತ್ಯುತ್ತಮ’ ಆಟಗಾರನಾಗಿ ಮನೆಯ ಸದಸ್ಯರು ಆಯ್ಕೆ ಮಾಡಿದರು.

    ಲವ್ ಲೆಟರ್ ಟಾಸ್ಕ್ ನಲ್ಲಿ ನಿಧಿಯ ಡೀಲ್ ಒಪ್ಪಿ ದಿವ್ಯಾ ಸುರೇಶ್ ಮತ್ತು ಮಂಜು ಈಗ ಮನೆಯ ಸದಸ್ಯರ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಹೆಚ್ಚು ಲವ್ ಲೆಟರ್ ಸಂಗ್ರಹ ಮಾಡಿದ್ದ ನಿಧಿ ಸುಬ್ಬಯ್ಯ ಮತ್ತು ದಿವ್ಯಾ ಸುರೇಶ್ ಕ್ಯಾಪ್ಟನ್ಸಿ ಟಾಸ್ಕ್ ಗೆ ಬಂದರೂ ಈಗ ಮನೆಯವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಒಂದು ಕುತಂತ್ರ ಆಟವಾಡಿದ ದಿವ್ಯಾ ಸುರೇಶ್ ಮತ್ತು ಮಂಜು ಮನೆಯವರ ಜೊತೆ ಸ್ವಾರಿ ಕೇಳಿದ್ದಾರೆ. ಸ್ವಾರಿ ಕೇಳಿದ್ದರೂ ಮನೆಯವರ ಸಂಬಂಧ ಅಷ್ಟೇನೂ ಉತ್ತಮವಾದಂತೆ ಕಾಣುತ್ತಿಲ್ಲ.

  • ನಿಮ್ಮ ಅಪ್ಪಾಜಿ ಬಂದ್ರೆ ಓಡಿ ಹೋಗೋಣ ಅಂದ್ರು ಅರವಿಂದ್

    ನಿಮ್ಮ ಅಪ್ಪಾಜಿ ಬಂದ್ರೆ ಓಡಿ ಹೋಗೋಣ ಅಂದ್ರು ಅರವಿಂದ್

    ಬಿಗ್‍ಬಾಸ್ ಮನೆಯಲ್ಲಿ ನೀಡಿರುವ ಹಾಸ್ಟೆಲ್ ಟಾಸ್ಕ್ ಸಖತ್ ಮಜಾವನ್ನು ಕೊಡುತ್ತಿದೆ. ಸ್ಪರ್ಧಿಗಳು ಮಾತ್ರ ಸಖತ್ ಮಜಾವನ್ನು ಕೊಡುತ್ತಿದ್ದಾರೆ. ಇವರಲ್ಲಿ ಹೈಲೆಟ್ ಆಗಿ ಕಾಣುತ್ತಿರುವುದ ಮಾತ್ರ ಅರವಿಂದ್, ದಿವ್ಯಾ ಜೋಡಿ

    ಹಾಸ್ಟೆಲ್ ಜೀವನದಲ್ಲಿ ತರ್ಲೆ, ತುಂಟಾಟ, ನಡೆಯತ್ತದೆ. ಅದೆಲ್ಲವನ್ನು ಸ್ಪರ್ಧಿಗಗಳು ಮನೆಯಲ್ಲಿ ಮಾಡುವ ಅವಕಾಶವನ್ನು ನೀಡಲಾಗಿತ್ತು. ಹುಡುಗರ ಹಾಸ್ಟೆಲ್, ಹುಡುಗಿಯರ ಹಾಸ್ಟೆಲ್ ಮಾಡಿ ಅದಕ್ಕೆ ವಾರ್ಡನ್ ಕೂಡ ಮಾಡಲಾಗಿತ್ತು. ಹಾಸ್ಟೆಲ್‍ನಲ್ಲಿ ನಡೆಯುವಂತೆ ಹುಡುಗರು, ಹುಡುಗಿಯರು ನಡೆದುಕೊಳ್ಳಬೇಕಾಗಿತ್ತು. ಆಗ ಅರವಿಂದ್, ದಿವ್ಯಾ ಇನ್ನಷ್ಟು ಹತ್ತಿರವಾಗಿದ್ದಂತೂ ಖಂಡಿತಾ ಹೌದು.

    ನಾವು ಇವಾಗ ತಾನೇ ಭೇಟಿಯಾಗಿದ್ದು, ನೀವು ಎಷ್ಟೊಂದು ಮಾತನಾಡುತ್ತಿದ್ದೀರಾ ಎಂದು ದಿವ್ಯಾ ಹೇಳಿದ್ದಾರೆ. ಮತ್ತೇ ನೀವು ಸಿಗದೆ ಹೋದರೆ ಎಂದು ನಾನು ಮಾತನಾಡುತ್ತಿದ್ದೇನೆ ಎಂದು ಅರವಿಂದ್ ಹೇಳಿದ್ದಾರೆ. ಹಾಗಾದ್ರೆ ನಿಮಗೆ ತುಂಬಾ ಧೈರ್ಯ ಎಂದು ದಿವ್ಯಾ ಹೇಳುವಾಗ ಅರವಿಂದ್ ಇಲ್ಲಾ ನನಗೆ ಭಯಾ ಆಗುತ್ತಿದೆ. ನೀನು ಅಂದ್ರೆ ನನಗೆ ಇಷ್ಟ ಎಂದು ಅರವಿಂದ್ ಹೇಳಿದ್ದಾರೆ. ಈ ವೇಳೆ ದಿವ್ಯಾ ಮಾತ್ರ ಜೋರಾಗಿ ನಕ್ಕಿದ್ದಾರೆ.

    ಮಾತು ಮದುವರೆಸಿದ ಅರವಿಂದ್ ನಾನು ಕೈ ಹಿಡಿದುಕೊಳ್ಳಲಾ ಎಂದು ಕೇಳಿದಾಗ ದಿವ್ಯಾ ನಾನು ನಮ್ಮ ಅಪ್ಪಾಜಿಯನ್ನು ಕೇಳಬೇಕು ಎಂದು ಹೇಳಿದ್ದಾರೆ. ಆಗ ದಿವ್ಯಾಳ ಕೈ ಹಿಡಿದ ಅರವಿಂದ್ ನಿಮ್ಮ ಕೈ ಕ್ಯೂಟ್ ಆಗಿದೆ ಎಂದು ಹೇಳಿದ್ದಾರೆ. ದಿವ್ಯಾ ನಗುತ್ತಾ ನಾನು ಹೋಗುತ್ತೇನೆ ಎಂದಿದ್ದಾರೆ. ಆಗ ಇಲ್ಲಾ ಬೇಡಾ ನೀನು ಹೋಗುವುದು ಎಂದು ಅರವಿಂದ್ ಪ್ರೀತಿಯಿಂದ ಹೇಳಿದ್ದಾರೆ. ಇಲ್ಲಾ ನಮ್ಮ ಅಪ್ಪಾಜಿ ಬರುತ್ತಾರೆ ಎಂದು ದಿವ್ಯಾ ಹೇಳಿದಾಗ ನಿಮ್ಮ ಅಪ್ಪಾಜಿ ಬಂದ್ರೆ ನಾವು ಇಲ್ಲಿಂದ ಓಡಿ ಹೋಗೋಣ ಎಂದು ಹೇಳಿದ್ದಾರೆ.

    ಮನೆಯಲ್ಲಿರುವ ಸ್ಪರ್ಧಿಗಳು ಅರವಿಂದ್, ದಿವ್ಯಾ ಬಿಗ್‍ಬಾಸ್ ನೀಡಿರುವ ಆಟಕ್ಕೆ ತಕ್ಕಂತೆ ಪ್ರೇಮಿಗಳಂತೆ ಮಾತನಾಡಿಕೊಂಡು ನಟಿಸುತ್ತಿದ್ದಾರೆ. ಈ ಜೋಡಿ ಮಾತ್ರ ಪ್ರತಿನಿತ್ಯ ಸದಾ ಸುದ್ದಿಯಲ್ಲಿರುವ ಬಿಗ್‍ಬಾಸ್‍ಮನೆಯ ಕ್ಯೂಟ್ ಕಪಲ್ ಆಗಿದ್ದಾರೆ.