Tag: aravind kp

  • ಪುಟ್ಟ ಕಲಾವಿದನನ್ನು ಫಿನಾಲೆವರೆಗೆ ತಲುಪಿಸಿ ವಿನ್ನರ್ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್: ಮಂಜು

    ಪುಟ್ಟ ಕಲಾವಿದನನ್ನು ಫಿನಾಲೆವರೆಗೆ ತಲುಪಿಸಿ ವಿನ್ನರ್ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್: ಮಂಜು

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಶೋ 8ರ ವಿನ್ನರ್ ಆಗಿ ಮಂಜು ಪಾವಗಡ ಅವರು ಹೊರಹೊಮ್ಮಿದ್ದಾರೆ. ಇದೀಗ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಮಾತನಾಡುತ್ತಾ ಕರ್ನಾಟಕದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

    ವಿನ್ನರ್ ಅಂತ ಘೋಷಣೆಯಾಗುತ್ತಿದ್ದಂತೆಯೇ ತುಂಬಾನೇ ಖುಷಿಯಾದೆ. ಟಾಪ್ 5 ಅಂತ ಬಂದಾಗಲೇ ನಾನು ಗೆದ್ದಿದ್ದೀನಿ ಅನ್ನೋ ಖುಷಿ ಇತ್ತು. ಏನೂ ಇಲ್ಲದೆ ಅಂತಹ ದೊಡ್ಡ ಸ್ಟೇಜ್ ಗೆ ಹೋಗಿ ಟಾಪ್ 5 ಬರೋದು ದೊಡ್ಡ ಮಾತು ಎಂದರು.

    ನನಗೆ ತುಂಬಾನೇ ಖುಷಿಯಾಗಿರುವುದು ಅಂದರೆ, 45 ಲಕ್ಷ ವೋಟ್ ಬಂದಿರುವುದು. ಇದು ತಮಾಷೆ ಮಾತೇ ಇಲ್ಲ. ಕರ್ನಾಟಕದ ಎಲ್ಲಾ ಜನತೆಗೆ ತುಂಬಾ ಧನ್ಯವಾದಗಳೂ. ಯಾಕಂದ್ರೆ ಈ ಪುಟ್ಟ ಕಲಾವಿದನನ್ನು ಪ್ರತಿ ವಾರನೂ ಇಷ್ಟಪಟ್ಟು ವೋಟ್ ಮಾಡಿ ಫಿನಾಲೆ ತಲುಪಿಸಿ ವಿನ್ನರ್ ಮಾಡಿದ್ದೀರಿ. ಅದಕ್ಕೆ ನಾನು ಯಾವತ್ತೂ ಚಿರಋಣಿ. ನಾನು ಇರುವವರೆಗೂ ಎಲ್ಲರನ್ನೂ ಮನರಂಜಿಸುತ್ತಾ ನಗಿಸುತ್ತಾ ಇರುತ್ತೇನೆ ಎಂದು ಮಂಜು ಹೇಳಿದ್ದಾರೆ.  ಇದನ್ನೂ ಓದಿ: ಕನ್ನಡಿಗರ ಮನಗೆದ್ದು ಗೆಲುವಿನ ನಗೆ ಬೀರಿದ ಮಂಜು

    ನಾನೊಬ್ಬ ರಂಗಭೂಮಿ ಕಲಾವಿದನಾಗಿದ್ದೆ. ಅಲ್ಲಿಂದ ನಾನು ಜನರನ್ನು ಮನರಂಜಿಸುವತ್ತ ಬಂದೆ. ನಾನು ಕೂಡ ಒಬ್ಬ ಬಿಗ್ ಬಾಸ್ ಶೋ ಅಭಿಮಾನಿ. ಅಂತಹ ಶೋಗೆ ನಾನೇ ಸೆಲೆಕ್ಟ್ ಆದಾಗ ತುಂಬಾ ಖುಷಿಯಾಗಿದ್ದೆ. ಈ ಶೋ 72 ದಿನ ನಡೆದ ಬಳಿಕ ಕೋವಿಡ್ ಅಲೆಯಿಂದ ಕೆಲ ದಿನಗಳ ಕಾಲ ನಿಂತು ಹೋಯಿತು. ಈ ವೇಳೆ ನನಗೆ ತುಂಬಾ ಬೇಜಾರಾಗಿತ್ತು. ಸಾವಿರಾರು ಕನಸು ಕಟ್ಟಿಕೊಂಡು ಬಂದ್ವಿ. ನಮಗೆ ಹಿಂಗೇ ಆಗ್ಬೇಕಾ ಅನ್ನೋ ನೋವು ನನ್ನನ್ನು ಕಾಡಿತ್ತು ಎಂದು ತಿಳಿಸಿದರು.  ಇದನ್ನೂ ಓದಿ: ಟಾಸ್ಕ್ ಮಾಸ್ಟರ್, ಪರ್ಫೆಕ್ಷನಿಸ್ಟ್ ಅರವಿಂದ್‍ಗೆ ಎರಡನೇ ಸ್ಥಾನ

    ಬಿಗ್ ಬಾಸ್ ಇತಿಹಾಸದಲ್ಲಿಯೇ 2ನೇ ಇನ್ನಿಂಗ್ಸ್ ಅನ್ನೊದು ಇರಲೇ ಇಲ್ಲ. 11 ಮಂದಿ ಸ್ಪರ್ಧಿಗಳು 43 ದಿನ ಹೊರಗಡೆ ಇದ್ದು, ಮತ್ತೆ ಒಳಗಡೆ ಹೋಗಿ 48 ದಿನ ಆಡೋದು ಅಸಾಧಾರಣ ಮಾತು. ಇಂತಹ ಸ್ಪೆಷಲ್ ಎಪಿಸೋಡ್ ನಲ್ಲಿ ನಾನು ಗೆದ್ದಿರೋದು ಸಿಕ್ಕಾಪಟ್ಟೆ ಖುಷಿಯಾಗಿದೆ. ಅದಕ್ಕೆ ಕಾರಣ ವೀಕ್ಷಕರು ಕೊಟ್ಟಂತಹ ಪ್ರೀತಿ, ವಿಶ್ವಾಸ. ಇದನ್ನು ನಾನು ಸಾಯುವವರೆಗೂ ಉಳಿಸಿಕೊಳ್ಳುತ್ತೇನೆ ಎಂದು ಮಂಜು ಭರವಸೆ ನಿಡಿದರು.  ಇದನ್ನೂ ಓದಿ: ಮಂಜುಗೆ ಒಲಿದ ದೊಡ್ಮನೆ ಕಿರೀಟ – ಬಿಗ್‍ಬಾಸ್ ವಿನ್ನರ್‌ಗೆ ಅದ್ಧೂರಿ ಸ್ವಾಗತ

  • ಮಂಜುಗೆ ಒಲಿದ ದೊಡ್ಮನೆ ಕಿರೀಟ – ಬಿಗ್‍ಬಾಸ್ ವಿನ್ನರ್‌ಗೆ ಅದ್ಧೂರಿ ಸ್ವಾಗತ

    ಮಂಜುಗೆ ಒಲಿದ ದೊಡ್ಮನೆ ಕಿರೀಟ – ಬಿಗ್‍ಬಾಸ್ ವಿನ್ನರ್‌ಗೆ ಅದ್ಧೂರಿ ಸ್ವಾಗತ

    ಬೆಂಗಳೂರು: ಕಾಮಿಡಿಯನ್ ಮಂಜು ಪಾವಗಡ ಅವರು ಈ ಬಾರಿಯ ಬಿಗ್‍ಬಾಸ್ ಸೀನ್ -8ರ ವಿನ್ನರ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆಯೇ ಮಂಜುಗೆ ಭರ್ಜರಿ ಸ್ವಾಗತ ಸಿಕ್ಕಿದೆ.

    ಕುಟುಂಬಸ್ಥರು, ಆತ್ಮೀಯರು, ಸ್ನೇಹಿತರಿಂದ ಅದ್ಧೂರಿ ಸ್ವಾಗತ ದೊರೆತಿದೆ. ಸ್ನೇಹಿತರಂತೂ ಹೆಗಲ ಮೇಲೆ ಹೊತ್ಕೊಂಡು ಮೆರವಣಿಗೆ ಮಾಡಿದರು. ಹಾರ ಹಾಕಿ, ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಮಂಜು ಸಾಧನೆಯನ್ನು ಸಂಭ್ರಮಿಸಿದ್ದಾರೆ.  ಇದನ್ನೂ ಓದಿ: ಕನ್ನಡಿಗರ ಮನಗೆದ್ದು ಗೆಲುವಿನ ನಗೆ ಬೀರಿದ ಮಂಜು

    ಒಟ್ಟಿನಲ್ಲಿ `ಹಳ್ಳಿ ಹಕ್ಕಿ’ ಮಂಜುಗೆ ದೊಡ್ಮನೆ ಕಿರೀಟ ಒಲಿದಿದ್ದು, ಮಂಜು ಪಾವಗಡ-ಅರವಿಂದ್ ಕೆಪಿ ಮಧ್ಯೆ ಟಫ್ ಫೈಟ್ ಏರ್ಪಟ್ಟಿತ್ತು. ಕೊನೆಗೆ ಸುದೀಪ್ ಅವರು ವಿನ್ನರ್ ಮಂಜು ಪಾವಗಡ ಹೆಸರು ಘೋಷಿಸಿದ್ದಾರೆ. ಮಂಜು ಪಾವಗಡ ವಿನ್ನರ್, ಅರವಿಂದ್ ರನ್ನರ್ ಅಪ್ ಆಗಿದ್ದು, ಮಂಜುಗೆ 53 ಲಕ್ಷ, ಅರವಿಂದ್‍ಗೆ 11 ಲಕ್ಷ ಬಹುಮಾನ ದೊರೆತಿದೆ.  ಇದನ್ನೂ ಓದಿ: ಟಾಸ್ಕ್ ಮಾಸ್ಟರ್, ಪರ್ಫೆಕ್ಷನಿಸ್ಟ್ ಅರವಿಂದ್‍ಗೆ ಎರಡನೇ ಸ್ಥಾನ

    ಸರ್ಧೆಯ ವಿಜೇತರಾಗಿರುವ ಮಂಜು ಪಾವಗಡ ಮಜಾಭಾರತ ರಿಯಾಲಿಟಿ ಶೋ ಸ್ಪರ್ಧಿ ಯಾಗಿ ಕನ್ನಡಿಗರಿಗೆ ಪರಿಚಿತರಿದ್ದರು. ಆದರೆ ಬಿಗ್ ಬಾಸ್ ಕಾರ್ಯಕ್ರಮ ತಮಗೆ ಕೊಟ್ಟ ಅವಕಾಶವನ್ನ ಜೋಪಾನವಾಗಿ ಕಾಪಾಡಿಕೊಂಡು ಸಂದರ್ಭಕ್ಕೆ ತಕ್ಕಂತೆ ಆಟವಾಡುವುದರಲ್ಲಿ ಯಶಸ್ವಿಯಾಗಿದ್ದರು. ಮನರಂಜಿಸುತ್ತಾ ಬಂದಿದ್ದು, ಟಾಸ್ಕ್ ನಲ್ಲೂ ಉತ್ತಮ ಪರ್ಫಾಮೆನ್ಸ್ ಕೊಟ್ಟಿದ್ದರು. ಕಡು ಬಡತನದಲ್ಲಿರುವ ಮಂಜು ಬಿಗ್ ಬಾಸ್ ಗೆದ್ದ ಹಣದಿಂದ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳೋದಾಗಿ ಈ ಹಿಂದೆ ಹೇಳಿದ್ರು. ಹೀಗಾಗಿ ಕರುನಾಡು ಮಂಜುಗೆ ಹರಸಿದೆ. ಈ ಮೂಲಕ ಮತಗಳ ಮಹಾಪೂರವೇ ಮಂಜುಗೆ ಹರಿದುಬಂದಿತ್ತು. ಇದೇ ಕಾರಣದಿಂದ ಮಂಜು ಗೆಲ್ಲುವ ದಾರಿ ಸುಗಮವಾಯ್ತು.

  • ಕನ್ನಡಿಗರ ಮನಗೆದ್ದು ಗೆಲುವಿನ ನಗೆ ಬೀರಿದ ಮಂಜು

    ಕನ್ನಡಿಗರ ಮನಗೆದ್ದು ಗೆಲುವಿನ ನಗೆ ಬೀರಿದ ಮಂಜು

    ದೊಡ್ಡ ಮನೆಯ ಸ್ಪರ್ಧಿಗಳ ಜೊತೆ ವೀಕ್ಷಕರಿಗೆ ಪಂಚಿಂಗ್ ಡೈಲಾಗ್ ಹೊಡೆದು ಭರಪೂರ ಮನರಂಜನೆ ನೀಡಿದ್ದ ಮಂಜು ಪಾವಗಡ ಅವರು ಬಿಗ್‍ಬಾಸ್ ಟ್ರೋಫಿ ಗೆಲ್ಲುವ ಮೂಲಕ ವಿಜಯದ ನಗೆ ಬೀರಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿ ನಗು ಇದೆ ಎಂದರೆ ಅಲ್ಲಿ ಮಂಜು ಇದ್ದೇ ಇರುತ್ತಾರೆ. ಮಂಜು ಇದ್ದಲ್ಲಿ ನಗುವಿಗೆ, ಮನರಂಜನೆಗೇನು ಕಮ್ಮಿ ಇಲ್ಲ ಎನ್ನುವ ಮಾತು ಬಿಗ್‍ಬಾಸ್ ವೀಕ್ಷಕರು ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದರು. ಈ ಮಾತಿನಂತೆ ಮನರಂಜನೆ, ಟಾಸ್ಕ್ ಎರಡರಲ್ಲೂ ಉತ್ತಮ ಪ್ರದರ್ಶನ ತೋರಿದ ಮಂಜು ಅವರು ಅತಿ ಹೆಚ್ಚು ವೋಟು ಪಡೆಯುವ ಮೂಲಕ ವಿನ್ನರ್ ಆಗಿದ್ದಾರೆ.

    ಬಿಗ್‍ಬಾಸ್ ಫಿನಾಲೆಯಲ್ಲಿ ಟಾಪ್ 5 ನಲ್ಲಿ ಉಳಿದುಕೊಂಡಿದ್ದ ಸ್ಪರ್ಧಿಗಳಲ್ಲಿ ಮಂಜು, ಮತ್ತು ಅರವಿಂದ್ ಮಧ್ಯೆ ಮೊದಲ ಸ್ಥಾನಕ್ಕೆ ಸ್ಪರ್ಧೆ ನಡೆದಿತ್ತು. ಸುದೀಪ್ ಅವರು ಮಂಜು ಕೈ ಮೇಲೆ ಎತ್ತುವ ಮೂಲಕವಾಗಿ ವಿನ್ನರ್ ಯಾರು ಎಂದು ಘೋಷಣೆ ಮಾಡಿದರು. ಬಿಗ್‍ಬಾಸ್ ವಿನ್ನರ್ ಪಟ್ಟದ ಜೊತೆಗೆ ಮಂಜು ಅವರಿಗೆ 53 ಲಕ್ಷ ರೂ ಹಣವನ್ನು ಮಂಜುಗೆ ನೀಡಲಾಗಿದೆ. ರನ್ನರ್ ಅಪ್ ಅರವಿಂದ್‍ಗೆ 11 ಲಕ್ಷ ರೂಪಾಯಿ ಹಣವನ್ನು ನೀಡಲಾಗಿದೆ.

    ಗಂಭೀರ, ಹೋರಾಟದ ಮನೋಭಾವ ಹೊಂದಿರುವ ಸ್ಪರ್ಧಿಗಳ ಮಧ್ಯೆ ಮಂಜು ಸದಾ ಹಾಸ್ಯ ಮಾಡುತ್ತಾ, ಎಲ್ಲರಿಗೂ ಭರಪೂರ ಮನರಂಜನೆ ನೀಡುತ್ತಾ ಬಂದಿದ್ದರು. ಜಾಗ ಯಾವುದೇ ಆಗಲಿ, ಎದುರಿಗಿರುವ ವ್ಯಕ್ತಿ ಹೇಗೆ ಇರಲಿ. ಆ ಸಮಯದಲ್ಲೇ ಪಂಚಿಂಗ್ ಡೈಲಾಗ್ ಹೊಡೆದು ನಗಿಸಿ ತಿರುಗೇಟು ನೀಡುತ್ತಿದ್ದರು. ಈ ವಿಶಿಷ್ಟ ವ್ಯಕ್ತಿತ್ವ ವೀಕ್ಷಕರಿಗೆ ಇಷ್ಟವಾಗಿ ಈಗ ಮಂಜು ಕೊರಳಿಗೆ ಜಯಮಾಲೆಯನ್ನು ಹಾಕಿದ್ದಾರೆ. ಇದನ್ನೂ ಓದಿ : ಕೈಗೆ ಗಾಯವಾಗಿದ್ದರೂ ಅತ್ಯುತ್ತಮ ಆಟ – ಡಿಯುಗೆ ಸಿಕ್ತು 3ನೇ ಸ್ಥಾನ

    ಬಿಗ್‍ಬಾಸ್ ಮೊದಲ ಇನ್ನಿಂಗ್ಸ್ ನಲ್ಲಿ ನಲ್ಲಿ ದಿವ್ಯಾ ಸುರೇಶ್ ಜತೆ ಮಂಜು ಹೆಚ್ಚು ಆಪ್ತವಾಗಿದ್ದರು. ಹೀಗಾಗಿ ಅವರಿಗೆ ಇದು ಗೇಮ್ ಆಡಲು, ಮನರಂಜನೆ ನೀಡುವಲ್ಲಿ ಸ್ವಲ್ಪ ತೊಂದರೆ ಆಗಿತ್ತು. ವೀಕ್ಷಕರು ಮಂಜು ಮನರಂಜನೆ ಒಬ್ಬರಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳುತ್ತಿದ್ದರು. ಕೆಲ ಕಾಲ ಮನರಂಜನೆ ನೀಡುವುದನ್ನೇ ನಿಲ್ಲಿಸಿದ್ದರು. ಆದರೆ, ಸೆಕೆಂಡ್ ಇನ್ನಿಂಗ್ಸ್ ಆರಂಭದಲ್ಲೇ ಎಲ್ಲರ ಜೊತೆ ಬೆರೆಯಲು ಆರಂಭಿಸಿದ್ದು ಮಂಜು ಅವರಿಗೆ ನೆರವಾಯಿತು.

    ಎಲ್ಲ ಕಡೆಗಳಲ್ಲೂ ಸ್ವತಂತ್ರವಾಗಿ ಗುರುತಿಸಿಕೊಂಡರು, ಎಲ್ಲ ಸ್ಪರ್ಧಿಗಳ ಜೊತೆಗೆ ಬೆರೆಯಲು ಪ್ರಾರಂಭಿಸಿದರು. ಆಗ ಮನೆ ಮಂದಿ ಮಂಜುವನ್ನು ಮೆಚ್ಚಿಕೊಳ್ಳಲು ಪ್ರಾರಂಭಿಸಿದರು. ಆದರೆ ಆಗಾಗ ಪ್ರಶಾಂತ್ ಸಂಬರಗಿ, ಚಕ್ರವರ್ತಿ ಮಂಜು ವಿರುದ್ಧವಾಗಿ ಮಾತನಾಡಿದ್ದರೂ ಅದು ಯಾವುದನ್ನು ತಲೆಗೆ ಹಾಕಿಕೊಳ್ಳದೇ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

  • ಅರವಿಂದ್ ಗೆಲುವಿಗಾಗಿ ಬೈಕ್ ರೇಸ್

    ಅರವಿಂದ್ ಗೆಲುವಿಗಾಗಿ ಬೈಕ್ ರೇಸ್

    ಬೆಂಗಳೂರು: 119 ದಿನಗಳ ಕಾಲ ನಡೆದ ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ಅದ್ಧೂರಿಯಾಗಿ ತೆರೆ ಬೀಳುತ್ತಿದೆ. ಬಿಗ್‍ಬಾಸ್ ಶೋನಲ್ಲಿ ಬೈಕ್ ರೇಸರ್ ಅರವಿಂದ್ ಗೆಲುವಿಗಾಗಿ ಎಕ್ಸ್ ಪಲ್ಸ್ ರಿಲಿವ್ ಇನ್ಡೋರೋ (XPULSE RELIVE ENDURO ) ತಂಡದಿಂದ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. 8 ರಿಂದ 10 ಜನರಿರುವ ತಂಡದಿಂದ ಅರವಿಂದ್ ಗೆಲ್ಲಲಿ ಎಂದು ವಿಶ್ ಮಾಡುವ ಮೂಲಕ ಬೈಕ್ ರೇಸ್ ಮಾಡಲಿದ್ದಾರೆ.

    ಬಿಗ್ ಬಾಸ್ ಕನ್ನಡ ಸೀಸನ್ 8ರ ಗ್ರ್ಯಾಂಡ್ ಫಿನಾಲೆ ಆರಂಭಗೊಂಡಿದೆ. ನಗರದ ಬಿಡದಿ ಬಳಿ ಇರುವ ಇನ್ನೋವೆಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣವಾಗಿರುವ ವೇದಿಕೆಯಲ್ಲಿ ‘ಬಿಗ್ ಬಾಸ್ ಸೀಸನ್ 8’ರ ವಿನ್ನರ್ ಯಾರು ಅನ್ನೋದು ಇಂದು ರಾತ್ರಿ ಬಹಿರಂಗವಾಗಲಿದೆ. ಇಂದು ಸಂಜೆ 6 ಗಂಟೆಗೆ ಫಿನಾಲೆ ಶುರುವಾಗಲಿದೆ. ರಾತ್ರಿ 11ರ ತನಕ ಫಿನಾಲೆ ಎಪಿಸೋಡ್ ನಡೆಯಲಿದೆ.

    ಈಗಾಗಲೇ ಮನೆಯಿಂದ ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಗೌಡ ಹೊರ ಬಂದಿದ್ದಾರೆ. ಅಂತಿಮ ಹಂತದಲ್ಲಿ ಮಂಜು ಪಾವಗಡ, ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ. ಇದ್ದಾರೆ.

    ಬಿಗ್‍ಬಾಸ್ ಗೆದ್ದವರಿಗೆ 53 ಲಕ್ಷ ರೂಪಾಯಿ, ರನ್ನರ್ ಅಪ್‍ಗೆ 11 ಲಕ್ಷ ರೂಪಾಯಿ, ಮೂರನೇ ಸ್ಥಾನದವರಿಗೆ 6 ಲಕ್ಷ ರೂಪಾಯಿ, ನಾಲ್ಕನೇ ಸ್ಥಾನದವರಿಗೆ 3.5 ಲಕ್ಷ ರೂಪಾಯಿ ಹಾಗೂ ಐದನೇ ಸ್ಥಾನದವರಿಗೆ 2.5 ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ. ಬಿಗ್‍ಬಾಸ್ ಮನೆಯಲ್ಲಿ ಟಾಪ್ 5 ಅಲ್ಲಿ ಇರುವ ನೀವು ಯಾರೂ ಖಾಲಿ ಕೈಯಿಂದ ವಾಪಸ್ ಹೋಗಲ್ಲ ಎಂದು ಸುದೀಪ್ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಅರವಿಂದ್ ಬೈಕ್ ರೈಡಿಂಗ್ ಮೆಚ್ಚಿ, ಬಿಗ್‍ಮನೆಯ ಪಯಣ ಬಿಚ್ಚಿಟ್ಟ ಮನೆಮಂದಿ

    ಬಿಗ್‍ಬಾಸ್ ಸ್ಪರ್ಧಿಗಳಿಗೆ ಸಿಗುತ್ತಿರುವ ಬಹುಮಾನದ ಮೊತ್ತದ ಹಣದಲ್ಲಿ ಏರಿಕೆಯಾಗಿದೆ. ಪ್ರತಿ ಬಾರಿ ಗೆದ್ದವರಿಗೆ 50 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಈ ಬಾರಿ ಈ ಮೊತ್ತದಲ್ಲಿ 3 ಲಕ್ಷ ರೂಪಾಯಿ ಏರಿಕೆ ಮಾಡಲಾಗಿದೆ. ಇನ್ನು ರನ್ನರ್ ಅಪ್‍ಗೆ 10 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಈ ಬಾರಿ ಟಾಪ್ 5ರಲ್ಲಿರುವ ಎಲ್ಲರಿಗೂ ಮೊತ್ತ ನೀಡಲಾಗುತ್ತಿದೆ. ಇದನ್ನೂ ಓದಿ: ದಿವ್ಯಾ ಉರುಡುಗ ಹೇರ್ ಕಟ್ ಮಾಡಿದ ಅರವಿಂದ್

  • ದಿವ್ಯಾ ಉರುಡುಗ ಅರವಿಂದ್ ಫುಲ್ ಕಿಲ ಕಿಲ

    ದಿವ್ಯಾ ಉರುಡುಗ ಅರವಿಂದ್ ಫುಲ್ ಕಿಲ ಕಿಲ

    ದೊಡ್ಮನೆಯ ಪ್ರಣಯ ಪಕ್ಷಿಗಳು ಎಂದೇ ಬಿಂಬಿತವಾಗಿರುವ ಅರವಿಂದ್ ಹಾಗೂ ದಿವ್ಯಾ ಉರುಡುಗ ಇಂದು ಫುಲ್ ಜೊತೆ ಜೊತೆಯಾಗಿಯೇ ಕಾಲ ಕಳೆದಿದ್ದು, ಕೊನೇಯ 11 ದಿನಗಳು ಎಂಬ ಕಾರಣಕ್ಕೋ ಏನೋ ಗೊತ್ತಿಲ್ಲ, ಬಿಗ್ ಬಾಸ್ ನೀಡಿದ ಲಕ್ಸುರಿ ಐಟಂ ಟಾಸ್ಕ್‍ನಲ್ಲಿ ಸಹ ಒಟ್ಟಿಗೆ ಆಡಿದ್ದಾರೆ.

    ಹೌದು ಅರವಿಂದ್ ಒಬ್ಬರೇ ಕುಳಿತಾಗ ದಿವ್ಯಾ ಉರುಡುಗ ಆ ಕಡೆ ಹೋಗುತ್ತಾರೆ, ಆಗ ಅರವಿಂದ್ ಬಾ ಕುಳಿತುಕೋ ಎನ್ನುತ್ತಾರೆ. ಹಾಗೇ ಹೇಳುತ್ತಲೇ ದಿವ್ಯಾ ಉರುಡುಗ ಅರವಿಂದ್ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ. ಆಗ ದಿವ್ಯಾ ಉರುಡುಗ ಕಂಡೀಶನ್ ಹಾಕುತ್ತಾರೆ. ನೀವು ಇಲ್ಲೇ ಕುಳಿತುಕೋ ಎಂದು ಹೇಳಿದರೆ ಆದರೆ ನನಗೆ ಸುಮ್ಮನೇ ಕುಳಿತುಕೊಳ್ಳಲು ಆಗಲ್ಲ, ನಾನು ಕುಳಿತುಕೊಂಡರೆ ಮಾತನಾಡಿಸುತ್ತೇನೆ, ನೀವು ಸ್ಟ್ರಾಟಜಿ ಅಂತೆಲ್ಲ ಹೇಳಂಗಿಲ್ಲ ಎನ್ನುತ್ತಾರೆ.

    ನಾನು ಏನು ಬೇಕಾದರೂ ಹೇಳಬಹದು ಎಂದು ಅರವಿಂದ್ ಅನ್ನುತ್ತಾರೆ, ಹಾಗೇ ಹೇಳಿದರೆ ಫೇರ್ ರೀತಿ ಅನ್ನಿಸುವುದಿಲ್ಲ, ನೀವು ಮೈಂಡ್ ಖಾಲಿ ಮಾಡಿಕೊಳ್ಳುತ್ತೀರಾ ಎನ್ನುತ್ತಾರೆ. ಅಲ್ಲದೆ ನಾನು ಕುಳಿತುಕೊಳ್ಳಬೇಕಾ ಎದ್ದು ಹೋಗಬೇಕಾ ಎಂದು ದಿವ್ಯಾ ಉರುಡುಗ ಪ್ರಶ್ನಿಸುತ್ತಾರೆ ಆಗ ಅರವಿಂದ್ ಕಿವಿ ಮುಚ್ಚಿಕೊಳ್ಳುತ್ತಾರೆ.

    ಇದ್ದಕ್ಕಿದ್ದಂತೆ ದಿವ್ಯಾ ಉರುಡುಗ ಮಹಾನಟಿ ಅಲ್ಲ, ಮಹಾನಟ ಎನ್ನುತ್ತಾರೆ. ಆಗ ಅರವಿಂದ್ ಯಾರು ಎಂದು ಪ್ರಶ್ನಿಸುತ್ತಾರೆ ಇಷ್ಟಕ್ಕೆ ದಿವ್ಯಾ ಬಿದ್ದು ಬಿದ್ದು ನಗುತ್ತಾರೆ. ಇಷ್ಟಾಗುತ್ತಲೇ ಲಕ್ಸುರಿ ಐಟಂ ಟಾಸ್ಕ್ ಅನೌನ್ಸ್ ಆಗುತ್ತದೆ. ಸೋಫಾ ಮೇಲೆ ಅಕ್ಕಪಕ್ಕ ಕುಳಿತಿದ್ದ ದಿವ್ಯಾ ಉರುಡುಗ, ಅರವಿಂದ್ ಅವರಿಗೆ ಕಚಗುಳಿ ಇಡಲು ಆರಂಭಿಸುತ್ತಾರೆ. ಇಬ್ಬರೂ ಒಬ್ಬರಿಗೊಬ್ಬರು ಕಚಗುಳಿ ಇಟ್ಟು ಸಖತ್ ನಕ್ಕಿದ್ದಾರೆ.

    ಈ ದೃಶ್ಯವನ್ನು ಪ್ರಶಾಂತ್ ಸಂಬರಗಿ ಮಾತ್ರ ಫುಲ್ ಗಂಭಿರವಾಗಿ ನೋಡಿದ್ದಾರೆ. ಹೀಗೆ ಕಚಗುಳಿ ಇಟ್ಟು ಫುಲ್ ನಕ್ಕಿದ್ದಾರೆ. ಬಳಿಕ ಇಬ್ಬರೂ ಟಾಸ್ಕ್ ಮಾಡಲು ತೆರಳಿದ್ದು, ನಂಬರ್ ಪ್ಲೇಟ್ ಟಾಸ್ಕ್‍ನಲ್ಲಿ ದಿವ್ಯಾ ಉರುಡುಗ ವಿನ್ ಆಗಿದ್ದಾರೆ. ಅರವಿಂದ್ ಬೇಗನೇ ನಂಬರ್ ಪ್ಲೇಟ್ ಸಂಗ್ರಹಿಸಿದರೂ ಕ್ಯಾಪ್ಟನ್ ಬಳಿ ಬೇಗ ನೀಡದ ಕಾರಣ ಸೋತಿದ್ದಾರೆ. ಬಳಿಕ ಸುಖಾಸುಮ್ಮನೇ ಸೋತೆ ಎಂದು ಪಶ್ಚಾತಾಪಪಟ್ಟಿದ್ದಾರೆ.

  • ಈಗ ನಾನು ಟ್ರೋಲ್ ಆಗುತ್ತಿರಬಹುದು – ಅರವಿಂದ್, ಚಕ್ರವರ್ತಿ ಚರ್ಚೆ

    ಈಗ ನಾನು ಟ್ರೋಲ್ ಆಗುತ್ತಿರಬಹುದು – ಅರವಿಂದ್, ಚಕ್ರವರ್ತಿ ಚರ್ಚೆ

    ಬಿಗ್‍ಬಾಸ್ ಮನೆಯಲ್ಲಿ ಫಿನಾಲೆ ಹತ್ತಿರವಾಗುತ್ತಿದೆ. ಒಂಟಿಮನೆಯ ಸ್ಪರ್ಧಿಗಳು ಗೆಲ್ಲಬೇಕು ಎಂದು ಏನೆಲ್ಲಾ ಕಸರತ್ತುಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಆದರೆ ಈ ಮಧ್ಯೆ ಸ್ಪರ್ಧಿಗಳಿಗೆ ನಾವು ಹೊರಗಡೆ ತುಂಬಾ ಟ್ರೋಲ್ ಆಗುತ್ತಿದ್ದೇವೆ ಎನ್ನುವ ಭಯ ಶುರುವಾಗಿದೆ.

    ಬಿಗ್‍ಬಾಸ್ ಮನೆಯಲ್ಲಿ ಪ್ರತಿ ಬಾರಿ ನಾನು ಟಾರ್ಗೆಟ್ ಆಗ್ತಿದ್ದೀನಿ, ನನ್ನನ್ನು ಸುದೀಪ್ ಸರ್ ಸ್ತ್ರೀ ಪೀಡಕ, ಸ್ತ್ರೀ ಕಂಟಕ ಅಂತ ಬಿಂಬಿಸುತ್ತಿದ್ದಾರೆ ಎಂದೆಲ್ಲ ಮಾತನಾಡಿದ್ದ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಈಗ ಹೊಸದೊಂದು ಆತಂಕ ಶುರುವಾಗಿದೆ. ಈ ಕುರಿತಾಗಿ ಅರವಿಂದ್ ಬಳಿ ಹೇಳಿಕೊಂಡಿದ್ದಾರೆ. ಕಳೆದ ವಾರ ಪ್ರಿಯಾಂಕಾ ತಿಮ್ಮೇಶ್ ಮನೆಯಿಂದ ಹೊರಗೆ ಹೋಗುವಾಗ, ಚಕ್ರವರ್ತಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಇದರಿಂದ ಕೋಪಗೊಂಡ ಚಕ್ರವರ್ತಿ, ಅಶ್ಲೀಲವಾಗಿ ಸನ್ನೆ ಮಾಡಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆಗಿತ್ತು. ಸುದೀಪ್ ಕೂಡ ಚಕ್ರವರ್ತಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಈ ಕುರಿತಾಗಿ ಚಕ್ರವರ್ತಿಗೆ ತಲೆನೋವು ಶುರುವಾಗಿದೆ.  

    ಫುಲ್ ಟ್ರೋಲ್ ಆಗಿರತ್ತೆ ಅಲ್ವಾ ಅದು ಎಂದು ಚಕ್ರವರ್ತಿ, ಅರವಿಂದ್ ಬಳಿ ಕೇಳಿದ್ದಾರೆ. ಮುಂಚೆ ಆಗಿದ್ದರೆ ನನಗೆ ಗೊತ್ತಾಗುತ್ತಿರಲಿಲ್ಲ. ಆದರೆ, 43 ದಿನಗಳಲ್ಲಿ ನೋಡಿದ್ದರ ಪ್ರಕಾರ, ಖಂಡಿತಾ ಅದು ಟ್ರೋಲ್ ಆಗಿರುತ್ತದೆ. ಖಂಡಿತಾ ನಿಮ್ಮನ್ನು ಮಾತ್ರ ಅಲ್ಲ, ನನ್ನನ್ನು ಚಚ್ಚಿರುತ್ತಾರೆ ಎಂದು ಅರವಿಂದ್ ಹೇಳಿದ್ದಾರೆ. ಚಚ್ಚಿರುತ್ತಾರೆ ಹಾಕ್ಕೊಂಡು ನನ್ನ, ಆದರೆ ನಿನ್ನ ಯಾಕೆ ಟ್ರೋಲ್ ಮಾಡುತ್ತಾರೆ ಎಂದು ಚಕ್ರವರ್ತಿ ಅರವಿಂದ್‍ಗೆ ಪ್ರಶ್ನೆ ಮಾಡಿದ್ದಾರೆ. ಇಲ್ಲ ನಾನು ಆಟವನ್ನು ಸರಿಯಾಗಿ ಆಡುತ್ತಿಲ್ಲ ಎಂದು ಜನ ನನ್ನ ಟ್ರೋಲ್ ಮಾಡಿರುತ್ತಾರೆ ಎಂದು ಊಹಿಸಿದ್ದಾರೆ. ಇದನ್ನೂ ಓದಿ: ಅಭಿನಯ ಶಾರದೆ, ಹಿರಿಯ ನಟಿ ಜಯಂತಿ ವಿಧಿವಶ

    ಅದೇ ನಾನು ಹೇಳಬೇಕು ಅಂದುಕೊಂಡೆ, ಪ್ರತಿವಾರವೂ ನನಗೊಂದು ಸೂಚನೆ ಬರ್ತಾ ಇದೆಯಲ್ಲಾ, ಏನಿದು? ಈ ವಾರ ನಾನು ಏನಾದ್ರೂ ಉಳಿದಕೊಂಡರೆ, ಹೆವಿ ಟಾಸ್ಕ್ ಆಡಿಬಿಡ್ತೀನಿ. ನನ್ನ ವ್ಯಕ್ತಿತ್ವ ಇರೋ ಥರ ಇದ್ದುಬಿಡ್ತೀನಿ. ಒಂದೇ ಪದ ಒಂದು ಹೆಚ್ಚಿಗೆ ಹೇಳೋದಿಲ್ಲ ಈ ಸಲ ಎಂದು ಚಕ್ರವರ್ತಿ ದೃಢ ನಿರ್ಧಾರ ಮಾಡಿದ್ದಾರೆ. ಪ್ರತಿ ವಾರ ತಪ್ಪು ಆಗ್ತಾ ಇದೆ ಸರ್ ಅದಕ್ಕೆ ಕ್ಲಾಸ್ ತಗೋತಾ ಇದ್ದಾರೆ ಎಂದು ಅರವಿಂದ್ ಹೇಳಿದ್ದಾರೆ. ಇದನ್ನೂ ಓದಿ:  ನಾನು ಮನುಷ್ಯಳೇ ಅಲ್ಲವಾ ಸರ್? – ಸುದೀಪ್‍ಗೆ ರೇಷ್ಮೆ ಅಕ್ಕ ಪ್ರಶ್ನೆ

    ಹೌದು ಬಿಗ್‍ಬಾಸ್ ಮನೆಯಲ್ಲಿ ನಡೆಯುವ ಎಷ್ಟೋ ವಿಚಾರಗಳು ಹೊರಗಿನ ಪ್ರಪಂಚದಲ್ಲಿ ಟ್ರೋಲ್ ಆಗುತ್ತಿವೆ. ಜನರು ಒಳ್ಳೆಯ ವಿಚಾರಗಳ ಕುರಿತಾಗಿ ಮಾತನಾಡುವುದ್ದಕ್ಕಿಂತ ಸ್ಪರ್ಧಿಗಿಳಿಂದ ಸಣ್ಣ ತಪ್ಪಾದರೂ ಆ ಕುರಿತಾಗಿ ಮಾತನಾಡಲು ಪ್ರಾರಂಭಿಸುತ್ತಾರೆ. ಸ್ಪರ್ಧಿಗಳು ತಾವು ಮಾಡಿರುವ ತಪ್ಪುಗಳನ್ನು ನೆನಪು ಮಾಡಿಕೊಂಡು ಟ್ರೋಲ್ ಆಗುತ್ತಿರಬಹುದು ಎಂದಿದ್ದಾರೆ.

  • ನಿಂಗೆ ಹೇಗೆ ಬೇಕೋ ಹಾಗೆ ಮಾಡು – ಡಿಯುಗೆ ಬೈದ ಅರವಿಂದ್

    ನಿಂಗೆ ಹೇಗೆ ಬೇಕೋ ಹಾಗೆ ಮಾಡು – ಡಿಯುಗೆ ಬೈದ ಅರವಿಂದ್

    ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ 21ನೇ ದಿನ ಸಂಜೆ ತಾನು ಹೇಳಿದ ಸೂಚನೆಯನ್ನು ಪಾಲಿಸದ್ದಕ್ಕೆ ಅರವಿಂದ್ ಅವರು ದಿವ್ಯಾ ಉರುಡುಗ ಅವರಿಗೆ ಬೈದಿದ್ದಾರೆ.

    ಒಂದು ಸುಳ್ಳು ಎರಡು ನಿಜ ಟಾಸ್ಕ್ ನಲ್ಲಿ ವಿಜಯ ಯಾತ್ರೆ ತಂಡ ಜಯಗಳಿಸಿದ ಬಳಿಕ ಮನೆಯ ಸದಸ್ಯರು ಅಡುಗೆ ಮನೆಯಲ್ಲಿ ಸೇರಿ ಕೆಲಸ ಮಾಡುತ್ತಿದ್ದರು. ದಿವ್ಯಾ ಯು ಅವರು ಕುಳಿತು ಸದಸ್ಯರ ಜೊತೆ ಮಾತನಾಡುತ್ತಿದ್ದರು.

    ಈ ಸಂದರ್ಭದಲ್ಲಿ ಪ್ರಶಾಂತ್ ಸಂಬರಗಿ ಅವರು ದಿವ್ಯಾ ಅವರನ್ನು ಏಳಿಸಿ ಬೆಡ್ ರೂಮ್ ಕಡೆ ಸ್ಟೆಪ್ ಹಾಕತೊಡಗಿದರು. ಸಂಬರಗಿ ಮಾತನಾಡತ್ತಾ,”ಎಷ್ಟಾದರೂ ನಾನು ನಿನ್ನನ್ನು ಬಿಟ್ಟು ಕೊಡಲ್ಲ” ಎಂದು ಹೇಳಿದಾಗ,”ಜಗಳ ಎಷ್ಟು ಮಾಡಿದ್ರೂ ನಾವು ಮತ್ತೆ ಮಾತನಾಡ್ತೀವಿ. ಎಲ್ಲ ಬೆರಳು ಹೆಬ್ಬೆರಳು ಆಗ್ತಿದೆ” ಎಂದು ಕೇಳಿ ನಕ್ಕರು.

    ದಿವ್ಯಾ ನಡೆದುಕೊಂಡು ಹೋಗುವುದನ್ನು ಗಮನಿಸಿದ ಅರವಿಂದ್,”ಒಂದು ಕಡೆ ಕೂರಕ್ಕೆ ಆಗಲ್ವಾ?. ನಾನು ಇನ್ನು ಏನು ಹೇಳಲ್ಲ. ಹೇಗೆ ಬೇಕೋ ಹಾಗೆ ಮಾಡು” ಅಂತ ಬೈದಿದ್ದಾರೆ. ಇದಕ್ಕೆ ಪ್ರಶಾಂತ್ ಸಂಬರಗಿ,”ನಿನ್ನ ಒಳ್ಳೆಯದ್ದಕ್ಕೆ ಹೇಳಿದ್ದು” ಅಂತ ಹೇಳಿ ಅರವಿಂದ್ ಮಾತಿಗೆ ಬೆಂಬಲ ಸೂಚಿಸಿದರು.

    ಕುಳಿತ ಬಳಿಕ ಸಂಬರಗಿ ಜೊತೆ,”ಪೊಲೀಸ್ ಆಫೀಸರು ಕೋಪ ಮಾಡ್ಕೋಡಿದ್ದಾರೆ. ಇದನ್ನೆಲ್ಲ ನೋಡಿ ಮನೆಯವರು ನಗ್ತಿದ್ದಾರೆ” ಅಂತ ಅರವಿಂದ್ ಮಾತಿಗೆ ದಿವ್ಯಾ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಕ್ಯೂಟ್ ಮೊಮೆಂಟ್ – ದಿವ್ಯಾ ಹಲ್ಲುಜ್ಜಿದ ಅರವಿಂದ್

    ಗಾಯಗೊಂಡಿರುವ ಕಾರಣ ಕೈಯನ್ನು ಕೆಳಗಡೆ ಜಾಸ್ತಿ ಇಡಬೇಡ. ನಡೆಯಬೇಡ ಇದರಿಂದ ಕೈ ನೋವಾಗುತ್ತದೆ ಅಂತ ಅರವಿಂದ್ ದಿವ್ಯಾಗೆ ಸೂಚನೆ ನೀಡಿದ್ದರು. ಆದರೆ ಈ ಸೂಚನೆಯನ್ನು ದಿವ್ಯಾ ಪಾಲಿಸದ್ದಕ್ಕೆ ಅರವಿಂದ್ ಕೇರ್ ಟೇಕರ್ ಆಗಿ ಬೈದಿದ್ದಾರೆ.

    ಮೊದಲ ಇನ್ನಿಂಗ್ಸ್ ನಲ್ಲೂ ದಿವ್ಯಾ ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲೂ ಸರಿಯಾದ ಸಮಯಕ್ಕೆ ಔಷಧ, ಆಹಾರವನ್ನು ಸೇವಿಸದ್ದಕ್ಕೆ ಅರವಿಂದ್ ದಿವ್ಯಾ ಮೇಲೆ ಸಿಟ್ಟು ತೋರಿಸಿದ್ದರು.

  • ಅರವಿಂದ್ ವರ್ಸಸ್ ನಿಧಿ – ಯಾರು ಸರಿ? ಯಾರು ತಪ್ಪು?

    ಅರವಿಂದ್ ವರ್ಸಸ್ ನಿಧಿ – ಯಾರು ಸರಿ? ಯಾರು ತಪ್ಪು?

    ಬಿಗ್‍ಬಾಸ್ ಮನೆಯ ಎರಡನೇ ಇನ್ನಿಂಗ್ಸ್ ನ  7ನೇ ದಿನ ಅರವಿಂದ್ ಕೆಪಿ ಮತ್ತು ನಿಧಿ ಸುಬ್ಬಯ್ಯ ನಡುವೆ ಭಾರೀ ಮಾತಿನ ಚಕಮಕಿ ನಡೆದಿದೆ.

    ‘ಥರ ಥರ ಈ ಎತ್ತರ’ ಟಾಸ್ಕ ನ ಮೂರನೇ ಸುತ್ತು ವೇಳೆ ಅರವಿಂದ್ ತರುತ್ತಿದ್ದಾಗ ಟಿಶ್ಯು ರೋಲ್ ಗಾರ್ಡನ್ ಏರಿಯಾದಲ್ಲಿ ಬಿದ್ದಿತ್ತು. ಈ ಟಿಶ್ಯುವನ್ನು ಮಂಜು ಮತ್ತು ನಿಧಿ ಎತ್ತಿದ್ದರು. ಈ ವಿಚಾರದ ಬಗ್ಗೆ ಅರವಿಂದ್ ಅಲ್ಲೇ ಆಕ್ಷೇಪ ವ್ಯಕ್ತಪಡಿಸಿ ಎತ್ತುವಂತಿಲ್ಲ ಎಂದು ಸಿಟ್ಟು ಹೊರಹಾಕಿದರು.

    ಈ ಟಾಸ್ಕ್ ಕೊನೆಯಲ್ಲಿ ಫಲಿತಾಂಶಕ್ಕೂ ಮೊದಲು ಸೂರ್ಯಸೇನೆ ಸದಸ್ಯರು ಈ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಅರವಿಂದ್, ಸಂಬರಗಿ, ಚಕ್ರವರ್ತಿ ಚಂದ್ರಚೂಡ್ ಎತ್ತುವಂತಿಲ್ಲ ಎಂದು ಹೇಳಿದರೆ, ದಿವ್ಯಾ ಈ ನಿಯಮದ ಬಗ್ಗೆ ಪುಸ್ತಕದಲ್ಲಿ ಪ್ರಸ್ತಾಪ ಮಾಡಿಲ್ಲ ಎಂದರು. ಕೊನೆಗೆ ಅರವಿಂದ್ “ಥಟ್ ಶೋಸ್ ಕ್ಯಾರೆಕ್ಟರ್” ಎಂದು ಹೇಳಿ 90 ಸೆಕೆಂಡ್ ಒಳಗಡೆ ರಿಂಗ್ ಒಳಗಡೆ ಸದಸ್ಯ ಟಿಶ್ಯು ಇಡಬೇಕು ಎನ್ನುವುದು ನಿಯಮ. ಹೀಗಾಗಿ ಸ್ಟೋರ್ ರೂಮಿಗೆ ಹೋದ ಸದಸ್ಯ ಮಾತ್ರ ಟಿಶ್ಯು ಕೊಡಬೇಕು ವಿನಾ: ಬೇರೆ ಸದಸ್ಯರು ಎತ್ತುವಂತಿಲ್ಲ ಎಂದು ತಮ್ಮ ವಾದವನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ನಿಧಿ ದೊಡ್ಡ ಫಿಗರ್ ಎಂದರೆ ನಾನು ದೊಡ್ಡ ಫಿಗರೇ

    ಈ ಚರ್ಚೆಯನ್ನು ಗಮನಿಸಿದ ನಿಧಿ ಮಂಜು ಬಳಿ ನಮ್ಮ ‘ಕ್ಯಾರೆಕ್ಟರ್’ ಬಗ್ಗೆ ಅರವಿಂದ್ ಮಾತನಾಡಿದ್ದಾನೆ ಎಂದು ದೂರಿದರು. ಸೃಷ್ಟಿಯಾಗಿರುವ ಗೊಂದಲ ಸರಿಪಡಿಸಲು ಅರವಿಂದ್ ಮಂಜು ಜೊತೆ ಮಾತನಾಡಲು ತೆರಳಿದರು. ನಿಯಮದ ಪ್ರಕಾರ ತಂಡದ ಬೇರೆ ಸದಸ್ಯರು ಟಿಶ್ಯುವನ್ನು ಎತ್ತುವಂತಿಲ್ಲ. ಮೊದಲು ನೀವು ಬೀಳಿಸಿದಾಗ ನಮ್ಮ ತಂಡದ ಸದಸ್ಯರು ಎತ್ತಿಲ್ಲ ಎಂದು ಹೇಳಿದರು. ಆದರೆ ಮಂಜು ಎತ್ತಬಹುದು ಎಂದು ಉತ್ತರಿಸಿದರು. ಈ ಸುತ್ತಿನಲ್ಲಿ ಕ್ವಾಟ್ಲೆ ಕಿಲಾಡಿಗಳು ತಂಡ ಜಯವನ್ನು ಗಳಿಸಿತು. ಇದನ್ನೂ ಓದಿ: ಒಂದೇ ಡೈಲಾಗಿನಿಂದ ನಿಧಿ, ದಿವ್ಯಾ, ಮಂಜುಗೆ ತಿವಿದ ಅರವಿಂದ್

    ಮುಂದಿನ ಸುತ್ತುಗಳಲ್ಲಿ ಈ ರೀತಿ ಗೊಂದಲ ಆಗದೇ ಇರಲು ಮತ್ತೆ ಅರವಿಂದ್ ಮಂಜು ಜೊತೆ ಮಾತನಾಡುತ್ತಿದ್ದಾಗ ನಿಧಿ ಮಧ್ಯೆ ಮಾತನಾಡಲು ಆರಂಭಿಸಿದರು. ಈ ವೇಳೆ ಅರವಿಂದ್, “ನಾನು ಕ್ಯಾಪ್ಟನ್ ಜೊತೆ ಮಾತನಾಡುತ್ತಿದ್ದೇನೆ. ನೀವು ಸ್ವಲ್ಪ ಮುಚ್ಕೊಳ್ಳಿ” ಎಂದು ನಿಧಿಗೆ ಹೇಳಿದರು.

    ಕ್ಯಾರೆಕ್ಟರ್ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ನಿಧಿ ಮೊದಲೇ ಅರವಿಂದ್ ವಿರುದ್ಧ ಸಿಟ್ಟಾಗಿದ್ದರು. ಈಗ ಮತ್ತೆ ಅರವಿಂದ್ ಸಿಟ್ಟಿನಲ್ಲಿ ಪ್ರತಿಕ್ರಿಯಿಸಿದ್ದಕ್ಕೆ ಮತ್ತೆ ಆಕ್ರೋಶಗೊಂಡರು. ಟಾಸ್ಕ್ ಮುಗಿದ ಬಳಿಕ ಅರವಿಂದ್ ನಿಧಿ ಬಳಿ ಹೋದಾಗ,”ನೋ ನೋ ಅರವಿಂದ್. ಮುಚ್ಚೊಂಡು ಹೋಗಿ”ಎಂದಾಗ ಅರವಿಂದ್,”ನೀವು ಮುಚ್ಕೊಂಡು ಇರಿ. ಜಾಸ್ತಿ ಮಾತನಾಡಬೇಡಿ” ಎಂದು ತಿರುಗೇಟು ನೀಡಿದರು. ಇದಕ್ಕೆ ನಿಧಿ,”ಕ್ರೀಡಾ ಸ್ಫೂರ್ತಿ ಇಲ್ಲ. ಪಾರ್ಟಿಸಿಪೇಷನ್ ಮೆಡಲ್‍ನಲ್ಲಿ ಬಂದಿರೋದು, ಗೆದ್ದು ತೋರಿಸು ಡಾಕರ್ ರ್‍ಯಾಲಿನ. ಲೂಸರ್ ಗೆಟ್ ಲಾಸ್ಟ್” ಎಂದು ಆಕ್ರೋಶ ಹೊರಹಾಕಿದರು. ಇದಕ್ಕೆ ಅರವಿಂದ್ ನಗುತ್ತಾ ಮುಂದಕ್ಕೆ ಸಾಗಿದರು.

    ಕೊನೆಗೆ ಶುಭಾ ಜೊತೆ ಮಾತನಾಡಿದ ಅರವಿಂದ್, ನಾನು ಇಲ್ಲಿಯವರೆಗೂ ಯಾರಿಗೂ ಕೆಟ್ಟ ಉದ್ದೇಶದಲ್ಲಿ ಮಾತನಾಡಿಲ್ಲ. ನಾನು ಹೇಳುವುದನ್ನು ನೇರವಾಗಿ ಹೇಳುತ್ತೇನೆ ಹೊರತು ಹಿಂದೆ ಹೇಳುವುದಿಲ್ಲ. ನಾಯಕರ ಮಧ್ಯೆ ಹೀಟ್ ಡಿಸ್ಕಷನ್ ಆಗಿದ್ದಾಗ ಮಧ್ಯೆ ಮಾತನಾಡಿದ್ದಕ್ಕೆ ನಾನು ಹೇಳಿದ್ದೇನೆ ಹೊರತು ಬೇರೆ ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ ಎಂದು ತಾನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡರು.

    ಒಟ್ಟಿನಲ್ಲಿ ಸುದೀಪ್ ನಡೆಸಿಕೊಡು ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಈ ವಿಚಾರ ಚರ್ಚೆಗೆ ಬರುವ ಸಾಧ್ಯತೆಯಿದೆ. ಹೀಗಾಗಿ ಇಲ್ಲಿ ನಿಧಿ, ಅರವಿಂದ್ ಹೇಳಿಕೆಯನ್ನು ನೀಡಲಾಗಿದ್ದು ಇದರಲ್ಲಿ ಯಾರು ಸರಿ? ಯಾರು ತಪ್ಪು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ.

  • ನೀವು ಬೇಜಾರ್ ಮಾಡ್ಕೋಬೇಡಿ – ಗೇಮ್ ಪ್ಲ್ಯಾನ್ ಬಗ್ಗೆ ಅರವಿಂದ್ ಮಾತು

    ನೀವು ಬೇಜಾರ್ ಮಾಡ್ಕೋಬೇಡಿ – ಗೇಮ್ ಪ್ಲ್ಯಾನ್ ಬಗ್ಗೆ ಅರವಿಂದ್ ಮಾತು

    ಬಿಗ್‍ಬಾಸ್ ಮನೆ ಸೆಕೆಂಡ್ ಇನ್ನಿಂಗ್ಸ್ ನ 6ನೇ ದಿನ ನಾಯಕ ಅರವಿಂದ್ ಅವರು ವೈಷ್ಣವಿ ಅವರನ್ನು ನೀವು ಬೇಜಾರ್ ಮಾಡ್ಕೋಬೇಡಿ ಎಂದು ಹೇಳಿ ನನ್ನ ಗೇಮ್ ಪ್ಲ್ಯಾನ್ ಏನಿತ್ತು ಎಂಬುದನ್ನು ತಂಡದ ಸದಸ್ಯರಿಗೆ ವಿವರಿಸಿದ್ದಾರೆ.

    ಎರಡನೇ ವಾರದ ಟಾಸ್ಕ್ ಗೆ ಮನೆಯ ಸದಸ್ಯರನ್ನು ಎರಡು ತಂಡಗಳನ್ನಾಗಿ ಮಾಡಲು ಬಿಗ್ ಬಾಸ್ ಮುಂದಾಗಿದ್ದರು. ಒಂದು ತಂಡದ ನಾಯಕನಾಗಿ ಮಂಜು ಈಗಾಗಲೇ ಆಯ್ಕೆ ಆಗಿದ್ದರೆ ಎರಡನೇ ತಂಡದ ಲೀಡರ್ ಆಯ್ಕೆಗೆ ಕಳೆದ ಬಾರಿಯ ಟಾಸ್ಕ್ ನಲ್ಲಿ ವಿಜೇತರಾದವರಿಗೆ ಟಾಸ್ಕ್ ನೀಡಲಾಗಿತ್ತು.

    ತುಂಡುತುಂಡಾಗಿದ್ದ ಭಾವಚಿತ್ರವನ್ನು ಸರಿಯಾಗಿ ಜೋಡಿಸುವ ಟಾಸ್ಕ್ ನಲ್ಲಿ ಅರವಿಂದ್ ಗೆದ್ದು ನಾಯಕನಾಗಿ ಆಯ್ಕೆ ಆಗುತ್ತಾರೆ. ಇದಾದ ಬಳಿಕ ಅರವಿಂದ್ ಮತ್ತು ಮಂಜು ತಂಡವನ್ನು ಆಯ್ಕೆ ಮಾಡಿಕೊಳ್ಳುವ ಪೆಡಸ್ಟಾಲ್ ಟಾಸ್ಕ್ ಗೆ ಸಿದ್ಧವಾಗುತ್ತಾರೆ.

    ಈ ಟಾಸ್ಕ್ ನಲ್ಲಿ ಅರವಿಂದ್ ಅನುಕ್ರಮವಾಗಿ ದಿವ್ಯಾ ಉರುಡುಗ, ದಿವ್ಯಾ, ಪ್ರಶಾಂತ್, ಚಕ್ರವರ್ತಿ, ಶಮಂತ್, ವೈಷ್ಣವಿ ಅವರನ್ನು ಆಯ್ಕೆ ಮಾಡಿದರು. ಮಂಜು ದಿವ್ಯ ಸುರೇಶ್, ರಘು, ನಿಧಿ ಸುಬ್ಬಯ್ಯ ಅವರನ್ನು ಆಯ್ಕೆ ಮಾಡಿದ್ದರು. ಈ ವೇಳೆಗೆ ಅರವಿಂದ್ 5 ಮಂದಿಯನ್ನು ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಶುಭಾ ಪೂಂಜಾ ಮತ್ತು ಪ್ರಿಯಾಂಕಾ ತಿಮ್ಮೇಶ್ ಮಂಜು ತಂಡವನ್ನು ಸೇರಿದರು.

    ತಂಡ ರಚನೆಯಾದ ನಂತರ ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ಅವರನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್, ನಮ್ಮ ಟೀಂನವವರ ಜೊತೆ ಒಳ್ಳೇದಾಗಿರಿ, ಆ ಟೀಂ ಜೊತೆಗೂ ಚೆನ್ನಾಗಿರಿ. ನಿಮ್ಮನ್ನು ನಾನು ಕೊನೆಗೆ ತೆಗೆದುಕೊಳ್ಳಬಹುದಿತ್ತು. ಯಾಕೆಂದರೆ ಮಂಜ ನಿಮ್ಮನ್ನು ತಗೆದುಕೊಳ್ಳುತ್ತಿರಲಿಲ್ಲ. ಅದಕ್ಕೆ ನಾನು ನಿಮ್ಮನ್ನು ಫಸ್ಟ್ ಆಯ್ಕೆ ಮಾಡಿದ್ದು, ಬೆಸ್ಟ್ ಫಲಿತಾಂಶ ನೀಡಬೇಕು ಎಂದರು. ಇದನ್ನೂ ಓದಿ: ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿ ‘ಕಪ್’ ಗೆದ್ದ ದಿವ್ಯಾ

    ತನ್ನ ಮಾತನ್ನು ಮುಂದುವರಿಸಿದ ಅರವಿಂದ್, ನಿಮ್ಮನ್ನು ಲಾಸ್ಟ್ ತೆಗೆದುಕೊಂಡೆ ಎಂದು ಬೇಜಾರು ಮಾಡಿಕೊಳ್ಳಬೇಡಿ. ನಿಮ್ಮನ್ನು ಫಸ್ಟ್ ತೊಗೊಬಿಡ್ತಿದ್ದೆ ಎಂದು ವೈಷ್ಣವಿ ಜೊತೆ ಹೇಳಿದರು.ಇದನ್ನೂ ಓದಿ:ಪತ್ತರವಳ್ಳಿ ಅಂದರೆ ಬೇಲಿ ಸಂದಿಯಲ್ಲಿ ನಡೆಯುವ ಕಾಮ: ಮಂಜು ವಿರುದ್ಧ ಚಕ್ರವರ್ತಿ ಗರಂ

     

    ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರಗಿ ಜೊತೆ ಮಂಜು, ದಿವ್ಯಾ ಸಂಬಂಧ ಈಗಾಗಲೇ ಹಾಳಾಗಿದೆ. ಹೀಗಾಗಿ ಇವರಿಬ್ಬರು ಯಾರ ತಂಡ ಸೇರುತ್ತಾರೆ ಎಂಬ ಕುತೂಹಲ ಇತ್ತು. ಆದರೆ ಆರವಿಂದ್ ದಿವ್ಯಾ ಅವರನ್ನು ಆಯ್ಕೆ ಮಾಡಿದ ಬಳಿಕ ಪ್ರಶಾಂತ್ ಮತ್ತು ಚಕ್ರವರ್ತಿ ಅವರನ್ನು ಆಯ್ಕೆ ಮಾಡಿ ಮತ್ತೆ ಮನೆಯ ಸದಸ್ಯರ ಮಧ್ಯೆ ಗಲಾಟೆ ಆಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.

     

    ವೈಷ್ಣವಿ, ದಿವ್ಯಾ, ಅರವಿಂದ್ ಕಿಚನ್ ವಿಭಾಗವನ್ನೇ ನೋಡಿಕೊಳ್ಳುತ್ತಿದ್ದಾರೆ. ಮೂವರು ಮನೆಯ ಒಳಗಡೆ ಮತ್ತು ಹೊರಗಡೆಯೂ ಅತ್ಯುತ್ತಮ ಸ್ನೇಹಿತರಾಗಿದ್ದಾರೆ. ಪ್ರಶಾಂತ್, ಚಕ್ರವರ್ತಿ, ಶಮಂತ್ ಸಹ ಉತ್ತಮ ಸ್ನೇಹಿತರು. ಹೀಗಾಗಿ ಉತ್ತಮ ಸ್ನೇಹಿತರು ಇರುವ ಅರವಿಂದ್ ತಂಡ ಎದುರಾಳಿ ಮಂಜು ತಂಡದ ವಿರುದ್ಧ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಮೂಡಿದೆ.

  • ದೊಡ್ಮನೆಯಲ್ಲಿ ‘ಕೆ’ ಯಾರು – ರಿವೀಲ್ ಮಾಡಿದ್ರು ಅರವಿಂದ್

    ದೊಡ್ಮನೆಯಲ್ಲಿ ‘ಕೆ’ ಯಾರು – ರಿವೀಲ್ ಮಾಡಿದ್ರು ಅರವಿಂದ್

    ಬಿಗ್ ಮನೆಯಲ್ಲಿದ್ದಾಗ ಸುದ್ದಿಯಾಗಿದ್ದ ಅರವಿಂದ್, ದಿವ್ಯಾ ಉರುಡುಗ ಈಗ ದೊಡ್ಮನೆಯಿಂದ ಹೊರ ಬಂದ ಬಳಿಕವೂ ಸುದ್ದಿಯಾಗುತ್ತಿದ್ದಾರೆ. ಲೈವ್‍ಗೆ ಬಂದು ಅಭಿಮಾನಿಗಳ ಪ್ರಶ್ನೆಗೆ ಈ ಜೋಡಿ ಉತ್ತರ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅರವಿಂದ್ ಅವರು ‘ಕೆ’ ಎಂದು ಯಾರನ್ನು ನಾನು ಕರೆಯುತ್ತಿದ್ದೆ ಎಂಬುದನ್ನು ತಿಳಿಸಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿ ದಿವ್ಯಾ ಹೆಸರಿನಲ್ಲಿ ಇಬ್ಬರು ಸ್ಪರ್ಧಿಗಳು ಇರುವ ಕಾರಣ ಮನೆಯ ಸದಸ್ಯರು ದಿವ್ಯಾ ಸುರೇಶ್ ಅವರನ್ನು ‘ಡಿಎಸ್’ ಎಂದು ದಿವ್ಯಾ ಉರುಡುಗ ಅವರನ್ನು ‘ಡಿಯು’ ಎಂದು ಕರೆಯುತ್ತಿದ್ದರು. ಉಳಿದ ಸ್ಪರ್ಧಿಗಳು ಅರವಿಂದ್ ಅವರನ್ನು ‘ಅರವಿಂದ್’ ಎಂದೇ ಕರೆಯುತ್ತಿದ್ದರೆ ದಿವ್ಯಾ ಅವರು ‘ಅವಿ’ ಎಂದು ಕರೆಯುತ್ತಿದ್ದರು. ಆದರೆ ಅರವಿಂದ್ ಉರುಡುಗ ಅವರನ್ನು ಕೆಲವೊಮ್ಮೆ ‘ಕೆ’ ಎಂದು ಕರೆಯುತ್ತಿದ್ದರು.

     

    ಈ ಪ್ರಶ್ನೆಗೆ ಉತ್ತರಿಸಿದ ಅರವಿಂದ್,”ದಿವ್ಯಾ ಅವರ ಇನ್ನೊಂದು ಹೆಸರು ‘ಕವನ’. ಹೀಗಾಗಿ ನಾನು ಶಾರ್ಟ್ ಆಗಿ ‘ಕೆ’ ಕರೆಯುತ್ತಿದ್ದೆ” ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಮಾತನಾಡಿದ ದಿವ್ಯಾ,”ಮನೆಯವರಿಗೆ ಮತ್ತು ಕುಟುಂಬ ಹತ್ತಿರದ ಸಂಬಂಧಿಗಳಿಗೆ ಮಾತ್ರ ‘ಕವನ’ ಹೆಸರು ಗೊತ್ತಿತ್ತು. ಬೇರೆಯವರಿಗೆ ಗೊತ್ತಿರಲಿಲ್ಲ. ನನ್ನ ಎಲ್ಲ ದಾಖಲೆಗಳಲ್ಲಿ ದಿವ್ಯಾ ಅಂತ ಇದೆ” ಎಂದು ತಿಳಿಸಿದರು.

    ಅಭಿಮಾನಿಗಳ ಹಲವು ಪ್ರಶ್ನೆಗೆ ಉತ್ತರ ನೀಡಿದ ದಿವ್ಯಾ, “ನಾನು ಹುಷಾರಿಲ್ಲದ ಸಮಯದಲ್ಲಿ ಅರವಿಂದ್ ಅವರು ನನ್ನನ್ನು ತಾಯಿ ರೀತಿ ನೋಡಿದ್ದರು. ಅವರು ನನ್ನ ಬಟ್ಟೆ ಒಗೆಯುತ್ತಾರೆ ಎನ್ನುವುದು ಗಮನಕ್ಕೆ ಬಂದೇ ಇರಲಿಲ್ಲ. ಸುದೀಪ್ ಸರ್ ವಾಯ್ಸ್ ನೋಟ್ ಬಗ್ಗೆ ಅವರ ಪ್ರತಿಕ್ರಿಯೆ ತಿಳಿದುಕೊಳ್ಳಲು ವಾಷ್ ರೂಮ್‍ಗೆ ಬಂದಾಗ ನನಗೆ ಶಾಕ್ ಆಯ್ತು. ಇದಕ್ಕೆ ಹೇಗೆ ಪ್ರತಿಕ್ರಿಯೆ ಕೊಡಬೇಕು ಎನ್ನುವುದು ಗೊತ್ತಾಗುತ್ತಿಲ್ಲ” ಎಂದು ಪ್ರತಿಕ್ರಿಯಿಸಿದರು.

    ಯಾಕೆ ದಿವ್ಯಾ ಅವರ ಬಟ್ಟೆಯನ್ನು ಒಗೆದುಕೊಟ್ಟೆ ಎಂಬುದನ್ನು ವಿವರಿಸಿದ ಅರವಿಂದ್, “ನಾನು ಹಾಸ್ಟೆಲ್‍ನಲ್ಲಿ ಓದಿ ಬೆಳೆದಿದ್ದೇನೆ. ನನಗೂ ಬೇರೆಯವರ ಕಷ್ಟ ಗೊತ್ತಾಗುತ್ತದೆ. ನಾನು ಗಾಯಗೊಂಡಿದ್ದಾಗ ನನ್ನ ಬಟ್ಟೆಯನ್ನು ಬೇರೆಯವರು ಒಗೆದುಕೊಟ್ಟಿದ್ದರು. ಹೀಗಾಗಿ ಹುಷಾರಿಲ್ಲದೇ ಇರುವಾಗ ಸಹಾಯ ಮಾಡಿದೆ. ಒಂದು ವೇಳೆ ಅಂದು ನಾನು ಬಟ್ಟೆ ಒಗೆಯದೇ ಇದ್ದರೆ ಸುಸ್ತಾಗಿ ಅಂದೇ ದಿವ್ಯಾ ಮನೆಯನ್ನು ತೊರೆಯುವ ಸಾಧ್ಯತೆ ಇತ್ತು” ಎಂದು ಹೇಳಿದರು.

    ಬಿಗ್‍ಬಾಸ್ ಮನೆಯಲ್ಲಿ ‘ಕ್ಯಾಚ್’ ಆಗಿರುವ ಈ ಜೋಡಿಯ ಕ್ಯೂಟ್ ನಡತೆಗೆ ಅಭಿಮಾನಿಗಳು ‘ಬೌಲ್ಡ್’ ಆಗಿದ್ದಾರೆ. ದೊಡ್ಮನೆಯಲ್ಲಿ ‘ಕವನ’ಗೆ ಕವನದ ಮೂಲಕ ಪ್ರೇಮ ಪತ್ರ ರವಾನಿಸಿದ್ದ ಅರವಿಂದ್ ಮುಂದೆ ಉರುಡುಗ ಜೀವನದಲ್ಲೂ ‘ಕವನ’ ಬರೆಯಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.