Tag: aravind kp

  • ಅಭಿಮಾನಿಗಳಿಗೆ ಸೂಪರ್ ಚಾಲೆಂಜ್ ಕೊಟ್ರು ದಿವ್ಯಾ ಉರುಡುಗ- ಅರವಿಂದ್ ಜೋಡಿ

    ಅಭಿಮಾನಿಗಳಿಗೆ ಸೂಪರ್ ಚಾಲೆಂಜ್ ಕೊಟ್ರು ದಿವ್ಯಾ ಉರುಡುಗ- ಅರವಿಂದ್ ಜೋಡಿ

    ಬಿಗ್ ಬಾಸ್ ಮನೆಯಲ್ಲಿ (Bigg Boss House) ಪ್ರೇಮ ಪಕ್ಷಿಗಳಾಗಿ (Love Birds) ದಿವ್ಯಾ ಉರುಡುಗ, ಅರವಿಂದ್ ಹೈಲೈಟ್ ಆಗಿದ್ದರು. ಇದೀಗ `ಅರ್ದಂ ಬರ್ಧ ಪ್ರೇಮ ಕಥೆ’ (Ardhamardhapremakathe) ಸಿನಿಮಾದ ಮೂಲಕ ಜೋಡಿಯಾಗಿ ಬರುತ್ತಿದ್ದಾರೆ. ಇದೀಗ ಈ ಚಿತ್ರದ `ಜಿಂಗಲಕಾ ಲಕಾ ಲಕಾ’ ಹಾಡು ಜನಪ್ರಿಯತೆ ಪಡೆದುಕೊಂಡಿದೆ. ಹಾಗಾಗಿ ಈ ಸಾಂಗನ್ನ ರೀಲ್ಸ್ ಮಾಡುವ ಚಾಲೆಂಜ್ ಅನ್ನ ದಿವ್ಯಾ, ಅರವಿಂದ್ ಜೋಡಿ ಅಭಿಮಾನಿಗಳಿಗೆ ನೀಡಿದ್ದಾರೆ.

    ದಿವ್ಯಾ (Divya Uruduga) ಮತ್ತು ಅರವಿಂದ್ ಕೆ.ಪಿ (Aravind Kp) ಮೊದಲು ಭೇಟಿಯಾಗಿದ್ದು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ, ಈ ಪರಿಚಯವೇ ಪ್ರೀತಿಗೆ ತಿರುಗಿದೆ. `ಅರ್ದಂ ಬರ್ಧ ಪ್ರೇಮ ಕಥೆ’ ಚಿತ್ರದ ಮೂಲಕ ಚೆಂದದ ಲವ್ ಸ್ಟೋರಿಯನ್ನ ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ. ಇಬ್ಬರೂ ಜೋಡಿಯಾಗಿ ತೆರೆಯ ಮೇಲೆ ರಂಜಿಸಲು ಬರುತ್ತಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳಿಗೆ ಬಂಪರ್ ಆಫರ್ ಕೊಟ್ರು ವಿಜಯ್ ದೇವರಕೊಂಡ

    ಇದೀಗ `ಜಿಂಗಲಕಾ ಜಿಂಗಲಕಾ’ ಸಾಂಗ್ ಫ್ಯಾನ್ಸ್‌ಗೆ ಇಷ್ಟವಾಗಿದೆ. ಹಾಗಾಗಿ ದಿವ್ಯಾ ಮತ್ತು ಅರವಿಂದ್ ಜೋಡಿ ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಬಳಿಕ ಫ್ಯಾನ್ಸ್‌ಗೆ ಕೂಡ ಈ ಹಾಡನ್ನ ರೀಲ್ಸ್‌ ಮಾಡಿ, ಟ್ಯಾಗ್ ಮಾಡಿ ಎಂದು ಚಾಲೆಂಜ್ ಮಾಡಿದ್ದಾರೆ. ಈಗಾಗಲೇ ಅವರು ಮಾಡಿರುವ ರೀಲ್ಸ್ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವಿವ್ಸ್ ಗಿಟ್ಟಿಸಿಕೊಳ್ಳುತ್ತಿದೆ.

     

    View this post on Instagram

     

    A post shared by DU✨ (@divya_uruduga)

    ಇನ್ನೂ ದಿವ್ಯಾ ಮತ್ತು ಅರವಿಂದ್ ಅವರ ಪ್ರೇಮಕಥೆ ಸೀಕ್ರೆಟ್ ಆಗಿ ಉಳಿದಿಲ್ಲ. ಸಿನಿಮಾ ರಿಲೀಸ್ ಬಳಿಕ ಈ ವರ್ಷವೇ ಈ ಜೋಡಿ ಹಸೆಮಣೆ ಏರಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರೀತಿಯ ಅರವಿಂದ್‌ಗಾಗಿ ದಿವ್ಯಾ ಒಲವಿನ ಪತ್ರ

    ಪ್ರೀತಿಯ ಅರವಿಂದ್‌ಗಾಗಿ ದಿವ್ಯಾ ಒಲವಿನ ಪತ್ರ

    ಬಿಗ್ ಬಾಸ್ ಸೀಸನ್ 8ರಲ್ಲಿ ಪ್ರೇಮ ಪಕ್ಷಿಗಳಾಗಿ ದಿವ್ಯಾ ಉರುಡುಗ (Divya Uruduga) ಮತ್ತು ಅರವಿಂದ್ ಕೆಪಿ (Aravind Kp) ಹೈಲೈಟ್ ಆಗಿದ್ದರು. ಬಳಿಕ ಬಿಗ್ ಬಾಸ್ ಸೀಸನ್ 9ಕ್ಕೆ ದಿವ್ಯಾ ಕಾಲಿಟ್ಟಿದ್ದರು. ಇದೀಗ ದೊಡ್ಮನೆಯ ಆಟಕ್ಕೆ ಬ್ರೇಕ್ ಬಿದ್ದಿದೆ. ಈ ಬೆನ್ನಲ್ಲೇ ದಿವ್ಯಾ, ಅರವಿಂದ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ವಿಶೇಷ ಸಾಲುಗಳ ಮೂಲಕ ವಿಶ್ ಮಾಡಿದ್ದಾರೆ.

    ಸೀಸನ್ 9 ಬಿಗ್ ಬಾಸ್‌ನ್ಲೂ (Bigg Boss Kannada 9) ದಿವ್ಯಾ ಉರುಡುಗ ಮಿಂಚಿದ್ದರು. ಕಳೆದ ಸೀಸನ್‌ನಲ್ಲಿ ಅರವಿಂದ್ (Aravind) ಜೊತೆ ಹೈಲೈಟ್ ಆಗಿದ್ದ ದಿವ್ಯಾ ಈ ಬಾರಿ ಒಂಟಿಯಾಗಿ ಆಟವಾಡಿ ಟಾಪ್‌ 5 ಫೈನಲಿಸ್ಟ್‌ನಲ್ಲಿ ಒಬ್ಬರಾಗಿದ್ದರು. ಬಳಿಕ ಐದನೇ ರನ್ನರ್ ಅಪ್ ಆಗಿ ಹೊರಬಂದಿದ್ದರು. ದಿವ್ಯಾ ಬಿಗ್ ಬಾಸ್ ಮನೆಯಲ್ಲಿ ಇದ್ದ ಕಾರಣ ಅರವಿಂದ್ ಬರ್ತ್‌ಡೇ ಮಿಸ್ ಆಗಿತ್ತು. ಈಗ ಅರವಿಂದ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಇದನ್ನೂ ಓದಿ: ಗಡಿನಾಡ ಕನ್ನಡಿಗ ವಿವಾದದ ಬಗ್ಗೆ ರೂಪೇಶ್ ಶೆಟ್ಟಿ ಪ್ರತಿಕ್ರಿಯೆ

    ದೇಶವೇ ಬೆನ್ ತಟ್ಟೋ ಭಾಗ್ಯದ ನಿಧಿ ನೀ, ನೀ ನಗುವಿಗೆ ನಾಯಕ ನೀ ಕೋಟಿ ಮನಸಿಗೆ ಸ್ಫೂರ್ತಿ..ನೀ ಅರವಿಂದ್ ಕೆಪಿ ಎಂದು ದಿವ್ಯಾ ಉರುಡುಗ ಹಾಡಿ ಹೊಗಳಿದ್ದಾರೆ. ಈ ಮೂಲಕ ಅವಿ ಹುಟ್ಟುಹಬ್ಬಕ್ಕೆ ದಿವ್ಯಾ ವಿಶ್‌ ಮಾಡಿದ್ದಾರೆ. ಇನ್ನೂ ಈ ಸೀಸನ್‌ನಲ್ಲಿ ಕವಿತೆ ವಿಚಾರದಲ್ಲಿ ರಾಜಣ್ಣ ಮತ್ತು ದಿವ್ಯಾ ನಡುವೆ ಜಗಳ ಆಗಿತ್ತು. ಸಾಂಗ್ ಬರೆಯಲು ನಾನು ಸಹಾಯ ಮಾಡಿದ್ದೆ, ಆದರೆ ನನಗೆ ಕ್ರೆಡಿಟ್ ಕೊಡಲಿಲ್ಲ ಎಂದಿದ್ರು. ಅದಕ್ಕೆ ಅರವಿಂದ್‌ಗಾಗಿ ಬರೆದ ಸಾಲುಗಳು ನನ್ನದೇ. ಇದರ ಕ್ರೆಡಿಟ್ ನನಗೆ ಮಾತ್ರ ಸಲ್ಲಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

     

    View this post on Instagram

     

    A post shared by DU✨ (@divya_uruduga)

    ಇನ್ನೂ ದಿವ್ಯಾ ಮತ್ತು ಅರವಿಂದ್ ಇಬ್ಬರು ಎಂಗೇಜ್ ಆಗಿದ್ದಾರೆ. ಸದ್ಯದಲ್ಲೇ ಹಸೆಮಣೆ (Wedding) ಏರಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಿವ್ಯಾ- ಅರವಿಂದ್ ಮದುವೆ ಆದರೆ ಡಿವೋರ್ಸ್ ಗ್ಯಾರಂಟಿ: ಆರ್ಯವರ್ಧನ್

    ದಿವ್ಯಾ- ಅರವಿಂದ್ ಮದುವೆ ಆದರೆ ಡಿವೋರ್ಸ್ ಗ್ಯಾರಂಟಿ: ಆರ್ಯವರ್ಧನ್

    ಬಿಗ್ ಬಾಸ್ ಮನೆ (Bigg Boss House) ಆಟ ಗ್ರ್ಯಾಂಡ್‌ ಫಿನಾಲೆಗೆ ಲಗ್ಗೆ ಇಡ್ತಿದ್ದಂತೆ ದೊಡ್ಮನೆಯಿಂದ ಆರ್ಯವರ್ಧನ್ ಗುರೂಜಿ ಹೊರಬಂದಿದ್ದಾರೆ. ಮಿಡ್ ನೈಟ್‌ನಲ್ಲಿ ಎಲಿಮಿನೇಟ್ ಆಗುವ ಮೂಲಕ ಗುರೂಜಿ ಆಟಕ್ಕೆ ಬ್ರೇಕ್ ಬಿದ್ದಿದೆ. ದೊಡ್ಮನೆಯಲ್ಲಿ ದಿವ್ಯಾ (Divya Uruduga) ಮತ್ತು ಅರವಿಂದ್ (Aravind Kp) ಮದುವೆಯಾದರೆ ಡಿವೋರ್ಸ್ (Divorce) ಆಗುತ್ತೆ ಎಂಬ ಮಾತನ್ನ ಹೇಳಿದ್ದರು. ಇದೀಗ ಈ ಬಗ್ಗೆ ಗುರೂಜಿ ಮಾತನಾಡಿದ್ದಾರೆ.

    ಬಿಗ್ ಬಾಸ್ ಸೀಸನ್ 8ರಲ್ಲಿ ಲವ್ ಬರ್ಡ್ಸ್ (Love Birds) ಆಗಿ ದಿವ್ಯಾ ಮತ್ತು ಅರವಿಂದ್ ಕಾಣಿಸಿಕೊಂಡಿದ್ದರು. ಈ ಶೋ ಮೂಲಕ ಇಬ್ಬರ ಪ್ರೀತಿಯ ವಿಚಾರ ಇಡೀ ಕರ್ನಾಟಕಕ್ಕೆ ಪರಿಚಯವಾಗಿತ್ತು. ಹೀಗಿರುವಾಗ ದಿವ್ಯಾ ಮತ್ತು ಅರವಿಂದ್ ಮದುವೆ ಆದರೆ ಡಿವೋರ್ಸ್ ಆಗುತ್ತೆ ಎಂದು ಮಾತನಾಡಿದ್ದರು. ಬಿಗ್ ಬಾಸ್ ಜರ್ನಿಯ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಹಂಚಿಕೊಳ್ಳುವಾಗ ದಿವ್ಯಾ, ಅರವಿಂದ್ ಬಗ್ಗೆ ಕೂಡ ಮಾತನಾಡಿದ್ದಾರೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ ಮಾಡಲು ಲಂಡನ್‌ಗೆ ಹಾರಿದ ರಮ್ಯಾ- ಅಮೃತಾ

    ಯಾವಾಗಲೂ ರಾಂಗ್ ಡೇಟ್ ಬೆಸ್ಟ್ ಫ್ರೆಂಡ್ಸ್ ಆಗುತ್ತಾರೆ. ಆದರೆ ಬೆಸ್ಟ್ ಜೋಡಿಯಾಗಿ ಬದುಕೋಕೆ ಆಗಲ್ಲ. ದಿವ್ಯಾ, ಅರವಿಂದ್ ಮದುವೆಯಾದರೆ ಡಿವೋರ್ಸ್ ಗ್ಯಾರಂಟಿ ಎಂದು ಗುರೂಜಿ ಹೇಳಿದ್ದಾರೆ.

    ಇನ್ನೂ ದಿವ್ಯಾ ಉರುಡುಗ ಕೂಡ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ರೂಪೇಶ್ ಶೆಟ್ಟಿ, ರಾಕೇಶ್, ರಾಜಣ್ಣ, ದೀಪಿಕಾ, ದಿವ್ಯಾ ಈ ಐವರಲ್ಲಿ ಬಿಗ್ ಬಾಸ್ ವಿನ್ನರ್ ಪಟ್ಟ ಯಾರಿಗೆ ಸಿಗಲಿದೆ ಎಂದು ಕಾದುನೋಡಬೇಕಿದೆ. ಫಿನಾಲೆಗೆ ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದಿವ್ಯಾಳ ಆಸೆಯಂತೆ ದೊಡ್ಮನೆಗೆ ಎಂಟ್ರಿ ಕೊಟ್ಟ ಅರವಿಂದ್ ಕೆ.ಪಿ

    ದಿವ್ಯಾಳ ಆಸೆಯಂತೆ ದೊಡ್ಮನೆಗೆ ಎಂಟ್ರಿ ಕೊಟ್ಟ ಅರವಿಂದ್ ಕೆ.ಪಿ

    ಬಿಗ್ ಬಾಸ್ ಮನೆಯ (Bigg Boss House) ಆಟದ ಅಂತಿಮ ಹಣಾಹಣಿಗೆ ಕೇವಲ ಮೂರೇ ದಿನ ಬಾಕಿಯಿದೆ. ಹೀಗಿರುವಾಗ ಸ್ಪರ್ಧಿಗಳಿಗೆ ಬಿಗ್ ಬಾಸ್ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಡಬಲ್ ಧಮಾಕ ಎನ್ನುವಂತೆ, ಮನೆಗೆ ಹೊಸ ಅತಿಥಿಗಳ ಆಗಮನವಾಗಿದೆ. ಈ ಮೂಲಕ ಬಿಗ್ ಬಾಸ್ ಮನೆಯ ರಂಗು ಹೆಚ್ಚಾಗಿದೆ. ದಿವ್ಯಾ (Divya Uruduga) ಆಸೆಯಂತೆ ಅರವಿಂದ್ ಕೆಪಿ (Aravind Kp) ಅವರನ್ನು ದೊಡ್ಮನೆಗೆ ಕಳುಹಿಸಲಾಗಿದೆ.

    ದೊಡ್ಮನೆಯ ಕಾಳಗಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಈ ಬಾರಿ ಬಿಗ್ ಬಾಸ್ (Bigg Boss) ಯಾರು ಗೆದ್ದು ಬೀಗಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಸ್ಪರ್ಧಿಗಳಲ್ಲೂ ಆತಂಕ ಹೆಚ್ಚಾಗಿದೆ. ಈ ನಡುವೆ ಬಿಗ್ ಸರ್ಪ್ರೈಸ್ ನೀಡುವ ಮೂಲಕ ಸ್ಪರ್ಧಿಗಳನ್ನು ಸಂತಸ ಪಡಿಸುತ್ತಿದೆ. ಇತ್ತೀಚಿಗಷ್ಟೆ ದಿವ್ಯಾ ಉರುಡುಗ ಬಿಗ್ ಬಾಸ್‌ಗೆ ಒಂದು ಮನವಿ ಮಾಡಿದ್ದರು. ಅರವಿಂದ್ ಕೆಪಿ ಅವರನ್ನು ಮನೆಯೊಳಗೆ ಕಳುಹಿಸಿ ಎಂದು ಕೇಳಿಕೊಂಡಿದ್ದರು. ದಿವ್ಯಾ ಆಸೆಯಂತೆ ಅರವಿಂದ್ ಕೆಪಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಅರವಿಂದ್ ನೋಡಿ ದಿವ್ಯಾ ಅಚ್ಚರಿ ಪಟ್ಟಿದ್ದಾರೆ. ಇದನ್ನೂ ಓದಿ:ಸುಶಾಂತ್ ಶವ ಪರೀಕ್ಷೆ ಸಿಬ್ಬಂದಿ ಬೆನ್ನಿಗೆ ನಿಂತ ನಟನ ಸಹೋದರಿ

    ಬಿಗ್ ಬಾಸ್ ಕೊನೆಯ ವಾರದಲ್ಲಿ ಸ್ಪರ್ಧಿಗಳಿಗೆ ಒಂದೊಂದು ಆಸೆ ಈಡೇರಿಸುವುದಾಗಿ ಹೇಳಿದ್ದರು. ಆಗ ದಿವ್ಯಾ ಉರುಡುಗ ಅರವಿಂದ್ ಮನೆ ಒಳಗೆ ಬರಲಿ ಎಂದು ಕೇಳಿಕೊಂಡಿದ್ದರು. ಇನ್ನೂ ರೂಪೇಶ್ ಶೆಟ್ಟಿ (Roopesh Shetty) ಹುಲಿ ಕುಣಿತ ನೋಡಬೇಕೆಂದು ಹೇಳಿದ್ದರು. ಇಬ್ಬರ ಆಸೆಯನ್ನು ಬಿಗ್ ಬಾಸ್ ಈಡೇರಿಸಿದೆ. ಮನೆಗೆ ಹುಲಿ ಕುಣಿತ ಮಾಡುವವರು ಬಿಗ್ ಬಾಸ್ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಅರವಿಂದ್ ಕೆಪಿ ಬಂದರು. ಹುಲಿ ಮುಖವಾಡ ಹಾಕಿ ಮನೆಯೊಳಗೆ ಎಂಟ್ರಿ ಕೊಟ್ಟರು. ಅರವಿಂದ್ ನೋಡಿ ದಿವ್ಯಾ ಸಖತ್ ಎಗ್ಸಾಯಿಟ್ ಆದರು. ಬಳಿಕ ಅರವಿಂದ್ ಅವರನ್ನು ತಬ್ಬಿಕೊಂಡು ಸಂತಸ ಪಟ್ಟರು.

    ಇನ್ನೂ ಆರ್ಯವರ್ಧನ್ ಗುರೂಜಿ (Aryavardhan Guruji) ಎಲಿಮಿನೇಷನ್ (Elimination) ನಂತರ ಟಾಪ್ ಸ್ಪರ್ಧಿಗಳಲ್ಲಿ ದಿವ್ಯಾ ಉರುಡುಗ ಕೂಡ ಒಬ್ಬರಾಗಿದ್ದಾರೆ. ರೂಪೇಶ್ ರಾಜಣ್ಣ, ರಾಕೇಶ್, ರೂಪೇಶ್ ಶೆಟ್ಟಿ, ದೀಪಿಕಾ ದಾಸ್, ದಿವ್ಯಾ ಈ ಐವರಲ್ಲಿ ಯಾರಿಗೆ ವಿಜಯಲಕ್ಷಿö್ಮ ಒಲಿಯಲಿದೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಲ್ಲಿ ಅರವಿಂದ್‌ಗಾಗಿ ಬೇಡಿಕೆಯಿಟ್ಟ ದಿವ್ಯಾ ಉರುಡುಗ

    ಬಿಗ್ ಬಾಸ್ ಮನೆಯಲ್ಲಿ ಅರವಿಂದ್‌ಗಾಗಿ ಬೇಡಿಕೆಯಿಟ್ಟ ದಿವ್ಯಾ ಉರುಡುಗ

    ದೊಡ್ಮನೆಯಲ್ಲಿ ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಹಾಗಾಗಿ ಸ್ಪರ್ಧಿಗಳಿಗೆ ವಿಶೇಷ ಅವಕಾಶವೊಂದನ್ನ ಬಿಗ್ ಬಾಸ್ (Bigg Boss) ನೀಡಿದ್ದಾರೆ. ಸ್ಪರ್ಧಿಗಳ ಒಂದು ಆಸೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.

    ಬಿಗ್ ಬಾಸ್ ಸೀಸನ್‌ 9ರ ಫಿನಾಲೆಗೆ ನಾಲ್ಕು ದಿನ ಬಾಕಿಯಿದೆ. ಈ ಅಂತಿಮ ಹಂತದಲ್ಲಿ ಬಿಗ್ ಬಾಸ್ ಮನೆಯಲ್ಲಿ ಪೂರೈಸದೇ ಉಳಿದ ಆಸೆಯನ್ನ ಪೂರೈಸುವ ಭರವಸೆಯನ್ನು ಬಿಗ್ ಬಾಸ್ ನೀಡಿದ್ದಾರೆ. ಅವುಗಳ ಪೈಕಿ ಸಾಧ್ಯವಿರುವ ಒಂದು ಆಸೆಯನ್ನು ಬಿಗ್ ಬಾಸ್ ಪೂರೈಸುತ್ತಾರೆ. ಒಬ್ಬಬ್ಬರಾಗಿ ತಮ್ಮ ಆಸೆಗಳನ್ನ ಸ್ಪರ್ಧಿಗಳು ಬಿಚ್ಚಿಟ್ಟಿದ್ದಾರೆ. ಈ ವೇಳೆ ದಿವ್ಯಾ (Divya Uruduga) ಇಟ್ಟಿರುವ ಬೇಡಿಕೆ ವೀಕ್ಷಕರಿಗೆ ಖುಷಿ ಕೊಟ್ಟಿದೆ.‌ ಇದನ್ನೂ ಓದಿ: ರಚನಾ ದಶರಥ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡ ಲೋಕೇಶ್ ಬಸವಟ್ಟಿ

    ಪ್ರತಿಯೊಬ್ಬರು ಆಕ್ಟಿವಿಟಿ ರೂಮಿಗೆ ತೆರಳಿ, ಅಲ್ಲಿರುವ ಆಶಾ ಭಾವಿಯ ಎದುರು ತಮ್ಮ ಮೂರು ಆಸೆಗಳನ್ನ ಕೋರಿಕೊಂಡು ಆ ನಾಣ್ಯವನ್ನು ಭಾವಿಯೊಳಗೆ ಎಸೆಯಬೇಕು. ಅದರಂತೆ ಎಲ್ಲಾ ಸ್ಪರ್ಧಿಗಳು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

    ಈ ವೇಳೆ ದಿವ್ಯಾ, ಮನೆಯೊಳಗೆ ಜಾತ್ರೆ ನಡೆಯಬೇಕು. ಸುದೀಪ್ ಸರ್ (Kiccha Sudeep) ಮನೆಯೊಳಗೆ ಬಂದು ಅಡುಗೆ ಮಾಡಿ. ಅವರೊಂದಿಗೆ ಊಟ ಮಾಡಬೇಕು. ಹಾಗೆಯೇ ಬಿಗ್ ಬಾಸ್ 8ರ ದಿವ್ಯಾ ಸಹಸ್ಪರ್ಧಿ ಅರವಿಂದ್ ಕೆ.ಪಿ (Aravind Kp) ಮನೆಯೊಳಗೆ ಬರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಮನವಿ ಮಾಡಿ, ಬಾವಿಯೊಳಗೆ ನಾಣ್ಯವನ್ನ ಎಸೆದಿದ್ದಾರೆ. ಈ ಎಲ್ಲದರ ಪೈಕಿ ಬಿಗ್ ಬಾಸ್ ಯಾರ ಆಸೆಯನ್ನು ಪೂರೈಸುತ್ತಾರೆ ಎಂಬುದನ್ನ ಕಾದುನೋಡಬೇಕಿದೆ.

    ಬಿಗ್ ಬಾಸ್ ಸೀಸನ್ 8ರಲ್ಲಿ ಅರವಿಂದ್ ಮತ್ತು ದಿವ್ಯಾ ಕಾಣಿಸಿಕೊಂಡಿದ್ದರು. ಈ ಶೋನಿಂದ ಪರಿಚಯವಾದ ಸ್ನೇಹ, ಪ್ರೇಮಕ್ಕೆ ತಿರುಗಿದೆ. ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದೆ.

    Live Tv
    [brid partner=56869869 player=32851 video=960834 autoplay=true]

  • ದಿವ್ಯಾ, ಅರವಿಂದ್ ಮದುವೆಯಾದರೆ ಡಿವೋರ್ಸ್ ಆಗುತ್ತೆ ಎಂದು ಭವಿಷ್ಯ ನುಡಿದ ಗುರೂಜಿ

    ದಿವ್ಯಾ, ಅರವಿಂದ್ ಮದುವೆಯಾದರೆ ಡಿವೋರ್ಸ್ ಆಗುತ್ತೆ ಎಂದು ಭವಿಷ್ಯ ನುಡಿದ ಗುರೂಜಿ

    ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ನೇರ ನುಡಿಯಿಂದ ಸಾಕಷ್ಟು ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿರುವ ಗುರೂಜಿ ದಿವ್ಯಾ ಉರುಡುಗ (Divya Uruduga) ಬಗ್ಗೆ ಭವಿಷ್ಯ ನುಡಿದಿದ್ದಾರೆ. ಮುಖ, ಕೆನ್ನೆ, ತುಟಿ ನೋಡಿ ಭವಿಷ್ಯ ಹೇಳುತ್ತಿದ್ದ ಗುರೂಜಿ ಇದೀಗ ದಿವ್ಯಾ ಭವಿಷ್ಯದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

    ದೊಡ್ಮನೆ ಆಟ ಇದೀಗ ಸಾಕಷ್ಟು ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಇನ್ನೂ ಓಟಿಟಿಯಿಂದ ಟಿವಿ ಬಿಗ್ ಬಾಸ್‌ನಲ್ಲೂ ಹೈಲೈಟ್ ಆಗುತ್ತಿರುವ ಆರ್ಯವರ್ಧನ್ ಗುರೂಜಿ, ದಿವ್ಯಾ ಹುಟ್ಟಿದ ದಿನಾಂಕದ ಅನುಸಾರವಾಗಿ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ದಿವ್ಯಾ ಉರುಡುಗ (Divya Uruduga), ಅರವಿಂದ್‌ನ(Aravind Kp) ಮದುವೆಯಾದರೆ ಡಿವೋರ್ಸ್ ಆಗುತ್ತೆ ಎಂದು ಗುರೂಜಿ ಭವಿಷ್ಯ ನುಡಿದಿರೋದು ಈಗ ದಿವ್ಯಾ ಮುನಿಸಿಗೆ ಕಾರಣವಾಗಿದೆ.

    ರಾಕೇಶ್ ಅಡಿಗ(Rakesh Adiga) ಬಳಿ ಗುರೂಜಿ ಮಾತನಾಡುತ್ತಿದ್ದರು. ಈ ವೇಳೆ ದಿವ್ಯಾ ಕೂಡ ಇದ್ದರು. ಈ ವೇಳೆ ಹುಟ್ಟಿದ ದಿನಾಂಕ ಅನುಸಾರವಾಗಿ ಭವಿಷ್ಯ ಹೇಳಿದ್ದಾರೆ. 7ನೇ ತಾರೀಖಿನವರಿಗೆ 8ನೇ ತಾರೀಖಿನವರು ಲೈಫ್ ಪಾರ್ಟ್ನರ್ ಆಗೋಕೆ ಆಗಲ್ಲ. ಬೆಸ್ಟ್ ಫ್ರೆಂಡ್ ಆಗಿರ್ತಾರೆ. ಲೈಫ್ ಪಾರ್ಟ್ನರ್ ಆದರೆ ಅವರು ಡಿವೋರ್ಸ್ ಆಗ್ತಾರೆ ಎಂದರು ಆರ್ಯವರ್ಧನ್ ಗುರೂಜಿ. ಇದನ್ನೂ ಓದಿ:ಅಪ್ಪುಗೆ ‘ಕರ್ನಾಟಕ ರತ್ನ’ ಪ್ರದಾನ: ಅತಿಥಿಯಾಗಿ ಬೆಂಗಳೂರಿಗೆ ಬಂದ ಜ್ಯೂನಿಯರ್ ಎನ್.ಟಿ.ಆರ್

    ಅಸಲಿಗೆ, ದಿವ್ಯಾ ಉರುಡುಗ ಅವರದ್ದು 7ನೇ ತಾರೀಖು. ಅರವಿಂದ್.ಕೆ.ಪಿ ಅವರದ್ದು 8ನೇ ತಾರೀಖು. ಹೀಗಾಗಿ, ಆರ್ಯವರ್ಧನ್ ಗುರೂಜಿ ನುಡಿದ ಭವಿಷ್ಯವನ್ನ ದಿವ್ಯಾ ಉರುಡುಗ ಕೈಯಲ್ಲಿ ಅರಗಿಸಿಕೊಳ್ಳಲು ಆಗಲಿಲ್ಲ. ಹೀಗಾಗಿ, ನಮಸ್ಕಾರ ನಿಮ್ಮ ಜ್ಯೋತಿಷ್ಯಕ್ಕೆ. ನಾನು ಇಲ್ವೇ ಇಲ್ಲ ಇದಕ್ಕೆ ಎಂದು ದಿವ್ಯಾ ಎದ್ದು ಹೊರಟುಬಿಟ್ಟರು. ದಿವ್ಯಾ ಮತ್ತು ಅರವಿಂದ ಬಿಗ್ ಬಾಸ್ 8ರಲ್ಲಿ ಪರಿಚಯವಾಗಿ, ಅಲ್ಲಿಂದ ಹೊರಬಂದ ಮೇಲೂ ಜೊತೆಯಾಗಿದ್ದಾರೆ. ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲಿ ಗುರೂಜಿ ಹೇಳಿರುವ ಮಾತು, ದಿವ್ಯಾ ಮನಸ್ಸಿಗೆ ಘಾಸಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಿಮಗೆ ಬೈಕರ್ ಸಿಗಲ್ಲಾ, ನೀವು ಅವರನ್ನೇ ಹಿಡಿದುಕೊಳ್ಳುತ್ತೀರಾ ಎಂದು ದಿವ್ಯಾ ಉರುಡುಗ ಕಾಲೆಳೆದ ಕಿಚ್ಚ ಸುದೀಪ್

    ನಿಮಗೆ ಬೈಕರ್ ಸಿಗಲ್ಲಾ, ನೀವು ಅವರನ್ನೇ ಹಿಡಿದುಕೊಳ್ಳುತ್ತೀರಾ ಎಂದು ದಿವ್ಯಾ ಉರುಡುಗ ಕಾಲೆಳೆದ ಕಿಚ್ಚ ಸುದೀಪ್

    ಪ್ರೇಕ್ಷಕರ ಬಾಯಲ್ಲಿ ಸದ್ಯ ಮನೆಮಾತರಾಗಿರುವ ಶೋ ಅಂದ್ರೆ ಬಿಗ್ ಬಾಸ್, ಕಳೆದ ಒಂಭತ್ತು ಸೀಸನ್‌ನಿಂದ ಬಿಗ್ ಬಾಸ್ ಸಖತ್ ಮೋಡಿ ಮಾಡುತ್ತಲೇ ಬರುತ್ತಿದೆ. ಇದೀಗ ಟಿವಿ ಬಿಗ್ ಬಾಸ್(Bigg Boss) ಹೊಸ ಸೀಸನ್ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಇದೀಗ ಒಂದು ವಾರ ಕಳೆದಿದ್ದು, ಕಿಚ್ಚನ ಪಂಚಾಯಿತಿಯಲ್ಲಿ ದಿವ್ಯಾ ಉರುಡುಗ (Divya Uruduga) ಕಾಲೆಳೆದಿದ್ದಾರೆ ಕಿಚ್ಚ ಸುದೀಪ್.

     

    View this post on Instagram

     

    A post shared by DU✨ (@divya_uruduga)

    ಸ್ಯಾಂಡಲ್‌ವುಡ್ ನಟಿ ದಿವ್ಯಾ ಉರುಡುಗ ಬಿಗ್ ಬಾಸ್ ಸೀಸನ್ 8ರಲ್ಲಿ ಮೋಡಿ ಮಾಡಿದ್ದರು. ಎರಡನೇ ಬಾರಿ ಸ್ಪರ್ಧಿಯಾಗಿ ಬಿಗ್ ಬಾಸ್ ಸೀಸನ್ 9ರಲ್ಲಿ ಹೈಲೆಟ್ ಆಗುತ್ತಿದ್ದಾರೆ. ಕಳೆದ ಬಾರಿ ಬೈಕ್ ರೇಸರ್ ಅರವಿಂದ್ ಜೊತೆ ದಿವ್ಯಾ ಹೆಸರು ಸಖತ್ ಸುದ್ದಿ ಮಾಡಿತ್ತು. ಬಳಿಕ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ. ಮದುವೆಯ ಹಂತಕ್ಕೂ ಹೋಗಿದೆ ಎನ್ನಲಾಗಿತ್ತು. ಇದೀಗ ಈ ಸೀಸನ್ ದಿವ್ಯಾ ತಮ್ಮ ಪಾರ್ಟರ್ ಆಗಿ ಬೈಕ್ ರೇಸರ್ ಐಶ್ವರ್ಯಾ(Aishwarya) ಅವರನ್ನೇ ಸೆಲೆಕ್ಟ್ ಮಾಡಿರೋದನ್ನ ನೋಡಿ ಸುದೀಪ್ (Sudeep), ದಿವ್ಯಾ ಉರುಡುಗ ಅವರ ಕಾಲೆಳೆದಿದ್ದಾರೆ. ಇದನ್ನೂ ಓದಿ:ಮಗಳ ಆಗಮನದ ಖುಷಿಯಲ್ಲಿ ಮೇಘನಾ ರಾಜ್

    ನಿಮಗೆ ಬೈಕರ್ ಸಿಗಲ್ಲಾ, ನೀವು ಅವರನ್ನೇ ಹಿಡಿಕೊತ್ತೀರಾ. ನೀವು ಬೈಕರ್‌ನ್ನೇ ಹುಡುಕುತ್ತೀರಾ ಹಂಗೆ ಅದು. ನೀವು ತಾನೇ ಐಶ್ವರ್ಯ ಅವರನ್ನ ಆಯ್ಕೆ ಮಾಡಿದ್ದು, ನೀವು ಕಳೆದ ಸೀಸನ್ ಯಾರನ್ನು ಬೈಕರ್ ಅಂತಾ ಅಂದುಕೊಂಡಿಲ್ಲಾ ಅಲ್ವಾ. ಅವರು ಬೈಕರ್ ಆದರು ಎಂದು ಪರೋಕ್ಷವಾಗಿ ಅರವಿಂದ್ ಹೆಸರು ಹೇಳದೇ ಕಿಚ್ಚ ಸುದೀಪ್ ದಿವ್ಯಾಗೆ ತಮಾಷೆ ಮಾಡಿದ್ದಾರೆ. ಕಿಚ್ಚ ಮತ್ತು ದಿವ್ಯಾ ಮಾತುಕಥೆ ನೋಡಿ ಮನೆ ಮಂದಿಯೆಲ್ಲಾ ನಕ್ಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ-ಅರವಿಂದ ಪಾಲಿಗೆ ಈ ದಿನ ಯಾಕೆ ಸ್ಪೆಷಲ್ ಗೊತ್ತಾ?

    ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ-ಅರವಿಂದ ಪಾಲಿಗೆ ಈ ದಿನ ಯಾಕೆ ಸ್ಪೆಷಲ್ ಗೊತ್ತಾ?

    ಕಿರುತೆರೆಯ ದೊಡ್ಮನೆ `ಬಿಗ್ ಬಾಸ್ ಸೀಸನ್ 8’ರ ಮೂಲಕ ಗಮನ ಸೆಳೆದ ಜೋಡಿ ದಿವ್ಯಾ ಉರುಡುಗ ಮತ್ತು ಅರವಿಂದ್ ಅವರ ಪಾಲಿಗೆ ಈ ದಿನ ವಿಶೇಷವಾಗಿದೆ. ತಮ್ಮ ಜೋಡಿಯ ಫೋಟೋ ಶೇರ್ ಮಾಡಿ, ಈ ಬಗ್ಗೆ ನಟಿ ದಿವ್ಯಾ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by DU✨ (@divya_uruduga)


    `ಬಿಗ್ ಬಾಸ್ ಸೀಸನ್ 8′ 2021ರಲ್ಲಿ ಆರಂಭವಾಯಿತು. ನಟಿ ದಿವ್ಯಾ ಆಗಲೇ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದರು. ಅರವಿಂದ್ ಕೆ.ಪಿ ಅವರು ಕ್ರೀಡಾ ರಂಗದಲ್ಲಿ ಹೆಸರುವಾಸಿಯಾಗಿದ್ದರು. ಆದರೆ ಇಬ್ಬರಿಗೂ ನೇಮ್ ಆ್ಯಂಡ್ ಫೇಮ್ ಕೊಟ್ಟ ಶೋ ಅಂದ್ರೆ ಬಿಗ್ ಬಾಸ್ ಕಾರ್ಯಕ್ರಮ. ಈ ಶೋ ಮೂಲಕ ಅಪಾರ ಅಭಿಮಾನಿಗಳ ಮನ ಗೆದ್ದಿದ್ದರು.

    ಈ ಶೋ ಮೂಲಕನೇ ಇಬ್ಬರು ಪರಿಚಯವಾಗಿ, ಆ ಪರಿಚಯ ಪ್ರೀತಿಗೆ ಸೇತುವೆ ಆಗಿತ್ತು. ಇದೀಗ ನಟಿ ದಿವ್ಯಾ, ಅರವಿಂದ್ ಜತೆಗಿನ ಹೊಸ ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

     

    View this post on Instagram

     

    A post shared by DU✨ (@divya_uruduga)

    ನಟಿ ದಿವ್ಯಾ ಮತ್ತು ಅರವಿಂದ್ ಕೆ.ಪಿ ಭೇಟಿ ಮಾಡಿ ಇಂದಿಗೆ 500 ದಿನ ಕಳೆದಿದೆ. ಈ ವಿಶೇಷ ದಿನಕ್ಕೆ ವಿಶೇಷ ಫೋಟೋ ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸಿದ್ದಾರೆ. ಭೇಟಿಯಾದ ಮೊದಲ ದಿನದಿಂದ ಇಲ್ಲಿಯವರೆಗೂ ಒಬ್ಬರ ಕೆಲಸಕ್ಕೆ ಮತ್ತೊಬ್ಬರು ಸಾಥ್ ನೀಡುತ್ತಲೇ ಬಂದಿದ್ದಾರೆ. ಈ ಜೋಡಿ ಭೇಟಿಯಾಗಿ 500 ದಿನದ ಸಂಭ್ರಮದ ಸಾಕ್ಷಿಯಾಗಿ ಅಭಿಮಾನಿಗಳು ಕೂಡ ವಿಶೇಷ ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಶೇರ್ ಮಾಡಿಕೊಂಡು ಫ್ಯಾನ್ಸ್‌ಗೆ ದಿವ್ಯಾ ಮತ್ತು ಅರವಿಂದ್‌ ಜೋಡಿ ಧನ್ಯವಾದ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರೀತಿ ಇರಲಿ ಅಂತರಾಳದಿಂದ – ಡಿಯುಗೆ ಅರವಿಂದ್ ವಿಶ್

    ಪ್ರೀತಿ ಇರಲಿ ಅಂತರಾಳದಿಂದ – ಡಿಯುಗೆ ಅರವಿಂದ್ ವಿಶ್

    ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಸ್ಪರ್ಧಿ ದಿವ್ಯಾ ಉರುಡುಗಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಡಿಯುಗೆ ಅರವಿಂದ್ ಪ್ರೀತಿಯಿಂದ ಶುಭಾಶಯ ತಿಳಿಸಿದ್ದಾರೆ.

    ಕನ್ನಡ ಕಿರುತೆರೆ ಧಾರಾವಾಹಿಗಳ ಮೂಲಕ ನಟಿಯಾಗಿ ಗುರುತಿಸಿಕೊಂಡ ದಿವ್ಯಾ ಉರುಡುಗ, ಕಳೆದ ವರ್ಷ ಬಿಗ್‍ಬಾಸ್ ಸೀಸನ್-8 ಸ್ಫರ್ಧಿಯಾಗಿ ಕಾಣಿಸಿಕೊಂಡು ಕನ್ನಡಿಗರ ಮನಗೆದ್ದಿದ್ದರು. ದೊಡ್ಮನೆಯಲ್ಲಿ ಅರವಿಂದ್.ಕೆ.ಪಿ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ಈ ಜೋಡಿ, ಈಗಲೂ ಸಹ ಅಷ್ಟೇ ಉತ್ತಮ ಭಾಂದವ್ಯ ಮತ್ತು ಆತ್ಮೀಯತೆಯನ್ನು ಹೊಂದಿದೆ. ಇದನ್ನೂ ಓದಿ: ನಾನು ಸ್ವಲ್ಪ ಸೈಕೊ- ರಶ್ಮಿಕಾ ಮಂದಣ್ಣ

    ಜೋಡಿ ಹಕ್ಕಿಗಳಂತೆ ಆಗಾಗಾ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಫೋಟೋ ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಇಂದು ದಿವ್ಯಾ ಉರುಡುಗ ಅವರು 32ನೇ ವಸಂತಕ್ಕೆ ಕಾಲಿಟ್ಟಿದ್ದು, ದಿವ್ಯಾ ಉರುಡುಗ ಜೊತೆಗಿರುವ ಫೋಟೋವೊಂದನ್ನು ಅರವಿಂದ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಹುಟ್ಟುಹಬ್ಬದ ಶುಭಾಶಯಗಳು ಕೆ(ಕಾವ್ಯ). ಪ್ರೀತಿ ಇರಲಿ ಅಂತರಾಳದಿಂದ ಎಂದು ಬರೆದುಕೊಂಡಿದ್ದಾರೆ. ಇಷ್ಟೇ ಅಲ್ಲದೇ ದಿವ್ಯಾ ಉರುಡುಗ ಕಿರುತೆರೆ ಹಾಗೂ ಬೆಳ್ಳಿತೆರೆಯ ಪುಟ್ಟ ಜರ್ನಿ ವೀಡಿಯೋವನ್ನು ತಮ್ಮ ಸ್ಟೋರಿಯಲ್ಲಿ ಕೂಡ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಂಕ್ರಾಂತಿಗೆ ಅಮೂಲ್ಯ ಮನೆಗೆ ಗಂಗೆ, ದ್ರೌಪದಿ ಆಗಮನ

     

    View this post on Instagram

     

    A post shared by Aravind K P (@aravind_kp)

    ವಿಶೇಷವಾಗಿ ಅರವಿಂದ್ ಅವರು ಸಾಮಾನ್ಯವಾಗಿ ದಿವ್ಯಾ ಉರುಡುಗ ಅವರೊಂದಿಗೆ ಹಂಚಿಕೊಳ್ಳುವ ಪ್ರತಿಯೊಂದು ಫೋಟೋ ಕೆಳಗೆ ಪ್ರೀತಿ ಇರಲಿ ಅಂತರಾಳದಿಂದ ಎಂದು ಬರೆದುಕೊಂಡಿರುತ್ತಾರೆ. ಬಿಗ್‍ಬಾಸ್ ಕಾರ್ಯಕ್ರಮದಿಂದಲೂ ಇವರಿಬ್ಬರ ನಡುವೆ ಲವ್ವಿ, ಡವ್ವಿ ಶುರುವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ವಿಚಾರವಾಗಿ ಇಲ್ಲಿಯವರೆಗೂ ಇಬ್ಬರೂ ಸಹ ಯಾವುದೇ ಗುಟ್ಟುಬಿಟ್ಟುಕೊಟ್ಟಿಲ್ಲ. ಸದ್ಯ ದಿವ್ಯಾ ಉರುಡುಗ ಹಲವಾರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರೆ, ಮೋಟಾರ್ ರೇಸರ್ ಆಗಿರುವ ಅರವಿಂದ್ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

    ಬಿಗ್‍ಬಾಸ್ ಸ್ಪರ್ಧಿಗಳಾದ ಶುಭಾ ಪೂಂಜಾ, ದಿವ್ಯಾ ಸುರೇಶ್, ವೈಷ್ಣವಿ ಗೌಡ ಸೇರಿದಂತೆ ಹಲವಾರು ಮಂದಿ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ಮಿಸ್ ಬಿಕಿನಿ ಇಂಡಿಯಾ ಅರ್ಚನಾ ಕಾಂಗ್ರೆಸ್‍ನಿಂದ ಚುನಾವಣಾ ಅಭ್ಯರ್ಥಿ- ರಾಜಕೀಯಕ್ಕೆ ನನ್ನ ವೃತ್ತಿ ಬೆಸೆಯಬೇಡಿ

  • ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟ ಅರ್ವಿಯಾ

    ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟ ಅರ್ವಿಯಾ

    ಬೆಂಗಳೂರು: ಬಿಗ್‍ಬಾಸ್ ಸೀಸನ್8ರ ದಿವ್ಯಾ ಉರುಡುಗ ಮತ್ತು ಅರವಿಂದ್ ಇಬ್ಬರು ಮದುವೆ ಆಗುತ್ತಾರಾ? ಎಂದು ಅವರ ಅಭಿಮಾನಿಗಳು ಕೇಳುತ್ತಿರುತ್ತಾರೆ. ಆದರೆ ಇದೀಗ ಈ ವಿಚಾರವಾಗಿ ಇಬ್ಬರ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಕಿರುತೆರೆಯ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅವಾರ್ಡ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಗ್‍ಬಾಸ್ ಖ್ಯಾತಿಯ ಅರವಿಂದ್ ಮತ್ತು ದಿವ್ಯಾ ಡಾನ್ಸ್ ಮಾಡುವ ಮೂಲಕವಾಗಿ ಮನರಂಜನೆ ನೀಡಿದ್ದಾರೆ. ಈ ವೇಳೆ ಅವರಿಗೆ ಬಂದಿರುವ ಪ್ರಶ್ನೆಗೆ ಉತ್ತರಿಸುತ್ತಾ ಇಬ್ಬರು ಮದುವೆ ಕುರಿತಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:  ಗೋಕರ್ಣದಲ್ಲಿ ಪೂಜೆ, ದಕ್ಷಿಣೆ ಕಾಸಿಗಾಗಿ ಜಗಳ – ಕೊನೆಗೂ ಭಕ್ತರಿಗೆ ಅವಕಾಶ, ಅರ್ಚಕರಿಗೆ ಶಾಕ್‌

    ಬಿಗ್‍ಬಾಸ್ ಮನೆಯಿಂದ ಹೊರ ಬಂದ ನಂತರದಲ್ಲಿ ಅರವಿಂದ್‍ಗೆ ಸಾಕಷ್ಟು  ಪ್ರಪೋಸ್​ಗಳು ಬಂದಿವೆ. ಇದನ್ನು ಅರವಿಂದ್ ಅವರೇ ಒಪ್ಪಿಕೊಂಡಿದ್ದಾರೆ. ಈ ವೇಳೆ ಅವರಿಗೆ ಮದುವೆ ಯಾವಾಗ ಎನ್ನುವ ಪ್ರಶ್ನೆ ಕೇಳಲಾಯಿತು. ಆಗ ಇಬ್ಬರು ನಮಗೆ ಈ ಪ್ರಶ್ನೆ ಕೇಳುತ್ತಿಲ್ಲ ಎಂದು ನಾಚುತ್ತಾ ಹೇಳಿದ್ದಾರೆ. ಇದಕ್ಕೆ ಅರವಿಂದ್ ಕೊಂಚ ನಾಚುತ್ತಲೇ ಉತ್ತರಿಸಿದರು. ಲೈಫ್‍ನಲ್ಲಿ ಸಾಧಿಸೋಕೆ ಇನ್ನೂ ತುಂಬಾ ಇದೆ. ಎಲ್ಲವೂ ಪಾಸಿಟಿವ್ ಆಗಿಯೇ ಇದೆ. ಆ ಸಿಹಿಸುದ್ದಿ ಶೀಘ್ರವೇ ಗೊತ್ತಾಗಲಿದೆ ಎಂದರು. ಆದರೆ ಹೀಗೆ ಹೇಳುವ ಮೂಲಕವಾಗಿ ಇಬ್ಬರು ನಕ್ಕು ತಮ್ಮ ಮದುವೆ ವಿಚಾರವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಮಗ ಇಲ್ಲದೇ ಹುಟ್ಟುಹಬ್ಬ ಆಚರಿಸಲ್ಲ: ಶಾರೂಖ್ ಪತ್ನಿ ಗೌರಿ ಖಾನ್

    aravind divya

    ದಿವ್ಯಾ, ಅರವಿಂದ್ ಇಬ್ಬರು ಬಿಗ್‍ಬಾಸ್‍ನ ಟಾಪ್ ಫೈನಲ್ ಲಿಸ್ಟ್‌ಗನಲ್ಲಿ ಬಂದಿದ್ದರು. ಇರುವಷ್ಟು ದಿನ ಸಖತ್ ಮನರಂಜನೆಯನ್ನು ಈ ಜೋಡಿ ನೀಡಿತ್ತು. ಬಿಗ್‍ಬಾಸ್ ಮುಗಿದು ಸರಿಸುಮಾರು ತಿಂಗಳುಗಳೇ ಕಳೆದಿದೆ. ಆದರೆ ಈ ಜೋಡಿ ಮಾತ್ರ ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದೆ. ಬಿಗ್‍ಬಾಸ್ ಮನೆಯಿಂದ ಹೊರ ಬಂದಿರುವ ಈ ಜೋಡಿಯ ಮದುವೆ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ. ಇವರು ಯಾವಾಗ ಮದುವೆ ಆಗುತ್ತಾರೆ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇದಕ್ಕೆ ಅರವಿಂದ್ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ: ಉಪ ಚುನಾವಣೆ ಗೆಲ್ಲುವ ವಿಶ್ವಾಸ ಇದೆ: ದೇವೇಗೌಡ