Tag: aravind kp

  • ದುಬಾರಿ ಕಾರು ಖರೀದಿಸಿದ ದಿವ್ಯಾ ಉರುಡುಗ

    ದುಬಾರಿ ಕಾರು ಖರೀದಿಸಿದ ದಿವ್ಯಾ ಉರುಡುಗ

    ‘ಬಿಗ್ ಬಾಸ್’ (Bigg Boss Kannada 8) ಖ್ಯಾತಿಯ ದಿವ್ಯಾ ಉರುಡುಗ (Divya Uruduga) ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ದುಬಾರಿ ಕಾರನ್ನು ನಟಿ ಖರೀದಿಸಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ನಟಿ ಸಂಭ್ರಮಿಸಿದ್ದಾರೆ. ದಿವ್ಯಾರವರ ಖುಷಿ ಕಂಡು ಫ್ಯಾನ್ಸ್‌ ಶುಭಕೋರಿದ್ದಾರೆ.

    ಟಾಟಾ ಹ್ಯಾರಿಯರ್ ಕಾರಿನ್ನು ಮನೆಗೆ ತಂದಿದ್ದಾರೆ. ಕಾರು ಖರೀದಿಸುವಾಗ ಕುಟುಂಬಸ್ಥರು, ಅರವಿಂದ್ ಕೆಪಿ ಕೂಡ ನಟಿಯ ಜೊತೆಯಿದ್ದರು. ಇನ್ನೂ ಈ ಕಾರಿನ ಬೆಲೆ 16 ಲಕ್ಷ ರೂ.ಯಿಂದ ಆರಂಭಗೊಂಡು 32 ಲಕ್ಷ ರೂ.ವರೆಗೂ ಇದೆ. ಇದನ್ನೂ ಓದಿ:ವಾರಣಾಸಿ ಕಾಶಿ ವಿಶ್ವನಾಥ ಸನ್ನಿಧಿಯಲ್ಲಿ ಸಾಯಿ ಪಲ್ಲವಿ

     

    View this post on Instagram

     

    A post shared by DU✨ (@divya_uruduga)

    ನಟಿ ಹಂಚಿಕೊಂಡಿರುವ ಪೋಸ್ಟ್‌ಗೆ ಅರವಿಂದ್ ಕೆಪಿ (Aravind Kp) ಕೂಡ ಕಾಮೆಂಟ್ ಮಾಡಿ, ಅಭಿನಂದನೆಗಳು.. ನಿನ್ನ ಬಗ್ಗೆ ಹೆಮ್ಮೆಯಿದೆ. ಹೀಗೆ ಮುನ್ನುಗ್ಗು ಎಂದು ಶ್ಲಾಘಿಸಿದ್ದಾರೆ. ಸದ್ಯ ದಿವ್ಯಾ ‘ನಿನಗಾಗಿ’ ಸೀರಿಯಲ್‌ನಲ್ಲಿ ನಾಯಕಿಯಾಗಿ ರಚನಾ ಎಂಬ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

    ಅಂದಹಾಗೆ, ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ದಿವ್ಯಾ ಮತ್ತು ಅರವಿಂದ್ ಪರಿಚಯವಾದರು. ಆ ಸ್ನೇಹವೇ ಪ್ರೀತಿಗೆ ತಿರುಗಿತ್ತು. ಇಬ್ಬರೂ ಅದ್ಯಾವಾಗ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡಲಿದ್ದಾರೆ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

  • ಕಿಶನ್ ಜೊತೆ ಹಸೆಮಣೆ ಮೇಲೆ ಕುಳಿತ ದಿವ್ಯಾ ಉರುಡುಗ

    ಕಿಶನ್ ಜೊತೆ ಹಸೆಮಣೆ ಮೇಲೆ ಕುಳಿತ ದಿವ್ಯಾ ಉರುಡುಗ

    ‘ಬಿಗ್ ಬಾಸ್ ಕನ್ನಡ 8’ರ ಸ್ಪರ್ಧಿಯಾಗಿದ್ದ ದಿವ್ಯಾ ಉರುಡುಗ (Divya Uruduga) ಮತ್ತು ಅರವಿಂದ್ ಕೆ.ಪಿ (Aravind) ಜೋಡಿ ಅದ್ಯಾವಾಗ ಮದುವೆ ಕುರಿತು ಗುಡ್ ನ್ಯೂಸ್ ಕೊಡುತ್ತಾರೆ ಎಂದು ಕಾಯುತ್ತಿದ್ದ ಫ್ಯಾನ್ಸ್‌ಗೆ ಇದೀಗ ದಿವ್ಯಾ ಶೇರ್‌ ಮಾಡಿದ ಹೊಸ ಪೋಸ್ಟ್‌ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಿಶನ್ ಬಿಳಗಲಿ ಜೊತೆ ದಿವ್ಯಾ ಹಸೆಮಣೆ ಮೇಲೆ ಕುಳಿತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ಅರ್ವಿಯಾ ಅಭಿಮಾನಿಗಳು ಅರವಿಂದ್ ಕೆ ಪಿ ಜೊತೆ ದಿವ್ಯಾ ಮದುವೆ ಆಗಬೋದು ಎನ್ನೋ ಲೆಕ್ಕಾಚಾರದಲ್ಲಿದ್ದರೆ, ಇಲ್ಲಿ ದಿಢೀರ್ ಅಂತ ಮದುವೆ ಹೆಣ್ಣಿನ ಗೆಟಪ್‌ನಲ್ಲಿ ಕಾಣಿಸಿಕೊಂಡು ದಿವ್ಯಾ ಅಚ್ಚರಿ ಮೂಡಿಸಿದ್ದಾರೆ. ಹಾಗಂತ, ಕಿಶನ್ ಮತ್ತು ದಿವ್ಯಾ ಮದುವೆ ಆಗುತ್ತಿಲ್ಲ. ಇದೆಲ್ಲವೂ ಬರೀ ಧಾರಾವಾಹಿಗಾಗಿ ಮಾತ್ರ. ಇದನ್ನೂ ಓದಿ:ಅಜ್ಜಿಯ ನೆನೆದು ಭಾವನಾತ್ಮಕ ಪತ್ರ ಬರೆದ ಸುದೀಪ್ ಪುತ್ರಿ

     

    View this post on Instagram

     

    A post shared by Kishen Bilagali (@kishenbilagali)

    ‘ನಿನಗಾಗಿ’ ಧಾರಾವಾಹಿಯಲ್ಲಿ ದಿವ್ಯಾ ಮತ್ತು ಕಿಶನ್ ಬಣ್ಣ ಹಚ್ಚಿದ್ದಾರೆ. ಸೀರಿಯಲ್‌ನ ಮದುವೆ ದೃಶ್ಯ ಇದಾಗಿದ್ದು, ದಿವ್ಯಾ ಮತ್ತು ಕಿಶನ್ ಮದುವೆ ಗೆಟಪ್‌ನಲ್ಲಿದ್ದಾರೆ.

    ಅಂದಹಾಗೆ, ‘ಬಿಗ್ ಬಾಸ್ ಕನ್ನಡ 8’ರಲ್ಲಿ ಪರಿಚಿತರಾದ ದಿವ್ಯಾ ಮತ್ತು ಅರವಿಂದ್ ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ. ಜೊತೆಗಾಗಿ ಒಂದು ಸಿನಿಮಾ ಕೂಡ ಮಾಡಿದ್ದಾರೆ. ಇನ್ನೂ ಮುಂದಿನ ವರ್ಷ ಇಬ್ಬರೂ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ನಿಜನಾ? ಈ ಜೋಡಿ ಅಧಿಕೃತವಾಗಿ ತಿಳಿಸುವವರೆಗೂ ಕಾದುನೋಡಬೇಕಿದೆ.

  • ಅರವಿಂದ್ ಜೊತೆ ದಿವ್ಯಾ ಉರುಡುಗ ಮದುವೆ- ಸದ್ಯದಲ್ಲೇ ದಿನಾಂಕ ಬಹಿರಂಗ?

    ಅರವಿಂದ್ ಜೊತೆ ದಿವ್ಯಾ ಉರುಡುಗ ಮದುವೆ- ಸದ್ಯದಲ್ಲೇ ದಿನಾಂಕ ಬಹಿರಂಗ?

    ಬಿಗ್ ಬಾಸ್ (Bigg Boss Kannada) ರಿಯಾಲಿಟಿ ಶೋ ಮೂಲಕ ಕನ್ನಡ ಅಭಿಮಾನಿಗಳ ಹೃದಯ ಗೆದ್ದಿರುವ ನಟಿ ದಿವ್ಯಾ ಉರುಡುಗ ಇದೀಗ ಗುಡ್ ನ್ಯೂಸ್ ಎನ್ನುತ್ತಾ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ರೇಷ್ಮೆ ಸೀರೆ, ಮಲ್ಲಿಗೆ ಹೂ ಮುಡಿದು ಮದುಮಗಳ ಹಾಗೆ ಕಂಗೊಳಿಸುತ್ತಾ ದಿವ್ಯಾ ಸದ್ಯದಲ್ಲೇ ಅನೌನ್ಸ್ ಮಾಡುತ್ತೀವಿ ಎನ್ನುವ ವಿಚಾರ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ:ಅಲ್ಲು ಬ್ಯುಸಿನೆಸ್ ಪಾರ್ಕ್ ನಲ್ಲಿ ಖ್ಯಾತ ನಟ ಅಲ್ಲು ರಾಮಲಿಂಗಯ್ಯ ಪ್ರತಿಮೆ

    ವಿಡಿಯೋ ನೋಡಿದ್ರೆ ಪಕ್ಕಾ ಮದುವೆ (Wedding) ಸುದ್ದಿ ನೀಡುತ್ತಾರೆ ಎನ್ನುವ ಅನುಮಾನ ಮೂಡಿಸಿದೆ. ಅಂದಹಾಗೆ ದಿವ್ಯಾ ಉರುಡುಗ ಅಂದಕ್ಷಣ ಅರವಿಂದ್ ಕೆಪಿ ಹೆಸರು ಕೂಡ ಪಕ್ಕದಲ್ಲೇ ತಗಲಾಕೊಂಡಿರುತ್ತೆ. ಬೈಕ್ ರೇಸರ್ ಅರವಿಂದ್ ಕೆಪಿ ಕೂಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ದಿವ್ಯಾ ಮತ್ತು ಅರವಿಂದ್ ಮೊದಲ ಬಾರಿಗೆ ಭೇಟಿಯಾಗಿದ್ದು, ಇದೇ ಬಿಗ್ ಬಾಸ್ ಶೋನಲ್ಲಿ. ದೊಡ್ಮನೆಯಲ್ಲಿ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದ ಈ ಜೋಡಿ ಶೋ ಮುಗಿದ ಬಳಿಕವು ಅಷ್ಟೇ ಕ್ಲೋಸ್ ಆಗಿ ಇದ್ದಾರೆ. ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುವ ಈ ಜೋಡಿ ಇದೀಗ ಸಿಹಿ ಸುದ್ದಿ ಎಂದು ಸರ್ಪ್ರೈಸ್ ನೀಡಲು ಮುಂದಾಗಿದೆ.

    ದಿವ್ಯಾ- ಅರವಿಂದ್ (Aravind) ಸದ್ಯದಲ್ಲೇ ಮದುವೆಯಾಗುತ್ತಾರೆ ಎನ್ನುವ ಮಾತು ಅನೇಕ ದಿನಗಳಿಂದ ಕೇಳಿ ಬರುತ್ತಿದೆ. ಈ ನಡುವೆ ರಿಲೀಸ್ ಆಗಿರುವ ವಿಡಿಯೋ ನೋಡಿದ್ರೆ ಇಬ್ಬರೂ ಮದುವೆಗೆ ರೆಡಿಯಾಗಿದ್ದು‌, ಸದ್ಯದಲ್ಲೇ ಮದುವೆ ದಿನಾಂಕ ಬಹಿರಂಗ ಪಡಿಸಲಿದ್ದಾರೆ ಎನ್ನುವ ಅನುಮಾನ ಮೂಡಿಸಿದೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್, ಪ್ರಶಾಂತ್ ನೀಲ್ ಸಿನಿಮಾ ಶೂಟಿಂಗ್‌ ಯಾವಾಗ? ಇಲ್ಲಿದೆ ಅಪ್‌ಡೇಟ್

    ಫೋಟೋಶೂಟ್‌ಗೆ ರೆಡಿಯಾಗುತ್ತಿರುವ ದಿವ್ಯಾ ಅವರನ್ನು ಏನ್ ಸಮಚಾರ ಮೇಡಮ್, ಯಾವಾಗ ಎಂದು ಒಬ್ಬರು ಪ್ರಶ್ನೆ ಮಾಡುತ್ತಾರೆ. ಆದರೆ ದಿವ್ಯಾ ಸಾಮಾಚಾರ ಏನು ಇಲ್ಲ ಎನ್ನುತ್ತಾ ಹೊರಡುತ್ತಾರೆ. ಆದರೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ರೆಡಿಯಾಗುತ್ತಿದೆ ಎಂದು ಮನಸ್ಸಿನಲ್ಲೇ ಹೇಳಿಕೊಳ್ಳುತ್ತಾ ಖುಷಿ ಪಡುತ್ತಾ ಫೋಟೋಶೂಟ್‌ಗೆ ತಯಾರಾಗುತ್ತಾರೆ.

    ಎಷ್ಟೋ ದಿನದ ಕನಸು ನನಸಾಗುವ ಸಮಯ ಬಂದಿದೆ. ನನ್ನಷ್ಟೇ ಕಾತರ ನಿಮಗೂ ಇದೆ ಎಂದು ಗೊತ್ತು ಎನ್ನುತ್ತಾ ಕ್ಯಾಮೆರಾಗೆ ಪೋಸ್ ನೀಡಲು ಸಜ್ಜಾಗುತ್ತಾರೆ. ಸರ್ ಬರಲ್ವಾ ಎಂದು ಕ್ಯಾಮೆರಾ ಮ್ಯಾನ್ ಪ್ರಶ್ನೆ ಮಾಡುತ್ತಾರೆ. ಫೋನ್ ಮಾಡಿ ಕೇಳ್ತೀನಿ ಎಂದು ಫೋನ್ ಮಾಡಿ ವಿಚಾರಿಸುತ್ತಾರೆ ದಿವ್ಯಾ. ಇನ್ನು ಬಂದಿಲ್ವಾ, ಶಾಪಿಂಗ್ ಇನ್ನೂ ಮುಗಿದಿಲ್ವಾ, ನೀವು ಬಂದಿಲ್ಲ ಎಂದರೆ ನಾನು ಒಬ್ಬಳೆ ಅನೌನ್ಸ್ ಮಾಡುತ್ತೀನಿ ಎನ್ನುತ್ತಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳಿಗೆ ದಿವ್ಯಾ ಅನೌನ್ಸ್ ಮಾಡುತ್ತಿರುವುದು ಏನು? ದಿವ್ಯಾ ಕಾಲ್ ಮಾಡಿದ್ದು ಅರವಿಂದ್ ಅವರಿಗೆನಾ? ಇಬ್ಬರ ಮದುವೆ ದಿನಾಂಕ ಬಹಿರಂಗ ಪಡಿಸುತ್ತಾರಾ? ಎನ್ನುವ ಅನೇಕ ಪ್ರಶ್ನೆ ಮೂಡಿಸಿದೆ.

    ಅಂದಹಾಗೆ ದಿವ್ಯಾ (Divya Uruduga) ಸದ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ಬಳಿಕ ‘ಅರ್ದಂಬರ್ಧ ಪ್ರೇಮ ಕಥೆ’ ಸಿನಮಾದಲ್ಲಿ ನಟಿಸಿದ್ದಾರೆ. ವಿಶೇಷ ಎಂದರೆ ಆ ಸಿನಿಮಾದಲ್ಲಿ ಅರವಿಂದ್ ಕೆಪಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಅರವಿಂದ್ (Aravind) ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಬಳಿಕ ದಿವ್ಯಾ- ಅರವಿಂದ್ ಒಟ್ಟಿಗೆ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈ ನಡುವೆ ಗುಡ್ ನ್ಯೂಸ್ ನೀಡಲು ಸಜ್ಜಾಗಿರುವುದು ಅಭಿಮಾನಿಗಳಿಗೆ ಖುಷಿಯ ಜೊತೆಗೆ ಕುತೂಹಲ ಕೂಡ ಹೆಚ್ಚಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಿವುಡ್ ಸ್ಟಾರ್‌ ರಣ್‌ವೀರ್ ಸಿಂಗ್ ಭೇಟಿಯಾದ ಅರವಿಂದ್ ಕೆಪಿ

    ಬಾಲಿವುಡ್ ಸ್ಟಾರ್‌ ರಣ್‌ವೀರ್ ಸಿಂಗ್ ಭೇಟಿಯಾದ ಅರವಿಂದ್ ಕೆಪಿ

    ಬಿಗ್ ಬಾಸ್ (Bigg Boss) ಖ್ಯಾತಿಯ ಅರವಿಂದ್ ಕೆಪಿ (Aravind Kp) ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ನೆಚ್ಚಿನ ನಟ ರಣ್‌ವೀರ್ ಸಿಂಗ್ (Ranveer Singh) ಅವರನ್ನ ಭೇಟಿಯಾದ ಖುಷಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಣ್‌ವೀರ್ ಸಿಂಗ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

    ಮೋಟೋ ಜಿಪಿ (MotoGp 2023) ಬೈಕ್ ರೇಸ್ ಶೋಗಾಗಿ ಉತ್ತರಪ್ರದೇಶದ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಆಯೋಜಿಸಲಾಗಿತ್ತು. ಈ ಬೈಕ್ ರೇಸ್ ಶೋಗಾಗಿ ಬಿಗ್ ಬಾಸ್ ಅರವಿಂದ್ ಕೆಪಿ ಅವರು ಭಾಗಿಯಾಗಿದ್ದರು. ಈ ವೇಳೆ ಬಾಲಿವುಡ್ ಸ್ಟಾರ್ ನಟ ರಣ್‌ವೀರ್ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ. ಒಂದೊಳ್ಳೆಯ ಸಮಯ ಕಳೆದಿದ್ದಾರೆ. ಈ ಸಂದರ್ಭದ ಫೋಟೋ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿ, ಫ್ಯಾನ್ ಭಾಯ್ ಮೂಮೆಂಟ್ ಎಂದು ರಣ್‌ವೀರ್‌ ಮೇಲಿನ ಅಭಿಮಾನವನ್ನ ಅರವಿಂದ್ ವ್ಯಕ್ತಪಡಿಸಿದ್ದಾರೆ. ಅರವಿಂದ್ ನಯಾ ಪೋಸ್ಟ್ ಸಖತ್ ಸದ್ದು ಮಾಡುತ್ತಿದೆ. ಇದನ್ನೂ ಓದಿ:‘ಜವಾನ್’ ಸಕ್ಸಸ್ ಬಳಿಕ ಪ್ರಭಾಸ್ ಸಿನಿಮಾದಲ್ಲಿ ನಯನತಾರಾ

    ‘ಅರ್ದಂ ಬರ್ಧ ಪ್ರೇಮ ಕಥೆ’ ಸಿನಿಮಾದಲ್ಲಿ ಅರವಿಂದ್ ನಾಯಕ ನಟನಾಗಿ ಎಂಟ್ರಿ ಕೊಡ್ತಿದ್ದಾರೆ. ದಿವ್ಯಾ ಉರುಡುಗ (Divya Uruduga)  ಜೊತೆ ತೆರೆಹಂಚಿಕೊಂಡಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ರಿಲೀಸ್ ಆಗಲಿದೆ.

    ರಿಯಲ್ ಲೈಫ್‌ನಲ್ಲೂ ದಿವ್ಯಾ-ಅರವಿಂದ್ ಪ್ರೇಮಿಗಳಾಗಿದ್ದು, ಸಿನಿಮಾ ರಿಲೀಸ್ ಬಳಿಕ ಹಸೆಮಣೆ ಏರಲಿದ್ದಾರೆ. ಬಿಗ್ ಬಾಸ್ (Bigg Boss Kannada) ಪರಿಚಿತರಾದ ಈ ಜೋಡಿ ಸದ್ಯದಲ್ಲೇ ಮದುವೆ ಬಗ್ಗೆ ಅಧಿಕೃತ ಅಪ್‌ಡೇಟ್ ನೀಡಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅರವಿಂದ್ ಕೆಪಿ ಜೊತೆಗಿದ್ರೆ, ಹೀಗಾ ಮಾಡೋದು ದಿವ್ಯಾ ಉರುಡುಗ

    ಅರವಿಂದ್ ಕೆಪಿ ಜೊತೆಗಿದ್ರೆ, ಹೀಗಾ ಮಾಡೋದು ದಿವ್ಯಾ ಉರುಡುಗ

    ಬಿಗ್ ಬಾಸ್‌ನ ಪ್ರೇಮ ಪಕ್ಷಿಗಳು ರಿಯಲ್ ಲೈಫ್‌ನಲ್ಲೂ ಜೊತೆಯಾಗಿರೋದು ಗೊತ್ತೆಯಿದೆ. ಸದ್ಯದಲ್ಲೇ ದಿವ್ಯಾ ಉರುಡುಗ- ಅರವಿಂದ್ ಕೆಪಿ (Aravind kp) ಹೊಸ ಬಾಳಿಗೆ ಕಾಲಿಡಲಿದ್ದಾರೆ. ಆದರೆ ಅದ್ಯಾವಾಗ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ದಿವ್ಯಾ-ಅರವಿಂದ್ ಜೋಡಿಯ ನಯಾ ಫೋಟೋ ಸಖತ್ ವೈರಲ್ ಆಗುತ್ತಿದೆ.

    ಕಿರುತೆರೆಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದ ದಿವ್ಯಾ ಉರುಡುಗ (Divya Uruduga) ಅವರು ಬಿಗ್ ಬಾಸ್ ಮನೆಗೆ(Bigg Boss House) ಕಾಲಿಟ್ಟ ಮೇಲೆ ಲುಕ್ಕೂ ಮತ್ತು ಲಕ್ ಎರಡು ಬದಲಾಯ್ತು. ಈ ಶೋನಿಂದ ಅಪಾರ ಅಭಿಮಾನಿಗಳ ಪ್ರೀತಿ, ಜನಪ್ರಿಯತೆಯನ್ನ ನಟಿ ಗಿಟ್ಟಿಸಿಕೊಂಡಿದ್ರು. ಅಷ್ಟೇ ಅಲ್ಲ, ಬಿಗ್ ಬಾಸ್‌ನಿಂದ ಒಳ್ಳೆಯ ಲೈಫ್ ಪಾರ್ಟರ್ ಕೂಡ ಸಿಕ್ಕರು. ಅವರೇ ಅರವಿಂದ್ ಕೆಪಿ. ದೊಡ್ಮನೆಯಲ್ಲಿ ಪ್ರೇಮ ಪಕ್ಷಿಗಳಾಗಿ ಹೈಲೆಟ್ ಆಗಿದ್ದ ದಿವ್ಯಾ-ಅರವಿಂದ್ ಜೊತೆಯಾಗಿ ಈಗ 2 ವರ್ಷಗಳಾಗಿದೆ. ಇದನ್ನೂ ಓದಿ:ಬುಕ್ ರಿಲೀಸ್ ಕಾರ್ಯಕ್ರಮದಲ್ಲಿ ಡಾಲಿ, ರಾಜ್ ಬಿ ಶೆಟ್ಟಿ

    ಸದಾ ಒಂದಲ್ಲಾ ಒಂದು ಕಪಲ್ ಫೋಟೋಸ್‌ನಿಂದ ಮೋಡಿ ಮಾಡೋ ಈ ಜೋಡಿ ಈಗ, ನಟಿ ಮಯೂರಿ (Mayuri) ಅವರ ಹುಟ್ಟುಹಬ್ಬಕ್ಕೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಮಸ್ತ್ ಆಗಿ ಒಟ್ಟಿಗೆ ಊಟ ಮಾಡಿ ಫನ್ ಮಾಡಿದ್ದಾರೆ. ಈ ವೇಳೆ ಅರವಿಂದ್ ಕೆಪಿ ಜೊತೆಯಿದ್ರೆ ದಿವ್ಯಾ ಅದೆಷ್ಟರ ಮಟ್ಟಿಗೆ ತರಲೆ ಮಾಡುತ್ತಾರೆ ಎಂಬುದನ್ನ ಫೋಟೋದಲ್ಲಿ ನೋಡಬಹುದಾಗಿದೆ.

    ಅರವಿಂದ್, ದಿವ್ಯಾ ನಟನೆಯ ‘ಅರ್ದಂ ಬರ್ಧ ಪ್ರೇಮ ಕಥೆ’ ಸಿನಿಮಾದಲ್ಲಿ ಇಬ್ಬರು ಜೋಡಿಯಾಗಿ ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರ ತೆರೆಗೆ ಬರಲಿದೆ. ಈ ಸಿನಿಮಾ ರಿಲೀಸ್ ನಂತರ ಈ ಜೋಡಿ ದಾಂಪತ್ಯ ಜೀವನಕ್ಕೆ (Wedding) ಕಾಲಿಡಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಎಂದೆಂದಿಗೂ ಆರ್‌ಸಿಬಿ’ ಎಂದ ನಟಿ ದಿವ್ಯಾ ಉರುಡುಗ

    ‘ಎಂದೆಂದಿಗೂ ಆರ್‌ಸಿಬಿ’ ಎಂದ ನಟಿ ದಿವ್ಯಾ ಉರುಡುಗ

    ಬಿಗ್ ಬೆಡಗಿ (Bigg Boss Kannada) ದಿವ್ಯಾ ಉರುಡುಗ (Divya Uruduga) ದೊಡ್ಮನೆಯಲ್ಲಿ ತಮ್ಮದೇ ಶೈಲಿಯಲ್ಲಿ ಗುರುತಿಸಿಕೊಂಡವರು. ಹೊಸ ಬಗೆಯ ಪಾತ್ರಗಳ ಮೂಲಕ ಸ್ಯಾಂಡಲ್‌ವುಡ್ (Sandalwood) ನಾಯಕಿ ಇದೀಗ ಮೋಡಿ ಮಾಡ್ತಿದ್ದಾರೆ. ಸದ್ಯ ಆರ್‌ಸಿಬಿ ಕಡೆ ತಮ್ಮ ಒಲವಿನ ಬಗ್ಗೆ ಮಾತನಾಡಿದ್ದಾರೆ.

    ಕನ್ನಡಿಗರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮೇಲೆ ಎಲ್ಲಿಲ್ಲದ ಪ್ರೀತಿ. ಸಾಮಾನ್ಯರಿಂದ ಹಿಡಿದು ಸಿನಿಮಾ ತಾರೆಯರವರೆಗೂ ಆರ್‌ಸಿಬಿಗೆ ಬೆಂಬಲಿಸುತ್ತಾರೆ. ಪ್ರತಿ ಮ್ಯಾಚ್‌ನ ಮಿಸ್ ಮಾಡದೇ ನೋಡುತ್ತಾರೆ.

     

    View this post on Instagram

     

    A post shared by DU✨ (@divya_uruduga)

    ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸಿಎಸ್‌ಕೆ ತಂಡದ ಹಣಾಹಣಿಯಲ್ಲಿ ಬೆಂಗಳೂರು ತಂಡ ಸೋತಿದೆ. ಅಭಿಮಾನಿಗಳು ಫಾರ್ ಎವರ್ ಆರ್‌ಸಿಬಿ ಅಂತಾ ತಮ್ಮ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ನಟಿ ದಿವ್ಯಾ ಉರುಡುಗ ಕೂಡ ‘ಎಂದೆಂದಿಗೂ ಆರ್‌ಸಿಬಿ’ ಎಂದು ಪೋಸ್ಟ್ ಶೇರ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಇದನ್ನೂ ಓದಿ:ಹಾಸ್ಯ ನಟ ಅಲ್ಲು ರಮೇಶ್ ಹೃದಯಾಘಾತದಿಂದ ನಿಧನ

    ‘ಅರ್ದಂ ಬರ್ಧ ಪ್ರೇಮ ಕಥೆ’ ಸಿನಿಮಾ ಮೂಲಕ ಅರವಿಂದ್ ಕೆಪಿ – ದಿವ್ಯಾ ಉರುಡುಗ ಜೋಡಿಯಾಗಿ ಬರುತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ. ಮೊದಲ ಬಾರಿಗೆ ನಾಯಕ ನಟನಾಗಿ ಅರವಿಂದ್ ಕೆಪಿ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.

  • ಅರವಿಂದ್- ದಿವ್ಯಾ ಉರುಡುಗ ಪ್ರೀತಿಗೆ 2 ವರ್ಷಗಳ ಸಂಭ್ರಮ

    ಅರವಿಂದ್- ದಿವ್ಯಾ ಉರುಡುಗ ಪ್ರೀತಿಗೆ 2 ವರ್ಷಗಳ ಸಂಭ್ರಮ

    ಬಿಗ್ ಬಾಸ್ ಶೋ (Bigg Boss Kannada) ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಜೋಡಿ ದಿವ್ಯಾ-ಅರವಿಂದ್ ಕೆ.ಪಿ (Aravind Kp) ಅವರ ಪ್ರೀತಿಗೆ ಇದೀಗ 2 ವರ್ಷಗಳ ಸಂಭ್ರಮವಾಗಿದ್ದು, ಸ್ಪೆಷಲ್ ವೀಡಿಯೋವನ್ನ ನಟಿ ದಿವ್ಯಾ ಉರುಡುಗ (Divya Uruduga) ಇದೀಗ ಹಂಚಿಕೊಂಡಿದ್ದಾರೆ.

    ದೊಡ್ಮನೆಯ ಲವ್ ಬರ್ಡ್ಸ್ ದಿವ್ಯಾ ಉರುಡುಗ – ಅರವಿಂದ್ ಕೆಪಿ ಜೋಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌, ಅಡುಗೆ, ಡ್ಯಾನ್ಸ್‌ ಹೀಗೆ ಒಬ್ಬರಿಗೊಬ್ಬರು ಸಾಥ್‌ ನೀಡುತ್ತಲೇ ಬಂದಿದ್ದರು. ಇವರಿಬ್ಬರ ಸ್ನೇಹ, ಪ್ರೀತಿ ನೋಡಿಯೇ ಅಪಾರ ಅಭಿಮಾನಿಗಳು ಫಿದಾ ಆಗಿದ್ದರು.

    ಬಿಗ್ ಬಾಸ್‌ನಲ್ಲಿ ಮೊದಲು ದಿವ್ಯಾ- ಮತ್ತು ಅರವಿಂದ್ ಭೇಟಿಯಾಗಿದ್ದರು. ಇದೀಗ ಇವರಿಬ್ಬರ ಪ್ರೀತಿ ಅನುಬಂಧಕ್ಕೆ 2 ವರ್ಷವಾಗಿದೆ. ಈ ಕುರಿತ ಸ್ಪೆಷಲ್ ವೀಡಿಯೋವನ್ನ ಹಂಚಿಕೊಂಡು ಅಭಿಮಾನಿಗಳಿಗೆ ದಿವ್ಯಾ-ಅರವಿಂದ್‌ ಜೋಡಿ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: `ಸೀತಾ ರಾಮಂ’ ನಾಯಕಿಗೆ ಮದುವೆ ಪ್ರಪೋಸಲ್‌, ಖಡಕ್‌ ಉತ್ತರ ಕೊಟ್ಟ ನಟಿ

     

    View this post on Instagram

     

    A post shared by DU✨ (@divya_uruduga)

    ಬಿಗ್ ಬಾಸ್ ಶೋನ ಸುಂದರ ಕ್ಷಣಗಳನ್ನ ಹೊಂದಿರುವ ಈ ವೀಡಿಯೋ ಇದೀಗ ಅಭಿಮಾನಿಗಳ ಮನಗೆದ್ದಿದೆ. ಇನ್ನೂ ಆದಷ್ಟು ಬೇಗ ಮದುವೆಯ ಬಗ್ಗೆ ಗುಡ್ ನ್ಯೂಸ್ ಕೊಡಿ ಎಂದು ಕಾಮೆಂಟ್ ಮೂಲಕ ಫ್ಯಾನ್ಸ್ ಮನವಿ ಮಾಡಿದ್ದಾರೆ.

  • ಸಾಗರ ಜಾತ್ರೆ ಸುತ್ತಾಡಿದ `ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಉರುಡುಗ

    ಸಾಗರ ಜಾತ್ರೆ ಸುತ್ತಾಡಿದ `ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಉರುಡುಗ

    ಬಿಗ್ ಬಾಸ್ ಸೀಸನ್ 9ರ (Bigg Boss Kannada 9) ಸ್ಪರ್ಧಿ ದಿವ್ಯಾ ಉರುಡುಗ (Divya Uruduga) ಮತ್ತೆ ಸುದ್ದಿಯಲ್ಲಿದ್ದಾರೆ. ಮಲೆನಾಡಿನ ಸುಂದರಿ ದಿವ್ಯಾ, ಸಾಗರದ ಜಾತ್ರೆಯಲ್ಲಿ (Sagara Jatre) ಭಾಗಿಯಾಗಿ ಸುತ್ತಾಡಿದ್ದಾರೆ. ಈ ಕುರಿತ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

     

    View this post on Instagram

     

    A post shared by DU✨ (@divya_uruduga)

    ದೊಡ್ಮನೆಯಲ್ಲಿ ಮಿಂಚಿದ ದಿವ್ಯಾ ಉರುಡುಗ ಅವರು ಮೂಲತಃ ಮಲೆನಾಡು ತೀರ್ಥಹಳ್ಳಿಯವರಾಗಿದ್ದು, ತಮ್ಮ ಊರಿನ ಬಗ್ಗೆ ವಿಶೇಷ ಪ್ರೀತಿಯನ್ನ ಇಟ್ಟುಕೊಂಡಿದ್ದಾರೆ. ಇದೀಗ ಸಾಗರದ ಜಾತ್ರೆಯಲ್ಲಿ ಮಾಸ್ಕ್ ಧರಿಸಿ, ದೇವರ ದರ್ಶನ ಮಾಡಿದ್ದಾರೆ. ಬಳಿಕ ತಾಯಿಯ ಜೊತೆ ಜಾತ್ರೆಯಲ್ಲಿ ಸುತ್ತಿದ್ದಾರೆ. ಕುಟುಂಬದ ಜೊತೆ ಮಸ್ತ್ ಆಗಿ ಸಮಯ ಕಳೆದಿದ್ದಾರೆ. ಸಾಗರ ಜಾತ್ರೆಯ ವೀಡಿಯೋವನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

     

    View this post on Instagram

     

    A post shared by DU✨ (@divya_uruduga)

    ನಟಿಗೆ ಈ ವೀಡಿಯೋ ಈಗ ಬಗೆ ಬಗೆಯ ಕಾಮೆಂಟ್ ಹರಿದು ಬರುತ್ತಿದೆ. ನೆಟ್ಟಿಗನೊಬ್ಬ, ಛೇ ಜಾತ್ರೆಯಲ್ಲಿ ನಿಮ್ಮನ್ನ ಗುರುತಿಸಲು ಆಗಲಿಲ್ಲ ಎಂದು ಬೇಸರ ಮಾಡಿಕೊಂಡರೆ, ಮತ್ತೊಬ್ಬರು, ಅರವಿಂದ್ ಕೆಪಿ ಎಲ್ಲಿ? ಅವರಿಗೂ ಜಾತ್ರೆ ತೋರಿಸಬಹುದಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಮಂಗಳೂರಿನಲ್ಲಿ ರಜನಿ ಜೊತೆ ಶಿವರಾಜ್ ಕುಮಾರ್: ಫೋಟೋ ಲೀಕ್

    ಇನ್ನೂ ದಿವ್ಯಾ ಮತ್ತು ಅರವಿಂದ್ ಕೆಪಿ (Aravindkp) ಅಭಿನಯದ `ಅರ್ದಂ ಬರ್ಧ ಪ್ರೇಮ ಕಥೆ’ ರಿಲೀಸ್‌ಗೆ ರೆಡಿಯಿದೆ. ಸದ್ಯದಲ್ಲೇ ತೆರೆಗೆ ಬರಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿವ್ಯಾ ಹುಟ್ಟುಹಬ್ಬಕ್ಕೆ ಅರವಿಂದ್ ಸ್ವೀಟ್ ಸರ್ಪ್ರೈಸ್‌

    ದಿವ್ಯಾ ಹುಟ್ಟುಹಬ್ಬಕ್ಕೆ ಅರವಿಂದ್ ಸ್ವೀಟ್ ಸರ್ಪ್ರೈಸ್‌

    ಬಿಗ್ ಬಾಸ್ ಸೀಸನ್ 8 ಮತ್ತು 9ರಲ್ಲಿ ಸ್ಪರ್ಧಿಯಾಗಿದ್ದ ದಿವ್ಯಾ ಉರುಡುಗ (Divya Uruduga) ಹುಟ್ಟುಹಬ್ಬಕ್ಕೆ ಅರವಿಂದ್ ಕೆಪಿ ಸರ್ಪ್ರೈಸ್‌ ನೀಡಿದ್ದಾರೆ. ವಿಶೇಷವಾಗಿ ದಿವ್ಯಾ ಬರ್ತ್‌ಡೇ ಆಚರಿಸುವುದರ ಜೊತೆಗೆ ವಿಶೇಷ ಪೋಸ್ಟ್‌ವೊಂದನ್ನ ಅರವಿಂದ್ (Aravind Kp) ಶೇರ್ ಮಾಡಿದ್ದಾರೆ.

    ದೊಡ್ಮನೆಯ ಆಟ ಸೀಸನ್ 8ರಲ್ಲಿ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಪ್ರೇಮ ಪಕ್ಷಿಗಳಾಗಿ (Love Birds) ಹೈಲೈಟ್ ಆಗಿದ್ದರು. ಇತ್ತೀಚೆಗಷ್ಟೇ ಮದುವೆಯ ಬಗ್ಗೆ ಅರವಿಂದ್ ಸಿಹಿಸುದ್ದಿ ಕೊಟ್ಟಿದ್ದರು. ಈಗ ದಿವ್ಯಾಗೆ ಬಿಗ್ ಸರ್ಪ್ರೈಸ್‌‌ ಕೊಟ್ಟಿದ್ದಾರೆ. ಹುಟ್ಟುಹಬ್ಬಕ್ಕೆ (Birthday) ಗ್ರ್ಯಾಂಡ್ ಪಾರ್ಟಿ ಅರೆಂಜ್ ಮಾಡಿ, ದಿವ್ಯಾ ಅವರ ಆಪ್ತರನ್ನ ಕರೆದಿದ್ದಾರೆ. ಈ ಮೂಲಕ ಭಾವಿ ಪತ್ನಿಗೆ ಖುಷಿಪಡಿಸಿದ್ದಾರೆ. ಇಬ್ಬರು ಬ್ಲ್ಯಾಕ್ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ: `ಪುಷ್ಪ 2′ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ರು ರಶ್ಮಿಕಾ ಮಂದಣ್ಣ

     

    View this post on Instagram

     

    A post shared by Aravind K P (@aravind_kp)

    ಇನ್ನೂ ಅರವಿಂದ್ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮೂಲಕ ದಿವ್ಯಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕೃತಿ ನಡುವೆ ದೀಪಗಳು, ಇಂಪಾದ ಸಂಗೀತ, ಆಹಾರ, ಕುಟುಂಬ ಮತ್ತು ಸ್ನೇಹಿತರು ಇದು ನನ್ನ ಪರಿಪೂರ್ಣವಾದ ಹುಟ್ಟುಹಬ್ಬ ಅವಿ ಎಂದು ನಟಿ ರಿಯಾಕ್ಟ್ ಮಾಡಿದ್ದಾರೆ.

    ಇನ್ನೂ ಇಬ್ಬರು ಪ್ರೀತಿಸುತ್ತಿರುವ ವಿಚಾರವನ್ನು ಇತ್ತೀಚೆಗೆ ಅರವಿಂದ್ ರಿವೀಲ್ ಮಾಡಿದ್ದರು. ಸದ್ಯದಲ್ಲೇ ದಿವ್ಯಾ ಜೊತೆ ಮದುವೆಯಾಗುವುದಾಗಿ (Wedding) ಅರವಿಂದ್ ಸಿಹಿಸುದ್ದಿ ನೀಡಿದ್ದರು. ದಿವ್ಯಾ, ಅರವಿಂದ್ ನಟನೆಯ `ಅರ್ದಂಬರ್ಧ ಪ್ರೇಮ ಕಥೆ’ ಸಿನಿಮಾ ರಿಲೀಸ್ ನಂತರ ಮದುವೆಯ ಬಗ್ಗೆ ಅಧಿಕೃತ ಅಪ್‌ಡೇಟ್ ಸಿಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಗ್ ಬಾಸ್ ಸ್ಪರ್ಧಿಗಳ ಸಮಾಗಮ: ವೈಷ್ಣವಿ ಜೊತೆ ದಿವ್ಯಾ- ಅರವಿಂದ್ ಕೆ.ಪಿ ಜೋಡಿ

    ಬಿಗ್ ಬಾಸ್ ಸ್ಪರ್ಧಿಗಳ ಸಮಾಗಮ: ವೈಷ್ಣವಿ ಜೊತೆ ದಿವ್ಯಾ- ಅರವಿಂದ್ ಕೆ.ಪಿ ಜೋಡಿ

    ಬಿಗ್ ಬಾಸ್ ಸೀಸನ್ 9ರ (Bigg Boss Kannada 9) ಶೋಗೆ ತೆರೆಬಿದ್ದಿದೆ. ಈ ಕಾರ್ಯಕ್ರಮ ಮುಗಿದು ಈಗಾಗಲೇ 15 ದಿನಗಳಾಗಿದೆ. ಈ ಬೆನ್ನಲ್ಲೇ ದಿವ್ಯಾ ಉರುಡುಗ (Divya Uruduga) ಮತ್ತು ಅರವಿಂದ್ (Aravind Kp) ಜೋಡಿ ಸೀಸನ್ 8ರ ವೈಷ್ಣವಿ, ರಘು ಗೌಡ ಅವರನ್ನ ಮೀಟ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ದೊಡ್ಮನೆಯ ಆಟ ಸೀಸನ್ 9ರಲ್ಲೂ ದಿವ್ಯಾ ಉರುಡುಗ ಪ್ರವೀಣರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಟಾಪ್ 5 ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು. 5ನೇ ರನ್ನರ್ ಅಪ್ ಆಗಿ ಹೊರಬಂದಿದ್ದರು. ಇದೀಗ ಬಿಗ್ ಬಾಸ್ ಶೋಗೆ ತೆರೆ ಬಿದ್ದಿದೆ. ದಿವ್ಯಾ ಉರುಡುಗ ಫುಲ್ ರಿಲಾಕ್ಸ್ ಮೂಡ್‌ನಲ್ಲಿದ್ದಾರೆ. ಇದನ್ನೂ ಓದಿ: 15 ದಿನಗಳಿಂದ ಸುಧಾರಾಣಿ ಮನೆ ಶ್ವಾನ ನಾಪತ್ತೆ: ಬಿಬಿಎಂಪಿ ವಿರುದ್ಧ ನಟಿ ಗರಂ

    ಈ ಹಿಂದಿನ ಬಿಗ್ ಬಾಸ್ 8ರಲ್ಲಿ (Bigg Boss Kannada 8) ಪರಿಚಯವಾಗಿ ಸ್ಪರ್ಧಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ವೈಷ್ಣವಿ ಗೌಡ (Vaishnavi Gowda) ಮತ್ತು ರಘು ಗೌಡ (Raghu Gowda)  ಅವರನ್ನ ದಿವ್ಯಾ ಮತ್ತು ಅರವಿಂದ್ ಕೆ.ಪಿ ಜೋಡಿ ಭೇಟಿಯಾಗಿದ್ದಾರೆ. ಒಟ್ಟಿಗೆ ಮೋಜು ಮಸ್ತಿ ಮಾಡಿದ್ದಾರೆ. ಒಟ್ಟಾಗಿ ಒಂದೊಳ್ಳೆಯ ಸಮಯವನ್ನ ಕಳೆದಿದ್ದಾರೆ.

    ಬಿಗ್ ಬಾಸ್ ಶೋ ಮುಗಿದ ಮೇಲೂ ಕೂಡ ಆ ಸ್ನೇಹವನ್ನ ಮುಂದುವರೆಸಿಕೊಂಡು ಹೋಗಿರೋದನ್ನ ನೋಡಿ ವೈಷ್ಣವಿ, ರಘು, ದಿವ್ಯಾ, ಅರವಿಂದ್‌ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k