Tag: Aravind Bellad

  • ಮಸೀದಿಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ – ಪರಿಶೀಲಿಸುವಂತೆ ಪೊಲೀಸ್ ಆಯುಕ್ತರಿಗೆ ಬೆಲ್ಲದ್ ಪತ್ರ

    ಮಸೀದಿಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ – ಪರಿಶೀಲಿಸುವಂತೆ ಪೊಲೀಸ್ ಆಯುಕ್ತರಿಗೆ ಬೆಲ್ಲದ್ ಪತ್ರ

    ಹುಬ್ಬಳ್ಳಿ/ಧಾರವಾಡ: ಅಪರಿಚಿತ ಹಾಗೂ ಅನುಮಾನಾಸ್ಪದವಾಗಿ ಬೇರೆ ದೇಶದ ವ್ಯಕ್ತಿಗಳು ಹುಬ್ಬಳ್ಳಿ-ಧಾರವಾಡ (Hubballi-Dharwad) ಮಹಾನಗರದ ಕೆಲ ಮಸೀದಿಗಳಲ್ಲಿ ಓಡಾಟ ನಡೆಸುತ್ತಿದ್ದು, ಪರಿಶೀಲಿಸುವಂತೆ ಪೊಲೀಸ್ ಆಯುಕ್ತರಿಗೆ ಶಾಸಕ ಅರವಿಂದ್ ಬೆಲ್ಲದ್ (Aravind Bellad) ಪತ್ರ ಬರೆದಿದ್ದಾರೆ.

    ಅಪರಿಚಿತರ ಓಡಾಟ ಪರಿಶೀಲಿಸುವಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರಿಗೆ ಬೆಲ್ಲದ್ ಪತ್ರ ಬರೆದಿದ್ದಾರೆ. ಮೇ 17ರಂದು ಬೆಲ್ಲದ್ ಪತ್ರ ಬರೆದಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕೆಲ ಮಸೀದಿಗಳಲ್ಲಿ ಅಪರಿಚಿತರ ಓಡಾಟ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಅವರು ಸ್ಥಳೀಯರು ಅಲ್ಲ ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಬೇಕಾ, ನರಕ ಬೇಕಾ ಅಂತ ಕೇಳಿದ್ರೆ ನಾನು ನರಕವನ್ನೇ ಆಯ್ಕೆ ಮಾಡ್ತೀನಿ: ಜಾವೇದ್‌ ಅಖ್ತರ್‌

    ಹೀಗೆ ಓಡಾಡುತ್ತಿರುವವರಲ್ಲಿ ಹೊಸ ಮುಖ, ಅಪರಿಚಿತ, ಅನುಮಾನಾಸ್ಪದ ವ್ಯಕ್ತಿಗಳೇ ಹೆಚ್ಚಾಗಿದ್ದಾರೆ. ಅವರು ಹೊರ ದೇಶದ ಪ್ರಜೆಗಳಂತೆ ಭಾಸವಾಗುತ್ತಾರೆ. ಅವಳಿ ನಗರದ ವಿವಿಧ ಕೊಳಚೆ ಪ್ರದೇಶದಲ್ಲಿ (ಜನ್ನತ್ ನಗರ ಧಾರವಾಡ ಸೇರಿದಂತೆ) ವಾಸವಾಗಿದ್ದಾರೆಂಬ ಮಾಹಿತಿಯೂ ಇದೆ. ಅದಕ್ಕಾಗಿ ಈ ಕುರಿತು ಪೊಲೀಸ್ ಇಲಾಖೆ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: Hyderabad | ಚಾರ್‌ಮಿನಾರ್ ಬಳಿಯ ಗುಲ್ಜಾರ್ ಹೌಸ್‌ನಲ್ಲಿ ಬೆಂಕಿ ಅವಘಡ – 8 ಮಂದಿ ಸಜೀವ ದಹನ

    ಅವಳಿ ನಗರದಲ್ಲಿರುವ ಅಪರಿಚಿತ, ಹೊಸಮುಖದ ವ್ಯಕ್ತಿಗಳನ್ನು ವಿಚಾರಿಸಿ ಸೂಕ್ತ ಕ್ರಮ ಜರುಗಿಸಬೇಕು. ಇದರಿಂದ ಮಹಾನಗರದಲ್ಲಿ ಅಹಿತಕರ ಘಟನೆ ಆಗದಂತೆ ತಡೆಯುವ ಕೆಲಸ ಮಾಡಬೇಕೆಂದು ಶಾಸಕ ಬೆಲ್ಲದ್ ಪೊಲೀಸ್ ಆಯುಕ್ತರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಟಿಬಿ ಡ್ಯಾಂನಲ್ಲಿ ಅಧಿಕಾರಿಯ ಪುತ್ರನ ನಿಶ್ಚಿತಾರ್ಥ – ನಿಷೇಧವಿದ್ದರೂ ಖಾಸಗಿ ಕಾರ್ಯಕ್ಕೆ ಬಳಸಿಕೊಂಡು ನಿಯಮ ಉಲ್ಲಂಘನೆ

  • ಯತ್ನಾಳ್ ಉಚ್ಚಾಟನೆ ದುಃಖ ತಂದಿದೆ, ಹೈಕಮಾಂಡ್ ನಿರ್ಧಾರಕ್ಕೆ ತಲೆ ಬಾಗುವೆ: ಬೆಲ್ಲದ್

    ಯತ್ನಾಳ್ ಉಚ್ಚಾಟನೆ ದುಃಖ ತಂದಿದೆ, ಹೈಕಮಾಂಡ್ ನಿರ್ಧಾರಕ್ಕೆ ತಲೆ ಬಾಗುವೆ: ಬೆಲ್ಲದ್

    ಹುಬ್ಬಳ್ಳಿ: ಪಕ್ಷದಿಂದ ಬಸನಗೌಡ ಪಾಟೀಲ್ ಯತ್ನಾಳ್‌ರನ್ನ (Basanagouda Patil Yatnal) ಉಚ್ಚಾಟನೆ ಮಾಡಿರುವುದು ಬಹಳಷ್ಟು ದುಃಖ ತಂದಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ (Aravind Bellad) ಹೇಳಿದರು.

    ಯತ್ನಾಳ್‌ರನ್ನು ಬಿಜೆಪಿ ಪಕ್ಷದಿಂದ 6 ವರ್ಷ ಹೈಕಮಾಂಡ್ ಉಚ್ಚಾಟನೆ ಮಾಡಿರುವ ವಿಚಾರವಾಗಿ ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮದವರೊಂದಿಗೆ ಮಾತನಾಡಿದರು. ಯತ್ನಾಳ್ ಒಬ್ಬ ಪಕ್ಷದ ಹಿರಿಯ ಜನಪ್ರಿಯ ನಾಯಕರು. ಅವರು ಪಕ್ಷದಿಂದ ದೂರವಾಗುತ್ತಿರುವುದು ನನಗೆ ದುಃಖ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿಯಿಂದ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಛಾಟನೆ

    ಹೈಕಮಾಂಡ್‌ನ ನಿರ್ಧಾರಕ್ಕೆ ನಾನು ತಲೆ ಬಾಗುತ್ತೇನೆ. ಪಕ್ಷದಲ್ಲಿ ಮುಂದೆ ಎಲ್ಲವೂ ಸರಿಯಾಗುತ್ತದೆ ಎನ್ನುವ ಭರವಸೆ ನನಗಿದೆ. ಯತ್ನಾಳ್ ಅವರಿಗೆ ಕೇಂದ್ರದ ಮಂತ್ರಿಯಾಗಿ, ಶಾಸಕರಾಗಿ ಸಾಕಷ್ಟು ಅನುಭವವಿದೆ. ಅವರು ಏನೇ ವಿಷಯವಿದ್ದರೂ ನೇರವಾಗಿಯೇ ಹೇಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಸತ್ಯವಂತರಿಗಿದು ಕಾಲವಲ್ಲ.. ದುಷ್ಟಜನರಿಗೆ ಸುಭಿಕ್ಷಕಾಲ: ಉಚ್ಚಾಟನೆಗೆ ದಾಸರ ಹಾಡಿನ ಮೂಲಕ ಯತ್ನಾಳ್ ಕೌಂಟರ್

  • ನಾವು ಗೆಲ್ಲಬೇಕು ಅಂದ್ರೆ ಸಿಪಿವೈ ಅವರಿಗೆ ಟಿಕೆಟ್ ಕೊಡಬೇಕು:  ಬೆಲ್ಲದ್ ಬ್ಯಾಟಿಂಗ್

    ನಾವು ಗೆಲ್ಲಬೇಕು ಅಂದ್ರೆ ಸಿಪಿವೈ ಅವರಿಗೆ ಟಿಕೆಟ್ ಕೊಡಬೇಕು: ಬೆಲ್ಲದ್ ಬ್ಯಾಟಿಂಗ್

    ಹುಬ್ಬಳ್ಳಿ: ನಾವು ಗೆಲ್ಲಬೇಕು ಅಂದ್ರೆ ಯೋಗೇಶ್ವರ್ ( C P Yogeshwar) ಅವರಿಗೆ ಟಿಕೆಟ್ ಕೊಡಬೇಕು. ಕರ್ನಾಟಕದಲ್ಲಿ ಮೂರು ಉಪಚುನಾವಣೆ ನಡೆಯಲಿದೆ. ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆದಿದೆ ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ (Aravind Bellad) ಹೇಳಿದ್ದಾರೆ.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರ ಮನಸ್ಸಿನಲ್ಲಿ ಯೋಗೇಶ್ವರ್ ಅಭ್ಯರ್ಥಿ ಆಗಬೇಕು ಅನ್ನೋ ಆಸೆ ಇದೆ. ಅವರೇ ಚನ್ನಪಟ್ಟಣ ಅಭ್ಯರ್ಥಿ ಆಗಬೇಕು. ಯೋಗೇಶ್ವರ್ ಎನ್‌ಡಿಎ ಅಭ್ಯರ್ಥಿ ಆಗಬೇಕು. ನಮ್ಮೆಲ್ಲರಿಗೂ ಯೋಗೇಶ್ವರ್ ಅವರನ್ನೇ ಅಭ್ಯರ್ಥಿ ಮಾಡಬೇಕು ಅನ್ನೋ ಒತ್ತಾಯ ಇದೆ. ನಾವೆಲ್ಲ ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡುತ್ತೇವೆ. ಅಂತಿಮವಾಗಿ ಕುಮಾರಸ್ವಾಮಿ ತೀರ್ಮಾನ ಮಾಡುತ್ತಾರೆ. ಹಾಗೇ ನೋಡಿದರೆ ಕುಮಾರಸ್ವಾಮಿ ಅವರೇ ಯೋಗಿಶ್ವರ್ ಅವರನ್ನು ಕರೆದು ಟಿಕೇಟ್ ನೀಡಬೇಕು ಎಂದು ಹೇಳಿದರು. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಹಣಕಾಸು ವಹಿವಾಟು ನಡೆದಿಲ್ಲ, ಹಣಕಾಸಿನ ವಿಚಾರ ಎಲ್ಲೂ ತನಿಖೆಯಾಗಿಲ್ಲ: ಡಿ.ಕೆ.ಸುರೇಶ್

    ನಾನು ಶಿಗ್ಗಾಂವಿ ಕ್ಷೇತ್ರ ಸುತ್ತಾಡಿದಾಗ ಮತ್ತೊಮ್ಮೆ ಬೊಮ್ಮಾಯಿ (Basavaraj Bommai) ಕುಟುಂಬಕ್ಕೆ ಅವಕಾಶ ಕೊಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ತೀರ್ಮಾನಕ್ಕೆ ಬೊಮ್ಮಾಯಿ ಬದ್ಧವಾಗಿರಬೇಕು. ಹೈಕಮಾಂಡ್ ಕೂಡಾ ಎಲ್ಲ ಆಯಾಮಗಳಲ್ಲಿ ಸರ್ವೆ ಮಾಡಿದೆ. ಕೋರ್ ಕಮಿಟಿಯಿಂದ ಮೂರ್ನಾಲ್ಕು ಹೆಸರು ಹೋಗಿರುವ ಬಗ್ಗೆ ಮಾಹಿತಿ ಇದೆ. ಪಕ್ಷ ಅಂದ ಮೇಲೆ ಭಿನ್ನಾಭಿಪ್ರಾಯ ಸಹಜ. ಪಕ್ಷದಲ್ಲಿ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದರು. ಇದನ್ನೂ ಓದಿ: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಬಿಂದಾಸ್ ಲೈಫ್ – ಪ್ರಕರಣ ಸಿಸಿಬಿಗೆ ವರ್ಗಾವಣೆ

  • ಯಾರಿಗೂ ಬೇಸರ ಆಗಿಲ್ಲ, ಸಭೆ ಬಹಿಷ್ಕರಿಸಿಲ್ಲ: ಅರವಿಂದ್ ಬೆಲ್ಲದ್

    ಯಾರಿಗೂ ಬೇಸರ ಆಗಿಲ್ಲ, ಸಭೆ ಬಹಿಷ್ಕರಿಸಿಲ್ಲ: ಅರವಿಂದ್ ಬೆಲ್ಲದ್

    ಬೆಂಗಳೂರು: ಯಾರು ಕೂಡ ಸಭೆ ಬಹಿಷ್ಕರಿಸಿಲ್ಲ. ಯಾರಿಗೂ ಬೇಸರವಿಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ್ (Aravind Bellad) ಹೇಳಿದ್ದಾರೆ.

    ಬಿಜೆಪಿ ಶಾಸಕಾಂಗ ಸಭೆಗೂ ಮುನ್ನ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಯಾರು ಸಭೆ ಬಹಿಷ್ಕರಿಸಿಲ್ಲ. ವೀಕ್ಷಕರು ಎಲ್ಲರ ಅಭಿಪ್ರಾಯ ಪಡೆಯುತ್ತಿದ್ದಾರೆ. ಬೇಸರ ಆಗಿಲ್ಲ ಎಂದರು.

    ವೀಕ್ಷಕರು ಒನ್ ಟು ಒನ್ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಯಾರಿಗೂ ಬೇಸರ ಆಗಿಲ್ಲ, ಬಹಿಷ್ಕಾರ ಮಾಡಿಲ್ಲ. ಉತ್ತರ ಕರ್ನಾಟಕ ಭಾಗದ ಕಡೆ ಹೆಚ್ಚು ಶಾಸಕರಿದ್ದಾರೆ. ಇನ್ನೂ ಏನೂ ನಿರ್ಧಾರ ಆಗಿಲ್ವಲ್ಲ. ಉ.ಕ ಭಾಗಕ್ಕೆ ಪರಿಗಣಿಸಿ ಅಂದಿದ್ದೇವೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಶಾಸಕಾಂಗ ಸಭೆಗೂ ಮುನ್ನ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ- ಸಭೆ ಬಹಿಷ್ಕರಿಸಿದ ಇಬ್ಬರು ಶಾಸಕರು

    ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ರಾಜ್ಯ ಬಿಜೆಪಿಯ ಪ್ರಮುಖ ನಾಯಕರ ಜೊತೆ ಹೈಕಮಾಂಡ್ ವೀಕ್ಷಕರ ಸಭೆ ಕರೆದಿತ್ತು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪ್ರಮುಖ ನಾಯಕರ ಜೊತೆ ಚರ್ಚೆ ನಡೆಯುತ್ತಿದೆ. ನಿರ್ಮಲಾ ಸೀತಾರಾಮನ್, ಅಶ್ವತ್ಥ ನಾರಾಯಣ, ಮುನಿರತ್ನ, ಗೋಪಾಲಯ್ಯ, ವಿಜಯೇಂದ್ರ, ಅಶೋಕ್, ಎಸ್ ಆರ್ ವಿಶ್ವನಾಥ್ ಮತ್ತಿತರರು ಸಭೆಯಲ್ಲಿ ಭಾಗಿಯಾಗಿದ್ದಾರೆ.

  • ವಯಸ್ಸಾದ ಶಾಸಕರಿಗೆ ಕೊಕ್ ಕೊಡುತ್ತಾ ಬಿಜೆಪಿ?: ಸುಳಿವು ಕೊಟ್ಟ ಶಾಸಕ ಬೆಲ್ಲದ್

    ವಯಸ್ಸಾದ ಶಾಸಕರಿಗೆ ಕೊಕ್ ಕೊಡುತ್ತಾ ಬಿಜೆಪಿ?: ಸುಳಿವು ಕೊಟ್ಟ ಶಾಸಕ ಬೆಲ್ಲದ್

    ಧಾರವಾಡ: ನಾಲ್ಕೈದು ಜನ ಶಾಸಕರಿಗೆ ಈ ಬಾರಿ ವಿಧಾನಸಭೆ ಚುನಾವಣೆಯ ಟಿಕೆಟ್ ತಪ್ಪಬಹುದು ಎಂಬ ಮಾಜಿ ಸಿಎಂ ಯಡಿಯೂರಪ್ಪ (B S Yediyurappa) ನವರ ಹೇಳಿಕೆಗೆ ಶಾಸಕ ಅರವಿಂದ್ ಬೆಲ್ಲದ್ (Aravind Bellad) ಕೂಡ ಪುಷ್ಠಿ ನೀಡಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಹಳೆಯ ಹಾಗೂ ವಯಸ್ಸಾದ ಶಾಸಕರು ಕೂಡ ಇದ್ದಾರೆ. ವಯಸ್ಸಾದ ಕಾರಣ ಅವರು ಟಿಕೆಟ್ (Vidhanasabha Election Ticket) ಬೇಡ ಎನ್ನಬಹುದು ಅಥವಾ ಪಕ್ಷ ಅವರಿಗೆ ಟಿಕೆಟ್ ನೀಡದೇ ಇರಬಹುದು. ಹೀಗಾಗಿ ತಾವಾಗಿಯೇ ಅವರು ಟಿಕೆಟ್ ಬೇಡ ಎನ್ನಬಹುದು. ಅಂತವರು 121 ಕ್ಷೇತ್ರದಲ್ಲಿ ನಾಲ್ಕೈದು ಜನ ಇದ್ದೇ ಇರುತ್ತಾರೆ. ಅದನ್ನೇ ಯಡಿಯೂರಪ್ಪನವರು ಹೇಳಿರಬಹುದು. ಅದರಲ್ಲಿ ತಪ್ಪೇನಿದೆ? ಎಂದರು.

    ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಹಳಬರಿಗೆ ಟಿಕೆಟ್ ತಪ್ಪಬಹುದು ಎಂಬರ್ಥದಲ್ಲಿ ಯಡಿಯೂರಪ್ಪನವರು ಹೇಳಿದ್ದಾರೆ ಎಂದು ಬೆಲ್ಲದ್ ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಹರಕೆಯ ಕುರಿ, ಕಾಂಗ್ರೆಸ್‍ಗೆ ದಮ್ಮಿದ್ರೆ ಅವರನ್ನ ಸಿಎಂ ಅಭ್ಯರ್ಥಿಯಾಗಿ ಘೋಷಿಸಲಿ: ಶ್ರೀರಾಮುಲು ಸವಾಲು

  • ಚಿಲುಮೆ ಬಳಿಕ ಧಾರವಾಡದಲ್ಲೂ ವೋಟರ್ ಸ್ಕ್ಯಾಮ್- ಮತದಾರರ ಕ್ಷೇತ್ರ ವರ್ಗಾವಣೆ ಆರೋಪ

    ಚಿಲುಮೆ ಬಳಿಕ ಧಾರವಾಡದಲ್ಲೂ ವೋಟರ್ ಸ್ಕ್ಯಾಮ್- ಮತದಾರರ ಕ್ಷೇತ್ರ ವರ್ಗಾವಣೆ ಆರೋಪ

    ಧಾರವಾಡ: ಬೆಂಗಳೂರಿನಲ್ಲಿ ಕಾಂಗ್ರೆಸ್ (Congress) ನಾಯಕರು ಚಿಲುಮೆ ಸಂಸ್ಥೆಯ ಮೇಲೆ ಮತದಾರರ ಪಟ್ಟಿಯಲ್ಲಿ ಗೋಲ್‍ಮಾಲ್ ಮಾಡಿದ ಆರೋಪದ ಬೆನ್ನಲ್ಲೇ, ಧಾರವಾಡ ಜಿಲ್ಲೆಯಲ್ಲಿ ಕೂಡಾ ಇದೇ ರೀತಿ ಗೋಲ್‍ಮಾಲ್ ನಡೆದ ಆರೋಪ ಕೇಳಿ ಬಂದಿದೆ.

    ಜಿಲ್ಲೆಯ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದಲ್ಲಿ ಇರುವ ಅಲ್ಪಸಂಖ್ಯಾತ ಮತದಾರರನ್ನು ಬೇರೆ ಕ್ಷೇತ್ರಕ್ಕೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಆರೋಪ ಮಾಡಿದ್ದು, ಪಾಲಿಕೆಯ ಹಲವು ವಾರ್ಡ್ ಗಳಲ್ಲಿ ಈ ರೀತಿಯ ಮತದಾರರ ಪಟ್ಟಿಯಿಂದ ಹೆಸರು ಗಾಯಬ್ ಮಾಡಲಾಗಿದೆ ಎಂದಿದ್ದಾರೆ. ಈ ಕ್ಷೇತ್ರದ ವಾರ್ಡ್ ನಂಬರ್ 14, 16 ಹಾಗೂ 22ರಲ್ಲಿ ಬೇರೆ ಕಡೆ ಮತದಾರರನ್ನ ವರ್ಗಾವಣೆ ಮಾಡಲಾಗಿದೆ. ಅಲ್ಲದೇ ಧಾರವಾಡ ನಗರದ ಪಿಜಿಯಲ್ಲಿ ಇರುವ ಬೇರೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಯಲ್ಲಿ ಹಾಕುವ ಕೆಲಸ ನಡೆದಿದೆ ಆರೋಪಿಸ್ತಿದ್ದಾರೆ.

    ಮತ್ತೊಂದು ಕಡೆ ಈ ಮತದಾರರ ಪಟ್ಟಿ ಹಿಡಿದು ಮನೆಗೆ ಬರುವ ಕೆಲವರು, ಯಾರಿಗೆ ಮತ ಹಾಕ್ತಾರೆ ಎಂದು ಕೇಳ್ತಾರಂತೆ. ಅವರು ಕಾಂಗ್ರೆಸ್‍ಗೆ ಮತ ಹಾಕ್ತೇವೆ ಎಂದ್ರೆ ಆ ಮತದಾರನ್ನ ಪಟ್ಟಿಯಿಂದ ಡಿಲೀಟ್ ಮಾಡುವ ಕೆಲಸ ನಡೆದಿದೆ ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಆರೋಪಿಸಿದ್ದಾರೆ. ‌ ಇದನ್ನೂ ಓದಿ: ವೋಟರ್ ಲಿಸ್ಟ್ ಹಗರಣ – ಮುಖ್ಯ ಆರೋಪಿ ರವಿಕುಮಾರ್ ಆಪ್ತ ಲೋಕೇಶ್ ಬಂಧನ

    ಪಾಲಿಕೆ ಚುನಾವಣೆಯಲ್ಲಿ ಇದೇ ರೀತಿ ಮಾಡಿ ಬಿಜೆಪಿ ಪಶ್ಚಿಮ ಕ್ಷೇತ್ರದ ನಾಲ್ಕು ವಾರ್ಡ್ ಗೆದ್ದಿದೆ, 80 ಬೂತ್‍ಗಳಲ್ಲಿ ಮತದಾರರನ್ನ ಡಿಲೀಟ್ ಮಾಡುವ ಕೆಲಸ ನಡೆದಿದೆ. ಇದರ ಹಿಂದೆ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್‌ (Aravind Bellad) ಕೈವಾಡ ಇದೆ ಎಂದು ಆರೋಪಿಸಲಾಗ್ತಿದೆ.

    ಒಟ್ಟಿನಲ್ಲಿ ಬೆಂಗಳೂರಿನ ನಂತರ ಅವಳಿ ನಗರವಾದ ಧಾರವಾಡದಲ್ಲೂ ಮತಪಟ್ಟಿ ಗೋಲ್ಮಾಲ್ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಪಾಲಿಕೆ ಆಯುಕ್ತರು ಅಥವಾ ಚುನಾವಣಾ ಆಯೋಗವೇ ಸತ್ಯ ಹೇಳಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಜೀವಂತ ಇದ್ದವ್ರನ್ನೇ ತರೋದು ಕಷ್ಟವಿದ್ದು, ನವೀನ್ ಶವ ತರುವುದು ಇನ್ನೂ ಡಿಫಿಕಲ್ಟ್: ಬೆಲ್ಲದ್

    ಜೀವಂತ ಇದ್ದವ್ರನ್ನೇ ತರೋದು ಕಷ್ಟವಿದ್ದು, ನವೀನ್ ಶವ ತರುವುದು ಇನ್ನೂ ಡಿಫಿಕಲ್ಟ್: ಬೆಲ್ಲದ್

    ಧಾರವಾಡ: ಜೀವಂತವಾಗಿರುವವರನ್ನೇ ಭಾರತಕ್ಕೆ ವಾಪಸ್ ಕರೆತರುವುದು ಕಷ್ಟವಿದೆ. ಹೀಗಿರುವಾಗ ನವೀನ್ ಮೃತದೇಹ ತರುವುದು ಇನ್ನೂ ಕಷ್ಟವಿದೆ ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಮಾನದಲ್ಲಿ ಶವ ತರಲು ಹೆಚ್ಚು ಜಾಗಬೇಕು. ಶವ ಇರುವ ಜಾಗದಲ್ಲೇ 8 ಜನ ತರಬಹುದು. ಭಾರತ ಸರ್ಕಾರದ ವಿದೇಶಾಂಗ ಇಲಾಖೆ ಎಂಬಿಬಿಎಸ್ ವಿದ್ಯಾರ್ಥಿ ಶವ ತರಲು ಪ್ರಯತ್ನ ಮಾಡುತ್ತಿದೆ. ಸ್ವತಃ ಪ್ರಧಾನಿ ಮೋದಿ ಅವರೇ ಮುತುವರ್ಜಿ ವಹಿಸಿದ್ದಾರೆ. ಭಾರತೀಯ ವಿದ್ಯಾರ್ಥಿಗಳನ್ನು ಕರೆ ತರುವ ಪ್ರಯತ್ನ ನಡೆದಿದೆ. ಅಲ್ಲಿ ಯುದ್ದ ಭೂಮಿ ಇದೆ. ಮಾಧ್ಯಮದವರೇ ಅದನ್ನ ತೊರಿಸುತ್ತಿದ್ದಾರೆ. ಸಾಧ್ಯವಾದರೆ ಮೃತದೇಹ ತರುವ ಕೆಲಸ ಆಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಯುದ್ಧ ನಿಲ್ಲಿಸಿ ಅಂತ ಪುಟಿನ್‌ಗೆ ನಾವು ಹೇಳಬಹುದೇ: ಸಿಜೆಐ ಪ್ರಶ್ನೆ

    ಅಲ್ಲಿ ಇದ್ದವರು ಒತ್ತಡದಲ್ಲಿ ಇದ್ದಾರೆ. ರೊಮೇನಿಯಾಗೆ ಬಂದಿದ್ದಾರೆ ಅಂದರೆ ಸೇಫ್ ಆಗಿದ್ದಾರೆ ಎಂದರ್ಥ. ಅಲ್ಲಿ ನಮ್ಮ ವಿದೇಶಾಂಗ ಇಲಾಖೆ ಅವರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಮಾಡಿದೆ. ಅವರನ್ನು ತರುವ ಕೆಲಸ ಬೇಗ ಆಗಲಿದೆ. ನಮ್ಮ ವಿದ್ಯಾರ್ಥಿಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಅಲ್ಲಿ ಯಾಕೆ ಎಂಬಿಬಿಎಸ್ ಗೆ ಹೋಗುತ್ತಿದ್ದಾರೆ. ಅದಕ್ಕೆ ಕಾರಣ ನಮ್ಮಲ್ಲಿ ವೈದ್ಯಕೀಯ ಕಲಿಯುವುದು ದೊಡ್ಡ ಖರ್ಚು ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ನವೀನ್ ಸಾವು – ಬಿಜೆಪಿ ನಾಯಕರ ವಿರುದ್ಧ ಸ್ಟಾಲಿನ್ ಕಿಡಿ

    ನಮ್ಮಲ್ಲ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಇದೆ. ಇದೊಂದು ಖಾಸಗಿ ಸಂಸ್ಥೆ. ಇವರು ಎಂಬಿಬಿಎಸ್ ಸಿಟ್ ಅಭಾವ ಸೃಷ್ಟಿ ಮಾಡಿದ್ದಾರೆ. ಹೆಚ್ಚು ಮೆಡಿಕಲ್ ಸಿಟ್ ಕೊಡುವಂತೆ ಇಲ್ಲ. ಅದರಲ್ಲೂ ಭ್ರಷ್ಟಾಚಾರ ಇರುತ್ತೆ. ಈ ಎಂಸಿಐ ಮೇಲೆ ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕಿದೆ. ಇದನ್ನ ಬೈಪಾಸ್ ಮಾಡಬೇಕು. ಅದಕ್ಕೆ ಇರುವ ಅಧಿಕಾರ ಕಟ್ ಮಾಡಬೇಕು. ಬೇರೆ ರಾಷ್ಟ್ರ ದಂತೆಯೇ ನಮ್ಮಲ್ಲಿ ಕಡಿಮೆ ಖರ್ಚಿನಲ್ಲಿ ಮೆಡಿಕಲ್ ಯಾಕೆ ಮಾಡಬಾರದು ಎಂದು ಶಾಸಕರು ಪ್ರಶ್ನಿಸಿದರು. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಮಾಡಿದ್ದ ಆರೋಪ ನಿರಾಕರಿಸಿದ ಭಾರತ!

  • ಸಚಿವ ಸ್ಥಾನ ಕೇಳುವ ಅವಶ್ಯಕತೆ ನನಗಿಲ್ಲ: ಅರವಿಂದ್ ಬೆಲ್ಲದ್

    ಸಚಿವ ಸ್ಥಾನ ಕೇಳುವ ಅವಶ್ಯಕತೆ ನನಗಿಲ್ಲ: ಅರವಿಂದ್ ಬೆಲ್ಲದ್

    ಹುಬ್ಬಳ್ಳಿ: ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಬೇಕು ಎಂದು ಕೇಳಿಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಶಾಸಕರಿಗೂ ಸಚಿವರಾಗಬೇಕು ಅಂತಾ, ಸಚಿವರಿಗೆ ಸಿಎಂ ಆಗಬೇಕು ಅಂತಾ ಆಸೆ ಇರುತ್ತದೆ. ಆದರೆ ನಾನು ವರಿಷ್ಠರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದರು.

    ಮಾಧ್ಯಮಗಳಲ್ಲಿ ಸಂಪುಟ ವಿಸ್ತರಣೆ ಇದೆ ಎಂದು ಬಂದಿರುವುದನ್ನು ನೋಡಿದ್ದೇನೆ. ಆದರೆ ಸಂಪುಟ ವಿಸ್ತರಣೆ ವಿಷಯದ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಹೈಕಮಾಂಡ್ ತಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ. ಸಚಿವ ಸ್ಥಾನವನ್ನು ಕೇಳುವ ಅವಶ್ಯಕತೆ ಇಲ್ಲ. ಪಕ್ಷದ ನಾಯಕರಿಗೆ ಯಾವಾಗ ಯಾರಿಗೆ ಯಾವ ಜವಾಬ್ದಾರಿಯನ್ನು ನೀಡಬೇಕು ಎನ್ನುವುದು ಗೊತ್ತಿದೆ ಎಂದು ಹೇಳಿದರು. ಇದನ್ನೂ ಓದಿ:  ಖ್ಯಾತ ಫೋಟೋಗ್ರಾಫರ್ ತೆಗೆದಿರುವ ಸೂರ್ಯನ ಒಂದು ಫೋಟೋಗೆ 3766ರೂ.!

    ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಬುದ್ಧ ರಾಜಕಾರಣಿ. ಅವರು ಹೆಚ್ಚು ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ತೀರ್ಮಾನಕ್ಕೆ ನಾನು ಬದ್ಧನಾಗಿರುವೆ ಎಂದು ತಿಳಿಸಿದರು. ಹಿರಿಯರನ್ನು ಕೈಬಿಟ್ಟು ಕಿರಿಯರಿಗೆ ಸ್ಥಾನ ನೀಡಬೇಕು ಎನ್ನುವ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇದನ್ನೂ ಓದಿ: ಬಿಜೆಪಿ ಸರ್ಕಾರಕ್ಕೆ ರೆಡ್ ಅಲರ್ಟ್: ಅಖಿಲೇಶ್ ಯಾದವ್

  • ರಾಜ್ಯದ ಆರು ನಗರಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ: ಬೊಮ್ಮಾಯಿ

    ರಾಜ್ಯದ ಆರು ನಗರಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ: ಬೊಮ್ಮಾಯಿ

    – ಮಧ್ಯಮ ಹಂತದ ಪೊಲೀಸ್ ಅಧಿಕಾರಿಗಳಿಗೆ ಎನ್‍ಡಿಎ ಮಾದರಿ ತರಬೇತಿ
    – ಆನ್ ಲೈನ್ ಲಾಟರಿ ಹಾಗೂ ಜೂಜಿಗೆ ಇತಿಶ್ರೀ
    – ಶಾಸನ ಸಭೆಯಲ್ಲಿ ಮಸೂದೆ ಅನುಮೋದನೆ
    – ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ

    ಹುಬ್ಬಳ್ಳಿ: ಪೊಲೀಸ್ ಅಪರಾಧ ಪ್ರಕರಣಗಳ ತ್ವರಿತ ಪತ್ತೆ ಮತ್ತು ತನಿಖೆಯ ವೇಗ ಹೆಚ್ಚಿಸಲು ರಾಜ್ಯದ ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ, ಮೈಸೂರು ಹಾಗೂ ಇತರ ಪ್ರಮುಖ ನಗರಗಳಲ್ಲಿ ಒಟ್ಟು ಆರು ವಿಧಿವಿಜ್ಞಾನ (ಎಫ್‍ಎಸ್‍ಎಲ್) ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿಂದು ಬಾಣತಿಕಟ್ಟೆಯಲ್ಲಿ ಕಸಬಾ ಪೇಟೆ ಪೊಲೀಸ್ ಠಾಣೆ, ದಕ್ಷಿಣ ಸಂಚಾರಿ ಠಾಣೆ, ಆಳ್ನಾವರ ಪೊಲೀಸ್ ಠಾಣೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆಡಳಿತ ಕಛೇರಿ ಮತ್ತು 36 ಪೊಲೀಸ್ ವಸತಿ ಗೃಹಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಎನ್‍ಡಿಎ ಮಾದರಿ ತರಬೇತಿ ಕುರಿತು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರೊಂದಿಗೆ ಚರ್ಚಿಸಲಾಗಿದೆ. ಪುಣೆಯ ಕಡಕ್‍ವಾಸ್ಲಾದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್‍ಡಿಎ) ತರಬೇತಿ ಕೇಂದ್ರದ ಮಾದರಿಯಲ್ಲಿ ರಾಜ್ಯದ ಮಧ್ಯಮ ಹಂತದ ಪೊಲೀಸ್ ಅಧಿಕಾರಿಗಳ ತರಬೇತಿಗಾಗಿ ಪ್ರತ್ಯೇಕ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

    ಆಫೀಸರ್ ಆನ್ ಕ್ರೈಂ ಸೀನ್ ಎನ್ನುವ ಕಲ್ಪನೆ ಆಧಾರದ ಮೇಲೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. 16 ಸಾವಿರ ಪೊಲೀಸ್ ಪೇದೆ ಹಾಗೂ ಸಬ್ ಇನ್ಸ್‍ಪೆಕ್ಟರ್‍ಗಳ ನೇಮಕಾತಿ ಮಾಡಲಾಗುತ್ತಿದೆ ಎಂದರು. ಡಿವೈಎಸ್‍ಪಿ ಹಾಗೂ ಮೇಲಿನ ಹಂತದ ಅಧಿಕಾರಿಗಳು ಕೇವಲ ಕಚೇರಿ, ಆಡಳಿತ ಕೆಲಸಗಳಿಗೆ ಮಹತ್ವ ನೀಡದೆ ಪ್ರತಿಯೊಂದು ಠಾಣೆಗೆ ಭೇಟಿ ನೀಡಿ ಮೂಲ ಪೊಲೀಸ್ ವೃತ್ತಿ ನಿರ್ವಹಿಸಬೇಕು. ಎಲ್ಲರೂ ಕ್ಷೇತ್ರಕ್ಕೆ ಇಳಿದು ಕರ್ತವ್ಯ ಮಾಡಬೇಕು ಎಂದು ಸಲಹೆ ನೀಡಿದರು.

    ಹುಬ್ಬಳ್ಳಿ ಧಾರವಾಡ ಅವಳಿ ನಗರದ ಕಾನೂನು ಸುವ್ಯವಸ್ಥೆ ಮುಖ್ಯ. ಇಲ್ಲಿನ ಜನ ಶಾಂತಿ ಪ್ರಿಯರು ಕೆಲವು ಕಿಡಗೇಡಿಗಳಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನವಾಗುತ್ತಿದೆ. ಅವುಗಳನ್ನು ನಿಯಂತ್ರಿಸುವುದು ಅಧಿಕಾರಿಗಳಿಂದ ಸಾಧ್ಯವಿದೆ. ಪೊಲೀಸ್ ಆಯುಕ್ತರು ಠಾಣೆಗಳಿಗೆ ತೆರಳಿ ಪರಿಶೀಲನೆ ಮಾಡಬೇಕು ಎಂದರು. ಇದನ್ನೂ ಓದಿ: ವಾಕ್ ಸ್ವಾತಂತ್ರ್ಯವಿದೆ ಎಂದು ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡ್ತಾರೆ: ಹಾಲಪ್ಪ ಆಚಾರ್

    ಠಾಣೆಗಳಿಗೆ ಮೂಲಭೂತ ಸೌಕರ್ಯ ನೀಡಿ ಸುಧಾರಣೆ ಮಾಡಬೇಕು. ಪ್ರತಿ ವರ್ಷ ನೂರು ಠಾಣೆಗಳಂತೆ ಮುಂದಿನ ಐದು ವರ್ಷದಲ್ಲಿ 500 ಪೊಲೀಸ್ ಠಾಣೆ ನಿರ್ಮಿಸುವ ಗುರಿ ಇದೆ. 10 ಸಾವಿರ ಪೊಲೀಸ್ ವಸತಿ ಗೃಹ ನಿರ್ಮಿಸಲಾಗುವುದು. ಶ್ವಾನಗಳ ತರಬೇತಿಗೆ ಡಾಗ್ ಕ್ಯಾನಲ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಬೊಮ್ಮಯಿ ತಿಳಸಿದರು.

    ಗೃಹ ಸಚಿವರಾದ ಅರಗ ಜ್ಞಾನೇಂದ್ರ ಮಾತನಾಡಿ, ಜಿಲ್ಲೆಯಲ್ಲಿ 21 ಕೋಟಿ ರೂ. ವೆಚ್ಚದಲ್ಲಿ ಪೊಲೀಸ್ ಠಾಣೆ, ಸಂಚಾರಿ ಠಾಣೆ, ವಸತಿ ಗೃಹಗಳನ್ನು ನಿರ್ಮಿಸಲು ಶಂಕುಸ್ಥಾಪನೆ ಮಾಡಲಾಗಿದೆ. ಆನ್ ಲೈನ್ ಲಾಟರಿ ಹಾಗೂ ಜೂಜಿಗೆ ಇತಿಶ್ರೀ ಹಾಡಲು ಶಾಸನ ಸಭೆಯಲ್ಲಿ ಮಸೂದೆ ಅನುಮೋದನೆ ಆಗಿದೆ. ಕಾಗ್ನಿಜಿಬಲ್ ಪ್ರಕರಣ ಎಂದು ದಾಖಲಿಸಿಕೊಂಡು ಜಾಮೀನು ರಹಿತವಾಗಿ ತನಿಖೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಜೂಜಾಟ, ಆನ್ ಲೈನ್ ಜೂಜುಕಾರನ್ನು ಜೈಲಿಗೆ ತಳ್ಳಲು ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಶೀಘ್ರದಲ್ಲಿಯೇ ಇದು ಕಾಯ್ದೆಯಾಗಿ ಜಾರಿಗೆ ಬರಲಿದೆ ಎಂದು ತಿಳಿಸಿದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, 2015 ರಿಂದ ನಡೆಸಿದ ನಿರಂತರ ಪ್ರಯತ್ನದ ಫಲವಾಗಿ ಇಂದು ಕಸಬಾಪೇಟ ಹಾಗೂ ದಕ್ಷಿಣ ಸಂಚಾರ ಪೊಲೀಸ್ ಠಾಣೆಗಳ ನೂತನ ಕಟ್ಟಡಗಳಿಗೆ ಭೂಮಿಪೂಜೆಯನ್ನು ಮುಖ್ಯಮಂತ್ರಿಯವರು ನೆರವೇರಿಸಿದ್ದಾರೆ ಇದು ಸಂತಸ ತಂದಿದೆ ಎಂದರು. ಇದನ್ನೂ ಓದಿ: ನಮ್ಮ ಹಾಜರಿ ಕ್ಯಾಂಟೀನ್‍ನಲ್ಲೇ ಹೆಚ್ಚಾಗಿರುತ್ತಿತ್ತು ಕಾಲೇಜು ದಿನಗಳನ್ನು ನೆನಪಿಸಿಕೊಂಡ ಸಿಎಂ ಬೊಮ್ಮಾಯಿ

    ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ,ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ಕುಸುಮಾವತಿ ಶಿವಳ್ಳಿ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ , ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣ ಹಾಗೂ ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡ್ರ, ರಾಜ್ಯ ರೇಷ್ಮೇ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ವಾಕರಸಾಸಂ ಅಧ್ಯಕ್ಷ ವಿ.ಎಸ್.ಪಾಟೀಲ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ಉತ್ತರ ವಲಯ ಐಜಿಪಿ ಎನ್.ಸತೀಶಕುಮಾರ, ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್ ಮತ್ತಿತರರು ಉಪಸ್ಥಿತರಿದ್ದರು.

  • ಕಾಂಗ್ರೆಸ್ ಸೇರಲ್ಲ, ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಾನೂನು ಕ್ರಮ: ಬೆಲ್ಲದ್

    ಕಾಂಗ್ರೆಸ್ ಸೇರಲ್ಲ, ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಾನೂನು ಕ್ರಮ: ಬೆಲ್ಲದ್

    ಹುಬ್ಬಳ್ಳಿ: ಬಿಜೆಪಿಯ ಕೆಲ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ ಎನ್ನುವ ವಿಚಾರ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಪೂರಕವಾಗಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನಾನು ಕಾಂಗ್ರೆಸ್ ಸೇರಲ್ಲ. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಬೆಲ್ಲದ್ ಸ್ಪಷ್ಟನೆ ನೀಡಿದ್ದಾರೆ.

    ಬಿಜೆಪಿ ಪಕ್ಷದಿಂದ ಸಿಎಂ ಅಭ್ಯರ್ಥಿಯಾಗಿ ಬಿಂಬಿತವಾಗಿದ್ದ ಅರವಿಂದ್ ಬೆಲ್ಲದ್‍ಗೆ ಸಿಎಂ ಸ್ಥಾನ ಕೈತಪ್ಪಿ ಸಚಿವ ಸ್ಥಾನವೂ ಸಿಗದ ಪರಿಣಾಮ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ, ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿರುವ ಬೆಲ್ಲದ್, ನಾನು ಕಾಂಗ್ರೆಸ್ ಸೇರುತ್ತೇನೆ ಎಂಬುದು ಸುಳ್ಳು ಸುದ್ದಿ. ನಾನು ಪಕ್ಷ ತೊರೆಯುತ್ತೆನೆಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಸುಳ್ಳುಗಳನ್ನೇ ನಿಜವೆಂದು ಪ್ರತಿಷ್ಠಾಪಿಸುವ ಕಾಲಘಟ್ಟದಲ್ಲಿ ನಾವು ಇದ್ದೇವೆ. ಇಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿದ್ಧತೆ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಹಿಂದೊಮ್ಮೆ ಕಾಂಗ್ರೆಸ್ ಕದ ತಟ್ಟಿದ್ದರು: ವಿನಯ್ ಕುಮಾರ್ ಸೊರಕೆ

    ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ, ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ, ಆರ್‌ಎಸ್‌ಎಸ್‌ ಸೇರಿ ಪರಿವಾರದ ಬಗೆಗಿನ ನನ್ನ ನಿಷ್ಠೆ ಅಚಲವಾಗಿದ್ದು, ನಾನೆಂದೂ ಭಾರತೀಯ ಜನತಾ ಪಕ್ಷವನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲವೆಂದು ಅರವಿಂದ್ ಬೆಲ್ಲದ್ ತಮ್ಮ ನಿಲುವನ್ನು ಪ್ರಟಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನ ಹಲವು ಶಾಸಕರು ಬಿಜೆಪಿಗೆ ಬರ್ತಾರೆ: ಬಿಎಸ್‍ವೈ