Tag: Arasikere

  • ಪಕ್ಷಾಂತರಿಗಳ ಜಿದ್ದಾಜಿದ್ದಿ – ಯಾರ ಪಾಲಾಗುತ್ತೆ ಅರಸೀಕೆರೆ?

    ಪಕ್ಷಾಂತರಿಗಳ ಜಿದ್ದಾಜಿದ್ದಿ – ಯಾರ ಪಾಲಾಗುತ್ತೆ ಅರಸೀಕೆರೆ?

    ಹಾಸನ: ಪಕ್ಷಾಂತರಿಗಳ ಸ್ಪರ್ಧೆಯಿಂದಾಗಿ ಈ ಬಾರಿ ಅರಸೀಕೆರೆ ಕ್ಷೇತ್ರ ವಿಧಾನಸಭಾ ಚುನಾವಣೆಯಲ್ಲಿ ಗಮನ ಸೆಳೆಯಲಿದೆ. ಈ ಪಕ್ಷದಿಂದ ಆ ಪಕ್ಷಕ್ಕೆ ಮತ್ತು ಆ ಪಾರ್ಟಿಯಿಂದ ಈ ಪಾರ್ಟಿಗೆ ಜಿಗಿದವರು ಅಖಾಡದಲ್ಲಿದ್ದಾರೆ. ಅರಸೀಕೆರೆ (Arasikere) ಯಾರ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ಕ್ಷೇತ್ರದಲ್ಲಿ ಜಾತಿ ರಾಜಕಾರಣ ಮತ್ತು ತಾವಿದ್ದ ಪಕ್ಷಗಳಿಗೆ ಮೋಸ ಮಾಡಿದ ಆರೋಪ ವಿಷಯವೇ ಮುಖ್ಯ ಆಗಲಿದೆ.

    ಕಳೆದ ಮೂರು ಚುನಾವಣೆಗಳಲ್ಲಿ ಜೆಡಿಎಸ್‌ನಿಂದ (JDS) ಸ್ಪರ್ಧಿಸಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿರುವ ಕೆ.ಎಂ.ಶಿವಲಿಂಗೇಗೌಡ (Shivalinge Gowda) ಅವರು ಪಕ್ಷ ತೊರೆದು ಕಾಂಗ್ರೆಸ್‌ (Congress) ಸೇರಿ ಕಣದಲ್ಲಿದ್ದಾರೆ. ಅಂತೆಯೇ ಬಿಜೆಪಿಯಿಂದ (BJP) ಟಿಕೆಟ್‌ ಸಿಗದಿದ್ದಕ್ಕೆ ಎನ್.ಆರ್‌.ಸಂತೋಷ್‌ ಜೆಡಿಎಸ್‌ ಸೇರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ಜಿ.ವಿ.ಬಸವರಾಜು ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಸುದೀಪ್ ವಿಚಾರದಲ್ಲಿ ನನಗೆ ಬೇಸರವಿಲ್ಲ: ಶ್ರೀರಾಮುಲು

    ಅಖಾಡದಲ್ಲಿರುವ ಪೈಲ್ವಾನರು
    ಕೆ.ಎಂ.ಶಿವಲಿಂಗೇಗೌಡ (ಕಾಂಗ್ರೆಸ್)
    ಎನ್.ಆರ್.ಸಂತೋಷ್ (ಜೆಡಿಎಸ್)
    ಜಿ.ವಿ.ಬಸವರಾಜು (ಬಿಜೆಪಿ)

    ಅಭ್ಯರ್ಥಿಗಳ ಪ್ಲಸ್‌, ಮೈನಸ್‌ ಏನು?
    ಕೆ.ಎಂ.ಶಿವಲಿಂಗೇಗೌಡ: ಕಳೆದ ಮೂರು ಬಾರಿ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿ. 538 ಹಳ್ಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಿರುವುದು. ಸರ್ಕಾರ ಯಾವುದೇ ಇದ್ದರೂ ಅನುದಾನ ತರುವ ಛಾತಿ ಇರುವುದು ಶಿವಲಿಂಗೇಗೌಡರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಮೈನಸ್‌ ಅಂಶವೆಂದರೆ, ಇತ್ತೀಚೆಗೆ ಜೆಡಿಎಸ್‌ನಿಂದ ಕಾಂಗ್ರೆಸ್ ಸೇರಿದ್ದು. ʼಕೈʼ ಪಕ್ಷದೊಳಗಿನ ಒಳೇಟು ಭಯ. ದಳಪತಿಗಳನ್ನು ಮೊದಲ ಬಾರಿಗೆ ಎದುರು ಹಾಕಿಕೊಂಡಿರುವುದಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಮತ ನೀಡಿದ್ರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ: ಯತ್ನಾಳ್

    ಎನ್.ಆರ್.ಸಂತೋಷ್: ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತ ಸಮುದಾಯದ ಬಲ ಮತ್ತು ಜೆಡಿಎಸ್ ಬೆಂಬಲ ಅಭ್ಯರ್ಥಿಗೆ ಪ್ಲಸ್‌ ಪಾಯಿಂಟ್‌ ಆಗಲಿದೆ ಎನ್ನಲಾಗಿದೆ. ಈವರೆಗೂ ಬಿಜೆಪಿಯಲ್ಲಿದ್ದು, ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್‌ಗೆ ಬಂದಿರುವುದು. ಜನರ ಜನರ ನಡುವೆ ಜಗಳ ತಂದಿಟ್ಟು, ಕೇಸು ಹಾಕಿಸುತ್ತಾರೆ ಎಂಬ ಆರೋಪ. ಮೂಲ ಜೆಡಿಎಸ್ ಮುಖಂಡರ ವಿರೋಧ ಭೀತಿ ಇವರಿಗೆ ಮೈನಸ್‌ ಪಾಯಿಂಟ್‌ ಆಗಿದೆ.

    ಜಿ.ವಿ.ಬಸವರಾಜು: ಬಿಜೆಪಿ ಬೆಂಬಲ ಜೊತೆಗೆ ಪಕ್ಷ ನಿಷ್ಠರು ಎಂಬುದು ಬಸವರಾಜುಗೆ ಪ್ಲಸ್‌ ಪಾಯಿಂಟ್‌ ಆಗಲಿದೆ. ಸಂಘಟನೆ ಕೊರತೆ, ಕ್ಷೇತ್ರದ ಸಮಗ್ರ ಪರಿಚಯ ಇಲ್ಲದೇ ಇರುವುದು ಇವರಿಗೆ ಮೈನಸ್‌ ಅಂಶವಾಗಲಿದೆ ಎಂಬ ಮಾತಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಹಮದಾಬಾದ್‌ ತಂತ್ರ – ಒಂದೇ ದಿನ ಮೆಗಾ ರೋಡ್‌ ಶೋ

    ಜಾತಿ ಲೆಕ್ಕಾಚಾರ ಏನು?
    ಕ್ಷೇತ್ರದಲ್ಲಿ ಸುಮಾರು 70 ರಿಂದ 80 ಸಾವಿರ ಲಿಂಗಾಯತ ಮತದಾರರಿದ್ದು, ಇವರು ಅಭ್ಯರ್ಥಿಯ ಸೋಲು-ಗೆಲುವಿನಲ್ಲಿ ನಿರ್ಣಾಯಕ ಆಗಲಿದ್ದಾರೆ. ಉಳಿದಂತೆ ಒಕ್ಕಲಿಗ 22,000, ಕುರುಬ, ಎಸ್‌ಸಿ 26,000, ಎಸ್ಟಿ 18,000, ಮುಸ್ಲಿಂ 17,000 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 2,14,763 ಮತದಾರರಿದ್ದು, ಈ ಪೈಕಿ 1,08,152 ಪುರುಷರು, 1,05,604 ಮಂದಿ ಮಹಿಳೆಯರು ಹಾಗೂ 7 ಮಂದಿ ಇತರೆ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ 8 ಬಾರಿ ಕಾಂಗ್ರೆಸ್, 4 ಬಾರಿ ಜೆಡಿಎಸ್, ಪಿಎಸ್‌ಪಿ ಹಾಗೂ ಪಕ್ಷೇತರರು ಒಂದು ಬಾರಿ ಗೆದ್ದಿದ್ದಾರೆ.

  • 85 ವರ್ಷದ ವೃದ್ಧೆಯನ್ನು ಕೊಂದು ಅತ್ಯಾಚಾರ – ಆರೋಪಿ ಬಂಧನ

    85 ವರ್ಷದ ವೃದ್ಧೆಯನ್ನು ಕೊಂದು ಅತ್ಯಾಚಾರ – ಆರೋಪಿ ಬಂಧನ

    ಹಾಸನ: 85 ವರ್ಷದ ವೃದ್ಧೆಯನ್ನು (Old Woman) ಬರ್ಬರವಾಗಿ ಕೊಂದು (Murder) ಬಳಿಕ ಅತ್ಯಾಚಾರವೆಸಗಿದ (Rape) ಅಮಾನುಷ ಘಟನೆ ಹಾಸನ (Hassan) ಜಿಲ್ಲೆಯ ಅರಸೀಕೆರೆ ತಾಲೂಕಿನ ಯರೇಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಅರಸೀಕೆರೆ (Arasikere) ತಾಲೂಕಿನ ಯರೇಹಳ್ಳಿ ಗ್ರಾಮದ ಮಿಥುನ್ ಕುಮಾರ್ (32) ಅತ್ಯಾಚಾರ ಎಸಗಿದ ಆರೋಪಿಯಾಗಿದ್ದು, ಐದು ವರ್ಷಗಳ ಹಿಂದೆಯೂ ಇದೇ ರೀತಿ ವೃದ್ಧೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಅದೇ ಸುಳಿವು ಹಿಡಿದು ವಿಚಾರಣೆ ನಡೆಸಿದಾಗ ತಾನು ಮಾಡಿದ ಪಾಪ ಕೃತ್ಯವನ್ನು ಒಪ್ಪಿಕೊಂಡಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮದ್ಯದ ಬಾಟ್ಲಿ, ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಬರ್ಬರ ಕೊಲೆ 

    ಏಪ್ರಿಲ್ 1ರಂದು ತನ್ನ ಜಮೀನಿನ ಬಳಿ ತೆರಳಿದ್ದ ವೃದ್ಧೆಯನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದು, ಇದಕ್ಕೆ ಪ್ರತಿರೋಧ ತೋರಿದ ವೃದ್ಧೆಯ ತಲೆಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದು ಬಳಿಕ ಅತ್ಯಾಚಾರ ಎಸಗಿದ್ದಾನೆ.

    ತನ್ನ ಜಮೀನಿನ ಬಳಿ ತೆರಳಲು ಹೋಗಿ ದಾರಿತಪ್ಪಿ ಬೇರೆಡೆ ಹೋಗಿದ್ದ ಅಜ್ಜಿಯನ್ನು ಜಮೀನಿನ ಬಳಿ ಬಿಡುವುದಾಗಿ ಬೈಕಿನಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಈ ದೌರ್ಜನ್ಯವನ್ನು ವಿರೋಧಿಸಿದಾಗ ಬರ್ಬರವಾಗಿ ಕೊಂದು ನಂತರ ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ತಾಯಿ ಮನೆಗೆ ಬಂದಿಲ್ಲ ಎಂದು ಏಪ್ರಿಲ್ 2ರಂದು ಕುಟುಂಬಸ್ಥರು ಹುಡುಕಾಡಿದ ವೇಳೆ ಯರೇಹಳ್ಳಿ ಗ್ರಾಮದ ಜಮೀನಿನಲ್ಲಿ ವೃದ್ಧೆಯ ಮೃತದೇಹ ಸಂಪೂರ್ಣ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಚಿಕನ್ ಸಾರು ಖಾಲಿಯಾಗಿದ್ದಕ್ಕೆ ಜಗಳ- ಮಗನನ್ನೇ ಕೊಂದ ಅಪ್ಪ!

    ಅನುಮಾನಾಸ್ಪದ ಸಾವು ಕೇಸು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಈ ಅಮಾನುಷ ಕೃತ್ಯ ಬಯಲಾಗಿದ್ದು, ಕೊಲೆ ಅತ್ಯಾಚಾರ ಖಾತ್ರಿಯಾಗುತ್ತಲೇ ಅನುಮಾನಾಸ್ಪದ ಸಾವು ಪ್ರಕರಣವನ್ನು ಕೊಲೆ ಅತ್ಯಾಚಾರ ಕೇಸ್ ಆಗಿ ಬದಲಾಯಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ವಾರ್ನ್ ಮಾಡಿದ್ರೂ ಕ್ಯಾರೇ ಎನ್ನದೆ ಚುಡಾಯಿಸಿದವನಿಗೆ ಚಪ್ಪಲಿ ಏಟು ಕೊಟ್ಟ ಯುವತಿ!

  • ಆಡಿಯೋದಲ್ಲಿ ಶಿವಲಿಂಗೇಗೌಡ ಹೇಳಿರುವುದು ಸುಳ್ಳು ಎಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ – ರೇವಣ್ಣ ಸವಾಲು

    ಆಡಿಯೋದಲ್ಲಿ ಶಿವಲಿಂಗೇಗೌಡ ಹೇಳಿರುವುದು ಸುಳ್ಳು ಎಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ – ರೇವಣ್ಣ ಸವಾಲು

    ಹಾಸನ: ಆಡಿಯೋದಲ್ಲಿ ಶಿವಲಿಂಗೇಗೌಡ (Shivalinge Gowda) ಹೇಳಿರುವುದು ಸತ್ಯ ಅಲ್ಲ ಎಂದು ಧರ್ಮಸ್ಥಳಕ್ಕೆ (Dharmasthala) ಬಂದು ಪ್ರಮಾಣ ಮಾಡಲಿ. ನಾನೇನಾದರು ಒಂದು ಪದ ಎಡಿಟ್ (Edit) ಮಾಡಿರುವುದನ್ನು ತೋರಿಸಿದರೆ ಆ ಧರ್ಮಸ್ಥಳದ ಮಂಜುನಾಥ ನನ್ನನ್ನು ನೋಡಿಕೊಳ್ಳಲಿ ಎಂದು ಮಾಜಿಸಚಿವ ಎಚ್.ಡಿ.ರೇವಣ್ಣ (H.D.Revanna) ಶಾಸಕ ಶಿವಲಿಂಗೇಗೌಡರಿಗೆ ಸವಾಲೆಸದರು.

    ಇತ್ತೀಚೆಗೆ ವೈರಲ್ (Viral) ಆಗಿದ್ದ ಎಚ್.ಡಿ.ರೇವಣ್ಣ ಹಾಗೂ ಅರಸೀಕೆರೆ (Arasikere) ಶಾಸಕ ಕೆ.ಎಂ.ಶಿವಲಿಂಗೇಗೌಡ ನಡುವಿನ ಸಂಭಾಷಣೆ ಆಡಿಯೋ ಕುರಿತು ಅರಸೀಕೆರೆಯಲ್ಲಿ ಮಾತನಾಡಿದ ಅವರು, ಆ ಹುಡುಗ ಆಡಿಯೋ ರೆಕಾರ್ಡ್ ಮಾಡಿಕೊಂಡಿರುವುದು ನನಗೆ ಗೊತ್ತಿಲ್ಲ. ರಾಗಿ ಕಳ್ಳ ಅಂದ ಕೂಡಲೇ ಧರ್ಮಸ್ಥಳಕ್ಕೆ ಹೋಗಿ ಸತ್ಯ ಮಾಡಲಿಲ್ವಾ? ಕಳೆದ ಒಂದು ವರ್ಷದಿಂದ ಇದು ನಡೆಯುತ್ತಿದೆ. ಕುರುಬರು, ಲಿಂಗಾಯತರು, ಒಕ್ಕಲಿಗರು ನನಗೆ ಓಟು ಹಾಕುವುದಿಲ್ಲ ಎಂದು ಆ ಆಡಿಯೋದಲ್ಲೇ ಹೇಳಿದ್ದಾರೆ. ನಾನೇನಾದರು ಒಂದು ಪದ ಎಡಿಟ್ ಮಾಡಿರುವುದನ್ನು ತೋರಿಸಿದರೆ ಆ ಧರ್ಮಸ್ಥಳದ ಮಂಜುನಾಥ ನನ್ನನ್ನು ನೋಡಿಕೊಳ್ಳಲಿ. ಇಲ್ಲವಾದರೆ ಆ ದೇವರು ಅವರನ್ನು ನೋಡಿಕೊಳ್ಳಲಿ. ಧರ್ಮಸ್ಥಳಕ್ಕೆ ಬಂದು ದೇವರ ಮೇಲೆ ಪ್ರಮಾಣ ಮಾಡಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಮೋದಿಯ ಅತಿದೊಡ್ಡ TRP: ಮಮತಾ ಬ್ಯಾನರ್ಜಿ

    ದೇವೇಗೌಡರು (H.D.Deve Gowda) ಅರಸೀಕೆರೆ ಜನ ದುಡ್ಡು ಇಲ್ಲದೆ ಓಟು ಹಾಕವುದಿಲ್ಲ ಎನ್ನುತ್ತಾರೆ. ಹಾಗಿದ್ದರೆ ಹದಿನೈದು ವರ್ಷ ಅರಸೀಕೆರೆ ಜನ ದುಡ್ಡು ತೆಗೆದುಕೊಂಡು ಓಟು ಹಾಕಿದ್ದಾರಾ? ನಾವು ಹದಿನಾಲ್ಕು ತಿಂಗಳಿನಲ್ಲಿ 250 ಕೋಟಿ ರೂ. ಕೊಟ್ಟಿದ್ದೇವೆ. ಯಾರೂ ಕಂಟ್ರಾಕ್ಟರ್ ಮಾಡಿದ್ದು ಎಂದು ಹೇಳಲಿ. ನಾನು ಒಂದು ಬಿಡಗಾಸು ತೆಗೆದುಕೊಂಡಿದ್ದೇನೆ ಎಂದರೆ ರಾಜಕೀಯ (Politics) ಬಿಟ್ಟು ಹೋಗುತ್ತೇನೆ. ದೇವರು ಎನ್ನುವವನು ಇದ್ದರೆ ಇದೆಲ್ಲಾ ನೋಡಿಕೊಳ್ಳಲಿ. ದೇವೇಗೌಡರನ್ನು ರಾಜಕೀಯವಾಗಿ ಮುಗಿಸಲೇಬೇಕು ಅಂತ ಹೊರಟರು. ಆದರೆ ಏನಾಯಿತು? ಈತ ಗಂಡಸಿಯಲ್ಲಿ ಹದಿನೇಳು ಓಟಲ್ಲಿ ಸೋತಿದ್ದ. ರಾಜಕೀಯ ವಿದ್ಯಾಮಾನ ಏನಾಯ್ತು ಎಂದು ಸಮಯ ಬಂದಾಗ ಹೇಳುತ್ತೇನೆ. ಇನ್ನೊಂದು ಸ್ವಲ್ಪ ಬಿಚ್ಚೋದಿದೆ. ಎಳೆಎಳೆಯಾಗಿ ಬಿಚ್ಚುತ್ತೇನೆ. ಹದಿನೈದು ವರ್ಷದಲ್ಲಿ ನಮ್ಮದು ಬಿಚ್ಚಿಡಲು ಏನೇನಿದೆ ಹೇಳಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ರೆಡ್ ಸಿಗ್ನಲ್ – ಕೋಲಾರ ಕಾಂಗ್ರೆಸ್‌ನಲ್ಲಿ ಮತ್ತೆ ಆರಂಭವಾಯ್ತು ಗುಂಪುಗಾರಿಕೆ

    ಕೌಶಿಕ್ ಮುಖರ್ಜಿ ಹತ್ತಿರ ಕರೆದುಕೊಂಡು ಹೋಗಿ 360 ಹಳ್ಳಿಗೆ ಕುಡಿಯುವ ನೀರು ಮಂಜೂರು ಮಾಡಿಸಿಕೊಟ್ಟೆ. ಆಗ ಬಿಜೆಪಿ (BJP) ಸರ್ಕಾರ ಆಡಳಿತದಲ್ಲಿ ಇತ್ತು. ಇದೇ ಈಶ್ವರಪ್ಪ ಬಂದು ಅಡಿಗಲ್ಲು ಹಾಕಿದ್ದರು. ಸುಳ್ಳು ಜಾಸ್ತಿ ದಿನ ನಡೆಯುವುದಿಲ್ಲ. ಜನರ ಮೆಚ್ಚಿಗೆಗೋಸ್ಕರ ಇವರು ನಾಟಕ ಆಡುತ್ತಿದ್ದಾರೆ. ಸುಳ್ಳು ಯಾವತ್ತಾದರೂ ಒಂದು ದಿನ ಅಂತ್ಯವಾಗುತ್ತದೆ. ಈಗ ನಾನು ಚಿಕ್ಕ ವಿಷಯವನ್ನು ಬಿಚ್ಚಿಟ್ಟಿದ್ದೇನೆ. ನನ್ನ ಕೈಯಲ್ಲಿ ಆದದ್ದನ್ನು ಮಾಡಿದ್ದೇನೆ. ಈತನನ್ನು ರಾಜಕೀಯವಾಗಿ ಮೇಲೆ ತರಲು ಏನೇನು ಶಕ್ತಿ ತುಂಬಬೇಕೋ ಅದನ್ನು ತುಂಬಿದ್ದೇನೆ. ಈಗ ಅವರು ಸ್ವಲ್ಪ ದೃಢವಾಗಿದ್ದಾರೆ. ಅವರ ಬಳಿ ಹಣಕಾಸಿದೆ. ನೀನೆ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ ಎನ್ನುವ ಪರಿಸ್ಥಿತಿ ಈಗ ನಮಗೆ ಬಂದಿದೆ. ಇನ್ನೂ 45 ದಿನ ಪರದೆ ಇದೆ, ಅದರ ಮೇಲೆ ಎಳೆಎಳೆಯಾಗಿ ಆಚೆ ತರುತ್ತೇನೆ. ಅರಸೀಕೆರೆ ಮಹಾಜನತೆ ಸ್ವಾಭಿಮಾನದವರು. ನೀವು ದುಡ್ಡು ತಗೆದುಕೊಂಡು ಹದಿನೈದು ಓಟು ಹಾಕಿದ್ದೀರಾ ಎಂದು ಕೇಳುತ್ತೇನೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಬಿಜೆಪಿಯ ಮಿಷನ್ ಬೆಂಗಳೂರು ಟಾಸ್ಕ್‌ಗೆ ಜೀವ – ಮೋದಿ ಮೆಟ್ರೋ ಅಜೆಂಡಾ ಏನು?

    ಅರಸೀಕೆರೆ ನಗರಸಭೆಯ ಏಳು ಜನ ಅನರ್ಹ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ರೇವಣ್ಣ, ಅವರು ಪಾಪದವರು, ಅದರಲ್ಲಿ ನಂದೇ ತಪ್ಪಿದೆ. ನನ್ನದೇ ತಪ್ಪು, ನಾನು ಅವರ ಬಳಿ ಕ್ಷಮೆ ಕೇಳುತ್ತೇನೆ. ನಮ್ಮ ಪಕ್ಷದ ಅಧ್ಯಕ್ಷರಿಗೆ ಸರಿಯಾದ ಮಾಹಿತಿ ನೀಡಲಿಲ್ಲ. ಕೋರ್ಟ್‌ನಲ್ಲಿ ಕೇಸ್ ಇದೆ ಎಂದು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ ಎಂದರು. ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ, ಇಂದು ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ಆಟೋ ಮುಷ್ಕರ

    ಎರಡು ವರ್ಷದಿಂದ ಶಿವಲಿಂಗೇಗೌಡರು ಕಾಂಗ್ರೆಸ್ (Congress) ಮನೆ ಬಾಗಿಲು ತಟ್ಟುತ್ತಲೇ ಇದ್ದರು. ಇನ್ನೊಂದು ದಿನ ದೇವೇಗೌಡರ ಮುಂದೆ ಎಲ್ಲಾ ಕುಳಿತಿದ್ದರು. ಆಗ ಒಬ್ಬರು ಫೋನ್ ಮಾಡಿ ಏನು ಸಾರ್ ರಾಮಸ್ವಾಮಿ ಇಲ್ಲೇ ಉಳಿದುಕೊಳ್ಳತ್ತಾರೆ ಎಂದರು. ಕಾಂಗ್ರೆಸ್‌ನವರು ಅವನನ್ನು ಒದ್ದು ಓಡಿಸಿದ್ದಾರೆ, ಅದಕ್ಕೆ ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ ಎಂದು ಇದೇ ಶಿವಲಿಂಗೇಗೌಡ ಹೇಳಿದ. ಶಿವಲಿಂಗೇಗೌಡರಿಗೆ ಭಗವಂತ ಒಳ್ಳೆಯದು ಮಾಡಲಿ ಎಂದು ಹೇಳಿದರು. ಇದನ್ನೂ ಓದಿ: ಉರಿಗೌಡ-ನಂಜೇಗೌಡ ಸಿನಿಮಾ : ಇಂದು ಮಹತ್ವದ ನಿರ್ಧಾರ

  • ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಪಕ್ಷ ತೊರೆಯುವುದು ಗ್ಯಾರಂಟಿ – ಸ್ಫೋಟಕ ಆಡಿಯೋ ವೈರಲ್

    ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಪಕ್ಷ ತೊರೆಯುವುದು ಗ್ಯಾರಂಟಿ – ಸ್ಫೋಟಕ ಆಡಿಯೋ ವೈರಲ್

    ಹಾಸನ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ಹಾಸನ ಜಿಲ್ಲೆಯಲ್ಲಿ ಪಕ್ಷಾಂತರ ಪಾಲಿಟಿಕ್ಸ್‌ ಮಾತು ಕೇಳಿಬರುತ್ತಿದೆ. ಅರಸೀಕೆರೆಯ ಜೆಡಿಎಸ್‌ (JDS) ಶಾಸಕ ಕೆ.ಎಂ.ಶಿವಲಿಂಗೇಗೌಡ (Shivalingegowda) ಅವರು ಪಕ್ಷ ತೊರೆಯುವುದು ಗ್ಯಾರಂಟಿ ಎನ್ನಲಾಗುತ್ತಿದೆ.

    ಗ್ರಾಮ ಪಂಚಾಯಿತಿ ಸದಸ್ಯೆ ಪತಿ ವಾಸು ಎಂಬವರಿಗೆ ಹಣಕ್ಕಾಗಿ ಧಮ್ಕಿ ಹಾಕಿರುವ ಆಡಿಯೋ ವೈರಲ್‌ ಆಗಿದೆ. ಇದರಲ್ಲಿ ಶಿವಲಿಂಗೇಗೌಡರು ಜೆಡಿಎಸ್‌ ತೊರೆಯುವ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮೋದಿ ಮೆಗಾ ರೋಡ್ ಶೋಗೆ ಪ್ಲಾನ್

    ಜಕ್ಕನಹಳ್ಳಿ ಗ್ರಾಪಂ ಸದಸ್ಯೆ ಸೌಮ್ಯ ಪತಿ ವಾಸು ಜೊತೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿರುವ ಆಡಿಯೋದಲ್ಲಿ, “ನಾನು ಕೊಟ್ಟಿದ್ದ 50 ಸಾವಿರ ಹಣವನ್ನು ವಾಪಸ್‌ ಕೊಡು. ನೀನು ಆ ಕಡೆ (ಜೆಡಿಎಸ್‌) ಇದ್ದೀಯಾ. ನನ್ನ ಪರವಾಗಿ ಇಲ್ಲ. ಹೀಗಾಗಿ ಹಣ ತಂದು ಕೊಡು” ಎಂದು ಧಮ್ಕಿ ಹಾಕಿದ್ದಾರೆ.

    ಅದಕ್ಕೆ ವಾಸು, “ನಾನೇನಾದ್ರೂ ನಿನ್‌ ಹತ್ರ ಹಣ ಕೇಳಿದ್ನಾ ಅಣ್ಣ. ಈಗ ನನ್‌ ಹತ್ರ ಇಲ್ಲ. ಏನ್‌ ಮಾಡ್ಕೋತೀಯಾ ನೀನು? ಜೈಲಿಗೆ ಕಳಿಸ್ತೀಯಾ, ಕೊಲೆ ಮಾಡಿಸ್ತೀಯಾ? ಮಾಡಿಸ್ಕೊ. ಈಗ ನನ್ನ ಬಳಿ ಹಣ ಇಲ್ಲ” ಎಂದು ಎದುರುತ್ತರ ನೀಡಿದ್ದಾರೆ. ಇದಕ್ಕೆ ಶಿವಲಿಂಗೇಗೌಡರು ಮಾತನಾಡಿ, “ನೀನು ದೊಡ್ಡ ಮನುಷ್ಯ ಅಂತಾ ಜೈಲಿಗೆ ಕಳಿಸ್ತಾರಾ? ಅದೆಲ್ಲ ನನಗೆ ಗೊತ್ತಿಲ್ಲ, ನನ್‌ ಹಣ ನನಗೆ ತಂದು ಕೊಡು” ಎಂದು ಕೇಳಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಅಂಕಲ್ ನಮ್ಗೆ ಮೇಲ್ಸೇತುವೆ ಬೇಡ- ಸಿಎಂಗೆ 2 ಸಾವಿರ ವಿದ್ಯಾರ್ಥಿಗಳಿಂದ ಪತ್ರ

    ನಾನು ಯಾವ ಪಕ್ಷದಲ್ಲಿ ಇದ್ದರೂ ನೀನು ನನ್ನ ಜೊತೆ ಇರಬೇಕು ಅಂತಾ ವಾಸುಗೆ ಶಿವಲಿಂಗೇಗೌಡರು ದುಡ್ಡು ಕೊಟ್ಟಿದ್ದರು ಎನ್ನಲಾಗಿದೆ. ಈಗ ವಾಸು ಜೆಡಿಎಸ್‌ ಪರವೇ ಇದ್ದು, ಶಿವಲಿಂಗೇಗೌಡರು ಪಕ್ಷ ಬಿಡಲು ತೀರ್ಮಾನಿಸಿದ್ದಾರೆ. ವಾಸು ತನ್ನ ಪರ ಇಲ್ಲ ಎಂದು ಹಣ ವಾಪಸ್‌ ನೀಡುವಂತೆ ಕೇಳಿದ್ದಾರೆ. ಈ ಸಂಭಾಷಣೆಯ ಆಡಿಯೋ ವೈರಲ್‌ ಆಗಿದೆ.‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಧರ್ಮಸ್ಥಳ, ಹಾಸನಾಂಬೆ ದರ್ಶನ ಮುಗಿಸಿ ವಾಪಸಾಗುತ್ತಿದ್ದಾಗ ಭೀಕರ ಅಪಘಾತ – ಮಕ್ಕಳು ಸೇರಿ 9 ಮಂದಿ ದುರ್ಮರಣ

    ಧರ್ಮಸ್ಥಳ, ಹಾಸನಾಂಬೆ ದರ್ಶನ ಮುಗಿಸಿ ವಾಪಸಾಗುತ್ತಿದ್ದಾಗ ಭೀಕರ ಅಪಘಾತ – ಮಕ್ಕಳು ಸೇರಿ 9 ಮಂದಿ ದುರ್ಮರಣ

    ಹಾಸನ: ಟೆಂಪೋ ಟ್ರಾವೆಲರ್, ಹಾಲಿನ ಲಾರಿ ಹಾಗೂ ಸಾರಿಗೆ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂಭತ್ತು ಮಂದಿ ಸಾವನ್ನಪ್ಪಿದ್ದು, ಹನ್ನೆರಡು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅರಸೀಕೆರೆ ತಾಲ್ಲೂಕಿನ ಗಾಂಧಿನಗರದಲ್ಲಿ ನಡೆದಿದೆ.‌

    ಹಳ್ಳಿಕೆರೆ ಗ್ರಾಮದ ಹದಿನಾಲ್ಕು ಮಂದಿ ಟಿಟಿ ವಾಹನದಲ್ಲಿ ಧರ್ಮಸ್ಥಳಕ್ಕೆ ತೆರಳಿ, ಅಲ್ಲಿಂದ ಹಾಸನಕ್ಕೆ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆದು ಗ್ರಾಮಕ್ಕೆ ತೆರಳುತ್ತಿದ್ದರು. ಊರಿಗೆ ತಲುಪಲು ಎರಡರಿಂದ ಮೂರು ನಿಮಿಷವಿರುವಾಗಲೇ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಹಿಂದೂಗಳು ಜಾಸ್ತಿ ಇರುವ ಜಾಗದಲ್ಲಿ ಬಾಂಬ್ ಹಾಕಬೇಕು: ಆಡಿಯೋ ವೈರಲ್

    ಅರಸೀಕೆರೆ ತಾಲ್ಲೂಕಿನ, ಹಳ್ಳಿಕೆರೆ ಗ್ರಾಮದ ಹದಿನಾಲ್ಕು ಮಂದಿ ಟೆಂಪೋ ಟ್ರಾವೆಲ‌ರ್ ವಾಹನದಲ್ಲಿ ನಿನ್ನೆ ಧರ್ಮಸ್ಥಳಕ್ಕೆ ತೆರಳಿದ್ದರು. ಮಕ್ಕಳು ಸೇರಿದಂತೆ ಪುರುಷರು ಮುಡಿ ನೀಡಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸಿ, ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನದ ಅಧಿದೇವತೆ ಹಾಸನಾಂಬೆ ದೇವಾಲಯಕ್ಕೆ ಆಗಮಿಸಿ ದೇವಿ ದರ್ಶನ ಪಡೆದು ಎಲ್ಲರೂ ಹಳ್ಳಿಕೆರೆ ಗ್ರಾಮಕ್ಕೆ ತೆರಳುತ್ತಿದ್ದರು. ಸ್ವಗ್ರಾಮ ತಲುಪಲು ಎರಡು ಕಿಲೋಮೀಟರ್ ಇದ್ದು, ಐದು ನಿಮಿಷದಲ್ಲಿ ಮನೆ ಸೇರಿಕೊಳ್ಳತ್ತಿದ್ದರು.

    ಅರಸೀಕೆರೆ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206 ರ ಕಾಮಗಾರಿ ನಡೆಯುತ್ತಿದ್ದು, ಟಿಟಿ ವಾಹನದ ಹಿಂದೆ ಸಾರಿಗೆ ಬಸ್ ಬರುತ್ತಿತ್ತು. ಶಿವಮೊಗ್ಗ ಕಡೆಯಿಂದ ಅರಸೀಕೆರೆ ಕಡೆಗೆ ಬರುತ್ತಿದ್ದ ಯಮಸ್ವರೂಪಿ ಹಾಲಿನ ಲಾರಿ ಚಾಲಕನಿಗೆ ತಿರುವು ಗೊತ್ತಾಗದೆ ಎರಡು ವಾಹನಗಳು ಬರುತ್ತಿದ್ದ ಕಡೆಗೆ ಏಕಮುಖವಾಗಿ ಬಂದಿದೆ. ಈ ವೇಳೆ ವೇಗವಾಗಿದ್ದ ಟಿಟಿ ವಾಹನ ಹಾಲಿನ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಇದೇ ವಾಹನದ ಹಿಂಬದಿಯಿದ್ದ ಸಾರಿಗೆ ಬಸ್ ಪಲ್ಟಿಯಾಗಿದ್ದ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ.‌ ಇದನ್ನೂ ಓದಿ: RSS ಬಗ್ಗೆ ಹೊಟ್ಟೆ ಕಿಚ್ಚಿದ್ದವರಿಗೆ ಮದ್ದಿಲ್ಲ: ಪ್ರಮೋದ್ ಮಧ್ವರಾಜ್

    ಟಿಟಿ ವಾಹನದಲ್ಲಿದ್ದ ಲೀಲಾವತಿ (50), ಚೈತ್ರಾ (33), ಸಮರ್ಥ (10), ಡಿಂಪಿ (12), ತನ್ಮಯ್ (10), ದ್ರುವ (2), ವಂದನಾ (20), ದೊಡ್ಡಯ್ಯ (60), ಭಾರತಿ (50) ಸೇರಿ ಒಂಭತ್ತು ಮಂದಿ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದು, 12 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಹತ್ತು ಮಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರು ಅರಸೀಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಕ್ಕಿ ರಭಸಕ್ಕೆ ಟಿಟಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಕ್ರೇನ್ ಮೂಲಕ ಟಿಟಿ ವಾಹನವನ್ನು ತೆರುವುಗೊಳಿಸಲಾಯಿತು.‌

    ಒಂದೇ ಗ್ರಾಮದ ನಾಲ್ವರು ಮಕ್ಕಳು, ಮೂವರು ಮಹಿಳೆಯರು, ಓರ್ವ ಪುರುಷ ಸಾವನ್ನಪ್ಪಿದ್ದು, ಮೃತದೇಹಗಳನ್ನು ಅರಸೀಕೆರೆ ತಾಲ್ಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.‌ ಸ್ಥಳಕ್ಕೆ ಅರಸೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಲಾರಿ ಚಾಲಕ ಪರಾರಿಯಾಗಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಈ ಪೂಜಾರಿಯ ಪಾದ ಸ್ಪರ್ಶ ಮಾಡಿದರೆ ಇಷ್ಟಾರ್ಥ ಸಿದ್ಧಿ – ಅರಸೀಕೆರೆಯಲ್ಲಿ ವಿಶಿಷ್ಟ ಆಚರಣೆ

    ಈ ಪೂಜಾರಿಯ ಪಾದ ಸ್ಪರ್ಶ ಮಾಡಿದರೆ ಇಷ್ಟಾರ್ಥ ಸಿದ್ಧಿ – ಅರಸೀಕೆರೆಯಲ್ಲಿ ವಿಶಿಷ್ಟ ಆಚರಣೆ

    ದಾವಣಗೆರೆ: ಈ ಶತಮಾನದಲ್ಲಿಯೂ ಕೆಲವು ಭಾಗಗಳಲ್ಲಿ ದಲಿತರನ್ನು ದೇವಸ್ಥಾನದ ಒಳಗೆ ಬಿಟ್ಟುಕೊಳ್ಳದ ಪರಿಸ್ಥಿತಿ ಇದೆ. ಆದರೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಅರಸೀಕೆರೆಯಲ್ಲಿ ಮಾತ್ರ ದಲಿತ ಪೂಜಾರಿಯ ಪಾದ ಸ್ಪರ್ಶಕ್ಕೆ ಹಲವು ಜನ ಕಾಯುತ್ತಿರುವ ವಿಶಿಷ್ಟ ಆಚರಣೆಯಿದೆ.

    ದಲಿತ ಪೂಜಾರಿ ಪಾದ ಸ್ಪರ್ಶ ಮಾಡಲು ಕಿಲೋಮೀಟರ್ ಗಟ್ಟಲೇ ದಾರಿಯುದ್ದಕ್ಕೂ ಸಾವಿರಾರು ಭಕ್ತರು ಮಲಗಿ ಕಾಯುತ್ತಿರುತ್ತಾರೆ. ಭಕ್ತರ ಮೇಲೆ ಆ ದಲಿತ ಪೂಜಾರಿ ನಡೆದರೆ ಅವರ ಎಲ್ಲ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಅದರ ಜೊತೆಗೆ ಪಾಪ ಕಳೆಯುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನಗಳಿಗಿದೆ.

    ಈ ರೀತಿಯ ವಿಶಿಷ್ಟ ಆಚರಣೆ ಅರಸೀಕೆರೆ ದಂಡಿ ದುಗ್ಗಮ್ಮ ಜಾತ್ರೆಯಲ್ಲಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಆಚಾರವಾಗಿದೆ. ಕಾರ್ತಿಕ ನಂತರದ ಅಮಾವಾಸ್ಯೆ ದಿನದಂದು ಈ ಜಾತ್ರೆ ನಡೆಯಲಿದ್ದು, ಬೆಳಗ್ಗಿನ ಜಾವ ದಲಿತ ಪೂಜಾರಿ ಗಂಗೆ ಪೂಜೆ ಸಲ್ಲಿಸಿ ದೇವರ ಮೂರ್ತಿಯನ್ನು ಹೊತ್ತು ಸಾಗುತ್ತಾರೆ. ಊರ ಹೊರಗೆ ಗಂಗೆಪೂಜೆ ಮುಗಿಸಿ ದಂಡಿ ದುಗ್ಗಮ್ಮನ ಮೂರ್ತಿಯನ್ನು ಹೊತ್ತು ಎರಡು ಕಿಲೋಮೀಟರ್ ನಡೆಯುತ್ತಾರೆ. ಇದನ್ನೂ ಓದಿ: 30 ದೇಶಗಳ ಅನಿವಾಸಿ ಕನ್ನಡಿಗರಿಂದ ಇಂದು ‘ಎನ್ಆರ್‌ಐ ಅಪೀಲ್ ಡೇ’ ಟ್ವಿಟ್ಟರ್ ಅಭಿಯಾನ

    ಈ ಎರಡು ಕಿಲೋಮೀಟರ್ ಉದ್ದಕ್ಕೂ ಭಕ್ತರು ಅಡ್ಡಲಾಗಿ ಮಲಗುತ್ತಾರೆ. ಭಕ್ತರ ಮೇಲೆಯೇ ಪೂಜಾರಿ ನಡೆದು ದೇವಸ್ಥಾನ ಸೇರುತ್ತಾರೆ. ಸಾವಿರಾರು ಜನರು ಈ ರೀತಿ ತಮ್ಮ ಹರಕೆಯನ್ನು ತೀರಿಸಿಕೊಳ್ಳುತ್ತಾರೆ. ದಲಿತ ಪೂಜಾರಿಯ ಪಾದಸ್ಪರ್ಶ ಮಾಡಿದರೆ ಒಳಿತಾಗುತ್ತದೆ ಎನ್ನುವ ವಾಡಿಕೆ ಈಗಲೂ ಕೂಡ ನಡೆದುಕೊಂಡು ಬಂದಿದೆ. ಅಲ್ಲದೆ ದಂಡಿ ದುಗ್ಗಮ್ಮ ದೇವಿಗೆ ಜಾತ್ರೆಯಲ್ಲಿ ಜಾನುವಾರುಗಳನ್ನು ದೇವಸ್ಥಾನ ಬಳಿ ಪ್ರದಕ್ಷಿಣೆ ಹಾಕಿಸಿದರೆ ಅವುಗಳಿಗೆ ಯಾವುದೇ ರೋಗ ತಗುಲುವುದಿಲ್ಲ ಎನ್ನುವ ನಂಬಿಕೆ ಇದೆ. ಇದನ್ನೂ ಓದಿ: ಓಮಿಕ್ರಾನ್‌ ಸ್ಫೋಟ – ಬೆಂಗಳೂರಿನಲ್ಲಿ ಲಾಕ್‌ಡೌನ್‌ ಸುಳಿವು ನೀಡಿದ ಸಚಿವ ಆರ್‌.ಅಶೋಕ್‌

  • ಕುಮಾರಸ್ವಾಮಿ ಅವರೇ ಜೆಡಿಎಸ್ ಮುಖ್ಯಮಂತ್ರಿ ಅಭ್ಯರ್ಥಿ: ರೇವಣ್ಣ

    ಕುಮಾರಸ್ವಾಮಿ ಅವರೇ ಜೆಡಿಎಸ್ ಮುಖ್ಯಮಂತ್ರಿ ಅಭ್ಯರ್ಥಿ: ರೇವಣ್ಣ

    ಹಾಸನ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೇ ಜೆಡಿಎಸ್ ಮುಖ್ಯಮಂತ್ರಿ ಅಭ್ಯರ್ಥಿ. ನಮ್ಮಲ್ಲಿ ಕಚ್ಚಾಟವಿಲ್ಲ, ಆರಾಮಾಗಿದ್ದೇವೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಅಧಿಕಾರ ಕೊಟ್ಟರೆ ಒಳ್ಳೆಯ ಕೆಲಸ ಮಾಡುತ್ತೇವೆ, ಇಲ್ಲ ಸುಮ್ಮನ್ನಿರುತ್ತೇವೆ. ಈ ಹಿಂದೆ ಅಧಿಕಾರ ಕೊಟ್ಟಿದ್ದರು 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇವೆ. ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ನಾನು ಮುಖ್ಯಮಂತ್ರಿ ಎಂದು ಒಬ್ಬರಿಗೊಬ್ಬರು ಹೊಡೆದಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಆ ರೀತಿ ಇಲ್ಲ ಎಂದು ತಿಳಿಸಿದರು.

    ಕೋವಿಡ್ ಹೆಸರಿನಲ್ಲಿ ಗ್ರಾ.ಪಂ. ಅನುದಾನವನ್ನು ಕಡಿತ ಮಾಡಿದ್ದಾರೆ, ಎಂಎಲ್‍ಎ ಅನುದಾನವನ್ನು ಕೊಟ್ಟಿಲ್ಲ. ಗ್ರಾಮ ಪಂಚಾಯಿತಿಯ ಹಕ್ಕನ್ನು ಕಸಿದುಕೊಳ್ಳಬೇಡಿ. ಸರ್ಕಾರ ಇದನ್ನು ಸರಿಪಡಿಸದಿದ್ದರೆ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಒಳಗೊಂಡಂತೆ ಸಾಂಕೇತಿಕವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ, ನಂತರ ರಾಜ್ಯಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

    ಸರ್ಕಾರಕ್ಕೆ ನಾಚಿಕೆಯಾಗಬೇಕು, ಇದನ್ನು ಸರ್ಕಾರ ಎನ್ನುತ್ತಾರಾ? ಸರ್ಕಾರ ಲೂಟಿಕೋರರ ಕೈಸೇರಿದೆ, ಕೊರೊನಾ ಹೆಸರಿನಲ್ಲಿ ರಾಜ್ಯದಲ್ಲಿ ಲೂಟಿ ನಡೆಯುತ್ತಿದೆ. ಮೋದಿಯವರೇ ಸರ್ಕಾರವನ್ನು ಲೂಟಿಕೋರರ ಕೈಗೆ ಕೊಟ್ಟಿದ್ದೀರಾ, ಕೇಂದ್ರ ಸರ್ಕಾರ ನೀಡುವ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮುಕ್ತ ಮಾಡುತ್ತೇನೆ, ಅಚ್ಛೆ ದಿನ್ ಬರುತ್ತೆ ಎಂದು ಮೋದಿ ಹೇಳುತ್ತಾರೆ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ವರದಿ ತರಿಸಿಕೊಳ್ಳಿ. ಇದು ದಪ್ಪ, ಎಮ್ಮೆ ಚರ್ಮದ ಸರ್ಕಾರ. ಸರ್ಕಾರಕ್ಕೂ ಕೊರೊನಾ ಇದೆಯೋ ಗೊತ್ತಿಲ್ಲ, ಅದನ್ನು ರಿಪೇರಿ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜೆಡಿಎಸ್ ಸದಸ್ಯರಿಂದ ಬಿಜೆಪಿಗೆ ಬೆಂಬಲ
    ಅರಸೀಕೆರೆ ನಗರಸಭೆಯ 7 ಜೆಡಿಎಸ್ ಸದಸ್ಯರು ಹಾಗೂ ಒಬ್ಬ ಪಕ್ಷೇತರ ಸದಸ್ಯ ಬಂಡಾಯ ಬಾವುಟ ಹಾರಿಸಿದ್ದಾರೆ. ತಮಗೆ ಪ್ರತ್ಯೇಕ ಆಸನ ನೀಡುವಂತೆ ಹಾಸನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. 31 ಸದಸ್ಯರನ್ನು ಒಳಗೊಂಡಿರುವ ಅರಸೀಕೆರೆ ನಗರಸಭೆಯಲ್ಲಿ 21 ಮಂದಿ ಜೆಡಿಎಸ್ ನಿಂದ ಗೆದ್ದುಬಂದಿದ್ದು, ಬಿಜೆಪಿಯಿಂದ 6 ಹಾಗೂ ಪಕ್ಷೇತರ 3 ಮತ್ತು ಕಾಂಗ್ರೆಸ್ ಒಬ್ಬರು ಆಯ್ಕೆಯಾಗಿದ್ದಾರೆ.

    ಜೆಡಿಎಸ್ ಶಾಸಕ ಶಿವಲಿಂಗೇಗೌಡರ ವಿರುದ್ಧ ಮುನಿಸಿಕೊಡಿರುವ ಜೆಡಿಎಸ್‍ನ ಏಳು ಸದಸ್ಯರು, ತಮಗೆ ಯಾವುದೇ ರೀತಿ ಸ್ಪಂದನೆಯನ್ನು ಈಗಿರೋ ನಾಯಕರು ನೀಡುತ್ತಿಲ್ಲ. ಮೀಸಲಾತಿಯನ್ವಯ ಈಗ ಬಿಜೆಪಿಯವರು ಅರಸೀಕೆರೆ ನಗರಸಭೆ ಅಧ್ಯಕ್ಷರಾಗಿದ್ದಾರೆ. ಅವರು ಉತ್ತಮವಾಗಿ ಕೆಲಸ ಮಾಡಬೇಕಾದರೆ ನಮ್ಮೆಲ್ಲರ ಸಹಕಾರ ಬೇಕಾಗಿರುತ್ತದೆ. ಇದರಿಂದ ನಾವೂ ಉತ್ತಮವಾಗಿ ಜನಸೇವೆ ಮಾಡಬಹುದು ಎಂಬ ಕಾರಣ ನೀಡಿ, ಬಿಜೆಪಿಗೆ ಬೆಂಬಲ ನೀಡುವುದಾಗಿ ತಿಳಿಸಿ, ಪ್ರತ್ಯೇಕ ಆಸನ ವ್ಯವಸ್ಥೆ ಮಾಡುವಂತೆ ಡಿಸಿಗೆ ಮನವಿ ಮಾಡಿದ್ದಾರೆ. ಜೊತೆಗೆ ಅರಸೀಕೆರೆ ನಗರಸಭೆಗೆ ಜೆಡಿಎಸ್‍ನಿಂದ 21 ಜನ ಆಯ್ಕೆಯಾಗಿದ್ದು, ಆ ಸಂಖ್ಯೆಯ ಮೂರನೇ ಒಂದು ಭಾಗವಾಗಿ ನಾವು ಏಳುಜನ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆಯನ್ನು ನೀಡಿದ್ದೇವೆ. ಹೀಗಾಗಿ ನಾವು ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದಂತೆ ಆಗುವುದಿಲ್ಲ ಎನ್ನುತ್ತಿದ್ದಾರೆ.

    ಶಿವಲಿಂಗೇಗೌಡ ಆಕ್ರೋಶ
    ಈ ಬೆಳವಣಿಗೆಯಿಂದ ಕೆರಳಿದ ಶಾಸಕ ಶಿವಲಿಂಗೇಗೌಡ, ಈ ರಾಜಕೀಯ ಕುಚೇಷ್ಟೆ ಹಿಂದೆ ನೇರವಾಗಿ ಬಿಜೆಪಿ ಇದೆ ಎಂದು ಆರೋಪ ಮಾಡಿದ್ದಾರೆ. ಜೊತೆಗೆ ಅರಸೀಕೆರೆಗೆ ರಾಜಕೀಯ ಆಸರೆ ಪಡೆಯಲು ಬಂದವರೊಬ್ಬರು ಇದನ್ನೆಲ್ಲ ಮಾಡುತ್ತಿದ್ದಾರೆ. ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರವನ್ನೇ ಕೆಡವಿದವರಿಗೆ ಅರಸೀಕೆರೆ ನಗರಸಭೆ ಕೆಡವಲು ಆಗಲ್ವೇ ಎಂದು ಪರೋಕ್ಷವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ರಾಜಕೀಯ ದಾಳದ ಬಗ್ಗೆ ತಿರುಗಿಬಿದ್ದಿದ್ದಾರೆ. ಈ ವಿಚಾರವಾಗಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಈ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಅರಸೀಕೆರೆಯಲ್ಲಿ ಜೆಡಿಎಸ್ ಸಂಖ್ಯಾ ಬಲ ಜಾಸ್ತಿ ಇದ್ದರೂ ಮೀಸಲಾತಿ ಆಧಾರದ ಮೇಲೆ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ಅಭ್ಯರ್ಥಿ ಅಲಂಕರಿಸಿದ್ದಾರೆ. ಆದರೆ ಜೆಡಿಎಸ್ ಭದ್ರ ಕೋಟೆಯಾಗಿರುವ ಅರಸೀಕೆರೆಯಲ್ಲಿ ಬಿಜೆಪಿ ಇಷ್ಟೆಲ್ಲಾ ಕಸರತ್ತು ಮಾಡುತ್ತಿದೆ ಎಂದರೆ ಅದರ ಹಿಂದೆ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಇದ್ದಾರೆ ಅನ್ನೋ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಎನ್.ಆರ್.ಸಂತೋಷ್ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ, ಅರಸೀಕೆರೆಯಿಂದ ಸ್ಪರ್ಧೆಗೆ ಸಿದ್ಧ ಎಂದು ಈ ಹಿಂದೆ ಕೂಡ ಸ್ಪಷ್ಟವಾಗಿ ಹೇಳಿದ್ದರು. ಅಲ್ಲದೆ ನಿರಂತರವಾಗಿ ಅರಸೀಕೆರೆಯಲ್ಲಿ ಓಡಾಡುತ್ತಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್, ಈಗ ತೆರೆಮರೆಯಲ್ಲೇ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ಜೆಡಿಎಸ್ ನಾಯಕರು ತಮ್ಮ ಸದಸ್ಯರನ್ನು ಹೇಗೆ ಮನವೊಲಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

  • ಶಿವಲಿಂಗೇಗೌಡರಿಂದ ಗೂಂಡಾಗಿರಿ: ಎನ್.ಆರ್.ಸಂತೋಷ್

    ಶಿವಲಿಂಗೇಗೌಡರಿಂದ ಗೂಂಡಾಗಿರಿ: ಎನ್.ಆರ್.ಸಂತೋಷ್

    ಹಾಸನ: ಅರಸೀಕೆರೆಯಲ್ಲಿ ಮತ್ತೆ ಶಾಸಕ ಶಿವಲಿಂಗೇಗೌಡ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ನಡುವಿನ ಜಗಳ ತಾರಕಕ್ಕೇರುತ್ತಿದ್ದು, ಇಬ್ಬರು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಶಾಸಕರು ತಮ್ಮ ಬೆಂಬಲಿಗರ ಮೂಲಕ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಸಂತೋಷ್ ಆರೋಪಿಸಿದ್ದಾರೆ

    ಅರಸೀಕೆರೆಯ ಬೈರಗೊಂಡನಹಳ್ಳಿ ಬೋವಿ ಕಾಲೋನಿಯಲ್ಲಿ ಆನಂದ್ ಮತ್ತು ಉಮೇಶ್ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಮೇಶ್ ಜಯಶಾಲಿಯಾಗಿದ್ದರು. ನಂತರ ಜೆಡಿಎಸ್ ಮತ್ತು ಬಿಜೆಪಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿ 20 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಬೆಂಬಲಿಗರ ಯೋಗಕ್ಷೇಮ ವಿಚಾರಿಸಲು ಆಸ್ಪತ್ರೆಗೆ ಆಗಮಿಸಿದ ಎನ್.ಆರ್.ಸಂತೋಷ್, ಶಾಸಕ ಶಿವಲಿಂಗೇಗೌಡ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಫಲಿತಾಂಶ ಬಂದ ನಂತರ ಬಿಜೆಪಿ ಬೆಂಬಲಿಗರ ಮೇಲೆ ಶಾಸಕರು ಗೂಂಡಾಗಿರಿ ಮಾಡುವ ಕೆಲಸ ಮಾಡಿದ್ದಾರೆ. ನಮ್ಮ ಬೆಂಬಲಿಗರ ಕೈ ಮೂಳೆ ಮುರಿದು, ತಲೆ ಒಡೆದಿದ್ದಾರೆ. ವೈದ್ಯಕೀಯ ಸಿಬ್ಬಂದಿ ಮಾತ್ರ ಡಿಸ್ಚಾರ್ಜ್ ಮಾಡಿ ಏನೂ ಆಗಿಲ್ಲ ಅಂತಿದ್ದಾರೆ. ಅವರಿಗೆ ಸರಿಯಾದ ಆಹಾರ ಒದಗಿಸುತ್ತಿಲ್ಲ. ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ನಾವು ಆಸ್ಪತ್ರೆಗೆ ಬಂದ ನಂತರ ನಮ್ಮ ಮೇಲೂ ಗಲಾಟೆ ಮಾಡುವ ಉದ್ದೇಶದಿಂದ ಶಾಸಕರು ಆಸ್ಪತ್ರೆಗೆ ಬಂದಿದ್ದಾರೆ ಎಂದರು. ನಮ್ಮ ಕಾರ್ಯಕರ್ತರ ಮೇಲೆ ಮತ್ತೆ ಹಲ್ಲೆ ಆದರೆ ಶಾಸಕರ ಮನೆಮುಂದೆ ಧರಣಿ ಕೂರುತ್ತೇನೆ ಎಂದರು.

    ಇತ್ತ ಸಂತೋಷ್ ಆರೋಪಕ್ಕೆ ಶಾಸಕ ಶಿವಲಿಂಗೇಗೌಡ ಬೆಂಬಲಿಗರು ತಿರುಗೇಟು ನೀಡಿದ್ದು, ಗಲಾಟೆ ಮಾಡಿಕೊಂಡವರನ್ನು ಸಮಾಧಾನ ಮಾಡಲು ಶಾಸಕರು ಮುಂದಾಗಿದ್ದರು. ಹೀಗಾಗಿ ಆಸ್ಪತ್ರೆಗೆ ಭೇಟಿ ನೀಡಿದಾಗ ಅದೇ ಸಂದರ್ಭದಲ್ಲಿ ಸಂತೋಷ್ ಬಂದು ದೌರ್ಜನ್ಯ ಮಾಡಿದ್ದಾರೆ. ಏಕಾಏಕಿ ಏಕವಚನದಲ್ಲಿ ನಮ್ಮವರನ್ನೆಲ್ಲ ಬೈದಿದ್ದಾರೆ. ಶಾಸಕರು ನಾವು ಆಚೆ ಬರದಂತೆ ಆಸ್ಪತ್ರೆಯ ಗೇಟ್ ಹಾಕಿ ನಿಂದನೆ ಮಾಡಿದ್ದಾರೆ. ನಮ್ಮ ಕಾರ್ ಅಡ್ಡಹಾಕಿ ಎಂದು ಬೆಂಬಲಿಗರಿಗೆ ಹೇಳಿದ್ದಾರೆ. ಮಾತ್ರೆ ನುಂಗಿದ ನಂತರ ಇವರ ತಲೆಯಲ್ಲಿ ಏನೂ ಇಲ್ಲದಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

  • ಬಿಜೆಪಿ, ಜೆಡಿಎಸ್ ರಾಜಕೀಯ ಗುದ್ದಾಟ – ಅರಸೀಕೆರೆ ನಗರಸಭೆ ಅಧ್ಯಕ್ಷ ಚುನಾವಣೆ ಮುಂದೂಡಿಕೆ

    ಬಿಜೆಪಿ, ಜೆಡಿಎಸ್ ರಾಜಕೀಯ ಗುದ್ದಾಟ – ಅರಸೀಕೆರೆ ನಗರಸಭೆ ಅಧ್ಯಕ್ಷ ಚುನಾವಣೆ ಮುಂದೂಡಿಕೆ

    ಹಾಸನ: ಹಾಸನ ಮತ್ತು ಅರಸೀಕೆರೆ ಎರಡೂ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಜೆಡಿಎಸ್ ಮತ್ತು ಬಿಜೆಪಿ ನಡುವೆ ಗುದ್ದಾಟಕ್ಕೆ ಕಾರಣವಾಗಿದ್ದು, ಇಂದು ನಿಗದಿಯಾಗಿದ್ದ ಅರಸೀಕೆರೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯನ್ನು ಕೋರಂ ಕೊರತೆಯಿಂದ ಮುಂದೂಡಲಾಗಿದೆ.

    ಹಾಸನ ಮತ್ತು ಅರಸೀಕೆರೆ ಎರಡೂ ನಗರಸಭೆಯ ಅಧ್ಯಕ್ಷ ಸ್ಥಾನ ಎಸ್‍ಟಿಗೆ ಮೀಸಲಾಗಿದ್ದು, ಬಿಜೆಪಿಯಿಂದ ಮಾತ್ರ ಎಸ್‍ಟಿ ಅಭ್ಯರ್ಥಿ ಜಯಗಳಿಸಿದ್ದಾರೆ. ಹೀಗಾಗಿ ಜೆಡಿಎಸ್ ಹೆಚ್ಚು ಸ್ಥಾನ ಗೆದ್ದಿದ್ದರೂ ಎರಡೂ ನಗರಸಭೆಯ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗಲಿದೆ. ಹೀಗಾಗಿ ಮೀಸಲಾತಿ ಕಾನೂನು ಬಾಹಿರ ಎಂದು ಜೆಡಿಎಸ್ ನ್ಯಾಯಾಲಯದ ಮೆಟ್ಟಿಲೇರಿದ್ದು ಚುನಾವಣೆ ನಡೆದರೂ ಮುಂದಿನ ಆದೇಶ ಬರುವವರೆಗೂ ಫಲಿತಾಂಶ ಪ್ರಕಟಿಸದಂತೆ ಕೋರ್ಟ್ ಆದೇಶ ನೀಡಿದೆ.

    ಈ ನಡುವೆ ನಿನ್ನೆ ಹಾಸನ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಿಗದಿಯಾಗಿತ್ತು. ಆದರೆ ಉಪಾಧ್ಯಕ್ಷ ಚುನಾವಣೆ ಬಗ್ಗೆ ನಮಗೆ ಮಾಹಿತಿಯೇ ಇರಲಿಲ್ಲ. ಹೀಗಾಗಿ ನಾವು ನಾಮಪತ್ರ ಸಲ್ಲಿಸಿಲ್ಲ. ಬೇರೆ ದಿನ ಮತ್ತೆ ಉಪಾಧ್ಯಕ್ಷ ಚುನಾವಣೆ ನಡೆಸಬೇಕು ಎಂದು ಜೆಡಿಎಸ್ ಪಟ್ಟು ಹಿಡಿದು ಇಂದು ಹಾಸನ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಆದರೆ ಒಮ್ಮೆ ನಿಗದಿಯಾದ ಚುನಾವಣೆಯನ್ನು ಮತ್ತೊಮ್ಮೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಕಾನೂನು ಹೋರಾಟಕ್ಕೆ ಮುಂದಾಗಿದೆ.

    ಇತ್ತ ಇಂದು ನಡೆಯಬೇಕಿದ್ದ ಅರಸೀಕೆರೆ ನಗರಸಭೆ ಚುನಾವಣೆಯಲ್ಲೂ ಹೈಡ್ರಾಮಾ ನಡೆದಿದ್ದು, ಕೋರಂ ಕೊರತೆಯಿಂದ ಚುನಾವಣೆ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ. ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್ ಬಹುಮತ ಪಡೆದಿದೆ. ಆದರೆ ಮೀಸಲಾತಿಯಿಂದಾಗಿ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗುವುದನ್ನು ವಿರೋಧಿಸಿ ಜೆಡಿಎಸ್ ಸದಸ್ಯರು ಇಂದು ಅರಸೀಕೆರೆ ನಗರಸಭೆ ಚುನಾವಣೆಗೆ ಸಾಮೂಹಿಕ ಗೈರಾಗಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಅರಸೀಕೆರೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

  • ಚುನಾವಣೆ ನಡೆದ್ರೂ ಫಲಿತಾಂಶ ಪ್ರಕಟವಾಗಲ್ಲ: ಶಾಸಕ ಶಿವಲಿಂಗೇಗೌಡ

    ಚುನಾವಣೆ ನಡೆದ್ರೂ ಫಲಿತಾಂಶ ಪ್ರಕಟವಾಗಲ್ಲ: ಶಾಸಕ ಶಿವಲಿಂಗೇಗೌಡ

    – ಹಾಸನ, ಅರಸೀಕೆರೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ

    ಹಾಸನ: ಹಾಸನ ಮತ್ತು ಅರಸೀಕೆರೆ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದರೂ ಕೂಡ ಫಲಿತಾಂಶ ಪ್ರಕಟಿಸದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ ಎಂದು ಶಾಸಕ ಶಿವಲಿಂಗೇಗೌಡ ಮಾಹಿತಿ ನೀಡಿದ್ದಾರೆ.

    ಹಾಸನ, ಅರಸೀಕೆರೆ ನಗರಸಭೆ ಎರಡರ ಅಧ್ಯಕ್ಷ ಸ್ಥಾನ ಎಸ್‍ಟಿಗೆ ಮೀಸಲಾಗಿತ್ತು. ಎಸ್‍ಟಿ ಅಭ್ಯರ್ಥಿಗಳು ಬಿಜೆಪಿಯಿಂದ ಮಾತ್ರ ಜಯಗಳಿಸಿದ್ದರು. ಹೀಗಾಗಿ ಜೆಡಿಎಸ್ ಹೆಚ್ಚಿನ ಸ್ಥಾನ ಗೆದ್ದಿದ್ದರೂ, ಎರಡೂ ನಗರಸಭೆಯ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲೋಗೋದು ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಮೀಸಲಾತಿ ಕಾನೂನು ಬಾಹಿರ ಎಂದು ಜೆಡಿಎಸ್ ಮುಖಂಡರು ಈ ಹಿಂದೆಯೇ ಹೈಕೋರ್ಟ್‍ನಿಂದ ತಡೆಯಾಜ್ಞೆ ತಂದಿದ್ದರು.

    ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದ ಪರಿಣಾಮ ಗುರುವಾರ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಿಗದಿಯಾಗಿತ್ತು. ಪರಿಣಾಮ ಜೆಡಿಎಸ್ ಮುಖಂಡರು ಈ ಬಗ್ಗೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇಂದು ಸುಪ್ರೀಂಕೋರ್ಟ್ ನಿಂದ ಮರು ವಿಚಾರಣೆಗೆ ಆದೇಶ ನೀಡಲಾಗಿದೆ. ಗುರುವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಡೆಸಬಹುದು. ಆದರೆ ಯಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎಂದು ಫಲಿತಾಂಶ ಪ್ರಕಟಿಸುವಂತಿಲ್ಲ. ಚುನಾವಣೆ ನಡೆಸಿದ ಬಳಿಕ ಇಡೀ ಕಡತವನ್ನ ಹೈಕೋರ್ಟ್ ಗೆ ಸಲ್ಲಿಸಬೇಕು. ನಂತರ ಮತ್ತೆ ಹೈಕೋರ್ಟ್ ನಲ್ಲಿ ಮರು ವಿಚಾರಣೆ ನಡೆಸಿ ಆದೇಶ ಪ್ರಕಟಿಸುವಂತೆ ತಿಳಿಸಿದೆ.