Tag: Aranyak

  • ಭಾರತದಲ್ಲಿ ಆರಂಭ, ಅಮೆರಿಕದಲ್ಲಿ ಕೊನೆ –  ಸ್ಪೆಷಲ್ ಆಗಿ ಹುಟ್ಟುಹಬ್ಬ ಆಚರಿಸಿದ ರಮಿಕಾ ಸೇನ್‍

    ಭಾರತದಲ್ಲಿ ಆರಂಭ, ಅಮೆರಿಕದಲ್ಲಿ ಕೊನೆ – ಸ್ಪೆಷಲ್ ಆಗಿ ಹುಟ್ಟುಹಬ್ಬ ಆಚರಿಸಿದ ರಮಿಕಾ ಸೇನ್‍

    ಮುಂಬೈ: ಕೆಜಿಎಫ್:ಚಾಪ್ಟರ್ 2 ಸಿನಿಮಾದಲ್ಲಿ ನಟಿಸಿದ ರವೀನಾ ಟಂಡನ್ ತಮ್ಮ 47ನೇ ಹುಟ್ಟುಹಬ್ಬದ ಆಚರಣೆಯನ್ನು ಭಾರತದಲ್ಲಿ ಪ್ರಾರಂಭಿಸಿ ಅಮೆರಿಕದ ಲಾಸ್ ಏಂಜಲೀಸ್‍ನಲ್ಲಿ ಕೊನೆಗೊಳಿಸಿದ್ದಾರೆ.

    ನಿನ್ನೆ ರವೀನಾ 47ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಭಾರತದಲ್ಲಿ ತಮ್ಮ ಮನೆಯಲ್ಲಿ ಮಧ್ಯರಾತ್ರಿ ಕೇಕ್ ಕತ್ತರಿಸುವುದರೊಂದಿಗೆ ಆರಂಭಿಸಿದ ಇವರು, ಮರುದಿನ ಸಂಜೆ ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ, ಯುಎಸ್ ನಲ್ಲಿ ಮುಕ್ತಾಯಗೊಳಿಸಿದ್ದಾರೆ. ಈ ವೇಳೆ ರುಚಿಕರವಾದ ಭಿನ್ನ ಆಹಾರವನ್ನು ಸೇವಿಸಿರುವ ಈ ನಟಿ ತಮ್ಮ ಹುಟ್ಟುಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಿಕೊಂಡಿದ್ದಾರೆ. ಇದನ್ನೂ ಓದಿ:  ನವೆಂಬರ್‌ನಲ್ಲಿ ತೆರೆಗೆ ಅಪ್ಪಳಿಸಲಿದೆ ‘ಟಾಮ್ ಅಂಡ್ ಜೆರ್ರಿ’

    ರವೀನಾ ತಮ್ಮ ಹುಟ್ಟುಹಬ್ಬದ ಆಚರಣೆಯ ಫೋಟೋ ಮತ್ತು ವೀಡಿಯೋಗಳನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಶುಭಕೋರಿದ, ಆಶೀರ್ವಾದ ಮಾಡಿದ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇವರ ಹುಟ್ಟುಹಬ್ಬಕ್ಕೆ, ಶಿಲ್ಪಾ ಶೆಟ್ಟಿ ಮತ್ತು ಜೂಹಿ ಚಾವ್ಲಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ವಿಶೇಷ ಪೋಸ್ಟ್ ಹಾಕಿ ಶುಭ ಹಾರೈಸಿದ್ದಾರೆ.

    ರವೀನಾ ಅವರ ಹಂಚಿಕೊಂಡಿದ್ದ ಫೋಟೋಗಳನ್ನು ನೋಡಿದರೆ, ಜನ್ಮದಿನವನ್ನು ವಿಶೇಷವಾಗಿ, ಬಹಳ ಸಂತೋಷದಿಂದ ಕಳೆದಿದ್ದಾರೆ ಎಂದು ಅವರು ಶೇರ್ ಮಾಡಿದ ಫೋಟೋ ಮತ್ತು ವೀಡಿಯೋ ನೋಡಿದರೆ ತಿಳಿಯುತ್ತದೆ. ರವೀನಾ ಭಾರತ ಮತ್ತು ಲಾಸ್ ಏಂಜಲೀಸ್‍ನಲ್ಲಿ ತನ್ನ ಪ್ರೀತಿಪಾತ್ರರ ಜೊತೆ ದಿನ ಕಳೆದಿದ್ದಾರೆ.

    ನನ್ನ ಮಕ್ಕಳು 16 ವರ್ಷ ಎಂದು ಭಾವಿಸುತ್ತಾರೆ!

    ರವೀನಾ ತಮ್ಮ ಹುಟ್ಟುಹಬ್ಬದ ಆಚರಣೆಯ ಫೋಟೋಗಳನ್ನು ಹಂಚಿಕೊಂಡಿದ್ದು, ಎ ಹ್ಯಾಪ್ ಹ್ಯಾಪ್ ಹ್ಯಾಪಿಪಿ ಜನ್ಮದಿನದ ಡಂಪ್, ಮಧ್ಯರಾತ್ರಿ 12 ಗಂಟೆಯಿಂದ ಕೇಕ್ ಹಾಸಿಗೆಯಲ್ಲಿ ಮುಂದಿನ ರಾತ್ರಿ 12 ರವರೆಗೆ, ಭಾರತದಲ್ಲಿ ಈಗ ನನ್ನ ಸಮಯ! ನನ್ನ ಮಕ್ಕಳು ನನಗೆ ಇನ್ನೂ 16 ವರ್ಷ ಎಂದು ಭಾವಿಸುತ್ತಾರೆ! ನಿಮ್ಮ ಶುಭಾಶಯಗಳು ಮತ್ತು ಆಶೀರ್ವಾದಕ್ಕೆ ಎಲ್ಲರಿಗೂ ಧನ್ಯವಾದಗಳು! ನಿಮ್ಮೆಲ್ಲರಿಗೂ ವೈಯಕ್ತಿಕವಾಗಿ ಧನ್ಯವಾದ ಹೇಳಲು ಇಷ್ಟಪಡುತ್ತೇನೆ, ಆದರೆ ಕೊರೊನಾ ಕಾರಣ ಈ ಸಮಯದಲ್ಲಿ ಆಗುವುದಿಲ್ಲ. ಆದರೆ ನಿಮ್ಮೆಲ್ಲರ ಆಶೀರ್ವಾದಗಳೇ ನನ್ನ ಜೀವನವನ್ನು ಅದ್ಭುತವಾಗಿಸಿದೆ. ಎಂದೆಂದಿಗೂ ಕೃತಜ್ಞರಾಗಿರುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ರಿಲ್ಯಾಕ್ಸ್ ಮೂಡ್​ನಲ್ಲಿರುವ ಹೇಮ ಮಾಲಿನಿ, ಧರ್ಮೇಂದ್ರ

    ಓಟಿಟಿಯಲ್ಲಿ ‘ಅರಣ್ಯಕ್’ ಸರಣಿಯಲ್ಲಿ ರವೀನಾ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸರಣಿಯಲ್ಲಿ ಇವರು ಯುವ ಪ್ರವಾಸಿಗರು ಕಣ್ಮರೆಯದಾಗ ಅವರನ್ನು ತನಿಖೆ ಮಾಡುವ ಪಾತ್ರವನ್ನು ಮಾಡುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ರವೀನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರವನ್ನು 2022ರ ಏಪ್ರಿಲ್ 14 ರಂದು ಬಹುಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್, ಅನಂತ್ ನಾಗ್ ಮತ್ತು ಅಚ್ಯುತ್ ಕುಮಾರ್ ನಟಿಸಿದ್ದಾರೆ.