Tag: Araseikere

  • ಅರಸೀಕೆರೆಯಲ್ಲಿ ಮತ್ತೆ ಜೆಡಿಎಸ್ ಗೆಲ್ಲುವವರೆಗೂ ನಾನು ನಿದ್ರೆ ಮಾಡಲ್ಲ – ಪ್ರಜ್ವಲ್ ಶಪಥ

    ಅರಸೀಕೆರೆಯಲ್ಲಿ ಮತ್ತೆ ಜೆಡಿಎಸ್ ಗೆಲ್ಲುವವರೆಗೂ ನಾನು ನಿದ್ರೆ ಮಾಡಲ್ಲ – ಪ್ರಜ್ವಲ್ ಶಪಥ

    ಹಾಸನ: ಅರಸೀಕೆರೆ (Araseikere) ಕ್ಷೇತ್ರದಲ್ಲಿ ಏನಾಗುತ್ತೊ ನೋಡೇ ಬಿಡೋಣ, ನಾವು ಸುಮ್ಮನೆ ಕೂರೋದಿಲ್ಲ. ಅರಸೀಕೆರೆಯಲ್ಲಿ ಮತ್ತೆ ಜೆಡಿಎಸ್ (JDS) ಗೆಲ್ಲುವವರೆಗೂ ನಾನು ನಿದ್ರೆ ಮಾಡಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಗುಡುಗಿದ್ದಾರೆ.

    ಅರಸೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ (HD Kumaraswamy) ಅವರ ಪಂಚರತ್ನ ಯಾತ್ರೆ ಬಂದಾಗ ನಾವು ಹೆಚ್ಚಿನ ಜನರನ್ನು ಸೇರಿಸಬೇಕು. ನಾವು ಟೊಂಕಕಟ್ಟಿ ನಿಂತು ಲಕ್ಷ ಲಕ್ಷ ಜನರನ್ನು ಸೇರಿಸಿ ಕೆಲಸ ಮಾಡಬೇಕು. ಫೆಬ್ರವರಿ 12 ಕ್ಕೆ ಅರಸೀಕೆರೆಯಲ್ಲಿ ಕಾರ್ಯಕರ್ತರ ಸ್ವಾಭಿಮಾನದ ಸಭೆ ನಡೆಯಬೇಕು ಎಂದು ಕರೆ ನೀಡಿದರು.

    ಕನಿಷ್ಠ 30 ಸಾವಿರ ಜನ ಸೇರಬೇಕು. ನಮ್ಮ ಕಾರ್ಯಕರ್ತರಿಗೆ ಯಾವ ರೀತಿ ಆಮಿಷ, ಒತ್ತಡ ಹೇರಿ ಹೆದರಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ಯಾರೂ ಧೈರ್ಯಗೆಡುವ ಅಗತ್ಯ ಇಲ್ಲ. ಅರಸೀಕೆರೆಯಲ್ಲಿ ಮತ್ತೆ ಜೆಡಿಎಸ್ ಶಾಸಕರು ಗೆಲ್ಲುವವರೆಗೂ ನಾನು ನಿದ್ರೆ ಮಾಡಲ್ಲ ಎಂದು ಶಪಥ ಮಾಡಿದರು.

    ನಾನು ಸಂಸದನಾಗಿ ಕ್ಷೇತ್ರದ ಎಲ್ಲಾ ಹಳ್ಳಿಗಳಿಗೆ ಹೋಗಲು ಸಾಧ್ಯವಿಲ್ಲ. ಹಳ್ಳಿಗಳಿಗೆ ಬರಲು ನನಗೆ ಮುಜುಗರ ಇಲ್ಲ, ಖಂಡಿತಾ ಬರಬೇಕು ಎನ್ನುವ ಆಸೆ ಇದೆ. ನಾನು 28ನೇ ವಯಸ್ಸಿಗೇ ಸಂಸದನಾದೆ. ದೇವೇಗೌಡರು ಅವರ ಸ್ಥಾನ ನನಗೆ ಬಿಟ್ಟು ಕೊಟ್ಟು ಅವಕಾಶ ನೀಡಿದರು ಎಂದರು.

    ಶಿವಲಿಂಗೇಗೌಡರ (Shivalinge Gowda) ಬಳಿ ಮಾತನಾಡಿ ತಪ್ಪು ನಿರ್ಧಾರ ಮಾಡಬೇಡಿ, ಯಾರೋ ನಾಲ್ಕು ಜನ ಹೇಳಿದ ಮಾತು ಕೇಳಬೇಡಿ ಎಂದಿದ್ದೆ. ಪಾಪ ಅವರಿಗೂ ಗೊಂದಲ ಇದೆ. ನೀವು ವಾಪಸ್ ಬರುವುದಾದರೆ ಖಂಡಿತಾ ನಾವು ನಿಮ್ಮ ಜೊತೆ ಇದ್ದೀವಿ. ದೇಹ ಮಾತ್ರ ಬರೋದಲ್ಲ, ಮಾನಸಿಕವಾಗಿ ಬರಬೇಕು. ಅವರು ಜಾತಿವಾರು ಮತ ಆಗುತ್ತದೆ, ಅಶೋಕ್ ಆ ಕಡೆ ಇದ್ದಾರೆ ಎಂದರು. ಅವರ ಮಾತಿನಂತೆ ಅಶೋಕ್ ಅವರನ್ನೇ ಪಕ್ಷಕ್ಕೆ ಸೇರಿಸಿಕೊಂಡೆವು. ನಾವು ಪಕ್ಷ ಉಳಿಸಲು ಕೆಲಸ ಮಾಡಿದ್ದೇವೆ. ಅದನ್ನು ಬಿಟ್ಟು ಶಿವಲಿಂಗೇಗೌಡರ ವಿರುದ್ಧ ಏನೂ ಮಾಡಿಲ್ಲ ಎಂದರು. ಇದನ್ನೂ ಓದಿ: ಮೊದಲ ಬಾರಿ ರಾಜ್ಯಸಭಾ ಕಲಾಪದ ಅಧ್ಯಕ್ಷತೆ ವಹಿಸಿದ ಪಿ.ಟಿ ಉಷಾ

    ಶಿವಲಿಂಗೇಗೌಡರಿಗೆ ಈಗಲೂ ಮನವಿ ಮಾಡುತ್ತೇವೆ. ನಮ್ಮ ಕಾರ್ಯಕರ್ತರು ಈಗಲೂ ಗಟ್ಟಿಯಾಗಿ ಇದ್ದಾರೆ, ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇವೆ. ಅರಸೀಕೆರೆಯಲ್ಲಿ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಶಿವಲಿಂಗೇಗೌಡರು ಕೆಲವೇ ಮತಗಳ ಅಂತರದಲ್ಲಿ ಸೋತಾಗ ರೇವಣ್ಣ ಅವರು ಅವರ ಬೆನ್ನಿಗೆ ನಿಂತರು. ಅವರು ಹೇಳಿದ ಎಲ್ಲಾ ಕೆಲಸ ಮಾಡಿಕೊಟ್ಟರು. ಹೇಳಿದವರಿಗೆ ಕೆಲಸ ಕೊಡಿಸಿದರು. ನಾವು ಸುಮ್ಮನೆ ಕೂರಲ್ಲ, ಖಂಡಿತಾ ಮನೆ ಮನೆಗೆ ಹೋಗುತ್ತೇವೆ. ವಾರದಲ್ಲಿ 2 ದಿನ ಕ್ಷೇತ್ರಕ್ಕೆ ಮೀಸಲು ಇಡುತ್ತೇನೆ ಎಂದು ಪ್ರಜ್ವಲ್ ರೇವಣ್ಣ ತಿಳಿಸಿದರು. ಇದನ್ನೂ ಓದಿ: ಆಪರೇಷನ್ ನ್ಯೂ ಫೇಸ್, ಕರಾವಳಿ ಫೋಕಸ್ – ಏನಿದು ಶಾ ತಂತ್ರ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭೂಮಿ ಪೂಜೆ ವೇಳೆ ಶಾಸಕರ ಎದುರೇ JDS, BJP ಮಾರಾಮಾರಿ – ಮುರಿತು ಕಾರ್ಯಕರ್ತನ ಕೈ

    ಭೂಮಿ ಪೂಜೆ ವೇಳೆ ಶಾಸಕರ ಎದುರೇ JDS, BJP ಮಾರಾಮಾರಿ – ಮುರಿತು ಕಾರ್ಯಕರ್ತನ ಕೈ

    ಹಾಸನ: ಭೂಮಿ ಪೂಜೆ ಕಾರ್ಯಕ್ರಮದ ವೇಳೆ ಶಾಸಕರೆದುರೇ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಬಿಜೆಪಿ ಕಾರ್ಯಕರ್ತನ ಕೈಮುರಿದಿರುವ ಘಟನೆ ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ ಡಿಎಂ ಕುರ್ಕೆ ಗ್ರಾಮದಲ್ಲಿ ನಡೆದಿದೆ.

    ಹೇಮಾವತಿ ಪೈಪ್ ಲೈನ್ ಕಾಮಗಾರಿಗೆ ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ ಭೂಮಿ ಪೂಜೆ ಕಾರ್ಯಕ್ರಮ ಆಯೋಜಿಸಿದ್ದರು. ಶಾಸಕರು ಭೂಮಿ ಪೂಜೆ ಆರಂಭಿಸುತ್ತಿದ್ದಂತೆ ಜೆಡಿಎಸ್ ಮುಖಂಡರು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಸ್ಥಳದಲ್ಲಿದ್ದ ಕೆಲ ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ. ಈ ವೇಳೆ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ವಿಕೋಪಕ್ಕೆ ತಿರುಗಿ ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಶಾಸಕರು ಸಮಾಧಾನ ಮಾಡಲು ಹರಸಾಹಸಪಟ್ಟರು ಸಾಧ್ಯವಾಗಿಲ್ಲ.

    ಜೆಡಿಎಸ್‍ನವರು ಬಿಜೆಪಿಯವರನ್ನು, ಬಿಜೆಪಿಯವರು ಜೆಡಿಎಸ್ ಕಾರ್ಯಕರ್ತರನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಗಲಾಟೆಯಲ್ಲಿ ಬಿಜೆಪಿ ಕಾರ್ಯಕರ್ತ ರಾಂಪುರ ಗ್ರಾಮದ ಸುರೇಶ್ ಬಲಗೈ ಮುರಿತವಾಗಿದೆ. ಗಾಯಾಳುವಿಗೆ ಅರಸೀಕೆರೆ ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಗುರುದ್ವಾರದ ಮಾಜಿ ಗ್ರಂಥಿ ಮೇಲೆ ಹಲ್ಲೆಗೈದು, ಕೂದಲು ಕಟ್ ಮಾಡಿದ ಕಿಡಿಗೇಡಿಗಳು 

    ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಪಕ್ಷದ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ. ನಿನ್ನೆಯಷ್ಟೇ ಏಳು ಮಂದಿ ನಗರಸಭೆ ಸದಸ್ಯರ ಅನರ್ಹತೆ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಅದರಲ್ಲಿ ಕೆಲ ಸದಸ್ಯರು ಡಿ.ಎಂ.ಕುರ್ಕೆ ಗ್ರಾಮದಲ್ಲಿ ಆಯೋಜಿಸಿದ್ದ ಭೂಮಿ ಪೂಜೆ ಕಾರ್ಯಕ್ರಮದ ವೇಳೆ ಸ್ಥಳದಲ್ಲಿವ ವೀಡಿಯೋ ತುಣುಕುಗಳಲ್ಲಿ ಚಿತ್ರಿಕರಣವಾಗಿದೆ. ಅವರ ಕುಮ್ಮಕ್ಕಿನಿಂದಲೇ ಸುಖಾಸುಮ್ಮನೆ ತೆಗೆದು ಗಲಾಟೆ ಮಾಡಿಸಿದ್ದಾರೆ ಎಂದು ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.

    ಹಾಸನ ಜಿಲ್ಲೆ, ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚಿಗೆ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತ ಇವೆ. ಸತತ ಮೂರು ಭಾರೀ ಶಾಸಕರಾಗಿ ಆಯ್ಕೆಯಾಗಿರುವ ಕೆ.ಎಂ.ಶಿವಲಿಂಗೇಗೌಡ ತಮ್ಮ ಅಭಿವೃದ್ಧಿ ಕಾರ್ಯ, ಹಳ್ಳಿ ಸೊಗಡಿನ ಮಾತಿನ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಇದೇ ಕ್ಷೇತ್ರಕ್ಕೆ ಕಣ್ಣಿಟ್ಟಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು, ಅರಸೀಕೆರೆಯಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದನ್ನೂ ಓದಿ:  ಯಡಿಯೂರಪ್ಪಗೆ ಬಹಳ ವಯಸ್ಸೇನು ಆಗಿಲ್ಲ – ದೈಹಿಕ, ಮಾನಸಿಕವಾಗಿ ಸದೃಢರಾಗಿದ್ದಾರೆ: ಸುಧಾಕರ್

    ಎನ್.ಆರ್.ಸಂತೋಷ್ ಅವರು ಕ್ಷೇತ್ರದಲ್ಲಿ ಕಾರ್ಯಕ್ರಮಗಳ ಆಯೋಜನೆ, ಸಂಘಟನೆಗೆ ಓಡಾಡ ನಡೆಸಲು ಆರಂಭಿಸಿದ ಮೇಲೆ ಅರಸೀಕೆರೆ ತಾಲೂಕಿನಲ್ಲಿ ರಾಜಕೀಯ ಘರ್ಷಣೆಗಳು ಹೆಚ್ಚಾಗಿವೆ. ಇದು ಹಾಲಿ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ನುಂಗಲಾರದ ತುತ್ತಾಗಿದೆ. ಈಗಾಗಲೇ ಆರಕ್ಕೂ ಹೆಚ್ಚು ಗಲಾಟೆಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಅರಸೀಕೆರೆಯ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]