Tag: Araga Jnanendra

  • ಅತಿವೃಷ್ಠಿಯಲ್ಲಿ ಬಿಎಸ್‍ವೈ ಭಿಕ್ಷೆ ಬೇಡಿದ್ದರು, ಸಿದ್ದರಾಮಯ್ಯರಂತೆ ಡ್ಯಾನ್ಸ್ ಮಾಡಿರಲಿಲ್ಲ: ಆರಗ ಜ್ಞಾನೇಂದ್ರ ವ್ಯಂಗ್ಯ

    ಅತಿವೃಷ್ಠಿಯಲ್ಲಿ ಬಿಎಸ್‍ವೈ ಭಿಕ್ಷೆ ಬೇಡಿದ್ದರು, ಸಿದ್ದರಾಮಯ್ಯರಂತೆ ಡ್ಯಾನ್ಸ್ ಮಾಡಿರಲಿಲ್ಲ: ಆರಗ ಜ್ಞಾನೇಂದ್ರ ವ್ಯಂಗ್ಯ

    ಚಿಕ್ಕಮಗಳೂರು: ಹಿಂದೆ ಅತಿವೃಷ್ಟಿ ಉಂಟಾದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು (BS Yediyurappa) ಡಬ್ಬ ಹಿಡಿದು ರಸ್ತೆಗಿಳಿದು ಸಾರ್ವಜನಿಕರಿಂದ ಹಣ ಸಂಗ್ರಹಿಸಿದ್ದರು. ಅಂತಹಾ ಕಾಳಜಿ, ಬದ್ಧತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೋರುತ್ತಿಲ್ಲ. ಭಾಷಣಮಾಡುವುದು, ಕುಣಿಯುವುದರಲ್ಲಿಯೇ ಕಾಲವನ್ನ ದೂಡುತ್ತಿದ್ದಾರೆಂದು ಮಾಜಿ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಸಿದ್ದರಾಮಯ್ಯ (Siddaramaiah) ಹಾಗೂ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯನ್ನ ಸಮರ್ಪಕವಾಗಿ ಎದುರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು. ರಾಜ್ಯದಲ್ಲಿ 30% ಕ್ಕಿಂತ ಕಡಿಮೆ ಮಳೆಯಾಗಿರುವ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಈಗಾಗಲೇ ಘೋಷಿಸಲಾಗಿದೆ. ಬರ ರಾಜ್ಯವನ್ನು ವ್ಯಾಪಕವಾಗಿ ಕಾಡುತ್ತಿದೆ. ಬೆಳೆ ನಷ್ಟವಾಗಿದೆ. ಮೇವಿನ ಅಭಾವ ಉಂಟಾಗಿದೆ. ಕುಡಿಯುವ ನೀರಿನ ಸಮಸ್ಯೆ ಶುರುವಾಗಿದೆ. ಇದಕ್ಕೂ ಸರ್ಕಾರಕ್ಕೂ ಸಂಬಂಧಿವಿಲ್ಲವೆಂಬಂತೆ ಮುಖ್ಯಮಂತ್ರಿಗಳು ವರ್ತಿಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಬರದ ನೈಜ ಸ್ಥಿತಿಯನ್ನ ಅರಿಯಲು ಬಿಜೆಪಿ (BJP) ರಾಜ್ಯ ಪ್ರವಾಸಕೈಗೊಂಡಿದೆ. ಬರದ ವರದಿಯನ್ನ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು ಎಂದರು. ಇದನ್ನೂ ಓದಿ: ಕಾಮಗಾರಿ ಆರಂಭಗೊಂಡು 17 ವರ್ಷದ ಬಳಿಕ ಯರಗೋಳ ಯೋಜನೆ ಲೋಕಾರ್ಪಣೆ

    ಜಿಲ್ಲಾ ಉಸ್ತುವಾರಿ ಸಚಿವರು ರೈತರ ಬಳಿ ಹೋಗಿಲ್ಲ. ಅವರ ಗೋಳನ್ನು ಕೇಳಿಲ್ಲ, ಆತ್ಮವಿಶ್ವಾಸ ತುಂಬಬೇಕು. ಆ ಕೆಲಸವನ್ನು ಮಾಡುತ್ತಿಲ್ಲ, ಕೇಂದ್ರದ ಮೇಲೆ ಬೊಟ್ಟುಮಾಡುವುದು, ಪ್ರಧಾನಿಯವರನ್ನು ಟೀಕಿಸುವುದರಲ್ಲೇ ರಾಜ್ಯ ಸರ್ಕಾರ ಕಾಲಕಳೆಯುತ್ತಿದೆ. ಸರ್ವಪಕ್ಷದ ಸಭೆ ಕರೆದು ಚರ್ಚಿಸಿಲ್ಲ, ಕೇಂದ್ರದ ಬಳಿ ನಿಯೋಗ ಕರೆದುಕೊಂಡುಹೋಗಿಲ್ಲವೆಂದು ಸರ್ಕಾರದ ಕಾರ್ಯವೈಖರಿ ಬಗ್ಗೆ ಹರಿಹಾಯ್ದರು. ಎನ್‍ಡಿಆರ್ ಎಫ್‍ನ 900 ಕೋಟಿ ಹಣ ಹಾಗೇ ಇದೆ. ಜಿಲ್ಲಾಧಿಕಾರಿಗಳ ಬಳಿ ಇರುವ ಹಣವನ್ನು ಖರ್ಚು ಮಾಡಲು ಸರ್ಕಾರ ಮಾರ್ಗಸೂಚಿಯನ್ನು ನೀಡುತ್ತಿಲ್ಲ ಎಂದರು.

    ಈಗ ಹಿಂಗಾರು ಮಳೆ ಬೀಳುತ್ತಿದೆ. ಬೆಳೆಗೆ ಸಾಕಾಗುತ್ತಿಲ್ಲ. ಜನ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬರ ಪರಿಹಾರಕ್ಕೆ ಬಿಡಿಗಾಸು ಬಿಡುಗಡೆಗೊಳಿಸಿಲ್ಲ. ರಾಜ್ಯದಲ್ಲಿ 260 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೇಗಾದರು ಸರ್ಕಾರ ನಡೆದುಕೊಂಡು ಹೋಗುತ್ತದೆ ಎಂದು ಸರ್ಕಾರ ನಡೆಸುವವರು ತಿಳಿದುಕೊಂಡಿದ್ದಾರೆ. ರೈತರ ಪಂಪ್‍ಸೆಟ್‍ಗೆ 7 ಗಂಟೆ ಗುಣಮಟ್ಟದ ವಿದ್ಯುತ್ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಯಾವಾಗ ಕರೆಂಟ್ ಕೊಡುತ್ತಾರೆ ತಿಳಿಯದಾಗಿದೆ. ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದೆ. ಕಲ್ಲಿದ್ದಲು ಖರೀದಿಗೂ ಹಣವಿಲ್ಲದಂತಾಗಿದೆ. ಖಜಾನೆ ಖಾಲಿಯಾಗಿದೆ ಎಂದು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

  • ಟಿಪ್ಪು ಸುಲ್ತಾನ್ ಹುಲಿ ಕೊಲ್ಲುತ್ತಿರುವ ಫೋಟೋ ಹಾಕಿಕೊಂಡಿರುವವರ ವಿರುದ್ಧವೂ ಕ್ರಮ ಕೈಗೊಳ್ಳಿ – ಆರಗ ಆಗ್ರಹ

    ಟಿಪ್ಪು ಸುಲ್ತಾನ್ ಹುಲಿ ಕೊಲ್ಲುತ್ತಿರುವ ಫೋಟೋ ಹಾಕಿಕೊಂಡಿರುವವರ ವಿರುದ್ಧವೂ ಕ್ರಮ ಕೈಗೊಳ್ಳಿ – ಆರಗ ಆಗ್ರಹ

    ಶಿವಮೊಗ್ಗ: ರಾಜ್ಯದಲ್ಲಿ ಹುಲಿ ಉಗುರು (Tiger Claws) ಧರಿಸಿದ ವ್ಯಕ್ತಿಗಳ ವಿರುದ್ಧ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದು, ಹಲವರನ್ನು ವಶಕ್ಕೆ ಪಡೆಯುತ್ತಿದ್ದಾರೆ. ಈ ಪ್ರಕರಣ ಗಮನಿಸಿದರೆ ಅರಣ್ಯಾಧಿಕಾರಿಗಳು (Forest Officer) ಪ್ರಚಾರದ ಗೀಳಿಗೆ ಬಿದ್ದಂತಿದೆ. ವನ್ಯಜೀವಿ ಕಾಯ್ದೆ (Wildlife Act) ಜಾರಿಗೆ ಬರುವ ಮೊದಲು ಸಂಗ್ರಹ ಮಾಡಿ ಇಟ್ಟುಕೊಂಡಿರುವವರನ್ನು ಬಿಡುಗಡೆ ಮಾಡಿ ಇಲ್ಲವೇ, ಟಿಪ್ಪು ಸುಲ್ತಾನ್ ಹುಲಿ ಕೊಲ್ಲುತ್ತಿರುವ ಫೋಟೋ ಹಾಕಿಕೊಂಡಿರುವವರ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಆಗ್ರಹಿಸಿದ್ದಾರೆ.

    ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಇದನ್ನೇ ದಾಳವಾಗಿರಿಸಿಕೊಂಡು ಪೆಂಡೆಂಟ್ ಧರಿಸಿದ ಅನೇಕರ ಫೋಟೋಗಳನ್ನ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಫೋಟೋ ಕಂಡು ಬಂದ ಎಲ್ಲರ ಮೇಲೂ ಕ್ರಮ ಕೈಗೊಳ್ಳಲಾಗುತ್ತಿದೆ. 1972ರ ವನ್ಯಜೀವಿ ಕಾಯ್ದೆ ಹಿಂದಿನ ಪ್ರಕರಣ ಕೈಬಿಡಿ, ಇಲ್ಲವೇ ಟಿಪ್ಪು ಸುಲ್ತಾನ್ (Tipu Sultan) ಹುಲಿ ಕೊಲ್ಲುತ್ತಿರುವ ಫೋಟೋ ಹಾಕಿಕೊಂಡಿರುವವರ ವಿರುದ್ಧವೂ ಕ್ರಮ ಕೈಗೊಳ್ಳಿ, ಇಲ್ಲದಿದ್ದರೆ ಇದು ಸಹ ಹುಲಿ ಕೊಲ್ಲಲ್ಲು ಬೇರೆಯವರಿಗೆ ಪ್ರೇರಣೆ ನೀಡಬಹುದು ಎಂದು ಒತ್ತಾಯಿಸಿದ್ದಾರೆ.

    ಜೊತೆಗೆ ಮಸೀದಿಗಳಲ್ಲಿ ಮುಸ್ಲಿಂ ಮೌಲ್ವಿಗಳು ನವಿಲುಗರಿ ಇಟ್ಟುಕೊಂಡಿರುತ್ತಾರೆ. ನವಿಲುಗರಿಯಿಂದ ತಲೆಯ ಮೇಲೆ, ಭುಜದ ಮೇಲೆ ಹೊಡೆಯುತ್ತಾರೆ. ನವಿಲು ರಾಷ್ಟ್ರೀಯ ಪಕ್ಷಿ ಆಗಿರುವುದರಿಂದ ಅವರ ಮೇಲೆಯೂ ಕ್ರಮ ಕೈಗೊಳ್ಳಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾತ್ರೋರಾತ್ರಿ ದಾಳಿ ನಡೆಸಿ ಹಮಾಸ್‌ ಕಮಾಂಡರ್‌ ಹತ್ಯೆ; 36 ಮಂದಿ ಬಂಧಿಸಿದ ಇಸ್ರೇಲ್‌ ರಕ್ಷಣಾ ಪಡೆ

    ಮಲೆನಾಡು ಹಾಗೂ ಕರಾವಳಿ ಭಾಗದ ಮನೆಗಳಲ್ಲಿ ನೂರಾರು ವರ್ಷಗಳಿಂದ ಕಾಡೆಮ್ಮೆ, ಜಿಂಕೆ ಕೊಂಬುಗಳನ್ನು ಮನೆಯಲ್ಲಿ ಅಲಂಕಾರಿಕ ವಸ್ತುಗಳಾಗಿ ಬಳಸುತ್ತಿದ್ದಾರೆ. ಈ ಹಿಂದೆ ಹುಲಿ ಉಗುರು ರೀತಿಯ ವಸ್ತುಗಳನ್ನು ಮಾರಾಟ ಮಾಡಲು ಹಳ್ಳಿಗಳ ಕಡೆ ಬರುತ್ತಿದ್ದರು. ಅದನ್ನು‌ ಜನರು ಕೊಂಡುಕೊಳ್ಳುತ್ತಿದ್ದರು. ಮಕ್ಕಳ ಕೊರಳಿಗೆ ಕಟ್ಟಿದ್ದರೆ ಧೈರ್ಯದ ಪ್ರತೀಕ ಎಂದು‌ ಭಾವಿಸಿದ್ದರು. ಇತ್ತೀಚೆಗೆ ಶ್ರೀಮಂತರು ಅದನ್ನು ಚಿನ್ನದ ಸರಕ್ಕೆ ಪೆಂಡೆಂಟ್ ರೂಪದಲ್ಲಿ ಮಾಡಿಸಿಕೊಂಡು ಹಾಕಿಕೊಳ್ಳುತ್ತಿದ್ದಾರೆ. ಆದ್ರೆ ಅರಣ್ಯಾಧಿಕಾರಿಗಳು ಹಿಂದೆ-ಮುಂದೆ ನೋಡದೇ ಕ್ರಮ ಜರುಗಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ನಾನು ವನ್ಯಜೀವಿ ಕಾಯ್ದೆ ವಿರೋಧಿಯಲ್ಲ, ವನ್ಯಜೀವಿ ಕಾಯ್ದೆ ಜಾರಿಗೆ ಬರುವ ಮೊದಲು ಸಂಗ್ರಹ ಮಾಡಿ ಇಟ್ಟುಕೊಂಡಿರುವವರನ್ನು ಬಿಡುಗಡೆ ಮಾಡಬೇಕು. ಎಲ್ಲರನ್ನು ಹಿಡಿದು ಜೈಲಿಗೆ ಹಾಕಿದರೆ, ಈ ರಾಜ್ಯದ ಜೈಲುಗಳು ಸಾಕಾಗುವುದಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಮಧ್ಯ ಪ್ರವೇಶ ಮಾಡಬೇಕು. ಮುಖ್ಯಮಂತ್ರಿ, ಅರಣ್ಯ ಸಚಿವರು ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕುಳಿತು ಚರ್ಚೆ ಮಾಡಿ ನಂತರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್; ಆರೋಪಿ ಸುಳಿವು ಕೊಟ್ಟವರಿಗೆ 2 ಲಕ್ಷ ರೂ. ಬಹುಮಾನ ಘೋಷಿಸಿದ NIA

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹುಲಿ ಉಗುರು ಕೇಸ್‌ – ಅರಣ್ಯ ಇಲಾಖೆ ಅಧಿಕಾರಿಗಳು ಪ್ರಚಾರದ ಗೀಳಿಗೆ ಬಿದ್ದಿದ್ದಾರೆ: ಆರಗ ಕಿಡಿ

    ಹುಲಿ ಉಗುರು ಕೇಸ್‌ – ಅರಣ್ಯ ಇಲಾಖೆ ಅಧಿಕಾರಿಗಳು ಪ್ರಚಾರದ ಗೀಳಿಗೆ ಬಿದ್ದಿದ್ದಾರೆ: ಆರಗ ಕಿಡಿ

    ಬೆಂಗಳೂರು: ಹುಲಿ ಉಗುರು (Tiger Claws) ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಗಳ ಬಂಧನ ಸರಿಯಲ್ಲ. ರಾಜ್ಯ ಸರ್ಕಾರ (Karnataka Government) ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಆಗ್ರಹಿಸಿದ್ದಾರೆ.

    ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಪ್ರಚಾರದ ಗೀಳಿಗೆ ಬಿದ್ದಿದ್ದಾರೆ. ಏಕಾಏಕಿ ದಾಳಿ ನಡೆಸಿ ಬಂಧನ ಮಾಡುವುದು ಸರಿಯಾದ ಕ್ರಮ ಅಲ್ಲ. ನೂರಾರು ವರ್ಷಗಳಿಂದ ಇಂತಹ ವಸ್ತುಗಳ ಸಂಗ್ರಹ ಇದೆ. ಹಾಗೆ ಸಂಗ್ರಹಿಸಿಟ್ಟವರನ್ನೆಲ್ಲ ಬಂಧಿಸಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.   ಇದನ್ನೂ ಓದಿ: ಹುಲಿ ಉಗುರು ಪ್ರಕರಣ – ಸ್ಯಾಂಡಲ್‌ವುಡ್ ನಟರ ಬಳಿಕ ರಾಜಕಾರಣಿಗಳಿಗೂ ಸಂಕಷ್ಟ

    ವನ್ಯಜೀವಿ ರಕ್ಷಣಾ ಕಾಯ್ದೆ ಬರುವ ಮೊದಲು ಹುಲಿ ಉಗುರು, ವನ್ಯ ಪ್ರಾಣಿಗಳ ವಸ್ತುಗಳು ಮಲೆನಾಡು, ಕರಾವಳಿ ಭಾಗದಲ್ಲಿ ಅಲಂಕಾರಿಕ ವಸ್ತುವಾಗಿತ್ತು. ಮಕ್ಕಳಿಗೆ ಹುಲಿ ಉಗುರು ತೊಡಿಸುತ್ತಿದ್ದರು. ಏಕಾಏಕಿ ವ್ಯಕ್ತಿಗಳನ್ನು ಬಂಧನ ಮಾಡಿದರೆ ಜೈಲುಗಳಲ್ಲಿ ಸ್ಥಳ ಸಾಕಾಗುವುದಿಲ್ಲ ಎಂದು ಹೇಳಿದರು.

    ವನ್ಯಜೀವಿ ರಕ್ಷಣಾ ಕಾಯ್ದೆಗೆ ನಾನು ವಿರೋಧಿ ಅಲ್ಲ. ಆದರೆ ಹಿಂದಿನ ಕಾಲದಿಂದಲೂ ಮನೆಯಲ್ಲಿ ಉಗುರು ಇಟ್ಟಿರುವವರನ್ನೆಲ್ಲ ಬಂಧಿಸುವುದು ಸರಿಯಲ್ಲ. ಈ ಬಗ್ಗೆ ಸರ್ಕಾರ ಚರ್ಚೆ ನಡೆಸಬೇಕು ಎಂದು ಜ್ಞಾನೇಂದ್ರ ಆಗ್ರಹಿಸಿದರು.

     

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಗ್ರೆಸ್‍ಗೆ ಬಿಜೆಪಿಯ ಯಾವ ಶಾಸಕರೂ ಹೋಗಲ್ಲ: ಆರಗ ಜ್ಞಾನೇಂದ್ರ

    ಕಾಂಗ್ರೆಸ್‍ಗೆ ಬಿಜೆಪಿಯ ಯಾವ ಶಾಸಕರೂ ಹೋಗಲ್ಲ: ಆರಗ ಜ್ಞಾನೇಂದ್ರ

    ಶಿವಮೊಗ್ಗ: ಕಾಂಗ್ರೆಸ್‍ಗೆ (Congress) ಬಿಜೆಪಿಯ (BJP) ಯಾವ ಶಾಸಕರು ಕೂಡ ಹೋಗುವುದಿಲ್ಲ. ಕಾಂಗ್ರೆಸ್‍ನವರು ಸುಮ್ಮನೆ ಗುಲ್ ಎಬ್ಬಿಸಿದ್ದಾರೆ. ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಈ ವಿಷಯವನ್ನು ಮರೆಮಾಚಲು ಇದನ್ನು ಬೆಳಕಿಗೆ ತಂದಿದ್ದಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (AragaJnanendra) ಹೇಳಿದರು.

    ಶಿವಮೊಗ್ಗದಲ್ಲಿ (Shivamogga) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಇರುವ ಮಾಹಿತಿ ಪ್ರಕಾರ ಯಾವ ಶಾಸಕರು ಕಾಂಗ್ರೆಸ್‍ಗೆ ಹೋಗುವುದಿಲ್ಲ. ಗುತ್ತಿಗೆ ನೌಕರರಿಗೆ ಈ ಸರ್ಕಾರ ಬಂದ ಮೇಲೆ ವೇತನ ಸಹ ಕೊಟ್ಟಿಲ್ಲ ಎಂದು ಆರೋಪಿಸಿದರು ಎಂದರು. ಇದನ್ನೂ ಓದಿ: ಮಾನಸಿಕವಾಗಿ, ದೈಹಿಕವಾಗಿ ಬಿಜೆಪಿಯಲ್ಲಿದ್ದೇನೆ: ಎಸ್‍ಟಿ ಸೋಮಶೇಖರ್

    ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ಜಲಾಶಯಗಳಲ್ಲಿ ನೀರಿಲ್ಲ, ಆರ್ ಟಿಪಿಎಸ್ ನಲ್ಲಿ ಕಲ್ಲಿದ್ದಲು ಇಲ್ಲ. ವಿದ್ಯುತ್ ಉತ್ಪಾದನೆಗೆ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆರಗ ಜ್ಞಾನೆಂದ್ರ ತ್ರಿಪುರ ಸುಂದರ ಅಲ್ಲ: ದರ್ಶನಾಪುರ ಲೇವಡಿ

    ಆರಗ ಜ್ಞಾನೆಂದ್ರ ತ್ರಿಪುರ ಸುಂದರ ಅಲ್ಲ: ದರ್ಶನಾಪುರ ಲೇವಡಿ

    ಯಾದಗಿರಿ: ಮಾಜಿ ಸಚಿವ ಆರಗ ಜ್ಞಾನೇಂದ್ರ (Araga Jnanendra) ತ್ರಿಪುರ ಸುಂದರ ಅಲ್ಲ ಎಂದು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ (Sharanappa Darshanapura) ಲೇವಡಿ ಮಾಡಿದ್ದಾರೆ.

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಮೈ ಬಣ್ಣದ ಬಗ್ಗೆ ಟೀಕೆ ಮಾಡಿರುವ ವಿಚಾರಕ್ಕೆ ಯಾದಗಿರಿಯಲ್ಲಿ ಪ್ರತಿಕ್ರಿಯಿಸಿರುವ ಅವರು, ಆರಗ ಜ್ಞಾನೇಂದ್ರ ಅವನೇನು ಪರಿಪೂರ್ಣ, ತ್ರಿಪುರ ಸುಂದರ ಅಲ್ಲ ಅಂತಾ ಏಕವಚನದಲ್ಲಿಯೇ ಲೇವಡಿ ಮಾಡಿದ್ರು.

    ಬೇರೆ ದೇಶದಲ್ಲಿ ಇಂತಹ ವರ್ಣಬೇಧ ನೀತಿ ನಡಿಯುತ್ತೆ. ಆದರೆ ಭಾರತ ದೇಶದಲ್ಲಿ ನಾವು ಹೆಂಗೆ ಇರುತ್ತೀವಿ ಹಂಗೆ ಇರುತ್ತೇವೆ ಅಂತಾ ತಿರುಗೇಟು ನೀಡಿದ ಅವರು, ನಾವು ಇದೇ ಕಲರ್ ಬೇಕು ಅಂತಾ ಅರ್ಜಿ ಹಾಕಿ ಹುಟ್ಟಿ ಬಂದಿರೋದಿಲ್ಲ. ಅವರ ಬಗ್ಗೆ ಮಾತಾಡಿದ್ರೆ ಜಾಸ್ತಿನೇ ಆಗುತ್ತೆ ಅಂತಾ ಕೌಂಟರ್ ಕೊಟ್ರು. ಇದನ್ನೂ ಓದಿ: ಶ್ರಮಜೀವಿಗಳ ಬೆವರಲ್ಲಿ ಬಿಟ್ಟಿ ತಿಂದವರ ಚರ್ಮ ಬೆಳ್ಳಗಿರಬಹುದು – ಪ್ರಿಯಾಂಕ್‌ ಖರ್ಗೆ ತಿರುಗೇಟು

    ಇದೇ ವೇಳೆ ಬಿಜೆಪಿ (BJP) ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಸಚಿವರು, ಬಿಜೆಪಿ ಅವರಿಗೆ ಇನ್ನೂ ವಿಪಕ್ಷ ನಾಯಕನ ಆಯ್ಕೆ ಮಾಡಲು ಆಗುತ್ತಿಲ್ಲ. ನಾವು ಕೇವಲ 15 ದಿನಗಳಲ್ಲಿ ಮಂತ್ರಿ ಮಂಡಲ ರಚನೆ ಮಾಡಿ, ನೀಡಿದ ಭರವಸೆಗಳನ್ನು ಈಡೇರಿಸಲು ಮುಂದಾಗಿದ್ದೇವೆ. ಹಾಗಾಗಿ ಬಿಜೆಪಿಯವರಿಗೆ ಸಹಿಸಿಕೊಳ್ಳುವುದಕ್ಕೆ ಆಗದೇ ಹತಾಶಾರಾಗಿ ಈ ರೀತಿ ಹೇಳಿಕೆ ಕೊಡ್ತಿದ್ದಾರೆ ಅಂತಾ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶ್ರಮಜೀವಿಗಳ ಬೆವರಲ್ಲಿ ಬಿಟ್ಟಿ ತಿಂದವರ ಚರ್ಮ ಬೆಳ್ಳಗಿರಬಹುದು – ಪ್ರಿಯಾಂಕ್‌ ಖರ್ಗೆ ತಿರುಗೇಟು

    ಶ್ರಮಜೀವಿಗಳ ಬೆವರಲ್ಲಿ ಬಿಟ್ಟಿ ತಿಂದವರ ಚರ್ಮ ಬೆಳ್ಳಗಿರಬಹುದು – ಪ್ರಿಯಾಂಕ್‌ ಖರ್ಗೆ ತಿರುಗೇಟು

    – ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರಗೆ ತಿರುಗೇಟು

    ಕಲಬುರಗಿ: ಶ್ರಮಜೀವಿಗಳ ಬೆವರಲ್ಲಿ ಬಿಟ್ಟಿ ತಿಂದವರ ಚರ್ಮ ಬೆಳ್ಳಗಿರಬಹುದು ಅಂತಾ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಮಾಜಿ ಸಚಿವ ಆರಗ ಜ್ಞಾನೇಂದ್ರಗೆ (Araga Jnanendra) ತಿರುಗೇಟು ನೀಡಿದ್ದಾರೆ.

    ಬಿಜೆಪಿ ಪ್ರತಿಭಟನೆ (BJP Protest) ವೇಳೆ ʻಕಲ್ಯಾಣ ಕರ್ನಾಟಕ ಭಾಗದವರು ಸುಟ್ಟು ಕರಕಲಾಗಿರುತ್ತಾರೆ. ಖರ್ಗೆಯವರನ್ನ ನೋಡಿದರೆ ಗೊತ್ತಾಗುತ್ತದೆʼ ಎಂದು ಅವಹೇಳನ ಮಾಡಿದ್ದ ಆರಗ ಜ್ಞಾನೇಂದ್ರ ಹೇಳಿಕೆಗೆ ಟ್ವಿಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ಶತ-ಶತಮಾನಗಳಿಂದ ವರ್ಣಾಶ್ರಮದ ಹೆಸರಲ್ಲಿ ಶೋಷಣೆ ನಡೆಸಿ ಶ್ರಮಜೀವಿಗಳ ಬೆವರಲ್ಲಿ ಬಿಟ್ಟಿ ತಿಂದವರ ಚರ್ಮ ಬೆಳ್ಳಗಿರಬಹುದು. ಸ್ವಾಭಿಮಾನದಿಂದ ದುಡಿದು ತಿನ್ನುವವರ ಮೈ ಬಿಸಿಲಲ್ಲಿ ಸುಟ್ಟಿರುತ್ತದೆ ಎಂದು ಕುಟುಕಿದ್ದಾರೆ.

    ಆರಗ ಜ್ಞಾನೇಂದ್ರ ಹೇಳಿಕೆಗೆ ಕಾಂಗ್ರೆಸ್‌ ನಾಯಕರೂ ಕೆಂಡಾಮಂಡಲವಾಗಿದ್ದರು. ಬಿಜೆಪಿ ಶಾಸಕರ ವಿರುದ್ಧ ಕಟು ಮಾತುಗಳಿಂದ ಖಂಡಿಸಿದ್ದರು. ಜೊತೆಗೆ, ಕಾರ್ಯಕರ್ತರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ಇದನ್ನೂ ಓದಿ: ಎರಡನೇ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ವೀಕ್, ಹೈಕಮಾಂಡ್ ಕಂಟ್ರೋಲ್: ಬೊಮ್ಮಾಯಿ

    ಬಿಜೆಪಿ ಶಾಸಕನಿಗೆ ತಮ್ಮದೇ ಧಾಟಿಯಲ್ಲಿ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್‌ ಖರ್ಗೆ, ನೀವು ಆಡಿರುವ ಮಾತು ಬರೀ ನಿಮ್ಮ ಮಾತುಗಳಲ್ಲ. ಕೇಶವ ಕೃಪಾದ ಪ್ರಭಾವದ ಮಾತು, ಬಿಜೆಪಿಯ ಆಂತರ್ಯದೊಳಗೆ ಅಡಗಿದ್ದ ಶೋಷಿತರ ಬಗೆಗಿನ ಅಸಹನೆ ಮಾತು. ಸುಟ್ಟು ಕರಕಲಾಗಿದ್ದು ನಿಮ್ಮ ಬುದ್ಧಿಯೇ ಹೊರತು ಕಲ್ಯಾಣ ಕರ್ನಾಟಕದ ಜನರಲ್ಲ ಎಂದಿದ್ದಾರೆ.  

    ಮನುಸ್ಮೃತಿಯ ವರ್ಣಾಶ್ರಮವನ್ನ ಅಪ್ಪಿ-ಒಪ್ಪಿ ಮುದ್ದಾಡುವ ಬಿಜೆಪಿ, ದಲಿತರ ರಾಜಕೀಯ (Dalit Politics) ಏಳಿಗೆ ಬಗ್ಗೆ ತೀವ್ರ ಅಸಹನೆ ಇರುವುದು ಇಂತಹ ಮಾತುಗಳಿಂದ ಹೊರಬರುತ್ತವೆ. ಕರ್ನಾಟಕ ಬಿಜೆಪಿಯ ಈ ಅಸಹನೆ ಬಿಜೆಪಿಯನ್ನೇ ಸುಟ್ಟು ಕರಕಲು ಮಾಡುತ್ತದೆ. ಏಕೆಂದರೆ ಇದು ಮನುಸ್ಮೃತಿಯ ಕಾಲವಲ್ಲ, ಬಾಬಾಸಾಹೇಬರ ಸಂವಿಧಾನದ ಕಾಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಯುರ್ವೇದ ಔಷಧಿ ಹೆಸರಿನಲ್ಲಿ ಗಾಂಜಾ ಚಾಕೊಲೇಟ್ ಮಾರಾಟ – ಅಪ್ರಾಪ್ತರನ್ನೇ ಟಾರ್ಗೆಟ್‌ ಮಾಡ್ತಿದ್ದ ಗ್ಯಾಂಗ್‌ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆರಗ ಜ್ಞಾನೇಂದ್ರ ಅವರನ್ನು ನಿಮ್ಹಾನ್ಸ್‌ಗೆ ಕಳಿಸೋಣ: ಶಿವಕುಮಾರ್

    ಆರಗ ಜ್ಞಾನೇಂದ್ರ ಅವರನ್ನು ನಿಮ್ಹಾನ್ಸ್‌ಗೆ ಕಳಿಸೋಣ: ಶಿವಕುಮಾರ್

    ನವದೆಹಲಿ: ಖರ್ಗೆ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟಿರುವ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರನ್ನು ನಿಮ್ಹಾನ್ಸ್‌ಗೆ ಕಳಿಸೋಣ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿಚಾರವಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ವಿರುದ್ಧ ಹೇಳಿಕೆಗೆ ಪ್ರತಿಕ್ರಿಯೆ ನೀಡುವಾಗ ಖರ್ಗೆ ಅವರ ಬಣ್ಣ ಮತ್ತು ತಲೆ ಕೂದಲಿನ ಬಗ್ಗೆ ಆರಗ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಬೆಂಗಳೂರಲ್ಲಿ ನಿಮ್ಹಾನ್ಸ್‌ ಆಸ್ಪತ್ರೆ ಉತ್ತಮವಾಗಿದೆ. ಅದು ಫಸ್ಟ್ ಕ್ಲಾಸ್ ಆಗಿದೆ, ಅಲ್ಲಿಗೆ ಆರಗ ಜ್ಞಾನೇಂದ್ರ ಅವರನ್ನು ಕಳುಹಿಸೋಣ ಎಂದಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಮತಗಳಿಂದ ಜೆಡಿಎಸ್‌ಗೆ ಈ ಬಾರಿ ಸೋಲಾಗಿಲ್ಲ: ಸಿಎಂ ಇಬ್ರಾಹಿಂ

    ಮಂತ್ರಿಗಳು ಸೇರಿ ಕರ್ನಾಟಕದ ಸುಮಾರು 50 ಮಂದಿ ನಾಯಕರ ಸಭೆಯನ್ನು ವರಿಷ್ಠರು ಕರೆದಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರು ಎಲ್ಲಾ ರಾಜ್ಯದ ಮುಖಂಡರ ಸಭೆ ನಡೆಸುತ್ತಿದ್ದಾರೆ. ಕರ್ನಾಟಕದ ಸಭೆ ವಿಶೇಷವೇನಲ್ಲ. ಹಿಂದೆಯೇ ಬೆಂಗಳೂರಲ್ಲಿ ಸಭೆ ನಡೆಯಬೇಕಿತ್ತು. ರಾಹುಲ್ ಗಾಂಧಿ ಅವರ ಜೊತೆ ಎಲ್ಲಾ ಮಂತ್ರಿಗಳ ಫೋಟೋ ಸೆಷನ್ ಕೂಡ ಇತ್ತು. ಉಮಾನ್ ಚಾಂಡಿ ಅವರ ನಿಧನದ ಹಿನ್ನೆಲೆಯಲ್ಲಿ ಆ ಸಭೆ ರದ್ದಾಗಿತ್ತು. ಅದು ಈಗ ದೆಹಲಿಯಲ್ಲಿ ನಡೆಯುತ್ತಿದೆ. ಸಚಿವರ ಪ್ರತ್ಯೇಕ ಸಭೆ ಕೂಡ ನಡೆಯಲಿದೆ. ಲೋಕಸಭೆ ಚುನಾವಣೆ, ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚೆ ಆಗಲಿದೆ ಎಂದಿದ್ದಾರೆ.

    ಬೆಂಗಳೂರು ವಾಹನ ಸಂಚಾರ ದಟ್ಟಣೆ ನಿವಾರಣೆಗೆ ಸುರಂಗ ರಸ್ತೆ, ಮೇಲು ಸೇತುವೆ ರಸ್ತೆ ನಿರ್ಮಾಣ ಸಂಬಂಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಬಳಿ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮೂರನೇ ಪರ್ಯಾಯ ಶಕ್ತಿ ಸ್ಥಾಪನೆಗೆ ಮುಸ್ಲಿಂ ಸಂಘಗಳ ಪ್ರವಾಸ- ಸಿಎಂ ಇಬ್ರಾಹಿಂ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅರಣ್ಯವೇ ಇಲ್ಲದ ಪ್ರದೇಶದವರು ಅರಣ್ಯ ಸಚಿವರಾಗಿದ್ದಾರೆ: ಖಂಡ್ರೆ, ಖರ್ಗೆ ಬಗ್ಗೆ ಆರಗ ಜ್ಞಾನೇಂದ್ರ ಅವಹೇಳನ

    ಅರಣ್ಯವೇ ಇಲ್ಲದ ಪ್ರದೇಶದವರು ಅರಣ್ಯ ಸಚಿವರಾಗಿದ್ದಾರೆ: ಖಂಡ್ರೆ, ಖರ್ಗೆ ಬಗ್ಗೆ ಆರಗ ಜ್ಞಾನೇಂದ್ರ ಅವಹೇಳನ

    ಶಿವಮೊಗ್ಗ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ (Eshwara Khandre) ಅವರ ಬಗ್ಗೆ ಅವಹೇಳನ ಮಾಡಿದ್ದಾರೆ.

    ಶಿವಮೊಗ್ಗ (Shivamogga) ಜಿಲ್ಲೆ ತೀರ್ಥಹಳ್ಳಿಯ ತಾಲೂಕು ಕಚೇರಿ ಎದುರು ಮಂಗಳವಾರ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಆರಗ ಜ್ಞಾನೇಂದ್ರ, ಅರಣ್ಯವೇ ಇಲ್ಲದ ಪ್ರದೇಶದವರು ಅರಣ್ಯ ಸಚಿವರಾಗುವುದು ನಮ್ಮ ದುರದೃಷ್ಟ. ಬೀದರ್ ಮೂಲದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮರಗಿಡ ಎಂದರೆ ಏನು? ನೆರಳು ಎಂದರೆ ಏನು? ಎಂಬುದೇ ಗೊತ್ತಿಲ್ಲ. ಮಲೆನಾಡಿನವರ ಬದುಕು, ಪಶ್ಚಿಮ ಘಟ್ಟದವರ ಸಮಸ್ಯೆ ಬಗ್ಗೆ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಕಸ್ತೂರಿರಂಗನ್ ವರದಿ ಜಾರಿಗೆ ಸರ್ಕಾರ ಬದ್ಧ ಎಂದು ಹೇಳಿಲ್ಲ: ಈಶ್ವರ ಖಂಡ್ರೆ

    ಆ ಭಾಗದವರು ಸುಟ್ಟು ಕರಕಲಾಗಿರುತ್ತಾರೆ. ಖರ್ಗೆ ಅವರನ್ನು ನೋಡಿದರೆ ಅಲ್ಲಿನವರ ಸ್ಥಿತಿ ಗೊತ್ತಾಗುತ್ತದೆ. ಇನ್ನು ಖಂಡ್ರೆ ಅವರ ತಲೆಕೂದಲು ಮುಚ್ಚಿಕೊಂಡಿದ್ದರಿಂದ ಉಳಿದುಕೊಂಡಿದ್ದಾರೆ. ಅದೇ ಅವರ ನೆರಳು ಎಂದು ಜ್ಞಾನೇಂದ್ರ ನಾಲಿಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ:  ಸೌಜನ್ಯ ಕೇಸ್ – ಸುಳ್ಳು ಹೇಳಿಕೆ, ವದಂತಿಗಳಿಗೆ ಗೊಂದಲಕ್ಕೀಡಾಗಬೇಡಿ: ವೀರೇಂದ್ರ ಹೆಗ್ಗಡೆ ಬೇಸರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವುದೇ ಕ್ರಮ ಕೈಗೊಂಡಿಲ್ಲ, ಈಗ ಬಿಜೆಪಿ ಮೇಲೆ ಗೂಬೆ ಕೂರಿಸ್ತಿದೆ: ಆರಗ ಜ್ಞಾನೇಂದ್ರ

    ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವುದೇ ಕ್ರಮ ಕೈಗೊಂಡಿಲ್ಲ, ಈಗ ಬಿಜೆಪಿ ಮೇಲೆ ಗೂಬೆ ಕೂರಿಸ್ತಿದೆ: ಆರಗ ಜ್ಞಾನೇಂದ್ರ

    – ಒಳಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ ನಾಯಕರ ಮೊಸಳೆ ಕಣ್ಣೀರು

    ಬೆಂಗಳೂರು: ಶಿವಮೊಗ್ಗ (Shivamogga) ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ಸ್ಥಳೀಯ ಬಂಜಾರಾ ಸಮುದಾಯದ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ, ಗೃಹಸಚಿವ ಆರಗ ಜ್ಞಾನೇಂದ್ರ (Araga Jnanendra) ಮಂಗಳವಾರ ಶಿಕಾರಿಪುರಕ್ಕೆ ತೆರಳಿ, ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಬಗ್ಗೆ ಅವಲೋಕನ ನಡೆಸಿದರು.

    ಲೋಕಸಭಾ ಸದಸ್ಯ ಬಿವೈ ರಾಘವೇಂದ್ರ, ಜಿಲ್ಲಾ ಪೋಲಿಸ್ ಮುಖ್ಯಸ್ಥ ಮಿಥುನ್ ಕುಮಾರ್ ಸೇರಿದಂತೆ ಸ್ಥಳೀಯ ಅಧಿಕಾರಿಗಳೂ ಉಪಸ್ಥಿತರಿದ್ದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಶಿಕಾರಿಪುರ ಪಟ್ಟಣದಲ್ಲಿ ಪರಿಸ್ಥಿತಿ ತಿಳಿಯಾಗಿದೆ. ಯಾವುದೇ ಅಹಿತಕರ ಘಟನೆ ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

    ಪ್ರತಿಭಟನೆಗೆ ಸಂಬಂಧಿಸಿದಂತೆ ಉತ್ತರಿಸಿದ ಸಚಿವರು, ಸರ್ಕಾರ ಪರಿಶಿಷ್ಠ ಜಾತಿ ಸಮುದಾಯಗಳಿಗೆ ಒಳಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸದಾಶಿವ ಆಯೋಗದ ಶಿಫಾರಸುಗಳನ್ನು ಅನುಷ್ಠಾನ ಮಾಡಿಲ್ಲ. ಈ ಕುರಿತು ವಿರೋಧಪಕ್ಷದ ನಾಯಕರು ಅಪಪ್ರಚಾರ ನಡೆಸಿ, ರಾಜಕೀಯ ಬೇಳೆ ಬೇಯಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಂಜಾರ ಸಮುದಾಯದ ಅಭಿವೃದ್ಧಿಗೆ ಬಿಎಸ್‌ವೈ ಸಾಕಷ್ಟು ಕೊಡುಗೆ ನೀಡಿದ್ದಾರೆ- ಆರಗ

    ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ ನಾಯಕರು ಪರಿಶಿಷ್ಠ ಜಾತಿ ಪಂಗಡಗಳ ಮಧ್ಯೆ ಒಡಕು ಮೂಡಿಸಲು ಯತ್ನಿಸುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಯಾವುದೇ ಕ್ರಮಕ್ಕೆ ಮುಂದಾಗದೆ ನ್ಯಾಯ ಒದಗಿಸಲು ವಿಫಲರಾದ ವಿರೋಧ ಪಕ್ಷದ ನಾಯಕರು ಒಳ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಆರೋಪಿಸಿದರು.

    ಒಳಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಕ್ತವಾಗಿ ಚರ್ಚೆ ನಡೆಸಲು ಸಿದ್ಧರಿದ್ದು, ಯಾವುದೇ ಕಾರಣಕ್ಕೂ ಯಾರೇ ಆಗಲಿ, ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: 9 ಹೊಸ ವಿಶ್ವವಿದ್ಯಾಲಯ ಉದ್ಘಾಟಿಸಿದ ಸಿಎಂ

  • ಬಂಜಾರ ಸಮುದಾಯದ ಅಭಿವೃದ್ಧಿಗೆ ಬಿಎಸ್‌ವೈ ಸಾಕಷ್ಟು ಕೊಡುಗೆ ನೀಡಿದ್ದಾರೆ- ಆರಗ

    ಬಂಜಾರ ಸಮುದಾಯದ ಅಭಿವೃದ್ಧಿಗೆ ಬಿಎಸ್‌ವೈ ಸಾಕಷ್ಟು ಕೊಡುಗೆ ನೀಡಿದ್ದಾರೆ- ಆರಗ

    ಶಿವಮೊಗ್ಗ: ಬಂಜಾರ ಜನಾಂಗದ ಬಗ್ಗೆ ಯಡಿಯೂರಪ್ಪನವರಿಗೆ (B.S.Yediyurappa) ವಿಶೇಷವಾದ ಕಾಳಜಿಯಿದೆ. ಯಡಿಯೂರಪ್ಪನವರು ಬಂಜಾರ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.

    ಶಿಕಾರಿಪುರದಲ್ಲಿರುವ (Shikaripura) ಬಿಎಸ್‌ವೈ ನಿವಾಸದ ಮೇಲೆ ಕಲ್ಲುತೂರಾಟ ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿದೆ. ಹೀಗಿದ್ದರೂ ಯಡಿಯೂರಪ್ಪನವರು ಕಲ್ಲು ತೂರಾಟ ನಡೆಸಿದವರ ಮೇಲೆ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದಿದ್ದಾರೆ. ಅಲ್ಲದೇ ಬಂಜಾರ ಸಮುದಾಯದವರ ಜೊತೆಗೂ ಮಾತನಾಡುತ್ತೇನೆ ಎಂದಿದ್ದಾರೆ. ಯಾರೋ ಕೆಲವರ ತಪ್ಪು ತಿಳುವಳಿಕೆ ಹಾಗೂ ಪ್ರಚೋದನೆಯಿಂದ ಈ ಘಟನೆ ನಡೆದಿದೆ. ರೌಡಿಲಿಸ್ಟ್‌ನಲ್ಲಿರುವ ಕೆಲವು ಜನರು ಸೇರಿ ಪ್ರಕರಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಬಂಜಾರಾ, ಕೊರಚ, ಕೊರಮ, ಬೋವಿ ಶಾಶ್ವತವಾಗಿ ಎಸ್‌ಸಿ ಪಟ್ಟಿಯಲ್ಲಿರುತ್ತದೆ- ಪಿ.ರಾಜೀವ್ 

    ಬಂಜಾರ ಸಮುದಾಯದ (Banjara Community) ಕಾರ್ಯಕರ್ತರು ಬಹಳ ದೊಡ್ಡ ರೀತಿಯಲ್ಲಿ ದೊಂಬಿ ಎಬ್ಬಿಸಿ ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ. ಪೊಲೀಸರ ಮೇಲೂ ಹಲ್ಲೆ ನಡೆದಿರುವುದು ನನಗೆ ನೋವಾಗಿದೆ. ಪೊಲೀಸರು ತಕ್ಷಣ ಇದನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು. ಯಾರೂ ಕೂಡಾ ಪ್ರಚೋದನೆಗೆ ಒಳಗಾಗಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಜೈ ಶ್ರೀರಾಮ್ ಎನ್ನದ್ದಕ್ಕೆ ಥಳಿಸಿ, ಗಡ್ಡ ಕತ್ತರಿಸಿದ್ರು

    ರಾಜ್ಯ ಸರ್ಕಾರ ಜಾರಿಗೊಳಿಸಿರುವ ಯೋಜನೆ ಎಲ್ಲಾ ಸಮುದಾಯಕ್ಕೆ ಅನುಕೂಲವಾಗಲಿದೆ. ಆದರೆ ಅದನ್ನು ಅಧ್ಯಯನ ಮಾಡಿ ನೋಡಬೇಕು. ಚರ್ಚೆ ಮಾಡಬೇಕು. ಕಾನೂನು ಕೈಗೆತ್ತಿಕೊಂಡರೆ ಕ್ರಮ ತೆಗೆದುಕೊಳ್ಳಲಾಗುತ್ತದೆ, ಶಿಕ್ಷೆಯಾಗುತ್ತದೆ. ಇದು ಇಲ್ಲಿಗೆ ನಿಲ್ಲಲಿ ಎಂದು ಹೇಳಿದರು. ಇದನ್ನೂ ಓದಿ: ಜೆಡಿಎಸ್ ಜೊತೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ : ಸಿ.ಟಿ. ರವಿ