Tag: Araga Jnanendra

  • ರಾಹುಲ್ ಗಾಂಧಿ ಅಜ್ಜಿಯೇ ಮತಗಳ್ಳತನದಿಂದ ಗೆದ್ದಿದ್ರು: ಆರಗ ಜ್ಞಾನೇಂದ್ರ

    ರಾಹುಲ್ ಗಾಂಧಿ ಅಜ್ಜಿಯೇ ಮತಗಳ್ಳತನದಿಂದ ಗೆದ್ದಿದ್ರು: ಆರಗ ಜ್ಞಾನೇಂದ್ರ

    ಶಿವಮೊಗ್ಗ: ಕಾಂಗ್ರೆಸ್‍ಗೆ (Congress) ಮತಗಳ್ಳತನದ ಹಿನ್ನೆಲೆ ಬಹಳ ಹಿಂದಿನಿಂದಲೂ ಇದೆ. ರಾಹುಲ್ ಗಾಂಧಿಯವರ (Rahul Gandhi) ಅಜ್ಜಿಯೇ (Indira Gandhi) ಇದರಿಂದ ಗೆದ್ದಿದ್ದರು ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ (Araga Jnanendra) ಆರೋಪಿಸಿದ್ದಾರೆ.

    ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಮತಗಳ್ಳತನ ಆರೋಪ ಮಾಡಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿರುವ ರಾಹುಲ್ ಗಾಂಧಿಯವರ ವಿಚಾರಕ್ಕೆ ಪ್ರತಿಕ್ರಿಯಿಸಿದರು. ದೇಶದ ತುರ್ತು ಪರಿಸ್ಥಿತಿಗೂ ಮೊದಲೇ ಮತಗಳ್ಳತನ ನಡೆದಿದೆ. ರಾಯ್‍ಬರೇಲಿಯಲ್ಲಿ ರಾಜ್ ನಾರಾಯಣ್ ವಿರುದ್ಧ ಇಂದಿರಾ ಗಾಂಧಿ ಮತಗಳ್ಳತನದಿಂದ ಗೆದ್ದಿದ್ದರು. ಈಗ ರಾಹುಲ್ ಅವರು ಪ್ರಚಾರಕ್ಕಾಗಿ ಮತಗಳ್ಳತನದ ಆರೋಪ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ ತಿರುಗೇಟುಕೊಟ್ಟಿದ್ದಾರೆ. ಇದನ್ನೂ ಓದಿ: ಸಂವಿಧಾನ, ಮತದಾನದ ಹಕ್ಕು ರಕ್ಷಣೆಗಾಗಿ ರಾಹುಲ್ ಗಾಂಧಿ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಡಿಕೆಶಿ

    ಅಲಹಾಬಾದ್ ಹೈಕೋರ್ಟ್ ಇಂದಿರಾಗಾಂಧಿಯವರ ಸದಸ್ಯತ್ವ ರದ್ದು ಮಾಡಿತ್ತು. ಆಗ ಅವರು ಸುಪ್ರೀಂ ಕೋರ್ಟ್‍ಗೆ ಹೋಗಿದ್ದರು. ಅಲಹಾಬಾದ್ ಕೋರ್ಟ್ ತೀರ್ಪನ್ನ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಸುಪ್ರೀಂ ಕೋರ್ಟ್ ಹೇಳಿದ್ರೂ ಅಧಿಕಾರದಿಂದ ಅವರು ಕೆಳಗೆ ಇಳಿಯಲಿಲ್ಲ. ತುರ್ತು ಪರಿಸ್ಥಿತಿ ಹೇರಿ ದಬ್ಬಾಳಿಕೆ ಮಾಡಿದ್ರು. ಪ್ರಜಾಪ್ರಭುತ್ವದ ಕತ್ತು ಹಿಸುಕಿದ್ದು ಕಾಂಗ್ರೆಸ್, ರಾಹುಲ್ ಇದನ್ನ ಅರ್ಥ ಮಾಡಿಕೊಳ್ಳಲಿ. 50 ವರ್ಷ ಆಗಿದೆ, ದೇಶದ ಜನರಿಗೂ ಮರೆತು ಹೋಗಿದೆ ಎಂದು ಅವರು ಭಾವಿಸಿದ್ದಾರೆ.

    ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡೋಕೆ ನಾಚಿಕೆ ಆಗಬೇಕು. ಚುನಾವಣೆ ಬಳಿಕ ತಕ್ಷಣ ಆಕ್ಷೇಪ ಸಲ್ಲಿಸಲು ಅವಕಾಶವಿತ್ತು. ಇವರ ಬಿಎಲ್‍ಎಗಳು ಮತಗಟ್ಟೆಗಳಲ್ಲಿ ಏನು ಮಾಡುತ್ತಿದ್ದರು? ಮತಗಟ್ಟೆಗಳಲ್ಲಿ ಬಿಎಲ್‍ಎ ನೇಮಕಕ್ಕೆ ಚುನಾವಣಾ ಆಯೋಗ ಅವಕಾಶ ನೀಡಿತ್ತು ಆಗ ಯಾರು ತಕರಾರು ಮಾಡಿಲ್ಲ. ಚುನಾವಣೆ ಮುಗಿದ ಮೂರು ತಿಂಗಳವರೆಗೆ ತಕರಾರು ಸಲ್ಲಿಸಲು ಅವಕಾಶವಿತ್ತು. ಆಪಾದನೆ ನಂತರದಲ್ಲೂ ಚುನಾವಣಾ ಆಯೋಗ ಅಫಿಡವಿಟ್ ಸಲ್ಲಿಸಲು ಹೇಳಿದೆ. ಇವರು ಅಫಿಡವಿಟ್ ಸಲ್ಲಿಸಲು ಸಿದ್ಧರಿಲ್ಲ. ರಾಹುಲ್ ಹೇಳುವ ಮಾತುಗಳಲ್ಲಿ ಅವರಿಗೆ ನಂಬಿಕೆ ಇಲ್ಲ. ಜನರ ಕಿವಿಗೆ ಹೂ ಇಡುವ ಕೆಲಸ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ರಾಜ್ಯದ ಮಹದೇವಪುರ ಕ್ಷೇತ್ರದಲ್ಲಿ ಅಕ್ರಮ ನಡದಿದೆ ಅಂತಾರೆ. ಆಗ ಇಲ್ಲಿ ಯಾವ ಸರ್ಕಾರ ಇತ್ತು? ಇವರ ಅಧಿಕಾರಿಗಳೇ ಇದ್ದರಲ್ವಾ? ಸಿಎಂ ಹಾಗೂ ಇವರ ಅಡಳಿತದ ವಿರುದ್ಧವೇ ರಾಹುಲ್ ಗಾಂಧಿ ಪ್ರತಿಭಟನೆ ಮಾಡ್ತಿದ್ದಾರಾ? ನಿಜಕ್ಕೂ ಸರ್ಕಾರ ವಿಸರ್ಜನೆ ಮಾಡಬೇಕಾದವರು ಸಿದ್ದರಾಮಯ್ಯ. ನಿಮ್ಮ ಸರ್ಕಾರದ ವಿರುದ್ಧವೇ ರಾಹುಲ್ ಕಪಾಳಕ್ಕೆ ಹೊಡೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಚುನಾವಣಾ ಆಯೋಗ ಬಿಜೆಪಿಯ ಬ್ರ್ಯಾಂಚ್‌ ಆಫೀಸ್‌: ಸಿದ್ದರಾಮಯ್ಯ

  • ಖಜಾನೆ ತುಂಬಿರೋ ಸರ್ಕಾರಕ್ಕೆ ಸಾರಿಗೆ ನೌಕರರ ಸಮಸ್ಯೆ ಪರಿಹರಿಸಲು ಕಷ್ಟ ಯಾಕೆ? ಆರಗ ಜ್ಞಾನೇಂದ್ರ

    ಖಜಾನೆ ತುಂಬಿರೋ ಸರ್ಕಾರಕ್ಕೆ ಸಾರಿಗೆ ನೌಕರರ ಸಮಸ್ಯೆ ಪರಿಹರಿಸಲು ಕಷ್ಟ ಯಾಕೆ? ಆರಗ ಜ್ಞಾನೇಂದ್ರ

    ಬೆಂಗಳೂರು: ಸರ್ಕಾರದ ಖಜಾನೆ ತುಂಬಿ ತುಳುಕುತ್ತಿದೆ ಅಂತಿರೋರಿಗೆ ನೌಕರರ ಸಮಸ್ಯೆ ಪರಿಹಾರ ಮಾಡೋಕೆ ಯಾಕೆ ಆಗ್ತಿಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಕಿಡಿಕಾರಿದ್ದಾರೆ.

    ಸಾರಿಗೆ ನೌಕರರ ಮುಷ್ಕರದ (Transport Employees Strike) ಬಗ್ಗೆ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯೆ ನೀಡಿದ ಅವರು, ಸಾರಿಗೆ ನೌಕರರ ಜೊತೆ ಸರ್ಕಾರ ಮಾತುಕತೆ ನಡೆಸುವಲ್ಲಿ ವಿಫಲವಾಗಿದೆ. ಹಿಂದೆ ಯಡಿಯೂರಪ್ಪ ಇದ್ದಾಗ ಇದೇ ಸಿದ್ದರಾಮಯ್ಯ ನಮಗೆ ಪ್ರಶ್ನೆ ಮಾಡಿದ್ರು. ಸಾರಿಗೆ ನೌಕರರ ಮೇಲೆ ಎಸ್ಮಾ ಹಾಕಿ ಹೆದರಿಸಿದ್ರು. ನಿನ್ನ ಕುರ್ಚಿ ಎಷ್ಟು ಶಾಶ್ವತ ಎಂದು ತಿಳಿದುಕೊಂಡಿದ್ದೀಯಾ ಅಂತಾ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದರು. ಈಗ ನಾನು ಸಿದ್ದರಾಮಯ್ಯಗೆ (Siddaramaiah) ಪ್ರಶ್ನೆ ಮಾಡ್ತೀನಿ.ನೀವು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೀರಾ ಎಂದುಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ಪರಿಸ್ಥಿತಿಯನ್ನೂ ಸಾರಿಗೆ ನೌಕರರು ಅರ್ಥಮಾಡಿಕೊಳ್ಳಬೇಕು: ಡಿಕೆಶಿ

    ನೀವು ಫ್ರೀ ಅಂತಾ ನೌಕರರಿಗೆ ಸಂಬಳವನ್ನೇ ಕೊಡುತ್ತಿಲ್ಲ. ನೌಕರರನ್ನು ಕರೆದು ಮಾತಾಡಿ ಸಮಸ್ಯೆ ಬಗೆಹರಿಸಬೇಕಿತ್ತು. ಇದರಿಂದ ಜನರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಾರಿಗೆ ಮುಷ್ಕರ | ಇದು ಪಾಪರ್‌ ಸರ್ಕಾರ, ಪರಿಹಾರ ಕೊಡದಿದ್ರೆ ಅಧಿಕಾರ ಬಿಟ್ಟು ತೊಲಗಿ – ಅಶೋಕ್‌ ವಾಗ್ದಾಳಿ

    ಖಾಸಗಿ ಬಸ್‌ನವರು ಹೆಚ್ಚು ಹಣ ವಸೂಲಿ ಮಾಡ್ತಿದ್ದಾರೆ. ಜನಸಾಮಾನ್ಯರ ಹಣ ವ್ಯರ್ಥ ಆಗ್ತಿದೆ. ಇದಕ್ಕೆ ಕಡಿವಾಣ ಹಾಕಲು ತಕ್ಷಣವೇ ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲದಕ್ಕೂ ನಮ್ಮ ಮೇಲೆ ಬೆರಳು ತೋರಿಸ್ತಾರೆ. ಅವರು ಮಾಡಿದನ್ನು ನಾವು ತೀರಿಸಿದ್ದೇವೆ ಎನ್ನುತ್ತಾರೆ. ಹೌದಪ್ಪ ನಾವು ಕೆಟ್ಟದನ್ನು ಮಾಡಿದ್ದೇವೆ. ಜನ ನಮ್ಮನ್ನು ಸೋಲಿಸಿದ್ದಾರೆ. ನಿಮ್ಮನ್ನು ಗೆಲ್ಲಿಸಿದ್ದಾರಲ್ಲ ನೀವು ಅವರಿಗೆ ಒಳ್ಳೆಯದು ಮಾಡಬೇಕಿತ್ತಲ್ಲ. ಖಜಾನೆ ತುಂಬಿ ತುಳುಕುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ರಿ. ಈಗ ಹಣ ಇಲ್ಲ ಅಂತೀರಲ್ಲ. ನುಡಿದಂತೆ ನಡೆದಿದ್ದೇವೆ ಅಂತೀರಲ್ಲ ಇದೇನಾ ನಿಮ್ಮ ಮಾತು. ಗ್ರಾಮೀಣ ಭಾಗದಲ್ಲಿ ತುಂಬಾ ಸಮಸ್ಯೆ ಆಗಿದೆ. ಕೂಡಲೇ ಸಮಸ್ಯೆ ಪರಿಹಾರ ಮಾಡಿ ಎಂದು ಆಗ್ರಹಿಸಿದ್ದಾರೆ.

  • ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆ ಸರ್ಕಾರದ ಪ್ರಾಯೋಜಿತ ಕೊಲೆ: ಅರಗ ಜ್ಞಾನೇಂದ್ರ

    ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆ ಸರ್ಕಾರದ ಪ್ರಾಯೋಜಿತ ಕೊಲೆ: ಅರಗ ಜ್ಞಾನೇಂದ್ರ

    – ಸಿಎಂ, ಡಿಸಿಎಂ, ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಬೇಕು

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ (Chinnaswamy Stampede) ಘಟನೆ ಸರ್ಕಾರದ ಪ್ರಾಯೋಜಿತ ಕೊಲೆ. ಸಿಎಂ, ಡಿಸಿಎಂ, ಗೃಹ ಸಚಿವರೇ ನೇರ ಹೊಣೆ. ಕೂಡಲೇ ಮೂವರೂ ರಾಜೀನಾಮೆ ಕೊಡಬೇಕು ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ (Araga Jnanendra) ಆಗ್ರಹಿಸಿದರು.

    ಘಟನೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚಿನ್ನಸ್ವಾಮಿ ಘಟನೆಗೆ ರಾಜ್ಯ ಸರ್ಕಾರವೇ ಕಾರಣ. ಸಿಎಂ, ಡಿಸಿಎಂ, ಗೃಹ ಸಚಿವರು ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ಈ ಮೂರೂ ಜನ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಆತುರದ ನಿರ್ಧಾರದಿಂದ ತಪ್ಪು ಮಾಡಿದ್ದೇವೆ, ತಡವಾಗಿ ವಿಜಯೋತ್ಸವ ಆಚರಣೆ ಮಾಡ್ಬೋದಿತ್ತು: ಇಕ್ಬಾಲ್ ಹುಸೇನ್

    ನಾನು ಗೃಹ ಸಚಿವ ಇದ್ದಾಗ ಪುನೀತ್ ರಾಜ್‌ಕುಮಾರ್ ನಿಧನರಾಗಿದ್ದಾಗ ನಾವು ಹೇಗೆ ನಿಭಾಯಿಸಿದ್ದೆವು. 20 ಲಕ್ಷ ಜನರನ್ನು ನಾವು ನಿಭಾಯಿಸಿದ್ದೆವು. ಇವರಿಂದ ಚಿನ್ನಸ್ವಾಮಿ ಪ್ರಕರಣ ನಿಭಾಯಿಸಲು ಆಗಿಲ್ಲ. ಪೊಲೀಸರು ಬೇಡ ಅಂದರೂ ಇವರು ಕಾರ್ಯಕ್ರಮ ಮಾಡಿದರು. ನಿಮ್ಮ ಮಕ್ಕಳು, ಮೊಮ್ಮಕ್ಕಳು ಫೋಟೋ ಸೆಷನ್‌ಗೆ ಈ ಕಾರ್ಯಕ್ರಮ ಮಾಡಿದ್ರಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ – ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಬಾಂಬ್‌

    ಈ ಘಟನೆಗೂ ಪ್ರಯಾಗ್ ರಾಜ್ ಘಟನೆಗೂ ಹೋಲಿಕೆ ಸರಿಯಲ್ಲ. ಈ ಪ್ರಕರಣದಲ್ಲಿ ಎ1 ಸಿಎಂ, ಎ2 ಡಿಸಿಎಂ, ಎ3 ಗೃಹ ಸಚಿವರು. ಇದು ಸರ್ಕಾರದ ಪ್ರಯೋಜಿತ ಕೊಲೆ. 11 ಜನರನ್ನು ಈ ಸರ್ಕಾರ ಕೊಲೆ ಮಾಡಿದೆ. ಇವರ ತಪ್ಪು ಮುಚ್ಚಿಕೊಳ್ಳೋಕೆ ಪೊಲೀಸರನ್ನ ಅಮಾನತು ಮಾಡಿದ್ದೀರಾ. ಈ ಘಟನೆಗೆ ಸಿಎಂ, ಡಿಸಿಎಂ, ಗೃಹ ಸಚಿವರು ಬೆಲೆ ತೆರಬೇಕು. ವಿಪಕ್ಷವಾಗಿ ನಾವು ಮಾತಾಡಿದ್ರೆ ಅದನ್ನು ರಾಜಕೀಯ ಅಂತೀರಾ. ನೀವು ಮಾಡಿದ್ದೆಲ್ಲ ಸರಿ ಅಂತ ನಾವು ಬಿಡಬೇಕಾ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಗೋವಿಂದರಾಜ್ ವಿರುದ್ಧ ಕ್ರಮ – ಅಷ್ಟಾದ್ರೂ ಜ್ಞಾನೋದಯ ಆಗಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆ: ಹೆಚ್‍ಡಿಕೆ ವ್ಯಂಗ್ಯ

    ರಾಜ್ಯಪಾಲರು, ಸಿಎಂ,ಡಿಸಿಎಂ ಇದ್ದ ಕಾರ್ಯಕ್ರಮದಲ್ಲಿ ಪ್ರೊಟೋಕಾಲ್ ಇರಲಿಲ್ಲ. ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಇವರು ಬ್ಯುಸಿ ಆಗಿದ್ದರು. ಘಟನೆ ಆದ ಕೂಡಲೇ ಇವರು ರಾಜೀನಾಮೆ ಕೊಟ್ಟು ಜನರ ಕ್ಷಮೆ ಕೇಳಬೇಕಿತ್ತು. ಅಧಿಕಾರಿಗಳು ಬಂದೋಬಸ್ತ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರೂ ಇವರು ಕಾರ್ಯಕ್ರಮ ಮಾಡಿದ್ದಾರೆ ಎಂದು ಆರೋಪ ಮಾಡಿದರು. ಇದನ್ನೂ ಓದಿ: ಬೆಂಗಳೂರು | ಕಾಲ್ತುಳಿತದಲ್ಲಿ 11 ಜನ ಸಾವು ಪ್ರಕರಣ – ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು

    ಪಹಲ್ಗಾಮ್ ಘಟನೆ ಬಗ್ಗೆ ಭದ್ರತಾ ಲೋಪ ಎಂದಿದ್ದರು. ಅದಕ್ಕೂ ಇದಕ್ಕೂ ಹೋಲಿಗೆ ಮಾಡಬಾರದಿತ್ತು. ಕಾರ್ಯಕ್ರಮ ಮುಂದೂಡುವ ಅವಕಾಶ ಇತ್ತು. ಕಾರ್ಯಕ್ರಮಕ್ಕೆ ನೀವೆ ಕರೆದಿದ್ದು. ಡಿಕೆ ಶಿವಕುಮಾರ್ ಗೃಹ ಇಲಾಖೆಯ ಮಂತ್ರಿಯನ್ನ ನಿರ್ಲಕ್ಷ್ಯ ಮಾಡಿದ್ದಾರೆ. ಅವರವರ ರಾಜಕೀಯಕ್ಕೆ ಜನ ಬಲಿಯಾಗಿದ್ದಾರೆ. ಬೆಂಗಳೂರಲ್ಲಿ ನನ್ನನ್ನ ಕೇಳದೆ ಏನು ಮಾಡಬಾರದು ಎಂಬ ಮನಸ್ಥಿತಿ ಡಿಕೆ ಶಿವಕುಮಾರ್ ಅವರದ್ದು. ಚಿನ್ನಸ್ವಾಮಿ ಘಟನೆ ತನಿಖೆಗೆ ನ್ಯಾ.ಕುನ್ಹಾ ನೇಮಕಕ್ಕೂ ವಿರೋಧ ಮಾಡಿದ ಅವರು, ಕುನ್ಹಾ ಒಬ್ಬರೇ ಅಲ್ಲಾ ನಿವೃತ್ತ ನ್ಯಾಯಾಧೀಶರು ಇರೋದು. ಬಹಳ ಜನ ರಿಟೈರ್ಡ್ ಜಡ್ಜ್ ಇದ್ದಾರೆ. ಹಾಲಿ ಜಡ್ಜ್ರಿಂದ ಪ್ರಕರಣ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬೆಂಗಳೂರು ಕಾಲ್ತುಳಿದಲ್ಲಿ RCB ಅಭಿಮಾನಿ ಸಾವು – ಮಗನ ಸಮಾಧಿ ಮೇಲೆ ಮಲಗಿ ತಂದೆ ಗೋಳಾಟ

  • ಎಸ್‍ಎಂಕೆ ಬೆಂಗ್ಳೂರನ್ನು ಸಿಂಗಾಪುರ ಮಾಡುವ ಕನಸು ಕಂಡಿದ್ದರು: ಆರಗ ಜ್ಞಾನೇಂದ್ರ

    ಎಸ್‍ಎಂಕೆ ಬೆಂಗ್ಳೂರನ್ನು ಸಿಂಗಾಪುರ ಮಾಡುವ ಕನಸು ಕಂಡಿದ್ದರು: ಆರಗ ಜ್ಞಾನೇಂದ್ರ

    ಶಿವಮೊಗ್ಗ: ಮಾಜಿ ಸಿಎಂ ಎಸ್.ಎಂ ಕೃಷ್ಣ (S.M Krishna) ಅವರು ಬೆಂಗಳೂರನ್ನು (Bengaluru) ಸಿಂಗಾಪುರ ಮಾಡುವ ಕನಸು ಕಂಡಿದ್ದರು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.

    ಈ ಬಗ್ಗೆ ಅವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಎಸ್.ಎಂ ಕೃಷ್ಣ ಅವರ ಅಗಲಿಕೆಯಿಂದ ನೋವಾಗಿದೆ. ಅವರು ಒಬ್ಬ ಸಜ್ಜನ ರಾಜಕಾರಣಿ ಆಗಿದ್ದರು. ಅವರ ಪತ್ನಿ ಪ್ರೇಮಾ ತೀರ್ಥಹಳ್ಳಿಯವರು, ಅವರು ಇಲ್ಲಿನ ಅಳಿಯ. ಈ ಹಿನ್ನಲೆಯಲ್ಲಿ ನನ್ನ ಮೇಲೆ ವಿಶೇಷ ಪ್ರೀತಿ ಅವರಿಗೆ ಇತ್ತು ಎಂದಿದ್ದಾರೆ.

    ಕ್ಷೇತ್ರದ ಯಾವುದೇ ಕಾಮಗಾರಿ ಇದ್ದರೂ ಅವರು ಅನುದಾನ ನೀಡುತ್ತಿದ್ದರು. ರಾಜ್ಯದ ಸಿಎಂ ಆಗಿ ಎಲ್ಲರೂ ನೆನಪು ಇರುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಬೆಂಗಳೂರನ್ನು ಸಿಂಗಾಪುರ ಮಾಡಬೇಕು ಎನ್ನುವ ಕನಸು ಕಂಡಿದ್ದರು. ಐಟಿ ಬಿಟಿ ಕಂಪನಿಗಳನ್ನು ತಂದು ಬೆಂಗಳೂರಿನ ಅಭಿವೃದ್ಧಿ ಮಾಡಿದ್ದಾರೆ. ಕೇಂದ್ರ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಅವರು ನೆನಪಿಸಿಕೊಂಡಿದ್ದಾರೆ.

    ಕೃಷ್ಣ ಅವರು ಸೌಮ್ಯ ಸ್ವಭಾವದವರು. ಅವರನ್ನು ಕಳೆದುಕೊಂಡು ರಾಜ್ಯವು ಬಡವಾಗಿದೆ. ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

  • ಚುನಾವಣೆಗೆ ಮುಂಚೆಯೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ: ಆರಗ ಜ್ಞಾನೇಂದ್ರ

    ಚುನಾವಣೆಗೆ ಮುಂಚೆಯೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ: ಆರಗ ಜ್ಞಾನೇಂದ್ರ

    ಶಿವಮೊಗ್ಗ: ಚುನಾವಣೆಗೆ ಮುಂಚಿತವಾಗಿಯೇ ಕಾಂಗ್ರೆಸ್ (Congress) ಸೋಲನ್ನು ಒಪ್ಪಿಕೊಂಡಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.

    ಶಿವಮೊಗ್ಗದಲ್ಲಿ (Shivamogga) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಸಿ.ಪಿ.ಯೋಗೇಶ್ವರ್ (C.P Yogeshwar) ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ, ಒಂದೂಕಾಲ್ ಶತಮಾನ ಇರುವ ಪಕ್ಷಕ್ಕೆ ಚನ್ನಪಟ್ಟಣದಲ್ಲಿ ನಿಲ್ಲಿಸಲು ಒಬ್ಬ ಅಭ್ಯರ್ಥಿ ಇಲ್ಲ. ಬೇರೆ ಪಕ್ಷದಿಂದ ಅಭ್ಯರ್ಥಿ ತಂದು ನಿಲ್ಲಿಸುವ ದುರ್ಗತಿ ಕಾಂಗ್ರೆಸ್‍ಗೆ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ.

    ಕಾಂಗ್ರೆಸ್ ಪಕ್ಷಕ್ಕೆ ಈ ಸ್ಥಿತಿ ಬಂದಿರೋದು ಶೋಚನೀಯ ವಿಚಾರವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಇದೊಂದು ಅವಮಾನ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ಎದುರಿಸುವ ಶಕ್ತಿಯನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಮೂರು ಕ್ಷೇತ್ರದಲ್ಲಿ ಎನ್‍ಡಿಎ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಡಿ.ಕೆ ಶಿವಕುಮಾರ್ ಮತ್ತು ಡಿ.ಕೆ ಸುರೇಶ್ ಅವರ ಸಮ್ಮುಖದಲ್ಲಿ ಇಂದು (ಬುಧವಾರ) ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಈ ವಿಚಾರವಾಗಿ ಮಂಗಳವಾರ ತಡರಾತ್ರಿ ಎರಡು ಸಲ ಮನೆಯಿಂದ ರಹಸ್ಯ ಸ್ಥಳಕ್ಕೆ ಹೋಗಿ ಯೋಗೀಶ್ವರ್ ಚರ್ಚಿಸಿದ್ದರು. ಮಧ್ಯರಾತ್ರಿ ಖಾಸಗಿ ಹೊಟೇಲಿನಲ್ಲಿ ಡಿಕೆಶಿಯನ್ನು ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

  • ಆರಗ ಜ್ಞಾನೇಂದ್ರ, ತಂಡದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಹ ಅಧ್ಯಯನ

    ಆರಗ ಜ್ಞಾನೇಂದ್ರ, ತಂಡದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಹ ಅಧ್ಯಯನ

    ಶಿವಮೊಗ್ಗ: ಶಾಸಕ ಆರಗ ಜ್ಞಾನೇಂದ್ರ  (Araga Jnanendra) ಅವರ ನೇತೃತ್ವದ ಬಿಜೆಪಿ ಪ್ರವಾಹ ಅಧ್ಯಯನ ತಂಡವು ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ನೆರೆ, ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿತು.‌

    ಕೆಲವು ದಿನಗಳ ಹಿಂದೆ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಹಾದಿಗಲ್ಲಿಯಲ್ಲಿ ಮರ ಬಿದ್ದು ಅಸುನೀಗಿದ ಸಚಿನ್ ಅವರ ಮನೆಗೆ ತಂಡವು ನೀಡಿತು. ಅಲ್ಲಿ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಮಾತನ್ನಾಡಿದರು. ಇದನ್ನೂ ಓದಿ: ಗುಡ್ಡ ಕುಸಿತದಿಂದ ಶಿರಾಡಿ ಘಾಟ್ ಮತ್ತೆ ಬಂದ್ – ಕುಸಿತದ ರಭಸಕ್ಕೆ ಕಂಟೇನರ್ ಪಲ್ಟಿ

    ಸರ್ಕಾರದ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯ 5 ಲಕ್ಷ ರೂ. ಮಂಜೂರಾತಿ ಆದೇಶ ಪ್ರತಿಯನ್ನು ನೀಡಿದರು. ಅಲ್ಲದೇ ವೈಯಕ್ತಿಕ ಸಹಾಯವನ್ನೂ ಮಾಡಿದರು.

    ನಿಯೋಗದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್, ಮಾಜಿ ಸಚಿವ ಹರತಾಳ ಹಾಲಪ್ಪ, ಶಿವಮೊಗ್ಗ ನಗರದ ಶಾಸಕ ಚೆನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಮಾಜಿ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಎಫ್‌ಐಆರ್‌ ದಾಖಲು

  • ಯಾವ ಬಿಜೆಪಿ ‌ಕಾರ್ಯಕರ್ತ‌ನೂ ಇಂತಹ ರಾಷ್ಟ್ರ ವಿರೋಧಿ ಕೃತ್ಯದಲ್ಲಿ ಭಾಗಿಯಾಗಲಾರ: ಆರಗ ಜ್ಞಾನೇಂದ್ರ

    ಯಾವ ಬಿಜೆಪಿ ‌ಕಾರ್ಯಕರ್ತ‌ನೂ ಇಂತಹ ರಾಷ್ಟ್ರ ವಿರೋಧಿ ಕೃತ್ಯದಲ್ಲಿ ಭಾಗಿಯಾಗಲಾರ: ಆರಗ ಜ್ಞಾನೇಂದ್ರ

    – ಕೆಫೆ ಬಾಂಬ್‌ ಬ್ಲಾಸ್ಟ್‌ ಕೇಸಲ್ಲಿ ಬಿಜೆಪಿ ಕಾರ್ಯಕರ್ತನ ವಿಚಾರಣೆ ಬಗ್ಗೆ ಮಾಜಿ ಗೃಹ ಸಚಿವ ಪ್ರತಿಕ್ರಿಯೆ
    – ಮುಸ್ಲಿಂ ಯುವಕನ ಅಂಗಡಿಯಲ್ಲಿ ಸಿಮ್ ಖರೀದಿಸಿದ್ದ ಹಿಂದೂ ಯುವಕರ ಹೆಸರಲ್ಲಿ ಫೇಕ್ ಐಡಿ ಕ್ರಿಯೇಟ್: ಆರಗ

    ಶಿವಮೊಗ್ಗ: ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ (Rameshwaram Cafe Blast) ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿರುವ ಕುರಿತು ಮಾಜಿ ಸಚಿವ ಆರಗ ಜ್ಞಾನೇಂದ್ರ (Araga Jnanendra) ಪ್ರತಿಕ್ರಿಯೆ ನೀಡಿದ್ದಾರೆ.

    ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಬಾಂಬ್ ಬ್ಲಾಸ್ಟ್ ಪ್ರಕರಣ ವಿಚಾರ ಸಂಬಂಧ ನಿನ್ನೆ ತೀರ್ಥಹಳ್ಳಿಯ ಸಾಯಿ ಪ್ರಸಾದ್ ಎಂಬ ಬಿಜೆಪಿ ಕಾರ್ಯಕರ್ತನನ್ನು ಎನ್‌ಐಎ ವಿಚಾರಣೆಗೆ ಕರೆದೊಯ್ದಿತ್ತು. ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಬಿಜೆಪಿ ‌ಕಾರ್ಯಕರ್ತ ಸೇರಿದ್ದಾನೆ ಎಂಬ ರೀತಿ ಪ್ರಚಾರ ಆಗಿತ್ತು. ಈಗಾಗಲೇ ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿ ಕಳುಹಿಸಿಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಕೇಸ್‌ನಲ್ಲಿ ಆರೋಪಿಗಳ ಶಾಲಾ, ಕಾಲೇಜು ಸ್ನೇಹಿತರ ವಿಚಾರಣೆ ನಡೆಸಲಾಗ್ತಿದೆ: ಎನ್‌ಐಎ

     

    ಮತೀನ್ ಎಂಬ ಕ್ರಿಮಿ ಸಾಯಿ‌ ಪ್ರಸಾದ್ ವಿಳಾಸ ಬಳಸಿ ಫೇಸ್‌ಬುಕ್ ಫೇಕ್ ಐಡಿ ಕ್ರಿಯೇಟ್ ಮಾಡಿದ್ದ. ಈ ಸತ್ಯಾಂಶ ಎನ್‌ಐಎಗೆ ಗೊತ್ತಾದ ಬಳಿಕ ಸಾಯಿ ಪ್ರಸಾದ್‌ನನ್ನು ವಾಪಸ್ ಕಳುಹಿಸಿದ್ದಾರೆ. ಸಾಯಿ ಪ್ರಸಾದ್ ಬೆಂಗಳೂರಿನಿಂದ ವಾಪಸ್ ಶಿವಮೊಗ್ಗಕ್ಕೆ ‌ಬರುತ್ತಿದ್ದಾನೆ ಎಂದು ತಿಳಿಸಿದ್ದಾರೆ.

    ಮುಸ್ಲಿಂ ಯುವಕನ ಮೊಬೈಲ್ ಅಂಗಡಿಯಲ್ಲಿ ಸಿಮ್ ಖರೀದಿಸಿದ್ದ 8 ಮಂದಿ ಹಿಂದೂ ಯುವಕರ ಹೆಸರಿನಲ್ಲಿ ಫೇಸ್‌ಬುಕ್ ಫೇಕ್ ಐಡಿ ಕ್ರಿಯೇಟ್ ಮಾಡಿದ್ದಾನೆ. ಎನ್‌ಐಎ ಉಳಿದ 8 ಮಂದಿಯನ್ನು ವಿಚಾರಣೆಗೆ ಕರೆಯಬಹುದು. ಕೆಲವು ಅಂಗಡಿಗಳಲ್ಲಿ ಸಿಮ್ ಖರೀದಿ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಎಷ್ಟು ದುರುಪಯೋಗ ಆಗ್ತಿದೆ ಅಂತಾ ಇದರಿಂದ ಗೊತ್ತಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ – ಬಿಜೆಪಿ ಕಾರ್ಯಕರ್ತನನ್ನು ಸಾಕ್ಷಿಯನ್ನಾಗಿ ಪರಿಗಣಿಸಿದ ಎನ್‌ಐಎ

    ಯಾವ ಬಿಜೆಪಿ ‌ಕಾರ್ಯಕರ್ತ‌ ಇಂತಹ ರಾಷ್ಟ್ರ ವಿರೋಧಿ ಕೃತ್ಯದಲ್ಲಿ ಖಂಡಿತ ಭಾಗಿಯಾಗಲಾರ. ಸಾಮಾನ್ಯ ಕಾರ್ಯಕರ್ತನಾದ ಸಾಯಿ ‌ಪ್ರಸಾದ್ ಒಳ್ಳೆಯ ಜೀವನ ನಡೆಸುತ್ತಿದ್ದಾನೆ. ಸಾಯಿ ಪ್ರಸಾದ್ ಒಬ್ಬ ಪೈಂಟರ್, ವಿಚಾರಣೆಯಲ್ಲಿ ಸಹಕರಿಸಿ ಸತ್ಯಾಂಶ ಹೇಳಿದ್ದಾನೆ. ಅಪಾರ್ಥ ಕಲ್ಪಿಸುವ ಪ್ರಚಾರ ಬೇಡ ಎಂಬುದು ನನ್ನ ವಿನಂತಿ ಎಂದು ಮನವಿ ಮಾಡಿದ್ದಾರೆ.

  • ಪಿಎಸ್‌ಐ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ – 1 ತಿಂಗಳು ಪರೀಕ್ಷೆ ಮುಂದೂಡಿಕೆ

    ಪಿಎಸ್‌ಐ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ – 1 ತಿಂಗಳು ಪರೀಕ್ಷೆ ಮುಂದೂಡಿಕೆ

    ಬೆಳಗಾವಿ: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌(PSI) ಪರೀಕ್ಷೆ ಬರೆಯಲು ಮುಂದಾಗಿದ್ದ ಅಭ್ಯರ್ಥಿಗಳಿಗೆ ಗುಡ್‌ನ್ಯೂಸ್‌. ಪರೀಕ್ಷೆಯನ್ನು ಸರ್ಕಾರ ಒಂದು ತಿಂಗಳು ಮುಂದೂಡಿಕೆ ಮಾಡಿದೆ.

    ಬೆಳಗಾವಿ ಅಧಿವೇಶನದಲ್ಲಿ (Belagavi Session) ಮಾಜಿ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಎರಡು ತಿಂಗಳ ಬಳಿಕ ಪರೀಕ್ಷೆ ಮಾಡಿ, ಸಮಸ್ಯೆ ಏನೂ ಆಗುವುದಿಲ್ಲ ಎಂದು ಒತ್ತಾಯಿಸಿದರು.ಇದಕ್ಕೆ ಉತ್ತರ ನೀಡಿದ ಗೃಹ ಸಚಿವ ಪರಮೇಶ್ವರ್‌ (G Parameshwar) ಮೊದಲು ಡಿ.23 ಕ್ಕೆ ಮಾಡಲು ನಿಗದಿ ಮಾಡಿದ್ದೆವು. ಈಗ ಈ ಪರೀಕ್ಷೆಯನ್ನು ಜ.23ಕ್ಕೆ ಮುಂದೂಡಿಕೆ ಮಾಡಿದ್ದೇವೆ ತಿಳಿಸಿದರು.

    ಪರೀಕ್ಷೆ ನಡೆಸುವಾಗ ಜಾಗ್ರತೆ ವಹಿಸಿದ್ದರೆ ಇದು ಆಗುತ್ತಿರಲಿಲ್ಲ. ಆ ಸರ್ಕಾರ, ಈ ಸರ್ಕಾರ ಅಂತಲ್ಲ. ಲಾ ಆಂಡ್ ಆರ್ಡರ್ ಇಲ್ಲದೆ, ಕಾನೂನು ಸುವ್ಯವಸ್ಥೆ ಕಷ್ಟ ಆಗಿದೆ. ಒಂದುವರೆ ಸಾವಿರ ಪಿಎಸ್‌ಐ ನೇಮಕ ಆಗಬೇಕು. ಇದರಿಂದ ಲಾ ಆಂಡ್ ಆರ್ಡರ್ ಸಮಸ್ಯೆ ಆಗಿದೆ ಎಂದರು.

    ನಮ್ಮ ಶಾಸಕರೇ ಇವರು ಸರಿ ಇಲ್ಲ, ಅವರು ಸರಿ ಇಲ್ಲ ಎಂದು ಹೇಳುತ್ತಾರೆ. ಈ ಮಧ್ಯೆ ಖಾಲಿ ಇದೆ, ಇವರನ್ನು ಕೊಡಿ, ಅವರನ್ನು ಕೊಡಿ ಎಂದು ಹೇಳುತ್ತಾರೆ. ಗೃಹ ಸಚಿವರಾಗಿದ್ದ ಅಶೋಕ್, ಆರಗ ಜ್ಞಾನೇಂದ್ರ ಅವರಿಗೂ ಗೊತ್ತಿದೆ ಎಂದು ಸದನಕ್ಕೆ ತಿಳಿಸಿದರು.

  • ಸನಾತನ ಧರ್ಮ ಕ್ಷೀಣಿಸಲು ಒಂದು ಸಮುದಾಯದ ಪ್ರಯತ್ನ: ಆರಗ ಜ್ಞಾನೇಂದ್ರ

    ಸನಾತನ ಧರ್ಮ ಕ್ಷೀಣಿಸಲು ಒಂದು ಸಮುದಾಯದ ಪ್ರಯತ್ನ: ಆರಗ ಜ್ಞಾನೇಂದ್ರ

    ಶಿವಮೊಗ್ಗ: ಸನಾತನ ಧರ್ಮವನ್ನು (Sanatana Dharma) ಕ್ಷೀಣ ಮಾಡಿ, ನಮ್ಮ ಧರ್ಮವನ್ನು ಜಾಸ್ತಿ ಮಾಡಿಕೊಳ್ಳಬೇಕು ಎಂದು ಒಂದು ಸಮುದಾಯ ವಿಶೇಷವಾದ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಆರೋಪಿಸಿದ್ದಾರೆ.

    ತೀರ್ಥಹಳ್ಳಿಯ (Thirthahalli) ಮಳಲಿ ಮಠದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ, ತಮ್ಮ ಸಂಖ್ಯೆ ಜಾಸ್ತಿ ಮಾಡಿಕೊಂಡು, ತಮ್ಮ ಮತಗಳನ್ನು ಜಾಸ್ತಿ ಮಾಡಿಕೊಳ್ಳಬೇಕು ಎಂದು ಒಂದು ವರ್ಗದವರು ಹೊರಟಿದ್ದಾರೆ ಅಂತವರಿಗೆ ಪಾಠ ಹೇಳಬೇಕಿದೆ. ಒಂದು ವೇಳೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದೊಂದು ದಿನ ಬಹಳ ದೊಡ್ಡ ತೊಂದರೆಗೆ ಒಳಗಾಗುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ರೈತ ಬಂಧು ಯೋಜನೆ ಮುಂದೂಡುವಂತೆ ತೆಲಂಗಾಣ ಸರ್ಕಾರಕ್ಕೆ ಚು.ಆಯೋಗ ಸೂಚನೆ

    ಇವತ್ತು ಮಾನವ ಧರ್ಮ ಎಂಬುದು ಇಲ್ಲ, ನಮ್ಮ ಧರ್ಮದಲ್ಲಿ ಇದ್ದರೆ ಮಾತ್ರ ಇರಬೇಕು. ಇಲ್ಲದಿದ್ದರೆ ಇಲ್ಲ ಎನ್ನುವಂತಹ ಧರ್ಮಗಳಿಗೆ ಪಾಠ ಹೇಳಬೇಕಿದೆ ಎಂದು ಅವರು ಹೇಳಿದ್ದಾರೆ.

    ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370ನೇ ವಿಧಿಯನ್ನು ಯಾರಿಗೂ ತೆಗೆಯಲು ಆಗಿರಲಿಲ್ಲ. ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಅದನ್ನು ಧೈರ್ಯದಿಂದ ಮಾಡಿದ್ದಾರೆ. ನಮ್ಮ ದೇಶದಲ್ಲಿ ಹುಟ್ಟಿ, ಅನ್ನ ತಿಂದು ವಿದೇಶದಿಂದ ಹಣ ಪಡೆದು ಸೇನೆಯ ಮೇಲೆ ಕಲ್ಲು ಹೊಡೆಯುತ್ತಿದ್ದವರು ಇಂದು ಸರಿ ದಾರಿಗೆ ಬರುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ, ವಿಜಯೇಂದ್ರ ನನ್ನನ್ನು ಸೋಲಿಸಲು ಸಾಧ್ಯವಿಲ್ಲ: ಡಿ.ಕೆ ಸುರೇಶ್

  • ಜಾತಿ ಜನಗಣತಿ ವರದಿ ಅವೈಜ್ಞಾನಿಕ – ಯಾವುದೇ ಮನೆಬಾಗಿಲಿಗೆ ಹೋಗಿ ಮಾಡಿಲ್ಲ: ಆರಗ ಜ್ಞಾನೇಂದ್ರ

    ಜಾತಿ ಜನಗಣತಿ ವರದಿ ಅವೈಜ್ಞಾನಿಕ – ಯಾವುದೇ ಮನೆಬಾಗಿಲಿಗೆ ಹೋಗಿ ಮಾಡಿಲ್ಲ: ಆರಗ ಜ್ಞಾನೇಂದ್ರ

    ಶಿವಮೊಗ್ಗ: ಜಾತಿ ಜನಗಣತಿ ವರದಿ ಅವೈಜ್ಞಾನಿಕವಾಗಿದ್ದು, ಈ ವರದಿಯನ್ನು ಮನೆ ಬಾಗಿಲಿಗೆ ಹೋಗಿ ತಯಾರಿಸಲಾಗಿಲ್ಲ. ಬದಲಿಗೆ ಯಾವುದೋ ಕಂಪನಿಗೆ ಕೊಟ್ಟು ಏನೇನೋ ಮಾಡಿ ಆ ವರದಿ ತಯಾರು ಮಾಡಿದ್ದಾರೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ (Araga Jnanendra) ಆರೋಪಿಸಿದ್ದಾರೆ.

    ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದ ಒಕ್ಕಲಿಗರ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾತಿ ಜನಗಣತಿ ವರದಿ ಬಗ್ಗೆ ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಒಕ್ಕಲಿಗ ಶಾಸಕರ ಸಭೆ ಕರೆದಿದ್ದರು. ಈ ಸಭೆಯಲ್ಲಿ ನಾನು ಸಹ ಭಾಗವಹಿಸಿದ್ದೆ. ಒಕ್ಕಲಿಗ ಸಮಾಜಕ್ಕೆ ಇನ್ನೊಂದು ವರ್ಗಕ್ಕೆ ಏನು ಸಿಗಬಾರದು ಎಂಬ ಕೆಟ್ಟ ಆಲೋಚನೆ ಇಲ್ಲ ಎಂದರು.

    ಜಾತಿ ಜನಗಣತಿ ವರದಿ ತಯಾರಾಗಿ 8 ವರ್ಷ ಕಳೆದಿದೆ. 2017 ರ ಕೊನೆಯಲ್ಲಿ ಈ ವರದಿ ತಯಾರಾಗಿದೆ. ಅಂದಿನ ಮುಖ್ಯಮಂತ್ರಿ ಆ ವರದಿಯನ್ನು ಸ್ವೀಕಾರ ಮಾಡಿರಲಿಲ್ಲ. ಇವತ್ತು ಅದೇ ಮುಖ್ಯಮಂತ್ರಿ ಸ್ವೀಕಾರ ಮಾಡುತ್ತೇನೆ ಅಂತಿದ್ದಾರೆ ಎಂದರು.

    ಈ ಹಿಂದೆ ನೀವು ಅಧಿಕಾರದಲ್ಲಿ ಇದ್ದಾಗ ಏಕೆ ವರದಿ ಸ್ವೀಕರಿಸಲಿಲ್ಲ? ಈ ವರದಿಯಲ್ಲಿ ಏನೋ ಇದೆ ಎಂಬುದು ನಿಮಗೆ ಗೊತ್ತಿದೆ. ನಮ್ಮ ಎಲ್ಲಾ ಸಮುದಾಯದ ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗೆ ಸರಿ ಹೋಗುವುದಾದರೆ ಆ ವರದಿ ಬರಲಿ. ವರದಿ ಬರುವುದಾಗಿದ್ದರೆ 5 ವರ್ಷದ ಹಿಂದೆಯೇ ಬರುತ್ತಿತ್ತು. ಅದೊಂದು ರಾಜಕಾರಣದ ಆಟ ಆಗಬಾರದು ಎಂದರು. ಇದನ್ನೂ ಓದಿ: ಎಷ್ಟೇ ಅಸಮಾಧಾನವಿದ್ರೂ ಮೋದಿ ಪ್ರಧಾನಿಯಾಗಲು ಒಟ್ಟಾಗಿ ಕೆಲಸ ಮಾಡಿ: ಪ್ರೀತಂಗೌಡ

    ಜಾತಿ ಜನಗಣತಿ ವರದಿಯಲ್ಲಿ ತಪ್ಪು ತಪ್ಪು ಅಂಕಿ ಅಂಶಗಳು ಇದ್ದಾವೆ. ವರದಿಯಿಂದ ಯಾರಿಗೋ ಏಟು ಆಗುತ್ತದೆ, ಯಾವುದೋ ಒಂದು ಸಮುದಾಯಕ್ಕೆ ಏಟು ಆಗುತ್ತದೆ ಅಂತಲ್ಲ. ಈ ವರದಿಗೆ ಅದರ ಕಾರ್ಯದರ್ಶಿಯೇ ಸಹಿ ಹಾಕಿಲ್ಲ. ಮನೆ ಮನೆಗೆ ಹೋಗಿ ಸರಿಯಾದ ರೀತಿಯಲ್ಲಿ ಸರ್ವೇ ಮಾಡಿಲ್ಲ. ಅಂತಹ ವರದಿ ಕೈ ಸೇರಿದರೆ ಅಂತಹ ವರದಿಯನ್ನು ಅಧಿಕಾರಕ್ಕಾಗಿ ಜಾರಿಗೊಳಿಸಿದರೆ ನಮ್ಮಂತಹ ಸಮುದಾಯಕ್ಕೆ ಹೊಡೆತ ಬೀಳುತ್ತದೆ ಎಂದರು.

    ಒಕ್ಕಲಿಗ ಸಮುದಾಯದಲ್ಲಿ ಎಲ್ಲರೂ ಶ್ರೀಮಂತರಾಗಿಲ್ಲ. ಎಲ್ಲರೂ ಅನುಕೂಲಸ್ಥರಾಗಿಲ್ಲ. ಇವತ್ತಿಗೂ ಯಾರು ಯಾರದ್ದೋ ತೋಟ ಕಾಯುವವರಿದ್ದಾರೆ. ಅವರ ಮಕ್ಕಳಿಗೆ ಶಿಕ್ಷಣ ಇಲ್ಲ. ಅವರ ಬದುಕು ಇನ್ನು ನೆಟ್ಟಗಾಗಿಲ್ಲ. ಅಂತಹವರು ಮೇಲೆ ಬರಬೇಕು ಅಂದರೆ ಆ ವರದಿಯಿಂದ ಅಂತಹವರ ಬದುಕಿಗೂ ಶಕ್ತಿ ಬರಬೇಕು. ಆ ನಿಟ್ಟಿನಲ್ಲಿ ವರದಿಯನ್ನು ನಮ್ಮ ಒಕ್ಕಲಿಗರ ಸಂಘ ರಾಜ್ಯ ಮಟ್ಟದಲ್ಲಿ ವಿರೋಧ ಮಾಡುತ್ತಿದೆ. ವೈಜ್ಞಾನಿಕವಾಗಿ ವರದಿ ತಯಾರಿಸಿ ಎಲ್ಲರಿಗೂ ಒಳ್ಳೆಯದು ಆಗಲಿ ಎಂದರು. ಇದನ್ನೂ ಓದಿ: ನಾವಿಂದು ಜೈ ಭೀಮ್, ಜೈ ಭಾರತ್ ಅನ್ನಬೇಕು, ಸಂವಿಧಾನ ರಕ್ಷಣೆ ಮಾಡಬೇಕು: ಸಿ.ಟಿ ರವಿ