Tag: Araga Jnanendra

  • ತುಳು ಸಂಸ್ಕೃತಿ, ದೈವಗಳನ್ನು ಟೀಕಿಸಿಲ್ಲ: ಆರಗ ಜ್ಞಾನೇಂದ್ರ ಸ್ಪಷ್ಟನೆ

    ತುಳು ಸಂಸ್ಕೃತಿ, ದೈವಗಳನ್ನು ಟೀಕಿಸಿಲ್ಲ: ಆರಗ ಜ್ಞಾನೇಂದ್ರ ಸ್ಪಷ್ಟನೆ

    ಬೆಂಗಳೂರು: ತುಳು ಸಂಸ್ಕೃತಿ (Tulu Culture), ದೈವಗಳನ್ನು (Daiva) ಟೀಕಿಸಿಲ್ಲ. ಬದಲಾಗಿ ಜನರ ವಿಶ್ವಾಸ ಕಳೆದುಕೊಂಡಿರುವ ತೀರ್ಥಹಳ್ಳಿಯ (Thirthahalli) ಸ್ಥಳೀಯ ಕಾಂಗ್ರೆಸ್ (Congress) ನಾಯಕರು ರಾಜಕೀಯ ದುರುದ್ದೇಶದಿಂದ ಶಿವದೂತೆ ಗುಳಿಗೆ ನಾಟಕ ಪ್ರದರ್ಶನ ಮಾಡಿಸುತ್ತಿದ್ದಾರೆ ಎಂದು ಹೇಳಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra))ಸ್ಪಷ್ಟಪಡಿಸಿದ್ದಾರೆ.

    ನನ್ನ ಹೇಳಿಕೆಯಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹತಾಶ ಪ್ರಯತ್ನದ ಬಗ್ಗೆ ಪ್ರಸ್ತಾಪಿಸಿದ್ದೇನೆ. ನಾಟಕದ ವಿರುದ್ಧ ಅಥವಾ ದೈವದ ವಿರುದ್ಧ ಮಾತನಾಡಿಲ್ಲ. ತುಳುನಾಡಿನಲ್ಲಿ ಶ್ರದ್ಧಾ ಭಕ್ತಿಯಿಂದ ಆರಾಧಿಸುವ ಗುಳಿಗ ದೈವದ ಕುರಿತು ರಚಿಸಿರುವ ಪೌರಾಣಿಕ ನಾಟಕದ ಬಗ್ಗೆ ಮೆಚ್ಚುಗೆ ಇದೆ. ಹಾಗೂ ದೈವದ ಬಗ್ಗೆ ಅಪಾರ ಭಕ್ತಿ ಗೌರವವನ್ನು ಹೊಂದಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಸಚಿವ ಹಾಲಪ್ಪ ಆಚಾರ್ ಸೀರೆ ಹಂಚಿಕೆ – ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್

    ರಂಗಭೂಮಿಯ ಮೇಲೆ, ಆಧುನಿಕ ತಂತ್ರಜ್ಞಾನ ವನ್ನು ಬಳಸಿಕೊಂಡು, ಯಶಸ್ವಿ ಪ್ರದರ್ಶನವನ್ನು ಕಲಾ ರಸಿಕರಿಗೆ ಪರಿಚಯಿಸುತ್ತಿರುವ ಕಲಾವಿದರು ಹಾಗೂ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‍ಬೈಲ್ ಅವರ ಸೃಜನಶೀಲತೆ ಬಗ್ಗೆ ಅಭಿಮಾನ ಇದೆ ಎಂದು ತಿಳಿಸಿದ್ದಾರೆ.

    ನನ್ನ ಮಾತುಗಳನ್ನು ಅಪಾರ್ಥ ಬರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ. ಅವರ ಉದ್ದೇಶ ಈಡೇರುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನನ್ನನ್ನು ಕ್ಷಮಿಸಿ ಬಿಡಿ ಯೋಗಿಜಿ ಫಲಕದೊಂದಿಗೆ ಠಾಣೆಗೆ ಶರಣಾದ ಬೈಕ್ ಕಳ್ಳ

  • ಗುಳಿಗನ ನಿಂದಿಸಿದ ಆರಗ- ಬಿಜೆಪಿಯ ಧರ್ಮ ಪ್ರೇಮದ ಬಣ್ಣ ಕಳಚುತ್ತಿದೆ ಎಂದ ದೈವಾರಾಧಕರು

    ಗುಳಿಗನ ನಿಂದಿಸಿದ ಆರಗ- ಬಿಜೆಪಿಯ ಧರ್ಮ ಪ್ರೇಮದ ಬಣ್ಣ ಕಳಚುತ್ತಿದೆ ಎಂದ ದೈವಾರಾಧಕರು

    ಮಂಗಳೂರು: ಗಳಿಗನ ನಿಂದಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ವಿರುದ್ಧ ಇದೀಗ ಕರಾವಳಿ ಜನ ಸಿಡಿದೆದ್ದಿದ್ದಾರೆ. ಬಿಜೆಪಿ (BJP) ಯ ಧರ್ಮ ಪ್ರೇಮದ ಬಣ್ಣ ಕಳಚುತ್ತಿದೆ ಎಂದು ದೈವಾರಾಧಕರು ಆಕ್ರೋಶ ಹೊರಹಾಕುತ್ತಿದ್ದಾರೆ.

    ಮಾರ್ಚ್ 15 ರಂದು ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ತುಳು ನಾಟಕ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ವಿಜಯ ಕುಮಾರ್ ಕೊಡಿಯಾಲಬೈಲ್ (Vijaykumar Kodialbail) ರಚಿಸಿ ನಿರ್ದೇಶಿಸಿದ ‘ಶಿವದೂತೆ ಗುಳಿಗ’ ನಾಟಕ ಪ್ರದರ್ಶನ ಕಂಡಿದೆ. ಈ ನಾಟಕದ ಸಂಘಟಕರು ಮೊದಲೇ ಹತ್ತು ಸಾವಿರಕ್ಕೂ ಹೆಚ್ಚು ಜನ ಸೇರಲಿದ್ದಾರೆ ಎಂದು ತಿಳಿಸಿದ್ದು ಅದರಂತೆ ಜನ ಸೇರಿದ್ದರು. ಇದೇ ದಿನ ಇಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ, ಸಮಾವೇಶ ನಡೆದಿದ್ದು ಇದರಲ್ಲಿ ಭಾಗವಹಿಸಿದ ಸಿ.ಟಿ ರವಿ (CT Ravi) ಮತ್ತು ಈಶ್ವರಪ್ಪ (KS Eshwarappa) ತಮ್ಮ ಎಂದಿನ ಧಾತಿಯಲ್ಲಿ ಭಾಷಣ ಮಾಡಿ ಹೋಗಿದ್ದಾರೆ. ಇದನ್ನೂ ಓದಿ: ಟೋಲ್ ತಕರಾರು ಜನಸಾಮಾನ್ಯರದ್ದಲ್ಲ, ಅದು ಡಿಕೆಶಿ ರಾಜಕಾರಣ: ಬೊಮ್ಮಾಯಿ

    ಮರುದಿನ ಬಿಜೆಪಿಯಿಂದ ನಡೆದ ರೈತ ಸಮಾವೇಶದಲ್ಲಿ ಭಾಗವಹಿಸಿದ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್ ಸಂಘಟಿಸಿದ ನಾಟಕಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಜನರು ಸೇರಿರುವುದು ತಿಳಿಯುತ್ತಲೇ ಸ್ವಲ್ಪ ವಿಚಲಿತರಾಗಿದ್ದಾರೆ. ಮಾತ್ರವಲ್ಲ ಅಸಹನೆಯಿಂದ ಸಭೆಯಲ್ಲಿ ತುಳುನಾಡಿನ ಜನರ ಆರಾಧ್ಯ ದೈವ ಗುಳಿಗನ ಬಗ್ಗೆ ಅಪಹಾಸ್ಯ ಮಾಡಿ ಮಾತನಾಡಿದ್ದು ದೈವಾರಾಧಕರು ಮತ್ತು ನಾಟಕ ಪ್ರಿಯರು ಆಕ್ರೋಶಗೊಳ್ಳುವಂತೆ ಮಾಡಿದೆ.

    ಆರಗ ಹೇಳಿದ್ದೇನು..?: ಯಾವುದೋ ಗುಳಿಗೆ ಕೊಡ್ತಾರಂತೆ, ಜಪಾಲ್ ಗುಳಿಗೆ ಕೊಟ್ರು ಕೊಡಬಹುದು. ಹೊಸ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ನಿಂದಿಸಿರುವುದು ತೀರ್ಥಹಳ್ಳಿಯಲ್ಲಿ ನೆಲೆಸಿರುವ ದ.ಕ ಮೂಲದ ಜನರನ್ನು ಕೆರಳಿಸಿದೆ. ಗುಳಿಗ ದ.ಕ ಜಿಲ್ಲೆಯ ಜನರ ಆರಾಧ್ಯ ದೈವ. ಜನ ಶ್ರದ್ಧಾ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಆ ದೈವದ ಬಗ್ಗೆ ವ್ಯಂಗ್ಯವಾಗಿ, ಅಸಹನೆಯಿಂದ, ಅಪಹಾಸ್ಯ ಮಾಡಿ ಗೃಹ ಸಚಿವರು ಮಾತನಾಡಿರುವುದು ಸರಿಯಲ್ಲ ಜನ ರೊಚ್ಚಿಗೆದ್ದಿದ್ದಾರೆ.

  • ಸದ್ಯದಲ್ಲೇ ಮಾಡಾಳ್ ವಿರೂಪಾಕ್ಷಪ್ಪ ಬಂಧನ ಆಗಲಿದೆ: ಆರಗ ಜ್ಞಾನೇಂದ್ರ

    ಸದ್ಯದಲ್ಲೇ ಮಾಡಾಳ್ ವಿರೂಪಾಕ್ಷಪ್ಪ ಬಂಧನ ಆಗಲಿದೆ: ಆರಗ ಜ್ಞಾನೇಂದ್ರ

    ಶಿವಮೊಗ್ಗ : ಸದ್ಯದಲ್ಲೇ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಬಂಧನ ಆಗಲಿದ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತಿಳಿಸಿದರು.

    ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಮಾಧ್ಯಮದವರ ಜೊತೆ ಪ್ರತಿಕ್ರಿಯಿಸಿದ ಅವರು, ನಮ್ಮ ಪೊಲೀಸ್ ಇಲಾಖೆಯ ಒಳ್ಳೆಯ ಅಧಿಕಾರಿಗಳನ್ನು ಲೋಕಾಯುಕ್ತಕ್ಕೆ ನೀಡಿದ್ದೇವೆ. ನಾವು ಲೋಕಾಯುಕ್ತಕ್ಕೆ ಹಸ್ತಕ್ಷೇಪ ಮಾಡಲಿಲ್ಲ. ಈಗಾಗಿಯೇ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ದಾಳಿಗೊಳಗಾಗಿ ಬಂಧನಕ್ಕೊಳಪಟ್ಟರು. ಸದ್ಯದಲ್ಲಿಯೇ ವಿರೂಪಾಕ್ಷಪ್ಪ ಬಂಧನ ಆಗುತ್ತದೆ. ಸರ್ಕಾರ ಹಸ್ತಕ್ಷೇಪ ಮಾಡಿದ್ದರೇ ಅವರ ಮಗನ ಬಂಧನ ಆಗುತ್ತಿರಲಿಲ್ಲ. ಅಪ್ಪ ಇರಲಿ, ಮಗ ಇರಲಿ, ಯಾರೇ ಇದ್ದರೂ ತಪ್ಪು ಮಾಡಿದ್ದರೇ ಶಿಕ್ಷೆ ಆಗಲಿ. ನಾವು ಭ್ರಷ್ಟಾಚಾರ ಮುಕ್ತವಾಗಿದ್ದೇವೆ. ಈಗಿರುವಾಗ ಕಾಂಗ್ರೆಸ್‌ನವರು ಯಾರ ವಿರುದ್ಧ ಬಂದ್ ಮಾಡುತ್ತಾರೆ ಎಂದು ಪ್ರಶ್ನಿಸಿದರು.

    ಮಾ.9 ರಂದು ಕಾಂಗ್ರೆಸ್ ವತಿಯಿಂದ ರಾಜ್ಯ ಬಂದ್ ಗೆ ಕರೆ ನೀಡಿರುವುದು ಹಾಸ್ಯಾಸ್ಪದ. ಯಾರು ಭ್ರಷ್ಟಾಚಾರದ ತಾಯಿ ಎನಿಸಿಕೊಂಡಿದ್ದರೋ ಅವರೇ ಬಂದ್‌ಗೆ ಕರೆ ಕೊಟ್ಟಿದ್ದಾರೆ. ಅವರ ಕೇಂದ್ರದ ನಾಯಕರು, ರಾಜ್ಯದ ನಾಯಕರು ಭ್ರಷ್ಟಾಚಾರವೆಸಗಿ ಬಹಳಷ್ಟು ದಿನ ಜೈಲಿನಲ್ಲಿ ಇದ್ದರು. ಈಗ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಅಂತಹವರು ಇವತ್ತು ಭ್ರಷ್ಟಾಚಾರದ ವಿರುದ್ದ ಬಂದ್‌ಗೆ ಕರೆ ನೀಡುತ್ತಾರೆ. ನನಗೆ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಮೆಂಟಲ್ ಕೇಸ್ ಬಗ್ಗೆ ನಮ್ಮನ್ನು ಕೇಳಬೇಡಿ: ರಮೇಶ್ ಜಾರಕಿಹೊಳಿ‌ಗೆ ಡಿಕೆಶಿ ತಿರುಗೇಟು

    ನಮ್ಮ ಸರ್ಕಾರ ಭ್ರಷ್ಟಾಚಾರದ ಪರವಾಗಿರದೇ, ಭ್ರಷ್ಟಾಚಾರದ ವಿರುದ್ಧವಾಗಿದೆ. ಯಾರೇ ಭ್ರಷ್ಟಾಚಾರದಲ್ಲಿ ಭಾಗಿಯಾದರೂ ಅವರ ವಿರುದ್ದ ಕ್ರಮ ಕೈಗೊಳ್ಳದೇ ಬಿಡುವುದಿಲ್ಲ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯ ಕತ್ತು ಹಿಸುಕಿ ಸಾಯಿಸಿ ಬಿಟ್ಟಿದ್ದರು. ಅವರ ಮೇಲೆಯೇ 69 ಕೇಸ್‌ಗಳು ಬಂದಿದ್ದವು. ಹಾಗಾಗಿಯೇ ಈ ಸಂಸ್ಥೆಯನ್ನು ಮುಚ್ಚಿ ಎಸಿಬಿಯನ್ನು ಮಾಡಿದ್ದರು. ನಾವು ನ್ಯಾಯಾಲಯದ ಆದೇಶದ ಮೇರೆಗೆ ಅದಕ್ಕೆ ಶಕ್ತಿ ಕೊಟ್ಟಿದ್ದೇವೆ ಎಂದು ಕಿಡಿಕಾರಿದರು. ಇದನ್ನೂ ಓದಿ: 

  • ಕೋಟಿ-ಕೋಟಿ ವಿಚಾರ, ವಿರೂಪಾಕ್ಷಪ್ಪ ವಿಚಾರಣೆ ಬಳಿಕ ಸತ್ಯ ತಿಳಿಯಲಿದೆ: ಆರಗ ಜ್ಞಾನೇಂದ್ರ

    ಕೋಟಿ-ಕೋಟಿ ವಿಚಾರ, ವಿರೂಪಾಕ್ಷಪ್ಪ ವಿಚಾರಣೆ ಬಳಿಕ ಸತ್ಯ ತಿಳಿಯಲಿದೆ: ಆರಗ ಜ್ಞಾನೇಂದ್ರ

    ಶಿವಮೊಗ್ಗ: ಚನ್ನಗಿರಿ (Channagiri) ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಪುತ್ರನ ಮನೆ ಮೇಲೆ ಲೋಕಾಯುಕ್ತ (Lokayukta) ದಾಳಿ ನಡೆಸಿ, ಹಣ ವಶಪಡಿಸಿಕೊಂಡ ವಿಚಾರ ಮಾಧ್ಯಮಗಳ ಮೂಲಕ ತಿಳಿಯಿತು. ಆದರೆ ಅವರ ಮನೆಯಲ್ಲಿ ಸಿಕ್ಕಿದ್ದು ಯಾವ ಹಣ ಎಂಬುದು ವಿಚಾರಣೆ ನಂತರ ಸತ್ಯ ಹೊರಬರಲಿದೆ. ಈಗಲೇ ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ. ಇದನ್ನೂ ಓದಿ: ಮಗ ಮಾಡಿದ ತಪ್ಪಿಗೆ ಶಾಸಕರು ಯಾಕೆ ರಾಜೀನಾಮೆ ಕೊಡಬೇಕು: ಮಾಧುಸ್ವಾಮಿ ಪ್ರಶ್ನೆ

    ಜಿಲ್ಲೆಯ ಮತ್ತೂರಿನಲ್ಲಿ (Mattur) ಮಾಧ್ಯಮದವರ ಜೊತೆ ಮಾತನಾಡಿದ ಅವರು, ಲೋಕಾಯುಕ್ತ ದಾಳಿ ವಿಚಾರ ಈಗ ವಿಚಾರಣೆ ಹಂತದಲ್ಲಿದೆ. ಈಗಾಗಲೇ ನಾಲ್ಕೈದು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ಬಳಿಕ ಹಣದ ವಿಚಾರ ಸ್ಪಷ್ಟವಾಗಲಿದೆ ಎಂದಿದ್ದಾರೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ 500 ರೂ. ಕೊಟ್ಟು ಕಾರ್ಯಕರ್ತರನ್ನು ಸಮಾವೇಶಕ್ಕೆ ಕರೆತರಬೇಕು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಕೆಲವೊಮ್ಮೆ ಸತ್ಯ ಹೇಳುತ್ತಾರೆ. ಕಾಂಗ್ರೆಸ್ ನ ಸಮಾವೇಶಕ್ಕೆ ಹಣ ನೀಡಿ ಜನರನ್ನು ಕರೆದುಕೊಂಡು ಬರುವುದು ದುರಂತ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಮಾನವೀಯತೆ ಮೆರೆದ ಗೃಹ ಸಚಿವ ಆರಗ ಜ್ಞಾನೇಂದ್ರ

  • ಮಾನವೀಯತೆ ಮೆರೆದ ಗೃಹ ಸಚಿವ ಆರಗ ಜ್ಞಾನೇಂದ್ರ

    ಮಾನವೀಯತೆ ಮೆರೆದ ಗೃಹ ಸಚಿವ ಆರಗ ಜ್ಞಾನೇಂದ್ರ

    ಶಿವಮೊಗ್ಗ: ತೀರ್ಥಹಳ್ಳಿ (Thirthahalli) ತಾಲೂಕಿನ ಬೇಗುವಳ್ಳಿ ಸಮೀಪ ಬೈಕ್ ಅಪಘಾತದಲ್ಲಿ (Bike Accident) ಗಾಯಗೊಂಡಿದ್ದ ಯುವಕನನ್ನು ತಮ್ಮ ಬೆಂಗಾವಲು ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿ ಕೊಡುವ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮಾನವೀಯತೆ ಮೆರೆದಿದ್ದಾರೆ.

    ರಸ್ತೆಯಲ್ಲಿ ಹಸು ಅಡ್ಡ ಬಂದ ಪರಿಣಾಮ, ಹಸುವಿಗೆ ಬೈಕ್ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಸವಾರ ಬಿದ್ದು ಗಂಭೀರ ಗಾಯಗೊಂಡಿದ್ದಾನೆ. ಗಾಯಗೊಂಡಿದ್ದ ಯುವಕನನ್ನು ಸಿಂಗನಬಿದರೆ ಹಳಗ ಗ್ರಾಮದ ನಿವಾಸಿ ಎನ್ನಲಾಗಿದೆ. ಇದನ್ನೂ ಓದಿ: ಬೇನಾಮಿ ಆಸ್ತಿ ಗಳಿಕೆ- ಸುನಿಲ್ ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ಮುತಾಲಿಕ್ ದೂರು

    ರಸ್ತೆ ಬದಿಯಲ್ಲಿ ಗಾಯಾಳು ಯುವಕ ನರಳುತ್ತಿದ್ದ. ಈ ವೇಳೆ ಅದೇ ಮಾರ್ಗದಲ್ಲಿ ಬೆಂಗಳೂರಿಗೆ ಹೊರಟಿದ್ದ ಸಚಿವ, ಗಾಯಾಳು ಯುವಕನನ್ನು ಗಮನಿಸಿ ತಮ್ಮ ವಾಹನ ನಿಲ್ಲಿಸಿದ್ದಾರೆ. ಗಾಯಾಳು ಯುವಕನನ್ನು ಉಪಚರಿಸಿ, ಧೈರ್ಯ ಹೇಳಿದ್ದಾರೆ. ಅಲ್ಲದೇ ತಮ್ಮ ಬೆಂಗಾವಲು ವಾಹನದಲ್ಲಿ  (escort vehicle) ಗಾಯಾಳು ಯುವಕನನ್ನು ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ. ಇದನ್ನೂ ಓದಿ: ನಿಮ್ಮ ಕಾಲಿಗೆ ಬೀಳ್ತಿನಿ, ಟಿಕೆಟ್ ಕೊಡಿ- ಸಮಾರಂಭದಲ್ಲಿ ಮಂಡಿಯೂರಿ ಮಾಜಿ ಶಾಸಕನ ಅಳಲು

  • ಗೃಹ ಸಚಿವರ ಬೆಂಗಾವಲು ವಾಹನ ಡಿಕ್ಕಿಯಾಗಿಲ್ಲ: ಸ್ಪಷ್ಟನೆ

    ಗೃಹ ಸಚಿವರ ಬೆಂಗಾವಲು ವಾಹನ ಡಿಕ್ಕಿಯಾಗಿಲ್ಲ: ಸ್ಪಷ್ಟನೆ

    ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra Escort Vehicle) ಅವರ ಬೆಂಗಾವಲು ವಾಹನ ಯಾವುದೇ ಅಪಘಾತಕ್ಕೆ ಕಾರಣವಾಗಿರುವುದಿಲ್ಲ ಎಂದು ಆರಗ ಜ್ಞಾನೇಂದ್ರ ಅವರ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ.

    ಸ್ಪಷ್ಟನೆ ಏನು..?: ಗೃಹ ಸಚಿವರ ಬೆಂಗಾವಲು ವಾಹನವು ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು ನಿಧನಕ್ಕೆ ಕಾರಣವಾಗಿದೆ ಎಂಬ ವರದಿಗಳು ಸತ್ಯಕ್ಕೆ ದೂರವಾಗಿದ್ದಾಗಿದೆ. ಗೃಹ ಸಚಿವರು ಪ್ರಯಾಣಿಸುತ್ತಿದ್ದ ಹಾಗೂ ಅವರ ಬೆಂಗಾವಲು ವಾಹನಗಳು ಯಾವುದೇ ಅಪಘಾತಕ್ಕೆ ಕಾರಣವಾಗಿರುವುದಿಲ್ಲ.

    ಗೃಹ ಸಚಿವರ ಪ್ರವಾಸದ ವೇಳೆಯಲ್ಲಿ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸುತ್ತಿದ್ದಾಗ ಜಿಲ್ಲಾ ಪೊಲೀಸ್ ವಾಹನವೊಂದು ಬೆಂಗಾವಲು ವಾಹನದ ಬಹಳ ಹಿಂದಕ್ಕೆ ಬರುವಾಗ ವ್ಯಕ್ತಿಗೆ ಡಿಕ್ಕಿ ಹೊಡೆದಿತ್ತು ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ತಿಳಿಸಿದ್ದಾರೆ. ಇದನ್ನೂ ಓದಿ: ಗೃಹ ಸಚಿವರ ಎಸ್ಕಾರ್ಟ್ ವಾಹನಕ್ಕೆ ಬೈಕ್ ಸವಾರ ಸಾವು- ಆರಗ ವಿರುದ್ಧ ಜನಾಕ್ರೋಶ

    ಇದೊಂದು ಸಚಿವರ ಗಮನಕ್ಕೆ ಬಾರದೆ ಹೋದ ದುರದೃಷ್ಟಕರ ಘಟನೆಯಾಗಿದೆ. ಡಿಕ್ಕಿ ಹೊಡೆದು ಅವಘಡ ನಡೆದರೂ ಸಚಿವರು ಲೆಕ್ಕಿಸದೆ ಹೋದರು ಎಂಬ ವರದಿಗಳು ಸತ್ಯಕ್ಕೆ ದೂರವಾದುದಾಗಿದೆ ಎಂದು ಆರಗ ಜ್ಞಾನೇಂದ್ರ ಅವರ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ.

  • ಗೃಹ ಸಚಿವರ ಎಸ್ಕಾರ್ಟ್ ವಾಹನಕ್ಕೆ ಬೈಕ್ ಸವಾರ ಸಾವು- ಆರಗ ವಿರುದ್ಧ ಜನಾಕ್ರೋಶ

    ಗೃಹ ಸಚಿವರ ಎಸ್ಕಾರ್ಟ್ ವಾಹನಕ್ಕೆ ಬೈಕ್ ಸವಾರ ಸಾವು- ಆರಗ ವಿರುದ್ಧ ಜನಾಕ್ರೋಶ

    ಹಾಸನ: ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರ ಎಸ್ಕಾರ್ಟ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಸವಾರನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಹಾಸನದಲ್ಲಿ ನಡೆದಿದೆ.

    ಚಿಕ್ಕಗಂಡಸಿ ಗ್ರಾಮದ ರಮೇಶ್ (45) ಮೃತ ದುರ್ದೈವಿ. ಪೆಟ್ರೋಲ್ ಬಂಕ್‍ನಿಂದ ಬರುತ್ತಿದ್ದ ಎಸ್ಕಾರ್ಟ್ ವಾಹನ (Home Ministers Escort Vehicle Accident) ಕ್ಕೆ ಬೈಕ್ ಅಡ್ಡ ಬಂದ ಪರಿಣಾಮ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಮೊಮ್ಮಗನ ಮೃತದೇಹ ಕಂಡು ತಾತ ಹೃದಯಾಘಾತದಿಂದ ಸಾವು

    ಆರಗ ಜ್ಞಾನೇಂದ್ರ ಅವರು ಮಲೆಮಹದೇಶ್ವರ ಬೆಟ್ಟದಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಗೃಹ ಸಚಿವರಿಗೆ ಡಿಆರ್ ಇನ್ಸ್ ಪೆಕ್ಟರ್ ರಾಮು ಎಸ್ಕಾರ್ಟ್ ಮಾಡುತ್ತಿದ್ದರು. ಅಪಘಾತದ ವಿಷಯ ತಿಳಿದ ಗೃಹ ಸಚಿವ ಆರಗ ಜ್ಞಾನೇಂದ್ರ ವಾಹನ ನಿಲ್ಲಿಸದೆ ತೆರಳಿದ್ದು ಸ್ಥಳೀಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಆಗಮಿಸಿದ ಅರಸೀಕೆರೆ ತಾಲೂಕಿನ ಗಂಡಸಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಮೃತದೇಹವನ್ನ ಸ್ಥಳೀಯ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

  • ಸೈಬರ್ ಪ್ರಕರಣ ತಡೆಯಲು ಕಠಿಣ ಕ್ರಮ: ಆರಗ ಜ್ಞಾನೇಂದ್ರ

    ಸೈಬರ್ ಪ್ರಕರಣ ತಡೆಯಲು ಕಠಿಣ ಕ್ರಮ: ಆರಗ ಜ್ಞಾನೇಂದ್ರ

    ಬೆಂಗಳೂರು: ರಾಜ್ಯದಲ್ಲಿ ಸೈಬರ್ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಎಲ್ಲ ಸಾಧ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತಿಳಿಸಿದರು.

    ವಿಧಾನ ಪರಿಷತ್ (Vidhan Parishad) ಪ್ರಶ್ನೋತ್ತರ ಕಲಾಪದಲ್ಲಿ, ಬಿಜೆಪಿ (BJP) ಸದಸ್ಯೆ ಭಾರತಿ ಶೆಟ್ಟಿ (Bharati Shetty) ಪ್ರಶ್ನೆ ಕೇಳಿದರು. ರಾಜ್ಯದಲ್ಲಿ ಸೈಬರ್ ಕ್ರೈಮ್ ಕೇಸ್ ಹೆಚ್ಚಾಗುತ್ತಿದೆ. ನಾನೇ ಪರ್ಸ್ ಕಳೆದುಕೊಂಡಿದ್ದೆ. ಪರ್ಸ್ ಸಿಕ್ಕಿತು. ಆದರೆ ಈಗ ಕೋರ್ಟ್‌ಗೆ ಸುತ್ತಾಡುತ್ತಿದ್ದೇನೆ. ಹೀಗೆ ಆದರೆ ಹೇಗೆ? ಅಂತ ಪ್ರಶ್ನೆ ಮಾಡಿದರು. ಸಿಮ್ ಕಾರ್ಡ್ ಹೆಚ್ಚು ಹೆಚ್ಚು ಪಡೆದು ಮೋಸ ಮಾಡ್ತಿದ್ದಾರೆ. ಸಿಮ್ ಕಾರ್ಡ್ ಗೆ ಅಧಾರ್ ನಂಬರ್ ಜೋಡಿಸಬೇಕು ಅಂತ ಒತ್ತಾಯ ಮಾಡಿದರು.

    ಇದಕ್ಕೆ ಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡಿ, ಇವತ್ತು ಕ್ರೈಂ ರೀತಿ ನೀತಿ ಬದಲಾಗುತ್ತಿದೆ. ಮನೆಗೆ ನುಗ್ಗಿ ದರೋಡೆ ಮಾಡುತ್ತಿದ್ದರು, ಈಗ ಆ ತರಹ ಕಷ್ಟಪಡುವುದಿಲ್ಲ. ಆಧುನಿಕ ತಂತ್ರಜ್ಞಾನ ಅಪರಾಧ ಜಾಸ್ತಿ ಆಗ್ತಿದೆ. ಬುದ್ಧಿವಂತರು ಮಾಡುವ ದರೋಡೆ ಇದು. ಇದಕ್ಕೆ ಪೊಲೀಸರು ತಕ್ಕ ಕ್ರಮ ಕೈಗೊಳ್ತಿದ್ದಾರೆ ಎಂದರು.

    ಸೈಬರ್ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹತ್ತು ಹಲವು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.ಆಧುನಿಕ ತಂತ್ರಜ್ಞಾನ ಗಳ ದುರುಪಯೋಗ ಪಡಿಸಿಕೊಂಡು ಸಾರ್ವಜನಿಕರನ್ನು ವಂಚಿಸುವ ಪ್ರಕರಣಗಳೂ ಹೆಚ್ಚುತ್ತಿದ್ದು, ಇದರ ವಿರುದ್ಧ ಇಲಾಖೆಯಲ್ಲಿ ಸೂಕ್ತ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನನ್ನ ಧರ್ಮಪತ್ನಿಯ ತೇಜೋವಧೆ ಮಾಡಿದ್ದಾರೆ – ರೂಪಾ ವಿರುದ್ಧ ದೂರು ಕೊಟ್ಟ ಸಿಂಧೂರಿ ಪತಿ

    ರಾಜ್ಯದಲ್ಲಿ ಸೈಬರ್ ಅಪರಾಧಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಜಿಲ್ಲಾ ಕೇಂದ್ರಗಳಲ್ಲಿ ಸೈಬರ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ನುರಿತ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ ಸೇರಿದಂತೆ ಮೊಬೈಲ್ ಫೋನ್‌ಗೆಂದು ನೀಡಲಾಗುವ ಸಿಮ್ ವಿತರಣೆಯ ಬಗ್ಗೆ ಕಠಿಣ ನಿಯಮಗಳನ್ನೂ ವಿಧಿಸಲಾಗಿದೆ. ಮೊಬೈಲ್ ಸೇವೆಗಳನ್ನು ನೀಡುವ ಎಲ್ಲಾ ದೂರ ಸಂಪರ್ಕ ಸಂಸ್ಥೆಗಳಿಗೆ ಸಿಮ್ ಕಾರ್ಡ್ ವಿತರಣೆ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಕಟ್ಟನಿಟ್ಟಾಗಿ ಪಾಲಿಸಬೇಕು ಎಂದು ನಿರ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ರೂಪಾ ಮೌದ್ಗಿಲ್ ವಿರುದ್ಧ ಡಿ.ಕೆ.ರವಿ ತಾಯಿ ಗೌರಮ್ಮ ಕಿಡಿ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೋಹಿಣಿ-ರೂಪಾ ವಿರುದ್ಧ ಕಾನೂನು ‌ಕ್ರಮಕ್ಕೆ ಸಿಎಂ ಬೊಮ್ಮಾಯಿ ಸೂಚನೆ

    ರೋಹಿಣಿ-ರೂಪಾ ವಿರುದ್ಧ ಕಾನೂನು ‌ಕ್ರಮಕ್ಕೆ ಸಿಎಂ ಬೊಮ್ಮಾಯಿ ಸೂಚನೆ

    ಬೆಂಗಳೂರು : ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಮತ್ತು ಐಪಿಎಸ್‌ ಅಧಿಕಾರಿ ರೂಪಾ (Roopa) ನಡುವಿನ ಕಿತ್ತಾಟದಕ್ಕೆ ಸಿಎಂ ಬೊಮ್ಮಾಯಿ (CM Bommai) ಅಸಮಾಧಾನ ಹೊರ ಹಾಕಿದ್ದಾರೆ. ಇಬ್ಬರು ಹಿರಿಯ ಅಧಿಕಾರಿಗಳು ಹೀಗೆ ಬಹಿರಂಗವಾಗಿ ಮಾತನಾಡುವುದು,ಕಿತ್ತಾಡುವುಸು ಶೋಭೆ ತರುವುದಿಲ್ಲ ಅಂತ ಆಕ್ರೋಶ ಹೊರ ಹಾಕಿದ್ದಾರೆ.

    ಇದರ ಜೊತೆ ಇಬ್ಬರು ಅಧಿಕಾರಿಗಳ ವಿರುದ್ದ ಕಾನೂನಿನ ಅಡಿ ಕ್ರಮ ತೆಗೆದುಕೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಸಿಂಧೂರಿ ಮತ್ತು ರೂಪಾ ನಡುವಿನ ಕಿತ್ತಾಟದ ಬಗ್ಗೆ ಸಿಎಂ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಇಬ್ಬರು ಅಧಿಕಾರಿಗಳ ವರ್ತನೆಯಿಂದ ಸರ್ಕಾರಕ್ಕೆ ಮುಜುಗರ ಆಗ್ತಿದೆ. ಹೀಗಾಗಿ ಇವರ ವಿರುದ್ದ ಕ್ರಮ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಏನು ಸಾಧ್ಯವೋ ಅದರಂತೆ ಕ್ರಮ ತೆಗೆದುಕೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಇಬ್ಬರು ಅಧಿಕಾರಿಗಳಿಗೆ ನೊಟೀಸ್ ನೀಡಲು ಸಿಎಂ ಸೂಚನೆ ನೀಡಿದ್ದು, ಇಬ್ಬರಿಂದ ಉತ್ತರ ಬಂದ ಬಳಿಕ ಕ್ರಮ ತೆಗೆದುಕೊಳ್ಳುವಂತೆ ಸಿಎಂ‌ ನಿರ್ದೇಶನ ನೀಡಿದ್ದಾರೆ.

    ಅಧಿಕಾರಿಗಳ ನಡುವಿನ ಕಿತ್ತಾಟದ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಪ್ರತಿಕ್ರಿಯಿಸಿದ್ದು, ಅಧಿಕಾರಿಗಳ ಈ ವರ್ತನೆಗಳಿಂದ ನನಗೆ ಬಹಳ ಬೇಸರವಾಗಿದೆ. ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ಜನ ದೇವಮಾನವರೆಂದುಕೊಂಡಿದ್ದಾರೆ. ಆದರೆ ಇವರಿಂದ ಎಲ್ಲಾ ಅಧಿಕಾರಿಗಳಿಗೂ ಅಪಮಾನವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಓವೈಸಿ ಮನೆ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

    ಈಗಾಗಲೇ ಪೊಲೀಸ್ ಮಾಹಾನಿರ್ದೇಶಕರೊಂದಿಗೆ ಹಾಗೂ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತನಾಡಲಾಗಿದೆ. ಕಾನೂನು ಚೌಕಟ್ಟಿನೊಳಗೆ ಏನು ಕ್ರಮಕೈಗೊಳ್ಳಬೇಕೋ ಅದನ್ನು ಸಿಎಂ ತೆಗೆದುಕೊಳ್ಳುತ್ತಾರೆ. ಈ ಹಿಂದೆ ಸಹ ಈ ಇಬ್ಬರಿಗೆ ನೋಟಿಸ್ ನೀಡಲಾಗಿತ್ತು. ಅಷ್ಟಾದರೂ ಇದು ಮುಂದುವರೆದಿದೆ ಎಂದಿದ್ದಾರೆ. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತ – ಅರ್ಧದಷ್ಟು ತಂತಿಗಳಿಗೆ ತುಕ್ಕು ಹಿಡಿದಿದ್ದೇ ಕಾರಣ: ತನಿಖಾ ವರದಿ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಂಬೋಡಿಯಾದಲ್ಲಿ ಅಕ್ರಮ ವಶದಲ್ಲಿರುವ ತೀರ್ಥಹಳ್ಳಿಯ ಸಾಫ್ಟ್‌ವೇರ್‌ ಇಂಜಿನಿಯರ್; ಬಿಡುಗಡೆಗೆ ಗೃಹ ಸಚಿವ ಶತಪ್ರಯತ್ನ

    ಕಾಂಬೋಡಿಯಾದಲ್ಲಿ ಅಕ್ರಮ ವಶದಲ್ಲಿರುವ ತೀರ್ಥಹಳ್ಳಿಯ ಸಾಫ್ಟ್‌ವೇರ್‌ ಇಂಜಿನಿಯರ್; ಬಿಡುಗಡೆಗೆ ಗೃಹ ಸಚಿವ ಶತಪ್ರಯತ್ನ

    ಬೆಂಗಳೂರು: ಕಾಂಬೋಡಿಯದಲ್ಲಿ (Cambodia) ವಿದೇಶಿ ಅಕ್ರಮ ನೇಮಕಾತಿ ಜಾಲಕ್ಕೆ ಸಿಲುಕಿ ಅಪಾಯದಲ್ಲಿರುವ ತೀರ್ಥಹಳ್ಳಿ ಪಟ್ಟಣದ ಸಾಫ್ಟ್‌ವೇರ್‌ ಇಂಜಿನಿಯರ್ ಕಿರಣ್ ಶೆಟ್ಟಿ ಅವರನ್ನು ಸುರಕ್ಷಿತವಾಗಿ ಕರೆತರುವ ಬಗ್ಗೆ, ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು, ಕೇಂದ್ರದ ವಿದೇಶಾಂಗ ಸಚಿವಾಲಯ ಅಧಿಕಾರಿಗಳ ಜತೆ ಸತತ ಪ್ರಯತ್ನ ನಡೆಸಿದ್ದಾರೆ.

    ಥೈಲ್ಯಾಂಡ್ ದೇಶದಲ್ಲಿ ಹೆಚ್ಚಿನ ಸಂಬಳ ದೊರಕಿಸಿಕೊಡುವ ಆಮಿಷ ಒಡ್ಡಿದ ನೇಮಕಾತಿ ಏಜೆನ್ಸಿಯಿಂದ ಮೊಸಹೋಗಿ, ಕಾಂಬೋಡಿಯಾ ದೇಶದಲ್ಲಿ ಖಾಸಗಿ ಸಂಸ್ಥೆಯೊಂದರ ವಶದಲ್ಲಿರುವ ತೀರ್ಥಹಳ್ಳಿ ನಿವಾಸಿಯ ಬಿಡುಗಡೆ ಬಗ್ಗೆ ಸತತ ಪ್ರಯತ್ನ ನಡೆಸಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ (Pralhad Joshi) ಹಾಗೂ ವಿದೇಶಾಂಗ ರಾಜ್ಯ ಸಚಿವ ವಿ.ಮುರಳೀಧರ್ ಅವರ ಕಚೇರಿ ಜತೆ ಸಂಪರ್ಕಿಸಿ, ಬಿಡುಗಡೆ ಕುರಿತು ಮನವಿ ಮಾಡಿದ್ದಾರೆ. ಇದನ್ನೂ ಓದಿ: ದೇವೇಗೌಡರನ್ನೇ ಮನೆ, ಜಿಲ್ಲೆಯಿಂದ ಹೊರಹಾಕಿದವರು ನನ್ನನ್ನು ಬಿಡ್ತಾರಾ: ರೇವಣ್ಣ ವಿರುದ್ಧ ಎ.ಟಿ.ರಾಮಸ್ವಾಮಿ ವಾಗ್ದಾಳಿ

    ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೂ ಟೆಕ್ಕಿಯ ಸುರಕ್ಷಾ ಹಿಂದುವರಿಕೆ ಬಗ್ಗೆ ಸಚಿವರು ಚರ್ಚಿಸಿದ್ದು, ತಮ್ಮ ಎಲ್ಲಾ ಕೈಲಾದ ಪ್ರಯತ್ನ ಮಾಡಲಾಗುತ್ತಿದೆ. ಪೋಷಕರು ಧೈರ್ಯಗುಂದಬಾರದು ಎಂದು ಸಾಂತ್ವನ ಹೇಳಿದ್ದಾರೆ.

    ಸಾಫ್ಟ್‌ವೇರ್‌ ಇಂಜಿನಿಯರ್ ಕಿರಣ್ ಶೆಟ್ಟಿ ಅವರನ್ನು ದುಷ್ಕರ್ಮಿಗಳಿಂದ ಬಿಡಿಸಿ ಕೊಡುವಂತೆ ಅವರ ಸಹೋದರ ಪವನ್ ಶೆಟ್ಟಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಂಪರ್ಕಿಸಿ ಮನವಿ ಮಾಡಿದ್ದರು. ಕಿರಣ್ ಶೆಟ್ಟಿ ಅವರಿಗೆ ನಾಲ್ಕು ತಿಂಗಳ ಮಗು ಹಾಗೂ ಪತ್ನಿಯಿದ್ದು, ತೀರ್ಥಹಳ್ಳಿಯಲ್ಲಿ ಆತಂಕದಿಂದ ಪತಿಯ ಮರಳಿಕೆ ಬಗ್ಗೆ ಚಿಂತಿತರಾಗಿದ್ದಾರೆ. ಇದನ್ನೂ ಓದಿ: ಕಿಡ್ನಿ ಮಾರಿ ದುಡ್ಡು ಕೊಡ್ತೀನಿ.. ನಮ್ಮ ನಾಯಕರಿಗೆ ಟಿಕೆಟ್ ಕೊಡಿ – ಯುವಕನ ಹುಚ್ಚಾಟ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k